NCERT : ರೂ 1,44,000/- NCERT ನಲ್ಲಿ 117 ಹುದ್ದೆಗಳ ಭರ್ಜರಿ ನೇಮಕಾತಿ! ಅರ್ಜಿ ಪ್ರಕ್ರಿಯೆ ಬಗ್ಗೆ ನೋಡಿ!

On: Wednesday, February 4, 2026 8:02 PM
NCERT

Join WhatsApp

Join Now

Join Telegram

Join Now

ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್! ನ್ಯಾಷನಲ್ ಕೌಂಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೇನಿಂಗ್ (NCERT) ವಿವಿಧ ಶೈಕ್ಷಣಿಕ ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಅರ್ಜಿಸಲ್ಲಿಸಲು ಆಸಕ್ತಿಯನ್ನು ಹೊಂದಿರುವ ಉದ್ಯೋಗಾಕಾಂಕ್ಷಿಗಳು ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

NCERT Recruitment 2026 In Kannada

NCERT ಸಂಸ್ಥೆಯು ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಡೆಪ್ಯೂಟಿ ಲೈಬ್ರೇರಿಯನ್, ಅಸಿಸ್ಟೆಂಟ್ ಲೈಬ್ರೇರಿಯನ್ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಫೆಬ್ರುವರಿ 20, 2026 ರ ವರೆಗೂ ಅವಕಾಶ ಕಲ್ಪಿಸಲಾಗಿದೆ.

ಪ್ರತಿಯೊಬ್ಬರಿಗೂ ನಾನು ಚನ್ನಾಗಿ ಓದಿ, ಉತ್ತಮ ವೇತನ ಶ್ರೇಣಿ ಇರುವ ಗವರ್ನಮೆಂಟ್ ಉದ್ಯೋಗವನ್ನು ಪಡೆಯಬೇಕೆನ್ನುವ ಇಂಟರೆಸ್ಟ್ ಇರುತ್ತದೆ. ಅಂತಹವರಿಗೆ ಇದೊಂದು ಸುವರ್ಣಾವಕಾಶ. ಈ ಹುದ್ದೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ಕಾಣಬಹುದಾಗಿದೆ. ಇದೇ ರೀತಿಯ ಇನ್ನಷ್ಟು ಹುದ್ದೆಗಳ ಕುರಿತು ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ಉದ್ಯೋಗಸಲಹೆ ಗೆ ಭೇಟಿ ನೀಡಿ.


ಹುದ್ದೆಯ ಕಿರು ನೋಟ:

ನೇಮಕಾತಿ ಸಂಸ್ಥೆ: ರಾಷ್ಟೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT)

ಹುದ್ದೆಯ ಹೆಸರು: ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಡೆಪ್ಯೂಟಿ ಲೈಬ್ರೇರಿಯನ್, ಅಸಿಸ್ಟೆಂಟ್ ಲೈಬ್ರೇರಿಯನ್ ಹುದ್ದೆಗಳು

ಒಟ್ಟು ಹುದ್ದೆಗಳ ಸಂಖ್ಯೆ: 117 ಹುದ್ದೆಗಳು

ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-02-2026

NCERT ಸಂಸ್ಥೆಯ ವಿವಿಧ ಹುದ್ದೆಗಳ ಕುರಿತು:

ರಾಷ್ಟೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಯು ಒಟ್ಟು 117 ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಡೆಪ್ಯೂಟಿ ಲೈಬ್ರೇರಿಯನ್, ಅಸಿಸ್ಟೆಂಟ್ ಲೈಬ್ರೇರಿಯನ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ನೇಮಕಾತಿಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

ಹುದ್ದೆಗಳ ಸಂಕ್ಷಿಪ್ತ ವಿವರ:

  • ಪ್ರೊಫೆಸರ್ ಹುದ್ದೆಗಳು: 19
  • ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳು: 45
  • ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳು: 50
  • ಡೆಪ್ಯೂಟಿ ಲೈಬ್ರೇರಿಯನ್: 01
  • ಅಸಿಸ್ಟೆಂಟ್ ಲೈಬ್ರೇರಿಯನ್:02

ಹುದ್ದೆಗಳಿಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆಗಳು:

1. ಪ್ರೊಫೆಸರ್ ಹುದ್ದೆಗೆ:

  • ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಲ್ಲಿ ಸಂಬಂಧಿಸಿದ ವಿಭಾಗದಲ್ಲಿ ಪಿ.ಹೆಚ್.ಡಿ ಪದವಿಯನ್ನು ಪಡೆದಿರಬೇಕು.
  • ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಲ್ಲಿ ಸಂಶೋಧನಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರಬೇಕು.
  • ಕಾಲೇಜು ಅಥವಾ ವಿಶ್ವವಿದ್ಯಾಲಯದಲ್ಲಿ 10 ವರ್ಷದ ಭೋದನಾ ಅನುಭವವನ್ನು ಹೊಂದಿರಬೇಕು.

2. ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ:

  • ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಗಳಲ್ಲಿ 55% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.
  • UGC ಅಥವಾ CSIR ಸಂಸ್ಥೆಯು ನಡೆಸುವ ರಾಷ್ಟೀಯ ಅರ್ಹತಾ ಪರೀಕ್ಷೆ (NET)ಯಲ್ಲಿ ಅಥವಾ
  • UGC ಯಿಂದ ಮಾನ್ಯತೆ ಪಡೆದ SLET ಅಥವಾ SET ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಇಲ್ಲಿ ಗಮನಿಸಿ: “ಅಭ್ಯರ್ಥಿಗಳು ಪಿ.ಹೆಚ್.ಡಿ ಪದವಿಯನ್ನು ಪಡೆದಿದ್ದರೆ, NET/SLET ಪರೀಕ್ಷೆಯಲ್ಲಿ ವಿನಾಯಿತಿ ನೀಡಲಾಗುತ್ತದೆ.

3.ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ:

  • ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಲ್ಲಿ ಸಂಬಂಧಿಸಿದ ವಿಭಾಗದಲ್ಲಿ ಪಿ.ಹೆಚ್.ಡಿ ಪದವಿಯನ್ನು ಪಡೆದಿರಬೇಕು.
  • ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಗಳಲ್ಲಿ 55% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.
  • ಭೋದನಾ ಮತ್ತು ಸಂಶೋಧನಾ ಕ್ಷೇತ್ರದಲ್ಲಿ 8 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.

4. ಅಸಿಸ್ಟೆಂಟ್ ಲೈಬ್ರೇರಿಯನ್ ಹುದ್ದೆಗೆ:

  • ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಲ್ಲಿ ಲೈಬ್ರೆರಿ ಸೈನ್ಸ್, ಇನ್ಫರ್ಮೇಷನ್ ನಲ್ಲಿ 55% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.

5. ಡೆಪ್ಯೂಟಿ ಲೈಬ್ರೇರಿಯನ್ ಹುದ್ದೆಗೆ:

  • ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಲ್ಲಿ ಲೈಬ್ರೆರಿ ಸೈನ್ಸ್, ಇನ್ಫರ್ಮೇಷನ್ ನಲ್ಲಿ 55% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.
  • ಡೆಪ್ಯೂಟಿ ಲೈಬ್ರೇರಿಯನ್ ಅಥವಾ ಅಸಿಸ್ಟೆಂಟ್ ಲೈಬ್ರೇರಿಯನ್ ಆಗಿ 8 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.

ವಯೋಮಿತಿ ವಿವರ:

ರಾಷ್ಟೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ನಿಯಮಗಳ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ.

ವಯೋಮಿತಿ ಸಡಿಲಿಕೆ:

ರಾಷ್ಟೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ನಿಯಮಗಳ ಅನುಸಾರ ST/SC, ಇತರೆ ಹಿಂದುಳಿದ ವರ್ಗಗಳು (ಒಬಿಸಿ), PwBD ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ:

SC/ST, ಅಂಗವಿಕಲರು, ಮಹಿಳೆಯರಿಗೆ: ಯಾವುದೇ ಅರ್ಜಿ ಶುಲ್ಕವಿಲ್ಲ.

ಸಾಮಾನ್ಯ, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ, EWS ಅಭ್ಯರ್ಥಿಗಳಿಗೆ: ₹1,000

ವೇತನ ಶ್ರೇಣಿ:

ಈ ಕೆಳಗೆ ನೀಡಿರುವ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 7 ನೇ ವೇತನ ಆಯೋಗದ ಅನ್ವಯ ವೇತನವನ್ನು ನೀಡಲಾಗುವುದು.

ಪ್ರೊಫೆಸರ್ ಹುದ್ದೆಗೆ: ₹1,44,200

ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ: ₹57,700

ಅಸೋಸಿಯೇಟ್ ಪ್ರೊಫೆಸರ್ಹುದ್ದೆಗೆ: ₹1,31,400

ಡೆಪ್ಯೂಟಿ ಲೈಬ್ರೇರಿಯನ್: ₹1,31,400

ಅಸಿಸ್ಟೆಂಟ್ ಲೈಬ್ರೇರಿಯನ್: ₹57,700

ಆಯ್ಕೆ ಪ್ರಕ್ರಿಯೆ:

  • NCERT ಸಂಸ್ಥೆಯ ವಿವಿಧ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಶೈಕ್ಷಣಿಕ ಅಂಕಗಳು, ಸಂಶೋಧನಾ ಹಾಗೂ ಬೋಧನಾ ಅನುಭವಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ.
  • ಶಾರ್ಟ್ ಲಿಸ್ಟ್ ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಕರೆಯಲಾಗುವುದು.
  • ಸಂದರ್ಶನದ ಸಮಯದಲ್ಲಿ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲನೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ:

  • ಅಭ್ಯರ್ಥಿಗಳು NCERT ಅಧಿಕೃತ ವೆಬ್ಸೈಟ್ http://www.ncert.nic.in/ ಗೆ ಭೇಟಿ ನೀಡಿ.
  • ಅನೌನ್ಸಮೆಂಟ್ ವಿಭಾಗದಲ್ಲಿ ಹುದ್ದೆಗಳು ಹಾಗೂ ಅಕಾಡೆಮಿಕ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಹೊಸ ಬಳಕೆದಾರರಾಗಿದ್ದರೆ ಇಮೇಲ್ ಐಡಿ ಹಾಗೂ ಪಾಸ್ ವರ್ಡ್ ನಮೂದಿಸಿ ಲಾಗಿನ್ ಆಗಿ.
  • ಅರ್ಜಿ ನಮೂನೆಯನ್ನು ಸರಿಯಾಗಿ ಓದಿಕೊಂಡು.
  • ಅಲ್ಲಿ ಕೇಳಿರುವ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಆಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ.
  • ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವಿದ್ದರೆ ಅರ್ಜಿ ಶುಲ್ಕ ಪಾವತಿಸಿ.

ಉದ್ಯೋಗ ಸ್ಥಳಗಳು:

  • ಮೈಸೂರು
  • ನವದೆಹಲಿ
  • ಅಜ್ಮೀರ್
  • ಭುವನೇಶ್ವರಿ
  • ಭೋಪಾಲ್
  • ಶಿಲ್ಲಾಂಗ್
  • ಗುರುಗ್ರಾಮ್

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ 31-01-2026
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ20-02-2026
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-02-2026

ಹುದ್ದೆಗೆ ಸಂಭಂದಿಸಿದ ಪ್ರಮುಖ ಲಿಂಕುಗಳು:

ಅಧಿಕೃತ ವೆಬ್ಸೈಟ್ ಲಿಂಕ್ – ಇಲ್ಲಿ ಕ್ಲಿಕ್ ಮಾಡಿ

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ – ಇಲ್ಲಿ ಕ್ಲಿಕ್ ಮಾಡಿ



ಅಂತಿಮ ನುಡಿ:

NCERT ಸಂಸ್ಥೆಯು ಒಟ್ಟು 117 ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಡೆಪ್ಯೂಟಿ ಲೈಬ್ರೇರಿಯನ್, ಅಸಿಸ್ಟೆಂಟ್ ಲೈಬ್ರೇರಿಯನ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಅಭ್ಯರ್ಥಿಗಳು ಪ್ರತಿಯೊಂದು ಹುದ್ದೆಗೂ ಅನುಗುಣವಾಗಿ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಹಾಗೂ ಅರ್ಜಿ ಶುಲ್ಕವನ್ನು ಪಾವತಿಸಿ.


ಇತರೆ ಪ್ರಮುಖ ಸರ್ಕಾರಿ ಹುದ್ದೆಗಳ ಲಿಂಕುಗಳು:


Join WhatsApp

Join Now

Join Telegram

Join Now

Leave a Comment