ಕರ್ನಾಟಕದಲ್ಲಿ ಅದೆಷ್ಟೋ ವರ್ಷಗಳಿಂದ ಮಹಿಳೆಯರು ನಾವು ಒಂದು ಸ್ವಂತವಾಗಿ ಉದ್ಯೋಗ ಮಾಡ್ಬೇಕು ಎಂಬ ಕನಸನ್ನ ಹೊತ್ತಿರ್ತಾರೆ ಅಂತ ಮಹಿಳೆಯರಿಗಂತನೇ ನಮ್ಮ ಕರ್ನಾಟಕ ಸರ್ಕಾರ ಮಹಿಳೆಯರನ್ನ ಬೆಂಬಲಿಸುವ ಸಲುವಾಗಿ”ಉದ್ಯೋಗಿನಿ ಯೋಜನೆಯನ್ನ ಜಾರಿತಂದಿದೆ”.
Udyogini Scheme 2026 In Kannada
ಅತೀ ಮುಖ್ಯವಾಗಿ ಸಮಾಜದಲ್ಲಿ ವ್ಯಾಪಾರ ಮತ್ತು ಸೇವಾ ವಲಯದಲ್ಲಿ ಮಹಿಳೆಯರನ್ನ ಸ್ವ-ಉದ್ಯೋಗದ ಮೂಲಕ ಸ್ವಾವಲಂಬಿಯಾಗಿ ಒಬ್ಬ ಸಾದಾರಣ ಹೆಣ್ಣು ಕೂಡ ಪ್ರತಿಯೊಬ್ಬ ಜನಸಾಮಾನ್ಯರಿಗೂ ಸಮಾನವಾಗಿ ತನ್ನ ಜೀವನ ನಡೆಸಬೇಕೆಂಬುದು ಇಂತ ಒಂದು ಯೋಜನೆಯ ನಿಲುವಾಗಿರುತ್ತದೆ.
- ಈ ಯೋಜನೆ ಮೂಲಕ ₹3 ಲಕ್ಷದವರೆಗೆ ಸಾಲ ಮತ್ತು ಸಬ್ಸಿಡಿಯನ್ನು ಒದಗಿಸುವ ಯೋಜನೆಯಾಗಿದೆ
- ಪ್ರತಿಯೊಬ್ಬರೂ ತಿಳಿಯಬಹುದಾದ ಈ ಒಂದು ಯೋಜನೆ ಕಿರಾಣಿ ಅಂಗಡಿ, ಹೊಲಿಗೆ ಯಂತ್ರ, ಹೈನುಗಾರಿಕೆ, ತರಕಾರಿ ಮಾರಾಟ, ಬ್ಯೂಟಿ ಪಾರ್ಲರ್ ಸೇರಿದಂತೆ ಇನ್ನು ಅನೇಕ 88ಕ್ಕೂ ಹೆಚ್ಚು ಸಣ್ಣ ಪ್ರಮಾಣದ ಉದ್ಯಮಗಳಿಗೆ ಈ ಯೋಜನೆಯಡಿ ಆರ್ಥಿಕ ನೆರವು ಮಡೆಯುವ ಅವಕಾಶವನ್ನ ನಮ್ಮ ಕರ್ನಾಟಕ ಸರ್ಕಾರ ಮಾಡಿಕೊಟ್ಟಿದೆ.
Udyogini Scheme 2026 In Kannada
ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತದಾದ್ಯಂತ ಇಂತ ಒಂದು ಯೋಜನೆಗಳು ಜನಸಾಮಾನ್ಯರ ನೆರವಿಗಾಗಿ ಜಾರಿ ಬರಬೇಕಿವೆ. ಇಂತ ಅನೇಕ ಅಧ್ಬುತ ಯೋಜನೆಗಳಿಂದ ಬಡ ಮಹಿಳೆಯರಿಗೆ ಸಮಾಜದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಮಹಿಳೆ ಕೂಡ ಈ ಯೋಜನೆಯ ಲಾಭ ಪಡೆಯಬಹುದಾಗಿದೆ.
ಈ ಒಂದು ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ನಮ್ಮ https://udyogasalahe.in ವೆಬ್ ಸೈಟ್ ಗೆ ಭೇಟಿ ನೀಡಿ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಹ ಅರ್ಜಿದಾರರು ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಯೋಜನೆಯ “ಉದ್ದೇಶ, ಯೋಜನೆಯ ಪ್ರಯೋಜನ, ಅಗತ್ಯ ದಾಖಲೆಗಳು” ಇನ್ನಷ್ಟು ಮಾಹಿತಿಯನ್ನು ಕೆಳಗಿನ ಹಂತದಲ್ಲಿ ನೀಡಿದ್ದು ಅದನ್ನು ಓದಿಕೊಂಡು ಅರ್ಜಿ ಸಲ್ಲಿಸಿ.
ಯೋಜನೆಯ ಅವಲೋಕನ:(Udyogini Scheme 2026 In Kannada)
| ಯೋಜನೆಯ ಹೆಸರು | ”ಉದ್ಯೋಗಿನಿ ಯೋಜನೆಯನ್ನ ಜಾರಿತಂದಿದೆ” |
| ಅರ್ಹ ಫಲಾನುಭವಿಗಳು | ಕರ್ನಾಟದಲ್ಲಿನ ಮಹಿಳೆಯರು |
| ಒಟ್ಟು ಪ್ರೋತ್ಸಾಹಧನ | ರೂ. ₹3 ಲಕ್ಷದವರೆಗೆ ಸಾಲ ಮತ್ತು ಸಬ್ಸಿಡಿ. |
| ಅರ್ಜಿಸಲ್ಲಿಸುವ ರಾಜ್ಯ | ಕರ್ನಾಟಕ |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ ಮೂಲಕ ಅರ್ಜಿ |
ಸಂಕ್ಷಿಪ್ತ ಮಾಹಿತಿ:
ಪ್ರತಿಯೊಬ್ಬ ಮಹಿಳೆಯರು ಕರ್ನಾಟಕ ಸರ್ಕಾರ ಜಾರಿ ಮಾಡಿರುವ ಈ ಒಂದು ಯೋಜನೆಯ ಬಗ್ಗೆ ತಿಳಿಯಲೇ ಬೇಕು ಯಾಕಂದ್ರೆ ಇಂತಹ ಅತ್ಯುತ್ತಮ ಯೋಜನೆ ನಮ್ಮ ಕರ್ನಾಟಜಕ ರಾಜ್ಯದಲ್ಲಿರುವುದು ನಮ್ಮಗೊಂಡು ಹೆಮ್ಮೆ ಅಂತಾನೆ ಹೇಳ್ಬಹುದು. ಕರ್ನಾಟಕದಲ್ಲಿ ಈ ಯೋಜನೆಯು ಸುಮಾರು ಕರ್ನಾಟಕ ಸರ್ಕಾರದ ಉದ್ಯೋಗಿನಿ ಯೋಜನೆಯು 1997-98 ರಲ್ಲಿ ಜಾರಿಗೆ ಬಂದಿತು, ಕೆಲವು ವರ್ಷಗಳ ನಂತರ ಕೆಲವೊಂದು ನಿಯಮಗಳಲ್ಲಿ ಬದಲಾವಣೆಗಳು ಕೂಡ ಕಂಡುಬಂದವು. ಹೀಗೆ ಕ್ರಮೇಣ ವರ್ಷ ವರ್ಷಕಳೆದಂತೆ ಸಾಲದ ಮಿತಿ ಮತ್ತು ಸಹಾಯಧನದ (Subsidy) ಪ್ರಮಾಣವನ್ನು ಹೆಚ್ಚಿಗೆ ಮಾಡುತ್ತ, 2026ರ ಸಾಲಿನಲ್ಲಿಯೂ ಇದು ರಾಜ್ಯದ ಮಹಿಳಾ ಉದ್ಯಮಿಗಳಿಗೆ ಪ್ರಮುಖ ಆರ್ಥಿಕ ಆಸರೆಯಾಗಿದೆ ಎಂದರೆ ತಪ್ಪಾಗಲಾರದು.
ಹೌದು ಈ ಯೋಜನೆ ನಮ್ಮ ರಾಜ್ಯ ಸರ್ಕಾರ ಜಾರಿಗೆ ತಂದ ಪ್ರಮುಖ ಯೋಜನೆಗಳಲ್ಲಿ ಇದು ಕೂಡ ಒಂದು. ಈ ಯೋಜನೆಯಲ್ಲಿ, ಕೆಲವು ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು 2026ರಲ್ಲಿ ಪ್ರತಿಯೊಬ್ಬ ಮಹಿಳೆ ತನ್ನದೇ ಆದ ಸ್ವಂತ ಉದ್ಯೋಗ ಮಾಡ್ಬೇಕು ಯಾವುದೇ ವೆಕ್ತಿಯ ಮೇಲು ಅವಲಂಬನೆ ಆಗಿರಬಾರದು. ಪ್ರತಿಯೊಬ್ಬರ ಮಹಿಳೇ ಜೀವನದಲ್ಲೂ ವರ್ಷ ಕಳೆದಂತೆ ಅವರ ಒಂದು ಜೀವನ ಮಟ್ಟ ಕೂಡ ಸುಧಾರಿಸ ಬೇಕು. ಸ್ವಂತ ಉದ್ಯೋಗ ಮಾಡುವ ಕನಸನ್ನು ನನಸಾಗಿಸಿಕೊಳ್ಳಲು ಈ ಯೋಜನೆ ಮಹಿಳೆಯರ ಜೀವನದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ.
”ಉದ್ಯೋಗಿನಿ ಯೋಜನೆ” ಹಾಗಾದ್ರೆ ಏನು ? ಮಹಿಳೆಯರಿಗೆ ಎಷ್ಟು ಸಹಾಯಧನ ದೊರೆಯತ್ತೆ ಹಾಗೆ ಸಬ್ಸಿಡಿ ಎಷ್ಟು ? ಫೋನ್ ಮೂಲಕ ಅರ್ಜಿ ಸಲ್ಲಿಸೋದು ಹೇಗೆ ?
ನೋಡ್ತಾ ಹೋಗೋಣ ಬನ್ನಿ…
ಏನಿದು ”ಉದ್ಯೋಗಿನಿ ಯೋಜನೆ” ? Udyogini Scheme 2026 In Kannada
ನಮ್ಮ ಕರ್ನಾಟಕ ಸರ್ಕಾರ ಜಾರಿ ತಂದಿರುವ ಯೋಜನೆಯ ಬಗ್ಗೆ ಕೆಲವೇ ಕೆಲವು ಜನಮಾನ್ಯರಿಗೆ ಮಾತ್ರನೇ ತಿಳಿದಿರುತ್ತದೆ ಹಾಗಾಗಿ ಈ ಒಂದು ಸಾಮಾಜಿಕ ಜಾಲತಾಣದ ಮೂಲಕ ಪ್ರತಿಯೊಬ್ಬರಿಗೂ ತಲುಪಿಸುವ ನಮ್ಮದೊಂದು ಸಣ್ಣ ಪ್ರಯತ್ನ.
ತುಂಬಾ ಜನ ಮಹಿಳೆಯರಿಗೆ ಏನಾದ್ರು ಒಂದು ಉದ್ಯೋಗ ಮಾಡಬೇಕು ಅಂತ ಇರುತ್ತೆ ಆದ್ರೆ ಅವರ ಬಳಿ ಬಂಡವಾಳ ಇರೋದಿಲ್ಲ ಬ್ಯಾಂಕ್ ಗಾಲ ಮೊರೆ ಹೋದ್ರೆ ಹೆಚ್ಚಿನ ಬಡ್ಡಿ ಯಲ್ಲಿ ಸಾಲವನ್ನ ನೀಡಲಾಗುತ್ತೆ ಇದು ಮಹಿಳೆಯರ ಮೇಲೆ ಒಂದು ಒತ್ತಡದ ಸನ್ನಿವೇಶ ಸೃಷ್ಟಿಸುತ್ತದೆ. ಇಂತಹ ಪರಿಸ್ಥಿತಿಯನ್ನ ಮನಗೊಂಡು ಸರ್ಕಾರ ಉದ್ಯೋಗಿನಿ ಎಂಬ ಯೋಜನೆಯ ಮೂಲಕ ಮಹಿಳೆಯರಿಗೆ ರೂ. ₹3 ಲಕ್ಷದವರೆಗೆ ಸಾಲ ಮತ್ತು ಸಬ್ಸಿಡಿ ಕೊಡುವ ಯೋಜನೆಯನ್ನ ಅನುಷ್ಠಾನ ಗೊಳಿಸಿದೆ.
ನಾನ್ನದೆ ಆದ ಸ್ವಂತ ಮಾತಿನಲ್ಲಿ ಹೇಳುವುದಾದರೆ, ಆರ್ಥಿಕವಾಗಿ ಸಮಾಜದಲ್ಲಿ ಹಿಂದುಳಿದ ಪ್ರತಿಯೊಬ್ಬ ಮಹಿಳೆಯರನ್ನ ಸ್ವಾವಲಂಬಿಯಾಗಿ ಮತ್ತು ಆರ್ಥಿಕವಾಗಿ ನಮ್ಮ ಕರ್ನಾಟಕದಂತ ರಾಜ್ಯದಲ್ಲಿ ಬದುಕಬೇಕು ಎನ್ನುವ ಮಹತ್ವದ ಆರ್ಥಿಕ ಬೆಂಬಲವೇ ಈ ಯೋಜನೆಯಾಗಿದೆ.
ಯೋಜನೆಯ ಉದ್ದೇಶ: Udyogini Scheme 2026 In Kannada
- ಈ ಯೋಜನೆ ಅಡಿಯಲ್ಲಿ ಪ್ರಮುಖ ಉದ್ದೇಶ ನೋಡುವುದಾದರೆ ಮಹಿಳೆಯರು ತಮ್ಮದೇಯಾದ ಸ್ವಂತ ಉದ್ಯೋಗ ಅಥವಾ ಸಣ್ಣ ಪ್ರಮಾಣದ ಉದ್ದಿಮೆಗಳನ್ನು ಮಾಡಬೇಕು.
- ಒಂದು ಸಾದಾರಣ ಹೆಣ್ಣು ಕೂಡ ಸಮಾಜದಲ್ಲಿ ಸ್ವತಂತ್ರವಾಗಿ ಮತ್ತು ಯಾರ ಮೇಲೂ ಅವಲಂಬಿತರಾಗದೆ ಸರ್ಕಾರದ ಈ ಸಹಾಯಧನದ ಮೂಲಕ ಹೊಸ ಉದ್ಯೋಗ ಪ್ರಾರಂಭಿಸಿ ಹೆಚ್ಚಿನ ಆದಾಯ ದೊಂದಿಗೆ ಆರ್ಥಿಕ ಭದ್ರತೆ ಪಡೆಯುವಂತೆ ಮಾಡುವುದು.
- ಖಾಸಗಿ ಬ್ಯಾಂಕ್ ಗಳಲ್ಲಿ ಮಹಿಳೆಯರು ತೆಗೆದುಕೊಳ್ಳುವ ಸಾಲ ಅವರ ಜೀವನಕ್ಕೆ ಹೊರೆಯಾಗುತ್ತದೆ ಹಾಗಾಗಿ ಸರ್ಕಾರಿ ಬ್ಯಾಂಕ್‌ಗಳ ಮೂಲಕ ಸುಲಭ ದರದಲ್ಲಿ ಸಾಲ ಒದಗಿಸುವುದು.
- ಈ ಯೋಜನೆ ವಿಧವೆಯರು, ಅಂಗವಿಕಲರು ಮತ್ತು ಪರಿಶಿಷ್ಟ SE /ST ಮಹಿಳೆಯರನ್ನು ಸಮಾಜದಲ್ಲಿ ಅವರ ಜೀವನಮಟ್ಟವನ್ನು ಸುಧಾರಿಸುವುದು
- ಸಾಲ ಮಾತ್ರವಲ್ಲದೆ ಕೆಲವು ಉದ್ಯೋಗಕ್ಕೆ ತರಬೇತಿಯನ್ನು ಈ ಯೋಜನೆ ಮೂಲಕ ಸರ್ಕಾರವೇ ಒದಗಿಸುತ್ತದೆ.
- ಸಾಲದ ಹಣದಲ್ಲಿ ಶೇ. 30% ಇಂದ 50% ರವರೆಗೆ ಸಬ್ಸಿಡಿ ಕೂಡ ಸಿಗುತ್ತದೆ.
ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಗ್ರಾಮ ಪಂಚಾಯತ್ಕಾರ್ಯಾಲಯ ಅಥವಾ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದು.
ಯೋಜನೆ ಮೂಲಕ ಹಣ ಎಷ್ಟು ಸಿಗುತ್ತದೆ :- Udyogini Scheme 2026 In Kannada
ಈ ಒಂದು ಯೋಜನೆ ಮೂಲಕ ಎಷ್ಟು ಸಹಾಯಧನ ಸಿಗುತ್ತೆ ಅದರಲ್ಲಿ ಸಬ್ಸಿಡಿ ಎಷ್ಟು ನಿಮ್ಮಗೆನಾದ್ರು ತಿಳಿದಿದಿಯ?
ಸರ್ಕಾರವು ರೂ. ಮಹಿಳೆಯರು ₹1 ಲಕ್ಷದಿಂದ ಗರಿಷ್ಠ ₹3 ಲಕ್ಷದವರೆಗೆ ಸಾಲ ಪಡೆಯಬಹುದು ಹಾಗೆ ಆಯಾ ವರ್ಗಕ್ಕೆ ಅನುಗುಣವಾಗಿ ಸರ್ಕಾರ ಸಾಲ ಹಾಗೆ ಸಬ್ಸಿಡಿ ಹಣವನ್ನ ನಿಗದಿಪಡಿಸಿದ್ದೆ ಅಂದರೆ ಹಳ್ಳಿ ಭಾಗದ ಜನ ಸಾಮಾನ್ಯರಿಗೆ ಒಂದು ಮೊತ್ತ ಹಾಗೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹೆಚ್ಚಿನ ಹಣ ನೀಡಲಾಗುತ್ತದ.
| ಅರ್ಜಿ ದಾರರ ವರ್ಗ | ಪ್ರದೇಶ | ಸಹಾಯಧನ |
| ಸಾಮಾನ್ಯ ವರ್ಗ | ಗ್ರಾಮೀಣ | ಗರಿಷ್ಠ ₹90,000 ವರೆಗೆ ಸಹಾಯಧನ ನೀಡಲಾಗುತ್ತದೆ. |
| SC/ST Category | ಗ್ರಾಮೀಣ | ₹3 ಲಕ್ಷ ಸಾಲ ಪಡೆದರೆ ₹1.5 ಲಕ್ಷ ಸಹಾಯಧನ |
| SC/ST Category | ನಗರ | ₹3 ಲಕ್ಷ ಸಾಲ ಪಡೆದರೆ ₹1.5 ಲಕ್ಷ ಸಹಾಯಧನ |
ಈ ಯೋಜನೆ ಲಾಭ ಪಡೆಯಲು ಈ ಸಾಲವನ್ನು ಪಡೆಯಲು ನೀವು ಯಾವುದೇ ಗ್ಯಾರಂಟಿ ಅಥವಾ ಶೂರಿಟಿ ನೀಡುವ ಅಗತ್ಯವಿರುವುದಿಲ್ಲ. ಸಾಲದ ಅರ್ಜಿ ಹಾಕಿದ ಮಹಿಳೆಯ ಬ್ಯಾಂಕ್ ಗೆ ಜಮಾ ಆದ ನಂತರ ಕಡ್ಡಾಯವಾಗಿ 3 ದಿನಗಳ ಉದ್ಯಮಶೀಲತಾ ತರಬೇತಿ ಪಡೆಯಲೇ ಬೇಕಾಗುತ್ತದೆ.
ಯೋಜನೆ ಲಾಭ ಪಡೆಯಲು ಯಾರೆಲ್ಲಾ ಅರ್ಹರು?
2026ರ ಸಾಲಿನಲ್ಲಿ ಕರ್ನಾಟಕ ಸರ್ಕಾರದ ಉದ್ಯೋಗಿನಿ ಯೋಜನೆ ₹3 ಲಕ್ಷದವರೆಗೆ ಸಾಲ ಮತ್ತು ಸಹಾಯಧನ ಪಡೆಯಲು ಈ ಕೆಳಗಿನ ಅರ್ಹತೆಗಳನ್ನು ಕಡ ಖಂಡಿತವಾಗಿ ಅರ್ಹತೆ ಹೊಂದಿರಲೇ ಬೇಕಾಗುತ್ತದೆ.
- ಯಾರೇ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು.
- ಕುಟುಂಬದ ಯಾವುದೇ ವೆಕ್ತಿಯ ಹೆಸರಿನಲ್ಲಿ ಕರ್ನಾಟಕ ಅಥವಾ ಯಾವುದೇ ದೇಶದ ಭಾಗದಲ್ಲಿ ಸ್ವಂತವಾಗೀನು ಮನೆ ಇರಬಾರದು.
- ಸಾಮಾನ್ಯ ವರ್ಗದ ಕುಟುಂಬದ ವರ್ಷದ ಆದಾಯವು ₹1.5 ಲಕ್ಷಕ್ಕಿಂತ ಕಡಿಮೆ ಇರಬೇಕು.
- SC/ST ವರ್ಗದ ಕುಟುಂಬದ ವರ್ಷದ ಆದಾಯದ ಮಿತಿ ₹2 ಲಕ್ಷದವರೆಗೆ ನಿಗದಿತವಾಗಿದೆ.
- ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ 55 ವರ್ಷ ವಯಸ್ಸಿನೊಳಗಿರಬೇಕು.
ಹಣದ ಕಂತುಗಳ ಸಂಪೂರ್ಣ ಮಾಹಿತಿ :- Udyogini Scheme 2026 In Kannada
ಮರುಪಾವತಿಯ ಅವಧಿ:
ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳೆಯರಿಗೆ ಸರ್ಕಾರದಿಂದ ಪಡೆದ ಸಾಲಕ್ಕೆ ಒಟ್ಟು 3 ವರ್ಷ ಅವಧಿಯಲ್ಲಿ ಮರುಪಾವತಿ ಮಾಡಬೇಕಾಗುತ್ತದೆ.
3 ವರ್ಷಗಳ ಕಾಲ ಪಡೆದ ಸಾಲವನ್ನು ಮರುಪಾವತಿಸಲು ಅವಕಾಶವಿದ್ದು, ಕೆಲವು ಸಂದರ್ಭಗಳಲ್ಲಿ ಸಾಲ ಮರುಪಾವತಿಸಲು 6 ವರ್ಷಗಳವರೆಗೆ ಅವಕಾಶವಿರುತ್ತದೆ.
ಈ ಯೋಜನೆ ಅಡಿಯಲ್ಲಿ ಶೇ. 6 ರಿಂದ 12 ರಷ್ಟು ಬಡ್ಡಿ ದರ ಇರುತ್ತದೆ.
SC/ST,ವಿಧವೆಯರು, ಅಂಗವಿಕಲರಿಗೆ ಬ್ಯಾಂಕ್ ನಿಯಮಗಳನ್ವಯ ಬಡ್ಡಿ ಇಲ್ಲದೆ ಸಾಲ ಸೌಲಭ್ಯ ದೊರೆಯುವ ಸಾಧ್ಯತೆ ಇರುತ್ತದೆ.
ಸಬ್ಸಿಡಿ ಮತ್ತು ಕಂತುಗಳ ಲೆಕ್ಕಾಚಾರ
- ಸಾಮಾನ್ಯ ವರ್ಗ ;- ಅಭ್ಯರ್ಥಿಗಳಿಗೆ 30% ರಷ್ಟು ಸಬ್ಸಿಡಿ ಸಿಗುತ್ತೆ, ಉಳಿದ 70% ರಷ್ಟು ಮೊತ್ತಕ್ಕೆ ಕಂತುಗಳನ್ನು ನಿಗದಿಪಡಿಸಲಾಗುತ್ತದೆ.
- SC/ST ವರ್ಗ :- 50% ರಷ್ಟು ಸಬ್ಸಿಡಿ ದೊರೆಯುತ್ತದೆ ಜೊತೆಗೆ ಉಳಿದ 50% ರಷ್ಟು ಹಣವನ್ನ ಮಾತ್ರ ಸಮಾನ ಮಾಸಿಕ ಕಂತುಗಳಲ್ಲಿ ಅಂದರೆ EMI ರೂಪದಲ್ಲಿ ಮರುಪಾವತಿ ಮಡಬೀಗುತ್ತದೆ.
- ಈ ಯೋಜನೆ ಅಡಿಯಲ್ಲಿ ಸಾಲ ಪಡೆಯಲು ಮಹಿಳೆಯರು ಯಾವುದೇ ರೀತಿಯ ವೆಚ್ಚ ಮಾಡಬೇಕಿಲ್ಲ.
- ಹೆಚ್ಚಿನ ಮಾಹಿತಿಗಾಗಿ ಅಥವಾ ನಿಮ್ಮ ಜಿಲ್ಲೆಯ ನಿರ್ದಿಷ್ಟ ಕಂತುಗಳ ವಿವರಕ್ಕಾಗಿ ನಿಮ್ಮ ಸಮೀಪವಿರುವ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಥವಾ ಸಾಲ ಮಂಜೂರು ಮಾಡಿದ ಬ್ಯಾಂಕ್ ನಲ್ಲಿ ತಿಳಿಯಬಹುದಾಗಿದೆ.

ಮಹಿಳೆಯರಿಗೆ ಈ ಯೋಜನೆ ಇಂದ ಆಗುವ ಪ್ರಯೋಜನ :
- ಒಬ್ಬ ಅಸಾಧಾರಣ ಹೆಣ್ಣು ಕೂಡ ಈ ಯೋಜನೆ ಲಾಭ ಪಡೆದು ಸಮಾಜದಲ್ಲಿ ಸ್ವತಂತ್ರವಾಗಿ ಮತ್ತು ಯಾರ ಮೇಲು ಅವಲಂಬನೆ ಆಗದೇ ಜೀವನ ನಡೆಸಬಹುದು.
- ಮಳೆಯರಿಗೆ ಈ ಒಂದು ಯೋಜನೆ ಮೂಲಕ ಅತೀ ದೊಡ್ಡ ಮಟ್ಟದಲ್ಲಿ ನೆರವು ಸಿಕ್ಕಂತಾಗುತ್ತದೆ.
- ಸಾಲದ ಜೊತೆಗೆ ಉಚಿತವಾಗಿ ಸತ್ಕಾರದ ಕಡೆಯಿಂದಾನೆ ಉದ್ಯೋಗಕ್ಕೆ ಶಾಂಬನ್ಸ್ದ ಪಟ್ಟ ಅಭಿವೃದ್ಧಿ ತರಬೇತಿ (EDP), ಎಲ್ಲ ಮಹಿಳೆಯರಿಗೂ ತಾವು ನಡೆಸುವ ವ್ಯವಹಾರ ಹೇಗೆ ಯಶಸ್ವಿಯಾಗಿ ನಡೆಸಬೇಕು, ಹಣಕಾಸು ನಿರ್ವಹಣೆ ಮತ್ತು ಮಾರುಕಟ್ಟೆ ತಂತ್ರಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕೂಡ ತಿಯಬಹುದಾಗಿದೆ.
- ಕೇವಲ ಅರ್ಜಿ ಸಲ್ಲಿಸಿದ ಮಹಿಳೆಯರಿಗೆ ಮಾತ್ರವಲ್ಲದೆ ಇತರೆ ಮಹಿಳೆಯರಿಗೆ ಉದ್ಯೋಗ ನೀಡುವ ಮೂಲಕ ಸಮಾಜದಲ್ಲಿ ಉದ್ಯೋಗ ಸೃಷ್ಟಿಯಾಗತ್ತದೆ.
- ಪ್ರತಿಯೊಬ್ಬರೂ ತಿಳಿಯಬಹುದಾದ ಈ ಒಂದು ಯೋಜನೆ ಕಿರಾಣಿ ಅಂಗಡಿ, ಹೊಲಿಗೆ ಯಂತ್ರ, ಹೈನುಗಾರಿಕೆ, ತರಕಾರಿ ಮಾರಾಟ, ಬ್ಯೂಟಿ ಪಾರ್ಲರ್ ಸೇರಿದಂತೆ ಇನ್ನು ಅನೇಕ 88ಕ್ಕೂ ಹೆಚ್ಚು ಸಣ್ಣ ಪ್ರಮಾಣದ ಉದ್ಯಮಗಳಿಗೆ ಈ ಯೋಜನೆಯಡಿ ಆರ್ಥಿಕ ನೆರವು ಮಡೆಯುವ ಅವಕಾಶವನ್ನ ನಮ್ಮ ಕರ್ನಾಟಕ ಸರ್ಕಾರ ಮಾಡಿಕೊಟ್ಟಿದೆ.
ಯೋಜನೆಯ ಅನಾನುಕೂಲ : Udyogini Scheme 2026 In Kannada
ಈ ಯೋಜನೆಯಿಂದ ಅನುಕ ಕಂಡುಬಂದರೂ ಕೂಡ ಅನಾನುಕೂಲಗಳು ಕೂಡ ಕಂಡುಬರುತ್ತದೆ.
- ನಾವು 2026ರ ಹಣದುಬ್ಬರ ಹಾಗೆ ಮಾರುಕಟ್ಟೆಗಳಲ್ಲಿನ ಖರ್ಚು ವೆಚ್ಚಗಳಿಗೆ ಹೋಲಿಸಿದರೆ ₹3,00,000 ಸಾಲದ ಮೊತ್ತವು ದೊಡ್ಡ ಮಟ್ಟದ ಉದ್ಯಮ ಅಥವಾ ಆಧುನಿಕ ತಂತ್ರಜ್ಞಾನದ ವ್ಯಾಪಾರ ವ್ಯವಹಾರನ್ನ ನಡೆಸಲು ಸಾಧ್ಯವಾಗುವುದಿಲ್ಲ.
- ತುಂಬ ಆದಾಯ ಕಡಿಮೆ ಆದಾಯದ ಮಿತಿ ಸರ್ಕಾರ ಕೊಟ್ಟಿರುವುದರಿಂದ ಮಾಧ್ಯಮ ವರ್ಗಗ ಅನೇಕ ಅರ್ಹ ಮಹಿಳೆಯರು ಈ ಯೋಜನೆಯಾ ಲಾಭ ಪಡೆಯಲು ಆಗುವುದಿಲ್ಲ.
- ಯೋಜನೆ ಅಡಿಯಲ್ಲಿ ಸರ್ಕಾರದಿಂದ ಅರ್ಜಿ ಸೆಲೆಕ್ಟ್ ಆಗಿ ಬ್ಯಾಂಕ್ ನಿಂದ ಸಾಲ ಪಡಿಯೋದು ಹಾಗೆ ಸರ್ಕಾರದ ಸಬ್ಸಿಡಿ ಬಿಡುಗಡೆಯಾಗಲು ತುಂಬ ಕಾಲವಕಾಶ ತಗೊಳುತ್ತದೆ.
- ಅನೇಕ ಹಳ್ಳಿ ಭಾಗಗಳಲ್ಲಿ ಅರ್ಜಿ ಸಲ್ಲಿಸುವಾಗ ಅಥವಾ ಸಬ್ಸಿಡಿ ಪಡೆಯುವಾಗ ಮಾಧ್ಯವರ್ತಿಗಳು ಮಹಿಳೆಯರಿಗ ಕಿರಿಕಿರಿ ಉಂಟುಮಾಡುತ್ತದೆ.
ಅಗತ್ಯ ದಾಖಲೆಗಳು: Udyogini Scheme 2026 In Kannada
ಮಹಿಳೆಯವು ಈ ಕೆಳಗಿನ ಅಗತ್ಯ ದಾಖಲೆ ಗಾಳು ಹೊಂದಿರಬೇಕಾಗುತ್ತದೆ.
- ವಯಸ್ಸಿನ ದೃಢೀಕರಣ ಪತ್ರ
- ಆದಾಯ ಪ್ರಮಾಣಪತ್ರ
- ನಿವೇಶನದ ದಾಖಲೆಗಳು
- ಆಧಾರ್ ಕಾರ್ಡ್
- ಭಾವಚಿತ್ರ
- ಉದ್ದೇಶಿತ ಉದ್ಯಮದ ಯೋಜನಾ ವರದಿ
- ಬ್ಯಾಂಕ್ ಪಾಸ್‌ಬುಕ್
ಅಗತ್ಯವಿದ್ದಲ್ಲಿ ಈ ದಾಖಲೆಗಳು :-
- ಅಂಗವಿಕಲ ಪ್ರಮಾಣಪತ್ರ
- ತರಬೇತಿ ಪ್ರಮಾಣಪತ್ರ
- ವಿಧವೆ ಪ್ರಮಾಣಪತ್ರ
ಅರ್ಜಿ ಸಲ್ಲಿಸುವ ವಿಧಾನ: Udyogini Scheme 2026 In Kannada
ಈ ಯೋಜನೆಗೆ ಎರೆಡು ಹಂತದಲ್ಲಿ ಅರ್ಜಿಯನ್ನ ಸಲ್ಲಿಸಬಹುದು ಆನ್ಲೈನ್ ಹಾಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಪಡೆಯುವ ವಿಧಾನ
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ಅಗತ್ಯ ದಾಖಲಾತಿಗಳನ್ನು ತೆಗೆದಿಟ್ಟುಕೊಳ್ಳಬೇಕು. ನಂತರ ನಿಮ್ಮ ಫೋನ್ ಅಥವಾ ಕಂಪ್ಯೂಟರ್‌ನಲ್ಲಿ ಹಾಗೆ ಸಂಬಂಧ ಪಟ್ಟ ಕಚೇರಿಗಳಲ್ಲಿ ಬ್ಯಾಂಕ್ ಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
- ಮಹಿಳೆಯರು ನಿಮ್ಮ ಸಮೀಪದ ಬ್ಯಾಂಕ್ ಗೆ ಭೇಟಿ ನೀಡಬೇಕು ಅಥವಾ ಉಪ ನಿರ್ದೇಶಕರು / CDPO ಕಚೇರಿಗಳು, ಹಾಗೆ ಸಾಲ ನೀಡುವ ಬ್ಯಾಂಕ್‌ಗಳ ಅಧಿಕೃತ ವೆಬ್‌ಸೈಟ್ ನಿಗಮದ ವೆಬ್‌ಸೈಟ್: www.kswdc.com ಡೌನ್‌ಲೋಡ್ ಮಾಡುವ ಮೂಲಕ ನೀವು ಅರ್ಜಿಯನ್ನ ಪಡೆಯಬಹುದು.
ಅರ್ಜಿ ಸಲ್ಲಿಸುವ ವಿಧಾನ Udyogini Scheme 2026 In Kannada
- ಮೊದಲು ಅಗತ್ಯವಿರುವ ಎಲ್ಲಾ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.
- ನಂತರ ಬ್ಯಾಂಕ್ ಶಾಖೆ ಅಥವಾ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (KSFC) ಶಾಖೆಗೆ ಅರ್ಜಿ ಸಲ್ಲಿಸಬೇಕು.
- ಸಾಲ ಮಂಜೂರಾತಿಯ ನಂತರ ಅರ್ಜಿದಾರರ ಬ್ಯಾಂಕ್ ಖಾತೆಗೆ ಅಥವಾ ಯಂತ್ರೋಪಕರಣಗಳು / ಉಪಕರಣಗಳ ಪೂರೈಕೆದಾರರ ಬ್ಯಾಂಕ್ ಖಾತೆ ಗಳಿಗೆ ಹಣ ಜಮಾ ಮಾಡ್ಲಗುತ್ತದೆ.
ತೀರ್ಮಾನ:-
ಅರ್ಜಿ ಸಲ್ಲಿಸುವ ಮಹಿಳೆಯರಿಗೆ ಸ್ವಂತ ಉದ್ಯೋಗ ಪ್ರಾರಂಭಿಸಲು ಅಗತ್ಯವಾದ ಬ್ಯಾಂಕ್ ಸಾಲ ಮತ್ತು ಸಬ್ಸಿಡಿ ಸೌಲಭ್ಯ ದೊರೆಯುವ ಉತ್ತಮ ಯೋಜನೆ ಅಂದರೆ ಮಹಿಳೆಯರ ಸ್ವಾವಲಂಬನೆ ಮತ್ತು ಆರ್ಥಿಕ ಸಬಲೀಕರಣಕ್ಕೆ ಸಹಾಯಕವಾಗಿರುವ ಮಹತ್ವದ ಸರ್ಕಾರಿ ಯೋಜನೆಯಾಗಿದೆ. ಮಹಿಳೆಯರಿಗೆ ಅನುಕೂಲವಾಗಲಿ ಎಂದು ಒನ್ಲೈನ್ ಹಾಗೆ ಆಫ್ ಲೈನ್ ಅರ್ಜಿ ಪ್ರಕ್ರಿಯೆ ಒಳಗೊಂಡಿದೆ. ಬ್ಯಾಂಕ್ ಮತ್ತು ಸಂಬಂಧ ಪಟ್ಟ ಹಣಕಾಸು ಸಂಸ್ಥೆಗಳ ಪರಿಶೀಲನೆಯ ನಂತರ ಸಾಲ ಮಂಜೂರಾಗುತ್ತದೆ ನಂತರ ಹಣವನ್ನು ನೇರವಾಗಿ ಅರ್ಜಿದಾರರ ಬ್ಯಾಂಕ್ ಅಥವಾ ಉಪಕರಣಗಳ ಪೂರೈಕೆದಾರರಿಗೆ ಜಮಾ ಮಾಡಲಾಗುತ್ತದೆ.
| ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಅರ್ಜಿದಾರರು ಹತ್ತಿರದ ಬ್ಯಾಂಕ್‌ಗೆ ಭೇಟಿ ನೀಡಿ.. |





