Student Prize Money : ₹30000/- ಅಲ್ಲ ₹50000/- ಪರಿಶಿಷ್ಟ ಪಂಗಡದ(SE /ST) ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕರ್ನಾಟಕ ಸರ್ಕಾರದಿಂದ “ಪ್ರೋತ್ಸಾಹ ಧನ ಯೋಜನೆ” ಅಡಿಯಲ್ಲಿ SSLC, ಸಾಧಕೋತರ ಪದವಿ ವಿದ್ಯಾರ್ಥಿಗಳಿಗೆ ಅದರಲ್ಲೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ 7,500 ರಿಂದ 50 ಸಾವಿರ ರೂ ವರೆಗೆ ವಿದ್ಯಾರ್ಥಿ ವೇತನ ಕೊಡಲು ಆನ್ಲೈನ್ ಅರ್ಜಿ ಪ್ರಾರಂಭವಾಗಿದೆ.
ಈ ಪ್ರೋತ್ಸಾಹ ಧನವು ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಅಭ್ಯರ್ಥಿಗಳು 2026ರ ಜನವರಿ 31ನೇ ತಾರೀಖಿನೊಳಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಸರ್ಕಾರ ನೀಡುವ ಇಂತಹ ಪ್ರೋತ್ಸಾಹ ಧನದಿಂದ ಅದೆಷ್ಟೋ ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಣ ದಿಂದ ಬೆಳಕು ದೊರೆಯುತ್ತದೆ.
ಪ್ರೋತ್ಸಾಹ ಧನ ಯೋಜನೆ:-
ಈ ಯೋಚನೆಯು ಪ್ರತಿಭಾವಂತ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಗಳನ್ನ ಉತ್ತೇಜಿಸಲು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ತಂದಿರುವ ಮಹತ್ವಕಾಂಕ್ಷಿ ಪ್ರೋತ್ಸಾಹ ಧನ ಎಂದರೆ ತಪ್ಪಾಗಲಾರದು. ಈ “ಪ್ರೋತ್ಸಾಹ ಧನ ಯೋಜನೆಗೆ “ಪ್ರೈಸ್ ಮನಿ” ಎಂದು ಕೂಡ ಕರೆಯಲಾಗುತ್ತೆ.
“ಹಿಂದುಳಿದ ವರ್ಗದ ಮಕ್ಕಳು ಶಿಕ್ಷಣದಲ್ಲಿ ವಂಚಿತವಾಗದೆ ಪ್ರತಿಯೊಬ್ಬ ವರ್ಗದ ಮಕ್ಕಳಿಗೂ ಸರಿ ಸಮಾನವಾಗಿ ವಿದ್ಯೆಯನ್ನ ಪಡೆಯಬೇಕೆನ್ನುವುದು ಈ ಪ್ರೋತ್ಸಾಹ ಧನದ ಪ್ರಮುಖ ಉದ್ದೇಶವಾಗಿದೆ”.
ಈ ಪ್ರೋತ್ಸಾಹ ಧನದ ಬಗ್ಗೆ ಇನ್ನಷ್ಟು ಮಾಹಿತಿಯನ್ನ ಈ ಕೆಳಗೆ ನೀಡುತ್ತಾ ಹೋಗುತ್ತೇನೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಲಾದ ಅಂತಿಮ ದಿನಾಂಕ ದೊಳಗಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಅಥವಾ ಇಂದೇ ಅರ್ಜಿ ಸಲ್ಲಿಸಿದರು ಯೋಚನೆಯ ಪ್ರೋತ್ಸಾಹ ಧನವನ್ನ ನೀವು ಪಡೆಯಬಹುದು.
ಇಲ್ಲಿ ಗಮನಿಸಿ ಏನಿದು? :-
“ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇನ್ನು ಕೇವಲ 4 ದಿನ ಅಷ್ಟೇ ಬಾಕಿ ಇರೋದು”.
ಪ್ರೋತ್ಸಾಹ ಧನ ಯೋಜನೆ ಬಗ್ಗೆ ತಿಳಿಯಲು ಬಯಸಿದರೆ ಇಲ್ಲಿ ಗಮನಿಸಿ :-
ಎಸ್ ಎಸ್ ಎಲ್ ಸಿ, ಪದವಿ, ಮತ್ತು ಸ್ನಾತಕೋತ್ತರ ಪದವಿ ಹಾಗೆ ವೃತ್ತಿಪರ ಕೋರ್ಸ್ ಗಳನ್ನು 60 ಪರ್ಸೆಂಟ್ ಗಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ 50,000 ವರೆಗೂ ಪ್ರೋತ್ಸಾಹ ಧನ ಸಿಗುತ್ತದೆ.
ಕರ್ನಾಟಕದಲ್ಲಿ ಯಾರು ಹಿಂದುಳಿದ ವರ್ಗಕ್ಕೆ ಸೇರಿರುತ್ತಾರೆ ಅಂದರೆ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು ಮಾತ್ರ ಪ್ಲೀಸ್ ಸ್ಕಾಲರ್ಶಿಪ್ ಪಡೆಯಲು ಅರ್ಹರಾಗಿರುತ್ತಾರೆ. ಕರ್ನಾಟಕ ಸರ್ಕಾರ ಜಾರಿ ಮಾಡಿರುವ ಈ ಯೋಜನೆಯು ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದತ್ತ ಕೊಂಡಯ್ಯುತ್ತದೆ.
ಅಷ್ಟೇ ಅಲ್ಲದೆ ಎಸ್ ಸಿ ಎಸ್ ಟಿ ವರ್ಗದವರು ಯಾವುದರಿಂದಲೂ ಸಮಾನತೆ ಕಾಣದೆ ಒಂದು ಶಿಕ್ಷಣದಿಂದ ಉದ್ಯೋಗ, ವ್ಯವಹಾರ ಹಾಗೆ ದೈನಂದಿನ ಜೀವನದಲ್ಲೂ ಬೇರೆ ವರ್ಗದ ಜನಸಾಮಾನ್ಯರೊಂದಿಗೆ ಸಮಾನವಾಗಿ ಶಿಕ್ಷಣವು ಮೂಡಿಸುತ್ತದೆ.
ಸರ್ಕಾರದ ಇಂತಹ ಪ್ರೋತ್ಸಹ ಧನವನ್ನ ಸರ್ಕಾರ ಕೊಟ್ಟು ಗೌರವಿಸುವುದರಿದ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಆರ್ಥಿಕ ಬೆಂಬಲ ನೀಡುವುದು ಈ ಯೋಜನೆಯ ಮುಖ್ಯ ಆಶಯವಾಗಿದೆ.

ಪ್ರೋತ್ಸಾಹ ಧನ ಯೋಜನೆ ಉದ್ದೇಶ :-
ಆತ್ಮೀಯ ಮಿತ್ರರೇ,, ನೀವು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಜಾರಿ ಮಾಡಿರುವ ಯೋಜನೆಯಾ ಉದ್ದೇಶ ನೀವು ತಿಳಿಯಲೇ ಬೇಕು.
- SE/ST ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣದ ಬಗ್ಗೆ ಅತಿ ಹೆಚ್ಚಿನ ಆಸಕ್ತಿ ಬೆಳೆಸುವುದು ಹಾಗೆ ಶಿಕ್ಷಣದ ಕ್ಷೇತ್ರದಲ್ಲಿ ಸಾಧನೆ ಮಡಿದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಪ್ರೋತ್ಸಹಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.
- ಆರ್ಥಿಕ ವಾಗಿ ಹಿಂದುಳಿದ ಮಕ್ಕಳು ಕೇವಲ ಹಣಕಾಸಿನ ಸಮಸ್ಯೆ ಇಂದ ತಮ್ಮ ಉನ್ನತ ಶಿಕ್ಷಣವನ್ನ ಅರ್ಧಕ್ಕೆ ನಿಲ್ಲಿಸುತ್ತಾರೆ ಇಂತಹ ವಿದ್ಯಾರ್ಥಿಗಳ ಕಷ್ಟವನ್ನ ಮನಗಂಡು ಸರ್ಕಾರ ಈ ಯೋಜನೆಯನ್ನ ಸಿದ್ಧಪಡಿಸಿದೆ.
- ವಿದ್ಯಾರ್ಥಿಗಳು ಕೇವಲ ಪಾಸಿಂಗ್ ಅಂಕದ ಮೂಲಕ ಜಸ್ಟ್ ಪಾಸಾಗಲು ಪ್ರಯತ್ನಿಸದೆ, ವಿದ್ಯಾರ್ಥಿಗಳನ್ನ ರಾಕಿಂಗ್ ಅತ್ತ ಮುಖ ಮಾಡಲು ಪ್ರೋತ್ಸಹಿಸುತ್ತಾರೆ.
- ಅರ್ಹ ಅಭ್ಯರ್ಥಿಗಳಿಗೆ ಪ್ರೋತ್ಸಹ ಧನ ನೀಡುವುದರಿಂದ ಅವರ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಹಾಯಕ ವಾಗಿದೆ.
ಈ ಯೋಜನೆಯಡಿ ಲಭ್ಯವಿರುವ ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು ನೀವು ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್ಸೈಟ್ ಅನ್ನು ಪರಿಶೀಲನೆ ಮಾಡಬಹುದಾಗಿದೆ.
ಪ್ರಮುಖ ಅಂಶಗಳು :-
- ಈ ಯೋಜನೆಯ ಇಂದ ಸಿಗುವ ವಿದ್ಯಾರ್ಥಿ ವೇತನವು ಯಾವುದೇ ಮಧ್ಯವರ್ತಿಗಳ ಕೈ ಸೇರದೆ ನೇರವಾಗಿ ಅರ್ಜಿ ಹಾಕುವ ವಿದ್ಯಾರ್ಥಿಗಳ ಬ್ಯಾಂಕ್ ಅಕೌಂಟ್ ಗೆ ಜಮಾ ಮಾಡಲುತ್ತದೆ.
- SSLC ಯಿಂದ ಸ್ನಾತಕೋತ್ತರ ಪದವಿಯವರೆಗೆ ಒಬ್ಬ ವಿದ್ಯಾರ್ಥಿ ಪಡೆದಿರುವ ಅಂಕ ಮತ್ತು ಶೆಕ್ಷಣಿಕ ಸಾಧನೆ ಗಮನಿಸಿ ಸರ್ಕಾರದಿಂದ ಈ “ಪ್ರೈಸ್ ಮನಿ” ಪ್ರೋತ್ಸಹ ಧನವನ್ನ ಕೊಡಲಾಗುತ್ತದೆ.
- ಹಣಕಾಸಿನ ಅಡಚಣೆಯಿಲ್ಲದೆ ಉನ್ನತ ವ್ಯಾಸಂಗವನ್ನು ಮುಂದುವರಿಸಲು ವಿದ್ಯಾರ್ಥಿಗಳಿಗೆ ಬೆಂಬಲ ನೀಡುತ್ತದೆ ಅಷ್ಟೇ ಅಲ್ಲದೆ ಪ್ರತಿಭಾವಂತ ವಿದ್ಯಾರ್ಥಿಗಳ ಸಾಧನೆಯನ್ನ ಗುರುತಿಸಿ ಗೌರವಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತದೆ.
- ಕೆಲವು ಮಕ್ಕಳು ತಮ್ಮಗೆ ಸರ್ಕಾರ ನೀಡುವ ಇಂತ ಒಳ್ಳೆಯ ಸ್ಕಾಲರ್ಶಿಪ್ ಗಳನ್ನ ಪಡೆಯಲೇ ಬೇಕೆಂದು ಛಲದಿಂದ ತಮ್ಮ ಓದು-ಬರಹ ವನ್ನ ಮುನ್ನಡೆಸುತ್ತಾರೆ.
ಯಾವ ಕೋರ್ಸ್ ವಿದ್ಯರ್ಥಿಗಳಿಗೆ ಸಿಗುತ್ತೆ ? ಎಷ್ಟು ಸಿಗುತ್ತೆ ?
- ವಿದ್ಯಾರ್ಥಿಗಳು SSLC ಯಲ್ಲಿ ಶೇ. 60% ರಿಂದ ಶೇ. 75% ರಷ್ಟು ಅಂಕ ಗಳಿಸಿದ ಮಕ್ಕಳಿಗೆ ₹7,500/- ಮತ್ತು ಶೇ. 75% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ₹15,000/- ನೀಡಲಾಗುತ್ತದೆ.
- ಡಿಪ್ಲೋಮಾ ಕೋರ್ಸ್ ಮತ್ತು ದ್ವಿತೀಯ ಪಿಯುಸಿ ಯಲ್ಲಿ ಪ್ರಥಮ ದರ್ಜೆಯಲ್ಲಿ ಮುಗಿಸಿಕೊಂಡ ಅಭ್ಯರ್ಥಿಗಳಿಗೆ ₹20,000/- ವಿದ್ಯಾರ್ಥಿವೇತನ ಸಿಗುತ್ತದೆ.
- MA, MSc ಅಥವಾ M.Com ಯಾವುದೇ ಪದವಿಗಳನ್ನ ಪ್ರಥಮ ದರ್ಜೆಯಲ್ಲಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ₹30,000/- ದೊರೆಯುತ್ತದೆ.
- BA, B.Sc, B.Com ನಂತಹ ಯಾವುದೇ ಪದವಿ ಪೂರ್ಣ ಗಳಿಸಿದ ಅಭ್ಯರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ₹25,000/- ಪ್ರೋತ್ಸಾಹಧನ ದೊರೆಯುತ್ತದೆ.
- ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಕೃಷಿ ವಿಜ್ಞಾನ ಅಥವಾ ಪಶು ವೈದ್ಯಕೀಯದಂತಹ ಉನ್ನತ ವೃತ್ತಿಪರ ಕೋರ್ಸ್ ಗಳನ್ನು ಪೂರ್ಣಗೊಳಿಸಿದವರಿಗೆ ₹35000/- ಆರ್ಥಿಕ ನೆರವು ನೀಡಲಾಗುತ್ತದೆ.
- ಹಾಗೆಯೇ ಸ್ನಾತಕೋತ್ತರ ಪದವಿಯಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಒಂದರಿಂದ ಐದನೇ ರಾಕಿಂಗ್ ಪಡೆದ ಸಾಧಕರಿಗೆ ಪ್ರತ್ಯೇಕವಾಗಿ ಬರೋಬ್ಬರಿ ₹50,000/- ಪ್ರೋತ್ಸಾಹ ಧನವನ್ನ ನೀಡಲಾಗುತ್ತದೆ.
ಅರ್ಹತಾ ಮಾನದಂಡ :-
ವಿದ್ಯಾರ್ಥಿಯು ಕಡ್ಡಾಯವಾಗಿ ಕರ್ನಾಟಕ ರಾಜ್ಯದವರಾಗಿರಬೇಕು.
- ಎಸ್ಸಿ ಎಸ್ಟಿ ಸಂಗಡಕ್ಕೆ ಸೇರಿರಬೇಕು ಮತ್ತು ಅಭ್ಯರ್ಥಿಯು ಕೋರ್ಟ್ ಗಳನ್ನ ಪ್ರಥಮ ದರ್ಜೆಯಲ್ಲಿ ಪೂರ್ಣಗೊಳಿಸಿದಲ್ಲಿ ಈ ಪ್ರೋತ್ಸಾಹ ಧನವನ್ನ ಪಡೆಯಬಹುದು.
- ಕನಿಷ್ಠ 60% ಅಥವಾ ಅದಕ್ಕಿಂತ ಹೆಚ್ಚು ಅಂಕವನ್ನ ಗಳಿಸಿ ಪ್ರಥಮ ದರ್ಜೆಯಲ್ಲಿ ಪಾಸ್ ಆಗಿರಬೇಕು ಹಾಗೆ ಬ್ಯಾಂಕ್ ಖಾತೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಆಗಿರಬೇಕು.
- 2025ರ ಏಪ್ರಿಲ್ ತಿಂಗಳಲ್ಲಿ ನಡೆದ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ 60 ಕ್ಕಿಂತ ಹೆಚ್ಚು ಅಂಕ ಪಡೆದು ಆಧಾರ್ ಸೀಡ್ ಆಗಿರುವ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳ ಪಟ್ಟಿ ಈಗಾಗಲೇ ಸಿದ್ಧವಿರುತ್ತದೆ. ಇಂತಹ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯ ಇರುವುದಿಲ್ಲ.
ವಿದ್ಯಾರ್ಥಿಗಳಲ್ಲಿ ಇರಬೇಕಾದ ದಾಖಲೆಗಳು :-
- ಉತ್ತೀರ್ಣ ಪ್ರಮಾಣಪತ್ರ
- ಆಧಾರ್ ಕಾರ್ಡ್
- ವಿಧ್ಯಾರ್ಥಿಯ ಇತ್ತೀಚಿನ ಫೋಟೋ
- ಅಂಕಪಟ್ಟಿ
- ಬ್ಯಾಂಕ್ ಪಾಸ್ಬುಕ್ ಪ್ರತಿ
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕ :-
ಪರಿಶಿಷ್ಟ ಪಂಗಡದ ಅರ್ಹ ಮತ್ತು ಆಸಕ್ತಿ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 2026 ಜನವರಿ 31 ಕೊನೆಯ ದಿನಾಂಕ ವಾಗಿರುತ್ತದೆ. “ಅಂದರೆ ಕೇವಲ ಇನ್ನೂ ನಾಲ್ಕು ದಿನಗಳು ಅಷ್ಟೇ ಬಾಕಿ ಇರುವಂತದ್ದು” ವಿದ್ಯಾರ್ಥಿಗಳು ನಿಗದಿಪಡಿಸಲಾದ ಅಂತಿಮ ಸಮಯದೊಳಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಎಂದು ಸೂಚಿಸಲಾಗಿದೆ.
ಇಲ್ಲಿ ಗಮನಿಸಿ :-
| ವಿದ್ಯಾರ್ಥಿಗಳು ನಿಗದಿಪಡಿಸಲಾದ ಅಂತಿಮ ದಿನಾಂಕದಲ್ಲಿ ಅರ್ಜಿ ಸಲ್ಲಿಸಲು ಹೋಗಿ ಅಲ್ಲಿ ನಿಮಗೆ ಆಗುವ ತಾಂತ್ರಿಕ ದೋಷಗಳಿಂದ ತಪ್ಪಿಸಿಕೊಳ್ಳಲು ಇಂದೇ ಅರ್ಜಿ ಸಲ್ಲಿಸಿ ಹಾಗೆ ತಮ್ಮ ಅಂಕಪಟ್ಟಿ, ಆಧಾರ್ ಮತ್ತು ಬ್ಯಾಂಕ್ ವಿವರಗಳೊಂದಿಗೆ ನೋಂದಣಿ ಮಾಡಿಕೊಳ್ಳುವುದು ಒಳ್ಳೆಯದು. |
ಅರ್ಜಿ ಸಲ್ಲಿಸುವ ವಿಧಾನ :-
- ಅಭ್ಯರ್ಥಿಗಳು ಮೊದಲು ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್ಸೈಟ್ swdservices.karnataka.gov.in/ ಗೆ ಭೇಟಿ ನೀಡಿ.
- ನಂತರ ವೆಬ್ಸೈಟ್ನಲ್ಲಿ ನೀಡಲಾದ ‘Prize Money Scholarship’ ಲಿಂಕ್ swdservices.karnataka.gov.in/PrizeMoneyClientApp/ ಮೇಲೆ ಪ್ರೆಸ್ ಮಾಡಿ.
- ನಿಮ್ಮ ಆಧಾರ್ ಕಾರ್ಡ್ ನಂಬರ್ ಮತ್ತು ವೈಯಕ್ತಿಕ ದಾಖಲೆಗಳನ್ನು ಭರ್ತಿಮಾಡಿ ನೋಂದಾಯಿಸಿಕೊಳ್ಳಿ.
- SSLC ನೊಂದಣಿ ಸಂಖ್ಯೆ ಉತ್ತೀರ್ಣರಾದ ವರ್ಷ ಪಡೆದ ಅಂಕಗಳು ಮತ್ತು ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಮಾಹಿತಿಯನ್ನ ಸರಿಯಾಗಿ ಭರ್ತಿ ಮಾಡಿ.
- ವಿದ್ಯಾರ್ಥಿಗಳ ಕೇಳಲಾದ ಅಗತ್ಯ ಬಂಪರ್ ದಾಖಲೆಗಳು ನೋಡೋದಾದ್ರೆ ಅಂಕಪಟ್ಟಿ ದಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೇನೇ ಬ್ಯಾಂಕ್ ಪಾಸ್ ಬುಕ್ ನ ಸ್ಕ್ಯಾನ್ ಪ್ರತಿಯನ್ನು ಸರಿಯಾದ ಗಾತ್ರದಲ್ಲಿ ಅಪ್ಲೋಡ್ ಮಾಡಬೇಕಾಗುತ್ತದೆ ಅಷ್ಟೇ ಅಲ್ಲದೆ ನೀವು ಬರ್ತಿ ಮಾಡಲಾದ ಎಲ್ಲಾ ಮಾಹಿತಿಗಳು ಸರಿಯಾಗಿದೆ ಎಂದು ಪರಿಶೀಲನೆ ಮಾಡಿ ಅರ್ಜಿಯನ್ನ ಸಬ್ಮಿಟ್ ಮಾಡಿ ಕೊನೆಯಲ್ಲಿ ‘ಅಕ್ನಾಲೆಜ್ಮೆಂಟ್’ ಪ್ರತಿಯ ಪ್ರಿಂಟ್ ತೆಗೆದಿಟ್ಟುಕೊಳ್ಳಿ.
ಅಂತಿಮ ತೀರ್ಮಾನ :-
ಎಸ್ಸಿ ಎಸ್ಟಿ ಅಭ್ಯರ್ಥಿಗಳು ಕರ್ನಾಟಕ ಸರ್ಕಾರ ನೀಡುತ್ತಿರುವ ಪ್ರೋತ್ಸಾಹ ಧನ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವೇ ದಿನ ಇರುವುದರಿಂದ ಇಂದೇ ಅರ್ಜಿ ಸಲ್ಲಿಸುವುದು ಉತ್ತಮ.
ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮಾತ್ರ ಈ ಒಂದು ಪ್ರೋತ್ಸಾಹ ಧನ ನೀಡದೆ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳಿಗೂ ಈ ಸಹಾಯಧನದಲ್ಲಿ ಪಾಲು ಕೊಡುವುದು ನನ್ನ ಪ್ರಕಾರ ಒಳ್ಳೆಯದು. ಇದೇ ರೀತಿ ಹೊಸ ಹೊಸ ಸರ್ಕಾರಿ ಸ್ಕಾಲರ್ಶಿಪ್ ಮತ್ತು ಉದ್ಯೋಗಗಳ ಬಗ್ಗೆ ಮಾಹಿತಿಗಾಗಿ ನಮ್ಮ ಉದ್ಯೋಗ ಸಲಹೆ ವೆಬ್ಸೈಟ್ ಫಾಲೋ ಮಾಡಿ.





