“2026 – 27ನೇ ಸಾಲಿನಲ್ಲಿ ಉದ್ಯೋಗದ ಕನಸಿಗೆ ಸರ್ಕಾರದ ದೊಡ್ಡ ಅವಕಾಶ (KSRTC Free Driving Training) “. ಇಂದಿನ ದಿನಗಳಲ್ಲಿ ಉದ್ಯೋಗ ಸಿಗುವುದು ಅನೇಕರಿಗೆ ದೊಡ್ಡ ಸವಾಲಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಹಾಗೂ ಹಿಂದುಳಿದ ವರ್ಗದ ಯುವಕರು ಕೆಲಸದ ಹುಡುಕಾಟದಲ್ಲಿ ಬಹಳಷ್ಟು ಕಷ್ಟ ಅನುಭವಿಸುತ್ತಿದ್ದಾರೆ.
KSRTC Free Driving Training Information In Kannada
ಈ ವಿಷಯವನ್ನ ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಒಟ್ಟಾಗಿ ಜಾರಿಗೆ ತಂದಿರುವ “ಉಚಿತ ವಾಹನ ಚಾಲನಾ ತರಬೇತಿ ಯೋಜನೆ” ಸಾವಿರಾರು ಯುವಕರಿಗೆ ಹೊಸ ಆಶಾಕಿರಣವಾಗುತ್ತಿದೆ.
ಪಿಎಂ-ಎಜೆಎವೈ (PM-AJAY) 2026ರ ಯೋಜನೆ ಕರ್ನಾಟಕದಲ್ಲಿನ ಯುವಕರಿಗೆ “ಕೆಲಸ ಮಾತ್ರವಲ್ಲ, ಬದುಕಿಗೆ ಭದ್ರತೆ”. ಈ ಯೋಜನೆಯ ಮೂಲಕ ಸರ್ಕಾರವು ಕೇವಲ ತಾತ್ಕಾಲಿಕ ಕೆಲಸವನ್ನಷ್ಟೇ ನೀಡುವುದಿಲ್ಲ. ಬದಲಾಗಿ ಯುವಕರು ತಮ್ಮ ಜೀವನಪೂರ್ತಿ ನಿಲ್ಲುವಂತಹ ಸ್ಥಿರ ಆದಾಯದ ದಾರಿಯಲ್ಲಿ ಕಂಡುಕೊಳ್ಳಲು ಸಹಾಯ ಮಾಡುತ್ತಿವೆ.
ಎಸ್ ಸಿ ವರ್ಗದ ನಿರುದ್ಯೋಗಿ ಯುವಕರು ತಮ್ಮದೇ ಕೌಶಲ್ಯದ ಮೇಲೆ ನಿಂತು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕೆನ್ನುವುದೇ ಈ ಯೋಚನೆಯ ಪ್ರಮುಖ ಉದ್ದೇಶವಾಗಿದೆ. “ನಿಮ್ಮ ಕನಸುಗಳ ಸ್ಟೀರಿಂಗ್ ಈಗ ನಿಮ್ಮ ಕೈಯಲ್ಲಿ – KSRTC SC ಉಚಿತ ಚಾಲನಾ ತರಬೇತಿ 2026!”
ರಾಜ್ಯ ಸರ್ಕಾರದ ಈ ಸಾಮಾಜಿಕ-ಆರ್ಥಿಕ ಉದ್ದೇಶ ಯುವಕರಲ್ಲಿ ಸ್ವಾವಲಂಬನೆ, ಆತ್ಮವಿಶ್ವಾಸ ಮತ್ತು ಉದ್ಯೋಗಪ್ರೇರಣೆಯನ್ನು ತುಂಬುತ್ತದೆ. “ಎಸ್.ಸಿ ಸಮುದಾಯದ ಯುವಕರು ಕೇವಲ ಉಚಿತ ತರಬೇತಿಯನ್ನು ಪಡೆಯುವುದಲ್ಲದೆ, ತಮ್ಮ ಜೀವನದಲ್ಲಿ ಸ್ವತಂತ್ರ ಉದ್ಯೋಗ ಸಾಧನೆಗೆ ಕಡವಿದ ಹೆಜ್ಜೆಯನ್ನು ಮುಟ್ಟುತ್ತಾರೆ”.KSRTC ಯಾ ಈ ಬಂಪರ್ ಅವಕಾಶದ ಮೂಲಕ ಯುವಕರಿಗೆ ಅತ್ಯುತ್ತಮ ತರಬೇತಿ, (KSRTC Free Driving Training) ಸಮಗ್ರ ಮಾರ್ಗದರ್ಶನ ಮತ್ತು ಅನುಕೂಲಕರ ಸಹಾಯ ಒದಗಿಸುತ್ತಿದ್ದು, ಕರ್ನಾಟಕದ ರಸ್ತೆ ಸಾರಿಗೆ ಕ್ಷೇತ್ರದಲ್ಲಿ ಉದ್ಯೋಗದ ಕನಸುಗಳನ್ನು ನಿಜಗೊಳಿಸುತ್ತಿದೆ. ಈ ಕಾರ್ಯಕ್ರಮವು ಸರ್ಕಾರದ ಸಮಾನತೆ, ಪ್ರಗತಿ ಮತ್ತು ಯುವಕರ ಪ್ರಗತಿಗಾಗಿ ಮಾಡಿದ ನೈಜ ಯತ್ನದ ಸಾಕ್ಷ್ಯವಾಗಿದೆ.
ಅತಿ ಮುಖ್ಯವಾಗಿ ಸರ್ಕಾರ ಈ ಯೋಜನೆ ಅಡಿಯಲ್ಲಿ ಕೇವಲ ಆನ್ಲೈನ್ ಮತ್ತು ನೇರ ಬೇಟಿಯ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನವನ್ನು ತಿಳಿಸಿತ್ತು. ಆದರೆ “ಇಂದಿನಿಂದ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ತಮ್ಮ ಫೋನ್ ಮೂಲಕ ಗೌರ್ಮೆಂಟ್ ವೆಬ್ಸೈಟ್ನಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನ ಸರ್ಕಾರ ಮಾಡಿಕೊಟ್ಟಿದೆ”
“ಸ್ವಾವಲಂಬನೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವ ಈ ಕಾರ್ಯಕ್ರಮವು ರಾಜ್ಯದ ಯುವಜನತೆಗೆ ಹೊಸ ಕನಸುಗಳನ್ನು ನಿಜಗೊಳಿಸಲು ನೆರವಾಗುತ್ತಿದೆ”
KSRTC ಬಂಪರ್ ಆಫರ್: SC ಯುವಕರಿಗಾಗಿ ಉಚಿತ ಚಾಲನಾ ತರಬೇತಿ!
ಈ ಯೋಜನೆಯಡಿಯಲ್ಲಿ ಸಿಗುವ ವಿಶೇಷತೆ ತಿಳಿಯಲು ಬಯಸುವಿರಾ ?
- ಉಚಿತ ಊಟ ಮತ್ತು ವಸತಿ : ದೂರದ ಊರಿನಿಂದ ಬರುವ ಅಭ್ಯರ್ಥಿಗಳಿಗೆ ತರಬೇತಿ ನಡೆಯುವ ಸ್ಥಳದಲ್ಲಿ ಒಂದು ತಿಂಗಳ ಕಾಲ ಊಟ ಮತ್ತು ವಸತಿ ಸಂಪೂರ್ಣ ಉಚಿತವಾಗಿ – ನಿಮ್ಮ ಭವಿಷ್ಯ ನಿರ್ಮಾಣಕ್ಕೆ ಸಂಪೂರ್ಣ ಅನುಕೂಲ.
- ಸಂಪೂರ್ಣ ಉಚಿತ ತರಬೇತಿ : ಒಂದು ತಿಂಗಳ ಕಾಲ ನೀವು ಕನಸುಗಳ ವಾಹನ ಹತ್ತಲು ಅಗತ್ಯವಿರುವ ಎಲ್ಲಾ ತರಬೇತಿಯನ್ನು ಸಂಪೂರ್ಣ ಉಚಿತವಾಗಿ ಪಡೆಯಿರಿ – ಯಾವುದೇ ಶುಲ್ಕವಿಲ್ಲ!
- ಅನುಭವಿ ತರಬೇತುದಾರರಿಂದ ನುರಿತ ತರಬೇತಿ : ಕೆಎಸ್‌ಆರ್‌ಟಿಸಿಯ ಅನುಭವಿ ಚಾಲಕನಿಂದ ನೀಡುವ ಪ್ರಾಯೋಗಿಕ ಮತ್ತು ತಾಂತ್ರಿಕ ತರಬೇತಿ – ಪ್ರತಿ ಹೆಜ್ಜೆಯೂ ನಿಮಗೆ ಖಚಿತವಾದ ನಿಖರತೆ ಮತ್ತು ಆತ್ಮವಿಶ್ವಾಸವನ್ನು ತರುತ್ತದೆ.
- ಉಚಿತ ಭಾರಿ ವಾಹನ ಡ್ರೈವಿಂಗ್ ಲೈಸೆನ್ಸ್ (DL) : ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದರೆ, RTO ಸಹಯೋಗದಿಂದ ಭಾರಿ ವಾಹನ ಚಾಲನಾ ಪರವಾನಗಿಯನ್ನು ಉಚಿತವಾಗಿ ಪಡೆಯಿರಿ – ನಿಮ್ಮ ಕನಸುಗಳಿಗೆ ಹೊಸ ಹಾದಿ!
“ನಿಮ್ಮ ಕನಸುಗಳ ಉದ್ಯೋಗವನ್ನು ಈಗಲೇ ಪ್ರಾರಂಭಿಸಲು ಸುವರ್ಣ ಅವಕಾಶ”!
| ಮುಖ್ಯ ಅಂಶ : “ಆತ್ಮೀಯ ಮಿತ್ರರೇ ಇಂತಹ ಸುವರ್ಣ ಅವಕಾಶವನ್ನು ಮಿಸ್ ಮಾಡಿಕೊಳ್ಳದೆ ಇಂದಿನಿಂದ ಅರ್ಜಿ ಸಲ್ಲಿಸಲು ಪ್ರಾರಂಭಿಸಿ. ಸರ್ಕಾರ ರೂಪಿಸಿರುವ ಈ ಯೋಜನೆಯು ದೀರ್ಘ ಕಾಲ ಇರುವುದಿಲ್ಲ ಸರ್ಕಾರವೇ ಒಂದು ಗಡುವನ್ನ ನೀಡಿದೆ. ಅಭ್ಯರ್ಥಿಗಳು ಅಗತ್ಯ ದಾಖಲೆಯೊಂದಿಗೆ ಆನ್‌ಲೈನ್ ಅಥವಾ ನೇರ ಭೇಟಿ ಮುಕಾಂತರ ತರಬೇತಿಯಲ್ಲಿ ಹಾಜರಾಗಿ”. |
ತರಬೇತಿ ನಡೆಯುವ ಸ್ಥಳ (Training Centers) :-
ಸರ್ಕಾರವು ಯುವಕರಿಗೆ ಈ ತರಬೇತಿಯನ್ನು ನೀಡಲು ಸುಮಾರು 5 ತರಬೇತಿ ಕೇಂದ್ರವನ್ನ ಸಿದ್ಧಪಡಿಸಲು ಯೋಚಿಸಿದೆ.
- ಹಾಸನ
- ಹೊಳಲ್ಕೆರೆ
- ಚಿಕ್ಕಮಗಳೂರು
- ಮಾಲೂರು
- ಮಳವಳ್ಳಿ
ಮೇಲೆ ನೀಡಿರುವ ಸ್ಥಳದಲ್ಲಿ ತರಬೇತಿಯನ್ನ ಹಮ್ಮಿಕೊಳ್ಳಲು ಸರ್ಕಾರ ಮುಂದಾಗಿದೆ
ಅಭ್ಯರ್ಥಿಗಲ್ಲಿ ಇರಬೇಕಾದ ಅರ್ಹತೆ (ಗಮನಿಸಿ)
- ಕಡ್ಡಾಯವಾಗಿ ಭಾರತದ ನಾಗರಿಕರಾಗಿರಬೇಕು
- ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸುವ ಅವಕಾಶ
- ಸಾಮಾನ್ಯವಾಗಿ 18 ವರ್ಷದಿಂದ 45 ವರ್ಷ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ
- ಕನಿಷ್ಠ 8ನೇ ತರಗತಿ ಅಥವಾ ಹತ್ತನೇ ತರಗತಿ ಪಾರ್ಕ್ ಆಗಿರಬೇಕು
- ಹಿಂದೆ HTV ಉಚಿತ ಚಾಲನಾ ತರಬೇತಿ ಪಡೆದಿರಬಾರದು
- ಆರೋಗ್ಯ ಸ್ಥಿತಿ ಗತಿ ಉತ್ತಮವಾಗಿರಬೇಕು
ಪ್ರಮುಖ ದಾಖಲೆಗಳು :-
- ಮೂಲ ಚಾಲನಾ ಪರವಾನಗಿ (LMV) – ಇದ್ದರೆ
- ಆಧಾರ್ ಕಾರ್ಡ್
- ವಯಸ್ಸು ಪ್ರಮಾಣಪತ್ರ (ಜನ್ಮ ದಿನಾಂಕ ಇರುವ ದಾಖಲೆ)
- ವಿಳಾಸ ಪ್ರಮಾಣಪತ್ರ (ಆಧಾರ್ / ರೇಷನ್ ಕಾರ್ಡ್)
- ವಿದ್ಯಾರ್ಹತಾ ಪ್ರಮಾಣಪತ್ರ (8ನೇ / 10ನೇ ಅಂಕಪಟ್ಟಿ)
- SC / ST ಪ್ರಮಾಣಪತ್ರ
- ಪಾಸ್‌ಪೋರ್ಟ್ ಸೈಸ್ ಫೋಟೋಗಳು (2–4)
ನೀವು ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತವನ್ನ ಅನುಸರಿಸಿ :–
ಪಿಎಂ-ಎಜೆಎವೈ (PM-AJAY) ಯೋಜನೆ ಅಡಿಯಲ್ಲಿ ಆನ್ಲೈನ್ ಹಾಗೆ ನೇರ ಭೇಟಿ ಮೂಲಕ ಅರ್ಜಿ ಸಲ್ಲಿಸುವ ಅವಕಾಶವನ್ನ ಸರ್ಕಾರ ಇದುವರೆಗೂ ನೀಡಿತ್ತು. ಆದರೆ ಇಂದು ಸರ್ಕಾರ ಹೊರಡಿಸಿದ ಅಧಿಸೂಚನೆಯನ್ನ ತಿದ್ದುಪಡಿ ಮಾಡಿ “ಆಸಕ್ತ SC ಅಭ್ಯರ್ಥಿಗಳು ಇಂದಿನಿಂದ ತಮ್ಮ ಕೈಯಲ್ಲಿ ಬಳಸುವ ಸ್ಮಾರ್ಟ್ ಫೋನ್ ಅಲ್ಲಿ ಅರ್ಜಿ ಸಲ್ಲಿಸುವ ಅವಕಾಶವನ್ನ ಸರ್ಕಾರ ನೀಡಿದೆ”.
ಸರಳವಾಗಿ ಫೋನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ :
1. ಅಭ್ಯರ್ಥಿಗಳು ಮೊದಲು ಸಮಾಜ ಕಲ್ಯಾಣ ಇಲಾಖೆ ನೀಡಿರುವ ಅಧಿಕೃತ ಫೋನ್ ಸಂಖ್ಯೆಗೆ ಕರೆ ಮಾಡಬೇಕು
2. “PM-AJAY ಉಚಿತ ಚಾಲನಾ ತರಬೇತಿ” ಬಗ್ಗೆ ಅಧಿಕಾರಿಗಳ ಹತ್ತಿರ ಮಾಹಿತಿ ಕೇಳಿ
3. ನಂತರ ಅವರು ನಿಮ್ಮ ಹತ್ತಿರ ಒಂದಿಷ್ಟು ಮಾಹಿತಿಯನ್ನ ಕೇಳಿತ್ತಾರೆ ಸರಿಯಾಗಿ ಹೇಳಬೇಕು ಅಂದರೆ

- ವಿಳಾಸ
- ಮೊಬೈಲ್ ಸಂಖ್ಯೆ
- ಜನ್ಮ ದಿನಾಂಕ
- SC / ST ಪ್ರಮಾಣಪತ್ರ ವಿವರ
- ಹೆಸರು
- ಆಧಾರ್ ಸಂಖ್ಯೆ
4. ನಂತರ ನಿಮ್ಮ ವಿವರವನ್ನ ಸಂಬಂಧ ಪಟ್ಟ ಅಧಿಕಾರಿಗಳು ಪರಿಶೀಲನೆ ಮಾಡಿ ನಿಮ್ಮಗೆ Registration / Confirmation Number ಕೊಡುತ್ತಾರೆ ಅದನ್ನ ಯಲ್ಲೂ ಕಳೆಯದೆ ಸರಿಯಾಗಿ ಇಟ್ಟುಕೊಳ್ಳಿ.
5. ತರಬೇತಿ ಶುರು ದಿನಾಂಕ, ಸ್ಥಳ, ವಸತಿ ಈ ಎಲ್ಲ ವಿಷಯದ ಬಗ್ಗೆ ಅಭ್ಯರ್ಥಿಗಳಿಗೆ ಫೋನ್‌ನಲ್ಲೇ ತಿಳಿಸುತ್ತಾರೆ.
| ಇಲ್ಲಿ ಗಮನಿಸಿ : ತರಬೇತಿ ಕೇಂದ್ರಕ್ಕೆ ಹೋಗುವಾಗ ಎಲ್ಲಾ ಮೂಲ ದಾಖಲೆಗಳ ಪ್ರತಿಗಳು ಕಡ್ಡಾಯವಾಗಿ ತೆಗೆದುಕೊಡ್ದು ಹೋಗಲೇಬೇಕು. |
ಆನ್ಲೈನ್ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ವಿಧಾನವನ್ನ ಅನುಸರಿಸಿ :
“ನಮ್ಮ ವೆಬ್ ಸೈಟ್ ನಲ್ಲಿ ಉಚಿತ ಭಾರೀ ವಾಹನ ಚಾಲನ ತರಬೇತಿಗೆ ಅರ್ಜಿ ಸಲ್ಲಿಸುವ ವಿವರವನ್ನು ಸ್ಪಷ್ಟವಾಗಿ ಹಾಗೆಯೇ ಸಂಪೂರ್ಣವಾಗಿ ತಿಳಿಸಲಾಗಿದೆ”.
- ಮೊದಲು ಅಭ್ಯರ್ಥಿಗಳು ಕೆ ಎಸ್ ಆರ್ ಟಿ ಸಿ ಜಾಬ್ಸ್ (KSRTC Jobs) ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ವೆಬ್ಸೈಟ್ ನಲ್ಲಿ ತಮ್ಮನ್ನ ತಾವು ನೋಂದಣಿ (Registration) ಮಾಡಿಕೊಳ್ಳಲು “PM-AJAY ಉಚಿತ ಚಾಲನಾ ತರಬೇತಿ” ಲಿಂಕ್ ಅನ್ನು ಹುಡುಕಿ ಅದರ ಮೇಲೆ ಕ್ಲಿಕ್ ಮಾಡಿ.
- ನಂತರ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ವಿದ್ಯಾಭ್ಯಾಸದ ವಿವರದ ಜೊತೆಗೆ, ನಿಮ್ಮ ವಿಳಾಸವನ್ನ ನಿಖರವಾಗಿ ಭರ್ತಿ ಮಾಡಿ.
- ಆದರ್ ಕಾರ್ಡ್, ಜಾತಿ ಪ್ರಮಾಣ ಪತ್ರ, SSLC ಅಂಕಪಟ್ಟಿ, ಲಘು ವಾಹನ ಸಾಲನ ಪರವಾನಿಗೆ ಈ ಎಲ್ಲಾ ದಾಖಲೆಗಳನ್ನ ಸ್ಕ್ಯಾನ್ ಮಾಡಿಟ್ಟುಕೊಂಡು ಅಪ್ಲೋಡ್ ಮಾಡಬೇಕು.
- ನೀವು ಬರ್ತಿ ಮಾಡಲಾದ ಎಲ್ಲಾ ವಿವರಗಳು ಸರಿ ಇದೆಯೇ ಎಂದು ಪರಿಶೀಲನೆ ಮಾಡಿ ನಂತರ ಸಬ್ಮಿಟ್ (Submit) ಬಟನ್ ಒತ್ತಿ ಮತ್ತು ನಿಮ್ಮ ಸಂಖ್ಯೆಯನ್ನು ಅರ್ಜಿ ಸಂಖ್ಯೆಯನ್ನು (Application ID) ಜಾಗರೂಕತೆಯಿಂದ ತೆಗೆದಿಟ್ಟುಕೊಳ್ಳಿ.
ಆಫ್ ಲೈನ್ ಅರ್ಜಿ ಸಲ್ಲಿಸುವುದು ಹೇಗೆ ? ಎಲ್ಲಿ ಹೋಗಬೇಕು ?
ಮೇಲೆ ಕೊಡಲಾದ ಅರ್ಜಿ ಪ್ರಕ್ರಿಯೆಯು ನಿಮಗೆ ಕಷ್ಟವಾದರೆ ಈ ಕೆಳಗೆ ಕೊಟ್ಟಿರುವ ಆಫ್ಲೈನ್ ವಿಧಾನದ ಮೂಲಕ ಅರ್ಜಿಯನ್ನ ನೀವು ಸಲ್ಲಿಸಬಹುದು.
ನಿಮ್ಮ ಜೆಲ್ಲೆಯಲ್ಲಿ ಕೆಳಗೆ ಕೊಡಲಾದ ಯಾವ ಸಂಸ್ಥೆ ಇದೆಯೋ ಅಲ್ಲಿಗೆ ಬೇಟಿ ನೀಡಿ.
- KSRTC ಡಿಪೋ
- ಸಮಾಜ ಕಲ್ಯಾಣ ಇಲಾಖೆ ಕಚೇರಿ
- ಜಿಲ್ಲಾಡಳಿತ ಕಚೇರಿ (ಅಗತ್ಯವಿದ್ದರೆ) ಬೇಟಿನೀಡಿ
ಈ ಕೆಳಗಿನ ಹಂತವನ್ನ ಅನುಸರಿಸಿ
- ಕಚೇರಿ ಅಧಿಕಾರಿಗಳ ಹತ್ತಿರ “PM-AJAY ಚಾಲನಾ ತರಬೇತಿ ಅರ್ಜಿ” ಬೇಕೆಂದು ಕೇಳಿ ಪಡೆಯಿರಿ.
- ಯಾವುದೇ ತಪ್ಪಿಲ್ಲದೆ ಅರ್ಜಿ ಫಾರಂ ತುಂಬಿ
- ಕೇಳಲಾದ ಯಲ್ಲ ದಾಖಲೆಗಳ ಪ್ರತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸಿ. ಅವುಗಳು ಆಧಾರ್ ಕಾರ್ಡ್, SC / ST ಪ್ರಮಾಣಪತ್ರ, ವಿದ್ಯಾರ್ಹತಾ ಪ್ರಮಾಣಪತ್ರ, ಪಾಸ್‌ಪೋರ್ಟ್ ಸೈಸ್ ಫೋಟೋ
- ಪೂರ್ಣಗೊಂಡ ಅರ್ಜಿ ಮತ್ತು ದಾಖಲೆಗಳನ್ನು ಕಚೇರಿಗೆ ಸಲ್ಲಿಸಿ
- ಸಂಬಂಧಪಟ್ಟ ಅಧಿಕಾರಿಗಳೇ ನಿಮ್ಮ ಅರ್ಜಿಯನ್ನ ಪರಿಶೀಲನೆ ಮಾಡುತ್ತಾರೆ ನೀವು ಈ ಯೋಜನೆಗೆ ಅರ್ಹರಿದ್ದಾರೆ ನಿಮ್ಮನ್ನ ಆಯ್ಕೆ ಮಾಡಿ ಫೋನ್ ಮೂಲಕ ಕರೆ / ಮೆಸೇಜ್ ಮಾಡಿ ತರಬೇತಿ ದಿನಾಂಕ, ಸ್ಥಳ, ವಸತಿ ವಿವರಗಳನ್ನು ತಿಳಿಸುತ್ತಾರೆ.
ಈ ಯೋಜನೆಯ ತರಬೇತಿ ನಂತ್ರ ನೀವು ಪಡೆಯುವ ಲಾಭ ಏನು ಗೊತ್ತ? ತಿಳಿದರೆ ಇಂದೇ ಅರ್ಜಿ ಸಲ್ಲಿಸುತ್ತೀರಾ!
ಸರ್ಕಾರದಿಂದ ಸಿಗುವ ಭಾರಿ ವಾಹನ ಲೈಸೆನ್ಸ್ ಇದ್ದಲ್ಲಿ, ಒಂದು ಉದ್ಯೋಗ ಸಿಗೋದು ಫಿಕ್ಸ್!
“ಈ ತರಬೇತಿ ಮುಗಿದ ಕೂಡಲೇ KSRTC, BMTC ಸೇರಿದಂತೆ ಸರ್ಕಾರಿ ಚಾಲಕ ಉದ್ಯೋಗಗಳ ಬಾಗಿಲು ತೆರೆದುಕೊಳ್ಳುತ್ತದೆ. ಅದೇ ಸಮಯದಲ್ಲಿ ಖಾಸಗಿ ಬಸ್, ಲಾರಿ, ಟೂರಿಸಂ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಗಳಲ್ಲಿ ಉತ್ತಮ ಸಂಬಳದ ಕೆಲಸಗಳ ಅವಕಾಶವೂ ನಿಮ್ಮದಾಗುತ್ತದೆ” ಹಾಗೆ ಇತರೆ ಕಂಪನಿಗಳು ಕೂಡ ನಿಮ್ಮನ್ನ ಕೈಬೀಸಿ ಕರೆಯುತ್ತವೆ.
ನಿಮ್ಮ ಅನುಕೂಲಕ್ಕೆ ಸರ್ಕಾರ ಸಿದ್ದಪಡಿಸಿದ ಸಹಾಯವಾಣಿ ಸಂಖ್ಯೆಗಳು:–
ಆತ್ಮೀಯ ಮಿತ್ರರೇ,,, ನಿಮಗೆ ಈ ಯೋಜನೆಯ ಬಗ್ಗೆ ಯಾವುದೇ ರೀತಿಯ ಗೊಂದಲ ಅಥವಾ ನೇರ ಮಾಹಿತಿ ಬೇಕಾದರೆ ಈ ಕೆಳಗೆ ಕೊಡಲಾದ ನಂಬರ್ ಮೂಲಕ ತರಬೇತಿ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದು.
- ಚಿಕ್ಕಮಗಳೂರು: 9606037746
- ಹೊಳಲ್ಕೆರೆ: 7019072560
- ಹಾಸನ: 7760990533
- ಮಾಲೂರು: 7760994432
- ಮಳವಳ್ಳಿ: 7760990137
ಮುಖ್ಯವಾಗಿ ನೀವು ಕೆಳಗೆ ಗಮನಿಸಲೇ ಬೇಕು :
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಬೆಂಗಳೂರಿನ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಮಾತ್ರನೇ ಈ ಯೋಜನೆಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ಸರ್ಕಾರ ಮಾಡಿ ಕೊಟ್ಟಿರುವಂತದ್ದು, ಹಾಗೆಯೇ ಅಧಿಕೃತ ನೋಟಿಫಿಕೇಶನ್ ಗವರ್ಮೆಂಟ್ ಕಡೆಯಿಂದ ಬಂದಾಗ ಯಾವುದೇ ರೀತಿಯ ಅಂತಿಮ ದಿನಾಂಕವನ್ನು ನಿಗದಿಪಡಿಸಲಾಗಿರಲಿಲ್ಲ.
ಆದರೆ ಇಂದು ಹೊಸದಾಗಿ ಕೊನೆಯ ದಿನಾಂಕವನ್ನು ಪ್ರಸ್ತಾಪಿಸುವುದರ ಜೊತೆಗೆ ಅಭ್ಯರ್ಥಿಗಳು ಫೋನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶವನ್ನ ಮಾಡಿಕೊಟ್ಟಿರುವುದು ಇಂದಿನ ಪ್ರಮುಖ ವಿಷಯವಾಗಿರುತ್ತದೆ. ಹಾಗೆಯೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಫೆಬ್ರವರಿ ತಿಂಗಳು ಮುಗಿಯುವುದರಳಗಾಗಿ ಅರ್ಜಿ ಸಲ್ಲಿಸುಲು ಕಾಲಾವಕಾಶವನ್ನ ಸರ್ಕಾರ ಮಾಡಿಕೊಟ್ಟಿದೆ. ಹಾಗೆಯೇ ಅಂತಿಮ ದಿನಾಂಕ ವಿಸ್ತರಣೆ ಯಾಗುವ ಸಾಧ್ಯತೆ ಇಲ್ಲ ಹಾಗಾಗಿ ಇಂದೇ ಅರ್ಜಿ ಸಲ್ಲಿಸುವುದು ಉತ್ತಮ.
ನನ್ನ ಅಂತಿಮ ಮಾತು :
| ಇದು ಪರಿಶಿಷ್ಟ ಜಾತಿಯ ಯುವಕರಿಗೆ ಆರ್ಥಿಕವಾಗಿ ಸದೃಢವಾಗಲು ಸರ್ಕಾರ ಮತ್ತು ಕೆಎಸ್‌ಆರ್‌ಟಿಸಿ ಒದಗಿಸಿರುವ ಅತ್ಯುತ್ತಮ ಅವಕಾಶ ಎಂದರೆ ತಪ್ಪಾಗುವುದಿಲ್ಲ. “ನಿಮ್ಮ ಕನಸುಗಳತ್ತ ಮೊದಲ ಹೆಜ್ಜೆ ಇಡಲು ಈಗಲೇ ಸರಿಯಾದ ಸಮಯ!” ಸಮಯ ವ್ಯರ್ಥ ಮಾಡದೆ, ಇಂದೇ ಕರೆ ಮಾಡಿ ಮಾಹಿತಿ ಪಡೆಯಿರಿ ಅಥವಾ ಅರ್ಜಿ ಸಲ್ಲಿಸಿ. ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರಲ್ಲಿ ಅರ್ಹರಿದ್ದರೆ ಅವರಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಿ. |







