ಸುಕನ್ಯಾ ಸಮೃದ್ಧಿ ಯೋಜನೆ (SSY) ಯೋಜನೆ! Sukanya Samriddhi Yojana In Kannada Girl Scheme

On: Thursday, January 8, 2026 6:17 PM
Sukanya Samriddhi Yojana In Kannada

Join WhatsApp

Join Now

Join Telegram

Join Now

“ಹಕ್ಕಿಗಳಿಗೆ ಗೂಡು, ಮಕ್ಕಳಿಗೆ ತಾಯಿ” ಎನ್ನುವ ಗಾದೆ ಮಾತು ನೀವೆಲ್ಲ ಕೇಳಿದಿರಾ ಹೆತ್ತ ತಾಯಿಗೆ ತನ್ನ ಮಕ್ಕಳ ಭವಿಷ್ಯ ಎಷ್ಟು ಮುಖ್ಯ ಅಂತ ಗೊತ್ತಿರುತ್ತೆ ಇದೀಗ ತಾಯಿಯ ಮಕ್ಕಳ ಭವಿಷ್ಯದ ಕನಸನ್ನು ನನಸು ಮಾಡಲು ಮೋದಿ ಸರ್ಕಾರದ ಈ ಯೋಜನೆ ಅಡಿ ಯಲ್ಲಿ ನಿಮ್ಮ ಮಗಳಿಗೂ ಸಿಗುತ್ತೆ ಬರೋಬ್ಬರಿ ₹70 ಲಕ್ಷದಿಂದ ₹75 ಲಕ್ಷ ದವರೆಗೆ ಸಹಾಯಧನ ನಮ್ಮ ಕೇಂದ್ರ ಸರ್ಕಾರ ಹೆಣ್ಣುಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ರೂಪಿಸುವ ಉತ್ತಮ ಯೋಜನೆ ಇದಾಗಿದೆ.

Sukanya Samriddhi Yojana Kannada
Sukanya Samriddhi Yojana Kannada

ನಿಮ್ಮನೆ ಬಾಲಕಿಗೆ ಈ ಅಕೌಂಟ್ ಮಾಡಿಸಿದ್ರೆ ₹75 ಲಕ್ಷ ಹಣ ಸಿಗುತ್ತೆ! ಅರ್ಜಿ ಹಾಕೋದು ಹೇಗೆ ಗೊತ್ತಾ. ! | Sukanya Samriddhi Yojana In Kannada

ಭಾರತದಂತ ದೇಶದ ಪ್ರತಿಯೊಬ್ಬ ತಂದೆ ತಾಯಿ ನಿಮ್ಮ ಮಗಳ ಹೆಸರಿನಲ್ಲಿ ಈ ಯೋಜನೆಗೆ ಇದೇ ತಕ್ಷಣ ಬೇಕಾದ್ರು ಅಕೌಂಟ್ ತೆರೆಯಬಹುದು. ಇದೆ ರೀತಿ ಹುಣ್ಣುಮಕ್ಕಳಿಗೆ ಸರ್ಕಾರ ಅನೇಕ ಯೋಜನೆಗಳನ್ನ ತುಂಬಾ ವರ್ಷಗಳಿಂದ ರೂಪಿಸಿದ್ದು ಆದರೆ ಎಲ್ಲ ಯೋಜನೆಗೆ ಹೋಲಿಸಿದರೆ ಈ ಯೋಜನೆ ಉತ್ತಮ ಯೋಜನೆ ಅಂತ ಹೇಳಬಹುದು. ಬಡವರು,ಮಾಧ್ಯಮ ವರ್ಗದವರು ಹಾಗೆ ಭಾರತದ ಪತಿಯೊಬ್ಬ ಪ್ರಜೆ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಕಡಿಮೆ ಹೂಡಿಕೆ ಮಾಡಿ ಸರ್ಕಾರದಿಂದ ಹೆಚ್ಚಿನ ಹಣವನ್ನ ಪಡೆಯಬಹುದು.

ಇನ್ನು ಒಂದು ರೀತಿಯಲ್ಲಿ ಈ ಯೋಜನೆ ಬಗ್ಗೆ ವಿವರಿಸುವುದಾದರೆ ಹೆಣ್ಣು ಮಕ್ಕಳ ಆರ್ಥಿಕ ಅಭಿವೃದ್ಧಿಗಾಗಿ ಹಾಗೆ ಅವರ ಭವಿಷ್ಯದಲ್ಲಿ ಅವರ ಉತ್ತಮ ಜೀವನ ಕಲ್ಪಿಸಲು ಮತ್ತು ಭವಿಷ್ಯದ ಹೆಣ್ಣುಮಕ್ಕಳ ಓದು-ಬರಹ, ವಿವಾಹದಂತಹ ಖರ್ಚು ವೆಚ್ಚಗಳ ವಿಚಾರದಲ್ಲಿ ಮಕ್ಕಳ ತಂದೆ ತಾಯಿಗೆ ನೆರವಗುವ ಯೋಜನೆ ಇದಾಗಿದೆ.

ಕಡಿಮೆ ಹೂಡಿಕೆ ಹೆಚ್ಚಿನ ಲಾಭ ನೀವು ನಿಮ್ಮದಾಗಿಸಿಕೊಳ್ಬೇಕಾ? ಹಾಗಿದ್ರೆ ನಿಮ್ಮ ಮಗಳ ಹೆಸರಿನಲ್ಲಿ ಇಂದೇ ಅಕೌಂಟ್ ಓಪನ್ ಮಾಡಿ ಸ್ವಾಮಿ,,,,

ನಮ್ಮ ಕರ್ನಾಟಕದ ರಾಜ್ಯದಲ್ಲಿ ಈ ಯೋಜನೆಯ ಲಾಭ ಪಡೆಯುತ್ತಿರುವ ಕುಟುಂಬಗಳು ಬೆರಳೆಣಿಕೆಗಳಷ್ಟೇ. ಹೌದು ಕೆಲವರಿಗೆ “ಸುಕನ್ಯಾ ಸಮೃದ್ಧಿ ಯೋಜನೆ” Sukanya Samriddhi Yojana In Kannada ಅಂದ್ರನೇ ಗೊತ್ತು ಇರೋದಿಲ್ಲ. ಇನ್ನು ಕೆಲವರಿಗೆ ಈ ಯೋಜನೆ ನಮ್ಮ ಕೇಂದ್ರ ಸರ್ಕಾರ ನಮ್ಮಗೆ ಹುಟ್ಟುವ ಹೆಣ್ಣುಮಕ್ಕಳಿಗಾಗಿ ಅನುಮೋದನೆ ಗೊಳಿಸಿದೆ ಎನ್ನುವು ತಿಳಿದಿರುತ್ತೆ ಆದರೂ ಯೋಜನೆ ಲಾಭ ಪಡೆಯುವುದಿಲ್ಲ.

ಸ್ನೇಹಿತರೆ ಮುಂದು ಮುಂದು ನಿಮ್ಮ ಮನೆಯಲ್ಲಿರುವ ಹೆಣ್ಣು ಮಕ್ಕಳ ಜಿವನ ಉತ್ತಮವಾಗಿ ಕಟ್ಟಿಕೊಡುವುದು ತುಂಬ ಕಷ್ಟ ಆಗುತ್ತೆ ಕರಣ ಪೋಷಕರು ಇವತ್ತಿನ ದಿನದಲ್ಲಿ ಒಬ್ಬ ಮಗ ಅಥವಾ ಮಗಳಿಗೆ ಬಟ್ಟೆ, ಊಟ ,ಶಿಕ್ಷಣ, ಮದುವೆ, ಉತ್ತಮ ಆರೋಗ್ಯ ಹೀಗೆ ಇನ್ನು ಅನೇಕ ಖರ್ಚು ವೆಚ್ಚ ಮಾಡುವುದು ಸುಲಭದ ಮಾತಲ್ಲ ಇಂತ ಒಂದು ಯೋಜನೆಗೆ ನಿಮ್ಮ ಕೈಯಲ್ಲಿ ಆದಷ್ಟು ಹಣವನ್ನ ಪ್ರತಿ ತಿಂಗಳು ಹೂಡಿಕೆ ಮಾಡಿದ್ರೆ ಕೆಲವು ವರ್ಷಗಳ ನಂತರ ದೊಡ್ಡ ಮೊತ್ತವನ್ನ ಹೆಚ್ಚಿನ ಬಡ್ಡಿಯೊಂದಿಗೆ ಸರ್ಕಾರ ನಿಮ್ಮ ಮಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತದೆ.

ನೀವು ತಿಳಿಯುತ್ತಿರುವ ಮಾಹಿತಿ ನಿಜಾನೇ….

ನಮ್ಮ ದೇಶದ ಪ್ರತಿಷ್ಠಿತ ಪ್ರಧಾನಿ ನರೇಂದ್ರ ಮೋದಿಯವರು ಬೇಟಿ ಬಚಾವೋ, ಬೇಟಿ ಪಡಾವೋ ಆಂದೋಲನದ” ಅಭಿಯಾನದ ಅಡಿಯಲ್ಲಿ  2015ರ ಜನವರಿ 22 ರಂದು ಹರಿಯಾಣದ ಪಾಣಿಪತ್‌ನಲ್ಲಿ ಈ ಯೋಜನೆಯನ್ನು ಉದ್ಘಾಟಿಸಿದರು.

ಭಾರತದಲ್ಲಿ ಹುಟ್ಟುವ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಯ ವೆಚ್ಚಗಳಿಗಾಗಿ ಮಕ್ಕಳ ತಂದೆ ತಾಯಂದರಿಗೆ ಉಳಿತಾಯದ ಮನೋಭಾವ ಬೆಳೆಸುವುದು ಈ ಯೋಜನೆಯ ಮೊದಲ ಹೆಜ್ಜಿಯಾಗಿದೆ. ಸ್ನೇಹಿತರೆ ಪ್ರಸ್ತುತ ಸ್ಥಿತಿ 2026 ರಲ್ಲಿ ಸರ್ಕಾರ ಈ ಯೋಜನೆಯನ್ನ ಬದಲು ಮಾಡಿದೆಯಾ,,, ಎನ್ನುವ ನಿಮ್ಮ ಪ್ರಶ್ನೆಗೆ ? ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ 2026 ರಲ್ಲಿಯೂ ನೀವು ಈ ಯೋಜನೆಯ ಲಾಭ ಪಡೆಯಬಹುದು.

Sukanya Samriddhi Yojana In Kannada

ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತದಾದ್ಯಂತ ಈ ಒಂದು ಯೋಜನೆ ಜಾರಿಯಲ್ಲಿದೆ ಯಾವುದೇ ಕಾಲಾವಕಾಶ ಇಲ್ಲ ಆದರೆ ನಿಮ್ಮ ಮಗಳಿಗೆ 10 ವರ್ಷ ತುಂಬುವುದರೊಳಗೆ ಈ ಅಕೌಂಟ್ ತೆರೆಯಬೇಕಾಗುತ್ತದೆ. ಇನ್ನು ಅನೇಕ ಇದೆ ರೀತಿಯ ಯೋಜನೆಗಳು ಜನಸಾಮಾನ್ಯರ ನೆರವಿಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಜಾರಿ ಮಾಡಬೇಕು.

ಇಂತ ಅನೇಕ ಅಧ್ಬುತ ಯೋಜನೆಗಳಿಂದ ಬಡ ಕುಟುಂಬದಲ್ಲಿ ಜನಿಸಿದ ಹೆಣ್ಣುಮಕ್ಕಳ ಜೀವನ ಕೂಡ ಶ್ರೀಮಂತ ಮಕ್ಕಳಿಗೆ ಸಮಾನವಾಗಿ ಶಿಕ್ಷಣ ಪಡೆಯಲು ಅನುಕೂಲಮಾಡಿ ಕೊಡುತ್ತದೆ ಹಾಗೆ ಸಮಾಜದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಮಕ್ಕಳ ಭವಿಷ್ಯಕ್ಕೆ ಈ ಯೋಜನೆ ದಾರಿ ದೀಪವಾಗುತ್ತದೆ.

ಈ ಒಂದು ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ನಮ್ಮ https://udyogasalahe.in ವೆಬ್ ಸೈಟ್ ಗೆ ಭೇಟಿ ನೀಡಿ. ಈ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಹ ಅರ್ಜಿದಾರರು ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಯೋಜನೆಯ “ಉದ್ದೇಶ, ಯೋಜನೆಯ ಪ್ರಯೋಜನ, ಅಗತ್ಯ ದಾಖಲೆಗಳು” ಇನ್ನಷ್ಟು ಮಾಹಿತಿಯನ್ನು ಕೆಳಗಿನ ಹಂತದಲ್ಲಿ ನೀಡಿದ್ದು ಅದನ್ನು ಓದಿಕೊಂಡು ಅರ್ಜಿ ಸಲ್ಲಿಸಿ.

ಯೋಜನೆಯ ಅವಲೋಕನ:(Sukanya Samriddhi Yojana In Kannada)

ಯೋಜನೆಯ ಹೆಸರುಸುಕನ್ಯಾ ಸಮೃದ್ಧಿ ಯೋಜನೆ
ಅರ್ಹ ಫಲಾನುಭವಿಗಳು10 ವರ್ಷದ ಒಳಗಿನ ಭಾರತದ ಎಲ್ಲ ಹೆಣ್ಣುಮಕ್ಕಳು
ಒಟ್ಟು ಸಹಾಯಧನ ₹70 ಲಕ್ಷದಿಂದ ₹75 ಲಕ್ಷ
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಭಾರತದ ಎಲ್ಲ ಹೆಣ್ಣುಮಕ್ಕಳು
ಅರ್ಜಿ ಸಲ್ಲಿಸುವ ವಿಧಾನಆನ್ಲೈನ್ ಮೂಲಕ ಅರ್ಜಿ

ಸಂಕ್ಷಿಪ್ತ ಮಾಹಿತಿ: Sukanya Samriddhi Yojana In Kannada

ಸುಕನ್ಯಾ ಸಮೃದ್ಧಿ ಯೋಜನೆ (SSY) ನೀವಿಲ್ಲಿ ನೋಡಬಹುದು ಕರ್ನಾಟಕದಲ್ಲಿ ಮೊದಲು ಭಾಗ್ಯಲಕ್ಷ್ಮಿ ಯೋಜನೆ ಜಾರಿಯಲ್ಲಿತ್ತು ನಂತರ 2020-21ರಿಂದ ಸುಕನ್ಯಾ ಸಮೃದ್ಧಿ ಯೋಜನೆಯೊಂದಿಗೆ ವಿಲೀನಗೊಳಿಸಲಾಗಿದೆ. BPL ಕಾರ್ಡ್ ಇರುವ ಕುಟುಂಬದ “ಹೆಣ್ಣುಮಕ್ಕಳ ಹೆಸರಿನಲ್ಲಿ ಸರ್ಕಾರವೇ ಪೋಸ್ಟ್ ಆಫೀಸ್ ನಲ್ಲಿ SSY ಅಕೌಂಟ್ ಗೆ ವಾರ್ಷಿಕವಾಗಿ ಹಣವನ್ನ ಹೂಡಿಕೆ ಮಾಡುತ್ತದೆ“.

ಈ ಯೋಜನೆ ನಮ್ಮ ಕೇಂದ್ರ ಜಾರಿಗೆ ತಂದ ಪ್ರಮುಖ ಯೋಜನೆಗಳಲ್ಲಿ ಇದು ಕೂಡ ಒಂದು. ಈ ಯೋಜನೆಯಲ್ಲಿ, ಕೆಲವು ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು 2026ರಲ್ಲಿ ಪ್ರತಿಯೊಬ್ಬ ಹೆಣ್ಣುಮಕ್ಕಳ ಹೆಸರಿನಲ್ಲಿ ಪೋಷಕರು ಖಾತೆ ತೆರೆಯಲೇ ಬೇಕು ಎನ್ನುವ ಆಶಯ ಸರ್ಕಾರದಾಗಿದೆ.

ಮುಂದಿನ ಹಂತ ಹಂತಗಳಲ್ಲಿ ಏನಿದು ಆಶ್ರಯ ವಸತಿ ಯೋಜನೆ ? ಈ ಯೋಜನೆಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ದೊರೆಯುವ ಸಹಾಯಧನ ಎಷ್ಟು ಹಾಗೆ ಅರ್ಜಿ ಸಲ್ಲಿಸೋದು ಹೇಗೆ ? 

ಯೋಜನೆ ಬಗ್ಗೆ ಪ್ರಮುಖ ಮುಖ್ಯಾಂಶ ನೋಡ್ತಾ ಹೋಗೋಣ ಬನ್ನಿ…

ಏನಿದು ಸುಕನ್ಯಾ ಸಮೃದ್ಧಿ ಯೋಜನೆ ? ನಿಮ್ಮಷ್ಟು ಗೊತ್ತು ?Sukanya Samriddhi Yojana In Kannada

ನಮ್ಮ ಮೋದಿಜಿ ಸರ್ಕಾರ ಜಾರಿ ತಂದಿರುವ ಯೋಜನೆಯ ಬಗ್ಗೆ ಕೆಲವೇ ಕೆಲವು ಜನಮಾನ್ಯರಿಗೆ ಮಾತ್ರನೇ ತಿಳಿದಿದೆ ಹಾಗಾಗಿ ಈ ಒಂದು ಸಾಮಾಜಿಕ ಜಾಲತಾಣದ ಮೂಲಕ ಪ್ರತಿಯೊಬ್ಬರಿಗೂ ತಲುಪಿಸುವ ನಮ್ಮದೊಂದು ಉದ್ದೇಶ.

ಮತ್ ಯಾಕೆ ತಡ ಮಾಡುವುದು ನೋತ ಹೋಗೋಣ ಬನ್ನಿ,,, ಹೆಣ್ಣು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಭಾರತ ಸರ್ಕಾರ ಜಾರಿಗೆ ತಂದಿರುವ ಅತ್ಯುತ್ತಮ ಉಳಿತಾಯ ಯೋಜನೆಯಾಗಿದೆ ನಿಮ್ಮ ಮನೆಯಲ್ಲೂ 10 ವರ್ಷದೊಳಗಿನ ಹೆಣ್ಣು ಮಕ್ಕಳಿದ್ದಲ್ಲಿ 21 ವರ್ಷ ತುಂಬಿದನಂತರ ನೇರವಾಗಿ ನಿಮ್ಮ ಮಗಳ ಬ್ಯಾಂಕ್ ಅಕೌಂಟ್ ಗೆ ₹70 ಲಕ್ಷದಿಂದ ₹75 ಲಕ್ಷ ಜಮಾ ಆಗುತ್ತೆ.

ನನ್ನ ಒಂದೇ ಮಾತಿನಲ್ಲಿ ಹೇಳುವುದಾದರೆ, ಆರ್ಥಿಕವಾಗಿ ಸಮಾಜದಲ್ಲಿ ಹಿಂದುಳಿದ ಕುಟುಂಬಗಳಲ್ಲಿ ಹುಟ್ಟಿದ ಹೆಣ್ಣುಮಕ್ಕಳ ಜೀವನವನ್ನ ಉತ್ತಮ ಗೊಳಿಸುವದೇ ಈ ಯೋಜನೆ.

ಯೋಜನೆಯ ಉದ್ದೇಶ: Sukanya Samriddhi Yojana In Kannada

  • ಹೆಣ್ಣುಮಕ್ಕಳಿಗೆ ಆರ್ಥಿಕ ಭದ್ರತೆ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಅಂದರೆ ಬಡ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಗುವಿಗೆ ಭವಿಷ್ಯದ ಖರ್ಚು ವೆಚ್ಚಗಳನ್ನು ಭರಿಸಲು ತಂದೆ ತಾಯಂದರಿಗೆ ಆರ್ಥಿಕವಾಗಿ ಸಹಾಯ ಮಾಡುವುದು ಮತ್ತು ಅವರಿಗೆ ಸುರಕ್ಷಿತ ಹೂಡಿಕೆಯ ಮಾರ್ಗವನ್ನು ಒದಗಿಸುವುದು ಈ ಯೋಜನೆಯ ಬಹು ಮುಖ್ಯ ಉದ್ದೇಶವಾಗಿದೆ.
  • ಪೋಷಕರಿಗೆ ತಮ್ಮ ಮಕ್ಕಳಿಗೆ ಮುಂದೆ ಉತ್ತಮ ಶಿಕ್ಷಣ ಕೊಡಿಸಬೇಕು ಇನ್ನುವ ಗುರಿ ಹೊಂದಿದೆ.
  • ತಮ್ಮ ಮಗಳ ಮದುವೆಯಲ್ಲಿ ಆಗುವ ಅನೇಕ ಖರ್ಚುಗಳನ್ನ ಬಾರಿಸಲು ಈ ಯೋಜನೆ ಸಹಕಾರಿಯಾಗಿದೆ.
  • ಹೆಣ್ಣುಮಕ್ಕಳಿದಾಗಿ ಪೋಷಕರಿಗೆ ಆಗುವ ಸಾಲದ ಹೊರೆಯನ್ನ ತಪ್ಪಿಸಲು ಈ ಯೋಜನೆ ಸಹಕಾರಿಯಾಗಿದೆ.

ಯೋಜನೆ ಮೂಲಕ ಎಷ್ಟು ಹೂಡಿಕೆ ಮಾಡಿದ್ರೆ ಎಷ್ಟು ಹಣ ಸಿಗುತ್ತ :-Sukanya Samriddhi Yojana In Kannada

ಸರ್ಕಾರವೇ ತಿಳಿಸಿದಂತೆ ನೀವು ನಿಮ್ಮ ಮಗಳ ಹೆಸರಿನಲ್ಲಿ ಅಕೌಂಟ್ ತೆರೆಯಲು ಕೆಲವೊಂದು ಹೂಡಿಕೆಯ ಮೊತ್ತದ ಆಯ್ಕೆಯನ್ನ ನಿಮ್ಮಗೆ ಬಿಟ್ಟಿದೆ ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಪ್ರತಿ ತಿಂಗಳು ಮಗಳ ಹೆಸರಿನಲ್ಲಿ ಹೂಡಿಕೆ ಮಾಡಬೇಕಾಗಿರುತ್ತದೆ. ಅಂಚೆ ಕಚೇರಿ ಅಥವಾ ಬ್ಯಾಂಕ್‌ನಲ್ಲಿ ಸಿಗುವ SSY ಅರ್ಜಿ ಫಾರ್ಮ್ ಅನ್ನು ಮೊದಲು ಭರ್ತಿ ಮಾಡಬೇಕು ನಂತರ ಹೂಡಿಕೆ.

ನಿಮ್ಮ ಅನುಕೂಲಕ್ಕೆ ತಕ್ಕಂತೆ ಕಂತುಗಳನ್ನ ಆಯ್ಕೆ ಮಾಡಿ. Sukanya Samriddhi Yojana In Kannada

ತಿಂಗಳ ಹೂಡಿಕೆ (₹)ವರ್ಷದ ಹೂಡಿಕೆ (₹)15 ವರ್ಷಗಳ ಒಟ್ಟು ಹೂಡಿಕೆ ಹಣ (₹)ನಿಮ್ಮ ಮಗಳಿಗೆ ಸಿಗುವ ಹಣ 21 ವರ್ಷಕ್ಕೆ ಹೀಗಿದೆ (₹)
₹250₹3,000₹45,000₹1,30,000
₹500₹6,000₹90,000₹2,60,000
₹1,000₹12,000₹1,80,000₹5,20,000
₹2,000₹24,000₹3,60,000₹10,40,000
₹3,000₹36,000₹5,40,000₹15,60,000
₹4,000₹48,000₹7,20,000₹20,80,000
₹5,000₹60,000₹9,00,000₹26,00,000
₹6,000₹72,000₹10,80,000₹31,20,000
₹7,000₹84,000₹12,60,000₹36,40,000
₹8,000₹96,000₹14,40,000₹41,60,000
₹9,000₹1,08,000₹16,20,000₹46,80,000
₹10,000₹1,20,000₹18,00,000₹52,00,000
₹11,000₹1,32,000₹19,80,000₹57,20,000
₹12,000₹1,44,000₹21,60,000₹62,40,000
₹12,500₹1,50,000 ₹22,50,000₹70,00,000

ಯೋಜನೆ ಅನುಕೂಲ ಪಡೆಯಲು ಯಾರೆಲ್ಲಾ ಅರ್ಹರು? Sukanya Samriddhi Yojana In Kannada

  • ಯಾರೇ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಗು ಅವಳ ತಂದೆ ತಾಯಿ ಇಬ್ಬರು ಭಾರತದ ಕಾಯಂ ನಿವಾಸಿಯಾಗಿರಬೇಕು.
  • ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಈ ಯೋಜನೆ ಲಾಭ.
  • 10 ವರ್ಷ ದಾಟಿದ ನಂತರ ಖಾತೆ ತೆರೆಯಲು ಯಾವುದೇ ಅವಕಾಶ ಇರುವುದಿಲ್ಲ ನಿಮ್ಮ ಮಗಳಿಗೆ 10 ವರ್ಷ ತುಂಬುವುದರೊಳಗಾಗಿ ಅಕೌಂಟ್ ಮಾಡಬೇಕು.
  • ಒಂದು ಕುಟುಂಬದಲ್ಲಿ ಇಬ್ಬರು ಹೆಣ್ಣು ಮಕ್ಕಳ ಹೆಸರಿನಲ್ಲಿ ಮಾತ್ರ ಹೂಡಿಕೆ ಮಾಡಲು ಅವಕಾಶ.
  • ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ನೀವು ಅಧಿಕೃತ ಪೋರ್ಟಲ್ www.nsiindia.gov.in ನಲ್ಲಿ ತಿಳಿಯಬಹುದು.

ಹಣದ ಕಂತುಗಳ ಸಂಪೂರ್ಣ ವಿವರ :- Sukanya Samriddhi Yojana In Kannada

ನೀವು ಎಲ್ಲ ಕಂತು ಪೂರೈಸಿದ ನಂತರ ಹಣ ಪಡೆಯಲು ಇರುವ ಮುಖ್ಯ ಮಾರ್ಗ.

  • ಖಾತೆ ಓಪನ್ ಆದ ದಿನಾಂಕದಿಂದ 21 ವರ್ಷಗಳು ತುಂಬಿದ ನಂತರ ಖಾತೆ ಮೆಚೂರ್ ಆಗುತ್ತದೆ.
  • ಈ ಅವಧಿಯಲ್ಲಿ, ನೀವು ಹೂಡಿಕೆ ಮಾಡಿದ ಒಟ್ಟು ಹಣ ಮತ್ತು ಆ ಹಣದ ಮೇಲೆ 8.2% ಬಡ್ಡಿ ಸೇರಿ ಪೂರ್ಣ ಹಣವನ್ನ ನಿಮ್ಮ ಮಗಳ ಬ್ಯಾಂಕ್ ಅಕೌಂಟ್ ಗೆ ಜಮಾ ಆಗುತ್ತದೆ.
  • ನೀವು ಪಡೆಯುವ ಮೊತ್ತವು ಸಂಪೂರ್ಣವಾಗಿ ಟ್ಯಾಕ್ಸ್ ಫ್ರೀ ಇರುತ್ತದೆ.

ಯೋಜನೆಯ ಪ್ರಯೋಜನ ಏನಾಗಿರುತ್ತೆ ತಿಳಿಯೋಣ : Sukanya Samriddhi Yojana In Kannada

ನಿಮ್ಮ ಮನೆ ಹೆಣ್ಣು ಮಗಳಿಗೆ ಸಿಗುತ್ತೆ ಸುಕನ್ಯಾ ಸಮೃದ್ಧಿ ಯೋಜನೆ ಪೂರ್ತಿ ಲಾಭ

  • ಪ್ರಸ್ತುತ 2026ರಲ್ಲಿ ಇದು ವಾರ್ಷಿಕ 8.2% ಬಡ್ಡಿ ಪಡೆಯ ಬಹುದಾಗಿದ್ದು ಸಣ್ಣ ಪುಟ್ಟ ಉಳಿತಾಯ ಯೋಜನೆ ಗಳಿಗಿಂತ ಈ ಯೋಜನೆ ತುಂಬಾ ಉತ್ತಮ ಯೋಜನೆ ಅಂತಾನೆ ಹೇಳಬಹದು.
  • ನೀವು ಹೂಡಿಕೆ ಮಾಡುವ ಹಣಕ್ಕೆ ಈ ಯೋಜನೆ ಅಡಿಯಲ್ಲಿ ಪ್ರಸ್ತುತ 2026ರಲ್ಲಿ ಇದು ವಾರ್ಷಿಕ 8.2% ಆಗಿದೆ..
  • ಉನ್ನತ ಶಿಕ್ಷಣ ಅಥವಾ ಸ್ವಾವಲಂಬಿ ಬದುಕಿಗೆ ಇದು ಭದ್ರ ಬುನಾದಿ ಹಾಕುತ್ತದೆ ಹಾಗೆ ಬರುವ ಬಡ್ಡಿಯ ಮೇಲೆ ಯಾವುದೇ ತೆರಿಗೆ ಇರುವದಿಲ್ಲ.
  • ತುಂಬಾ ಬಡ ಕುಟುಂಬದವರು ವರ್ಷಕ್ಕೆ ಕೇವಲ ₹250 ಕಟ್ಟಿಲು ಸರ್ಕಾರ ಅನುವು ಮಾಡಿ ಕೊಟ್ಟಿದೆ.
  • ಅಂತಿಮವಾಗಿ ಸಿಗುವ ಮೆಚ್ಯೂರಿಟಿ ಮೊತ್ತಕ್ಕೂ ಯಾವುದೇ ತೆರಿಗೆ ಸರ್ಕಾರ ವಿಧಿಸುವುದಿಲ್ಲ,.
  • ಯೋಜನೆ ಹೆಣ್ಣು ಮಗುವಿನ ಮುಂದಿನ ಶಿಕ್ಷಣಕ್ಕೆ, ಮದುವೆಯಂತಹ ದೊಡ್ಡ ಖರ್ಚು ವೆಚ್ಚಗಳಿಗೆ ಭಾರಿ ಮೊತ್ತದ ನಿಧಿಯನ್ನು (Lumpsum Amount) ಒದಗಿಸುತ್ತದೆ.

ಯೋಜನೆ ಅನಾನುಕೂಲ ತಿಳಿಯಲು ನೀವು ಬಯಸುತ್ತೀರಾ?” Sukanya Samriddhi Yojana In Kannada

  • ಈ ಯೋಜನೆಯಲ್ಲಿ ಹೂಡಿಕೆ ಈ ಯೋಜನೆಯಡಿಯಲ್ಲಿ ಹೂಡಿಕೆ ಮಾಡಿದ ಹಣ 21 ವರ್ಷದ ಒಳಗಾಗಿ ತೆಗೆಯಲು ಸಾಧ್ಯವಾಗುವುದಿಲ್ಲ.
  • ಈ ಯೋಜನೆ ಮೂಲಕ ಸರ್ಕಾರವು ನಿಗದಿ ಪಡಿಸಿದ ಬಡ್ಡಿ ದರವನ್ನು ಯಾವಾಗ ಬೇಕಾದರೂ ಕಡಿಮೆಗೊಳಿಸಬಹುದು
  • ನೀವು ಹೂಡಿಕೆ ಮಾಡುವ ಹಣಕ್ಕೆ ಒಂದಿಷ್ಟು ಮಿತಿಯನ್ನು ಕೂಡ ಸರ್ಕಾರ ನಿಗದಿಪಡಿಸಿದೆ ಇದಕ್ಕಿಂತ ಹೆಚ್ಚಾಗಿ ನೀವು ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ
  • ಕನಿಷ್ಠ ಬಂಧು ಕುಟುಂಬದಲ್ಲಿ ಎರಡು ಹೆಣ್ಣು ಮಕ್ಕಳಿಗೆ ಮಾತ್ರ ಈ ಯೋಜನೆಯ ಲಾಭ ಪಡೆಯಲು ಸರ್ಕಾರ ಅನುವು ಮಾಡಿಕೊಟ್ಟಿದೆ ಮೂರು ಹೆಣ್ಣು ಮಕ್ಕಳಿದ್ದಲ್ಲಿ ಈ ಯೋಜನೆಯ ಲಾಭವನ್ನು ಆ ಕುಟುಂಬ ಪಡೆಯಲು ಸಾಧ್ಯವಾಗುವುದಿಲ್ಲ
  • ಹೆಸರಲ್ಲೇ ಇರುವಂತಹ ಸುಕನ್ಯಾ ಎನ್ನುವ ಪದದಲ್ಲಿ ಈ ಯೋಜನೆಯು ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಮೀಸಲಾಗಿರುತ್ತದೆ.
  • 18 ವರ್ಷದೊಳಗಿನ ನಿಮ್ಮ ಮಕ್ಕಳ ಶಿಕ್ಷಣಕ್ಕೆ ನೀವು ಈ ಹಣವನ್ನು ಬಳಸಿಕೊಳ್ಳುತ್ತೀನಿ ಅಂದುಕೊಂಡರೆ ಈ ಹಣ ನಿಮ್ಮ ಕೈ ಸೇರುವುದಿಲ್ಲ
  • ಈ ಯೋಜನೆಯ ಅವಧಿ ಮುಗಿದ ನಂತರ ನೀವು ಹಣವನ್ನು ಪಡೆಯುವಾಗ ಏನಾದರೂ ದೋಷ ಕಂಡು ಬಂದಲ್ಲಿ ಹಣದ ಮರುಪಾವತಿಗೆ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವ ಸಂಭಾವನಿಯತೆ ಇರುತ್ತದೆ

ಅಗತ್ಯ ದಾಖಲೆಗಳು: Sukanya Samriddhi Yojana In Kannada

  • ನಿಮ್ಮ ಮಗಳ ಜನನ ಪ್ರಮಾಣ ಪಾತ್ರ
  • BPL ಪಡಿತರ ಚೀಟಿ
  • ಆದಾಯ ಪ್ರಮಾಣಪತ್ರ 
  • ನಿವೇಶನದ ದಾಖಲೆಗಳು
  • ಪೋಷಕರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್
  • ಮಗುವಿಗೆ ಆಧಾರ್ ಕಾರ್ಡ್
  • ಭಾವಚಿತ್ರ 
  • ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ
  • ಬ್ಯಾಂಕ್ ಪಾಸ್‌ಬುಕ್
  • ಮಗು ಮತ್ತು ಪೋಷಕರ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋಗಳು
  • SSY ಅರ್ಜಿ ಫಾರ್ಮ್
  • ನೀವೇನಾದ್ರೂ ನಿಮ್ಮ ಅವಳಿ ಮಕ್ಕಳ ಹೆಸರಿನಲ್ಲಿ ಈ ಯೋಜನೆ ಅಡಿಯಲ್ಲಿ ಖಾತೆ ತೆರೆಯಬೇಕಾದರೆ ಅವರ ಜನನ ಪ್ರಮಾಣ ಪತ್ರ ಅಥವಾ ವೈದ್ಯರು ನಿಮಗೆ ನೀಡಿರುವ ಒಂದು ಪುರಾವೆಯನ ಕೊಡಬೇಕಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ: Sukanya Samriddhi Yojana In Kannada

ಈ ಯೋಜನೆಗೆ ಎರೆಡು ಹಂತದಲ್ಲಿ ಅರ್ಜಿಯನ್ನ ಸಲ್ಲಿಸಬಹುದು ಆನ್ಲೈನ್ ಹಾಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನೀವು ಕರ್ನಾಟಕದ ಯಾವುದೇ ಅಂಚೆ ಕಚೇರಿ ಅಥವಾ ಅಧಿಕೃತ ಬ್ಯಾಂಕ್‌ಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು ಅಂದರೆ ಖಾತೆ ತೆರೆಯಬಹುದು.

ಮೊದಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಹೇಗೆ ತಿಳಿತಾ ಹೋಗೋಣ

  • ನಿಮ್ಮ ಊರಿನಲ್ಲಿ ಅಥವಾ ನಿಮ್ಮ ಹತ್ತಿರ ಇರುವ ಬ್ಯಾಂಕ್ ಹಾಗೆ ಅಂಚೆ ಕಚೇರಿಯಲ್ಲಿ ನೀವು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
  • ಮೊದಲು ನೀವು ಸಿಕನ್ಯಾ ಸಮೃದ್ಧಿ ಯೋಜನೆ ಅರ್ಜಿಯನ್ನು ಪಡೆದುಕೊಳ್ಳಿ
  • ಕನಿಷ್ಠ ನೀವು ಇಲ್ಲಿ 250 ಆದರೂ ಪಾವತಿ ಮಾಡಬೇಕಾಗುತ್ತದೆ.

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ Sukanya Samriddhi Yojana In Kannada

ನೀವೇನಾದ್ರೂ ಸುಕನ್ಯಾ ಸಮೃದ್ಧಿ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಸುವರ್ಣ ಅವಕಾಶ ಇಲ್ಲಿದೆ.

ನೀವು ಗಾದೆ ತೆರೆಯಲು ಬಯಸುವ ಬ್ಯಾಂಕಿನ ಇದೆ ಭೇಟಿ ನೀಡಿ ಮೊದಲು

ಎರಡನೇದಾಗಿ ಸುಕನ್ಯಾ ಸಮೃದ್ಧಿ ಯೋಜನೆಯ ಅಪ್ಲಿಕೇಶನ್ ಫಾರಂ ಅನ್ನ ಡೌನ್ಲೋಡ್ ಮಾಡಿಕೊಳ್ಳಿ ಅಥವಾ ಅಂಚೆ ಕಚೇರಿ ಅಧಿಕೃತ ವೆಬ್ಸೈಟ್ನಲ್ಲಿ ಫಾರಂ ಅನ್ನ ಪಡೆದುಕೊಳ್ಳಿ.

ಡೌನ್ಲೋಡ್ ಮಾಡಿಕೊಂಡ ನಂತರ ಮಗುವಿನ ಹೆಸರು ತಂದೆ ತಾಯಿಯ ಹೆಸರು ಹಾಗೆ ಅಲ್ಲಿ ಕೇಳುವಂತಹ ಎಲ್ಲಾ ದಾಖಲೆಗಳನ್ನು ಸರಿಯಾಗಿ ಭರ್ತಿ ಮಾಡಿ

ಕೊನೆಯದಾಗಿ ನೀವು ಬರ್ತಿ ಮಾಡಿದ ಎಲ್ಲಾ ಹಂತಗಳು ಸರಿ ಇದೆ ಎಂದು ಪರಿಶೀಲನೆ ಮಾಡಿ ನಂತರ ನಿಮ್ಮ ಅಕ್ಕ ಪಕ್ಕದ ಅಂಚೆ ಕಚೇರಿ ಅಥವಾ ಹತ್ತಿರದ ಬ್ಯಾಂಕಿಗೆ ಭೇಟಿ ನೀಡಿ ಈ ಅರ್ಜಿಯನ್ನು ಸಲ್ಲಿಸಿ ಸಲ್ಲಿಸಿ.

ತೀರ್ಮಾನ:-

ಸುಕನ್ಯಾ ಸಮೃದ್ಧಿ ಯೋಜನೆಗೆ ನೀವು ಅರ್ಜಿಯನ್ನು ಸಲ್ಲಿಸಿದಲ್ಲಿ ಹೆಚ್ಚಿನ ಲಾಭವನ್ನ ಪಡೆಯುವುದು ಗ್ಯಾರಂಟಿ ಏಕೆಂದರೆ ಸರ್ಕಾರವೇ ಈ ಯೋಜನೆ ಮೂಲಕ ನಿಮ್ಮ ಬೆಂಬಲಕ್ಕೆ ಇರುತ್ತದೆ ಹಾಗಾಗಿ ಯಾವುದೇ ಮೋಸ ಆಗುವುದಿಲ್ಲ.

ನಮ್ಮ ಮೋದಿ ಸರ್ಕಾರ ಪ್ರತಿಯೊಂದು ಹೆಣ್ಣು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಈ ಯೋಜನೆಯನ್ನು ತುಂಬಾ ವರ್ಷಗಳ ಹಿಂದೇನೆ ಜಾರಿ ಮಾಡಿದ್ದು 2026ರಲ್ಲೂ ಈ ಯೋಜನೆಯ ಲಾಭವನ್ನು ಪ್ರತಿಯೊಂದು ಬಡ ಕುಟುಂಬಗಳಿಂದ ಹಿಡಿದು ಎಲ್ಲರೂ ಕೂಡ ಲಾಭವನ್ನು ಪಡೆದುಕೊಳ್ಳಿ.

ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಿಮ್ಮ ಊರಿನ ಅಥವಾ ಹತ್ತಿರದ ಅಂಚೆ ಕಚೇರಿ ಶಾಖೆ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಈ ಯೋಜನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇನ್ನು ಕೂಡ ಇನ್ನೂ ಕೂಡ ತಿಳಿದುಕೊಳ್ಳಿ

ಇತರ ಯೋಜನೆಯ ಲಿಂಕುಗಳು :


Join WhatsApp

Join Now

Join Telegram

Join Now

Leave a Comment