ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆಯಡಿಯಲ್ಲಿ ರೈತರಿಗೆ ಟ್ರ್ಯಾಕ್ಟರ್ ಖರೀದಿ ಮಾಡುಲು 50% ಸಬ್ಸಿಡಿ । PM Kisan Tractor Subsidy Scheme 2026

On: Wednesday, January 7, 2026 4:11 PM
ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆಯಡಿಯಲ್ಲಿ ರೈತರಿಗೆ ಟ್ರ್ಯಾಕ್ಟರ್ ಖರೀದಿ ಮಾಡುಲು 50% ಸಬ್ಸಿಡಿ । PM Kisan Tractor Subsidy Scheme 2026

ರೈತರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್. ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆಯಡಿಯಲ್ಲಿ ಟ್ರ್ಯಾಕ್ಟರ್ ಖರೀದಿ ಮಾಡುವ ರೈತರಿಗೆ ಸರ್ಕಾರದಿಂದ 50% ಸಬ್ಸಿಡಿ ದೊರೆಯಲಿದ್ದು, ಅರ್ಹ ಫಲಾನುಭವಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಿ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.

Join WhatsApp

Join Now

Join Telegram

Join Now

PM Kisan Tractor Subsidy Scheme 2026

ನಾವು ನೋಡುತ್ತಿರುವ ಹಾಗೆ ನಮ್ಮ ದೇಶದಲ್ಲಿ ಹಲವಾರು ರೈತರು ಕೃಷಿ ಕೆಲಸವನ್ನು ಮುಖ್ಯ ಜೀವನಾಧಾರವನ್ನಾಗಿ ಮಾಡಿಕೊಂಡಿದ್ದು, ದೇಶದ ಆರ್ಥಿಕತೆಯ ಬೆನ್ನೆಲುಬಾಗಿ ನಿಂತಿದ್ದಾರೆ. ಆದರೆ ಕೆಲವೊಂದು ಸಂದರ್ಭದಲ್ಲಿ ರೈತರ ಬದುಕಿನಲ್ಲಿ ಆರ್ಥಿಕ ಸಮಸ್ಯೆಯಿಂದಾಗಿ ತಮ್ಮ ಕೃಷಿ ಭೂಮಿಯನ್ನು ಹದಗೊಳಿಸಲು ಅಗತ್ಯವಾದ ಟ್ರ್ಯಾಕ್ಟರ್ ಮತ್ತು ಯಂತ್ರೋಪಕರಣ ಖರೀದಿಸಲು ಸಾಧ್ಯವಾಗದೆ ಸಾಲದ ಸುಳಿಗೆ ಸಿಲುಕುವುದನ್ನು ಕಾಣಬಹುದು. ಈ ಎಲ್ಲಾ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೊಳಿಸಿದೆ.

ಈ ಯೋಜನೆಯ ಬಗೆಗಿನ ಇನ್ನಷ್ಟು ಮಾಹಿತಿಯನ್ನು ನಮ್ಮ ವೆಬ್ ಸೈಟ್ ಉದ್ಯೋಗ ಸಲಹೆಯಲ್ಲಿ ಕಾಣಬಹುದು. ಅರ್ಹ ಮತ್ತು ಆಸಕ್ತ ಫಲಾನುಭವಿಗಳು ಈ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಿ. ಈ ಒಂದು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ, ಹೇಗೆ ಅರ್ಜಿ ಸಲ್ಲಿಸಬೇಕು? ಎಲ್ಲಿ ಹೋಗಿ ಅರ್ಜಿ ಸಲ್ಲಿಸಬೇಕು? ಅರ್ಹತಾ ಮಾನದಂಡಗಳೇನು? ಅಗತ್ಯ ದಾಖಲೆಗಳೇನು? ಎನ್ನುವ ಬಗ್ಗೆ ಗೊಂದಲಗಳಿದ್ದರೆ ಈ ಒಂದು ಲೇಖನವು ನಿಮ್ಮ ಎಲ್ಲಾ ಗೊಂದಲಗಳಿಗೂ ಸಂಪೂರ್ಣ ಸ್ಪಷ್ಟತೆ ನೀಡುತ್ತದೆ.

ಯೋಜನೆಯ ಅವಲೋಕನ: (PM Kisan Tractor Subsidy Scheme 2026)

ಯೋಜನೆಯ ಹೆಸರುಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆ
ಅರ್ಹ ಫಲಾನುಭವಿಗಳುರೈತರು
ಒಟ್ಟು ಪ್ರೋತ್ಸಾಹಧನ 50% ಸಬ್ಸಿಡಿ
ಅರ್ಜಿ ಸಲ್ಲಿಸುವ ವಿಧಾನಆನ್ಲೈನ್

ಸಂಕ್ಷಿಪ್ತ ಮಾಹಿತಿ : PM Kisan Tractor Subsidy Scheme 2026

ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆಯನ್ನು ಬಿಡುಗಡೆ ಮಾಡಿದ್ದು, ಇದೀಗ ನಮ್ಮ ಕರ್ನಾಟಕ ರಾಜ್ಯದ ಕೃಷಿ ಇಲಾಖೆಯಲ್ಲೂ ಈ ಒಂದು ಯೋಜನೆ ಅನುಷ್ಠಾನ ಗೊಂಡಿದೆ. ಈ ಯೋಜನೆಯಡಿಯಲ್ಲಿ ರೈತರಿಗೆ ಟ್ರ್ಯಾಕ್ಟರ್ ಖರೀದಿ ಮಾಡುವ ಸಂದರ್ಭದಲ್ಲಿ 50% ಸಬ್ಸಿಡಿ ನೀಡಲಾಗುತ್ತದೆ ಮತ್ತು ಇನ್ನು ಅರ್ಧದಷ್ಟು ಹಣವನ್ನು ಪಾವತಿಸಲು ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ.

ಯೋಜನೆಯ ಉದ್ದೇಶ: PM Kisan Tractor Subsidy Scheme 2026

  • ಟ್ರ್ಯಾಕ್ಟರ್ ನಂತಹ ದುಬಾರಿ ಯಂತ್ರಗಳನ್ನು ಖರೀದಿ ಮಾಡಲು ಸರ್ಕಾರದಿಂದ 50% ಸಬ್ಸಿಡಿ ನೀಡುವುದರಿಂದ ರೈತರು ಸಾಲದ ಸುಲಿಗೆ ಸಿಲುಕುವುದನ್ನು ತಪ್ಪಿಸುವುದು.
  • ಬಾಡಿಗೆಯ ಟ್ರ್ಯಾಕ್ಟರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ರೈತರು ತಮ್ಮ ಕೆಲಸವನ್ನು ತಾವೇ ನಿರ್ವಹಿಸಿಕೊಳ್ಳಲು ಅನುವುಮಾಡಿಕೊಡುವುದು.
  • ಟ್ರ್ಯಾಕ್ಟರ್ ಸಹಾಯದಿಂದ ಕಡಿಮೆ ಕೂಲಿ ಕೆಲಸದವರಿಂದ ಹೆಚ್ಚಿನ ಭೂಮಿಯನ್ನು ಉಳುಮೆ ಮಾಡಬಹುದಾಗಿದೆ.
  • ರೈತರು ಟ್ರ್ಯಾಕ್ಟರ್ ಸಹಾಯದಿಂದ ಕಡಿಮೆ ಸಮಯದಲ್ಲಿ ಹೆಚ್ಚಿನ ಉಳುಮೆ ಮಾಡಿ ಬೆಳೆಗಳ ಇಳುವರಿ ಹೆಚ್ಚಿಸಿ,ಹೆಚ್ಚಿನ ಆದಾಯವನ್ನು ಗಳಿಸುವಂತೆ ಮಾಡುವುದು.
  • ಕೃಷಿಯನ್ನು ಆಧುನಿಕ ಮತ್ತು ಲಾಭದಾಯಕ ಉದ್ಯಮವನ್ನಾಗಿ ಬಿಂಬಿಸುವ ಮೂಲಕ ಗ್ರಾಮೀಣ ಭಾಗದ ಯುವಕರಿಗೆ ಕೃಷಿ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವುದು.

ಯೋಜನೆಯ ಪ್ರಯೋಜನ:

  • ಹಳ್ಳಿಗಳಲ್ಲಿ ಕೃಷಿ ಕಾರ್ಮಿಕರ ಕೊರತೆ ಇರುವುದರಿಂದ, ಸ್ವಂತ ಟ್ರ್ಯಾಕ್ಟರ್ ಹೊಂದುವ ಜನರು ಯಾರಿಗೂ ಅವಲಂಬಿತರಾಗದೆ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳಬಹುದು.
  • ಉಳುಮೆ ಮಾಡಲು ಬೇಕಾಗುವ ಅಧಿಕ ಸಮಯವನ್ನು ಟ್ರ್ಯಾಕ್ಟರ್ ನ ಸಹಾಯದಿಂದಾಗಿ ಕಡಿಮೆ ಸಮಯದಲ್ಲಿ ಉಳುಮೆ ಮಾಡಿ ಸಮಯ ವ್ಯರ್ಥವಾಗುವುದನ್ನು ತಡೆಯಬಹುದು.
  • ಒಟ್ಟು ಟ್ರ್ಯಾಕ್ಟರ್ ಬೆಲೆಯಲ್ಲಿ ಅರ್ಧದಷ್ಟು ಮೊತ್ತವನ್ನು ಸರ್ಕಾರವೇ ಭರಿಸುವುದರಿಂದ ರೈತರ ಆರ್ಥಿಕ ಹೊರೆ ಕಡಿಮೆಯಾಗುತ್ತದೆ.
  • ಈ ಯೋಜನೆಯಡಿ ಸಬ್ಸಿಡಿಯ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡುವುದರಿಂದ ಯಾವುದೇ ಮಧ್ಯವರ್ತಿಗಳ ಸಹಾಯದ ಅವಶ್ಯಕತೆ ಇರುವುದಿಲ್ಲ.
  • ತಮ್ಮ ಸ್ವಂತ ಜಮೀನಿನ ಕೃಷಿ ಕೆಲಸವನ್ನು ಮುಗಿಸಿದ ನಂತರ ಬೇರೆಯವರಿಗೆ ಜಮೀನಿನ ಕೃಷಿ ಕೆಲಸವನ್ನು ಮಾಡಲು ಟ್ರ್ಯಾಕ್ಟರ್ ಗಳನ್ನು ಬಾಡಿಗೆಗೆ ನೀಡುವ ಮೂಲಕ ಇನ್ನಷ್ಟು ಆದಾಯವನ್ನು ಗಳಿಸಬಹುದು.

ಅರ್ಹತಾ ಮಾನದಂಡ: PM Kisan Tractor Subsidy Scheme 2026

  • ಅರ್ಜಿದಾರರು ಭಾರತೀಯ ನಾಗರೀಕರಾಗಿರಬೇಕು.
  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ಅರ್ಜಿದಾರರು 18 ವರ್ಷ ಮೇಲ್ಪಟ್ಟು 60 ದ ಒಳಗೆ ವಯೋಮಿತಿಯನ್ನು ಹೊಂದಿರಬೇಕು.
  • ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು 3 ಲಕ್ಷಕ್ಕಿಂತ ಕಡಿಮೆ ಇರಬೇಕು.
  • ಅರ್ಜಿದಾರರು ಕನಿಷ್ಠ 2 ಎಕ್ಕರೆ ಭೂಮಿಯನ್ನು ಹೊಂದಿರಬೇಕು.
  • ಈ ಹಿಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಯಾವುದೇ ಟ್ರ್ಯಾಕ್ಟರ್ ಸಬ್ಸಿಡಿಯನ್ನು ಪಡೆದುಕೊಂಡಿರಬಾರದು.
  • ಒಂದು ಕುಟುಂಬಕ್ಕೆ ಒಂದೇ ಟ್ರ್ಯಾಕ್ಟರ್ ಸಬ್ಸಿಡಿಯನ್ನು ನೀಡಲಾಗುವುದು.
  • ಮಹಿಳೆಯರಿಗೆ ಮತ್ತು SC/ST ರೈತರಿಗೆ ಮೊದಲ ಆದ್ಯತೆ ನೀಡಲಾಗುವುದು.
“ಆದಾಯ ತೆರಿಗೆ ಪಾವತಿ ಮಾಡುವವರಿಗೆ ಅಥವಾ ದೊಡ್ಡ ರೈತರಿಗೆ ಈ ಯೋಜನೆಯು ಅನ್ವಹಿಸುವುದಿಲ್ಲ”
PM Kisan Tractor Subsidy Scheme 2026
PM Kisan Tractor Subsidy Scheme 2026

ಅಗತ್ಯ ದಾಖಲೆಗಳು: PM Kisan Tractor Subsidy Scheme 2026

ಅರ್ಜಿ ಸಲ್ಲಿಸುವ ಫಲಾನುಭವಿಗಳು ಈ ಕೆಳಗಿನ ಅಗತ್ಯ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ.

  • ಆದಾಯ ಪ್ರಮಾಣಪತ್ರ 
  • ಜಾತಿ ಪ್ರಮಾಣಪತ್ರ
  • ಟ್ರ್ಯಾಕ್ಟರ್ ಖರೀದಿ ಪತ್ರ
  • ಆಧಾರ್ ಕಾರ್ಡ್
  • ಭೂ ದಾಖಲೆ
  • ಬ್ಯಾಂಕ್ ಖಾತೆಯ ವಿವರ
  • ಮೊಬೈಲ್ ಸಂಖ್ಯೆ
  • ಪಾಸ್ ಪೋರ್ಟ್ ಸೈಜ್ ಫೋಟೋ

ಅರ್ಜಿ ಸಲ್ಲಿಸುವ ವಿಧಾನ: PM Kisan Tractor Subsidy Scheme 2026

ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆಗೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು.

  • ಅಧಿಕೃತ ವೆಬ್ ಸೈಟ್ https://agrimachinery.nic.in/ ಗೆ ಭೇಟಿ ನೀಡಿ
  • ಫಾರ್ಮ್ ರಿಜಿಸ್ಟ್ರೇಷನ್ ಮೇಲೆ ಕ್ಲಿಕ್ ಮಾಡಿ
  • ಆಧಾರ್ ಸಂಖ್ಯೆಯನ್ನು ನಮೂದಿಸಿ ಒಟಿಪಿ ಮೂಲಕ ಲಾಗಿನ್ ಆಗಿ ನೀಡಿರುವ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ.
  • ವೈಯಕ್ತಿಕ ಮತ್ತು ಭೂ ದಾಖಲೆಗಳೊಂದಿಗೆ ಅರ್ಜಿಯನ್ನು ಭರ್ತಿಮಾಡಿ ಸಬ್ಮಿಟ್ ಮಾಡಿ ಅಗತ್ಯವಿದ್ದರೆ ಪ್ರಿಂಟ್ ತೆಗೆದುಕೊಳ್ಳಿ.

ತೀರ್ಮಾನ:

ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆಯಡಿಯಲ್ಲಿ ರೈತರಿಗೆ ಟ್ರ್ಯಾಕ್ಟರ್ ಖರೀದಿ ಮಾಡುವ ಸಂದರ್ಭದಲ್ಲಿ ಟ್ರ್ಯಾಕ್ಟರ್ ನ ಒಟ್ಟು ಬೆಲೆಯಲ್ಲಿ ರೈತರಿಗೆ 50% ಸಬ್ಸಿಡಿಯನ್ನು ನೀಡುವ ಮೂಲಕ ಅರ್ಧದಷ್ಟು ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಇನ್ನು ಉಳಿದ ಅರ್ಧದಷ್ಟು ಹಣವನ್ನು ರೈತರೇ ಭರಿಸಬೇಕಾಗುತ್ತದೆ. ರೈತರು ಅರ್ಧದಷ್ಟು ಹಣವನ್ನು ಸಾಲದ ರೂಪದಲ್ಲಿ ತೀರಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಅರ್ಹ ಫಲಾನುಭವಿಗಳು ಇಂದೇ ಈ ಈ ಯೋಜನೆಗೆ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.


ಇತರ ಪ್ರಮುಖ ಲಿಂಕುಗಳು :-

ಯಶಸ್ವಿನಿ ಯೋಜನೆ 2026

ಗೃಹಲಕ್ಷ್ಮಿಯರಿಗೆ ನೇರವಾಗಿ ₹3 ಲಕ್ಷ ಸಾಲ + ಸಬ್ಸಿಡಿ

ಕಟ್ಟಡ ಕಾರ್ಮಿಕರ ಮದುವೆಗೆ ಸಹಾಯಧನ

ಉದ್ಯೋಗಿನಿ ಯೋಜನೆ ಅರ್ಜಿ 2026

ಆಶ್ರಯ ವಸತಿ ಯೋಜನೆ 2026


Join WhatsApp

Join Now

Join Telegram

Join Now

Leave a Comment