KSCCF Recruitment 2026
2026ರಲ್ಲಿ ಕರ್ನಾಟಕ ರಾಜ್ಯದಲ್ಲಿ ಉದ್ಯೋಗ ಪಡೆಯಲೇ ಬೇಕೆಂಬ ನಿಮ್ಮ ಹಂಬಲಕ್ಕೆ ಇದೀಗ ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿಯಂತ್ರಣ ನಿಯಮಿತವು (KSCCF) 2026 ನೇ ಸಾಲಿನಲ್ಲಿ ನೇಮಕಾತಿ ಅಧಿಸೂಚನೆಯನ್ನು ಪ್ರಕಟ ಮಾಡಿದೆ. ಸರ್ಕಾರಿ ಸಂಸ್ಥೆಯಲ್ಲಿ ಗಟ್ಟಿಯಾಗಿ ನಿಂತು ತಮ್ಮ ವೃತ್ತಿ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಬಯಸುವ ಕರ್ನಾಟಕದ ಅರ್ಹ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶ. ಉದ್ಯೋಗಾಕಾಂಕ್ಷಿಗಳು ಕೆಳಗೆ ಕೊಡಲಾದ ಸಂಪೂರ್ಣವಾದ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮುಖಾಂತರ ಅರ್ಜಿಯನ್ನ ಸಲ್ಲಿಸಬಹುದಾಗಿದೆ.
ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿಯಮಿತ ನೇಮಕಾತಿ 2026
ಸ್ನೇಹಿತರೆ ನೀವಿಲ್ಲಿ ನೋಡಬಹುದು ಫಾರಾಸಿಸ್ಟ್ ಪ್ರಥಮ ದರ್ಜೆ ಗುಮಾಸ್ತರು ,ಸಹಾಯಕರು ಮತ್ತು ವಿಕ್ರಯ ಸಹಾಯಕರು ಹೀಗೆ ಇನ್ನೂ ಅನೇಕ ಹುದ್ದೆಗಳ ನೇಮಕಾತಿಗೆ ಈ ಅಧಿಸೂಚನೆ ಬಂದಿರುವಂಥದ್ದು ಒಟ್ಟು 34 ಹುದ್ದೆಗಳ ಭರ್ತಿಯನ್ನ ನಮ್ಮ ಕರ್ನಾಟಕ ಸರ್ಕಾರ ಮಾಡಿಕೊಳ್ಳುತ್ತಿದೆ. ಅರ್ಜಿ ಸಲ್ಲಿಸಬೇಕೆಂದು ಬಯಸುವ ಅಭ್ಯರ್ಥಿಗಳು ಪಿಯುಸಿ ,ಪದವಿ ಅಥವಾ ಡಿಪ್ಲೋಮಾ ಮುಗಿಸಿಕೊಂಡಿದ್ದರೆ ಈ ಒಂದು ಉದ್ಯೋಗಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಾಗೆಯೇ ಉದ್ಯೋಗದ ಬಗ್ಗೆ ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ, ಹೀಗೆ ಇನ್ನೂ ಅನೇಕ ವಿಷಯವನ್ನು ನೀವು ತಿಳಿಯಲು ಬಯಸಿದರೆ ಈ ಕೆಳಗೆ ನೋಡುತ್ತಾ ಹೋಗೋಣ ಬನ್ನಿ.
ದಿನೇ ದಿನೇ ನಿಮಗೆ ಉದ್ಯೋಗಗಳ ಬಗ್ಗೆ ಹೊಸಹೊಸ ಮಾಹಿತಿ ಬೇಕಾದಲ್ಲಿ ನಮ್ಮ ಒಂದು ಉದ್ಯೋಗ ಸಲಹೆ ವೆಬ್ಸೈಟ್ ಫಾಲೋ ಮಾಡಿ.
ಹುದ್ದೆಯ ವಿಮರ್ಶೆ:
| ಹುದ್ದೆಯ ಹೆಸರು | ಫಾರಾಸಿಸ್ಟ್, ಪ್ರಥಮ ದರ್ಜೆ ಗುಮಾಸ್ತರು, ಸಹಾಯಕರು ಮತ್ತು ವಿಕ್ರಯ ಸಹಾಯಕರು ಇತ್ಯಾದಿ |
| ಇಲಾಖೆ | ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿಯಮಿತವು (KSCCF) |
| ಒಟ್ಟು ಹುದ್ದೆಗಳ ಸಂಖ್ಯೆ | ಒಟ್ಟು 34 ಹುದ್ದೆಗಳು |
| ನೇಮಕಾತಿ ಪ್ರಕ್ರಿಯೆ ನಡೆಯುವ ರೀತಿ | ಆನ್ಲೈನ್ ಅರ್ಜಿ ಪ್ರಕ್ರಿಯೆ |
ಹುದ್ದೆಯ ಕುರಿತು ಇನ್ನಷ್ಟು ಮಾಹಿತಿ:
ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳಿ ನಿಯಮಿತ ಇಲ್ಲಿ ಹಲವಾರು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು ಪ್ರಥಮ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳು ಹಾಗೂ ಸಹಾಯಕರು, ವಿಕ್ರಯ ಸಹಾಯಕರು ಹೀಗೆ ಇನ್ನಿತರ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ನಡೆಯುತ್ತಿದ್ದು ಒಟ್ಟು 34 ಹುದ್ದೆಗಳಿಗೆ ನೇಮಕಾತಿ ಇದಾಗಿದೆ. ಬೆಂಗಳೂರು ಮತ್ತು ಕರ್ನಾಟಕದ ಇತರ ಶಾಖಗಳಲ್ಲಿ ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕಾರ್ಯವನ್ನು ನಿರ್ವಹಿಸಬೇಕಾಗುತ್ತದೆ ಅರ್ಜಿ ಸಲ್ಲಿಸಲು 07/02/2026 ಕೊನೆಯ ದಿನಾಂಕವಾಗಿರುತ್ತದೆ.
ಹುದ್ದೆಗೆ ಅರ್ಜಿ ಸಲ್ಲಿಸುವವರು ಹೊಂದಿರಬೇಕಾದ ಶೈಕ್ಷಣಿಕ ಅರ್ಹತೆಗಳೇನು?
ಈ ಹುದ್ದೆಗಳಿಗೆ ಅರ್ಹತೆ ಈ ಕೆಳಗೆ ನೀಡಲಾಗಿದ್ದು ಪ್ರತಿ ಹುದ್ದೆಗು ಪ್ರತ್ಯೇಕ ಶೈಕ್ಷಣಿಕ ಅರ್ಹತೆಯನ್ನು ನಿಗದಿಪಡಿಸಲಾಗಿದೆ ಕಂಪ್ಯೂಟರ್ ಜ್ಞಾನ ಮತ್ತು ಕನ್ನಡ ಭಾಷೆಯನ್ನ ಕಡ್ಡಾಯವಾಗಿ ಹೊಂದಿರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ
ಡಿಪ್ಲೋಮೋ ಇನ್ ಫಾರ್ಮಸಿ -ಡಿಪ್ಲೋಮಾ ಇನ್ ಫಾರ್ಮಸಿ ಪಾಸಾಗಿರಬೇಕು
ಪ್ರಥಮ ದರ್ಜೆ ಲೆಕ್ಕ ಸಹಾಯಕ- ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರಬೇಕು
ಸಹಾಯಕರು ಮತ್ತು ವಿಕಯ ಸಹಾಯಕರು – ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆ ಆಗಿರಬೇಕು
ವಯೋಮಿತಿ:
ಕನಿಷ್ಠ ವಯೋಮಿತಿ 18 ವರ್ಷಗಳು ಹಾಗೂ ಗರಿಷ್ಠ 43 ವರ್ಷದೊಳಗಿನ ಅಭ್ಯರ್ಥಿಗಳು ಈ ಹುದ್ದೆ ಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ – 38 ವರ್ಷಗಳು
- ಪ್ರವರ್ಗ 2ಎ, ಪ್ರವರ್ಗ2ಬಿ, ಪ್ರವರ್ಗ3ಎ, ಪ್ರವರ್ಗ 3ಬಿ – 41 ವರ್ಷಗಳು
- ಪ.ಜಾ ಪ್ರ-ಎ/ಪ.ಜಾ ಪ್ರ-ಬಿ/ಪ.ಜಾ ಪ್ರ-ಸಿ/ಪ.ಪಂ/ಪ್ರವರ್ಗ-1-43 ವರ್ಷಗಳು
ವಯೋಮಿತಿ ಸಡಿಲಿಕೆ:
ವಿಕಲಚೇತನ ಅಭ್ಯರ್ಥಿಗಳಿಗೆ ಹಾಗೂ ವಿಧವೆಯರಿಗೆ 10 ವರ್ಷ ವಯಮಿತಿಸಲಿಕೆಯನ್ನು ನಿಗದಿಪಡಿಸಲಾಗಿದೆ
ಅರ್ಜಿ ಶುಲ್ಕ:
- ಪರಿಶಿಷ್ಟ ಜಾತಿ ಪ್ರವರ್ಗ ಎ / ಪರಿಶಿಷ್ಟ ಜಾತಿ / ಪ್ರವರ್ಗ ಬಿ ಪರಿಶಿಷ್ಟ ಜಾತಿ/ ಪ್ರವರ್ಗ ಸಿ ಪರಿಶಿಷ್ಟ ಪಂಗಡ/ ಪ್ರವರ್ಗ1 ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 500 + ಗೇಟ್ವೇ ಶುಲ್ಕಗಳು
- ಇತರೆ ವರ್ಗದ ಅಭ್ಯರ್ಥಿಗಳಿಗೆ 1000/- + ಗೇಟ್ವೇ ಶುಲ್ಕಗಳು
ಅಗತ್ಯ ದಾಖಲೆಗಳು:
ಸಾಮಾನ್ಯ ನಿಯಮಗಳ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಎಲ್ಲ ದಾಖಲೆಗಳನ್ನು ಹೊಂದಿರುವುದು ಅಗತ್ಯ.
- ಶೈಕ್ಷಣಿಕ ಪ್ರಮಾಣಪತ್ರ
- ಓಟರ್ ಐಡಿ
- ಆಧಾರ್ ಕಾರ್ಡ್
- ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಫೋಟೋ
- ಅಂಕಪಟ್ಟಿ
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಪಾನ್ ಕಾರ್ಡ್
ವೇತನ ಶ್ರೇಣಿ :
ಹುದ್ದೆಗಳಿಗೆ ಅನುಗುಣವಾಗಿ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದ್ದು ಈ ಕೆಳಗೆ ವಿವರವಾದ ಮಾಹಿತಿಯನ್ನು ನೀಡಲಾಗಿದೆ
- ಫಾರ್ಮಾಸಿಸ್ಟ್ ಹುದ್ದೆಗೆ ₹25800 ರಿಂದ 52650
- ಪ್ರಥಮ ದರ್ಜೆ ಗುಮಾಸ್ತ ಹುದ್ದೆಗೆ ₹21400 ರಿಂದ 45300
- ವಿಕ್ರಯ ಸಹಾಯಕ ಹುದ್ದೆಗೆ ₹19950 ರಿಂದ 37900
ಅರ್ಜಿ ಸಲ್ಲಿಸುವ ವಿಧಾನ:
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆ ಎಸ್ ಸಿ ಸಿ ಎಫ್ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ
- ಅಲ್ಲಿ ಕೊಟ್ಟಿರುವಂತಹ ಸಂಪೂರ್ಣವಾದ ಮಾಹಿತಿಯನ್ನು ಓದಿಕೊಂಡು
- ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಲಾಗಿನ್ ಐಡಿಯನ್ನು ಪಡೆದುಕೊಂಡು
- ನಂತರ ಅದನ್ನು ಮತ್ತೊಮ್ಮೆ ನಮೂದಿಸಿ ಅಲ್ಲಿ ಕೇಳಲಾಗಿರುವ ಸಂಪಣವಾದ ಮಾಹಿತಿಯನ್ನು ಭರ್ತಿ ಮಾಡಿ
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಮಾಡಬೇಕು
- ಹೀಗೆ ಸಬ್ಮಿಟ್ ಮಾಡಿದ ನಂತರ ಬಂದ ಅರ್ಜಿ ಪ್ರತಿಯನ್ನು ಪ್ರಿಂಟ್ ಔಟ್ ತೆಗ್ದಿಟ್ಟುಕೊಳ್ಳಬೇಕು
ಆಯ್ಕೆ ಪ್ರಕ್ರಿಯೆ:
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಅರ್ಹತೆ ಪಡೆದಿರುವಂತ ಅಭ್ಯರ್ಥಿಗಳನ್ನ ಅರ್ಹತೆಗೆ ತಕ್ಕಂತೆ ಆಯ್ಕೆಯನ್ನು ಮಾಡಲಾಗುತ್ತದೆ
- ಲಿಖಿತ ಪರೀಕ್ಷೆ
- ಸಂದರ್ಶನ
- ಅರ್ಹ ಅಭ್ಯರ್ಥಿಗಳ ಮೆರಿಟ್ ಲಿಸ್ಟ್
- ದಾಖಲೆ ಪರಿಶೀಲನೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆಯನ್ನು ಮಾಡಲಾಗುತ್ತದೆ
ಪ್ರಮುಖ ದಿನಾಂಕಗಳು:
| ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | ಜನವರಿ 09, 2026 |
| ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | ಫೆಬ್ರವರಿ 07, 2026 |
ಚಿತ್ರದುರ್ಗ ಗ್ರಾಮ ಪಂಚಾಯತ್ ಅಧಿಸೂಚನೆ ಪ್ರಮುಖ ಲಿಂಕ್‌ಗಳು
| ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
| ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್‌ಸೈಟ್ | https://ksccsf.org/ |
ತೀರ್ಮಾನ:
ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಂಡಳಿ ನಿಯಮಿತ ಈ ಹುದ್ದೆಗಳಿಗೆ ಆಯ್ಕೆಯಾಗುವಂತ ಅಭ್ಯರ್ಥಿಗಳಿಗೆ ವಿವಿಧ ಮಾನದಂಡಗಳನ್ನ ವಿಧಿಸಲಾಗುತ್ತದೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ /07/ 2026 ಈ ಹುದ್ದೆಗಳ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ಅಗತ್ಯ ದಾಖಲೆಗಳೊಂದಿಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.






