ಹಲೋ ವಿದ್ಯಾರ್ಥಿಗಳೇ ಎಲ್ಲರಿಗೂ ನಮಸ್ಕಾರ,,, ಮಿಂತ್ರಾ (Myntra) ಕಂಪನಿ ವತಿಯಿಂದ 60,000 ಸಾವಿರದ ಸ್ಕಾಲರ್ಶಿಪ್ ನಿಮಗೆ ಸಿಕ್ತಾ ಇದೆ, ಈ ಸ್ಕಾಲರ್ಶಿಪ್ ನ ಪಡೆಯುವುದಕ್ಕೆ ಬೇಕಾಗಿರುವ ಅರ್ಹತೆ , ಸೇರಿದಂತೆ ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ, ಹೀಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
Myntra Scholarship Application In Kannada
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ತುಂಬಾನೇ ಸಹಕಾರಿಯಾಗಲಿದ್ದು ಈ ವಿದ್ಯಾರ್ಥಿ ವೇತನ ವಿದ್ಯಾರ್ಥಿಗಳಲ್ಲಿ ಇನ್ನಷ್ಟು ವಿದ್ಯಾಭ್ಯಾಸ ಮಾಡುವುದಕ್ಕೆ ಪ್ರೋತ್ಸಾಹ ನೀಡಿದಂತೆ ಆಗುತ್ತದೆ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳಿಗೆ ಮಿಂತ್ರಾ (Myntra) ಕಂಪನಿಯವರು ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದು ಈ ಬಾರಿನೂ ಸಹ ಈ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂದು ನೀಡುತ್ತಿದ್ದಾರೆ ಇದರ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದೆ.
ಮೈಂತ್ರಾ ವಿದ್ಯಾರ್ಥಿವೇತನ 2026:-
ಮಿಂತ್ರಾ (Myntra) ಕಂಪನಿಯು ತನ್ನ ಕಾರ್ಪೊರೇಟರ್ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಸಲುವಾಗಿ ವಿದ್ಯಾರ್ಥಿ ವೇತನವನ್ನು ಜಾರಿಗೆ ತಂದಿದೆ, ಈ ವಿದ್ಯಾರ್ಥಿ ವೇತನವನ್ನು ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬದ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬಹುದು.
ಮಿಂತ್ರಾ (Myntra) ಕಂಪನಿಯ ಬಗ್ಗೆ:-
ಮಿಂತ್ರಾ (Myntra) ಕಂಪನಿ ಭಾರತದ ಅತಿ ದೊಡ್ಡ ಫ್ಯಾಷನ್ ಮತ್ತು ಲೈಫ್ ಸ್ಟೈಲ್ ಈ ಕಾಮರ್ಸ್ ಕಂಪನಿ ಆಗಿದ್ದು, ಬೆಂಗಳೂರಿನಲ್ಲಿ ಇದರ ಪ್ರಧಾನ ಕಚೇರಿ ಹೊಂದಿದೆ ಇದನ್ನು 2007/ 2008ರಲ್ಲಿ ಸ್ಥಾಪಿಸಲಾಗಿದ್ದು 2014ರಲ್ಲಿ ಫ್ಲಿಪ್ಕಾರ್ಟ್ ಸ್ವಾಧೀನ ಪಡಿಸಿಕೊಂಡಿತ್ತು. ಬಟ್ಟೆ, ಪಾದರಕ್ಷೆಗಳು ಮತ್ತು ಇನ್ನಿತರ ಪರಿಕರಗಳು ಉತ್ಪನ್ನಗಳನ್ನು ಮಾರಾಟ ಮಾಡುವಂತಹ ಸಂಸ್ಥೆ ಇದಾಗಿದ್ದು ಫ್ಯಾಶನ್ ಉತ್ಪನ್ನಗಳನ್ನು ವೇಗವಾಗಿ ವಿತರಣೆಮಾಡುವುದಕ್ಕೆ ಎಂ ಎಕ್ಸ್ಪ್ರೆಸ್ (M-Express) ಸೇವೆಯನ್ನು ಒದಗಿಸಿದಂತ ಕೀರ್ತಿ ಈ ಸಂಸ್ಥೆಗೆ ಇದೆ.
ಮಿಂತ್ರಾ (Myntra) ಕಂಪನಿ ವಿದ್ಯಾರ್ಥಿ ವೇತನದ ಬಗ್ಗೆ:-
ಹಳ್ಳಿ ಪ್ರದೇಶದಲ್ಲಿ ಬಡ ವಿದ್ಯಾರ್ಥಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದಂತ ವಿದ್ಯಾರ್ಥಿಗಳಿಗೆ 60 ಸಾವಿರದವರೆಗೆ ವಿದ್ಯಾರ್ಥಿ ವೇತನವನ್ನು ನೀಡುವಂತಹ ಒಂದು ಉದ್ದೇಶದಿಂದ ಮಿಂತ್ರಾ (Myntra) ಕಂಪನಿಯು ತಂದಿರುವಂತ ಒಂದು ಹೊಚ್ಚಹೊಸ ಯೋಜನೆ ಇದಾಗಿದೆ ಈ ಯೋಜನೆಗೆ ಈ ಕೆಳಗೆ ಯಾರು ಆ ಅರ್ಹತೆಯನ್ನು ಪಡೆಯುತ್ತಾರೆ? ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿದ್ಯಾರ್ಥಿ ವೇತನದ ಮೊತ್ತ? ಹೀಗೇ ಎಲ್ಲಾ ಮಾಹಿತಿಯನ್ನು ನೀಡಲಾಗಿದೆ.

ವಿಶೇಷ ಸೂಚನೆ :-
ಗಾರ್ಮೆಂಟ್ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಒಂಟಿ ತಾಯಂದಿರ ಮಕ್ಕಳಿಗೆ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಉನ್ನತ ಶೈಕ್ಷಣಿಕ ಆಶಾಕಿರಣವಾದ ವಿದ್ಯಾರ್ಥಿ ವೇತನ:-
ಹೌದು ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮಾಡಲು ಆರ್ಥಿಕವಾಗಿ ಈ ವಿದ್ಯಾರ್ಥಿ ವೇತನ ಸಹಾಯವಾಗುತ್ತದೆ ಬಡ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾಭ್ಯಾಸದಲ್ಲಿ ಹೆಚ್ಚು ಪರಿಣಿತಿ ಹೊಂದಿರುವಂತಹ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಈ ವಿದ್ಯಾರ್ಥಿ ವೇತನ ತುಂಬಾನೇ ಸಹಕಾರಿಯಾಗಿದ್ದು ಇಂತಹ ವಿದ್ಯಾರ್ಥಿಗಳನ್ನು ಮುಂದಿಟ್ಟುಕೊಂಡು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಗಳು ಕೆಲವು ಮೂಲಭೂತ ಷರತ್ತುಗಳನ್ನ ಹೊಂದಿರಬೇಕಾಗುತ್ತದೆ
- ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ, ದ್ವಿತೀಯ ಪಿಯುಸಿಯಲ್ಲಿ 60 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಬೇಕು
- ಮಾನ್ಯತೆ ಪಡೆದ ಸಂಸ್ಥೆಯಿಂದ ಅಥವಾ ವಿಶ್ವ ವಿದ್ಯಾನಿಲಯದಿಂದ ಬಿಎ , ಬಿಎಸ್ಸಿ, ಬಿಕಾಂ, ಬಿಬಿಎ, ಬಿಸಿಎ ಅಥವಾ ಇಂಜಿನಿಯರಿಂಗ್ ಟೆಕ್ ನಂತಹ ತಾಂತ್ರಿಕ ಕೋರ್ಸ್ ಗಳಿಗೆ ಪ್ರವೇಶವನ್ನು ಪಡೆದಿರುವಂತ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು
- ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮಾತ್ರ ಅರ್ಹತೆ
- ಕುಟುಂಬದ ವಾರ್ಷಿಕ ಆದಾಯವು 5 ಲಕ್ಷಕ್ಕಿಂತ ಕಡಿಮೆ ಇರಬೇಕು
- ಅರ್ಜಿದಾರರ ಪೋಷಕರು ಗೌರ್ಮೆಂಟ್ ಉದ್ಯಮದಲ್ಲಿ ಸರ್ಕಾರಿ ಉದ್ಯಮದಲ್ಲಿ ಪೂರ್ಣಕಾಲಿಕ ಕೆಲಸಗಾರರಾಗಿರಬೇಕು
- ಹಾಗೂ ಇನ್ನಿತರ ಅಗತ್ಯ ಅರ್ಹತೆಗಳನ್ನು ಹೊಂದಿರುವ ವಿದ್ಯಾರ್ಥಿಗಳು ಈ ಯೋಜನೆಯ ಲಾಭವನ್ನು ಈ ವಿದ್ಯಾರ್ಥಿ ವೇತನದ ಲಾಭವನ್ನು ಪಡೆಯಬಹುದು.
ವಿದ್ಯಾರ್ಥಿವೇತನದ ವಿವರಣೆ :-
ಈ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಮಿಂತ್ರಾ (Myntra) ಕಂಪನಿಯಿಂದ 3 ವರ್ಷಗಳ ಕಾಲ ವಾರ್ಷಿಕವಾಗಿ 20 ಸಾವಿರದಂತೆ ಒಟ್ಟು 60,000 ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳುತ್ತಾರೆ, ಈ ವಿದ್ಯಾರ್ಥಿ ವೇತನವನ್ನು ಪುಸ್ತಕ ಸೇರಿದಂತೆ ಇನ್ನಿತರ ಶಿಕ್ಷಣಕ್ಕೆ ಸಂಬಂಧಿಸಿದ ವಸ್ತುಗಳನ್ನು ಖರೀದಿ ಮಾಡಲು ವ್ಯಯಿಸಬಹುದು.
ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು:-
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಸಿಗ್ನೇಚರ್
- ಪ್ರವೇಶ ಪತ್ರ
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- 10ನೇ ತರಗತಿಯ ಅಂಕಪಟ್ಟಿ
- 12ನೇ ತರಗತಿಯ ಅಂಕಪಟ್ಟಿ
- ಕಾಲೇಜಿಗೆ ಸೇರ್ಪಡೆಯಾದ ಪುರಾವೆಯ ದಾಖಲೆಗಳು
- ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ಪೋಷಕರ ವೃತ್ತಿಪರ ಪುರಾವೆ (ಅವರ ಪ್ರಸ್ತುತ ಉದ್ಯೋಗ ಸ್ಥಿತಿಯನ್ನು ಸೂಚಿಸುತ್ತದೆ)
- ಗಾರ್ಮೆಂಟ್ ಕಾರ್ಮಿಕರಿಗೆ ಪೋಷಕರ ನೇಮಕಾತಿ ಪತ್ರ ಅಥವಾ ಕಂಪನಿ ಗುರುತಿನ ಚೀಟಿ, ಮತ್ತು ಕುಶಲಕರ್ಮಿ ಕುಟುಂಬಗಳಿಗೆ ಸಾಂಪ್ರದಾಯಿಕ ಕುಶಲಕರ್ಮಿಗಳೆಂದು ಪ್ರಮಾಣೀಕರಿಸುವ ಸಂಬಂಧಿತ ಪ್ರಾಧಿಕಾರದಿಂದ ನೀಡಲಾದ ಪ್ರಮಾಣಪತ್ರ.
ವಿದ್ಯಾರ್ಥಿವೇತನದ ಪ್ರಯೋಜನಗಳು:
- ವಿದ್ಯಾರ್ಥಿಗಳಿಗೆ ೩ ವರ್ಷಗಳಕಾಲ ವಿದ್ಯಾಭ್ಯಾಸಕ್ಕೆ ಯಾವುದೇ ಅಡೆತಡೆ ಇಲ್ಲದೆ ವಿದ್ಯಾಭ್ಯಾಸ ಮುಂದುವರಿಸಬಹುದು.
- ಉನ್ನತ ಶಿಕ್ಷಣಕ್ಕೆ ಪ್ರೋತ್ಸಹ
ಅರ್ಜಿ ಸಲ್ಲಿಸಲು ವಿವಿಧ ಹಂತಗಳು :-
ವಿದ್ಯಾರ್ಥಿಗಳಿಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದ್ದು ಅರ್ಜಿ ಸಲ್ಲಿಸುವ ಸುಲಭ ವಿಧಾನವನ್ನ ಈ ಕೆಳಗೆ ನೀಡಲಾಗಿದೆ.
- ಮಿಂತ್ರಾ (Myntra) ಕಂಪನಿಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ
- ಸ್ಕಾಲರ್ಶಿಪ್ ಆನ್ಲೈನ್ ಅಪ್ಲಿಕೇಶನ್ (Scholarship Online Application)ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಅರ್ಜಿ ಸಲ್ಲಿಸುವ ಅಪ್ಲಿನೋ (Apply Now) ಬಟನ್ ಇರುತ್ತದೆ ಅದನ್ನು ಒತ್ತಿ ಕ್ರಿಯೇಟ್ ಅಕೌಂಟ್ (Create an Account)ಮೇಲೆ ಕ್ಲಿಕ್ ಮಾಡಿ
- ಅಗತ್ಯ ವಿವರವನ್ನು ಭರ್ತಿ ಮಾಡಿ ಖಾತೆಗೆ ಲಾಗಿನ್ ಆದ ನಂತರ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ
- ಅಲ್ಲಿ ಕೇಳಿರುವಂತಹ ಸಂಪೂರ್ಣ ಮಾಹಿತಿಯನ್ನು ತಪ್ಪದೆ ಬರ್ತಿ ಮಾಡಿ
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮಿಟ್ (Submit) ಮಾಡಿ
- ಸಬ್ಮಿಟ್ ಮಾಡಿದ ನಂತರ ಬಂದಿರುವ ಅಂತಿಮ ಪ್ರತಿಯನ್ನು ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಿ
ಪ್ರಮುಖ ಲಿಂಕುಗಳು:
| ಅಧಿಕೃತ ವೆಬ್ಸೈಟ್ ಲಿಂಕು:- | ಇಲ್ಲಿ ಕ್ಲಿಕ್ ಮಾಡಿ |
| ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಲಿಂಕು | ಇಲ್ಲಿ ಕ್ಲಿಕ್ ಮಾಡಿ |
ಗಮನಿಸಿ:-
| ಪೂರ್ಣ ಸಮಯದ ಪದವಿ ಕೋರ್ಸ್‌ಗಳಿಗೆ ದಾಖಲಾದ ವಿದ್ಯಾರ್ಥಿಗಳಿಗೆ 3 ವರ್ಷಗಳವರೆಗೆ ನವೀಕರಿಸಬಹುದಾಗಿದೆ, ನಂತರದ ವರ್ಷಗಳವರೆಗೆ ಕಾರ್ಯಕ್ರಮದ ಮುಂದುವರಿಕೆ, ಶೈಕ್ಷಣಿಕ ಕಾರ್ಯಕ್ಷಮತೆ ಮತ್ತು ನವೀಕರಣ ಮಾನದಂಡಗಳ ನೆರವೇರಿಕೆಗೆ ಒಳಪಟ್ಟಿರುತ್ತದೆ. |
ಅಂತಿಮ ಮಾತು:
ಮಿಂತ್ರಾ (Myntra) ಕಂಪನಿ ನೀಡುತ್ತಿರುವ ವಿದ್ಯಾರ್ಥಿವೇತನ ಕಾರ್ಯಕ್ರಮವು ಮಿಂತ್ರಾ (Myntra) ಕಂಪನಿಯ ಸಿ ಆರ್ ಮತ್ತು ಸುಸ್ಥಿರದ ವಿಭಾಗವಾದ ಮಿಂತ್ರಕೋರ್ಸಿನ ಒಂದು ಉಪಕ್ರಮವಾಗಿರುತ್ತದೆ ಇದನ್ನು ಗೌರ್ಮೆಂಟ್ ಕಾರ್ಮಿಕರು ಮತ್ತು ಕುಶಲಕರ್ಣಿಗಳ ಕುಟುಂಬಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಆರ್ಥಿಕ ನೆರವು ನೀಡುವ ಮೂಲಕ ಸಬಲೀಕರಣ ಗೊಳಿಸುವಂತಹ ಉದ್ದೇಶದಿಂದ ಈ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು ಈ ಮೇಲೆ ತಿಳಿಸಿರುವ ಅಗತ್ಯ ದಾಖಲೆಗಳೊಂದಿಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಸಹ ತಿಳಿದುಕೊಳ್ಳಬಹುದು.
ಇದನ್ನು ಓದಿರಿ :- ಉನ್ನತ ಶಿಕ್ಷಣಕ್ಕೆ ಆಶಾಕಿರಣವಾದ ವಿದ್ಯಾರ್ಥಿವೇತನ






