NMPA Apprentice Recruitment 2025
ನವ ಮಂಗಳೂರು ಬಂದರು ಪ್ರಾಧಿಕಾರ (NMPA Apprentice Recruitment 2025) ಪದವೀಧರ/ ಡಿಪ್ಲೊಮ ಅಪ್ರೆಂಟೀಸ್ ಟ್ರೈನಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29-12-2025. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ.
NMPA Apprentice Recruitment 2025
ಈ ಹುದ್ದೆಗಳಿಗೆ ಸಂಬಂಧಿಸಿದಂತೆ ನಮ್ಮ ವೆಬ್ ಸೈಟ್ ಉದ್ಯೋಗ ಸಲಹೆ ಯಲ್ಲಿ ಸಂಪೂರ್ಣ ಮಾಹಿತಿಯನ್ನು ನೋಡಬಹುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ, ಅರ್ಹತಾ ಮಾನದಂಡ ಪ್ರಮುಖ ದಾಖಲೆಗಳು ಹಾಗೂ ಇನ್ನಿತರೆ ಮಾಹಿತಿಗಳ ಬಗ್ಗೆ ಸಂಪೂರ್ಣವಾಗಿ ಕೆಳಗೆ ನೀಡಿರುತ್ತೇವೆ ಅದನ್ನು ಓದಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ.
ಹುದ್ದೆಗಳ ಅವಲೋಕನ: (NMPA Apprentice Recruitment 2025)
| ಸಂಸ್ಥೆಯ ಹೆಸರು | ನವ ಮಂಗಳೂರು ಬಂದರು ಪ್ರಾಧಿಕಾರ |
| ಹುದ್ದೆಯ ಹೆಸರು | ಪದವೀಧರ/ ಡಿಪ್ಲೊಮಾ ಅಪ್ರೆಂಟೀಸ್ ತರಬೇತಿದಾರರು |
| ಹುದ್ದೆಯ ಸಂಖ್ಯೆ | 31 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 29-12-2025 |
ಸಂಕ್ಷಿಪ್ತ ಮಾಹಿತಿ:
ನವ ಮಂಗಳೂರು ಬಂದರು ಪ್ರಾಧಿಕಾರವು ಒಟ್ಟು 31 ಪದವೀಧರ/ ಡಿಪ್ಲೊಮಾ ಅಪ್ರೆಂಟೀಸ್ ತರಬೇತಿದಾರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಡಿಪ್ಲೊಮಾ ಹಾಗೂ ಪದವಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಹರಾಗಿರುತ್ತಾರೆ.
ಹುದ್ದೆಗಳ ವಿವರ:
| ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
| ಸಿವಿಲ್ ಪದವೀಧರ | 05 |
| ಮೆಕ್ಯಾನಿಕಲ್ ಪದವೀಧರ | 07 |
| ಎಲೆಕ್ಟ್ರಿಕಲ್ ಪದವೀಧರ | 04 |
| ಕಂಪ್ಯೂಟರ್ ಸೈನ್ಸ್ ಪದವೀಧರ | 01 |
| ಬಿಕಾಂ ಪದವೀಧರ | 03 |
| ಬಿಎ ಪದವೀಧರ | 01 |
| ಕಂಪ್ಯೂಟರ್ ಸೈನ್ಸ್ ನಲ್ಲಿ ಡಿಪ್ಲೊಮಾ | 01 |
| ಸಿವಿಲ್ ನಲ್ಲಿ ಡಿಪ್ಲೊಮಾ | 01 |
| ಮೆಕ್ಯಾನಿಕಲ್ ನಲ್ಲಿ ಡಿಪ್ಲೊಮಾ | 01 |
| ಎಲೆಕ್ಟ್ರಿಕಲ್ ನಲ್ಲಿ ಡಿಪ್ಲೊಮಾ | 03 |
| ವಾಣಿಜ್ಯ ಅಭ್ಯಾಸದಲ್ಲಿ ಡಿಪ್ಲೊಮಾ | 04 |
ಶೈಕ್ಷಣಿಕ ಅರ್ಹತೆ:
- ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಮತ್ತು ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಡಿಪ್ಲೊಮಾ, ಇಂಜಿನಿಯರಿಂಗ್ ಪದವೀಧರರು, ಬಿಕಾಂ ಪದವೀಧರರು, ಬಿಎ ಪದವೀಧರರು 2022, 2023, 2024 ಮತ್ತು 2025 ರಲ್ಲಿ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ:
- ನವ ಮಂಗಳೂರು ಬಂದರು ಪ್ರಾಧಿಕಾರ ಅಭ್ಯರ್ಥಿಯ ವಯೋಮಿತಿಯ ಬಗ್ಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿಲ್ಲ.
ಅರ್ಜಿ ಶುಲ್ಕ:
- ನವ ಮಂಗಳೂರು ಬಂದರು ಪ್ರಾಧಿಕಾರ ಪದವೀಧರ/ ಡಿಪ್ಲೊಮಾ ಅಪ್ರೆಂಟೀಸ್ ತರಬೇತಿದಾರ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕವನ್ನು ನಿಗದಿಪಡಿಸಿಲ್ಲ.
ವೇತನ ಶ್ರೇಣಿ:
| ಹುದ್ದೆಯ ಹೆಸರು | ವೇತನ ಶ್ರೇಣಿ |
| ಪದವೀಧರ ಹುದ್ದೆಗೆ | ರೂ. 9,000 |
| ಡಿಪ್ಲೊಮಾ ಹುದ್ದೆಗೆ | ರೂ. 8,000 |
ಅಗತ್ಯ ದಾಖಲೆಗಳು:
- ಪದವಿ ಪ್ರಮಾಣಪತ್ರ
- ಎಲ್ಲ ಸೆಮಿಸ್ಟರ್ ಅಂಕಪಟ್ಟಿ
- ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಫೋಟೋ
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಓಟರ್ ಐಡಿ
- ಜಾತಿ ಪ್ರಮಾಣಪತ್ರ
ಅರ್ಜಿ ಸಲ್ಲಿಸುವ ವಿಧಾನ:
- NMPA ಅಧಿಕೃತ ವೆಬ್ ಸೈಟ್ https://newmangaloreport.gov.in/ ಗೆ ಭೇಟಿನೀಡಿ
- NMPA ನೇಮಕಾತಿ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ
- ಅರ್ಜಿ ನಮೂನೆಯಲ್ಲಿ ಅಗತ್ಯ ದಾಖಲೆಯನ್ನು ಭರ್ತಿ ಮಾಡಿ ಸರಿಯಾಗಿ ಭರ್ತಿಮಾಡಿರುವ ಬಗ್ಗೆ ಖಚಿತಪಡಿಸಿಕೊಳ್ಳಿ
- ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ದಿನಾಂಕ 29-12-2025 ರೊಳಗೆ ಕಾರ್ಯದರ್ಶಿ, ಆಡಳಿತ ಇಲಾಖೆ ಏನ್ ಎಂ ಪಿ ಪಣಂಬೂರು ಇಲ್ಲಿಗೆ ಕಳುಹಿಸಿ.
ಪ್ರಮುಖ ದಿನಾಂಕಗಳು:
- ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29-12-2025
ಪ್ರಮುಖ ಲಿಂಕ್ ಗಳು:
| ಅಧಿಸೂಚನೆಯ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್ ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಪ್ರಮುಖ ಸೂಚನೆ:
- ಅರ್ಹತಾ ಪರೀಕ್ಷೆಗೆ ಹಾಜರಾಗುತ್ತಿರುವ, ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ.
- ಈ ಹಿಂದೆ ಅಪ್ರೆಂಟೀಸ್ ಆಗಿ ತೊಡಗಿಸಿ ಕೊಂಡಿರುವ ಅಥವಾ ಬೇರೆಡೆ ಅಪ್ರೆಂಟೀಸ್ ತರಬೇತಿಯನ್ನು ಪಡೆಯುತ್ತಿರುವ ಅಭ್ಯರ್ಥಿ ಅರ್ಜಿ ಸಲ್ಲಿಸಲು ಅರ್ಹರಲ್ಲ.
ತೀರ್ಮಾನ:
ನವ ಮಂಗಳೂರು ಬಂದರು ಪ್ರಾಧಿಕಾರ ಒಟ್ಟು 31 ಪದವೀಧರ/ ಡಿಪ್ಲೊಮಾ ಅಪ್ರೆಂಟೀಸ್ ತರಬೇತಿದಾರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಒಂದು ವರ್ಷದ ತರಬೇತಿಗೆ ಮಾತ್ರ ಅಪ್ರೆಂಟೀಸ್ ಆಗಿ ನೇಮಕ ಗೊಳ್ಳುವುದು. ಒಂದು ವರ್ಷದ ನಂತರ ಅದನ್ನು ಕೊನೆಗೊಳಿಸಲಾಗುವುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ 29-12-2025 ರೊಳಗೆ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ, ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.





