ಬಂದೇ ಬಿಡ್ತಾ! ರೈತರ ಬ್ಯಾಂಕ್ ಖಾತೆಗೆ PM-Kisan 22 ನೇ ಕಂತಿನ ಹಣ? ಇಲ್ಲಿ ತಕ್ಷಣವೇ ಚೆಕ್ ಮಾಡಿಕೊಳ್ಳಿ!

On: Friday, January 9, 2026 12:01 PM
PM Kisan 22nd installment money

ಅಬ್ಬಬ್ಬಾ.! ರೈತರಿಗೆ ಭಾಂದವರಿಗೆ ಭಾರಿ ಸಂತಸದ ಸುದ್ದಿ.! ರೈತರು ಭಾರತದ ಬೆನ್ನೆಲುಬು ಇದೀಗಭಾರತದ ರೈತರಿಗೆ ಹಣಕಾಸಿನ ನೇರವನ್ನು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಜಾರಿಗೊಳಿಸಿದ ಅತ್ಯಂತ ಬಹುನೀರಿಕ್ಷೆಯ ಯೋಜನೆಯೇ “ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ”.

PM-Kisan 22 ನೇ ಕಂತಿನ ಹಣ? ಇಲ್ಲಿ ತಕ್ಷಣವೇ ಚೆಕ್ ಮಾಡಿಕೊಳ್ಳಿ! PM Kisan 22nd installment money

ಈ ಯೋಜನೆಯಡಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರ ಕೃಷಿ ಚಟುವಟಿಕೆಗೆ ಅಗತ್ಯವಾದ ಯಂತ್ರೋಪಕರಣವನ್ನು ಖರೀದಿಸಲು ಸರ್ಕಾರವು ಸಬ್ಸಿಡಿ ರೂಪದಲ್ಲಾಗಿರಬಹುದು, ಸಹಧನವನ್ನು ನೀಡುವ ಮೂಲಕ ಆರ್ಥಿಕವಾಗಿ ಅವರ ನೆರವಿಗೆ ನಿಂತಿದೆ.

Join WhatsApp

Join Now

Join Telegram

Join Now

ರೈತರಿಗೆ ಎಷ್ಟು ಹಣ ಜಮೆ ಆಗುತ್ತದೆ ಇಲ್ಲಿ ತಿಳಿಯಿರಿ :

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಅರ್ಹ ರೈತರಿಗೆ ಪ್ರತಿ ವರ್ಷ ₹6000 ವನ್ನು ಜಮಾ ಮಾಡಲಿದ್ದು, ₹2000 ಹಣವನ್ನು ಮೂರು ಸಮಾನ ಕಂತುಗಳಲ್ಲಿ ಪ್ರತಿ ನಾಲ್ಕು ತಿಂಗಳಿಗೆ ರೈತರ ಖಾತೆಗೆ ಜಮಾಮಾಡಲಾಗುವುದು. ಈ ಯೋಜನೆಯ ಬಗೆಗಿನ ಇನ್ನಷ್ಟು ಮಾಹಿತಿಯನ್ನು ನಮ್ಮ ವೆಬ್ ಸೈಟ್ ಉದ್ಯೋಗ ಸಲಹೆಯಲ್ಲಿ ಕಾಣಬಹುದು

ಕೇಂದ್ರ ಸರ್ಕಾರವು ಈಗಾಗಲೇ 21 ಕಂತುಗಳನ್ನು ಯಶಸ್ವಿಯಾಗಿ ಬಿಡುಗಡೆ ಮಾಡಿದ್ದು, 22 ನೇ ಕಂತನ್ನು ಯಾವಾಗ ಬಿಡುಗಡೆ ಮಾಡುತ್ತದೆ? ಎನ್ನುವ ಪ್ರಶ್ನೆ ಎಲ್ಲ ರೈತರಲ್ಲೂ ಕೇಳಿಬರುತ್ತಿದೆ. ಪಿಎಂ ಕಿಸಾನ್ 22 ನೇ ಕಂತಿನ ಹಣ ಯಾರಿಗೆ ಸಿಗಲಿದೆ? ಪಿಎಂ ಕಿಸಾನ್ 22 ನೇ ಕಂತಿನ ಹಣ ಯಾವಾಗ ದೊರೆಯಲಿದೆ? ಪಿಎಂ ಕಿಸಾನ್ ಈ -ಕೆವೈಸಿ ಪ್ರಕ್ರಿಯೆ ಪೂರ್ಣ ಗೊಳಿಸುವುದು ಅಗತ್ಯವೇ? ಎನ್ನುವ ಬಗ್ಗೆ ಗೊಂದಲಗಳಿದ್ದರೆ ಈ ಒಂದು ಲೇಖನವು ನಿಮ್ಮ ಎಲ್ಲಾ ಗೊಂದಲಗಳಿಗೂ ಸಂಪೂರ್ಣ ಸ್ಪಷ್ಟತೆ ನೀಡುತ್ತದೆ.

ಯೋಜನೆಯ ಅವಲೋಕನ:

ಯೋಜನೆಯ ಹೆಸರುಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ
ಅರ್ಹ ಫಲಾನುಭವಿಗಳುರೈತರು
ಒಟ್ಟು ಪ್ರೋತ್ಸಾಹಧನವಾರ್ಷಿಕ ₹6000

ಅರ್ಥವಾಗುವ ಹಾಗೆ ಸಂಕ್ಷಿಪ್ತ ಮಾಹಿತಿ :

ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ರೈತರ ಆರ್ಥಿಕ ನೆರವಿಗೆ ನಿಲ್ಲುವ ಉದ್ದೇಶದಿಂದ 2019 ರಂದು ಚಾಲನೆ ನೀಡಲಾಯಿತು. ದೇಶದ ಸಣ್ಣ ಮತ್ತು ಅತಿ ಸಣ್ಣ ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಕೃಷಿ ಚಟುವಟಿಕೆ ಸಂಬಂಧಿಸಿದ ವೆಚ್ಚಗಳನ್ನು ಭರಿಸಲು ಸಹಾಯಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿಯಲ್ಲಿ DTP ಯ ಮೂಲಕ ನೇರವಾಗಿ ರೈತರ ಖಾತೆಗೆ ಹಣವನ್ನು ಜಮಾ ಮಾಡಲಾಗುವುದು.

ಯೋಜನೆಯ ಬೃಹತ್ ಉದ್ದೇಶಗಳು:

  • ರೈತರಿಗೆ ಕೃಷಿ ಚಟುವಟಿಕೆಗೆ ಬೇಕಾದ ಬಿತ್ತನೆ ಬೀಜ, ಕೀಟನಾಶಕ, ರಸಗೊಬ್ಬರಗಳನ್ನು ಖರೀದಿಸಲು ಹಣಕಾಸಿನ ನೆರವನ್ನು ಒದಗಿಸುವುದು.
  • ರೈತರು ತಮ್ಮ ಕೃಷಿ ಸಂಬಂಧಿತ ವೆಚ್ಚಗಳನ್ನು ಭರಿಸಲು ಬೇರೆ ವ್ಯಕ್ತಿಗಳಿಂದ ಹೆಚ್ಚಿನ ಬಡ್ಡಿಗೆ ಸಾಲವನ್ನು ಪಡೆಯುವುದನ್ನು ತಡೆಯುವುದು.
  • ಕೃಷಿಯನ್ನು ಆಧುನಿಕ ಮತ್ತು ಲಾಭದಾಯಕ ಉದ್ಯಮವನ್ನಾಗಿ ಬಿಂಬಿಸುವ ಮೂಲಕ ಗ್ರಾಮೀಣ ಭಾಗದ ಯುವಕರಿಗೆ ಕೃಷಿ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವುದು.
  • ಸಣ್ಣ ಮತ್ತು ಅತಿ ಸಣ್ಣ ರೈತರ ಆದಾಯವನ್ನು ಹೆಚ್ಚಿಸಿ, ಸ್ವಾವಲಂಬಿ ಜೀವನವನ್ನು ನಡೆಸಲು ಪ್ರೇರೇಪಿಸುವುದು.
  • ಈ ಒಂದು ಯೋಜನೆಯಿಂದಾಗಿ ರೈತರ ಸ್ಥಿರತೆಯನ್ನು ಹೆಚ್ಚಿಸುವುದು.

ಇದರಿಂದ ರೈತರಿಗೆ ಏನು ಪ್ರಯೋಜನ?:

  • ರೈತರ ಖಾತೆಗೆ ವರ್ಷಕ್ಕೆ ರೂ. 6000 ಜಮಾ
  • ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೃಷಿ ಚಟುವಟಿಕೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಹಣಕಾಸಿನ ಸಹಾಯ
  • ಈ ಒಂದು ಯೋಜನೆಯಡಿಯಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ.

ಪಿಎಂ ಕಿಸಾನ್ 22 ನೇ ಕಂತಿನ ಹಣ ಯಾರಿಗೆ ಸಿಗಲಿದೆ?

ಯಾವುದೇ ಅಡೆತಡೆ ಇಲ್ಲದೆ ಪಿಎಂ ಕಿಸಾನ್ 22 ನೇ ಕಂತಿನ ಹಣವನ್ನು ಪಡೆಯಲು ರೈತರು ಕೆಳಗಿನ 5 ಅಂಶಗಳನ್ನು ಕಡ್ಡಾಯವಾಗಿ ಪೂರೈಸಿರಬೇಕು.

  • e-KYC ನವೀಕರಣ ಪೂರ್ಣಗೊಂಡಿರಬೇಕು.
  • ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ನೋಂದಣಿ ಆಗಿರಬೇಕು.
  • ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು.
  • ಭೂ ದಾಖಲೆಯನ್ನು ಪರಿಶೀಲನೆ ಗೊಳಿಸಿರಬೇಕು.
  • ಬ್ಯಾಂಕ್ ಖಾತೆ ಸಕ್ರಿಯವಾಗಿರಬೇಕು.

ಪಿಎಂ ಕಿಸಾನ್ 22 ನೇ ಕಂತಿನ ಹಣ ಯಾವಾಗ ದೊರೆಯಲಿದೆ?

ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಯಡಿಯಲ್ಲಿ 21 ಕಂತುಗಳನ್ನು ನವೆಂಬರ್ 19, 2025ರಂದು ಯಶಸ್ವಿಯಾಗಿ ಬಿಡುಗಡೆ ಮಾಡಿದೆ. ಆದರೆ ಸರ್ಕಾರ 22 ನೇ ಕಂತನ್ನು ಯಾವಾಗ ಬಿಡುಗಡೆ ಮಾಡುತ್ತದೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ. ಈ ಯೋಜನೆಯಡಿಯಲ್ಲಿ ಪ್ರತಿ ನಾಲ್ಕು ತಿಂಗಳ ಅಂತರದಲ್ಲಿ ಹಣವನ್ನು ಜಮಾ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ 22 ನೇ ಕಂತಿನ ಹಣವನ್ನು ಫೆಬ್ರವರಿ ತಿಂಗಳ ಕೊನೆಯ ಕೊನೆಯ ವಾರದಲ್ಲಿ ಜಮಾ ಮಾಡುವ ಸಾಧ್ಯತೆ ಇದೆ. 22 ನೇ ಕಂತಿನ ಹಣದ ಬಿಡುಗಡೆಗೆ ಕೇಂದ್ರ ಸರ್ಕಾರ ಅಧಿಕೃತ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸುವ ಸಾಧ್ಯತೆ ಇದೆ.

ಪಿಎಂ ಕಿಸಾನ್ ಈ -ಕೆವೈಸಿ ಪ್ರಕ್ರಿಯೆ ಪೂರ್ಣ ಗೊಳಿಸುವುದು ಅಗತ್ಯವೇ?

  • ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಹಣವನ್ನು ಪಡೆಯಬೇಕಾದರೆ, e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದಲ್ಲಿ ರೈತರು 22 ನೇ ಕಂತಿನ ಹಣವನ್ನು ಪಡೆಯಲು ವಿಫಲರಾಗುತ್ತಾರೆ.

ಆನ್ಲೈನ್ ಮೂಲಕ ಅಥವಾ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ಪಿಎಂ ಕಿಸಾನ್ 22 ನೇ ಕಂತಿನ ಹಣ ಜಮಾ ಆಗಿದೆಯೋ, ಇಲ್ಲವೋ ಎಂದು ಪರಿಶೀಲಿಸುವುದು ಹೇಗೆ?

ಎರಡು ವಿಧಾನಗಳ ಮೂಲಕ ಇದನ್ನು ಪರಿಶೀಲಿಸಬಹುದು. ಅದೇನೆಂದರೆ ,

  1. ನಿಮ್ಮ ಬ್ಯಾಂಕ್ ಗೆ ಭೇಟಿ ನೀಡಿ ಬ್ಯಾಂಕ್ ಪಾಸ್ ಬುಕ್ ಅನ್ನು ಎಂಟ್ರಿ ಮಾಡುವ ಮೂಲಕ ಪರಿಶೀಲಿಸಬಹುದು. ಅಥವಾ ,
  2. ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ https://pmkisan.gov.in/ ಗೆ ಭೇಟಿ ನೀಡಿ, ಆಧಾರ್ ಮತ್ತು ನೋಂದಣಿ ಸಂಖ್ಯೆಯನ್ನು ನಮೂದಿಸಿ ಕಂತಿನ ಬಗ್ಗೆ ಪರಿಶೀಲಿಸಿ.

ಕೊನೆಯ ವಿವರಣೆ :

ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಅರ್ಹ ರೈತರಿಗೆ ವಾರ್ಷಿಕ ₹6000 ವರೆಗೆ ಸಹಾಯಧನವನ್ನು ನೀಡುತ್ತಿದ್ದು, 21 ಕಂತುಗಳ ಹಣವನ್ನು ಯಶಸ್ವಿಯಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದು, 22 ನೇ ಕಂತಿನ ಹಣವನ್ನು ಬಿಡುಗಡೆ ಮಾಡುವ ಅಧಿಕೃತ ದಿನಾಂಕವನ್ನು ಕೇಂದ್ರ ಸರ್ಕಾರವು ಶೀಘ್ರದಲ್ಲೇ ಘೋಷಿಸಲಿದೆ. ಅರ್ಹ ರೈತರು ಹಣ ಬಂದಿದೆಯೋ? ಇಲ್ಲವೋ? ಎಂದು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಪರಿಶೀಲಿಸುತ್ತಿರಿ.


ಇತರ ಪ್ರಮುಖ ಲಿಂಕುಗಳು :-


Join WhatsApp

Join Now

Join Telegram

Join Now

Leave a Comment