NABARD Bank Recruitment 2026 In Kannada
ಒಟ್ಟು 162 ಹುದ್ದೆಗಳಿಗೆ ಅಧಿಸೂಚನೆಯನ್ನು ಪ್ರಕಟ ಮಾಡಿದ್ದು ಈ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗುತ್ತದೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲೆಗಳೊಂದಿಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಈ ಕೆಳಗೆ ಪ್ರಕಟ ಮಾಡಲಾಗಿದ್ದು ಎಲ್ಲಾ ಮಾಹಿತಿಯನ್ನು ಅಭ್ಯರ್ಥಿಗಳು ಓದಿಕೊಂಡು ಅಲ್ಲಿ ಕೇಳಲಾಗಿರುವಂತ ಮಾಹಿತಿಯನ್ನು ಆನ್ಲೈನ್ ನಲ್ಲಿ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ, ಇದರ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನ ಹಂತ ಹಂತವಾಗಿ ನೀಡಲಾಗಿದೆ ಎಲ್ಲ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ.
NABARD ನಬಾರ್ಡ್ ನೇಮಕಾತಿ 2026
ಗ್ರಾಮೀಣ ಅಭಿವೃದ್ಧಿ ಕೃಷಿ ಹಾಗೂ ಸಂಬಂಧಿತ ಕ್ಷೇತ್ರಗಳ ಬೆಳವಣಿಗೆಗಳ ಅಭಿವೃದ್ಧಿಗೆ ನಬಾರ್ಡ್ ಬ್ಯಾಂಕ್ ಪ್ರಮುಖ ಪಾತ್ರ ವಹಿಸುತ್ತದೆ. ನಬಾರ್ಡ್ ಬ್ಯಾಂಕಿನಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಇದೀಗ ಭರ್ಜರಿ ಅವಕಾಶ ಲಭ್ಯವಾಗಿದ್ದು ಈ ಅವಕಾಶವನ್ನ ಸದುಪಯೋಗ ಪಡಿಸಿಕೊಂಡರೆ ಖಂಡಿತವಾಗಿಯೂ ನಿಮಗೂ ಸಹ ಈ ಬ್ಯಾಂಕಿನಲ್ಲಿ ಕೆಲಸ ಮಾಡಲು ಅವಕಾಶ ಸಿಗುತ್ತದೆ.
ಒಟ್ಟು 162 ಹುದ್ದೆಗಳಿಗೆ ಭಾರತದಾದ್ಯಂತ ಸಾಕಷ್ಟು ಜನರು ಅರ್ಜಿಯನ್ನು ಸಲ್ಲಿಸಲಿದ್ದು ಈ ಹುದ್ದೆಗಳಿಗೆ ಆಯ್ಕೆಯಾದವರಿಗೆ 89,150 ವೇತನವನ್ನು ನೀಡಲಾಗುತ್ತದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03 ಫೆಬ್ರವರಿ 2026
ಇದರ ಬಗ್ಗೆ ಇಲ್ಲಿ ಪೂರ್ತಿ ವಿವರವನ್ನು ನೀಡಲಾಗಿದ್ದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಬಹುದಾಗಿದೆ ಈ ಹುದ್ದೆಯ ಬಗೆಗಿನ ಇನ್ನಷ್ಟು ಮಾಹಿತಿಗಾಗಿ ನಮ್ಮ ವೆಬ್ ಸೈಟ್ ಉದ್ಯೋಗ ಸಲಹೆ ಗೆ ಭೇಟಿ ನೀಡಿ.
ಹುದ್ದೆಯ ಮೇಲ್ನೋಟ :
| ಹುದ್ದೆಯ ಹೆಸರು | ಡೆವಲಪ್ಮೆಂಟ್ ಅಸಿಸ್ಟೆಂಟ್ (ಗ್ರೂಪ್ B) |
| ಇಲಾಖೆ | ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್ಮೆಂಟ್ |
| ಹುದ್ದೆಗಳ ಒಟ್ಟು ಸಂಖ್ಯೆ | 162 |
| ಅರ್ಜಿ ಅನ್ವಯಿಸುವ ಪ್ರಕ್ರಿಯೆ | ಆನ್ಲೈನ್ ಅರ್ಜಿ ಪ್ರಕ್ರಿಯೆ |
ಜಾಬ್ ಬಗ್ಗೆ ಇತರೆ ಮಾಹಿತಿ:
ಸಾಕಷ್ಟು ಜನ ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನದಲ್ಲಿ ಒಂದು ಒಳ್ಳೆ ಉದ್ಯೋಗವನ್ನಾಗಿಟ್ಟಿಸಿಕೊಂಡು ಲೈಫ್ ಸೆಟಲ್ ಮಾಡಿಕೊಳ್ಳಬೇಕು ಅಂತ ಸಾಕಷ್ಟು ಓದುತ್ತಿರುತ್ತಾರೆ ಆದರೆ ಅವರು ಅಂದುಕೊಂಡ ಉದ್ಯೋಗವಕಾಶಗಳು ಸರಳವಾಗಿ ಸಿಗುವುದಿಲ್ಲ.
ಅದಕ್ಕೆ ಅಷ್ಟೇ ಕಷ್ಟಪಟ್ಟು ಓದಬೇಕಾಗುತ್ತದೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ ಇದೀಗ ಇಂತಹ ಒಂದು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ಮಾಡಿಕೊಳ್ಳಲು ಗ್ರಾಮೀಣ ಅಭಿವೃದ್ಧಿ ಕೃಷಿ ಹಾಗೂ ಸಂಬಂಧಿಸಿದ ಕ್ಷೇತ್ರಗಳಿಗೆ ನೇಮಕಾತಿಯನ್ನು ಮಾಡಿಕೊಳ್ಳಲು ನಬಾರ್ಡ್ ಬ್ಯಾಂಕ್ ಮೂಲಕ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದೆ ಡೆವಲಪ್ಮೆಂಟ್ ಅಸಿಸ್ಟೆಂಟ್ ಹುದ್ದೆಗೆ ನೇಮಕಾತಿ ಇದಾಗಿದ್ದು ಇದೊಂದು ಉದ್ಯೋಗ ಆಕಾಂಕ್ಷಿಗಳಿಗೆ ಸುವರ್ಣ ಅವಕಾಶ ಅಂತಾನೆ ಹೇಳಬಹುದು
ಹುದ್ದೆಗೆ ಅರ್ಜಿ ಹಾಕುವವರರು ಹೊಂದಿರಬೇಕಾದ ಶೈಕ್ಷಣಿಕ ಅರ್ಹತೆಗಳೇನು?
ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಮತ್ತು ರೂರಲ್ ಡೆವಲಪ್ಮೆಂಟ್ ಈ ಒಂದು ಸಂಸ್ಥೆಯ ಮೂಲಕ 162 ಗ್ರೂಪ್ ಬಿ ದೆವಲಪ್ಮೆಂಟ್ ಅಸಿಸ್ಟೆಂಟ್ ಹುದ್ದೆಗೆ ನೇಮಕಾತಿಯನ್ನು ಮಾಡಲಾಗುತ್ತಿದ್ದು ಈ ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆಯನ್ನು ನಿಗದಿಪಡಿಸಲಾಗಿದೆ ಹಾಗಾದರೆ ಯಾವ ರೀತಿಯಾದ ಶೈಕ್ಷಣಿಕ ಅರ್ಹತೆ ಬೇಕು ಅನ್ನುವಂತಹ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ಈ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಉದ್ಯೋಗ ಆಕಾಂಕ್ಷಿಗಳು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.
ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ಪದವಿಯನ್ನು ಪಡೆದಿರುವಂತಹ ಅಭ್ಯರ್ಥಿಗಳು
ಪೋಸ್ಟ್ ಗ್ರ್ಯಾಜುಯೇಷನ್ / MBA / PGDM / Ph.D / ಡಿಪ್ಲೊಮಾ ಹೊಂದಿರುವವರೂ ಅರ್ಹರು
ವಯೋಮಿತಿಯ ವಿವರಣೆ :
1 ಜನವರಿ 2026ಕ್ಕೆ ಆಗುವಂತೆ ಈ ವಯಮಿತಿಯನ್ನು ನೀಡಲಾಗಿದ್ದು ಈ ವಯೋಮಿತಿ ನಿಮ್ಮಲ್ಲಿ ಇದ್ದರೆ ನೀವು ಅರ್ಜಿಯನ್ನು ಸಲ್ಲಿಸಲು ಅರ್ಹತೆಯನ್ನು ಪಡೆಯುತ್ತೀರಾ
ಕನಿಷ್ಠ ವಯೋಮಿತಿ 18 ವರ್ಷಗಳು
ಗರಿಷ್ಠ ವಯೋಮಿತಿ 35 ವರ್ಷಗಳು
ವಯೋಮಿತಿ ಸಡಿಲಿಕೆಯ ಒಳನೋಟ :
ವಯೋಮಿತಿ ಸಡಿಲಿಕೆ ವಿವರದ ಬಗ್ಗೆ ನೋಡುವುದಾದರೆ
- OBC: 3 ವರ್ಷ
- SC/ST: 5 ವರ್ಷ
- PwBD (ಸಾಮಾನ್ಯ): 10 ವರ್ಷ
- PwBD (OBC): 13 ವರ್ಷ
- PwBD (SC/ST): 15 ವರ್ಷ
ಅರ್ಜಿ ಶುಲ್ಕದ ವಿವರ:
- ಈ ಕೆಳಗೆ ಅರ್ಜಿ ಶುಲ್ಕದ ವಿವರಗಳನ್ನು ನೀಡಲಾಗಿದ್ದು ಈ ಅರ್ಜಿ ಶುಲ್ಕವನ್ನು ಆನ್ಲೈನ್ ಮುಖಾಂತರ ಪಾವತಿಸಬೇಕಾಗುತ್ತದೆ ನೀವು ಅರ್ಜಿ ಸಲ್ಲಿಸುವ ಸಮಯದಲ್ಲಿ ಈ ಅರ್ಜಿ ಶುಲ್ಕವನ್ನು ಪಾವತಿಸಿ ಮುಂದಿನ ಹಂತಕ್ಕೆ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಲು ಅವಕಾಶವನ್ನು ಕಲ್ಪಿಸಲಾಗುತ್ತದೆ ಈ ಕೆಳಗೆ ಅರ್ಜಿ ಶುಲ್ಕದ ವಿವರವನ್ನು ನೀವು ನೋಡಬಹುದು
| ಸಾಮಾನ್ಯ / OBC | ₹550 |
| SC / ST / PwBD | ₹100 |
ವೇತನ ವಿವರಣೆ:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 44,500 ಇಂದ ಹಿಡಿದು 89,150 ಅವರಿಗೆ ವೇತನವನ್ನು ನಿಗದಿಪಡಿಸಲಾಗಿದೆ
ಇದರ ಜೊತೆಗೆ ಇನ್ನಿತರ ಅಗತ್ಯ ಭತ್ಯೆಗಳನ್ನು ಸಹ ನೀಡಲಾಗುತ್ತಿದ್ದು
- ಡಿಎ
- ಹೆಚ್ ಆರ್ ಎ
- ವೈದ್ಯಕೀಯ ಸೌಲಭ್ಯಗಳು
- ಪಿಂಚಣಿ
- ಎಲ್ ಟಿ ಸಿ
- ಉದ್ಯೋಗ ಭದ್ರತೆ ಇನ್ನಿತರ ಸೌಲಭ್ಯಗಳು ಸಹ ಸಿಗಲಿದೆ
ಅಗತ್ಯ ದಾಖಲೆಗಳು:
ಸಾಮಾನ್ಯ ನಿಯಮಗಳ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಎಲ್ಲ ದಾಖಲೆಗಳನ್ನು ಹೊಂದಿರುವುದು ಅಗತ್ಯ.
- ಶೈಕ್ಷಣಿಕ ಪ್ರಮಾಣಪತ್ರ
- ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಫೋಟೋ
- ಆಧಾರ್ ಕಾರ್ಡ್
- ಅಂಕಪಟ್ಟಿ
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಪಾನ್ ಕಾರ್ಡ್
- ಓಟರ್ ಐಡಿ
ಅರ್ಜಿ ಸಲ್ಲಿಸುವ ವಿಧಾನ:
ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ ನಿಮ್ಮ ಕನಸಿನ ಉದ್ಯೋಗವನ್ನು ಪಡೆದುಕೊಳ್ಳಬೇಕು ಎಂದರೆ ಗೂಗಲ್ ನಲ್ಲಿ ನಬಾರ್ಡ್ ಬ್ಯಾಂಕಿನ ಅಧಿಕೃತ ವೆಬ್ ಸೈಟಿಗೆ https://www.nabard.org/careers-notices1.aspx?cid=693&id=26 ಭೇಟಿ ನೀಡಿ ಉದ್ಯೋಗದ ಕಾಲಂ ಓಪನ್ ಮಾಡಿ ಅಲ್ಲಿ ರಿಜಿಸ್ಟರ್ ಆಗಿ ತಮ್ಮ ಅಗತ್ಯ ದಾಖಲೆಗಳೊಂದಿಗೆ ಲಾಗಿನ್ ಆಗಿ, ನಂತರ ಅಲ್ಲಿ ಕೇಳಿರುವಂತಹ ಸಂಪೂರ್ಣ ವಿವರವನ್ನು ತಪ್ಪಿಲ್ಲದೆ ನಮೂದಿಸಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ, ಅರ್ಜಿ ಶುಲ್ಕವನ್ನು ಪಾವತಿಸಿ, ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು
ಆಯ್ಕೆ ಪ್ರಕ್ರಿಯೆ:
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ವಿವರಗಳನ್ನು ನೋಡುವುದಾದರೆ ಪ್ರಾಥಮಿಕ ಪರಿಚಯ ನಡೆಸಿ ನಂತರ ಮುಖ್ಯ ಪರೀಕ್ಷೆಗೆ ಕರೆಯುತ್ತಾರೆ ನಂತರ ಮುಖ್ಯ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ
ಪ್ರಮುಖ ದಿನಾಂಕಗಳು :-
| ಆನ್‌ಲೈನ್ ನೋಂದಣಿ ಪ್ರಾರಂಭ ದಿನಾಂಕ | 03-02-2026 |
| ಆನ್‌ಲೈನ್ ನೋಂದಣಿ ಕೊನೆಯ ದಿನಾಂಕ | 03-02-2026 |
ಯುಕೋ ಬ್ಯಾಂಕ್ ನೇಮಕಾತಿ 2026 ಅಧಿಸೂಚನೆ ಪ್ರಮುಖ ಲಿಂಕ್‌ಗಳು
| ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
| ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್‌ಸೈಟ್ | https://www.nabard.org/EngDefault.aspx |
ಮುಕ್ತಾಯ ಮಾತು :
ಈ ಹುದ್ದೆಗಳಿಗೆ ಈ ಮೇಲೆ ತಿಳಿಸಿರುವ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಸಂಪೂರ್ಣವಾಗಿ ಓದಿಕೊಂಡು ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿ ಇಟ್ಟುಕೊಂಡು ನಿಗದಿತ ದಿನಾಂಕದ ಒಳಗಾಗಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿ ಅರ್ಜಿ ಶುಲ್ಕವನ್ನು ಪಾವತಿಸಿ ಪರೀಕ್ಷೆಗೆ ಹಾಜರಾಗಿ ಆಯ್ಕೆಯಾದರೆ ನಿಮ್ಮ ಕನಸಿನ ಉದ್ಯೋಗವನ್ನು ಪಡೆದುಕೊಳ್ಳಬಹುದು.







