ಕರ್ನಾಟಕ ರಾಜ್ಯ ರೈತರಿಗೆ ಇದೀಗ ಮತ್ತೊಂದು ಭರ್ಜರಿ ಗುಡ್ ನ್ಯೂಸ್ ಅನ್ನ ಸರ್ಕಾರ ಕೊಟ್ಟಿದೆ ಉಚಿತವಾಗಿ ಟಾರ್ಪಲಿನ್ (tarpaulin subsidy) ನೀಡುತ್ತಿದ್ದು ರೈತರಿಗೆ ಈ ಯೋಜನೆಯಿಂದ ಸಾಕಷ್ಟು ಉಪಯೋಗ ಆಗಲಿ ಇದು ಪ್ರಗತಿಪರ ಕೃಷಿಕರಿಗೆ ಈ ಒಂದು ಯೋಜನೆಯ ಮೂಲಕ ಉತ್ತಮವಾದ ಲಾಭ ದೊರೆಯಲಿದೆ ರೈತರಿಗೆ ಇಂತಹ ಹೊಸ ಹೊಸ ಯೋಜನೆಗಳು ಸರ್ಕಾರ ಜಾರಿಗೆ ತರುತ್ತಿರುವುದರಿಂದ ರೈತರ ಬದುಕು ಹಸನಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
Tarpaulin Subsidy in Kannada
ಕರ್ನಾಟಕ ರಾಜ್ಯದ ರೈತರಿಗೆ ಉಚಿತವಾಗಿ ಟಾರ್ಪಲಿನ್ ವಿತರಣೆ ಮಾಡಲಾಗುತ್ತಿದ್ದು ರೈತರಿಗೆ ಇದೊಂದು ಸಂತಸದ ಸುದ್ದಿಯಾಗಿದೆ ಕೆಲವೊಂದು ಜಿಲ್ಲೆಗಳಲ್ಲಿ ಈ ಯೋಜನೆ ಇದೀಗ ಜಾರಿಯಲ್ಲಿದ್ದು ಇನ್ನೂ ಸಾಕಷ್ಟು ಜಿಲ್ಲೆಗಳಿಗೆ ಈ ಯೋಜನೆಯ ವಿಸ್ತರಿಸಲು ಸರ್ಕಾರ ಮುಂದಾಗಿದೆ ಹಾಗಾಗಿ ರೈತರು ಇದಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಮಾಹಿತಿಯನ್ನು ಪಡೆದು ಅರ್ಜಿಯನ್ನು ಸಲ್ಲಿಸಬಹುದು.
ಕೃಷಿ ಟಾರ್ಪಲ್ ಎಂದರೇನು?
ಕೃಷಿ ಟಾರ್ಪಲ್ ಎಂದರೆ ಕೃಷಿ ಕ್ಷೇತ್ರಗಳಿಗೆ ಬಳಸುವಂತಹ ಟಾರ್ಪಲ್ ಇದಾಗಿದೆ ಭಾರತ ಮತ್ತು ಏಷ್ಯಾ ಉಪಖಂಡದ ದೇಶಗಳು ಕೃಷಿಯ ಮೇಲೆ ಅತಿ ಹೆಚ್ಚು ಆರ್ಥಿಕವಾಗಿ ಗಮನಹರಿಸುವುದರಿಂದ ರೈತರು ಕೃಷಿಯ ಬಗ್ಗೆ ಬಹಳ ಜಾಗರೂಕರಾಗಿರಬೇಕಾಗುತ್ತದೆ.
ಇದಲ್ಲದೆ ಈ ಪ್ರದೇಶವು ವೈವಿಧ್ಯಮಯ ಹವಾಮಾನ ಸ್ಥಿತಿಯನ್ನು ಹೊಂದಿರುತ್ತೆ ಇಂತಹ ಸಂದರ್ಭದಲ್ಲಿ ಟಾರ್ಪಲ್ ಬಳಕೆ ಮತ್ತು ರಕ್ಷಣಾತ್ಮಕ ಕೃಷಿ ಬೆಳೆಯುತ್ತಿದೆ ಮತ್ತು ದಿನದಿಂದ ದಿನಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ ಇಲ್ಲಿನ ಬೆಳೆಗಳನ್ನ ಶಾಕ ಧೂಳು ಮತ್ತು ಮಳೆಗಳಿಂದ ರಕ್ಷಿಸಲು ಮುಖ್ಯವಾಗಿ ಕೃಷಿ ಕ್ಷೇತ್ರದಲ್ಲಿ ಟಾರ್ಪಲ್ ಗಳ ಅವಶ್ಯಕತೆ ತುಂಬಾನೇ ಪ್ರಮುಖವಾಗಿದೆ.
ಎಲ್ಲೆಲ್ಲಿ ಟಾರ್ಪಲ್ ಗಳ ಬಳಕೆ ಮಾಡಲಾಗುತ್ತದೆ?
ಈ ಕೆಳಗೆ ಹೆಚ್ಚಾಗಿ ಎಲ್ಲಿ ಟಾರ್ಪಲ್ಗಳನ್ನ ಬಳಕೆ ಮಾಡಲಾಗುತ್ತದೆ ಅನ್ನುವಂತಹ ವಿವರವನ್ನು ನೀಡಲಾಗಿದ್ದು ಈ ಎಲ್ಲಾ ವಿವರಗಳನ್ನು ರೈತರು ಓದಿಕೊಂಡು ತಾವು ಸಹ ಯೋಜನೆಯ ಲಾಭವನ್ನು ಪಡೆಯಬಹುದು
- ಬೆಳೆಗಳ ರಕ್ಷಣೆ
- ಅಜೋಲ್ಲ ಕೃಷಿ
- ಪಾಲಿಹೌಸ್
- ಕೋಳಿ ಫಾರಂ
- ಗಾರ್ಡನ್ ಬೆಡ್
- ಗ್ರೂ ಬ್ಯಾಕ್
- ಡ್ರೈಯಿಂಗ್ ಶೀಟ್
- ಕೃಷಿ ಯಂತ್ರೋಪಕರಣಗಳ ಕವರ್
- ಕೃಷಿ ಹೊಂಡ ಇನ್ನಿತರ ಸ್ಥಳಗಳಲ್ಲಿ ಅತಿ ಹೆಚ್ಚು ಟಾರ್ಪಲ್ ಗಳ ಬಳಕೆಯನ್ನು ಮಾಡಲಾಗುತ್ತದೆ.
ರೈತರಿಗೆ ಅನಿವಾರ್ಯವಾದ ಟಾರ್ಪಲಿಂಗ್ (Tarpaulin Subsidy):
ರೈತರು ತಾವು ಬೆಳೆದಂತ ಬೆಳೆಗಳನ್ನ ಮಳೆ, ಗಾಳಿ ,ಬೆಳಕು ಹಾಗೂ ಧೂಳಿನಿಂದ ರಕ್ಷಿಸಿಕೊಳ್ಳಲು ಟಾರ್ಪಲ್ ಗಳ ಮೊರೆ ಹೋಗುತ್ತಾರೆ. ಅಷ್ಟೇ ಅಲ್ಲದೆ ಈ ಟಾರ್ಪಲ್ ಬಳಸುವುದರಿಂದ ನೀರಿನ ಶೇಖರಣೆಯನ್ನು ಮಾಡಬಹುದು ಹಾಗೂ ಕೃಷಿ ಹೊಂಡದಲ್ಲಿ ಸಹ ಈ ಟಾರ್ಪಲ್ ಗಳ ಬಳಸುವುದರಿಂದ ನೀರಿನ ಕೊರತೆಯನ್ನು ನೀಗಿಸಬಹುದು ಹಾಗೂ ಇನ್ನೂ ಸಾಕಷ್ಟು ಕ್ಷೇತ್ರದಲ್ಲಿ ರೈತರಿಗೆ ಈ ಟಾರ್ಪಲಿನ್ ತುಂಬಾನೇ ಉಪಯುಕ್ತವಾಗಲಿದ್ದು ಒಂದು ರೀತಿಯಲ್ಲಿ ಹೇಳುವುದಾದರೆ ಟಾರ್ಪಲ್ ರೈತರ ಒಂದು ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು.
ರೈತರಿಗೆ ಟಾರ್ಪಾಲಿನ್ ಬಳಸುವುದರ ಹಿಂದಿನ ಉಪಯೋಗಗಳು:
ಕೃಷಿ ಹೊಂಡ ನಿರ್ಮಾಣ :- ನೀರಿನ ಸಂರಕ್ಷಣೆಯನ್ನು ಮಾಡಲು ಕೃಷಿ ಹೋಂಡಾ ನಿರ್ಮಾಣ ಮಾಡಿ ನೀರಿನ ಶೇಖರಣೆ ಮಾಡುತ್ತಾರೆ.
ಬೆಳೆಗಳ ರಕ್ಷಣೆ :- ರೈತರು ಬೆಳೆಗಳ ರಕ್ಷಣೆ ಮಾಡಿಕೊಳ್ಳಲು ಅವಶ್ಯಕಥೆ ತುಂಬಾನೇ ಹೆಚ್ಚಾಗಿದ್ದು ಅಷ್ಟೇ ಅಲ್ಲದೆ ಜಾನುವಾರು ಸೇರಿದಂತೆ ಕೃಷಿ ಉಪಕರಣಗಳನ್ನು ರಕ್ಷಣೆ ಮಾಡಿಕೊಳ್ಳಲು ತುಂಬಾನೇ ಇರುತ್ತದೆ.
ಇನ್ನು ಅನೇಕ ಕ್ಷೇತ್ರದಲ್ಲಿ ಟಾರ್ಪಲ್ ಏನು ಬಳಕೆ ಹೌದು ಮನೆ ನಿರ್ಮಾಣ ಸೇರಿದಂತೆ ಶಡ್ ನಿರ್ಮಾಣ ಹಾಗೂ ಇನ್ನಿತರ ಕ್ಷೇತ್ರದಲ್ಲಿ ಅತಿ ಹೆಚ್ಚಾಗಿ ಬಳಕೆ ಮಾಡುತ್ತಾರೆ.
ಟಾರ್ಪಲಿನ್ ಸಹಾಯಧನ ಯೋಜನೆಯ ಮುಖ್ಯ ಉದ್ದೇಶಗಳು:
- ರೈತರ ಆರ್ಥಿಕ ಬಾರ ಕಡಿಮೆ ಮಾಡುವ ಜೊತೆಗೆ
- ಬೆಳೆ ನಷ್ಟ ತಡೆಯುವುದು
- ಬೆಳೆಗಳ ರಕ್ಷಣೆ ಹಾಗೂ ಕೃಷಿ ಉತ್ಪನ್ನಗಳ ಗುಣಮಟ್ಟವನ್ನು ಕಾಪಾಡುವುದು ನಂತರ
- ಕೃಷಿ ಹೊಂಡ ನಿರ್ಮಾಣ ಮಾಡಿ ನೀರಿನ ಸದ್ಬಳಕೆ ಮಾಡುವುದು
ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಹಾಗೂ ಇದಕ್ಕೆ ಅರ್ಹತೆ:
ಕರ್ನಾಟಕದ ರೈತರ ಆಗಿರಬೇಕು
ಕೃಷಿ ಇಲಾಖೆಯಲ್ಲಿ ನೊಂದಾಯಿತ ರೈತರು
ಈ ಹಿಂದೆ ಯಾವುದೇ ಯೋಜನೆಯನ್ನು ಪಡೆದಿಲ್ಲದಿರುವ ರೈತರು
ಭೂಮಿಯನ್ನು ಹೊಂದಿರುವಂತ ರೈತರು ಅಥವಾ ಲೀಜಿನಲ್ಲಿ ಪಡೆದಿರುವಂತ ರೈತರು ಈ ಯೋಜನೆಯ ಲಾಭವನ್ನು ಪಡೆಯಬಹುದು
ಅರ್ಜಿ ಸಲ್ಲಿಸಲು ಕೇಳಲಾಗುವ ದಾಖಲೆಗಳು :
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಪಹಣಿ
- ಮೊಬೈಲ್ ನಂಬರ್ ಹಾಗೂ ಇನ್ನಿತರ ಅಗತ್ಯ ದಾಖಲೆಗಳು
ಟಾರ್ಪಲಿನ್ ಗುಣಮಟ್ಟ ಹಾಗೂ ಗಾತ್ರದ ವಿವರ:
| ವಿವರ | ಗಾತ್ರ |
| ಅಗಲ | 6 ಮೀಟರ್ |
| ಉದ್ದ | 8 ಮೀಟರ್ |
ಇದೀಗ ಅರ್ಜಿ ಸಲ್ಲಿಸಲು ಅವಕಾಶ ನೀಡಿದ ಜಿಲ್ಲೆಗಳು:
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಇಲ್ಲಿ ಅರ್ಜಿಯನ್ನ ಆಹ್ವಾನಿಸಲಾಗಿದೆ
ಇತರ ಜಿಲ್ಲೆಗಳಲ್ಲಿ ಈ ಯೋಜನೆಗೆ ಅನುದಾನ ಲಭ್ಯವಾದಲ್ಲಿ ವಿವಿಧ ಹಂತಗಳಲ್ಲಿ ಈ ಯೋಜನೆಯ ಲಾಭವನ್ನು ರೈತರೂ ಪಡೆಯಬಹುದು
ರೈತರು ತಮ್ಮ ತಾಲೂಕು ಕೃಷಿ ಅಧಿಕಾರಿಯನ್ನ ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆದು ಈ ಯೋಜನೆಗೆ ಅರ್ಜಿ ಸಲ್ಲಿಸಿ ಈ ಯೋಜನೆಯಿಂದ ಉಚಿತವಾಗಿ ಟಾರ್ಪಲ್ ಪಡೆಯಬಹುದು.
ಅರ್ಜಿಯನ್ನು ಎಲ್ಲಿ ತುಂಬಬೇಕು ಹಾಗೂ ಹೇಗೆ ತುಂಬಬೇಕು?
ರೈತರು ಈ ಯೋಜನೆಗೆ ಅರ್ಹತೆಯನ್ನು ಪಡೆದರೆ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ
ನೇರವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ
ಅರ್ಜಿ ಸಲ್ಲಿಸುವ ಹಂತವನ್ನು ಈ ಕೆಳಗೆ ನೀಡಲಾಗಿದ್ದು
- ಅಗತ್ಯ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು
- ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ
- ಅಲ್ಲಿ ಕೊಟ್ಟಿರುವಂತಹ ಅರ್ಜಿ ಫಾರ್ಮನ್ನ ಭರ್ತಿ ಮಾಡಿ
- ದಾಖಲೆಗಳನ್ನ ಲಗತ್ತಿಸಿ
- ಸ್ವೀಕೃತಿ ಪಡೆದುಕೊಳ್ಳಿ
ರೈತರಿಗೆ ಕೃಷಿ ಇಲಾಖೆಯಿಂದ ಸಿಗುವ ಇನ್ನಿತರ ಸೌಲಭ್ಯಗಳ ಮಾಹಿತಿ:
- ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ ಸೇರಿದಂತೆ
- ದುರಸ್ತಿಗೆ ತರಬೇತಿ
- ಪಶು ಸಂಗೋಪನೆಗೆ ಸಹಾಯಧನ ಯೋಜನೆಗಳು
- ಸಣ್ಣ ಕೃಷಿ ಉದ್ಯಮಕ್ಕೆ ಪ್ರೋತ್ಸಾಹ
- ಸಬ್ಸಿಡಿ ದರದಲ್ಲಿ ಬೀಜಗಳ ವಿತರಣೆ
ಸೇರಿದಂತೆ ಇನ್ನಿತರ ಅಗತ್ಯ ಯೋಜನೆಗಳನ್ನ ಕೃಷಿ ಇಲಾಖೆಯಿಂದ ಪಡೆದುಕೊಳ್ಳಬಹುದು
ರೈತರಿಗೆ ವಿಶೇಷ ಮಾಹಿತಿ :
ರೈತರಿಗೆ ಉಚಿತ ಟಾರ್ಪಲ್ ಗಳಿಗೆ (Tarpaulin ) ಹೆಚ್ಚಾಗಿ ಬೇಡಿಕೆಯನ್ನು ಹೆಚ್ಚಾಗಿ ಮಾಡುತ್ತಿದ್ದು ಈ ಯೋಜನೆಗೆ ಅನುದಾನ ಲಭ್ಯವಾದಲ್ಲಿ ಮಾತ್ರ ಉಚಿತವಾಗಿ ಟಾರ್ಪಲ್ ವಿತರಣೆ ಮಾಡಲಾಗುತ್ತೆ
- ಈ ಯೋಜನೆ ಬಿಟ್ಟ ನಂತರ ತಡ ಮಾಡದೇ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ
- ಕೆಲವು ಜಿಲ್ಲೆಗಳಲ್ಲಿ ಈ ಯೋಜನೆಯ ವಿವಿಧ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
ಸಮಾರೋಪ :
ಉಚಿತವಾಗಿ ಟಾರ್ಪಲಿನ್ ಸಹಾಯಧನ (Tarpaulin Subsidy) ಯೋಜನೆಗೆ ರೈತರು ಆನ್ಲೈನ್ ಮುಖಾಂತರ ಅರ್ಜಿಯನ್ನ ಸಲ್ಲಿಸಬಹುದಾಗಿದ್ದು ಅಥವಾ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿಯೂ ಕೂಡ ಹೆಚ್ಚಿನ ಮಾಹಿತಿಯನ್ನು ಪಡೆದು ಆಫ್ ಲೈನ್ ನಲ್ಲೂ ಸಹ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಯೋಜನೆಯಿಂದ 50% ರಿಂದ 90% ವರೆಗೆ ಸಬ್ಸಿಡಿ ಸಹಾಯಧನ ಕೂಡ ಸಿಗಲಿ ಸಾಮಾನ್ಯ ಹಾಗೂ ಎಸ್ಸಿ ಎಸ್ಟಿ ವರ್ಗದ ಅಭ್ಯರ್ಥಿಗಳಿಗೆ ಈ ಯೋಜನೆಯ ಅವಕಾಶ ದೊರೆಯಲಿದೆ , ಈ ಯೋಜನೆಯ ಅವಕಾಶವನ್ನು ಸದುಪಯೋಗವನ್ನ ರೈತರು ಪಡಿಸಿಕೊಳ್ಳಲು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದು ಅರ್ಜಿಯನ್ನು ಸಲ್ಲಿಸಬಹುದು.







