VB-G RAM G : ರೂ 44375/- ಸಾವಿರ ಹಣ । 125 ದಿನ ಕೆಲಸ! ನಿಮಗೆ ಈ ಯೋಜನೆ ಬಗ್ಗೆ ಗೊತ್ತಿಲ್ಲದ ಮಾಹಿತಿ!

On: Wednesday, February 4, 2026 7:42 PM
VB-G RAM G

Join WhatsApp

Join Now

Join Telegram

Join Now

ಭಾರತದ ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ಉದ್ಯೋಗಾವಕಾಶದ ಹಕ್ಕನ್ನು ಸೃಷ್ಟಿಸಿ ಅವರಿಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯ ಭರವಸೆಯನ್ನು ನೀಡಲು 2005 ರಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಯನ್ನು ಜಾರಿಗೊಳಿಸಿತು.

VB-G RAM G Scheme Details in kannada

ಆದರೆ ಕೇಂದ್ರ ಸರ್ಕಾರವು ಈ ಯೋಜನೆಯನ್ನು 2025 ರ ಡಿಸೆಂಬರ್ ತಿಂಗಳಲ್ಲಿ ರದ್ದುಗೊಳಿಸಿ, ಈ ಯೋಜನೆಯ ಬದಲಿಗೆ ವಿಕಾಸ ಭಾರತ – ಗ್ರಾಮೀಣ ಉದ್ಯೋಗ ಮತ್ತು ಜೀವನೋಪಾಯ ಮಿಷನ್ (VB-G RAM G) ಎಂಬ ನವ ಕಾನೂನನ್ನು ಜಾರಿಗೊಳಿಸಿತು.

ಎಂ ಜಿ ನರೇಗಾ ಕಾಯ್ದೆಯನ್ನು ಏಕೆ ರದ್ದುಗೊಳಿಸಲಾಯಿತು? ವಿಬಿ-ಜಿ ರಾಮ್ ಜಿ ಕಾಯ್ದೆಯಲ್ಲಿ ಏನೆಲ್ಲಾ ಬದಲಾವಣೆ ಮಾಡಲಾಯಿತು? ಎನ್ನುವ ಬಗ್ಗೆ ಈ ಕೆಳಗಿನ ಹಂತದಲ್ಲಿ ತಿಳಿಯುತ್ತಾ ಹೋಗೋಣ. ಈ ಒಂದು ಕಾಯ್ದೆಯ ಬದಲಾವಣೆಯ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ನಮ್ಮ ವೆಬ್ ಸೈಟ್ ಉದ್ಯೋಗ ಸಲಹೆ ಗೆ ಭೇಟಿ ನೀಡಿ.

ಇಲ್ಲಿ ಗಮನಿಸಿ, ಕೇಂದ್ರ ಸರ್ಕಾರವು ಮೊದಲು ನರೇಗಾ ಕಾಯ್ದೆಯ ಹೆಸರನ್ನು ಬದಲಾವಣೆ ಮಾಡಿ “ಪೂಜ್ಯ ಬಾಪು ಗ್ರಾಮೀಣ ರೋಜ್ಗಾರ್ ಯೋಜನೆ” ಎಂಬ ಹೆಸರನ್ನು ಇಡಲು ತೀರ್ಮಾನಿಸಿತು. ಆದರೆ, ಕೊನೆಯದಾಗಿ ಕೇಂದ್ರ ಸರ್ಕಾರವು ನರೇಗಾ ಕಾಯ್ದೆಯನ್ನೇ ರದ್ದು ಗೊಳಿಸಿತು.

ಎಂ ಜಿ ನರೇಗಾ ಕಾಯ್ದೆಯನ್ನು ರದ್ದುಗೊಳಿಸಲು ಕಾರಣವೇನು?

ಎಂ ಜಿ ನರೇಗಾ ಕಾಯ್ದೆಯನ್ನು ಕೇಂದ್ರ ಸರ್ಕಾರವು ರದ್ದುಗೊಳಿಸಲು ಈ ಕೆಳಕಂಡ ಅಂಶಗಳು ಕಾರಣವಾಗಿದೆ. ಆ ಕಾರಣಗಳು ಏನೆಂಬುದನ್ನು ತಿಳಿದು ಕೊಳ್ಳೋಣ ಬನ್ನಿ,

  • ಕೃಷಿ ಕಾರ್ಮಿಕರ ಅಭಾವ:

ನರೇಗಾ ಕೆಲಸದಿಂದಾಗಿ ಬಿತ್ತನೆ, ಕೊಯ್ಲಿನಂತಹ ಕೃಷಿ ಚಟುವಟಿಕೆಯನ್ನು ನಡೆಸುವ ಕಾಲಘಟ್ಟಗಳಲ್ಲಿ ರೈತರಿಗೆ ಕೃಷಿ ಕಾರ್ಮಿಕರ ಕೊರತೆಯಾಗುತ್ತಿತ್ತು. ಇದನ್ನು ಸರಿಪಡಿಸುವ ಉದ್ದೇಶದಿಂದ ಈ ಕಾಯ್ದೆಯನ್ನು ರದ್ದು ಪಡಿಸಲಾಯಿತು.

  • ಹಣಕಾಸಿನ ದುರ್ಬಳಕೆ ಮತ್ತು ಭ್ರಷ್ಟಾಚಾರ:

ನರೇಗಾ ಕಾಯ್ದೆಯಲ್ಲಿ ಹಣವನ್ನು ವ್ಯಾಪಕವಾಗಿ ದುರ್ಬಳಕೆ ಮಾಡಲಾಗುತ್ತಿತ್ತು, ಹೆಚ್ಚಿನ ಭ್ರಷ್ಟಾಚಾರ ನಡೆಯುತ್ತಿತ್ತು ಹಾಗೂ ನಕಲಿ ಫಲಾನುಭವಿಗಳ ಸಂಖ್ಯೆ ಹೆಚ್ಚಿತ್ತು. ನರೇಗಾ ಯೋಜನೆಯನ್ನು ರದ್ದು ಗೊಳಿಸಲು ಇದೊಂದು ಮೂಖ್ಯ ಕಾರಣವಾಗಿದೆ.

  • ವೇತನದಲ್ಲಿ ಕಡಿತ:

ಸರ್ಕಾರವು ಈ ಒಂದು ಕಾಯ್ದೆಯಡಿಯಲ್ಲಿ ಕಾರ್ಮಿಕರಿಗೆ ನೀಡುತ್ತಿದ್ದ ವೇತನದಲ್ಲಿ ಅರ್ಧವನ್ನು ಕಮಿಷನ್ ರೂಪದಲ್ಲಿ ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಪಡೆದುಕೊಳ್ಳುತ್ತಿದ್ದರು. ಇದರಿಂದಾಗಿ ಕಾರ್ಮಿಕರು ನಿರೀಕ್ಷಿತ ವೇತನವನ್ನು ಪಡೆಯಲು ಆಗುತ್ತಿರಲಿಲ್ಲ.

  • ಯಂತ್ರೋಪಕರಣಗಳ ಬಳಕೆ:

ನರೇಗಾ ಕಾಯ್ದೆಯಡಿಯಲ್ಲಿ ಯಂತ್ರಗಳನ್ನು ಬಳಸದೆ ಕಾರ್ಮಿಕರೇ ಕೆಲಸವನ್ನು ಮಾಡಬೇಕಿತ್ತು ಆದರೆ ಕಾರ್ಮಿಕರು ಯಂತ್ರಗಳನ್ನು ಬಳಸಿ ಕಳಪೆ ಕಾಮಗಾರಿಯನ್ನು ಮಾಡುತ್ತಿದ್ದರು.

  • ಬಿಲ್ ಗಳಲ್ಲಿ ನಕಲಿ:

ಕಾಮಗಾರಿಗೆ ಬೇಕಾದ ವಸ್ತುಗಳ ಬೆಳೆಗಳನ್ನು ಮಾರುಕಟ್ಟೆಯ ಬೆಲೆಗಿಂತ ಹೆಚ್ಚಿಗೆ ತೋರಿಸಿ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸಿ ಉಳಿದ ಹಣವನ್ನು ದುರುಪಯೋಗ ಮಾಡುತ್ತಿದ್ದರು.

ವಿಬಿ-ಜಿ ರಾಮ್ ಜಿ ಕಾಯ್ದೆಯಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ?

ಹೊಸ ಕಾಯ್ದೆ ವಿಬಿ-ಜಿ ರಾಮ್ ಜಿ ಯಲ್ಲಿ ಏನೆಲ್ಲಾ ಬದಲಾವಣೆ ಆಗಿದೆ ಎನ್ನುವ ಬಗ್ಗೆ ಈ ಕೆಳಗಿನ ಹಂತದಲ್ಲಿ ಸಂಕ್ಷಿಪ್ತವಾಗಿ ನೀಡಲಾಗಿದೆ.

ವಿಭಾಗಗಳು ಎಂ ಜಿ ನರೇಗಾ ಕಾಯ್ದೆ ವಿಬಿ-ಜಿ ರಾಮ್ ಜಿ ಕಾಯ್ದೆ (VB-G RAM G)
ಸೇವಾ ಅವಧಿಎಂಜಿ ನರೇಗಾ ಕಾಯ್ದೆಯಡಿಯಲ್ಲಿ, ಪ್ರತಿ ವರ್ಷ ಗ್ರಾಮೀಣ ಭಾಗದ ಪ್ರತಿ ಮನೆಗೆ ಕನಿಷ್ಠ 100 ದಿನಗಳ ಉದ್ಯೋಗ ಅವಧಿಯನ್ನು ನೀಡಲಾಗಿತ್ತುವಿಬಿ-ಜಿ ರಾಮ್ ಜಿ ಕಾಯ್ದೆಯಡಿಯಲ್ಲಿ, ಗ್ರಾಮೀಣ ಭಾಗದ ಪ್ರತಿ ಮನೆಗೆ ಪ್ರತಿ ವರ್ಷ 125 ದಿನಗಳ ವರೆಗೆ ಉದ್ಯೋಗ ಅವಧಿಯನ್ನು ವಿಸ್ತರಿಸಲಾಯಿತು.
ಉದ್ಯೋಗ ಭದ್ರತಾ ಸ್ವರೂಪಎಂ ಜಿ ನರೇಗಾ ಕಾಯ್ದೆಯಡಿಯಲ್ಲಿ, ಕಾರ್ಮಿಕರು ತಮ್ಮ ಇಚ್ಛೆಯ ಕೆಲಸವನ್ನು ಕೇಳಿದಾಗ ನೀಡಬೇಕಿತ್ತು. (ಬೇಡಿಕೆ ಆಧಾರಿತ) ವಿಬಿ-ಜಿ ರಾಮ್ ಜಿ (VB-G RAM G)ಕಾಯ್ದೆಯಡಿಯಲ್ಲಿ, ಬಜೆಟ್ ಮತ್ತು ಮಾರ್ಗಸೂಚಿಗಳ ಮಿತಿಯೊಳಗೆ ಕೆಲಸವನ್ನು ನೀಡಲಾಗುತ್ತದೆ. (ಪೂರೈಕೆ ಆಧಾರಿತ)
ಉದ್ಯೋಗದ ಅವಧಿ ಎಂ ಜಿ ನರೇಗಾ ಕಾಯ್ದೆಯಡಿಯಲ್ಲಿ, ಕಾರ್ಮಿಕರು ವರ್ಷ ಪೂರ್ತಿ ಕೆಲಸವನ್ನು ಮಾಡಬೇಕಿತ್ತು ವಿಬಿ-ಜಿ ರಾಮ್ ಜಿ (VB-G RAM G0ಕಾಯ್ದೆಯಡಿಯಲ್ಲಿ, ಕಾರ್ಮಿಕರು 60 ದಿನಗಳ ವರೆಗೆ ಕೆಲಸದಲ್ಲಿ ವಿರಾಮವನ್ನು ಪಡೆಯಬಹುದು.
ಹಣಕಾಸಿನ ಹಂಚಿಕೆ ಎಂ ಜಿ ನರೇಗಾ ಕಾಯ್ದೆಯಡಿಯಲ್ಲಿ, ಕೇಂದ್ರ ಸರ್ಕಾರವು ವೇತನದ ಸಂಪೂರ್ಣ ವೆಚ್ಚವನ್ನು (100%) ಭರಿಸಬೇಕಿತ್ತು ವಿಬಿ-ಜಿ ರಾಮ್ ಜಿ (VB-G RAM G0ಕಾಯ್ದೆಯಡಿಯಲ್ಲಿ, ಕೇಂದ್ರ ಸರ್ಕಾರ ವೇತನದ 60% ವೆಚ್ಚವನ್ನು ಹಾಗೂ ರಾಜ್ಯ ಸರ್ಕಾರವು 40% ವೆಚ್ಚವನ್ನು ಭರಿಸಬೇಕು.
ಉದ್ಯೋಗದ ಆಯ್ಕೆ ಎಂ ಜಿ ನರೇಗಾ ಕಾಯ್ದೆಯಡಿಯಲ್ಲಿ, ಹಳ್ಳಿಗೆ ಯಾವ ಕೆಲಸ ಬೇಕು ಎಂದು ಗ್ರಾಮಸ್ಥರೇ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬಹುದಿತ್ತು.ವಿಬಿ-ಜಿ ರಾಮ್ ಜಿ (VB-G RAM G)ಕಾಯ್ದೆಯಡಿಯಲ್ಲಿ, ಕೇಂದ್ರ ಸರ್ಕಾರ ನಿಗಧಿಪಡಿಸಿದ ವಲಯದಲ್ಲೇ ಕಾರ್ಯ ನಿರ್ವಹಿಸಬೇಕು.
ತಂತ್ರಜ್ಞಾನ ಬಳಕೆ ಎಂ ಜಿ ನರೇಗಾ ಕಾಯ್ದೆಯಡಿಯಲ್ಲಿ, ಡಿಜಿಟಲ್ ಸೇವೆಗಳ ಬಳಕೆಯು ಕಡಿಮೆ ಮಟ್ಟದಲ್ಲಿತ್ತು.ವಿಬಿ-ಜಿ ರಾಮ್ ಜಿ (VB-G RAM G0ಕಾಯ್ದೆಯಡಿಯಲ್ಲಿ, ಜಿಪಿಎಸ್, ಬಯೊಮೀಟ್ರಿಕ್ ಮತ್ತು ಎಐ ಬಳಕೆ ಕಡ್ಡಾಯವಾಗಿದೆ.

ಏಕೆ ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೆ ತರಲಾಯಿತು?

  • ಗ್ರಾಮೀಣ ಜೀವನದ ಬದಲಾವಣೆ:

ನರೇಗಾ ಯೋಜನೆ ಜಾರಿಗೆ ಬಂದ ಸಂದರ್ಭದಲ್ಲಿ ಬಡತನ ಪ್ರಮಾಣವು ಹೆಚ್ಚಿತ್ತು ಆದರೆ ಈಗಿನ ಕಾಲದಲ್ಲಿ ಹಲವಾರು ತಂತ್ರಜ್ಞಾನಗಳು ಜಾರಿಗೆ ಬಂದಿರುವುದರಿಂದ ಆರ್ಥಿಕ ಪರಿಸ್ಥಿತಿಯನ್ನು ಬದಲಾಯಿಸಲು ನರೇಗಾ ಕಾಯ್ದೆಯನ್ನು ತಿದ್ದುಪಡಿ ಮಾಡಿ, ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೆ ತರಲಾಯಿತು.

  • ಭ್ರಷ್ಟಾಚಾರವನ್ನು ತಡೆಗಟ್ಟಲು:

ನರೇಗಾ ಕಾಯ್ದೆಯಡಿಯಲ್ಲಿ ಹಣಕಾಸಿನ ದುರುಪಯೋಗ ಬಹಳ ಆಗುತ್ತಿತ್ತು ಜೊತೆಗೆ ಕಳಪೆ ಕಾಮಗಾರಿಗಳನ್ನು ಮಾಡಲಾಗುತ್ತಿತ್ತು. ವಿಬಿ-ಜಿ ರಾಮ್ ಜಿ ಕಾಯ್ದೆಯಡಿಯಲ್ಲಿ ಹೆಚ್ಚಿನ ತಂತ್ರಜ್ಞಾನವನ್ನು ಬಳಸಿ ಭ್ರಷ್ಟಾಚಾರವನ್ನು ತಡೆಯಬಹುದಾಗಿದೆ.

  • ಹಣಕಾಸು ನಿಯಂತ್ರಣ:

ನರೇಗಾ ಕಾಯ್ದೆಯಡಿಯಲ್ಲಿ, ಕೇಂದ್ರ ಸರ್ಕಾರವೇ ವೇತನದ ಎಲ್ಲ ವೆಚ್ಚವನ್ನು ಭರಿಸಬೇಕಿತ್ತು. ಇದರಿಂದಾಗಿ ಕೇಂದ್ರ ಸರ್ಕಾರಕ್ಕೆ ಆರ್ಥಿಕ ಹೊರೆ ಹೆಚ್ಚುತ್ತಿತ್ತು. ವಿಬಿ-ಜಿ ರಾಮ್ ಜಿ ಕಾಯ್ದೆಯಡಿಯಲ್ಲಿ, ವೇತನದ ವೆಚ್ಚವನ್ನು ಕೇಂದ್ರ ಸರ್ಕಾರ 60% ಹಾಗೂ ರಾಜ್ಯ ಸರ್ಕಾರ 40% ಭರಿಸಬೇಕು.

ಈ ಒಂದು ಬದಲಾವಣೆಯಿಂದಾಗಿ ರೈತರಿಗಾಗುವ ಪ್ರಯೋಜನಗಳೇನು?

  • ರೈತರಿಗೆ ಕೃಷಿ ಚಟುವಟಿಕೆಗಳನ್ನು ನಡೆಸಲು ಕಾರ್ಮಿಕರ ಅವಶ್ಯಕತೆ ಇದ್ದು, ಈ ಒಂದು ಕಾಯ್ದೆಯ ಬದಲಾವಣೆಯಿಂದಾಗಿ ಕಾರ್ಮಿಕರಿಗೆ ಬಿತ್ತನೆ ಹಾಗೂ ಕೊಯ್ಲಿನ ಸಂದರ್ಭದಲ್ಲಿ ಕೆಲಸವನ್ನು ಸ್ಥಗಿತಗೊಳಿಸಿ ರೈತರಿಗೆ ಸಕಾಲಕ್ಕೆ ಕೃಷಿ ಕಾರ್ಮಿಕರು ಲಭ್ಯವಾಗುವಂತೆ ಮಾಡಿದೆ.
  • ಯಾವುದೇ ಮಧ್ಯವರ್ತಿಗಳ ನೆರವಿಲ್ಲದೆ ರೈತರು ತಮ್ಮ ಕೃಷಿಭೂಮಿಯನ್ನು ನಡೆಯುವ ಕಾಮಗಾರಿಯಲ್ಲಿ ಗಳಿಸಿದ ಹಣವನ್ನು ನೇರವಾಗಿ ರೈತರ ಖಾತೆಗೆ ಜಮಾ ಆಗುವುದರಿಂದ ಸಮಸ್ಯೆ ಉಂಟಾಗುವುದಿಲ್ಲ.
  • ಈ ಒಂದು ಯೋಜನೆಯಡಿಯಲ್ಲಿ ರೈತರಿಗೆ ತಮ್ಮ ಜಮೀನಿನಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಹಾಗೂ ಕುರಿ ಕೋಳಿ ಇತ್ಯಾದಿಗಳನ್ನು ಸಾಕಾಣಿಕೆ ಮಾಡಲು ಸಹಾಯಧನವನ್ನು ನೀಡುತ್ತದೆ.

ಇದರ ಹಿಂದಿನ ಉದ್ದೇಶಗಳೇನು?

  • ಕೇವಲ ಗುಂಡಿ ತೆಗೆಯುವ ಕೆಲಸಕ್ಕಿಂತ ಹೆಚ್ಚಿನ ಕಾಲ ಬಾಳಿಕೆ ಬರುವ ರಸ್ತೆ ಮತ್ತು ಕೆರೆ ನಿರ್ಮಾಣಕ್ಕೆ ಒಟ್ಟು ನೀಡುವುದು.
  • ಸರಿಯಾದ ಸಮಯದಲ್ಲಿ ಕೃಷಿ ಚಟುವಟಿಕೆಗಳು ನಡೆಯುವಂತೆ ನೋಡಿಕೊಳ್ಳುವುದು.
  • ಕಾರ್ಮಿಕರಿಗೆ ಹೆಚ್ಚುವರಿಯಾಗಿ 25 ದಿನಗಳು ಕೆಲಸಮಾಡಲು ಅವಕಾಶ ಕಲ್ಪಿಸುವುದು.
  • ಕೇಂದ್ರ ಸರ್ಕಾರಕ್ಕಿರುವ ಹಣಕಾಸಿನ ಹೊರೆಯನ್ನು ಕಡಿಮೆ ಮಾಡುವುದು.

ರೈತರು ಕಡ್ಡಾಯವಾಗಿ ಪಾಲಿಸಬೇಕಾದ ವಿಶೇಷ ಸೂಚನೆ:

  • ಕಾರ್ಮಿಕರು ತಮ್ಮ ಬ್ಯಾಂಕ್ ಖಾತೆಯನ್ನು ಕಡ್ಡಾಯವಾಗಿ ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿಸಿರಬೇಕು.
  • ಈ ಯೋಜನೆಯಡಿಯಲ್ಲಿ ಕಾರ್ಮಿಕರಿಗೆ ಕೆಲಸ ಮುಗಿಸಿದ 15 ದಿನದ ಒಳಗಾಗಿ ಕೂಲಿ ಪಾವತಿಯಾಗಬೇಕು. ಒಂದು ವೇಳೆ ನಿಗದಿತ ದಿನಾಂಕದೊಳಗೆ ಪಾವತಿಯಾಗದಿದ್ದಲ್ಲಿ ಪಾವತಿ ವಿಳಂಬ ಪರಿಹಾರವನ್ನು ನೀಡುವ ಅವಕಾಶವಿದೆ.
  • ದಿನ ಕೂಲಿ ಪಡೆಯಲು ಕಾರ್ಮಿಕರು ಕಡ್ಡಾಯವಾಗಿ ದಿನಕ್ಕೆ ಎರಡು ಬಾರಿ ಆಪ್ ಮೂಲಕ ಫೋಟೋ ಸಹಿತ ಡಿಜಿಟಲ್ ಹಾಜರಾತಿ ನೀಡುವುದು ಕಡ್ಡಾಯವಾಗಿದೆ.

ತೀರ್ಮಾನ:

ಕೇಂದ್ರ ಸರ್ಕಾರವು ಎಂ ಜಿ ನರೇಗಾ ಯೋಜನೆಯನ್ನು ರದ್ದುಗೊಳಿಸಿ ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೆ ತಂದಿದೆ. ಭ್ರಷ್ಟಾಚಾರ ರಹಿತ ಮತ್ತು ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ಕೇಂದ್ರ ಸರ್ಕಾರದ ಮುಖ್ಯ ನಿಲುವಾಗಿದೆ. ಆದರೆ ರಾಜ್ಯ ಸರ್ಕಾರವು ಈ ಒಂದು ಕಾಯ್ದೆಯ ಜಾರಿಗೆ ಸಂಪೂರ್ಣ ಒಪ್ಪಿಗೆ ಸೂಚಿಸಿಲ್ಲ. ಈ ಒಂದು ಕಾಯ್ದೆಯಡಿಯಲ್ಲಿ ರೈತರಿಗೆ ಕೃಷಿ ಚಟುವಟಿಕೆ ನಡೆಸುವ ಸಮಯದಲ್ಲಿ ಕಾರ್ಮಿಕರ ಕೊರತೆ ನೀಗಿಸಲು 60 ದಿನಗಳ ಕಡ್ಡಾಯ ವಿರಾಮವನ್ನು ಕಾರ್ಮಿಕರಿಗೆ ನೀಡುವ ಮೂಲಕ ರೈತರ ಜೇವನಕ್ಕೆ ಹೆಚ್ಚಿನ ನೆಮ್ಮದಿ ದೊರೆತಿದೆ.


ಇತರ ಪ್ರಮುಖ ಲಿಂಕುಗಳು :

ಯಶಸ್ವಿನಿ ಯೋಜನೆ 2026

ಗೃಹಲಕ್ಷ್ಮಿಯರಿಗೆ ನೇರವಾಗಿ ₹3 ಲಕ್ಷ ಸಾಲ + ಸಬ್ಸಿಡಿ

ಕಟ್ಟಡ ಕಾರ್ಮಿಕರ ಮದುವೆಗೆ ಸಹಾಯಧನ

ಉದ್ಯೋಗಿನಿ ಯೋಜನೆ ಅರ್ಜಿ 2026

ಆಶ್ರಯ ವಸತಿ ಯೋಜನೆ 2026


Join WhatsApp

Join Now

Join Telegram

Join Now

Leave a Comment