ಅಬ್ಬಬ್ಬಾ ! ಕರ್ನಾಟಕ ರಾಜ್ಯದ ಜನತೆಗೆ ರಾಜ್ಯ ಸರ್ಕಾರದಿಂದ ಬಹು ದೊಡ್ಡ ಕೊಡುಗೆ ಒಂದು ಘೋಷಣೆಯಾಗಿದೆ !. ಈ ಯೋಜನೆಯ ಬಗ್ಗೆ ನೀವು ತಿಳಿದುಕೊಂಡರೆ ಖಂಡಿತವಾಗಿಯೂ ಸಂಭ್ರಮಿಸಲೇಬೇಕು ಅಂತ ಯೋಜನೆಗೆ ನಮ್ಮ ಸರ್ಕಾರ ಆನ್ಲೈನ್ ಅಪ್ಲಿಕೇಶನ್ ಹಾಗೆ ಆಫ್ಲೈನ್ ಅಪ್ಲಿಕೇಶನ್ ಅನ್ನ 2026 ರಲ್ಲಿ ಆರಂಭ ಮಾಡಿದೆ. ಇದೇ ನೋಡಿ “ಸ್ವಾವಲಂಬಿ ಸಾರಥಿ ಯೋಜನೆ”.
Swavalambi Sarathi Yojana
ನಮ್ಮ ಬಡತನದಿಂದಾಗಿ ಶಿಕ್ಷಣದಿಂದ ನಾವು ವಂಚಿತರಾದೆವು, ಹೊಸ ಉದ್ಯೋಗ ಆರಂಭಿಸಲು ಬಂಡವಾಳ ನಮ್ಮಲ್ಲಿ ಇಲ್ಲ ಹಾಗೆ ಯಾವುದೇ ಬ್ಯಾಂಕ್ ಗಳು ನಮಗೆ ಸಾಲವನ್ನು ನೀಡುತ್ತಿಲ್ಲ ಎನ್ನುವ ನಿಮ್ಮ ದುಃಖಕ್ಕೆ ರಾಜ್ಯ ಸರ್ಕಾರ ನಿಮ್ಮಂತೆ ಇರುವ ಎಲ್ಲ ಕರ್ನಾಟಕ ಜನತೆಗಳ ಆಸರೆಗೆ ಬಂದು ನಿಂತಿದೆ.
ಸ್ವಾವಲಂಬಿ ಸಾರಥಿ ಯೋಜನೆ 2026
ಹೌದು ಆತ್ಮೀಯರೇ ಸ್ವಾವಲಂಬಿ ಸಾರಥಿ ಯೋಜನೆ ಅಡಿಯಲ್ಲಿ ಸ್ವಂತ ವೆಹಿಕಲ್ ಖರೀದಿ ಮಾಡೋಕೆ“ಸರ್ಕಾರದಿಂದ ₹4,00,000/- ಸಹಾಯಧನ ಸಿಗುತ್ತದೆ”. ಯೋಜನೆಯ ಪ್ರಮುಖ ಉದ್ದೇಶ 2026 ನೇ ಸಾಲಿನಲ್ಲಿ ಕರ್ನಾಟಕ ದಂತ ಸುಂದರ ರಾಜ್ಯದಲ್ಲಿನ ಯುವಕ-ಯುವತಿಯರಿಗೆ ಉದ್ಯೋಗವನ್ನು ಸೃಷ್ಟಿಸಬೇಕು ಎನ್ನುವ ಉದ್ದೇಶದಿಂದ ಈ ಯೋಜನೆ ಅಡಿಯಲ್ಲಿ ವಾಹನಗಳ ಖರೀದಿಗೆ ಈ ಸಹಾಯಧನವನ್ನು ಕೊಡುತ್ತಿರುವಂತದ್ದು.
ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಒಂದು ವಾಹನವನ್ನು ಖರೀದಿ ಮಾಡಲು ಕೆಲವು ಕುಟುಂಬಗಳು ಖಾಸಗಿ ಸಂಸ್ಥೆಯಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡುತ್ತಾರೆ ಆದರೆ ಈ ಒಂದು ಯೋಜನೆ ಅಡಿಯಲ್ಲಿ ಸರ್ಕಾರವೆ ನಿಮಗೆ ಉಚಿತವಾಗಿ ಬರೋಬ್ಬರಿ ನಾಲ್ಕು ಲಕ್ಷ ಸಹಾಯಧನವನ್ನು ನೀಡುತ್ತದೆ. ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಇಂತಹ ಅದ್ಭುತ ಯೋಜನೆಯ ಲಾಭವನ್ನು ಕೈಜಾರಲು ಬಿಡದೆ ನಿಗದಿ ಪಡಿಸಲಾದ ಅಂತಿಮ ದಿನಾಂಕ ದೊಳಗಾಗಿ ಅರ್ಜಿಯನ್ನ ಸಲ್ಲಿಸಿ ಅಥವಾ ನೀವು ಇಂದೇ ಅರ್ಜಿ ಸಲ್ಲಿಸಿದರು ಯೋಜನೆಯನ್ನು ಸಂಪೂರ್ಣವಾಗಿ ನಿಮ್ಮದಾಗಿಸಿಕೊಳ್ಳಬಹುದು.
“ಈ ಯೋಜನೆಯ ಬಗ್ಗೆ ಮರೆಯದಿರಿ ಮರೆತು ನಿರಾಶರಾಗದಿರಿ”
ಯೋಜನೆಯ ಕಿರುಪರಿಚಯ :-
ಸ್ವಾವಲಂಬಿ ಸಾರಥಿ ಯೋಜನೆ ಎಂಬ ಉತ್ತಮ ಹೆಸರಿನಿಂದ ಸರ್ಕಾರವು 2023-24 ಹಣಕಾಸು ವರ್ಷದಲ್ಲಿ ಮುಖ್ಯಮಂತ್ರಿಗಳ ನಿರ್ಧಾರಗಳ ಮೂಲಕ ಕೇವಲ ಕರ್ನಾಟಕ ರಾಜ್ಯಕ್ಕೆ ಮಾತ್ರ ಅಧಿಕೃತವಾಗಿ ಈ ಯೋಜನೆಯನ್ನ ಜಾರಿ ಮಾಡಲಾಯಿತು. ಇದರ ಮೂಲಕ ಹಿಂದುಳಿದ ವರ್ಗದ ಯುವಕರಿಗೆ ಉದ್ಯೋಗ ಸೃಷ್ಟಿಸಲು ವಾಹನ ಖರೀದಿಗೆ ಸಹಾಯಧನ ನೀಡಲು ಸರ್ಕಾರ ಈ ಯೋಜನೆಯನ್ನ ಅನುಷ್ಠಾನ ಗೊಳಿಸಿತು.
ಕಳೆದ ವರ್ಷದಲ್ಲಿ ಅನೇಕ ಕುಟುಂಬಗಳು ಈ ಯೋಜನೆಯನ್ನ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ಸರ್ಕಾರ 2026ರಲ್ಲಿ ಈ ಯೋಜನೆಗೆ ಅರ್ಜಿಯನ್ನು ಆರಂಭಿಸಿದ್ದು 21 ವರ್ಷ ದಿಂದ 55 ವರ್ಷಗಳೊಳಗೆ ಇರುವ ಮಹಿಳೆ ಹಾಗೆ ಪುರುಷರಿಗೆ ಸಿಹಿ ಸುದ್ದಿಯನ್ನ ಈ ಬಾರಿ ಸರ್ಕಾರ ಕೊಟ್ಟಿದೆ.
ಸರ್ಕಾರ ಯೋಜನೆಯನ್ನು ಜಾರಿ ಮಾಡಿರುವ ಪ್ರಮುಖ ಉದ್ದೇಶ :-
ಕರ್ನಾಟಕ ರಾಜ್ಯದಲ್ಲಿ ಇರುವ ಯುವಕ ಯುವತಿಯರು ಸ್ವಾವಲಂಬಿಯಾಗಿ ತಮ್ಮ ಜೀವನವನ್ನು ನಡೆಸಬೇಕು, ಹಾಗೆಯೇ ಸರ್ಕಾರ ನೀಡುವ ಸಹಾಯಧನದ ಮೂಲಕ ತಮ್ಮ ಜೀವನೋಪಾಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು, ಪ್ರತಿಯೊಂದು ವರ್ಗದ ಜನಸಾಮಾನ್ಯರಂತೆ ಹಿಂದುಳಿದ ವರ್ಗದ ಜನಸಾಮಾನ್ಯರು ಕೂಡ ಸಮಾಜದಲ್ಲಿ ಸಮಾನವಾಗಿ ಜೀವನವನ್ನು ನಡೆಸಬೇಕು ಎನ್ನುವ ಉದ್ದೇಶದಿಂದ ಈ ಸ್ವಾವಲಂಬಿ ಸಾರಥಿ ಎಂಬ ಯೋಚನೆಯನ್ನು ಸರ್ಕಾರವು ಜಾರಿ ಮಾಡಿದೆ.
- ವಿದ್ಯಾರ್ಥಿಗಳು, ಮಧ್ಯಮ ವಯಸ್ಕರ, ಯುವಕರು ಯಾವುದೇ ಒಬ್ಬ ವ್ಯಕ್ತಿಯ ಮೇಲೆ ಸಮಾಜದಲ್ಲಿ ಅವಲಂಬನೆ ಯಾಗದೆ ತಮ್ಮ ಆದಾಯವನ್ನು ತಾರೆಗಳಿಸಿಕೊಳ್ಳಬೇಕು ಎನ್ನುವ ಪ್ರಮುಖ ಉದ್ದೇಶ.
- 2026 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಲ್ಲಿ ಅನೇಕ ಯುವಕರು ಉದ್ಯೋಗದಿಂದಲೇ ಅಲೆದಾಡುತ್ತಿದ್ದಾರೆ ಹಾಗಾಗಿ ಅವರಿಗೆ ಈ ಸಹಾಯಧನದಿಂದ ವಾಹನ ಖರೀದಿ ಮಾಡಿ ಉದ್ಯೋಗದ ಮೂಲಕ ಸಮಾಜದಲ್ಲಿ ತಮ್ಮನ್ನು ತಾವು ಉತ್ತಮವಾಗಿ ರೂಪಿಸಿಕೊಳ್ಳಲಿ ಎನ್ನುವ ಉದ್ದೇಶ ಈ ಯೋಚನೆಯದಾಗಿದೆ.
- ಯಾವುದೇ ಆದಾಯದ ಮೂಲವಿಲ್ಲದ ಕುಟುಂಬಗಳಿಗೆ ಸರ್ಕಾರದ ನೆರವು
- ಈ ಹೊಸವರ್ಷದ ಮೊದಲ ತಿಂಗಳಲ್ಲಿSC, ST, OBC, ಅಲ್ಪಸಂಖ್ಯಾತ ಸಮುದಾಯಗಳ ಯುವಕರು ಆರ್ಥಿಕವಾಗಿ ಸಬಲರಾಗಲು ಅವಕಾಶವನ್ನ ಸರ್ಕಾರ ಕಲ್ಪಿಸಿದೆ.
- ಯೋಚನೆ ಮೂಲಕ ಒಂದು ಕುಟುಂಬಕ್ಕೆ ಸ್ವಂತವಾಗಿ ವಾಹನ ಸಿಕ್ಕಂತಾಗುತ್ತದೆ.
ಹೊಚ್ಚ ಹೊಸ ಉದ್ಯೋಗಕ್ಕೆ ನಮ್ಮಲ್ಲಿ ಹಣವಿಲ್ಲ, ಉದ್ಯೋಗ ಮಾಡಲು ಹೊಸ ಕೆಲಸವು ಸಿಗುತ್ತಿಲ್ಲ, ಎನ್ನುವ ನಿಮ್ಮ ಚಿಂತೆಗೆ ಇಂದೇ ಗುಡ್ ಬೈ ಹೇಳಿ !
ನಿಮಗೆ ಸಿಗುವ ಸಹಾಯಧನದ ಮೊತ್ತ ಎಷ್ಟು ಗೊತ್ತಾ ?
| ಜಾತಿ ವರ್ಗ | ಪರ್ಸೆಂಟ್ ವಿವರ | ಸಿಗುವ ಸಹಾಯಧನ | ಯಾವ ವಾಹನ |
| ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ | 75 ಪರ್ಸೆಂಟ್ | ₹4,00,000 ರವರೆಗೆ | ಟ್ಯಾಕ್ಸಿ / ಕಾರ್,ಸರಕು ವಾಹನ / ಲಾರಿ |
| OBC / ಅಲ್ಪಸಂಖ್ಯಾತ | 50 ಪರ್ಸೆಂಟ್ | ₹3,00,000 ರವರೆಗೆ | ಟ್ಯಾಕ್ಸಿ / ಕಾರ್,ಸರಕು ವಾಹನ / ಲಾರಿ |
ಎಲ್ಲ ವರ್ಗಕ್ಕೆ ಒಂದೇ ರೀತಿ ಸಹಾಯಧನ :
| ಕೆಳಗೆ ಕೊಟ್ಟಿರುವ ವಾಹನ ಖರೀದಿಗೆ | ಪ್ರತಿಯೊಂದು ವರ್ಗಕ್ಕೂ ಸಿಗುವ ಸಹಾಯಧನದ ಮೊತ್ತ |
| ಆಟೋ ರಿಕ್ಷಾ | ₹75,000 |
ಸಹಾಯಧನದ ವರ್ಗಾವಣೆ ವಿವರ :-
- ಅರ್ಜಿ ಸಲ್ಲಿಸಿದ ನಂತರ ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಸರಿಯಾಗಿ ಪರಿಶೀಲನೆ ನಡೆಸಿ ಅರ್ಜಿಯನ್ನು ಮಂಜೂರು ಮಾಡುತ್ತಾರೆ.
- ನಂತರ ಅಭ್ಯರ್ಥಿಗಳ ಸಹಾಯಧನವು ನೇರವಾಗಿ ಅರ್ಜಿದಾರರು ನೀಡಿರುವ ಬ್ಯಾಂಕ್ ಖಾತೆಗೆ(DBT) ವರ್ಗಾವಣೆಯಾಗುತ್ತದೆ.
ಕಡ್ಡಾಯವಾಗಿ ನಿಮ್ಮಲ್ಲಿ ಇರಬೇಕಾದ ಅರ್ಹತೆಗಳು :-
ಪ್ರತಿ ಯೊಂದು ಯೋಜನೆಯಲ್ಲಿ ಒಬ್ಬ ವ್ಯಕ್ತಿ ಆ ಯೋಜನೆಯ ಲಾಭವನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಳ್ಳಬೇಕಾದರೆ ಅವರಲ್ಲಿ ಕೆಲವೊಂದು ಅರ್ಹತೆಗಳು ಕಡ್ಡಾಯವಾಗಿ ಇರಲೇಬೇಕು ಕೆಳಗೆ ನೋಡತಾ ಹೋಗೋಣ ಬನ್ನಿ,
- ಕಡ್ಡಾಯವಾಗಿ ಕರ್ನಾಟಕ ರಾಜ್ಯದ ನಿವಾಸಿ ಆಗಿರಬೇಕು
- 18 ವರ್ಷದಿಂದ ಗರಿಷ್ಠ 55 ವರ್ಷದೊಳಗಿನ ಅಭ್ಯಾಸಗಳು ಮಾತ್ರನೇ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿರುವುದು.
- ವರ್ಷದ ಆದಾಯವು ₹4,50,000 ಅಥವಾ ಅಡಿಕಿಂತ ಕಡಿಮೆ ಇದ್ದಲ್ಲಿ ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದು.
- ಡ್ರೈವಿಂಗ್ ಲೈಸನ್ಸ್ ಇದ್ದ ಅಭ್ಯರ್ಥಿಗಳಿಗೆ ಮಾತ್ರ ಸರ್ಕಾರ ಅರ್ಜಿ ಸಲ್ಲಿಸುವ ಅವಕಾಶವನ್ನು ಮಾಡಿಕೊಟ್ಟಿದೆ.
- ಈ ಯೋಜನೆಗೆ ನೀವು ಮೊದಲೇ ಅರ್ಜಿ ಸಲ್ಲಿಸಿ ಐದು ವರ್ಷ ತುಂಬಾ ದಿದ್ದಲ್ಲಿ ಈ ಯೋಜನೆಯಿಂದ ಸರ್ಕಾರ ನಿಮ್ಮ ಅರ್ಜಿಯನ್ನು ಕೈಬಿಡುತ್ತದೆ.
- ಒಂದು ಕುಟುಂಬದಲ್ಲಿ ಒಬ್ಬ ಸದಸ್ಯ ಮಾತ್ರ ಅರ್ಜಿ ಸಲ್ಲಿಸುವ ಅವಕಾಶ ಹಾಗೆ ಈಗಾಗಲೇ ಸ್ವಂತ ವಾಹನ ಖರೀದಿ ಮಾಡಿ ಅದರಿಂದ ಉದ್ಯೋಗ ಮಾಡುತ್ತಿದ್ದರೆ ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಲು ಆಗುವುದಿಲ್ಲ.
ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆಗಳು ನಮ್ಮಲ್ಲಿರಬೇಕು ?
ಉತ್ತರ : ಇಲ್ಲಿ ಸಿದ್ಧವಿದೆ ಕೆಳಗೆ ಗಮನಿಸಿ
- ಆಧಾರ್ ಕಾರ್ಡ್
- ಮೊಬೈಲ್ ನಂಬರ್
- ಕರ್ನಾಟಕ ನಿವಾಸ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಡ್ರೈವಿಂಗ್ ಲೈಸೆನ್ಸ್ (ಚಾಲನಾ ಪರವಾನಗಿ)
- ಬ್ಯಾಂಕ್ ಖಾತೆ ವಿವರ
- ಖರೀದಿ ಪಾವತಿ ದಾಖಲೆ
- ನಿಮ್ಮ ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ
- ಸ್ವಯಂ ಘೋಷಣೆ ಪತ್ರ (Self Declaration Form)
ಯೋಜನೆಯ ಪ್ರಯೋಜನ :-
- ಕರ್ನಾಟಕ ಯುವಕ ಯುವತಿಯರು ಯೋಜನೆ ಮೂಲಕ ಆಟೋ ಟ್ಯಾಕ್ಸಿ ಲಾರಿ ಅಥವಾ ಸರಕು ವಾಹನಗಳನ್ನು ಖರೀದಿ ಮಾಡಿ ತಮ್ಮದೇ ಆದ ಸ್ವಂತ ಉದ್ಯೋಗವನ್ನು ಆರಂಭಿಸಬಹುದು.
- ಸಾಮಾನ್ಯ ವ್ಯಕ್ತಿಗಳು ಹಣದ ಕೊರತೆ ಇಂದಾಗಿ ಖಾಸಗಿ ಬ್ಯಾಂಕ್ ನಲ್ಲಿ ಹೆಚ್ಚಿನ ಬಡ್ಡಿದರಕ್ಕೆ ಸಾಲವನ್ನು ಪಡೆಯಲು ಮುಂದಾಗುತ್ತಾರೆ ಆದರೆ ಹೆಸರಿನಲ್ಲಿ ಇರುವ ಹಾಗೆ ಸ್ವಾವಲಂಬಿ ಸಾರಥಿ ಯೋಜನೆಯು ಇಂತವರಿಗೆ ಸ್ವಾವಲಂಬಿ ಜೀವನ ನಡೆಸಲು ಸಹಾಯಧನ ನೀಡುತ್ತದೆ. ಇದರಿಂದಾಗಿ ಸಾಮಾನ್ಯ ವ್ಯಕ್ತಿಗಳ ಮೇಲೆ ಆಗುವ ಬ್ಯಾಂಕ್ ಸಾಲದಹೊರೆಯು ಕಡಿಮೆಯಾಗುತ್ತದೆ.
- ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಯೋಜನೆ ಮೂಲಕ ಬೆಂಬಲ ಸಿಕ್ಕಂತಾಗುತ್ತದೆ
- ಸಾರ್ವಜನಿಕ ವಲಯದಲ್ಲಿ ಸರಕು ಸಾಗಣೆ ಸೇವೆಗಳು ನಡೆಯುವುದರ ಜೊತೆಗೆ ಯುವಕರಿಗೂ ಒಂದು ಉದ್ಯೋಗ ಸಿಕ್ಕಂತಾಗುತ್ತದೆ.
- ಕುಟುಂಬದ ಹಾರ್ದಿಕತೆಗೆ ಸಹಾಯಧನದಿಂದ ಬಲ ಸಿಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ :-
2026ರ ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್ಲೈನ್ ಮತ್ತು ಆಫ್ಲೈನ್ ಮುಖಾಂತರ ಅಂತಿಮ ದಿನದೊಳಗಾಗಿ ಅರ್ಜಿಯನ್ನು ಸಲ್ಲಿಸುವ ಅವಕಾಶ ಸರ್ಕಾರ ಮಾಡಿಕೊಟ್ಟಿದೆ.
ಮೊದಲು ಆಫ್ಲೈನ್ ಅರ್ಜಿ ಸಲ್ಲಿಸುವ ವಿವರ :
- ಅಭ್ಯರ್ಥಿಗಳು ಗ್ರಾಮವನ್ನು, ಬೆಂಗಳೂರು ಒನ್ ಅಥವಾ ಸ್ಥಳೀಯ ಸರ್ಕಾರಿ ಸೇವಾ ಕಚೇರಿಯಲ್ಲಿ ಅರ್ಜಿ ಫಾರಂ ಕೇಳಿ ಪಡೆಯಿರಿ.
- ಅರ್ಜಿ ಸಲ್ಲಿಸುವ ವ್ಯಕ್ತಿಯು ವೈಯಕ್ತಿಕ ವಿವರ, ವಾಹನದ ವಿವರ, ಹಾಗೇನೇ ಕುಟುಂಬದ ವಿವರವನ್ನು ಸ್ಪಷ್ಟವಾಗಿ ಭರ್ತಿ ಮಾಡಿ.
- ನೀವು ಬರ್ತಿ ಮಾಡಿರುವ ವಿವರಗಳು ಸರಿ ಇದೆಯೇ ಎಂದು ಪರಿಶೀಲನೆ ಮಾಡಿ
- ಆಧಾರ್ ಕಾರ್ಡ್, ನಿವಾಸ ಪ್ರಮಾಣ ಪತ್ರ, ಇನ್ಕಮ್ ಸರ್ಟಿಫಿಕೇಟ್, ಡ್ರೈವಿಂಗ್ ಲೈಸೆನ್ಸ್, ಬ್ಯಾಂಕ್ ಪಾಸ್ ಬುಕ್ ,ಫೋಟೋ, ಈ ಎಲ್ಲಾ ಪ್ರತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
- ಕೇಂದ್ರ ಸಿಬ್ಬಂದಿಗಳ ಅಧಿಕಾರಿಗಳ ಬಳಿ ನಿಮ್ಮ ಅರ್ಜಿಯನ್ನು ಸಲ್ಲಿಸಿ.
- ಅವರು ನಿಮಗೆ ಒಂದು ಅಪ್ಲಿಕೇಶನ್ ನಂಬರನ್ನು ನೀಡುತ್ತಾರೆ ಜಾಗರೂಕತೆಯಿಂದ ತೆಗೆದಿಟ್ಟುಕೊಳ್ಳಿ
ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸುವ ಸರಳ ವಿಧಾನ :-
ಅಭ್ಯರ್ಥಿಗಳು ತಮ್ಮ ಫೋನ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಬಯಸಿದರೆ ಕೆಳಗೆ ಕೊಡಲಾದ ಮಾಹಿತಿಯನ್ನು ಸರಿಯಾಗಿ ಓದಿ.
- ಅಧಿಕೃತ ವೆಬ್ಸೈಟ್ ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಿ
- ಸ್ವಾವಲಂಬಿ ಸಾರಥಿ ಯೋಜನೆ ಮೇಲೆ ಕ್ಲಿಕ್ ಮಾಡಿ ಲಾಗಿನ್ ಆಗಿ.
- ಅಥವಾ ನಿಮ್ಮ ಮೊಬೈಲ್ ನಂಬರ್ ಅಥವಾ ಆಧಾರ್ ಕಾರ್ಡ್ ನಂಬರ್ ಅನ್ನು ನಮೂದಿಸಿ OTP ಮೂಲಕ ಲಾಗಿನ್ ಆಗಿ.
- ನಂತರ ಸ್ವಾವಲಂಬಿ ಸಾರಥಿ ಯೋಜನೆ 2026 ಆಯ್ಕೆ ಮಾಡಿ.
- ಯಾವ ವ್ಯಕ್ತಿಯ ಹೆಸರಿನಲ್ಲಿ ಅರ್ಜಿಹಾಕಲು ಬಯಸುತ್ತೀರೋ ಅವರ ಬ್ಯಾಂಕ್ ವಿವರಗಳು, ಕೇಳುವಂತಹ ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿ ಕೊನೆಯಲ್ಲಿ ಕೆಳಗೆ ಸಬ್ಮಿಟ್ ಬಟನ್ (Submit)ಮೇಲೆ ಕ್ಲಿಕ್ ಮಾಡಿ.
“ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನವು ನಿಮಗೆ ಕಠಿಣವಾದ ನಿಮ್ಮ ಊರಿನ ಅಥವಾ ನಿಮ್ಮ ಹತ್ತಿರದ ಗ್ರಾಮವನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರದಲ್ಲೂ ಸಹ ಅರ್ಜಿಯನ್ನುಸಲ್ಲಿಸಬಹುದು”.
ಅಂತಿಮ ನುಡಿ :
| ಸ್ವಾವಲಂಬಿ ಸಾರಥಿ ಯೋಜನೆ ಕರ್ನಾಟಕದ ಯುವಕ ಯುವತಿಯರಿಗೆ ಸ್ವಂತ ವಾಹನ ಖರೀದಿ ಮಾಡಬೇಕೆನ್ನುವ ಕನಸಿಗೆ ಬೆಂಬಲ ನೀಡುವ ಅತ್ಯುತ್ತಮ ಯೋಜನೆಯಾಗಿದೆ. ಹಾಗೆ ಸಬ್ಸಿಡಿ ಇಂದಾಗಿ ಸಾಮಾನ್ಯ ಜನರ ಜೀವನವನ್ನು ಹೊಸ ದಾರಿಗೆ ಕೊಂಡೊಯ್ಯುತ್ತದೆ. ಈ ಹಿಂದೆ ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆಯಲಾಗದೆ ಇರುವಂತಹ ಅಭ್ಯರ್ಥಿಗಳಿಗೆ 2026ರಲ್ಲಿ ಸಿಗುವ ಈ ಸುವರ್ಣ ಅವಕಾಶವನ್ನು ಮಿಸ್ ಮಾಡಿಕೊಳ್ಳದೆ ಅಂತಿಮ ದಿನದೊಳಗಾಗಿ ಅರ್ಜಿಯನ್ನು ಸಲ್ಲಿಸಿ. |







