ರಾಷ್ಟ್ರೀಯ ಗೋಕುಲ್ ಮಿಷನ್ ಯೋಜನೆಯಾಡಿಯಲ್ಲಿ ರೈತರಿಗೆ ಸಿಗ್ತಿದೆ 2 ಕೋಟಿ ಪ್ರೋತ್ಸಾಹಧನ । National Gokul Mission Scheme 2026

On: Sunday, January 11, 2026 5:49 PM
National Gokul Mission Scheme 2026

ನೀವೇನಾದರೂ ಹೈನುಗಾರಿಕೆ ಮಾಡಲು ಬಯಸುತ್ತಿದ್ದೀರಾ? ಹಾಗಿದ್ದರೆ ಇಲ್ಲಿದೆ ನೋಡಿ ಸಂತಸದ ಸುದ್ದಿ. ಕೇಂದ್ರ ಸರ್ಕಾರವು ನಿಮ್ಮ ಈ ಒಂದು ಬಯಕೆಯನ್ನು ಈಡೇರಿಸುವ ನಿಟ್ಟಿನಲ್ಲಿ “ರಾಷ್ಟ್ರೀಯ ಗೋಕುಲ್ ಮಿಷನ್” ಯೋಜನೆಯಡಿಯಲ್ಲಿ ನಿಮಗೆ 2 ಕೋಟಿ ಸಹಾಯಧನವನ್ನು ನೀಡಲಿದೆ. ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.

National Gokul Mission Scheme 2026

ಭಾರತ ಸರ್ಕಾರವು ಹೈನುಗಾರಿಕೆಯನ್ನು ಉತ್ತೇಜಿಸುವ ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ರಾಷ್ಟ್ರೀಯ ಗೋಕುಲ್ ಮಿಷನ್” ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿಯಲ್ಲಿ ಹಾಲಿನ ಉತ್ಪಾದನೆಯನ್ನು ಹಾಗೂ ಜಾನುವಾರುಗಳ ತಳಿಯನ್ನು ಅಭಿವೃದ್ಧಿ ಪಡಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯ ಬಗೆಗಿನ ಇನ್ನಷ್ಟು ಮಾಹಿತಿಗಾಗಿ ನಮ್ಮ ವೆಬ್ಸೈಟ್ ಉದ್ಯೋಗ ಸಲಹೆ ಗೆ ಭೇಟಿ ನೀಡಿ.

Join WhatsApp

Join Now

Join Telegram

Join Now

ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಕೆಳಗೆ ನೀಡಿರುವ ಯೋಜನೆಯ ಉದ್ದೇಶ, ಪ್ರಯೋಜನ, ಅಗತ್ಯ ದಾಖಲೆಗಳು ಹಾಗೂ ಇನ್ನಿತರ ಮಾಹಿತಿಗಳನ್ನು ಓದಿಕೊಂಡು ಅರ್ಜಿ ಸಲ್ಲಿಸಿ.

ಯೋಜನೆಯ ಅವಲೋಕನ: (National Gokul Mission Scheme 2026)

ಯೋಜನೆಯ ಹೆಸರುರಾಷ್ಟ್ರೀಯ ಗೋಕುಲ್ ಮಿಷನ್ ಯೋಜನೆ
ಅರ್ಹ ಫಲಾನುಭವಿಗಳುರೈತರು
ಒಟ್ಟು ಪ್ರೋತ್ಸಾಹಧನರೂ 2 ಕೋಟಿಯವರೆಗೆ 50% ಸಬ್ಸಿಡಿ
National Gokul Mission Scheme 2026

ಯೋಜನೆಯ ಕುರಿತು ಸಂಕ್ಷಿಪ್ತ ಮಾಹಿತಿ :

ಕೇಂದ್ರ ಸರ್ಕಾರವು ರಾಷ್ಟ್ರೀಯ ಗೋಕುಲ್ ಮಿಷನ್ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಒಂದು ಯೋಜನೆಯು ಭಾರತ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಬಹು ನಿರೀಕ್ಷೆಯ ಯೋಜನೆಯಾಗಿದೆ. ಜಾನುವಾರುಗಳ ತಳಿಯನ್ನು ಹೆಚ್ಚಿಸುವುದು ಹಾಗೂ ರೈತರಿಗೆ ಮೂಖ್ಯವಾಗಿ ಮಹಿಳೆಯರಿಗೆ ಪಶುಸಂಗೋಪನೆಯನ್ನು ಮಾಡಿ ಹೆಚ್ಚಿನ ಆದಾಯವನ್ನು ಗಳಿಸುವಂತೆ ಮಾಡವುದು ಈ ಒಂದು ಯೋಜನೆಯ ಮೂಖ್ಯ ಗುರಿಯಾಗಿದೆ.

ಯೋಜನೆಯ ಬೃಹತ್ ಉದ್ದೇಶಗಳು: National Gokul Mission Scheme 2026

  • ಸುಧಾರಿತ ತಳಿಗಳ ಅಭಿವೃದ್ಧಿ ಪಡಿಸುವ ಮೂಲಕ ಹಾಲಿನ ಉತ್ಪಾದನೆಯನ್ನು ಹೆಚ್ಚಿಸುವುದು.
  • ಅಳಿವಿನ ಅಂಚಿನಲ್ಲಿರುವ ಗೋತಳಿಗಳನ್ನು ಸಂರಕ್ಷಣೆ ಮಾಡುವುದು.
  • ಪಶುಸಂಗೋಪನೆ ಮಾಡಿ ಜೀವನ ನಡೆಸುವ ಕುಟುಂಬಗಳ ಆದಾಯವನ್ನು ಹೆಚ್ಚಿಸುವುದು.
  • ರೈತರಿಗೆ ಅಧಿಕ ಹಾಲನ್ನು ನೀಡುವ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿರುವ ಹಸು ಮತ್ತು ಎಮ್ಮೆಗಳು ಸುಲಭವಾಗಿ ಸಿಗುವ ಹಾಗೆ ಮಾಡುವುದು.
  • ಹೈನುಗಾರಿಕೆಯಲ್ಲಿ ಪಶುವೈದ್ಯಕೀಯ ತಂತ್ರಜ್ಞಾನಗಳನ್ನು ಉತ್ತೇಜಿಸುವುದು.

ಇದರಿಂದ ರೈತರಿಗೆ ಏನು ಪ್ರಯೋಜನ?:

  • ಈ ಒಂದು ಯೋಜನೆಯಿಂದಾಗಿ ರೈತರು ಅಧಿಕ ಹಾಲನ್ನು ನೀಡುವ ಹಸುಗಳನ್ನು ಖರೀದಿ ಮಾಡಿ ಹೆಚ್ಚಿನ ಆದಾಯವನ್ನು ಗಳಿಸುವುದು.
  • ಐವಿಎಫ್ ತಂತ್ರಜ್ಞಾನದ ಮೂಲಕ ಖಚಿತ ಗರ್ಭಧಾರಣೆಗೆ ರೂ. 5000 ಗಳನ್ನು ಪ್ರೋತ್ಸಾಹಧನವಾಗಿ ರೈತರಿಗೆ ನೀಡಲಾಗುವುದು.
  • ಲಿಂಗ ವಿಂಗಡಿತ ವೀರ್ಯ ತಂತ್ರಜ್ಞಾನವನ್ನು ಬಳಸುವುದರಿಂದ ಹೆಣ್ಣು ಕರುಗಳೇ ಜನಿಸುವ ಹೆಚ್ಚಿನ ಸಾಧ್ಯತೆ ಇದ್ದು, ಇದರಿಂದ ರೈತರು ರೂ 750 ರ ವರೆಗೆ ಸಬ್ಸಿಡಿ ಪಡೆಯಬಹುದು.
  • ರೈತರು ದೊಡ್ಡ ಮಟ್ಟದ ಹೈನುಗಾರಿಕಾ ಕೇಂದ್ರವನ್ನು ಮಾಡಲು ಇಚ್ಛಿಸಿದರೆ ಸರ್ಕಾರದಿಂದ 2 ಕೋಟಿಯ ವರೆಗೆ 50% ಸಬ್ಸಿಡಿ ಸೌಲಭ್ಯವನ್ನು ಒದಗಿಸಲಾಗುವುದು.

ಈ ಒಂದು ಯೋಜನೆಯಿಂದಾಗಿ ರೈತರು ಎಷ್ಟು ಆದಾಯವನ್ನು ಗಳಿಸಬಹುದು? National Gokul Mission Scheme 2026

ಹಾಲಿನ ಉತ್ಪಾದನಾ ಮಟ್ಟ ಹೆಚ್ಚಳ ಮತ್ತು ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿರುವ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುವ ರೈತರು ಮುಂದಿನ ಮೂರು ವರ್ಷಗಳ ಒಳಗಾಗಿ ವಾರ್ಷಿಕ ಆದಾಯವನ್ನು ರೂ. 21500 ದಿಂದ ರೂ. 60000 ವರೆಗೆ ಗಳಿಸಬಹುದು ಎಂದು ಅಂದಾಜಿಸಲಾಗಿದೆ.

ಅರ್ಹತಾ ಮಾನದಂಡ:

  • ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 200 ಜಾನುವಾರುಗಳನ್ನು ಸಾಕಲು ಸ್ವಂತ ಜಮೀನನ್ನು ಹೊಂದಿರಬೇಕು.
  • ಪಶುಸಂಗೋಪನೆ ಮಾಡಿರುವ ಅನುಭವವನ್ನು ಹೊಂದಿರಬೇಕು.
  • ಪಶುಪಾಲನೆ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು.
  • ಈ ಒಂದು ಯೋಜನೆಗೆ ಯಾವುದೇ ವರ್ಗದ ತಾರತಮ್ಯ ಇಲ್ಲದೆ ಎಲ್ಲ ಡೈರಿಯ ರೈತರು ಅರ್ಜಿ ಸಲ್ಲಿಸಬಹುದು.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ಆದಾಯ ಪ್ರಮಾಣಪತ್ರ
  • ವಾಸಸ್ಥಳ ಪುರಾವೆ
  • ಭೂ ದಾಖಲೆ ವಿವರ
  • ಬ್ಯಾಂಕ್ ಪಾಸ್ ಬುಕ್
  • ಜಾನುವಾರು ನೋಂದಣಿ ಸಂಖ್ಯೆ
  • ಇನ್ನಿತರೇ ದಾಖಲೆಗಳು

ಅರ್ಜಿ ಸಲ್ಲಿಸುವುದು ಹೇಗೆ? National Gokul Mission Scheme 2026

  • ರಾಷ್ಟ್ರೀಯ ಗೋಕುಲ್ ಮಿಷನ್ ಅಧಿಕೃತ ವೆಬ್ಸೈಟ್ https://nlm.udyamimitra.in/ ಗೆ ಭೇಟಿ ನೀಡಿ
  • ಫಾರ್ಮ್ ರಿಜಿಸ್ಟ್ರೇಷನ್ ಮೇಲೆ ಕ್ಲಿಕ್ ಮಾಡಿ
  • ಆಧಾರ್ ಸಂಖ್ಯೆಯನ್ನು ನಮೂದಿಸಿ ಒಟಿಪಿ ಮೂಲಕ ಲಾಗಿನ್ ಆಗಿ ನೀಡಿರುವ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ.
  • ವೈಯಕ್ತಿಕ ಮತ್ತು ಭೂ ದಾಖಲೆಗಳೊಂದಿಗೆ ಅರ್ಜಿಯನ್ನು ಭರ್ತಿಮಾಡಿ ಸಬ್ಮಿಟ್ ಮಾಡಿ ಅಗತ್ಯವಿದ್ದರೆ ಪ್ರಿಂಟ್ ತೆಗೆದುಕೊಳ್ಳಿ.

ಕೊನೆಯ ವಿವರಣೆ :

ರಾಷ್ಟ್ರೀಯ ಗೋಕುಲ್ ಮಿಷನ್ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ರೈತರಿಗೆ ಆರ್ಥಿಕವಾಗಿ ಸಹಾಯಮಾಡಿ ಅವರ ಆದಾಯವನ್ನು ಹೆಚ್ಚಿಸಿ ಪ್ರಗತಿಪರ ದೇಶವನ್ನು ಮಾಡುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಬಯಸುವ ಅಭ್ಯರ್ಥಿಗಳು ಈಗಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.


ಇತರ ಪ್ರಮುಖ ಲಿಂಕುಗಳು :-


Join WhatsApp

Join Now

Join Telegram

Join Now

Leave a Comment