ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್! ಯಾದಗಿರಿ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಪ್ರೋಸೆಸ್ ಸರ್ವರ್ ಹಾಗೂ ಪ್ಯೂನ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
Yadgir Court Recruitment in kannada
ಪ್ರೋಸೆಸ್ ಸರ್ವರ್ ಹಾಗೂ ಪ್ಯೂನ್ ಹುದ್ದೆಗಳಿಗೆ ಯಾದಗಿರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ (Yadgir Court) ವು ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಸರ್ಕಾರಿ ಉದ್ಯೋಗವನ್ನು ಪಡೆದುಕೊಂಡು ಜೀವನವನ್ನು ರೂಪಿಸಿಕೊಳ್ಳಬೇಕು ಎಂಬ ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ.
ಪ್ರೋಸೆಸ್ ಸರ್ವರ್ ಹಾಗೂ ಪ್ಯೂನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ 13-03-2026 ರಂದು ಆರಂಭಗೊಂಡು, ಏಪ್ರಿಲ್ 12, 2026 ರಂದು ಕೊನೆಗೊಳ್ಳುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳು ಯಾದಗಿರಿ ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.

ಪ್ರೋಸೆಸ್ ಸರ್ವರ್ ಹಾಗೂ ಪ್ಯೂನ್ ಹುದ್ದೆಗೆ ಹೇಗೆ ಅರ್ಜಿ ಸಲ್ಲಿಸಬೇಕು? ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಹೊಂದಿರಬೇಕಾದ ಅರ್ಹತಾ ಮಾನದಂಡಗಳು, ವಯೋಮಿತಿ, ಅರ್ಜಿ ಶುಲ್ಕ ಹಾಗೂ ವೇತನ ಶ್ರೇಣಿಗಳ ಬಗ್ಗೆ ಪ್ರಸ್ತುತ ಈ ಒಂದು ಲೇಖನದ ಮೂಲಕ ಸ್ಪಷ್ಟಪಡಿಸಲಾಗಿದೆ. ಇದೇ ರೀತಿಯ ಇನ್ನಷ್ಟು ಹುದ್ದೆಗಳ ಬಗ್ಗೆ ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ಉದ್ಯೋಗಸಲಹೆ ಗೆ ಭೇಟಿ ನೀಡಿ.
ಹುದ್ದೆಯ ಅವಲೋಕನ:
| ನೇಮಕಾತಿ ಸಂಸ್ಥೆ | ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಯಾದಗಿರಿ (Yadgir Court) |
| ಹುದ್ದೆಯ ಹೆಸರು | ಪ್ರೋಸೆಸ್ ಸರ್ವರ್ ಹಾಗೂ ಪ್ಯೂನ್ ಹುದ್ದೆಗಳು |
| ಹುದ್ದೆಯ ಸಂಖ್ಯೆ | ಒಟ್ಟು 14 ಹುದ್ದೆಗಳು |
| ವಿದ್ಯಾರ್ಹತೆ | ಅಭ್ಯರ್ಥಿಗಳು ಜಸ್ಟ್ 10th ಪಾಸ್ ಆಗಿರಬೇಕು |
| ವಯಸ್ಸಿಯ ಮಿತಿ | ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ ಗರಿಷ್ಟ 35 ವರ್ಷ ವಯೋಮಿತಿಯನ್ನು ಹೊಂದಿರಬೇಕು |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 12-04-2026 |
ಹುದ್ದೆಯ ಕಿರು ಪರಿಚಯ:
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಯಾದಗಿರಿ (Yadgir Court) ಯು ಒಟ್ಟು 14 ಪ್ರೋಸೆಸ್ ಸರ್ವರ್ ಹಾಗೂ ಪ್ಯೂನ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಈ ಹೀಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಲ್ಲಿ SSLC ಅಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ ಗರಿಷ್ಟ 35 ವರ್ಷ ವಯೋಮಿತಿಯನ್ನು ಹೊಂದಿರಬೇಕು. ಪ್ರೋಸೆಸ್ ಸರ್ವರ್ ಹಾಗೂ ಪ್ಯೂನ್ ಹುದ್ದೆಗಳಿಗೆ ಮೀಸಲಾತಿ ಅನ್ವಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಹುದ್ದೆಯ ಸಂಕ್ಷಿಪ್ತ ವಿವರ:
ಯಾದಗಿರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (Yadgir Court) ವು ಒಟ್ಟು 14 ಪ್ರೋಸೆಸ್ ಸರ್ವರ್ ಹಾಗೂ ಪ್ಯೂನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಯಾವ ವಿಭಾಗದಲ್ಲಿ ಎಷ್ಟೆಷ್ಟು ಹುದ್ದೆಗಳಿವೆ ಎನ್ನುವುದನ್ನು ಈ ಕೆಳಗೆ ಕಾಣಬಹುದಾಗಿದೆ.
| ಹುದ್ದೆಯ ಹೆಸರು | ಹುದ್ದೆಯ ಸಂಖ್ಯೆ |
| ಪ್ರೋಸೆಸ್ ಸರ್ವರ್ ಹುದ್ದೆಗಳು | 09 ಹುದ್ದೆಗಳು |
| ಪ್ಯೂನ್ ಹುದ್ದೆಗಳು | 05 ಹುದ್ದೆಗಳು |
ಹುದ್ದೆಯ ವರ್ಗವರು ಮೀಸಲಾತಿ ವಿವರ:
ಪ್ರೋಸೆಸ್ ಸರ್ವರ್ ಹಾಗೂ ಪ್ಯೂನ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಮೀಸಲಾತಿ ಅನ್ವಯ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಹಾಗಾಗಿ, ಯಾವ ವರ್ಗಗಳ ಅಭ್ಯರ್ಥಿಗಳಿಗೆ ಎಷ್ಟೆಷ್ಟು ಹುದ್ದೆಗಳನ್ನು ಮೀಸಲಿಡಲಾಗಿದೆ ಎನ್ನುವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.
1. ಪ್ರೋಸೆಸ್ ಸರ್ವರ್ ಹುದ್ದೆಗಳು:
ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ, ಯಾದಗಿರಿ (Yadgir Court) 2026 ರ ನೇಮಕಾತಿ ಅಧಿಸೂಚನೆಯಲ್ಲಿ ಒಟ್ಟು 09 ಪ್ರೋಸೆಸ್ ಸರ್ವರ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಅರ್ಜಿ ಆಹ್ವಾನಿಸಲಾಗಿದ್ದು, ವರ್ಗವಾರು ಈ ಕೆಳಕಂಡಂತೆ ಮೀಸಲಾತಿ ಅನ್ವಯ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ.
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಒಟ್ಟು 06 ಹುದ್ದೆಗಳನ್ನು ಮೀಸಲಿಡಲಾಗಿದೆ.
- ಅವುಗಳಲ್ಲಿ ಮಹಿಳೆಯರಿಗೆ 02 ಹುದ್ದೆಗಳು
- ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ 02 ಹುದ್ದೆಗಳು
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ 01 ಹುದ್ದೆ
- ಹಾಗೂ ಇತರೆ ಅಭ್ಯರ್ಥಿಗಳಿಗೆ 01 ಹುದ್ದೆಯನ್ನು ಮೀಸಲಿಡಲಾಗಿದೆ.
- ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ಒಂದು ಹುದ್ದೆಯನ್ನು ಮೀಸಲಿಡಲಾಗಿದೆ.
- ಈ ಹುದ್ದೆಗಳನ್ನು ಅಂಧ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ.
- ಪ್ರವರ್ಗ 2A ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 02 ಹುದ್ದೆಗಳನ್ನು ಮೀಸಲಿಡಲಾಗಿದೆ.
- ಇವುಗಳಲ್ಲಿ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಒಂದು ಹುದ್ದೆ
- ಹಾಗೂ ಅಂಧ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಒಂದು ಹುದ್ದೆಗಳನ್ನು ಮೀಸಲಿಡಲಾಗಿದೆ.
2. ಪ್ಯೂನ್ ಹುದ್ದೆಗಳು:
ಪ್ಯೂನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಈ ಕೆಳಕಂಡಂತೆ ಮೀಸಲಾತಿ ಅನ್ವಯ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಒಟ್ಟು 2 ಹುದ್ದೆಗಳು:
- ಇದರಲ್ಲಿ ಮಹಿಳೆಯರಿಗೆ ಒಂದು ಹುದ್ದೆ
- ಇತರೆ ಅಭ್ಯರ್ಥಿಗಳಿಗೆ ಒಂದು ಹುದ್ದೆ
- ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಒಂದು ಹುದ್ದೆ:
- ಮಹಿಳೆಯರಿಗೆ ಒಂದು ಹುದ್ದೆ
- ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ಒಂದು ಹುದ್ದೆ:
- ಮಹಿಳೆಯರಿಗೆ ಒಂದು ಹುದ್ದೆ
- ಪ್ರವರ್ಗ 2A ಅಭ್ಯರ್ಥಿಗಳಿಗೆ ಒಂದು ಹುದ್ದೆ:
- ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಒಂದು ಹುದ್ದೆ
ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ:
ಪ್ರೋಸೆಸ್ ಸರ್ವರ್ ಹುದ್ದೆಗಳಿಗೆ:
- ಪ್ರೋಸೆಸ್ ಸರ್ವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಲ್ಲಿ SSLC ಅಲ್ಲಿ ಉತ್ತೀರ್ಣರಾಗಿರಬೇಕು. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯನ್ನು ಹೊಂದಿರಬೇಕು.
- ಅಭ್ಯರ್ಥಿಗಳು ಕಡ್ಡಾಯವಾಗಿ ಲಘು ವಾಹನ ಚಾಲನಾ ಪರವಾನಗಿಯನ್ನು ಹೊಂದಿರಬೇಕು.
ಪ್ಯೂನ್ ಹುದ್ದೆಗಳಿಗೆ:
- ಪ್ಯೂನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಲ್ಲಿ SSLC ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
- ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಓದಲು ಹಾಗೂ ಬರೆಯಲು ಬರುತ್ತಿರಬೇಕು.
ವಯೋಮಿತಿ ವಿವರ:
ಪ್ರೋಸೆಸ್ ಸರ್ವರ್ ಹಾಗೂ ಪ್ಯೂನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹಾಗೂ ಗರಿಷ್ಟ 35 ವರ್ಷ ವಯೋಮಿತಿಯನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ:
ಪ್ರೋಸೆಸ್ ಸರ್ವರ್ ಹಾಗೂ ಪ್ಯೂನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ. ಅವುಗಳ ವಿವರ ಹೀಗಿದೆ,
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷಗಳು
- ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ 38 ವರ್ಷಗಳು
- ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭ್ಯರ್ಥಿಗಳಿಗೆ 40 ವರ್ಷಗಳು
ಅರ್ಜಿ ಶುಲ್ಕ:
ಯಾದಗಿರಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ (Yadgir Court) ದ ನೇಮಕಾತಿ ಅಧಿಸೂಚನೆಯ ಪ್ರಕಾರ ವರ್ಗವರು ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
| ವಿವಿಧ ವರ್ಗಗಳು | ಅರ್ಜಿ ಶುಲ್ಕ |
| ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ ಹಾಗೂ ಪ್ರವರ್ಗ 1 ಅಭ್ಯರ್ಥಿಗಳಿಗೆ | ₹100 |
| ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ | ₹100 |
| ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ | ₹200 |
ಅಗತ್ಯ ದಾಖಲೆಗಳು:
ಪ್ರೋಸೆಸ್ ಸರ್ವರ್ ಹಾಗೂ ಪ್ಯೂನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗೆ ನೀಡಲಾದ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ.
- ಶೈಕ್ಷಣಿಕ ಪ್ರಮಾಣಪತ್ರ
- ಮೀಸಲಾತಿ ಪ್ರಮಾಣಪತ್ರ
- ಅಭ್ಯರ್ಥಿಗಳ ಸಹಿ
- ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಫೋಟೋ
- ಆಧಾರ್ ಕಾರ್ಡ್
- ಪ್ರೋಸೆಸ್ ಸರ್ವರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಲಘು ವಾಹನ ಚಾಲನಾ ಪರವಾನಗಿ ಹೊಂದಿರಬೇಕು
ಹಾಗೂ ಇನ್ನಿತರ ಅಗತ್ಯ ದಾಖಲೆಗಳು
ಹುದ್ದೆಗೆ ಸಂಬಂಧಿಸಿದ ವೇತನ ಶ್ರೇಣಿ :
- ಪ್ರೋಸೆಸ್ ಸರ್ವರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹31,775 ರಿಂದ ₹61,300 ವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ.
- ಪ್ಯೂನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾಸಿಕ ₹27,000 ದಿಂದ ₹46,675 ವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸುವ ವಿಧಾನ:
ಪ್ರೋಸೆಸ್ ಸರ್ವರ್ ಹಾಗೂ ಪ್ಯೂನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವಂತೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
- ಅಭ್ಯರ್ಥಿಗಳು ಮೊದಲು ಯಾದಗಿರಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ಅಧಿಕೃತ ವೆಬ್ಸೈಟ್ http://yadgir.dcourts.gov.in/ ಗೆ ಭೇಟಿ ನೀಡಿ.
- ಅಲ್ಲಿರುವ ರಿಕ್ರೂಟ್ಮೆಂಟ್ ವಿಭಾಗವನ್ನು ಆಯ್ಕೆ ಮಾಡಿಕೊಂಡು ಪ್ರೋಸೆಸ್ ಸರ್ವರ್ ಹಾಗೂ ಪ್ಯೂನ್ ಹುದ್ದೆಗಳ ನೇಮಕಾತಿ ವಿಭಾಗವನ್ನು ಆಯ್ಕೆ ಮಾಡಿ ಕ್ಲಿಕ್ ಮಾಡಿ.
- ನಂತರ ಆನ್ಲೈನ್ ಅಪ್ಲಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಅಪ್ಲಿಕೇಶನ್ ಅಲ್ಲಿ ಕೇಳಲಾದ ತಮ್ಮ ವೈಯಕ್ತಿಕ ವಿವರ ಹಾಗೂ ಶೈಕ್ಷಣಿಕ ವಿವರಗಳನ್ನು ಭರ್ತಿ ಮಾಡಿ
- ಶೈಕ್ಷಣಿಕ ಪ್ರಮಾಣ ಪತ್ರ, ಪಾಸ್ಪೋರ್ಟ್ ಅಳತೆಯ ಫೋಟೋವನ್ನು ಹಾಗೂ ಇನ್ನಿತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ.
- ನಂತರ ನಿಮ್ಮ ವರ್ಗಗಳಿಗೆ ಸಂಬಂಧಿಸಿದ ಅರ್ಜಿ ಶುಲ್ಕವನ್ನು ಪಾವತಿಸಿ.
ಆಯ್ಕೆ ಪ್ರಕ್ರಿಯೆ:
- ಮೆರಿಟ್ ಪಟ್ಟಿ:
ಅಭ್ಯರ್ಥಿಗಳು SSLC ಅಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುತ್ತದೆ.
- ಅರ್ಹತಾ ಪರೀಕ್ಷೆ:
ಮೆರಿಟ್ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಅರ್ಹತಾ ಪರೀಕ್ಷೆಯನ್ನು ನಡೆಸಲಾಗುತ್ತದೆ.
- ಸಂದರ್ಶನ:
ನಂತರದಲ್ಲಿ ಅಭ್ಯರ್ಥಿಗಳಿಗೆ 10 ಅಂಕಗಳ ಸಂದರ್ಶವನ್ನು ನಡೆಸಲಾಗುತ್ತದೆ.
- ಅಂತಿಮ ಆಯ್ಕೆ:
SSLC ಅಲ್ಲಿ ಗಳಿಸಿದ ಅಂಕ ಹಾಗೂ ಸಂದರ್ಶನದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಪ್ರಮುಖ ದಿನಾಂಕಗಳು:
| ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ | 13-03-2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 12-04-2026 |
| ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ | 13-04-2026 |
ಪ್ರಮುಖ ಲಿಂಕುಗಳು:
| ಅಧಿಕೃತ ಅಧಿಸೂಚನೆ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ತೀರ್ಮಾನ:
ಯಾದಗಿರಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ (Yadgir Court) ವು ಒಟ್ಟು 14 ಪ್ರೋಸೆಸ್ ಸರ್ವರ್ ಹಾಗೂ ಪ್ಯೂನ್ ಹುದ್ದೆಗೆ ಅಭ್ಯರ್ಥಿಗಳನ್ನು ಅರ್ಜಿ ಆಹ್ವಾನಿಸಲಾಗಿದೆ. ನೀವೇನಾದರೂ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸಿದರೆ ಹುದ್ದೆಗೆ ಅರ್ಜಿ ಸಲ್ಲಿಸಲು ಅಗತ್ಯವಾದ ಅರ್ಹತಾ ಮಾನದಂಡಗಳನ್ನು ಪೂರೈಸುತ್ತೇವೆಯೋ? ಎಲ್ಲವೋ? ಎಂದು ಖಚಿತಪಡಿಸಿಕೊಂಡು ಆನ್ಲೈನ್ ಮೂಲಕ ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ. ಸರ್ಕಾರಿ ಉದ್ಯೋಗವನ್ನು ಪಡೆದುಕೊಳ್ಳಬೇಕು ಎನ್ನುವವರಿಗೆ ಇದೊಂದು ಸುವರ್ಣಾವಕಾಶ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು:
ಯಾದಗಿರಿ ನ್ಯಾಯಾಲಯದಲ್ಲಿ ಪ್ರೋಸೆಸ್ ಸರ್ವರ್ ಹಾಗೂ ಪ್ಯೂನ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಯಾದಗಿರಿ ನ್ಯಾಯಾಲಯ (Yadgir Court) ದಲ್ಲಿ ಒಟ್ಟು 14 ಹುದ್ದೆಗಳು ಖಾಲಿ ಇದೆ.
ಪ್ರೋಸೆಸ್ ಸರ್ವರ್ ಹಾಗೂ ಪ್ಯೂನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ ಗರಿಷ್ಟ 35 ವರ್ಷ ವಯೋಮಿತಿಯನ್ನು ಹೊಂದಿರಬೇಕು.
ಪ್ರೋಸೆಸ್ ಸರ್ವರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹31,775 ರಿಂದ ₹61,300 ವೇತನವನ್ನು ನಿಗದಿಪಡಿಸಲಾಗಿದೆ.
ಇತರೆ ಪ್ರಮುಖ ಲಿಂಕುಗಳು:
- BVVS: ಬಾಗಲಕೋಟೆಯಲ್ಲಿ ಶಿಕ್ಷಕರ ಭರ್ಜರಿ ನೇಮಕಾತಿ 2026! ಯಾವುದೇ ಅರ್ಜಿ ಶುಲ್ಕವಿಲ್ಲದೆ ಭಾರೀ ಉದ್ಯೋಗಾವಕಾಶ!
- NIMHANS: ರೂ. 30,000 ವೇತನ, ಬೆಂಗಳೂರಿನ ನಿಮ್ಹಾನ್ಸ್ ಭರ್ಜರಿ ಉದ್ಯೋಗಾವಕಾಶ!
- RRC Western Railway: ರೈಲ್ವೆ ನೇಮಕಾತಿ 2026: 5,349 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ – ಇಂದೇ ಅರ್ಜಿ ಸಲ್ಲಿಸಿ!
- Indian Navy: ರೂ. 40,000 ವೇತನ! ಅಗ್ನಿವೀರ್ ಹುದ್ದೆಗಳ ಬೃಹತ್ ನೇಮಕಾತಿ, ಜಸ್ಟ್ 10th ಪಾಸ್ ಆಗಿದ್ರೆ ಸಾಕು ಭಾರೀ ಉದ್ಯೋಗಾವಕಾಶ!





