ಹಾಯ್ ಹಲೋ ನಮಸ್ಕಾರ ಸ್ನೇಹಿತರೇ, ಮಹಿಳೆಯರಿಗಾಗಿ ಸರ್ಕಾರ ತಂದಿರುವ ಒಂದು ಅದ್ಭುತ ಯೋಜನೆ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಸಿಕೊಡುತ್ತ ಹೋಗ್ತಿನೆ. ಇದೇ ನೋಡಿ ಪ್ರಧಾನ್ ಮಂತ್ರಿ ಮಾತೃ ವಂದನಾ ಯೋಜನೆ (PMMVY) ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾಗಿದೆ.
ಮಾತೃ ವಂದನಾ ಯೋಜನೆ ಅವಲೋಕನ :
| ಯೋಜನೆಯ ಹೆಸರು | ಪ್ರಧಾನ್ ಮಂತ್ರಿ ಮಾತೃ ವಂದನಾ ಯೋಜನೆ |
| ಯೋಜನೆಯ ಉದ್ದೇಶ | ಮಹಿಳೆಯರಿಗೆ 6000 ಸಹಾಯಧನ |
| ಅರ್ಹತೆ | ಗರ್ಭಿಣಿ ಮಹಿಳೆ |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ |
Pradhan Mantri Matru Vandana Yojana Scheme
ಇದು ಬಂದು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಮಹಿಳೆಯರಿಗೆ ಅನುಕೂಲ ಮಾಡುವ ಉದ್ದೇಶದಿಂದ ಈ ಯೋಜನೆಯನ್ನ ನಮ್ಮ ಕೇಂದ್ರ ಸರ್ಕಾರ ಜಾರಿತಂದಿದೆ. ಮಕ್ಕಳಿರುವ ಮಹಿಳೆಯರು ಮತ್ತು ಗರ್ಭಿಣಿ ಮಹಿಳೆಯರು ಈ ಯೋಜನೆಯ ಲಾಭವನ್ನ ಪಡೆಯಬಹುದಾಗಿದೆ.
ಯೋಜನೆಯ ಉದ್ದೇಶ:
- ಈ ಯೋಜನೆ ಮೂಲಕ ಗರ್ಭಿಣಿ ಮತ್ತು ಮಕ್ಕಳಿರುವ ಮಹಿಳೆಯರಿಗೆ ಸಮಾಜದಲ್ಲಿ ಆರ್ಥಿಕವಾಗಿ ಬೆಂಬಲಿಸಬೇಕೆಂಬ ಉದ್ದೇಶವನ್ನು ಒಳಗೊಂಡಿದ್ದು, ಮಗು ಹಾಗೆ ತಾಯಿಯ ಆರೋಗ್ಯವನ್ನ ಕಾಪಾಡುವ ಮತ್ತು ಮರಣವನ್ನ ಕಡಿಮೆ ಮಾಡುವ ಪ್ರಮುಖ ಉದ್ದೇಶವನ್ನ ಒಳಗೊಂಡಿದೆ.
ಯೋಜನೆಯ ಪ್ರಯೋಜನಗಳು:
- ಮೊದಲ ಮಾಗುವಿಗೆ PMMVY ಯೋಜನೆಯಡಿಯಲ್ಲಿ ಮೊದಲನೇ ಕಂತಿನಲ್ಲಿ ರೂ.3000 ಹಾಗೂ ಎರಡನೇ ಕಂತಿನಲ್ಲಿ ರೂ. 2000 ಒಟ್ಟು ಎರಡೂ ಕಂತುಗಳಲ್ಲಿ ರೂ. 5000 ನಗದು ಪ್ರೋತ್ಸಹಧನವನ್ನು ಒದಗಿಸಲಾಗಿದೆ.
- 2 ನೇ ಮಗು ಹೆಣ್ಣುಮಗುವಾಗಿದ್ದರೆ ಮಾತ್ರ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಎರಡನೇ ಮಗುವಿಗೆ ರೂ 6000 ನಗದು ಪ್ರೋತ್ಸಹಧನವನ್ನು ಒದಗಿಸಲಾಗಿದೆ.
ಅರ್ಹತಾ ಮಾನದಂಡ: Pradhan Mantri Matru Vandana Yojana Scheme
- ಅರ್ಜಿದಾರರು ಕನಿಷ್ಠ 19 ವರ್ಷ ವಯೋಮಿತಿ ಹೊಂದಿರಬೇಕು ಮತ್ತು ಗರ್ಭಿಣಿ ಆಗಿರಬೇಕು.
- ಈ ಯೋಜನೆಯು ಮೊದಲ ಜೀವಂತ ಹೆರಿಗೆಗೆ ಮಾತ್ರ ಅನ್ವಹಿಸುತ್ತದೆ.
- ಅರ್ಜಿದಾರರು ಉದ್ಯೋಗದಲ್ಲಿರಬೇಕು ಮತ್ತು ಗರ್ಭಧಾರಣೆಯ ಕಾರಣದಿಂದ ವೇತನ ನಷ್ಟ ಅನುಭವಿಸುತ್ತಿರಬೇಕು.
- ಅರ್ಜಿದಾರರು ಮಗುವಿನ ಜನನದ 270ದಿನಗಳ ಒಳಗೆ PMMVY ಯೋಜನೆಯಡಿಯಲ್ಲಿ ಪ್ರಯೋಜನಕ್ಕಾಗಿ ಅರ್ಜಿ ಸಲ್ಲಿಸಬೇಕು
ಅಗತ್ಯ ದಾಖಲೆಗಳು: Pradhan Mantri Matru Vandana Yojana Scheme
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆಯ ವಿವರ
- LMP ದಿನಾಂಕ
- ANC ದಿನಾಂಕ
- ಮಗುವಿನ ಜನನ ಪ್ರಮಾಣಪತ್ರ
- ಇತರೆ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ ವೆಬ್ ಸೈಟ್ ಗೆ ಹೋಗಿ https://pmmvy.wcd.gov.in/ ಗೆ ಭೇಟಿ ನೀಡಿ
- ನೋಂದಣಿ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ, ಸೂಚಿಸಿದ ಅರ್ಜಿ ನಮೂನೆಯನ್ನು ಭರ್ತಿಮಾಡಿ
- ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿಮಾಡಿರುವ ಬಗ್ಗೆ ಖಚಿತಪಡಿಸಿಕೊಳ್ಳಿ
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ
ಪ್ರಮುಖ ಲಿಂಕ್ ಗಳು:
| ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ತೀರ್ಮಾನ:
ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯು ಗರ್ಭಿಣಿ ಮತ್ತು ತಾಯಿ ಆದ ಮಹಿಳೆಯರಿಗೆ ಅರೋಗ್ಯ ಸೇವೆ, ಪೌಷ್ಟಿಕ ಆಹಾರ, ಆದಾಯ ನಷ್ಟಕ್ಕೆ ಸಹಾಯವಾಗಿ ಸರ್ಕಾರದಿಂದ ನೇರ ಹಣಕಾಸು ಸಹಾಯ ನೀಡುವ ಯೋಜನೆಯಾಗಿದೆ. ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವ ಮಹಿಳೆಯರು ಗರ್ಭಧಾರಣೆಯ ನೋಂದಣಿ ಮಾಡಿಕೊಂಡಿರಬೇಕು ಮತ್ತು ನಿಗದಿತ ಅರೋಗ್ಯ ತಪಾಸಣೆ ಮಾಡಿಸಿಕೊಂಡಿರಬೇಕು.





