ಕರ್ನಾಟಕ ರಾಜ್ಯದ ರೈತರು ತಿಳಿದುಕೊಳ್ಳಲೇ ಬೇಕಾದ ಸರ್ಕಾರಿ ಯೋಜನೆ ಇದು. ಯಾಕೆ ಗೊತ್ತಾ ? ಕೃಷಿ ಚಟುವಟಿಕೆಯ ಜೊತೆಗೆ ಅತಿ ಹೆಚ್ಚಿನ ಲಾಭದಾಯಕ ಕೃಷಿ ಚಟುವಟಿಯಾದ ಅಣಬೆ ಕೃಷಿ ಮಾಡಲು ಸರ್ಕಾರ ಇದೀಗ ಬಂಪರ್ ಕೊಡುಗೆಯನ್ನು ಕೊಟ್ಟಿದ್ದೆ. ಹೌದು ಕಡಿಮೆ ಜಾಗದಲ್ಲಿ ಲಕ್ಷ ಲಕ್ಷ ವ್ಯವಹಾರ. ಸರ್ಕಾರ ನಿಮಗೆ ಕೊಡುವ ಬಂಡವಾಳದ ಮೊತ್ತ ಕೇಳಿದರೆ ಶಾಕ್ ಆಗೋದು ಗ್ಯಾರೆಂಟಿ!
Mushroom Farming In Kannada
ಇಂದಿನ ಕಾಲದಲ್ಲಿ ಗ್ರಾಮೀಣ ಭಾಗದ ಜನರು ತಮ್ಮ ಆದಾಯದ ಮೂಲವಾದ ಕೃಷಿ ಚಟುವಟಿಕೆಯನ್ನು ಬಿಟ್ಟು ನಗರ ಭಾಗಗಳಿಗೆ ಉದ್ಯೋಗವನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ. ಹಾಗೆಯೇ ಕೆಲವು ನಗರ ಭಾಗದಲ್ಲಿನ ಕೆಲವೇ ಕೆಲವು ಜನಸಾಮಾನ್ಯರು ಅಲ್ಪಸಲ್ಪ ಜಾಗದಲ್ಲಿ ಈ ಅಣಬೆ ಕೃಷಿಯನ್ನ ಮಾಡಿ ಅತಿಹೆಚ್ಚಿನ ಲಾಭವನ್ನ ಗಳಿಸುತ್ತಿದ್ದಾರೆ.
ಗ್ರಾಮೀಣ ಭಾಗದ ಜನತೆಗೆ ಏನು ಗೊತ್ತು, ಕೃಷಿ ಎಂದರೆ ಬರಿ ಮಳೆ, ಬಿಸಿಲಿನಲ್ಲಿ ದುಡಿಯುವುದಲ್ಲ ಸ್ಮಾರ್ಟ್ ಆಗಿ ಯೋಚಿಸಿ ಮನೆಯಲ್ಲೆ ಕುರಿತು ಅಣಬೆ ಕೃಷಿಯನ್ನ ಮಾಡಿ ಕೈ ತುಂಬಾ ದುಡ್ಡನ್ನ ಇಂದಿನ ಕಾಲದಲ್ಲೂ ಮಾಡಬಹುದು ಎಂದು.
ಅಣಬೆ ಸಾಕಾಣಿಕೆಗೆ ಸರ್ಕಾರದಿಂದ 30 ಲಕ್ಷ
ಆತ್ಮೀಯ ರೈತ ಬಾಂಧವರೇ,,, ಇಂದಿನ ದಿನಗಳಲ್ಲಿ ಹೋಟೆಲ್ ಹಾಗೆ ಮಾರುಕಟ್ಟೆಯಲ್ಲಿ ಅಣಬೆಗೆ ಬಾರಿ ಡಿಮ್ಯಾಂಡ್ ಇದೆ. “ಇಂದೇ ಶುರು ಮಾಡಿ, ಕೃಷಿ ಚಟುವಟಿಕೆಯೊಂದಿಗೆ ಅಣಬೆ ಕೃಷಿ”. ಬಂಡವಾಳದ ಚಿಂತೆ ನಿಮಗೆ ಬೇಡ ಸರ್ಕಾರವೇ 30,000 ಅಲ್ಲ 30 ಲಕ್ಷ ದವರೆಗೆ ಸಾಲ +ಸಬ್ಸಿಡಿಯನ್ನು ಕೊಡುತ್ತೆ.
ನೀವು ಹೊಸದಾಗಿ ಏನಾದರೂ ಬಿಸಿನೆಸ್ ಮಾಡಬೇಕು ಎನ್ನುವ ಯೋಚನೆಯಲ್ಲಿದ್ದರೆ ಈ ಅಣಬೆ ಕೃಷಿಯನ್ನ ಆರಾಮವಾಗಿ ಮಾಡಿ. ಯಾಕೆಂದರೆ ಕೋಳಿ ಚಿನ್ನದ ಮೊಟ್ಟೆ ಇಡುತ್ತದೋ ಇಲ್ಲವೋ ಗೊತ್ತಿಲ್ಲ ಆದರೆ ಈ ಅಣಬೆ ಕೃಷಿ ಇಂದ ಚಿನ್ನದ ಮೊಟ್ಟೆಯನ್ನ ನೀವು ಖರೀದಿ ಮಾಡೋದಂತೂ ಹೌದು.
ಮುಖ್ಯವಾಗಿ ಇತ್ತ ಗಮನಿಸಿ :-
ಈ ಕೃಷಿ ನೀವು ಆರಂಭಿಸಲು ನಿಮ್ಮ ಜೇಬಿನಲ್ಲಿ ದುಡ್ಡು ಇರಲೇಬೇಕಂತೇನಿಲ್ಲ, ರಾಜ್ಯ ಮತ್ತು ಕೇಂದ್ರ ಸರ್ಕಾರ ಬರೋಬ್ಬರಿ 90% ವರೆಗೆ ಸಬ್ಸಿಡಿಯನ್ನ ರಾಜ್ಯದ ಪ್ರತಿಯೊಬ್ಬ ರೈತನಿಗೂ ಕೊಡುತ್ತದೆ.
ಯೋಜನೆಯ ಅವಲೋಕನ :-
| ಯೋಜನೆಯ ಹೆಸರು | ಅಣಬೆ ಕೃಷಿ ಯೋಜನೆ 2026 |
| ಅರ್ಜಿ ಸಲ್ಲಿಸುವ ವಿಧಾನ | ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ವಿಧಾನಗಳಲ್ಲಿ ಅರ್ಜಿ ಸಲ್ಲಿಸುವ ಅವಕಾಶ |
| ಸಿಗುವ ಬಂಡವಾಳದ ಮೊತ್ತ | ಗರಿಷ್ಠ ₹20 ಲಕ್ಷದಿಂದ ₹30 ಲಕ್ಷದವರೆಗೆ ಆರ್ಥಿಕ ನೆರವು |
| ಸಬ್ಸಿಡಿ | ಶೇ. 70 ರಿಂದ 90 ರಷ್ಟು ಸಬ್ಸಿಡಿ |
“ಈ ಅಣಬೆ ಕೃಷಿ ಯೋಜನೆಗೆ ಇದೀಗ ಸರ್ಕಾರ ಆನ್ಲೈನ್ ಮತ್ತು ಆಫ್ಲೈನ್ ಅರ್ಜಿಯನ್ನು ಆರಂಭಿಸಿದ್ದು ಅಭ್ಯರ್ಥಿಗಳು ನಿಗದಿಪಡಿಸಲಾದ ಅಂತಿಮ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಿ”.
ಕರ್ನಾಟಕದ ರೈತರಿಗೆ ಅಣಬೆ ಕೃಷಿ ಮಾಡಲು ಸರ್ಕಾರಗಳು ನಾಲ್ಕು ಯೋಜನೆಯನ್ನು ಸಿದ್ಧಪಡಿಸಿದೆ. ಯೋಜನೆಗಳು ಯಾವುವು ? ಎಷ್ಟು ಸಬ್ಸಿಡಿ ಸಿಗುತ್ತೆ ? ಈ ಕೆಳಗಿದೆ ಕಂಪ್ಲೀಟ್ ವಿವರ..
ಕರ್ನಾಟಕದಲ್ಲಿ ಅಣಬೆ ಕೃಷಿ ಮಾಡಲು ಬಯಸುವವರಿಗೆ ಸರ್ಕಾರವು ಈ ಕೆಳಗಿನ ನಾಲ್ಕು ಪ್ರಮುಖ ಯೋಜನೆಗಳ ಮೂಲಕ ಆರ್ಥಿಕ ನೆರವಿನ ಜೊತೆಗೆ ತರಬೇತಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುತ್ತವೆ.
1. ರಾಷ್ಟ್ರೀಯ ತೋಟಗಾರಿಕೆ ಮಿಷನ್ (NHM) :-
ಕೆಲವು ರೈತರು ಮೊದಲ ಬಾರಿ ಈ ಅಣಬೆ ಕೃಷಿಯನ್ನು ಸಣ್ಣದಾಗಿ ಆರಂಭಿಸಲು ಯೋಚಿಸುತ್ತಾರೆ. ಅಂತವರಿಗೆ ತೋಟಗಾರಿಕೆ ಇಲಾಖೆ ಸಬ್ಸಿಡಿ ಯೋಚನೆ ಬೆಸ್ಟ್ ಅಂತಾನೆ ಹೇಳಬಹುದು. ಯಾಕೆಂದರೆ ಇದು ಕಡಿಮೆ ವೆಚ್ಚದ ಅಣಬೆ ಉತ್ಪಾದನಾ ಯೋಜನೆ ಅಡಿ ಸಹಾಯಧನವನ್ನು ರೈತರು ಪಡೆಯಬಹುದು.
ಯಾವ ವರ್ಗಕ್ಕೆ ಎಷ್ಟು ಬಂಡವಾಳ ಸಿಗುತ್ತೆ, ಹಾಗೇನೇ ಸಬ್ಸಿಡಿ ಎಷ್ಟು :
- ಪರಿಶಿಷ್ಟ ಜಾತಿ/ಪಂಗಡ (SC/ST) ಅಭ್ಯರ್ಥಿಗಳಿಗೆ ಈ ಯೋಜನೆ ಅಡಿಯಲ್ಲಿ ಸುಮಾರು 70 ರಿಂದ 90 ರಷ್ಟು ಸಬ್ಸಿಡಿ !. ಸರ್ಕಾರ ನೀಡುವ ಪ್ರತಿಯೊಂದು ಯೋಜನೆಗಳಲ್ಲಿಯೂ ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ ಅತಿಹೆಚ್ಚಿನ ಸಬ್ಸಿಡಿಯನ್ನ ನೀಡುತ್ತಾ ಬಂದಿದೆ. ಅದೇ ರೀತಿ ಈ ಅಣಬೆ ಕೃಷಿ ಯೋಜನೆಯಲ್ಲಿಯೂ ಅತಿ ಹೆಚ್ಚಿನ ಸಾಲದ ಮೊತ್ತದ ಜೊತೆಗೆ ಸಬ್ಸಿಡಿ ಪಡೆಯಬಹುದು.
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಸುಮಾರು 40 % ಇಂದ 50% ರಷ್ಟು ಸಬ್ಸಿಡಿ ದೊರೆಯುತ್ತದೆ.
- ಅಣಬೆ ಕೃಷಿ ಘಟಕದ ನಿರ್ಮಾಣಕ್ಕೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ (NHM) ಯೋಜನೆ ಅಡಿ ಎರೆಡು ವರ್ಗಕ್ಕೂ ಸುಮಾರು ₹1.5 ಲಕ್ಷದಿಂದ ₹3, ಲಕ್ಷದ ವರೆಗೆ ಸಾಲ ಸಿಗುತ್ತದೆ.
ರಾಷ್ಟ್ರೀಯ ತೋಟಗಾರಿಕೆ ಮಂಡಳಿ (NHB) ಯೋಜನೆ :-
ಅಣಬೆ ಕೃಷಿ ಬಿಸಿನೆಸ್ ಅತಿ ದೊಡ್ಡ ಮಟ್ಟದಲ್ಲಿ ಮಾಡಬೇಕೆಂದು ಇಚ್ಛಿಸುವ ಅಭ್ಯರ್ಥಿಗಳು ರಾಷ್ಟ್ರೀಯ ತೋಟಗಾರಿಕೆ ಮಂಡಳಿ (ಎನ್ ಹೆಚ್ ಬಿ) ಯೋಜನೆಗೆ ಅರ್ಜಿ ಸಲ್ಲಿಸುವುದು ನನ್ನ ಪ್ರಕಾರ ಉತ್ತಮ.
- ರೈತರು ಯೋಜನೆ ಅಡಿಯಲ್ಲಿ ಪಡೆಯುವ ಸಬ್ಸಿಡಿ : ಇದು ವಾಣಿಜ್ಯ ಮಟ್ಟದಲ್ಲಿ ಅಡಬೆ ಬೆಳೆಯುವವರಿಗೆ ಸೂಕ್ತವಾಗಿರುವುದರಿಂದ ಎಲ್ಲಾ ವರ್ಗಕ್ಕೂ ಸಮಾನವಾಗಿ 40ರಷ್ಟು ಸಬ್ಸಿಡಿ ಸಿಗುತ್ತದೆ.
- ಸರ್ಕಾರದಿಂದ ಸಿಗುವ ಮೊತ್ತ : ಸುಮಾರು ₹30 ಲಕ್ಷದವರೆಗೆ ಸರ್ಕಾರದಿಂದ ರೈತರು ರಾಷ್ಟ್ರೀಯ ತೋಟಗಾರಿಕೆ ಇಲಾಖೆ ಮಂಡಳಿ ಯೋಜನೆ ಅಡಿಯಲ್ಲಿ ಬಂಡವಾಳವನ್ನು ಪಡೆಯಬಹುದು.
ಪಿಎಂಎಫ್‌ಎಂಇ (PMFME) ಯೋಜನೆ :–
ಸರ್ಕಾರದ ಈ ಯೋಜನೆ ಅಡಿಯಲ್ಲಿ ಅಣಬೆ ಸಂಸ್ಕರಣೆ ,ಪ್ಯಾಕಿಂಗ್ ಮತ್ತು ಮೌಲ್ಯವರ್ಧನೆ ಘಟಕವನ್ನ ಸ್ಥಾಪಿಸಲು ಈ ಯೋಜನೆ ಅಡಿ ಸುಮಾರು 35% ರಷ್ಟು ಸಬ್ಸಿಡಿ ಸಿಗುತ್ತದೆ. ಇದು ಅಣಬೆಯಿಂದ ಉಪ್ಪಿನಕಾಯಿ, ಪೌಡರ್ ಅಥವಾ ಒಣಗಿಸಿದ ಅಣಬೆ ವ್ಯಾಪಾರ ಮಾಡುವವರಿಗೆ ಈ ಯೋಜನೆ ಪೂರಕವಾಗಿರುತ್ತದೆ.
- ಸರ್ಕಾರದಿಂದ ಸಿಗುವ ಮೊತ್ತ : ₹10 ಲಕ್ಷದಿಂದ ಸುಮಾರು ₹15 ಲಕ್ಷದವರೆಗೆ ಈ ಯೋಜನೆ ಅಡಿ ಬಂಡವಾಳವನ್ನು ಸರ್ಕಾರದಿಂದ ಪ್ರತಿಯೊಬ್ಬ ರೈತರು ಕೂಡ ಪಡೆಯಬಹುದು.
ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಯೋಜನೆ (CMEGP) :–
ಆತ್ಮೀಯರೇ ಗ್ರಾಮೀಣ ಪ್ರದೇಶದಲ್ಲಿರುವ ನಿರುದ್ಯೋಗಿ ಯುವಕರು ಅಣಬೆ ಕೃಷಿಯನ್ನ ಸ್ವಯಂ ಉದ್ಯೋಗವಾಗಿ ಪ್ರಾರಂಭಿಸಲು ಈ ಒಂದು ಯೋಜನೆ ಅಡಿ ಸಾಲ ಮತ್ತು ಸಹಾಯಧನ ಪಡೆಯಬಹುದು. ಇದರಲ್ಲಿ ಸ್ಥಳೀಯ ಮತ್ತು ವರ್ಗದ ಆಧಾರದ ಮೇಲೆ ಶೇಕಡಾ 25% ರಿಂದ ಶೇಕಡ 35% ರಷ್ಟು ಸಬ್ಸಿಡಿ ಸಿಗುತ್ತದೆ. ಇನ್ನೂ ನಿಮಗೆ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕೈಗಾರಿಕೆ (DIC) ಮತ್ತು ವಾಣಿಜ್ಯ ಇಲಾಖೆಯನ್ನು ಸಂಪರ್ಕಿಸಬಹುದು.
- ಗ್ರಾಮೀಣ ಪ್ರದೇಶದಲ್ಲಿ: ಶೇ. 35% ಸಬ್ಸಿಡಿ.
- ನಗರ ಪ್ರದೇಶದಲ್ಲಿ: ಶೇ. 25% ಸಬ್ಸಿಡಿ.
ಅರ್ಜಿ ಸಲ್ಲಿಸಲು ನಿಮ್ಮಲ್ಲಿ ಇರಬೇಕಾದ ದಾಖಲೆಗಳು :-
ಇದೇ ತಕ್ಷಣ ದಾಖಲೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ
- ವೋಟರ್ ಐಡಿ
- ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್
- ಜಾಗದ ಪಹಣಿ (RTC) ಅಥವಾ ಬಾಡಿಗೆ ಒಪ್ಪಂದದ ಪತ್ರ
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ಪಾಸ್ವರ್ಡ್ ಅಳತೆಯ ಫೋಟೋ
- ಜಾತಿ ಪ್ರಮಾಣ ಪತ್ರ
- ಯೋಜನಾ ವರದಿ (Project Report – ಇದು ಬಹಳ ಮುಖ್ಯವಾಗಿರುತ್ತದೆ)
ನೀವು ಯೋಜನೆ ಇಂದ ಪಡೆಯುವ ಅನುಕೂಲದ ಅರಿವು ನಿಮಗಿದೆಯೇ :-
- ನೀವು ಅಣಬೆ ಬೆಳೆಯುವ ಘಟಕವನ್ನು ಆರಂಭಿಸಲು ನೂರು ರೂಪಾಯಿನಷ್ಟು ಖರ್ಚು ಮಾಡಿದರೆ ಅದರಲ್ಲಿ ಸರ್ಕಾರವೇ ಸುಮಾರು 40 ರಿಂದ 50 ರೂಪಾಯಿನಷ್ಟು ಹಣವನ್ನ ಬರಿಸುತ್ತದೆ ಇದರಿಂದ ಅಣಬೆ ಕೃಷಿಗೆ ನಿಮ್ಮ ಕೈಯಿಂದ ಹಾಕುವ ಹಣವು ಕಡಿಮೆಯಾಗಿರುತ್ತದೆ.
- ಅಣಬೆ ಕೃಷಿ ಮಾಡಲು ಎಕರೆ ಗಟ್ಟಲೆ ಜಮೀನು ಇರಬೇಕಂತೆನಿಲ್ಲ ರೈತರ ಬಳಿ ಸ್ವಲ್ಪ ಪ್ರಮಾಣದಲ್ಲಿ ಜಾಗವಿದ್ದರೆ ಸಾಕು ಸಣ್ಣ ಶಡ್ ನಿರ್ಮಿಸಿ ಬೇರೆ ಕೃಷಿ ಚಟುವಟಿಕೆಯಲ್ಲಿ ಗಳಿಸುವ ಲಾಭಕ್ಕಿಂತ ಅಣಬೆ ಕೃಷಿಯಲ್ಲಿ ಅತಿಹೆಚ್ಚಿನ ಲಾಭವನ್ನು ರೈತರು ಪಡೆಯಬಹುದು.
- ಬೇರೆ ಬೆಳೆಗಳನ್ನು ಬಿತ್ತನೆ ಮಾಡು ಬಿತ್ತನೆ ಮಾಡಿ ತಿಂಗಳಗಟ್ಟಲೆ ನೀವು ಕಾಯಬೇಕಾಗುತ್ತದೆ ಆದರೆ ಅಣಬೆ ಕೃಷಿ ಮಾತ್ರ ಕೇವಲ 25 ರಿಂದ 30 ದಿನದಲ್ಲಿ ಫಸಲನ್ನು ನೀಡುತ್ತದೆ. ಈ ಕಾರಣದಿಂದ ಪ್ರತಿ ತಿಂಗಳು ನೀವು ಹಣವನ್ನು ಕೈ ತುಂಬ ಎಣಿಸಬಹುದು.
- ಸಣ್ಣದಾಗಿ ಮನೆಗೆಲ್ಲ ಖುಷಿಯನ್ನು ಮಾಡಲು ಪುರುಷರೇ ಬೇಕಂತೇನಿಲ್ಲ ಮನೆಯಲ್ಲಿರುವ ಸಾಧಾರಣ ಹೆಣ್ಣು ಕೂಡ ಗೌರವ ಯುತವಾಗಿ ಸ್ವಂತ ಉದ್ಯೋಗ ಮಾಡಬಹುದು.
- ನೀವು ಹೊಸದಾಗಿ ಈ ಯೋಜನೆಯ ಮಾಡಲು ಯೋಚಿಸಿದರೆ ತರ್ಕದಿಂದಲೇ ಉಚಿತವಾಗಿ ಅಣಬೆ ಕೃಷಿ ಬೆಳೆಯುವುದು ಹೇಗೆ ? ರೋಗ ಬಾರದಂತೆ ತಡೆಯುವುದು ಹೇಗೆ ? ಹಲವಾರು ರೀತಿಯಲ್ಲಿ ತರಬೇತಿಯನ್ನ ಉಚಿತವಾಗಿ ಸರ್ಕಾರವೇ ಕೊಡುತ್ತದೆ.
ಅರ್ಜಿ ಸಲ್ಲಿಸುವ ವಿಧಾನ :-
ಅಭ್ಯರ್ಥಿಗಳು ಅರ್ಜಿಯನ್ನ ಆನ್ಲೈನ್ ಮತ್ತು ಆಫ್ಲೈನ್ ಎರಡು ವಿಭಾಗದಲ್ಲೂ ಅರ್ಜಿ ಸಲ್ಲಿಸುವ ಮುಕ್ತ ಅವಕಾಶವನ್ನು ಅಣಬೆ ಕೃಷಿ ರೈತರಿಗೆ ಸರ್ಕಾರ ನೀಡಿದೆ.
- ಅಭ್ಯರ್ಥಿಗಳು ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಬಯಸಿದರೆ ಮೊದಲು ನಿಮ್ಮ ತಾಲೂಕಿನ ಅಥವಾ ಜಿಲ್ಲೆಯ ತೋಟಗಾರಿಕೆ ಇಲಾಖೆಯ ಕಚೇರಿಗೆ ಭೇಟಿ ನೀಡಿ.
- ಅಲ್ಲಿ ಇರುವ ಅಧಿಕಾರಿಗಳನ್ನ ಭೇಟಿಯಾಗಿ ಅಣು ಕೃಷಿ ಘಟಕ ಸ್ಥಾಪನೆ ಮತ್ತು ಸಬ್ಸಿಡಿಯ ಬಗ್ಗೆ ಮಾಹಿತಿಯನ್ನು ಕೇಳಿ.
- ನಂತರ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಲ್ಲಿ ಅರ್ಜಿ ಫಾರಂ ಕೇಳಿ ಪಡೆಯಿರಿ.
- ಇದರಲ್ಲಿ ನಿಮ್ಮ ವಯಕ್ತಿಕ ವಿವರವನ್ನ ಭರ್ತಿ ಮಾಡಿ ಕೃಷಿ ಮಾಡುವ ಜಾಗದ ಬಗ್ಗೆ ಮಾಹಿತಿ ತುಂಬಬೇಕಾಗುತ್ತದೆ.
- ನಂತರದಲ್ಲಿ ಪಹಣಿ, ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್, ನಿಮ್ಮ ಬ್ಯಾಂಕ್ ಪಾಸ್ ಬುಕ್ ಪ್ರತ, ಪಾಸ್ಪೋರ್ಟ್ ಅಳತೆಯ ಫೋಟೋ, ನೀವು ಅಣಬೆ ಕೃಷಿ ತರಬೇತಿ ಪಡೆಯುತ್ತಿದ್ದರೆ ಅದರ ಪ್ರಮಾಣ ಪತ್ರ ಹಾಗೆಯೇ ಯೋಜನಾ ವರದಿ ಕಡ್ಡಾಯವಾಗಿ ಇರಲೇಬೇಕು.
- ಭರ್ತಿ ಮಾಡಿದ ಅರ್ಜಿ ಮತ್ತು ದಾಖಲೆಗಳನ್ನು ಅದೇ ಕಚೇರಿಯಲ್ಲಿ ಸಲ್ಲಿಸಿ. ಅರ್ಜಿಯನ್ನು ಸ್ವೀಕರಿಸಿದ ಬಗ್ಗೆ ಕಚೇರಿಯಿಂದ ಸೀಲು ಇರುವ ರಶೀದಿ (Acknowledgement) ಪಡೆಯುವುದನ್ನು ಮರೆಯಬೇಡಿ.
- ನೀವು ಅರ್ಜಿಯನ್ನ ಸಲ್ಲಿಸಿದ ನಂತರ ಕೆಲವೇ ದಿನಗಳಲ್ಲಿ ಯೋಜನೆಗೆ ಸಂಬಂಧಪಟ್ಟ ಅಧಿಕಾರಿಗಳು ನಿಮ್ಮ ಜಾಗಕ್ಕೆ ಬಂದು ಸ್ಥಳ ಪರಿಶೀಲನೆ ಮಾಡಿ ಅವರ ಅನುಮೋದನೆ ಸಿಕ್ಕ ನಂತರ ಅಣಬೆ ಕೃಷಿ ಘಟಕಕ್ಕೆ ನೀವು ಕೆಲಸವನ್ನು ಶುರು ಮಾಡಬಹುದು.
ಒನ್ ಲೈನ್ ಅರ್ಜಿ ಸಲ್ಲಿಸುವುದು ಹೇಗೆ :-
- ಹತ್ತಿರದ ‘ಗ್ರಾಮ ಒನ್’ (Gram One) ಅಥವಾ ‘ಕರ್ನಾಟಕ ಒನ್’ ಕೇಂದ್ರಕ್ಕೆ ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಮತ್ತು ಜಮೀನಿನ ಪಹಣಿ (RTC) ಹಿಡಿದುಕೊಂಡು ಹೋಗಿ.
- ಅಲ್ಲಿನ ಸಿಬ್ಬಂದಿಗೆ “ತೋಟಗಾರಿಕೆ ಇಲಾಖೆಯ ಅಣಬೆ ಕೃಷಿ ಯೋಜನೆಯಡಿ” ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿ.
- ಅವರು ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಿ ನಿಮಗೆ ಒಂದು ರಶೀದಿ ನೀಡುತ್ತಾರೆ. ಆ ರಶೀದಿಯನ್ನು ಜೋಪಾನವಾಗಿ ಇಟ್ಟುಕೊಳ್ಳಿ.
ಇಲ್ಲಿ ಗಮನಿಸಿ :-
| ಈ ಅಣಬೆ ಕೃಷಿಯಲ್ಲಿ ಲಾಭವಷ್ಟೇ ಸೂಕ್ಷ್ಮತೆಯು ಕೂಡ ಇದೆ, ಆದ್ದರಿಂದ ನೇರವಾಗಿ ಘಟಕ ಸ್ಥಾಪಿಸುವ ಮೊದಲು ನಿಮ್ಮ ತಾಲೂಕಿನ ಅಥವಾ ಜಿಲ್ಲೆಯ ಕೇಂದ್ರಕ್ಕೆ ಅಥವಾ ಕೃಷಿ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ. ಅಲ್ಲಿರುವ ಅಣಬೆ ಕೃಷಿ ತರಬೇತಿಯನ್ನ ಪಡೆದುಕೊಂಡಲ್ಲಿ ನೀವು ಇನ್ನೂ ಹೆಚ್ಚಿನ ಯಶಸ್ಸನ್ನ ಕಾಣುವುದು ಖಂಡಿತ. |







