Sankranti Gift 25th installment of Grihalakshmi : ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಸಂಕ್ರಾಂತಿ ಹಬ್ಬ ದಿನದಂದು ಕರ್ನಾಟಕ ರಾಜ್ಯದ ಎಲ್ಲ ನಾರಿ ಶಕ್ತಿಗಳ ಬ್ಯಾಂಕ್ ಅಕೌಂಟ್ ಗೆ ಬರುತ್ತೆ 2 ಕಂತಿನ ಗೃಹಲಕ್ಷ್ಮಿ ಹಣ ಹಾಕುವ ವಿಚಾರವಾಗಿ ಅಷ್ಟೇ ಅಲ್ಲದೆ ಇನ್ನೊಂದು ಖುಷಿ ಸುದ್ದಿಯನ್ನು ಸರ್ಕಾರ ವ್ಯಕ್ತಪಡಿಸಿದೆ.
ಹೌದು ಕರ್ನಾಟಕದ ಬಹುದೊಡ್ಡ ಕೊಡುಗೆ ಕೊಡುತ್ತಿರುವ ಗೃಹಲಕ್ಷ್ಮಿ ಯೋಜನೆ ಇದೀಗ ಹಣಕ್ಕಾಗಿ ಕಾದು ಕುಳಿತಿರುವ ಲಕ್ಷಾಂತರ ಮಹಿಳೆಯರಿಗೆ ಶುಭ ಸುದ್ದಿಯನ್ನ ಸಂಕ್ರಾಂತಿ ಹಬ್ಬ ದೊಳಗೆ ಕೊಡಲು ಮಹತ್ವದ ಘೋಷಣೆಯಂದು ಸರ್ಕಾರದಿಂದ ಕೇಳಿ ಬಂದಿದೆ. ಕರ್ನಾಟಕ ರಾಜ್ಯದ ಪ್ರತಿಯೊಬ್ಬ ಮಹಿಳೆಯರು ಎರಡು ತಿಂಗಳ ಹಣಕ್ಕಾಗಿ ಕಾದು ಕುಳಿತಿರುವ ಸಂದರ್ಭ ಇದಾಗಿರುವಂಥದ್ದು ಇನ್ನು ಮುಂದೆ ಈ ಹಣಕ್ಕೆ ನೀವು ಕಾಯುವ ಅವಶ್ಯಕತೆ ಇಲ್ಲ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿದೆ.
ಎರಡು ತಿಂಗಳ ಹಣ ತಡವಾಗಿರುವುದರ ನೈಜ್ಯ ಕಾರಣ ನಿಮಗೇನಾದರೂ ತಿಳಿದಿದೆಯೇ ?
ಯಾವ ಸರ್ಕಾರಗಳು ಜಾರಿ ಮಾಡದೇ ಇರುವ ಈ ಗೃಹಲಕ್ಷ್ಮಿ ಎಂಬ ಯೋಜನೆ ಆರಂಭದಿಂದಲೂ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಹಣ ಜಮೆಯಾಗುತ್ತಿತ್ತು. ಖಂಡಿತವಾಗಿಯೂ ಈ ಮಾತನ್ನು ಪ್ರತಿಯೊಬ್ಬರು ಒಪ್ಪಲೇಬೇಕು.
- ಸರ್ಕಾರ ಇತ್ತೀಚೆಗೆ ಕೈಗೊಂಡ ಒಂದು ಕಾರಣದಿಂದ ಅದು ಯಾವುದೆಂದು ನಿಮಗೆ ತಿಳಿದಿಲ್ಲವೇ ಹಾಗಿದ್ದರೆ ನೋಡಿ ಕೆರವು ದಿನದ ಹಿಂದೆ ಈ ಸರ್ಕಾರ ಅನರ್ಹ BPL ಕಾರ್ಡ್ ಗಳನ್ನ ಎಪಿಎಲ್ ಆಗಿ ಪರಿವರ್ತನೆ ಮಾಡಿ ಈ ಒಂದು ನಿರ್ಧಾರದಿಂದ ಪ್ರತಿ ಒಬ್ಬ ಮಹಿಳೆಯರಿಗೂ ಸರಿಯಾಗಿ ಜಮಾ ಆಗುತ್ತಿದ್ದ ಗೃಹಲಕ್ಷ್ಮಿ ಹಣದಲ್ಲಿ ವಿಳಂಬವಾಗಿರಬಹುದು.
- ಹೊಸದಾಗಿ ಈ ಯೋಜನೆಗೆ ಅರ್ಹರಾಗುತ್ತಿರುವ ಮತ್ತುಬ್ಯಾಂಕ್ ಖಾತೆಗಳ ಕೆವೈಸಿ (KYC) ಅಪ್ಡೇಟ್ ನಡೆಯುತ್ತಿರುವ ಕಾರಣದಿಂದ ಹಣದ ವಿಳಂಬನೆ ಸ್ಪಷ್ಟವಾಗಿ ಕಾಣುತ್ತಿದೆ.
- ಯೋಜನೆಯಿಂದ ಈಗಾಗಲೇ ಅನೇಕ ಮಹಿಳೆಯರು ಲಾಭ ಪಡೆಯುತ್ತಿದ್ದಾರೆ ಅದರಲ್ಲಿ ವಾರ್ಷಿಕ ಆದಾಯವು ಹೆಚ್ಚಿಗೆ ಇರುವ ಮಹಿಳೆಯರು ಸೇರುತ್ತಾರೆ ಈ ಕಾರಣದಿಂದ ಆದಾಯ ಹೆಚ್ಚಿರುವ ಕುಟುಂಬದ ಸದಸ್ಯರಲ್ಲ ಈ ಯೋಜನೆಯಿಂದ ಹೊರಗಿಡಲು ಮತ್ತು ಸರ್ಕಾರಿ ನೌಕರರ ನೌಕರರನ್ನು ಈ ಯೋಚನೆಯಿಂದ ಕೈ ಬಿಡುವ ಉದ್ದೇಶದಿಂದ ಹಣದ ವಿಳಂಬ ಆಗುತ್ತಿದೆ.
- ಹೀಗೆ ಹೇಳುತ್ತಾ ಹೋದರೆ ಇನ್ನೂ ಅನೇಕ ಕಾರಣಗಳು ಇವೆ.
ಬಾಕಿ ಇರುವ ಎರಡು ಕಂತಿನ ಹಣದ ಸ್ಪಷ್ಟ ಮಾಹಿತಿ ಹಾಗೆ 25ನೇ ಕಂತಿನ ಹಣದ ಸ್ಪಷ್ಟ ದಿನಾಂಕ ತಿಳಿಯಲು ಬಯಸುವಿರಾ ?
ಗೃಹಲಕ್ಷ್ಮಿ ಯೋಜನೆಯಾ ಹಣವು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುವ ದಿನಾಂಕವನ್ನು ಇಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ
ಕರ್ನಾಟಕ ರಾಜ್ಯದ ಪ್ರತಿ ಯೊಬ್ಬ ಮಹಿಳೆಯರಿಗೂ ಈ ಯೋಜನೆ ಹಣ ಜಾಮಾ ಮಾಡಿಲ್ಲ ಹಾಗಾಗಿ ಮಹಿಳೆಯರು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿರುವ ಕಾರಣವನ್ನು ಸರ್ಕಾರ ಇದೀಗ ಮನಗೊಂಡು “ಸಂಕ್ರಾಂತಿ ಹಬ್ಬದ ದಿನದಂದು ಪೆಂಡಿಂಗ್ ಇರುವ ಎರಡು ಕಂತಿನ ಹಣದ ಜೊತೆಗೆ 25ನೇ ಕಂತಿನ ಗೃಹಲಕ್ಷ್ಮಿ ಹಣವು ಜಾಮೆಯಾಗುತ್ತದೆ”.
ಇದೇ ಒಂದು ವಿಷಯವಾಗಿ ಬೆಳಗಾವಿ ಅಧಿವೇಶನದಲ್ಲಿ ಬಹಳಷ್ಟು ಚರ್ಚೆಗೀಡಾದ ವಿಷಯವು ಇದಾಗಿದ್ದು ಇದೀಗ ಸರ್ಕಾರ ಸ್ಪಷ್ಟವಾಗಿ ಹಣ ಬಿಡುಗಡೆಗೆ ನಮ್ಮ ಸರ್ಕಾರ ಬದ್ಧ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಒಟ್ಟುರೆಯಾಗಿ ಮೂರು ಕಂತಿನ ಹಣ ಒಂದೇ ತಿಂಗಳಲ್ಲಿ ಕರ್ನಾಟಕದ ಪ್ರತಿಯೊಬ್ಬ ಮಹಿಳೆಯರ ಬ್ಯಾಂಕ್ ಅಕೌಂಟ್ ಗೆ ವರ್ಗಾವಣೆ ಆಗುವುದು ರಾಜ್ಯದ ಮಹಿಳೆಯರಿಗೆ ಸಂತಸದ ಸುದ್ದಿಯಾಗಿದೆ.

ಗೃಹಲಕ್ಷ್ಮಿ ಯೋಜನೆಯ ಮುಖ್ಯಾಂಶಗಳು :-
| ಸರ್ಕಾರ ಈಗಾಗಲೇ ಕೊಡಬೇಕಿದ್ದ ಕಂತುಗಳ ವಿವರ | ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಯಾವುದೇ ಮಹಿಳೆಯ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿಲ್ಲ |
| 25ನೇ ಕಂತಿನ ವಿವರ | ಹೊಸದಾಗಿ ಬರುವ 25ನೇ ಕಂತಿನ ಗುರುಮಲಕ್ಷ್ಮಿ ಹಣವು ಸಂಕ್ರಾಂತಿ ದಿನದಂದು ಬರುವ ಸಂಭಾವವಿದೆ. |
| ಜಮೆ ಆಗುವ ಒಟ್ಟು ಮೊತ್ತ | 4000+2000 /ಒಟ್ಟು 6000 ಒಂದೇ ಸಾರಿ ವರ್ಗಾವಣೆ ಆಗುತ್ತದೆ |
| ವರ್ಗಾವಣೆ ವಿವರ | ನೇರವಾಗಿ ಮಹಿಳೆಯ ಬ್ಯಾಂಕ್ ಅಕೌಂಟ್ ಗೆ |
| ಈ ಯೋಜನೆಯಿಂದ ಸಾಲ ಸಿಗುವ ಮೊತ್ತ ಎಷ್ಟು ಗೊತ್ತಾ ? | ಬರೋಬ್ಬರಿ 30,000 ದಿಂದ ₹3 ಲಕ್ಷದವರೆಗೆ |
ಪ್ರತಿಯೊಬ್ಬರು ತಿಳಿಯಲೇಬೇಕಾದ ಪ್ರಮುಖ ಮಾಹಿತಿ :
| ನೀವು ನೀಡಲಾದ ಬ್ಯಾಂಕ್ ಅಕೌಂಟ್ ಖಾತೆಗೆ ಆಧಾರ್ ಲಿಂಕ್ ಆಗಿದೆ ಎಂದು ಪರಿಶೀಲನೆ ಮಾಡಿಕೊಳ್ಳಿ ಹಾಗೆಯೇ KYC ಅಪ್ಡೇಟ್ ಆಗಿದೆಯೇ ಅಥವಾ ಇಲ್ಲವೇ ಎಂದು ಖಚಿತಪಡಿಸಿಕೊಳ್ಳಿ ಇಲ್ಲದಿದ್ದರೆ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಿಡುಗಡೆ ಮಾಡಿದರು ಸಹ ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗುವುದಿಲ್ಲ. |
ನಮ್ಮ ರೇಷನ್ ಕಾರ್ಡ್ ರದ್ದಾಗಿದೆ ಆದರೂ ಈ ಯೋಜನೆಯ ಲಾಭವನ್ನು ನಾವು ಪಡೆಯಬಹುದೇ,,,,
- ಇತ್ತೀಚಿಗೆ ಕೆಲವು ಕುಟುಂಬಗಳ ರೇಷನ್ ಕಾರ್ಡ್ ಗಳು ಇರದ್ದಾಗಿದೆ ಹಾಗಾಗಿ ಕೆಲವು ಮಹಿಳೆಯರಲ್ಲಿ ಈ ಸಮಸ್ಯೆಯಿಂದ ನಮಗೆ ಇಷ್ಟು ದಿನ ಬರುತ್ತಿರುವ ಗೃಹಲಕ್ಷ್ಮಿ ಹಣ ನಿಲ್ಲುತ್ತದೆಯೇ ಎನ್ನುವ ಚಿಂತೆ ತುಂಬಾ ಜನ ಮಹಿಳೆಯರಲ್ಲಿ ಕಾಣುತ್ತಿದೆ.
- ಇದರ ಬಗ್ಗೆ ನಿಮಗೆ ಯಾವುದೇ ರೀತಿಯ ಗೊಂದಲ ಬೇಡ ನೀವು ಈ ಮೊದಲೇ ಗೃಹಲಕ್ಷ್ಮಿ ಹಣವನ್ನು ಪಡೆಯುತ್ತಿದ್ದರೆ ಖಂಡಿತವಾಗಿಯೂ ನೀವು ಕೂಡ ಈ ಹಣವನ್ನು ಈ ಯೋಜನೆ ಇರುವವರೆಗೂ ಪಡೆಯಬಹುದಾಗಿರುತ್ತದೆ.
- ಅಥವಾ ಯಾವುದೇ ತಾಂತ್ರಿಕ ದೋಷದಿಂದ ನಿಮಗೆ ಹಣ ವರ್ಗಾವಣೆ ಆಗದಿದ್ದರೆ ಆಹಾರ ಇಲಾಖೆಯಿಂದ ನಿಮಗೆ ರೇಷನ್ ಕಾರ್ಡ್ ಸಿಕ್ಕಿದ ನಂತರ ಈ ಹಣವು ಒಂದೇ ಸಾರಿ ಜಮೆ ಆಗುತ್ತದೆ.
ಗೃಹಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್ :- ಸರ್ಕಾರದಿಂದ ಮಹಿಳೆಯರಿಗೆ ಸಿಕ್ಕೇಬಿಡ್ತು ಬಂಪರ್ ಕೊಡುಗೆ
ಇದೀಗ ಸರ್ಕಾರ ಗೃಹಲಕ್ಷ್ಮಿ ಸಂಘವನ್ನು ಸ್ಥಾಪನೆ ಮಾಡಲು ಮುಂದಾಗಿ ರಾಜ್ಯದ ಎಲ್ಲಾ ಮಹಿಳೆಯರಿಗೆ 30,000 ದಿಂದ ಮೂರು ಲಕ್ಷದವರೆಗೆ ಸಾಲವನ್ನು ಕೊಡುವ ತೀರ್ಮಾನವನ್ನು ಮಾಡಿದೆ ಮಹಿಳೆಯರನ್ನ ಸ್ವಾವಲಂಬಿಯಾಗಿ ಹಾಗೆಯೇ ಸ್ವತಂತ್ರವಾಗಿ ಮತ್ತು ಅವರ ಆರ್ಥಿಕ ಜೀವನ ಮಟ್ಟವನ್ನ ಉನ್ನತೀಕರಣಗೊಳಿಸುವ ಉದ್ದೇಶದಿಂದ ಈ ಗೃಹಲಕ್ಷ್ಮಿ ವಿವಿದುದ್ದೇಶ ಸಹಕಾರಿ ಸಂಘವನ್ನ ಸರ್ಕಾರ ಸ್ಥಾಪನೆ ಮಾಡುವ ಬಹುದೊಡ್ಡ ಗುರಿಯನ್ನು ಹೊಂದಿದೆ.
ನೀವು ಈ ಸಂಘದಲ್ಲಿ ಸದಸ್ಯತ್ವ ಪಡೆಯಲು ಇಚ್ಛಿಸಿದರೆ ಈ ಮಾಹಿತಿಯನ್ನ ಸಂಪೂರ್ಣವಾಗಿ ಓದಿ
- ಮೊದಲು ನೀವು ಕಡ ಖಂಡಿತವಾಗಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದಲ್ಲಿ ಈ ಸಾಲ ಪಡೆಯಲು ನೀವು ಅರ್ಹರಾಗಿರುತ್ತೀರಾ.
- ಈ ಸಂಘಕ್ಕೆ ನೋಂದಣಿ ಆಗಲು ನಿಮ್ಮ ಹತ್ತಿರದ ಅಥವಾ ನಿಮ್ಮ ಊರಿನ ಅಂಗನವಾಡಿ ಕೇಂದ್ರ ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ.
ಮೊದಲು ಪಾವತಿಸಬೇಕಾದ ಹಣದ ವಿವರ :
- ₹1000/- ಪಾವತಿ ಮಾಡಿ ನೀವು ಈ ಯೋಜನೆಯಲ್ಲೇ ಸದಸ್ಯತ್ವವನ್ನ ಪಡೆಯಬಹುದು
ಈ ಸಂಘದಲ್ಲಿ ನೀವು ಪಡೆಯುವ ಲಾಭದ ಅಂದಾಜು ನಿಮಗಿದೆಯೇ ?
- ರಾಜ್ಯದ ಮಹಿಳೆಯರು ಪ್ರತಿ ತಿಂಗಳು ₹200/- ಉಳಿತಾಯ ಮಾಡಬಹುದು
- ನಿಮ್ಮ ಉಳಿತಾಯದ ಹಣ ಆರು ತಿಂಗಳು ಬರ್ತಿಯಾದ ನಂತರ ಯಾವುದೇ ದಾಖಲೆ(ಪ್ರೂಫ್) ನೀಡದೆ ಈ ಯೋಜನೆಯಲ್ಲಿ 30,000 ದಿಂದ 3 ಲಕ್ಷದವರೆಗೆ ಸಾಲವನ್ನು ಪಡೆಯಬಹುದು.
- ಈ ಯೋಜನೆಯ ಎಲ್ಲಾ ವಾಹಿವಾಟುಗಳು ಡಿಜಿಟಲ್ ರೂಪದಲ್ಲಿ ಅಂದರೆ ( (UPI, ಕಾರ್ಡ್, ನೆಟ್ ಬ್ಯಾಂಕಿಂಗ್, ಆ್ಯಪ್‌ಗಳು ) ಈ ಮೂಲಕ ಕ್ರಮಬದ್ಧವಾಗಿ ನಡೆಯುತ್ತವೆ. ಮಹಿಳೆಯರು ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗುವುದು ಬೇಡ.
ಈ ಸಲ ಸೌಲಭ್ಯದ ಬಗ್ಗೆ ನಿಮಗೆ ಇನ್ನೂ ಸಹ ಹೆಚ್ಚುವರಿ ಮಾಹಿತಿ ಬೇಕಾದಲ್ಲಿ ನಿಮ್ಮ ಊರಿನ ಅಂಗನವಾಡಿ ಕೇಂದ್ರ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳನ್ನ ಭೇಟಿ ನೀಡಿ ಮಾಹಿತಿಯನ್ನು ತಿಳಿಯಬಹುದು.





