Farmer Scheme : ರೈತರಿಗೆ ಬಂಪರ್ ಸುದ್ದಿ! ಕೃಷಿ ಯಂತ್ರಗಳಿಗೆ ₹3 ಲಕ್ಷ ಸಹಾಯಧನ.! ನೀವು ಅರ್ಹರೇ?

On: Friday, January 9, 2026 2:23 PM

Join WhatsApp

Join Now

Join Telegram

Join Now

ರೈತ ಬಾಂಧವರೇ..! ನೀವು ಮಾಡುವ ಕೃಷಿ ಚಟುವಟಿಕೆಗಳಿಗೆ ಕೆಲಸ ಗಾರರ ಸಮಸ್ಯೆ ತುಂಬಾನೇ ಆಗುತ್ತಿದೆಯಾ ಅಥವಾ ಆಳು ಸಿಕ್ಕಿದರು ಅವರಿಗೆ ಕೊಡುವ ದಿನದ ಸಂಬಳ ಹೆಚ್ಚಾಗುತ್ತಿದೆಯಾ ? ಹಾಗಿದ್ರೆ ಇನ್ಮುಂದೆ ಆ ಚಿಂತೆ ನಿಮಗೆ ಬೇಡ ! ನಮ್ಮ ಕರ್ನಾಟಕ ಸರ್ಕಾರ ನಿಮ್ಮ ಬೆಂಬಲಕ್ಕೆ ನಿಲ್ಲಲು ಸಜ್ಜಾಗಿದೆ. ನಿಮ್ಮ ಗದ್ದೆ , ತೋಟ, ಜಮೀನಿನ ಕೆಲಸವನ್ನ ತುಂಬಾ ಸುಲಭವಾಗಿ ಮಾಡಲು ಮತ್ತು ಹೆಚ್ಚಿನ ಆದಾಯವನ್ನು ಗಳಿಸಲು ಸರ್ಕಾರ ಪ್ರತಿಯೊಬ್ಬ ರೈತರಿಗೂ ಕೃಷಿ ಯಂತ್ರೋಪಕರಣಗಳ ಮೇಲೆ ಬರೋಬ್ಬರಿ ಆಫರ್ ಗಳನ್ನು ಕೊಡಲು 2026ರಲ್ಲಿ ಮುಂದಾಗಿದೆ.

ನೀವು ಎಷ್ಟು ಸಬ್ಸಿಡಿ ಪಡೆಯಬಹುದು ಅನ್ನುವುದರ ಅಂದಾಜು ನಿಮಗಿದೆಯೇ ? ಹೊಸ ವರ್ಷದ ಪ್ರಾರಂಭದಲ್ಲೇ ಕರ್ನಾಟಕದ ಪ್ರತಿಯೊಬ್ಬ ರೈತರು 3 ಲಕ್ಷ ಸಬ್ಸಿಡಿ ಪಡೆಯುವ ಸುವರ್ಣ ಅವಕಾಶ ಮತ್ತೆ ನೀವು ತಡ ಮಾಡುವುದು ಬೇಡ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ? ಅರ್ಹ ರೈತರು ಯಾರೆಲ್ಲಾ ?

ಸರ್ಕಾರದಿಂದ ನಿಮಗೂ ಸಿಗುತ್ತಾ ರಿಯಾಯಿತಿ ? (ಸಬ್ಸಿಡಿಯ ಲಾಭ)

ಸರ್ಕಾರ ರೈತ ಕುಟುಂಬಗಳಿಗಾಗಿ ಉತ್ತಮ ಸಬ್ಸಿಡಿಯನ್ನ ಘೋಷಣೆ ಮಾಡಿದ್ದು ಇದು ರೈತರ ಆರ್ಥಿಕ ಹೊರೆಯನ್ನ ಒಂದು ರೀತಿಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಸುತ್ತದೆ. ಅಷ್ಟೇ ಅಲ್ಲದೆ ತಮ್ಮ ಜಮೀನಿನ ಕೆಲಸಕ್ಕೆ ಆಳುಗಳನ್ನ ಹುಡುಕುವ ಸಮಯವನ್ನು ಉಳಿಸುತ್ತದೆ.

ಪರಿಶಿಷ್ಟ ಜಾತಿ ಮತ್ತು ಪರಿಷ್ಟ ಪಂಗಡದ ರೈತರಿಗೆ ಸಿಗಬಹುದಾದ ಸಬ್ಸಿಡಿ :

ನಮ್ಮ ಸರ್ಕಾರಗಳಿಂದ ಪರಿಷ್ಟ ಜಾತಿ ಮತ್ತು ಪಂಗಡದವರು ಸಬ್ಸಿಡಿಗಳನ್ನ ಪಡೆಯುವುದರಲ್ಲಿ ಒಂದು ಕೈ ಮೇಲಿರುತ್ತಾರೆ, ಯಾಕೆಂದರೆ ಅಷ್ಟು ಉತ್ತಮವಾದ ಸರ್ಕಾರವನ್ನು ನಮ್ಮ ಭಾರತ ದೇಶ ಹೊಂದಿದೆ. ಎಸ್ ಸಿ ಎಸ್ ಟಿ ವರ್ಗದವರು ಈ ಯೋಜನೆ ಮೂಲಕ ಪಡೆಯುವಬಹುದಾದ ಸಬ್ಸಿಡಿ ಶೇಕಡ 90ರಷ್ಟು. ರೈತ ಮಿತ್ರರೇ ನೀವು ಈ ಯೋಜನೆ ಮೂಲಕ ಕೇವಲ 10% ರಷ್ಟು ಹಣವನ್ನ ಪಾವತಿ ಮಾಡಿದರೆ ಸಾಕು ನಿಮ್ಮ ಮನೆ ಬಾಗಿಲಿಗೆ ಸರ್ಕಾರದಿಂದ ಯಂತ್ರೋಪಕರಣಗಳು ಬರುತ್ತದೆ.

ನೀವೇನಾದ್ರೂ ಸಾಮಾನ್ಯ ವರ್ಗದ ಮತ್ತು ಇತರೆ ವರ್ಗದ ರೈತರಾಗಿದ್ದೀರಾ ?

ನಿಮಗೂ ಸಿಕ್ತ ಇದೆ ಸರ್ಕಾರದಿಂದ ಕೊಡುಗೆ! ಹೌದು ನೀವು ಕೂಡ ರೈತರಾಗಿದ್ದಲ್ಲಿ 50% ರಷ್ಟು ಸಬ್ಸಿಡಿ ಪಡೆದುಕೊಳ್ಳುವ ಹಕ್ಕು ನಿಮಗಿದೆ. ಯಂತ್ರೋಪಕರಣಗಳನ್ನು ನೀವು ನಿಮ್ಮ ಜಮೀನಿನಲ್ಲಿ ಅಳವಡಿಕೆ ಮಾಡಿದಲ್ಲಿ ನಿಮ್ಮ ಸಮಯವೂ ಕೂಡ ಉಳಿತಾಯವಾಗುತ್ತದೆ.


ಪ್ರಮುಖ ಸೂಚನೆ ಹೀಗಿದೆ :

ನೀವು ಯಾವುದೇ ಜಾತಿಗೆ ಸೇರಿದರು ಈ ಯೋಜನೆ ಮೂಲಕ ಸರ್ಕಾರದಿಂದ ಸಿಗುವ ಸಬ್ಸಿಡಿಯ ಮೊತ್ತ ಮೂರು ಲಕ್ಷದೊಳಗಿರುತ್ತದೆ

ಯಾವೆಲ್ಲ ಕೃಷಿ ಯಂತ್ರಗಳಿಗೆ ಸಿಗುತ್ತೆ ಸಬ್ಸಿಡಿ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ

ನೀವು ಟ್ರ್ಯಾಕ್ಟರ್ ಅನ್ನು ಕರಿದಿ ಮಾಡಲು ಹೊರಟಿದ್ದರೆ ಮೊದಲು ಈ ಯೋಜನೆ ಬಗ್ಗೆ ತಿಳಿಯಲೇಬೇಕು. ಯಾಕೆಂದರೆ ಸರ್ಕಾರವು “ಟ್ರ್ಯಾಕ್ಟರ್, ಪವರ್ ಟಿಲ್ಲರ್, ಔಷಧಿ ಸಿಂಪಡಣೆ ಮಾಡುವ ಸ್ಪ್ರೇಯರ್ ಮಷೀನ್, ಕಳೆ ತೆಗೆಯುವ ಯಂತ್ರ, ಬಿತ್ತನೆ ಮಾಡುವ ಮಷೀನ್, ಗದ್ದೆ ಕಟಾವು ಮಾಡುವ ಯಂತ್ರ, ಅಷ್ಟೇ ಅಲ್ಲದೆ ನೀವು ಬೆಳೆದ ಬೆಳೆಯನ್ನ ರಕ್ಷಣೆ ಮಾಡಲು ಟಾರ್ಪಲ್”, ಹೀಗೆ ಈ ಎಲ್ಲಾ ಯಂತ್ರಗಳಿಗೂ ಸರ್ಕಾರ ಬಹುದೊಡ್ಡ ಸಬ್ಸಿಡಿಯನ್ನು ಕೊಡುತ್ತಿದೆ.

ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಲು ಈ ಅರ್ಹತೆಗಳು ಕಡ್ಡಾಯವಾಗಿ ನಿಮ್ಮಲ್ಲಿ ಇರಲೇಬೇಕು:-

  • ಅರ್ಜಿ ಸಲ್ಲಿಸುವ ರೈತರು ಕಡ್ಡಾಯವಾಗಿ ಕರ್ನಾಟಕದ ರೈತರಾಗಿರಬೇಕು ಹಾಗೆ ಅಲ್ಪಸ್ವಲ್ಪ ಕೃಷಿ ಭೂಮಿಯನ್ನು ಹೊಂದಿರಬೇಕು.
  • ರೈತರಲ್ಲಿ ಮತ್ತು ಅತಿ ಸಣ್ಣ ರೈತರಿಗೆ ಸರ್ಕಾರ ಮೊದಲ ಆದ್ಯತೆ ಆದ್ಯತೆಯನ್ನ ಮಾಡಿಕೊಟ್ಟಿದೆ.
  • ಈ ಯೋಜನೆ ಅಡಿಯಲ್ಲಿ ಪಾಲು ತೆಗೆದುಕೊಳ್ಳುವ ರೈತರು ಕರ್ನಾಟಕದ ನಿವಾಸಿಗಳಾಗಿರಬೇಕು.
  • ನಿಮ್ಮಲ್ಲಿ ಫಾರ್ಮರ್ ಐಡಿ(ಗುರುತಿನ ಚೀಟಿ)ಕಡ್ಡಾಯವಾಗಿ ಇರಲೇಬೇಕು.
  • ರೈತರೇ ನೀವೇನಾದರೂ ಎಸ್ಸಿ ಎಸ್ಟಿ ವರ್ಗದವರಾಗಿದ್ದರೆ ಪ್ರತಿಯೊಬ್ಬರು ಈ ಯೋಜನೆಗೆ ಅರ್ಹರಾಗಿರುತ್ತೀರಾ.

ಈ ಮೇಲಿನ ಪ್ರಮುಖ ವಿಷಯಗಳನ್ನ ಓದಿಕೊಂಡು ನೀವು ಅರ್ಜಿ ಸಲ್ಲಿಸಲು ಮುಂದಾಗಿದ್ದೀರಾ ? ಹೇಗೆ ಅರ್ಜಿ ಸಲ್ಲಿಸುವುದು ಹೇಗೆ ಅಂತ ತಿಳಿಯುತ್ತಿಲ್ಲವೇ ?

ಅರ್ಜಿ ಎಲ್ಲಿ ಸಲ್ಲಿಸಬೇಕು ಹಾಗೆ ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ :-

ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಗೊಂದಲಕ್ಕೀಡಾಗುವ ಅವಶ್ಯಕತೆ ಇಲ್ಲ ಯಾಕೆಂದರೆ ತುಂಬಾ ಸರಳ ವಿಧಾನವನ್ನ ನಮ್ಮ ಸರ್ಕಾರ ರೈತರಿಗಾಗಿ ಮಾಡಿಕೊಟ್ಟಿದೆ. ನಿಮ್ಮ ಊರಿನ ಅಥವಾ ಅಕ್ಕಪಕ್ಕದಲ್ಲಿ ರೈತ ಸಂಪರ್ಕ ಕೇಂದ್ರ (RKS) ಕೆ ಭೇಟಿ ನೀಡಿ ನಿಮ್ಮ ಬಳಿ ಇರುವ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಪಾಣಿ, ಜಾತಿ ಪ್ರಮಾಣ ಪತ್ರ, ಫೋಟೋ, ಈ ಪ್ರಮುಖ ದಾಖಲೆಗಳೊಂದಿಗೆ ಅರ್ಜಿಯನ್ನ ನೀವು ಸಲ್ಲಿಸಬಹುದು. ಇಲ್ಲಿ ನಿಮಗೆ ಸಾಧ್ಯವಾಗದಿದ್ದಲ್ಲಿ ನಿಮ್ಮ ಹತ್ತಿರದ ಗ್ರಾಮವನ್ ಕೇಂದ್ರಗಳ ಮೂಲಕ ಆನ್ಲೈನ್ ಮುಖಾಂತರ ಅರ್ಜಿಯನ್ನು ಕೂಡ ನೀವು ಸಲ್ಲಿಸಬಹುದು.


ನಂತರ ಸಂಬಂಧ ಪಟ್ಟ ಅಧಿಕಾರಿಗಳು ನಿಮ್ಮ ಅರ್ಜಿಯನ್ನ ಕೂಲಂಕುಶವಾಗಿ ಪರಿಶೀಲನೆ ಮಾಡಿದ ನಂತರ ನೀವು ಅಧಿಕೃತ ಡೀಲರ್ಗಳಿಂದ ನಿಮಗೆ ಬೇಕಾಗಿರುವ ಯಂತ್ರವನ್ನು ಖರೀದಿಸಬಹುದು.

ಸರ್ಕಾರ ನೀಡಲಾದ ಸಬ್ಸಿಡಿ ಹಣವು ಅರ್ಜಿದಾರರ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುತ್ತದೆ ಹಾಗೆ ಯಾವುದೇ ರೀತಿಯ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ.

ನನ್ನದೊಂದು ಸಲಹೆ : ಈ ಯೋಜನೆಯ ಲಾಭವನ್ನು ನಿಮ್ಮದಾಗಿಸಿಕೊಳ್ಳಬೇಕೆ ಹಾಗಿದ್ದಲ್ಲಿ ರೈತ ಸಂಪರ್ಕ ಕೇಂದ್ರಕ್ಕೆ ಮೊದಲು ಭೇಟಿ ನೀಡಿ. ಕೂಲಿ ಆಳುಗಳಿಗೆ ವ್ಯಯ ಮಾಡುವ ಸಮಯ ಕರ್ಚನ್ನ ಉಳಿಸಿ ಆಧುನಿಕ ಕೃಷಿಯತ್ತ ನಿಮ್ಮ ಹೆಜ್ಜೆಯನ್ನು ಇಡಿ! ಸರ್ಕಾರ ರೈತರಿಗೊಂದು ಮಾಡಿಕೊಟ್ಟಿರುವ ಈ ಯೋಜನೆಯ ಬಗ್ಗೆ ನಿಮ್ಮ ಅಕ್ಕಪಕ್ಕ ರೈತ ಬಾಂಧವರಿಗೂ ಶೇರ್ ಮಾಡಿ..

ಪ್ರಮುಖ ಲಿಂಕುಗಳು :-

ಅಧಿಕೃತ ಜಾಲತಾಣ :- https://raitamitra.karnataka.gov.in/

Join WhatsApp

Join Now

Join Telegram

Join Now

Leave a Comment