ರೈತರೇ, ನಿಮ್ಮ ಕೃಷಿ ಭೂಮಿಯಲ್ಲಿರುವ ವಿದ್ಯುತ್ ಕಂಬ ಅಥವಾ ಟ್ರಾನ್ಸ್ಫಾರ್ಮರ್ ನಿಂದ ಏನಾದರು ತೊಂದರೆ ಆಗುತ್ತಿದೆಯೇ? ಹಾಗಿದ್ದರೆ ಇಲ್ಲಿದೆ ನೋಡಿ ಸರ್ಕಾರದಿಂದ ಈ ಸಮಸ್ಯೆಗೆ ಪರಿಹಾರ.
ರೈತರಿಗೆ ಭರ್ಜರಿ ಗುಡ್ ನ್ಯೂಸ್!! ಸರ್ಕಾರದಿಂದ ಸಿಗಲಿದೆ ಟ್ರಾನ್ಸ್ಫಾರ್ಮರ್ ಸಬ್ಸಿಡಿ : Transformer Subsidy Scheme 2026
ಕೃಷಿ ಭೂಮಿಯಲ್ಲಿರುವ ವಿದ್ಯುತ್ ತಂತಿಗಳು, ಕಂಬಗಳು ಇನ್ನಿತರೇ ಸಾರ್ವಜನಿಕ ವಿದ್ಯುತ್ ಸೌಕರ್ಯದಿಂದಾಗಿ ರೈತರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸುವ ಉದ್ದೇಶದಿಂದ ಸರ್ಕಾರವು ಟ್ರಾನ್ಸ್ಫಾರ್ಮರ್ ಸಬ್ಸಿಡಿ ಯೋಜನೆಯನ್ನು ಜಾರಿಗೆ ತಂದಿದೆ.
ಈ ಒಂದು ಯೋಜನೆಯಡಿಯಲ್ಲಿ ರೈತರು ಎಷ್ಟು ಸಬ್ಸಿಡಿ ಹಣ ಪಡೆಯಬಹುದು? ಯಾರು ಸಬ್ಸಿಡಿ ಹಣವನ್ನು ನೀಡುತ್ತಾರೆ? ಈ ಯೋಜನೆಯ ಲಾಭ ಪಡೆಯಲು ಯಾರು ಅರ್ಹರು ? ಎಂದು ಯೋಚಿಸುತ್ತಿದೀರಾ.. ಹಾಗಿದ್ದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಯೋಜನೆಗಳ ಬಗ್ಗೆ ಮಾಹಿತಿ ಬೇಕಾಗಿದ್ದಾರೆ ನಮ್ಮ ವೆಬ್ಸೈಟ್ ಉದ್ಯೋಗಸಲಹೆ ಗೆ ಭೇಟಿ ನೀಡಿ
ಯೋಜನೆಯ ಸಮೀಕ್ಷೆ: (Transformer Subsidy Scheme 2026)
| ಯೋಜನೆಯ ಹೆಸರು | ಟ್ರಾನ್ಸ್ಫಾರ್ಮರ್ ಸಬ್ಸಿಡಿ ಯೋಜನೆ |
| ಪ್ರಯೋಜನ ಪಡೆಯುವವರು | ರೈತರು |
| ಒಟ್ಟು ಸಬ್ಸಿಡಿ ಮೊತ್ತ | ₹ 10,000 |
| ಅರ್ಜಿ ಸಲ್ಲಿಸುವ ವಿಧಾನ | ಈ ಒಂದು ಯೋಜನೆಯ ಲಾಭ ಪಡೆಯಲು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು |
ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿ
ಕೆಲವೊಂದು ವಿದ್ಯುತ್ ಇಲಾಖೆಗಳು ರೈತರ ಕೃಷಿ ಭೂಮಿಯಲ್ಲಿ ವಿದ್ಯುತ್ ಕಂಬಗಳನ್ನು, ಟ್ರಾನ್ಸ್ಫಾರ್ಮರ್ ಗಳನ್ನು ಅಳವಡಿಸಿರುವುದರಿಂದ ರೈತರಿಗೆ ಕೃಷಿ ಚಟುವಟಿಕೆಗಳನ್ನು ನಡೆಸಲು ತೊಂದರೆ ಯಾಗುತ್ತದೆ ಅಲ್ಲದೆ ವಿದ್ಯುತ್ ಕಂಬ ಅಳವಡಿಸಿದ ಸ್ಥಳದಲ್ಲಿ ಯಾವುದೇ ಕೃಷಿ ಚಟುವಟಿಕೆಯನ್ನು ಮಾಡಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರವು ರೈತರ ಹಿತರಕ್ಷಣೆಗಾಗಿ ಟ್ರಾನ್ಸ್ಫಾರ್ಮರ್ ಸಬ್ಸಿಡಿ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಒಂದು ಯೋಜನೆಯಡಿಯಲ್ಲಿ ವಿದ್ಯುತ್ ಕಂಬಗಳನ್ನು ಹಾಗೂ ಟ್ರಾನ್ಸ್ಫಾರ್ಮರ್ ಅಳವಡಿಸಿರುವ ಕಂಪನಿಗಳಿಂದ ರೈತರು ₹ 10,000 ಸಬ್ಸಿಡಿ ಹಣವನ್ನು ಪಡೆಯುತ್ತಾರೆ.
| ಪ್ರಮೂಖ ಸೂಚನೆ: “ರೈತರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ ತಮ್ಮ ಕೃಷಿ ಭೂಮಿಯಲ್ಲಿ ವಿದ್ಯುತ್ ಕಂಬಗಳು ಅಥವಾ ಟ್ರಾನ್ಸ್ಫಾರ್ಮರ್ ವ್ಯವಸ್ಥೆ ಇರಬೇಕು.” |
ಯೋಜನೆಗೆ ಅರ್ಜಿ ಸಲ್ಲಿಸುವ ರೈತರಿಗೆ ಇರಬೇಕಾದ ಅರ್ಹತೆಗಳು: Transformer Subsidy Scheme 2026
- ಈ ಯೋಜನೆಗೆ ಅರ್ಜಿ ಸಲ್ಲಿಸುವ ರೈತರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- ರೈತರು ಕೃಷಿ ಭೂಮಿಯಲ್ಲೆ ವಿದ್ಯುತ್ ಕಂಬ ಮತ್ತು ಟ್ರಾನ್ಸ್ಫಾರ್ಮರ್ ವ್ಯವಸ್ಥೆ ಇರಬೇಕು.
- ರೈತರು ತಮ್ಮ ಭೂ ದಾಖಲೆಯ ಜೊತೆಗೆ ವಿದ್ಯುತ್ ಸೌಕರ್ಯ ಇರುವ ಬಗ್ಗೆ ಪೂರವೆಯನ್ನು ನೀಡಬೇಕು.
- ರೈತರು ಕಾನೂನು ಬದ್ದವಾಗಿ ಭೂ ಮಾಲೀಕತ್ವವನ್ನು ಹೊಂದಿರಬೇಕು ಮತ್ತು ಕೃಷಿ ಭೂಮಿಯಲ್ಲಿ ಕೆಲಸವನ್ನು ಮಾಡುತ್ತಿರಬೇಕು.
- ಈ ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ನಂತರವೇ, ರೈತರು ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆಯಲು ಅರ್ಹರಾಗಿರುತ್ತಾರೆ.
ಯ್ಯೋಜನೆಯ ಕುರಿತು ಪ್ರಮೂಖ ಅಂಶಗಳು:
- ವಿದ್ಯುತ್ ಕಾಯ್ದೆ 2003 ರ ಅಡಿಯಲ್ಲಿ ರೈತರಿಗೆ ಇರುವ ಹಕ್ಕುಗಳು : ವಿದ್ಯುತ್ ಕಾಯ್ದೆ 2003 ರ ಸೆಕ್ಷನ್ 57 ರ ಅಡಿಯಲ್ಲಿ, ರೈತರ ಕೃಷಿ ಭೂಮಿಯಲ್ಲಿ ಸರ್ಕಾರಿ ವಿದ್ಯುತ್ ಕಂಬ ಅಥವಾ ಟ್ರಾನ್ಸ್ಫಾರ್ಮರ್ ಅನ್ನು ಅಳವಡಿಸಿದಾಗ ರೈತರು ಅದಕ್ಕೆ ಪರಿಹಾರವನ್ನು ಪಡೆದುಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ.
ಈ ಒಂದು ಯೋಜನೆಯಡಿಯಲ್ಲಿ ರೈತರಿಗೆ ಸಿಗುವ ಕೆಲವು ಪ್ರಯೋಜನಗಳು:Transformer Subsidy Scheme 2026
- ವಿದ್ಯುತ್ ಕಂಪನಿಗಳು ರೈತರೊಂದಿಗೆ ವಿದ್ಯುತ್ ಕಂಬ ಮತ್ತು ಟ್ರಾನ್ಸ್ಫಾರ್ಮರ್ ಅಳವಡಿಸುವ ಮೊದಲು ಗುತ್ತಿಗೆ ಒಪ್ಪಂದವನ್ನು ಮಾಡಿಕೊಂಡಿರಬೇಕು. ಇದರಿಂದಾಗಿ ವಿದ್ಯುತ್ ಉಪಕರಣವನ್ನು ಅಳವಡಿಸುವ ಸಂದರ್ಭದಲ್ಲಿ ರೈತರು ₹ 5000 ದಿಂದ ₹ 10,000 ದ ವರೆಗೆ ಹೆಚ್ಚುವರಿ ಪಾವತಿಯನ್ನು ಪಡೆದುಕೊಳ್ಳಬಹುದು.
- ರೈತರು ತಮ್ಮ ಕೃಷಿ ಭೂಮಿಯಲ್ಲಿ ಟ್ರಾನ್ಸ್ಫಾರ್ಮರ್ ಹೊಂದಿದ್ದರೆ, ಸ್ಥಳೀಯ ವಿದ್ಯುತ್ ಮಂಡಳಿಯಿಂದ ಮಾಸಿಕ ₹2000 ದಿಂದ ₹ 5000 ದ ವರೆಗೆ ಬಾಡಿಗೆ ರೂಪದಲ್ಲಿ ಹಣವನ್ನು ಪಡೆಯುವ ಅವಕಾಶ ನೀಡಲಾಗಿದೆ.
- ಕೃಷಿ ಭೂಮಿಯಲ್ಲಿರುವ ಟ್ರಾನ್ಸ್ಫಾರ್ಮರ್ ಗಳು ಹಾಳಾದರೆ, ಬೆಳೆಗಳಿಗೆ ಯಾವುದೇ ಹಾನಿಯಾಗದಂತೆ ತಡಿಯಲು ಕಂಪನಿಗಳು 48 ಗಂಟೆಗಳ ಒಳಗಾಗಿ ಅದನ್ನು ಸರಿಪಡಿಸುವುದು ಕಡ್ಡಾಯವಾಗಿದೆ.
- ವಿದ್ಯುತ್ ಮಂಡಳಿಯು ರೈತರು ಸಲ್ಲಿಸಿದ ಅರ್ಜಿಯನ್ನು 30 ದಿನಗಳ ಒಳಗೆ ಪ್ರಕ್ರಿಯೆ ಗೊಳಿಸಲು ವಿಫಲರಾದರೆ, ವಿದ್ಯುತ್ ಮಂಡಳಿಯು ರೈತರಿಗೆ ಒಂದು ವಾರಕ್ಕೆ ₹ 100 ವಿಳಂಬ ಪರಿಹಾರವನ್ನು ನೀಡಬೇಕು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೊಂದಿರಬೇಕಾದ ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಭೂ ದಾಖಲೆ ಪ್ರಮಾಣಪತ್ರ
- ತಮ್ಮ ಜಮೀನಿನಲ್ಲಿರುವ ವಿದ್ಯುತ್ ಕಂಬಗಳ ಅಥವಾ ಟ್ರಾನ್ಸ್ಫಾರ್ಮರ್ ಗಳ ಫೋಟೋ
- ಇತರೆ ದಾಖಲೆಗಳು
ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿ ಇಲ್ಲಿದೆ:
ಅರ್ಹ ಅರ್ಜಿದಾರರು ಈ ಕೆಳಗಿನ ಹಂತವನ್ನು ಪಾಲಿಸಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸಿ
- ಅರ್ಹ ಅರ್ಜಿದಾರರು ನಿಮ್ಮ ವ್ಯಾಪ್ತಿಯ ಹತ್ತಿರದ ವಿದ್ಯುತ್ ಕಚೇರಿಗೆ ಭೇಟಿ ನೀಡಿ.
- ವಿದ್ಯುತ್ ಕಂಬ ಅಥವಾ ಟ್ರಾನ್ಸ್ಫಾರ್ಮರ್ ಗಳ ಪರಿಹಾರಕ್ಕಾಗಿ ನಿರ್ದಿಷ್ಟ ಪಡಿಸಿರುವ ಅರ್ಜಿ ನಮೂನೆಯನ್ನು ಪಡೆಯಿರಿ.
- ಆಧಾರ್ ಕಾರ್ಡ್, ಭೂಮಿ ಪಹಣಿ, ಜಮೀನಿನಲ್ಲಿರುವ ವಿದ್ಯುತ್ ಕಂಬ ಅಥವಾ ಟ್ರಾನ್ಸ್ಫಾರ್ಮರ್ ನ ಫೋಟೋವನ್ನು ಹಾಗೂ ಇನ್ನಿತರೇ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಿ.
| ಗಮನಿಸಿ: “ತಮ್ಮ ಜಮೀನಿನಲ್ಲಿ ವಿದ್ಯುತ್ ಮೂಲಸೌಕರ್ಯವನ್ನು ಹೊಂದಿದ್ದು, ಈ ಹಿಂದೆ ಯಾವುದೇ ಪರಿಹಾರ ಪಡೆಯದ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.” |
ಅಂತಿಮ ತೀರ್ಮಾನ:
ಸರ್ಕಾರವು ಟ್ರಾನ್ಸ್ಫಾರ್ಮರ್ ಸಬ್ಸಿಡಿ ಯೋಜನೆಯನ್ನು ರೈತರಿಗೆ ಸಂರಕ್ಷಣೆಯನ್ನು ಒದಗಿಸುವ, ಸಾಮಾಜಿಕ ಭದ್ರತೆಯನ್ನು ಒದಗಿಸುವ ಮತ್ತು ಆರ್ಥಿಕವಾಗಿ ನೆರವಾಗುವ ನಿಟ್ಟಿನಲ್ಲಿ ಜಾರಿಗೆ ತಂದಿದ್ದು ಅರ್ಹ ರೈತರು ಈ ಒಂದು ಯೋಜನೆಗೆ ಸಮೀಪದ ವಿದ್ಯುತ್ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ₹10,000 ದ ವರೆಗೆ ಸಬ್ಸಿಡಿ ಹಣವನ್ನು ಪಡೆಯಿರಿ.
ಇತರ ಪ್ರಮುಖ ಲಿಂಕುಗಳು :
ಗೃಹಲಕ್ಷ್ಮಿಯರಿಗೆ ನೇರವಾಗಿ ₹3 ಲಕ್ಷ ಸಾಲ + ಸಬ್ಸಿಡಿ







