ಕಟ್ಟಡ ಕಾರ್ಮಿಕರ ಮದುವೆಗೆ ಸಹಾಯಧನ!! । Labour Card Marriage Benefits In Kannada

On: Saturday, January 3, 2026 1:38 PM
Labour card marriage benefits in kannada online apply

ಮದುವೆ ಎಂಬುದು ಪ್ರತಿ ಗಂಡು ಹೆಣ್ಣಿನ ಜೀವನದ ಅತ್ಯಂತ ಪ್ರಮುಖ ಘಟ್ಟ ಅಂತಾನೆ ಹೇಳಬಹುದು ನಮ್ಮ ಕರ್ನಾಟಕ ರಾಜ್ಯದಲ್ಲೇನೇ ತುಂಬಾ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದವರು ಅದ್ದೂರಿಯಾಗಿ ವಿವಾಹ ಆಗುತ್ತಾರೆ.

Labour card marriage benefits in kannada online apply

ಇದೇ ರೀತಿ ಪ್ರತಿಯೊಬ್ಬ ಜನ ಸಾಮಾನ್ಯರು ಕೂಡ ಆಡಂಬರದ ಮಾಡುವೆ ಬಗ್ಗೆ ಮಾತಿರಲಿ ಸಾದಾರಣವಾಗಿ ವಿವಾಹ ಆಗುವುದು ಕೂಡ ಅವರ ಜೀವನಕ್ಕೆ ಹೊರೆ ಯಾಗಿರುತ್ತದೆ. ಹಾಗಾಗಿ ನಮ್ಮ ಕರ್ನಾಟಕ ಸರ್ಕಾರ ದಿನಗೂಲಿ ಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕ ಮದುವೆಗೆ ಅಥವಾ ಅವರ ಮಕ್ಕಳ ಮದುವೆಗೆ 60,000 ರೂ. ಸಹಾಯಧನವನ್ನು ನೀಡಬೇಕೆಂಬ ಅತ್ಯುತ್ತಮ ಯೋಜನೆಯನ್ನ ಜಾರಿ ಮಾಡಿದೆ.

ಬಹಳ ಜನರಿಗೆ ಈ ಯೋಜನೆ ಹಿನ್ನೆಲೆ ಏನಿರುತ್ತೆ ಇಂತ ಒಂದು ಯೋಜನೆ ಕೂಡ ನಾವು ಅರ್ಜಿ ಸಲ್ಲಿಸಿ ಸರ್ಕಾರದಿಂದ ಇಷ್ಟು ದೊಡ್ಡ ಮಟ್ಟದಲ್ಲಿ ಸಹಾಯಧನ ತಗೋಳ್ಬಹುದು ಎನ್ನುವ ವಿಷಯ 2026 ಬಂದ್ರು ಸಹ ಗೊತ್ತಿರೋದಿಲ್ಲ.

ಸ್ನೇಹಿತರೆ ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಹಂತ ಹಂತ ವಾಗಿ ತಿಳಿಸಿ ಕೊಡುತ್ತಹೋಗ್ತಿನೆ ಬನ್ನಿ…

  • ಈ ಯೋಜನೆ ಮೂಲಕ  ₹60,000 ರೂ ಸರ್ಕಾರದಿಂದ ಉಚಿತವಾಗಿ ಸಿಗುವ ಯೋಜನೆ ಇದಾಗಿದೆ.

ಯೋಜನೆಯ ಬಗ್ಗೆ Labour card marriage benefits in kannada online apply

ಕರ್ನಾಟಕದಲ್ಲಿ ಇದುವರೆಗೂ ಕೂಡ ಕೆಲವೇ ಕೆಲವು ಜನರು ಮಾತ್ರ ಈ ಯೋಜನೆ ಲಾಭ ಪಡೀತಿರೋದು ಇಂತ ಅನೇಕ ಉತ್ತಮ ಯೋಜನೆಗಳಿಂದ ದಿನ ನಿತ್ಯ ಕೂಲಿ ಕಾರ್ಮಿಕರಿಗೆ ಮತ್ತು ಕಟ್ಟಡ ಕಾರ್ಮಿಕರಿಗೆ ಸಮಾಜದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಮಹಿಳೆ ಹಾಗು ಪುರುಷ ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.

ಈ ಒಂದು ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ನಮ್ಮ https://udyogasalahe.in ವೆಬ್ ಸೈಟ್ ಗೆ ಭೇಟಿ ನೀಡಿ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಹ ಅರ್ಜಿದಾರರು ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಯೋಜನೆಯ “ಉದ್ದೇಶ, ಯೋಜನೆಯ ಪ್ರಯೋಜನ, ಅಗತ್ಯ ದಾಖಲೆಗಳು” ಇನ್ನಷ್ಟು ಮಾಹಿತಿಯನ್ನು ಕೆಳಗಿನ ಹಂತದಲ್ಲಿ ನೀಡಿದ್ದು ಅದನ್ನು ಓದಿಕೊಂಡು ಅರ್ಜಿ ಸಲ್ಲಿಸಿ.

ಯೋಜನೆಯ ಅವಲೋಕನ:(Labour card marriage benefits in kannada online apply)

ಯೋಜನೆಯ ಹೆಸರು“ಗೃಹ ಲಕ್ಷ್ಮೀ ಬಾಂಡ್” ಮದುವೆ ಸಹಾಯಧನ ಯೋಜನೆ
ಅರ್ಹ ಫಲಾನುಭವಿಗಳುಕರ್ನಾಟದಲ್ಲಿನ ದಿನಗೂಲಿ ಕಾರ್ಮಿಕರು ಹಾಗೆ ಕಟ್ಟಡ ಕಾರ್ಮಿಕರು ಅಥವಾ ಅವರ ಮಕ್ಕಳು.
ಒಟ್ಟು ಪ್ರೋತ್ಸಾಹಧನರೂ. ₹60,000 ದವರೆಗೆ ಸಹಾಯಧನ
ಅರ್ಜಿಸಲ್ಲಿಸುವ ರಾಜ್ಯಕರ್ನಾಟಕ
ಅರ್ಜಿ ಸಲ್ಲಿಸುವ ವಿಧಾನಆನ್ಲೈನ್ ಮೂಲಕ ಅರ್ಜಿ ಹಾಗೆ ಆಫ್ ಲೈನ್ ಮೂಲಕ
Labour card marriage benefits in kannada online apply

ಸಂಕ್ಷಿಪ್ತ ಮಾಹಿತಿ:

ಕರ್ನಾಟಕದ ಪ್ರತಿಯೊಬ್ಬ ಸಾಧಾರಣ ಪ್ರಜೆ ಕೂಡ “ಗೃಹ ಲಕ್ಷ್ಮೀ ಬಾಂಡ್” ಮದುವೆ ಸಹಾಯಧನ ಯೋಜನೆ ಬಗ್ಗೆ ತಿಳಿಯಲೇ ಬೇಕು ಯಾಕಂದ್ರೆ ಇಂತಹ ಅತ್ಯುತ್ತಮ ಯೋಜನೆ ನಮ್ಮ ಕರ್ನಾಟಜಕ ರಾಜ್ಯದಲ್ಲಿರುವುದು ಮಾಡುವೆ ಯಾಗುವ ನಾವ ದಂಪತಿಗಳ ಜೀವನಕ್ಕೆ ಸರ್ಕಾರದ ಈ ಸಹಾಯಧನ ಸ್ಫೂರ್ತಿದಾಯಕ ಅಂದರೆ ತಪ್ಪಾಗಲಾರದು. ಕರ್ನಾಟಕದಲ್ಲಿ ಈ ಯೋಜನೆಯು ಸುಮಾರು ಜನವರಿ 18, 2007 ರಲ್ಲಿ ಮೊದಲು ಆ ಸಂದರ್ಭದಲ್ಲಿ 50,000 ಸಹಾಯಧನ ನೀಡಲಾಗುತಿತ್ತು ಕೆಲವು ವರ್ಷಗಳ ನಂತರ ಅಂದರೆ 08-08-2022 50,000 ನೀಡುತ್ತಿರುವ ಸಹಾಯಧನವನ್ನ ಸುಮಾರು 60,000 ಕ್ಕೆ ಹೆಚ್ಚಿಸಲಾಯಿತಿ.

2026ರ ಸಾಲಿನಲ್ಲಿಯೂ ಇದು ರಾಜ್ಯದ ಕೂಲಿಕಾರ್ಮಿಕರಿಗೆ ಮತ್ತು ಕಟ್ಟಡ ಕಾರ್ಮಿಕರಿಗೆ ಪ್ರಮುಖ ಆರ್ಥಿಕ ಆಸರೆಯಾಗಿದೆ ಎಂದರೆ ತಪ್ಪಾಗಲಾರದು.

ಹೌದು ಈ ಯೋಜನೆ ನಮ್ಮ ರಾಜ್ಯ ಸರ್ಕಾರ ಜಾರಿಗೆ ತಂದ ಪ್ರಮುಖ ಯೋಜನೆಗಳಲ್ಲಿ ಇದು ಕೂಡ ಒಂದು. ಈ ಯೋಜನೆಯಲ್ಲಿ, ಕೆಲವು ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು ಸಹಾಯಧನದ ಮೊತ್ತವನ್ನು ಹೆಚ್ಚಿಸಲಾಯಿತು. ಈ ಯೋಜನೆಯ ಲಾಭವನ್ನ ಗಂಡ ಹೆಂಡತಿ ಇಬ್ಬರಲ್ಲಿ ಒಬ್ಬರೂರಿಗೆ ಮಾತ್ರ ಸಹಾಯಧನ ಸಿಗುವಂತದ್ದು ಹಾಗೆ ಒಂದೇ ಕುಟುಂಬಲ್ಲಿ ಕಾರ್ಡ್ ಇದಲ್ಲಿ ಎರೆಡು ಮಕ್ಕಳ ಮದುವೆಯಾದ 6 ತಿಂಗಳ ಒಳಗೆ ಅರ್ಜಿ ಸಲ್ಲಿಸಿದವರಿಗೆ ಈ ಸಹಾಯಧನ ನೇರವಾಗಿ ಸರ್ಕಾರದಿಂದ ಬ್ಯಾಂಕ್ ಅಕೌಂಟ್ ಗೆ ವರ್ಗಾವಣೆ ಯಾಗುತ್ತದೆ.

“ಗೃಹ ಲಕ್ಷ್ಮೀ ಬಾಂಡ್ (ಮದುವೆ ಸಹಾಯಧನ ಯೋಜನೆ)“” ಹಾಗಾದ್ರೆ ಏನು ನಿಮ್ಮಗೆ ಗೊತ್ತ ? ಅರ್ಜಿ ಸಲ್ಲಿಸಿದ್ರೆ ಎಷ್ಟು ಸಹಾಯಧನ ಸಿಗುತ್ತೆ ? ನಮ್ಮದೇ ಫೋನ್ ಮೂಲಕ ಅರ್ಜಿ ಸಲ್ಲಿಸೋದು ಹೇಗೆ ?

ಕೆಳಗೆ ನೋಡೋಣ ಬನ್ನಿ

ಏನಿದು ”ಗೃಹ ಲಕ್ಷ್ಮೀ ಬಾಂಡ್ (ಮದುವೆ ಸಹಾಯಧನ ಯೋಜನೆ)” ? Labour card marriage benefits in kannada online apply

ಸ್ನೇಹಿತರೆ ಏನಿದು ಗೃಹ ಲಕ್ಷ್ಮೀ ಬಾಂಡ್ ನೀವೇನಾದ್ರು ಈ ಯೋಜನೆ ಬಗ್ಗೆ ಯಾವತ್ತಾದ್ರೂ ತಿಳಿದು ಕೊಂಡಿದೀರಾ? ತಿಳಿದಿಲ್ಲ ಅಂದ್ರೆ ನೋಡಿ ಇದು ನಮ್ಮ ರಾಜ್ಯ ಸರ್ಕಾರ ನಿಮ್ಮ ಹತ್ರ ಕಾರ್ಮಿಕರ ಕಾರ್ಡ್ ಇದ್ರೆ ಬರೋಬ್ಬರಿ 60,000 ಹಣವನ್ನ ಈ ಯೋಜನೆ ಮೂಲಕ ಬ್ಯಾಂಕ್ ಖಾತೆ ಗೆ ಜಮಾ ಮಾಡಲಾಗುತ್ತದೆ ಹಾಗೆ ಸುಮ್ನೆ ಕೊಡೋದಿಲ್ಲ ನೀವು ಈ ಯೋಜನೆಗೆ ಸಂಬಂಧ ಪಟ್ಟಲ್ಲಿಅರ್ಜಿಯನ್ನ ಸಲ್ಲಿಸಬೇಕಾಗುತ್ತದೆ.

ತುಂಬಾ ಜನ ಕಾರ್ಮಿಕರ ಬಳಿ ಕಾರ್ಮಿಕ ಕಾರ್ಡ್ ಇದ್ದರು ಕೂಡ ಅರ್ಜಿಯನ್ನ ಹಾಕೋದಿಲ್ಲ ಕೆಲವು ಅನಕ್ಷರಸ್ಥರಿಗೆ ಈ ಯೋಜನೆ ಬಗ್ಗೆ ಗೊತ್ತಿರೋದಿಲ್ಲ ಅಂತವರಿಗಾಗಿ ನನ್ನ ಈ ಲೇಖನದಲ್ಲಿ ಈ ಯೋಜನೆಯ ಬಗ್ಗೆ ಮಾಹಿತಿಯನ್ನ ತಿಳ್ಸ್ಕೊಡ್ತೀದೀನಿ. ನೀವು ಕರ್ನಾಟಕದ ಯಾವುದೇ ಮೂಲೆ ಯಲ್ಲಿದ್ದರು ಕೂಡ ಈ ಯೋಜನೆ ಲಾಭ ವನ್ನ ಪಡೆಯಬಹುದು.

ನನ್ನ ಒಂದು ಸ್ವಂತಿಕೆಯ ಮಾತಿನಲ್ಲಿ ಹೇಳುವುದಾದರೆ, ಸಮಾಜದಲ್ಲಿ ಯಾವುದೇ ಕಾರ್ಮಿಕ ಕಾರ್ಡ್ ಹೊಂದಿದ ಕಾರ್ಮಿಕರ ಮದುವೆ ಅಥವಾ ಮಕ್ಕಳ ಮದುವೆಗೆ ಖರ್ಚು ಮಾಡಲಾದ ಹಣ ಮುಂದಿನ ಜೀವನಕ್ಕೆ ಹೊರೆ ಆಗಬಾರದೆಂದು ಸರ್ಕಾರ ಈ ಸಹಾಯಧನ ಕೊಡಲು ಮುಂದಾಗಿದೆ. ಕರ್ನಾಟಕದಂತ ರಾಜ್ಯದಲ್ಲಿ ಸಾದಾರಣ ಕಾರ್ಮಿಕ ಕೂಡ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಜೀವನ ನಡೆಸ ಬೇಕು ಎನ್ನುವ ಪ್ರಮುಖ ಮಹತ್ವದ ಆರ್ಥಿಕ ಬೆಂಬಲವೇ ಈ ಯೋಜನೆಯಾಗಿದೆ.

ಯೋಜನೆಯ ಪ್ರಮುಖ ಗುರಿ: Labour card marriage benefits in kannada online apply

ಯೋಜನೆಯ ಪ್ರಮುಖ ಉದ್ದೇಶಗೂ ಈ ಕೆವಾಗಿನವುಗಳಂತೆ ಇರುತ್ತದೆ.

  • ಮದುವೆ ಎಂಬುದು ದಿನ ಕೂಲಿ ಕಾರ್ಮಿಕರಿಗೆ ಒಂದು ರೀತಿಯ ಹೊರೆ ಯಾಗಿರುತ್ತದೆ ಹಾಗಾಗಿ ನಮ್ಮ ರಾಜ್ಯ ಸರ್ಕಾರ ಮದುವೆಯಂತಹ ದೊಡ್ಡ ಖರ್ಚುಗಳನ್ನು ಸುಧಾರಿಸಲು ಈ ಯೋಜನೆ ಮೂಲಕಸಹಾಯಧನ ನೀಡಬೇಕು ಎಂಬ ಉದ್ದೇಶ ಹೊಂದಿದೆ.
  •  ಒಬ್ಬ ಕಾರ್ಮಿಕ ತನ್ನ ಮದುವೆಗೆ ಅಥವಾ ಮಕ್ಕಳ ಮದುವೆಗೆ ಹೆಚ್ಚಿನ ಬಡ್ಡಿ ದರದಲ್ಲಿ ಸಾಲವನ್ನ ಪಡೆಯಬಾರದು ಅದು ತನ್ನ ಮುಂದಿನ ಜೀವನದಲ್ಲಿ ದೊಡ್ಡ ಮಟ್ಟದಲ್ಲಿ ಹೊರೆಯಾಗಿರುತ್ತ ಎನ್ನುವ ಉದ್ದೇಶ ದಿನ ಈ ಸಹಾಯಧನ ನೀಡ್ತಿರುವಂತ್ತದು.
  • ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಕಾರ್ಮಿಕರು ಮತ್ತು ಅವರ ಅವಲಂಬಿತ ಮಕ್ಕಳು ಗೌರವಯುತವಾಗಿ ಮತ್ತು ಯಾವುದೇ ಆರ್ಥಿಕ ಒತ್ತಡವಿಲ್ಲದೆ ಮದುವೆಯ ನೆರವು ನೀಡಿ ಸಾಮಾಜಿಕ ಸ್ಥಿರತೆಯನ್ನು ಕಾಪಾಡುವುದು
  • ಮದುವೆ ವೆಚ್ಚದ ಹೆಸರಿನಲ್ಲಿ ಆಗುವ ಆಡಂಬರ ವಿವಾಹದಿಂದ ಆಗುವ ಹಣದ ವ್ಯರ್ಥವನ್ನು ತಡೆದು, ಒಂದು ಉತ್ತಮ ಆರ್ಥಿಕ ಸಹಾಯದ ಮೂಲಕ ಸರಳ ವಿವಾಹಗಳನ್ನು ಪ್ರೋತ್ಸಹಿಸುತ್ತದೆ.
  • ಈ ಯೋಜನೆ ಮೂಲಕ ಕುಟುಂಬದ ಒತ್ತಡವನ್ನ ಕಾಡಿಡಿಮೆಮಾಡುತ್ತದೆ ಹೆಂಗೆಂದರೆ ನೋಂದಾಯಿತ ಕಾರ್ಮಿಕರ ಮಕ್ಕಳಿಗೆ (ಗರಿಷ್ಠ ಇಬ್ಬರು) ಸಹಾಯಧನ ನೀಡುವ  ಮೂಲಕ.

ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಹತ್ತಿರದ ಗ್ರಾಮ ಒನ್ಬೆಂಗಳೂರು ಒನ್, ಅಥವಾ ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿ

ಅಥವಾ

ಲೇಬರ್ ಆಫೀಸ್ ನಲ್ಲಿ ಕೂಡ ಆಫ್ ಲೈನ್ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಯೋಜನೆ ಮೂಲಕ ಹಣ ಎಷ್ಟು ಸಿಗುತ್ತದೆ :- Labour card marriage benefits in kannada online apply

ಈ ಒಂದು ಯೋಜನೆ ಮೂಲಕ ಎಷ್ಟು ಸಹಾಯಧನ ಸಿಗುತ್ತೆ ನಿಮ್ಮಗೆನಾದ್ರು ತಿಳಿದಿದಿಯ?

  • ಒಬ್ಬ ನೋಂದಾಯಿತ ಕಾರ್ಮಿಕರಿಗೆ ಅವರ ಸ್ವಂತ ಮದುವೆಗೆ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ತಲಾ ₹60,000 ಸಹಾಯಧನ ಸರ್ಕಾರದಿಂದ ನೀಡಲಾಗುತ್ತದೆ.
  • ಒಂದೇ ಕುಟುಬದಲ್ಲಿ ಇಬ್ಬರ ಮಕ್ಕಳ ಮದುವೆ ಯದಲ್ಲಿ ಒಟ್ಟು ₹1,20,000 ವರೆಗೆ ಸರ್ಕಾರೀ ಸೌಲಭ್ಯ ಪಡೆಯಬಹುದು.
  •  ಕಾರ್ಮಿಕ ಅಥವಾ ಅವರ ಮಕ್ಕಳು ಅಂತರಜಾತಿ ಮದುವೆ ಯದಲ್ಲಿ ಸರ್ಕಾರದ ಹೆಚ್ಚುವರಿ ಸೌಲಭ್ಯಗಳೊಂದಿಗೆ ಸುಮಾರು ₹61,000 ವರೆಗೆ ಹಣ ದೊರೆಯುತ್ತದೆ.

ಯೋಜನೆ ಲಾಭ ಪಡೆಯಲು ಯಾರೆಲ್ಲಾ ಅರ್ಹರು? Labour card marriage benefits in kannada online apply

ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ (KBOCWWB) ಈ ಮದುವೆ ಸಹಾಯಧನ ಯೋಜನೆಗೆ 2026ರ ಸಾಲಿನಲ್ಲಿ ಅರ್ಜಿ ಸಲ್ಲಿಸಲು ಈ ಕೆಳಗಿನ ಕೆಲವೊಂದು ಅರ್ಹತೆಯನ್ನ ನೀವು ಹೊಂದಿರಬೇಕಾಗುತ್ತದೆ.

  • ಮದುವೆ ನಡೆಯುವ ದಿನಾಂಕಕ್ಕೆ ಕನಿಷ್ಠ ಒಂದು ವರ್ಷ (12 ತಿಂಗಳು) ಮೊದಲು ಮಂಡಳಿಯಲ್ಲಿ ತಮ್ಮನ್ನ ತಾವು ನೊಂದಹಿಸಿ ಕೊಂಡೀಬೇಕು.
  • ಯಾರೇ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು.
  • ಅರ್ಜಿದಾರರು ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಡ್ಡಾಯವಾಗಿ ನೋಂದಾಯಿತ ಫಲಾನುಭವಿಯಾಗಿರಬೇಕು.
  • ಮದುವೆಯಾಗುವ ಹೆಣ್ಣಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಮತ್ತು ಗಂಡಿಗೆ ಕನಿಷ್ಠ 21 ವರ್ಷ ತುಂಬಿರಬೇಕು.
  • ಮದುವೆಯಾದ ದಿನಾಂಕದಿಂದ 6 ತಿಂಗಳ ಒಳಗಾಗಿ ಅರ್ಜಿಯನ್ನು ಸಲ್ಲಿಸುವುದು ಕಡ್ಡಾಯ.
  • ಅರ್ಜಿ ಸಲ್ಲಿಸುವ ಮೊದಲು ತಮ್ಮ ಲೇಬರ್ ಕಾರ್ಡ್ ಚಾಲ್ತಿಯಲ್ಲಿರಬೇಕಾಗುತ್ತದೆ.

ಹಣದ ಕಂತುಗಳ ಸಂಪೂರ್ಣ ಮಾಹಿತಿ :- Labour card marriage benefits in kannada online apply

  • ಮೊದಲು ನೀವು ಸಲ್ಲಿಸಿದ ಆನ್‌ಲೈನ್ ಅಥವಾ ಆಫ್‌ಲೈನ್ ಅರ್ಜಿಯ ದಾಖಲೆಗಳನ್ನು ಕಾರ್ಮಿಕ ಇಲಾಖೆಯು ಪರಿಶೀಲಿಸಿ ಅನುಮೋದಿಸುತ್ತದೆ
  • ಕಾರ್ಮಿಕರ) ಬ್ಯಾಂಕ್ ಖಾತೆಯು ಕಡ್ಡಾಯವಾಗಿ ಅವರ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಆಗಿರಬೇಕು
  • ಯಾವುದೇ ಕಂತಿನ ರೂಪದಲ್ಲಿ ಬರದೇ ನೇರ ₹60,000 ಮೊತ್ತವನ್ನುಅರ್ಜಿ ದಾರರ ಬ್ಯಾಂಕ್ ಖಾತೆಗೆ ವರ್ಗಾವಣೆ ಯಾಗುತ್ತದೆ.
  • ಆದ್ದರಿಂದ, ಅರ್ಜಿ ಸಲ್ಲಿಸುವಾಗ ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ, IFSC ಕೋಡ್ ಸರಿಯಾಗಿರುವುದನ್ನು ಮತ್ತು ಅದು ನಿಮ್ಮ ಆಧಾರ್‌ಗೆ ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ.

ಮಹಿಳೆಯರಿಗೆ ಈ ಯೋಜನೆ ಇಂದ ಆಗುವ ಪ್ರಯೋಜನ :Labour card marriage benefits in kannada online apply

  • 2026ರ ನಿಯಮದಂತೆ ನೋಂದಾಯಿತ ಕಾರ್ಮಿಕರ ಮದುವೆ ನಂತರ ಬರೋಬ್ಬರಿ ತಲಾ ₹60,000 ನೇರ ಹಣಕಾಸಿನ ನೆರವು ಸಿಗುತ್ತದೆ.
  • ಬಡ ಕಾರ್ಮಿಕರು ಮದುವೆ ವೆಚ್ಚಕ್ಕಾಗಿ ಹೆಚ್ಚಿನ ಬಡ್ಡಿಗೆ ಸಾಲ ತೆಗೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದನ್ನು ಈ ಯೋಜನೆ ತಪ್ಪಿಸುತ್ತದೆ.
  • ಈ ಸಹಾಯಧನ ಯಾವುದೇ ಮಧ್ಯವರ್ತಿಗಳ ಪಾಲಾಗದೆ ನೇರವಾಗಿ ಅರ್ಜಿ ಸಲ್ಲಿಸಿದವರ ಬ್ಯಾಂಕ್ ಅಸಿಕಾಂತ್ ಗೆ ವರ್ಗಾವಣೆ ಯಾಗುತ್ತದೆ.
  • ಅತ್ಯಂತ ಬಡ ಕಾರ್ಮಿಕ ಕುಟುಂಬದ ಶುಭ ಕಾರ್ಯಗಳನ್ನು ಘನತೆಯಿಂದ ನೆರವೇರಿಸಲು ಇದು ಸಹಕಾರಿಯಾಗಿದೆ.
  • ಗರಿಷ್ಠ ಇಬ್ಬರು ಮಕ್ಕಳ ಮದುವೆಗೆ ಸಹಾಯ ಸಿಗುವುದರಿಂದ ಆ ಕುಟುಂಬದ ಯಜಮಾನನ ದೊಡ್ಡ ಜವಾಬ್ದಾರಿಯನ್ನು ಪೂರೈಸಲು ಸರ್ಕಾರದಿಂದ ಬೆಂಬಲ ಸಿಕ್ಕಂತಾಗುತ್ತದೆ.

ಯೋಜನೆಯ ಅನಾನುಕೂಲ : Labour card marriage benefits in kannada online apply

ಈ ಯೋಜನೆಯಿಂದ ಕೆಲವೊಂದು ಒಳ್ಳೇದು ಕಂಡುಬಂದರೂ ಕೂಡ ನನ್ನ ಪ್ರಕಾರ ಕೆಲವು ಪ್ರಮುಖ ದೋಷಗಳು ಕಂಡುಬಂದಿವೆ.

  • ಈ ಯೋಜನೆ 6 ತಿಂಗಳ ಗಡುವು ಕೊಟ್ಟಿರುವುದರಿಂದ ಈ ಸಮಯ ಮೀರಿದರೆ ಸಹಾಯಧನ ಸಿಗುವುದಿಲ್ಲ ಹಾಗೆ ಇದು ಅನೇಕ ಅನಕ್ಷರಸ್ಥ ಅಥವಾ ಮಾಹಿತಿ ಇಲ್ಲದ ಕಾರ್ಮಿಕರಿಗೆ ಈ ಸಹಾಯಧನ ಸಿಗುವುದಿಲ್ಲ.
  • ಹೊಸದಾಗಿ ಕಾರ್ಡ್ ಮಾಡಿಸಿಕೊಂಡವರಿಗೆ ತಕ್ಷಣ ಈ ಯೋಜನೆ ಲಾಭ ಸಿಗೋದಿಲ್ಲ.
  • ಮದುವೆ ನೋಂದಣಿ ಪ್ರಮಾಣಪತ್ರ (Marriage Certificate) ಕಡ್ಡಾಯ. ಗ್ರಾಮೀಣ ಭಾಗದ ಜನರಿಗೆ ರಿಜಿಸ್ಟ್ರಾರ್ ಆಫೀಸ್‌ನಿಂದ ಈ ಪ್ರಮಾಣಪತ್ರ ಪಡೆಯುವುದು ಕೆಲವೊಮ್ಮೆ ತಡವಾಗಬಹುದು ಅಥವಾ ಕಷ್ಟವೆನಿಸಬಹುದು.
  • ಈ ಸೌಲಭ್ಯವು ಕುಟುಂಬದ ಗರಿಷ್ಠ ಇಬ್ಬರು ಮಕ್ಕಳಿಗೆ ಮಾತ್ರ ಸಿಗಲಿದ್ದು. ಮೂರನೇ ಮಗ ಅಥವಾ ಮಗಳ ಮದುವೆಗೆ ಈ ಯೋಜನೆಯ ಸಹಾಯಧನ ಸಿಗುವುದಿಲ್ಲ.
  • ಅರ್ಜಿ ಸಲ್ಲಿಸಿದ ನಂತರ ಇಲಾಖೆಯ ಪರಿಶೀಲನೆಗೆ ಮತ್ತು ಹಣ ಬಿಡುಗಡೆಗೆ ಕೆಲವು ದಿನ ಅಥವಾ ತಿಂಗಳ ಕಾಲ ಕಾಯ ಬೇಕಾಗುತ್ತದೆ
  • ಅರ್ಜಿ ಸಲ್ಲಿಸುವಾಗ ಸೇವಾ ಸಿಂಧು ಪೋರ್ಟಲ್‌ನಲ್ಲಿ ಸರ್ವರ್ ಸಮಸ್ಯೆಗಳು ಅಥವಾ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗದಿದ್ದರೆ ಅರ್ಜಿ ಹಾಕಿದ ಫಲಾನುಭವಿಗಳ ಹಣ ವರ್ಗಾವಣೆ ವಿಳಂಬವಾಗಬಹುದು.

ಅಗತ್ಯ ದಾಖಲೆಗಳು: Labour card marriage benefits in kannada online apply

ಈ ಕೆಳಗಿನ ಅಗತ್ಯ ದಾಖಲೆಗಳನ್ನ ಅರ್ಜಿದಾರರು ಹೊಂದಿರಬೇಕಾಗುತ್ತದೆ.

  • ವಯಸ್ಸಿನ ದೃಢೀಕರಣ ಪತ್ರ
  • ಮದುವೆ ನೋಂದಣಿ ಪ್ರಮಾಣಪತ್ರ
  • ಆದಾಯ ಪ್ರಮಾಣಪತ್ರ 
  • ಕಾರ್ಮಿಕ ಕಾರ್ಡ್
  • ಮದುವೆಯ ಆಮಂತ್ರಣ ಪತ್ರಿಕೆ
  • ಆಧಾರ್ ಕಾರ್ಡ್
  • ಭಾವಚಿತ್ರ 
  • ಪಡಿತರ ಚೀಟಿ
  • ಮದುವೆಯು ಕರ್ನಾಟಕದ ಹೊರಗೆ ನಡೆದಿದ್ದರೆ ಮಾತ್ರ ಅಫಿಡವಿಟ್ (Affidavit) ಇದು ಅವಶ್ಯಕ
  • ಬ್ಯಾಂಕ್ ಪಾಸ್‌ಬುಕ್

ಅರ್ಜಿ ಸಲ್ಲಿಸುವ ವಿಧಾನ: Labour card marriage benefits in kannada online apply

ಈ ಯೋಜನೆಗೆ ಎರೆಡು ಹಂತದಲ್ಲಿ ಅರ್ಜಿಯನ್ನ ಸಲ್ಲಿಸಬಹುದು ಆನ್ಲೈನ್ ಹಾಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

1. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ: Labour card marriage benefits in kannada online apply

  • ಸೇವಾ ಸಿಂಧು ಪೋರ್ಟಲ್ ಅಥವಾ ಕಾರ್ಮಿಕ ಇಲಾಖೆಯ ಅಧಿಕೃತ ವೆಬ್‌ಸೈಟ್‌ https://karbwwb.karnataka.gov.in/kn  ಗೆ ಭೇಟಿ ನೀಡಿ
  • ನಂತರ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಒಟಿಪಿ (OTP) ಬಳಸಿ ಲಾಗಿನ್ ಮಾಡಿ.
  • ‘ಕಾರ್ಮಿಕ ಇಲಾಖೆ’ (Labour Department) ಅಡಿಯಲ್ಲಿ ಇರುವ “ಮದುವೆ ಸಹಾಯಧನಕ್ಕಾಗಿ ಅರ್ಜಿ” (Application for Marriage Assistance) ಆಯ್ಕೆ ಮಾಡಿ.
  • ಅರ್ಜಿಯಲ್ಲಿ ಕೇಳಲಾದ ಕಾರ್ಮಿಕ ಕಾರ್ಡ್ ಸಂಖ್ಯೆ, ವೈಯಕ್ತಿಕ ವಿವರ ಮತ್ತು ಮದುವೆಯ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
  • ಮದುವೆ ಪ್ರಮಾಣಪತ್ರ, ಕಾರ್ಡ್, ಆಧಾರ್ ಇತ್ಯಾದಿ ದಾಖಲೆಗಳನ್ನ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
  • ಅರ್ಜಿಯನ್ನು ಸಲ್ಲಿಸಿದ ನಂತರ ನಿಮಗೆ ಅದನ್ನು ಭವಿಷ್ಯದ ಬಳಕೆಗಾಗಿ ‘ಅರ್ಜಿ ಸಂಖ್ಯೆ’ ಸಿಗುತ್ತದೆ ತೆಗೆದಿಟ್ಟುಕೊಳ್ಳಿ.
  • ಗ್ರಾಮ ಒನ್ (Gram One), ಕರ್ನಾಟಕ ಒನ್ (Karnataka One), ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಅಗತ್ಯ ದಾಖಲೆಗಳೊಂದಿಗೆ ಭೇಟಿ ನೀಡಿ ಒನ್ಲೈನ್ ಅರ್ಜಿ ಸಲ್ಲಿಸಿ.
Labour card marriage benefits in kannada online apply
Labour card marriage benefits in kannada online apply

2. ಸೇವಾ ಕೇಂದ್ರಗಳ ಮೂಲಕ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸವ ವಿಧಾನ :-

ಅರ್ಜಿ ಪಡೆಯುವ ವಿಧಾನ Labour card marriage benefits in kannada online apply

  • ನಿಮ್ಮ ಜಿಲ್ಲೆಯ ಕಾರ್ಮಿಕ ಕಚೇರಿ ಅಥವಾ ಕಲ್ಯಾಣ ಮಂಡಳಿ ಕಚೇರಿಗೆ ಭೇಟಿ ನೀಡಿ.
  • ಅರ್ಜಿ ನಮೂನೆಯನ್ನು ಪಡೆದು, ಅಗತ್ಯವಿರುವ ಎಲ್ಲ ಮಾಹಿತಿಯನ್ನು ತುಂಬಿ.
  • ಅರ್ಜಿಯೊಂದಿಗೆ ಅಗತ್ಯವಿರುವ ಎಲ್ಲ ದಾಖಲೆಗಳ ಪ್ರತಿಗಳನ್ನು ಲಗತ್ತಿಸಿ.
  • ಅರ್ಜಿಯನ್ನು ಸಂಬಂಧಪಟ್ಟ ಅಧಿಕಾರಿಗೆ ಸಲ್ಲಿಸಿ.

ತೀರ್ಮಾನ:-

ಅರ್ಜಿ ಸಲ್ಲಿಸುವ ನೋಂದಾಯಿತ ಕಾರ್ಮಿಕರ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ತಲಾ ₹60,000 ಹಣವನ್ನು ಸರ್ಕಾರ ನೀಡುತ್ತದೆ. ಕಾರ್ಮಿಕರು ಮದುವೆಗೆ ಕನಿಷ್ಠ 1 ವರ್ಷ ಮೊದಲೇ ಮಂಡಳಿಯಲ್ಲಿ ನೋಂದಾಯಿತರಾಗಿರಬೇಕು ಮತ್ತು ಅವರ ಕಾರ್ಡ್ ಚಾಲ್ತಿಯಲ್ಲಿರಬೇಕು. ಹೀಗೆ ಇನ್ನು ಪ್ರಮುಖ ಅಂಶಗಳನ್ನ ಅರ್ಜಿ ಸಲ್ಲಿಸವ ಅಭ್ಯರ್ಥಿಗಳು ಮನದಲ್ಲಿಟ್ಟುಕೊಂಡು ಈ ಯೋಜನೆಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನ ಆಫ್ ಲೈನ್ ಹಾಗೆ ಆನ್ಲೈನ್ ಮೂಲಕ ಸಲ್ಲಿಸಬಹುದಾಗಿದೆ.

ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ  ಜಿಲ್ಲೆಯ ಕಾರ್ಮಿಕ ಕಚೇರಿ , ಕಲ್ಯಾಣ ಮಂಡಳಿ ಕಚೇರಿ ಅಥವಾ ಗ್ರಾಮ ಒನ್ (Gram One), ಕರ್ನಾಟಕ ಒನ್ (Karnataka One), ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಅಗತ್ಯ ದಾಖಲೆಗಳೊಂದಿಗೆ ಭೇಟಿ ನೀಡಿ ಒನ್ಲೈನ್ ಅರ್ಜಿ ಸಲ್ಲಿಸಿ.

ಇತರ ಯೋಜನೆಯ ಲಿಂಕುಗಳು :-


Join WhatsApp

Join Now

Join Telegram

Join Now

Leave a Comment