ನಮ್ಮ ಮಂಗಳೂರು ಮತ್ತು ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ರೈಲು ಪ್ರಯಾಣಿಕರ ಗೋಳು ಇನ್ನು ಮುಗಿದಿಲ್ಲ.. ಏನಿದು !

On: Wednesday, January 7, 2026 11:22 PM
Mangaluru–Bengaluru Train Delays

Mangaluru–Bengaluru Train Delays : ನಮಸ್ಕಾರ ಕರ್ನಾಟಕ,,,, ನಮ್ಮ ಮಂಗಳೂರು ಮತ್ತು ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ರೈಲು ಪ್ರಯಾಣಿಕರ ಗೋಳು ಇನ್ನು ಮುಗಿದಿಲ್ಲ. ನಮ್ಮ ಕರ್ನಾಕ ರಾಜ್ಯದಲ್ಲಿ ಯಾಕ್ ಹೀಗಾಗ್ತಿದೆ ಇದನೆಲ್ಲ ಕೇಳುವವರು ಯಾರು ಇಲ್ವಾ ?

ಕೇವಲ ಒಂದು ದಿನ ಸಮಸ್ಯೆ ಯಾದರೆ ಪ್ರತಿಯೊಬ್ಬರು ಇದರ ಬಗ್ಗೆ ಪ್ರಶ್ನೆ ಮಾಡುವುದು ತಪ್ಪಾಗುತ್ತದೆ ಆದರೆ ದಿನೇ ದಿನೇ ಹೆಚ್ಚುತ್ತಿರುವ ಈ ಸಮಸ್ಯೆ ಇಂದಾಗಿ ರೈಲು ಪ್ರಯಾಣಿಕರನ್ನ ಸಂಕಷ್ಟಕ್ಕೆ ತಳ್ಳಿದೆ ಹಾಗೆ ಅನೇಕ ಸಾಮಾಜಿಕ ಜಾಲತಾಣದಲ್ಲಿ ಮಂಗಳೂರು ಮತ್ತು ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ತಮ್ಮ ಅಸಮಾಧಾನ ತೋಡಿಕೊಳ್ಳುತ್ತಿದ್ದರೆ.

ಹಾಗಿದ್ರೆ ಈ ಸಮಸ್ಯೆಗೆ ಸರ್ಕಾರ ಕಡಿವಾಣ ಹಾಕೋದಿಲ್ವ ?

ನಮ್ಮ ರಾಜ್ಯದ ಮಂಗಳೂರು ಮತ್ತು ಬೆಂಗಳೂರು ನಡುವಿನ ರೈಲುಗಳ ನಿರಂತರ ವಿಳಂಬಕ್ಕೆ ಕಾರಣ ಏನಾಗಿರುತ್ತೆ ನೀವು ತಿಳಿಯಲೇ ಬೇಕು.

ನನ್ನ ಕಣ್ಣಿಗೆ ಮೊದಲು ಈ ಮಾಹಿತಿ ಬಿದ್ದಿದ್ದು ದಕ್ಷಿಣ ಕನ್ನಡ ರೈಲ್ವೆ ಯುಸರ್ಸ್ ಎನ್ನುವ ಖಾತೆ ಇಂದ ಟ್ವೀಟ್ ಮಾಡಿರುವುದನ್ನ ನಾನು ಗಮನಿಸಿದ್ದು. ಈ ಒಂದೇ ಒಂದು ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಅತಿ ವೇಗವಾಗಿ ವೈರಲ್ ಆಗಿ ಈ ಸಮಸ್ಯೆ ದಿನ ನಿತ್ಯ ಹೆಚ್ಚಗತ್ತಿದೆ ಎನ್ನುವುದು ಪ್ರತಿಯೊಬ್ಬರ ಗಮನಕ್ಕೂ ಬಂದಿದೆ.

ಮಂಗಳೂರು ಮತ್ತು ಬೆಂಗಳೂರು ನಡುವಿನ ರೈಲು ಮಾರ್ಗದಲ್ಲಿ ಕ್ರಾಸಿಂಗ್ ವ್ಯವಸ್ಥೆಯಲ್ಲಿನ ಬದಲಾವಣೆ ಇಂದಾಗಿ ಇತರ ಪ್ರಾಬ್ಲಮ್ ಕಂಡು ಬರ್ತಿದೆ

  • ಶಿರಾಡಿ ಘಾಟ್ ವ್ಯಾಪ್ತಿಯಲ್ಲಿ ರೈಲು ಮಾರ್ಗದಲ್ಲಿನ ಕ್ರಾಸಿಂಗ್ ವ್ಯವಸ್ಥೆಯಲ್ಲಿ ಮಾಡಿರುವ ಬದಲಾವಣೆ ಅತ್ಯಂತ ಪ್ರಮುಖ ಕಾರಣವಾಗಿದೆ. ಇದಕ್ಕೂ ಮೊದಲು ಶಿರಿಬಾಗಿಲು ಮಾರ್ಗದಲ್ಲಿ ಸಂಚಾರ ಮಾಡುತ್ತಿರುವ ಟ್ರೈನ್ ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿನ ಕ್ರಾಸಿಂಗ್ ಅನ್ನು ಈಗ ಸುಬ್ರಹ್ಮಣ್ಯ ರೋಡ್‌ ನಿಲ್ದಾಣಕ್ಕೆ ವರ್ಗಾವಣೆ ಮಾಡಲಾಗಿದೆ ಹಾಗಾಗಿ ಘಾಟ್ ಸೆಕ್ಷನ್‌ನಲ್ಲಿ ರೈಲುಗಳ ಸುಗಮ ಸಂಚಾರಕ್ಕೆ ತೊಂದರೆ ಆಗುತ್ತಿರುವುದರಿಂದ ಒಂದು ರೈಲು ಸ್ವಲ್ಪ ತಡವಾಗಿ ಸಂಚಾರ ಮಾಡಿದರು ಅದು ನಂತರ ಚಲಿಸುವ ಎಲ್ಲ ರೈಲುಗಳ ಮೇಲೂ ಪರಿಣಾಮ ಬೀರುತ್ತಿದೆ.

ಎರಡನೇ ಸಮಸ್ಯೆ ಏನಾಗಿರಬಹುದು ನಿಮಗೇನಾದ್ರು ತಿಳಿದಿದೆಯೇ ?

ಕೆಲವೊಂದು ಸವಾಲುಗಳು ಹೀಗಿವೆ :-

  • ರೈಲು ಸಂಚಾರದಲ್ಲಿ ಪಶ್ಚಿಮ ಘಟ್ಟಗಳ ರೈಲು ಮಾರ್ಗವು ತೀರಾ ಸಣ್ಣದಾಗಿ ಮತ್ತು ಇಳಿಜಾರಾಗಿದ್ದು 57 ಸುರಂಗಗಳು ಮತ್ತು 108 ತೀಕ್ಷ್ಣವಾದ ಕ್ರಾಸ್ ಗಳನ್ನ ಒಳಗೊಂಡಿದ್ದು ವರ್ಷ ವರ್ಷ ಮಳೆ ಗಾಲದಲ್ಲಿ ಪದೇ ಪದೇ ಸಂಭವಿಸುವ ಭೂಕುಸಿತಗಳು, ಮಣ್ಣು ಕುಸಿತ ಹೀಗೆ ಇನ್ನು ಅನೇಕ ಸಮಸ್ಯೆ ಇಂದಾಗಿ ಮಂಗಳೂರು ಮತ್ತು ಬೆಂಗಳೂರು ನಡುವಿನ ರೈಲು ಮಾರ್ಗದಲ್ಲಿ ಈ ರೀತಿಯ ತೊಂದರೆ ಇಂದಾಗಿ ರೈಲುಗಳು ಸರಿಯಾದ ಸಮಯಕ್ಕೆ ಪ್ರಯಾಣಿಕರನ್ನ ತಲುಪುವುದಿಲ್ಲ.

ಅಲ್ಲಿ ಇರುವ ವಿದ್ಯುತ್ ಇಂದಾಗಿ :

  • ವಿದ್ಯುದೀಕರಣ ದಿಂಡನ್ನು ಮಂಗಳೂರು ಮತ್ತು ಬೆಂಗಳೂರು ನಡುವಿನ ರೈಲು ಮಾರ್ಗದಲ್ಲಿ ತಡವಾಗಿ ಸಂಚರಿಸುವುದಕ್ಕೂ ಕರಣ ವಾಗಿದೆ ಎಂದರೆ ತಪ್ಪಾಗಲಾರದು ಸ್ನೇಹಿತರೆ. ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ನ ಮಾಧ್ಯ ಭಾಗದಲ್ಲಿ 55 ಕಿ.ಮೀ ಉದ್ದದ ಘಾಟ್ ಸೆಕ್ಷನ್‌ ಬಳಿಯಲ್ಲಿ ಹೊಸದಾಗಿ ವಿದ್ಯುದೀಕರಣದ ಕೆಲಸ ಮುಗಿದಿದೆ ಆದರೆ ಎಲ್ಲಿ ಕೆಲಸ ನಡೆಯುತಿದ್ದ ಸಮಯದಲ್ಲಿ ಕೆಲವೊಂದು ಜನ ಸಾಮಾನ್ಯರ ಸುರಕ್ಷತಾ ನಿಯಮ ನಿಬಂಧನೆಗಳಿಂದ ರೈಲು ಸಂಚಾರದಲ್ಲಿ ವಿಳಂಬ ಕಂಡು ಬರುತ್ತಿದೆ.

ಸರ್ಕಾರ ಜನವರಿ 2026ರ ಪ್ರಾರಂಭದಲ್ಲಿ ರೈಲು ಸಂಚಾರಕ್ಕೆ ಹೊಸ ವೇಳಾಪಟ್ಟಿ ಬಿಡುಗಡೆ ಮಾಡಿದ್ದರು ಸಹ ಕೆಲವು ತೊಂದರೆ ಇಂದಾಗಿ  ಕಣ್ಣೂರು ಎಕ್ಸ್‌ಪ್ರೆಸ್ (16511) ಮತ್ತು ವಿಜಯಪುರ-ಮಂಗಳೂರು ಎಕ್ಸ್‌ಪ್ರೆಸ್ (17377) ನಂತಹ ಟ್ರೈನ್ ಗಳು ಪ್ರತಿ ದಿನ ಸುಮಾರು 30 ರಿಂದ 60 ನಿಮಿಷಗಳವರೆಗೆ ತಡವಾಗಿ ಸಂಚರಿಸುತ್ತಿವೆ ಇದು ರೈಲು ಪ್ರಯಾಣಿಕರಿಗೆ ಅತ್ಯಂತ ಬೇಸರದ ಸಂಗತಿ ಯಾಗಿ ದೊಡ್ಡ ಸಮಸ್ಯೆಗೀಡು ಮಾಡಿ ಕೊಡ್ದುತ್ತಿದೆ. 

ಇಂತ ಸಮಸ್ಯೆ ಗಳು ಕಂಡು ಬಂದ ಕೆಲವೇ ಗಂಟೆ ಅಥವಾ ದಿನದಲ್ಲಿ ಬಗೆ ಹರಿಯುವುದು ರೈಲು ಪ್ರಯಾಣಿಕರಿಗೆ ಮತ್ತು ಸಂಬಂಧ ಪಟ್ಟ ಸಿಬ್ಬಂದಿಗಳಿಗೂ ಒಳ್ಳಯದು ಹಾಗಾಗಿ ಈ ಮಂಗಳೂರು ಮತ್ತು ಬೆಂಗಳೂರು ನಡುವಿನ ರೈಲು ಮಾರ್ಗದ ಸಮಸ್ಯೆ ಅತೀ ಶೀಘ್ರವಾಗಿ ಪರಿಹರಿಸಬೇಕು ಎನ್ನುವುದು ನಮ್ಮ ಹಾಗು ಆಯಾ ಊರಿನ ಪ್ರಯಾಣಿಕರು ಆಗ್ರಹಿಸಲಾಗಿದೆ..

ಅಂತಿಮ ತೀರ್ಮಾನ :-

ಆದಷ್ಟು ಬೇಗ ಈ ಸಮಸ್ಯೆ ಸರಿಯಾಗಿ ಪ್ರಯಾಣಿಕರು ತಮ್ಮ ಸಮಯಕ್ಕೆ ತಾವು ಹೋಗುವ ಊರಿಗೆ ಅಥವಾ ಕೆಲಸಕ್ಕೆ ತಲುಪುವುದು ಸರ್ಕಾರದ ಜವಾಬ್ದಾರಿ ಆಗಿರುತ್ತದೆ. ಇಂತ ಪ್ರಾಬ್ಲಮ್ ಗಳು ಕರ್ನಾಟಕದ ಯಾವ ಭಾಗದಲ್ಲೂ ನಡೆಯದಂತೆ ಕ್ರಮ ಕೈಗೊಳ್ಬೇಕು ಎನ್ನುವುದು ಪತಿಯೊಬ್ಬ ಜನ ಸಾಮಾನ್ಯರ ನಿಲುವಾಗಿರುತ್ತದೆ.

ಇದನ್ನು ಓದಿರಿ :- ಅಡಿಕೆ ಇಂದಿನ ದರ – ಶಿವಮೊಗ್ಗ, ದಾವಣಗೆರೆ, ಸಾಗರ, ಚನ್ನಗಿರಿ, ಭೀಮಸಮುದ್ರ


Join WhatsApp

Join Now

Join Telegram

Join Now

Leave a Comment