KKRTC Recruitment : 10ನೇ ತರಗತಿ ಓದಿದ್ರೆ ಸಾಕು! ಸರ್ಕಾರಿ ನೌಕರಿ ಬಯಸುವವರಿಗೆ ಇದು ಸುವರ್ಣಾವಕಾಶ!

On: Tuesday, January 27, 2026 8:13 PM
KKRTC Recruitment

Join WhatsApp

Join Now

Join Telegram

Join Now

ಅದೆಷ್ಟು ವರ್ಷದಿಂದ ಸರ್ಕಾರಿ ಉದ್ಯೋಗಕ್ಕಾಗಿ ಕಾದು ಕುಳಿತ ಯುವಕ – ಯುವತಿಯರಿಗೆ ಇದೀಗ ಸಂತಸದ ಸುದ್ದಿ ಒಂದು ಹೇಳಿ ಬಂದಿದೆ. ಏನೆಂದರೆ ಕರ್ನಾಟಕ ಸಾರಿಗೆ ಇಲಾಖೆಯಲ್ಲಿ (KKRTC ) ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಜಿ ಆರಂಭವಾಗಿದ್ದು ಉದ್ಯೋಗ ಹುಡುಕುತ್ತಿರುವವರು ಈಗ ನಿಟ್ಟುಸಿರು ಬಿಡುವಂತಾಗಿದೆ. 2026 ನೇ ಸಾಲಿನಲ್ಲಿ ಇದೇ ಮೊದಲ ಬಾರಿ ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುತ್ತಿರುವುದು.

KKRTC Recruitment 2026 In Kannada

ಆತ್ಮೀಯರೇ,,, ನೀವು ಸರ್ಕಾರಿ ಕೆಲಸಕ್ಕಾಗಿ ಹಾತೊರೆಯುತ್ತಿದ್ದೀರಾ ? ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳೆಂದರೆ ನಿಮಗೆ ಭಯವೇ ? ನಿಮ್ಮ ಎಲ್ಲಾ ಗೊಂದಲ, ಆತಂಕಗಳಿಗೆ ಸರ್ಕಾರ ಬ್ರೇಕ್ ಹಾಕಿದೆ ! “ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು (KKRTC ) ಬೀದರ್ ಜಿಲ್ಲೆಯಲ್ಲಿ ಖಾಲಿ ಇರುವಂತಹ ಬಸ್ ಚಾಲಕ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿರುವಂಥದ್ದು”.

ಅದೆಷ್ಟು ಯುವಕ ಯುವತಿಯರು ಕರ್ನಾಟಕದಲ್ಲಿ ನಾನು ಸರ್ಕಾರ ಕೆಲಸ ಪಡೆದರೆ ಕರ್ನಾಟಕ ಸಾರಿಗೆ ಇಲಾಖೆಯಲೇ ಡ್ರೈವರ್ ಅಥವಾ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸಬೇಕೆಂದು ಕನಸು ಕಾಣುತ್ತಿರುತ್ತಾರೆ, ಅಂತವರಿಗೆ ಇದೊಂದು ಸರ್ಕಾರದಿಂದ ಭರ್ಜರಿ ಗಿಫ್ಟ್ ಅಂತ ಹೇಳಿದರೆ ತಪ್ಪಾಗುವುದಿಲ್ಲ.

ಅತಿ ಮುಖ್ಯವಾಗಿ ಯಾವುದೇ ಪರೀಕ್ಷೆ ಬೇಕಿಲ್ಲ,ಕೇವಲ ಓದಿನಲ್ಲಿ SSLC ತರಗತಿಯಾಗಿದ್ದರು ಸಾಕು ನೀವು KKRTC ಸಂಸ್ಥೆಯಲ್ಲಿ ಬಸ್ ಡ್ರೈವರ್ ಆಗಿ ಕೆಲಸ ನಿರ್ವಹಿಸಬಹುದು.


KKRTC ನೇಮಕಾತಿಯ ಮಾಹಿತಿ :-

ಮಿತ್ರರೇ ನೀನಿಲ್ಲಿ ನೋಡಬಹುದು ಬೀದರ್ ಜಿಲ್ಲೆಯ ಸರ್ಕಾರಿ ವಿಭಾಗದಲ್ಲಿ ಅಂದರೆ ಸಾರಿಗೆ ಸಂಬಂಧ ಪಟ್ಟ 78 ಹೊಸ ಬಸ್ ಚಾಲಕರ ನೇಮಕಾತಿಯನ್ನು ಮಾಡಿಕೊಳ್ಳಲು ಸರ್ಕಾರ ಅನುವು ಮಾಡಿಕೊಟ್ಟಿದೆ. ಈ ಹುದ್ದೆಗಳು ಕಾಯಂ ಆಗಿದ್ದು ಕರ್ನಾಟಕ ಸರ್ಕಾರಿ ನೌಕರರಿಗೆ ಯಾವ ಯಾವ ರೀತಿಯಲ್ಲಿ ಸೌಲಭ್ಯಗಳು ಸಿಗುತ್ತದೆಯೋ ಅದೇ ರೀತಿ ಎಲ್ಲವು ಈ ಹುದ್ದೆಗಳಲ್ಲಿ ಕಾರ್ಯ ನೀವೋರ್ವಹಿಸುವ ಅಭ್ಯರ್ಥಿಗಳಿಗೂ ಸಿಗುತ್ತದೆ.

ಹುದ್ದೆಯ ಅವಲೋಕನ :-

ಸಂಸ್ಥೆಯ ಹೆಸರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC)
ಕೆಲಸದ ಹೆಸರು ಚಾಲಕ (Driver – Outsource Basis)
ಒಟ್ಟು ಹುದ್ದೆಗಳು 78
ವಿದ್ಯಾರ್ಹತೆ  10ನೇ ತರಗತಿ
ವೇತನ ಇಲಾಖೆಯ ಅಧಿಕೃತ ಅಧಿಸೂಚನೆಯನ್ನು (Official Notification) ಪರಿಶೀಲಿಸಬಹುದು
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 03 ಫೆಬ್ರವರಿ 2026 ಮತ್ತು 04 ಫೆಬ್ರವರಿ 2026.
ಅರ್ಜಿ ಸಲ್ಲಿಸುವ ವಿಧಾನ ಆಫ್ ಲೈನ್ ಅರ್ಜಿ

ಹುದ್ದೆಯ ಹೆಸರು :-

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಬೀದರ್ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿದ್ದೋದ್ದೇಶ ಸಹಕಾರ ಸಂಘದ ಮೂಲಕ ಈ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು ಇಲ್ಲಿ ಇದೀಗ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ ಮಾಡಿದ್ದಾರೆ.

  • ಕರ್ನಾಟಕ ರಸ್ತೆ ಸಾರಿಗೆ ಚಾಲಕ ಹುದ್ದೆಗಳು

ಒಟ್ಟು ಹುದ್ದೆಗಳು :-

  • 2026 ನೇ ಸಾಲಿನ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಒಟ್ಟು 78 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿರುವಂಥದ್ದು.

ಹುದ್ದೆಗಳ ವಿವರ :-

ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 78 ಚಾಲಕ ಹುದ್ದೆಗಳು ಎರಡು ವಿಭಾಗಗಳಾಗಿ ಬೇರ್ಪಡಿಸಲಾಗಿದೆ.

  • 1. ಚಾಲಕ ಹುದ್ದೆಗಳು : 56
  • 2. ಹಿಂಬಾಕಿ (Backlog) ಹುದ್ದೆಗಳು : 22

ವಿದ್ಯಾರ್ಹತೆ :-

ಕೆಳಗೆ ಕೊಡಲಾದ ಅರ್ಹತೆಗಳು ನಿಮ್ಮಲಿದೆಯೇ ? ಪರಿಶೀಲಿಸಿ

ಕಲ್ಯಾಣ ಕರ್ನಾಟಕ ಭಾಗದ ನೇಮಕಾತಿಯಾಗಿದ್ದರೂ,ಮುಖ್ಯವಾಗಿ ಅರ್ಹತೆ ಇರುವ ಇಡೀ ಕರ್ನಾಟಕದ ಯಾವುದೇ ಜಿಲ್ಲೆಯ ಅಭ್ಯರ್ಥಿಗಳು ಈ ಸಂದರ್ಶನದಲ್ಲಿ ಬಾಗಿಯಾಗಬಹುದು. ಆದರೆ ಕೆಲಸದ ಸ್ಥಳ ಬೀದರ್ ಜಿಲ್ಲೆಯ ವ್ಯಾಪ್ತಿಯಲ್ಲಿರುತ್ತದೆ.

  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು.
  • ಅಭ್ಯರ್ಥಿಗಳು HTV License  (Heavy Transport Vehicle) ಹೊಂದಿ ಕನಿಷ್ಠ 2 ವರ್ಷಗಳು ಪೂರೈಸಿರಬೇಕು.
  • Karnataka Badge (ಚಾಲನಾ ಬ್ಯಾಡ್ಜ್) ಹೊಂದಿರುವುದು ಕಡ್ಡಾಯವಾಗಿದೆ.
  • ಸಾರಿಗೆ ಸಂಸ್ಥೆಯ ನಿಯಮದಂತೆ ಚಾಲಕನಿಗೆ ಅಗತ್ಯವಿರುವ ದೈಹಿಕ ಫಿಟ್ನೆಸ್ ಮತ್ತು ದೃಷ್ಟಿ ಸಾಮರ್ಥ್ಯ ಸರಿಯಾಗಿರಬೇಕು.

ವಯೋಮಿತಿ ಮತ್ತು ವಯೋಮಿತಿ ಸಡಿಲಿಕೆ ಒಳನೋಟ :-

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 24 ವರ್ಷ ವಯಸ್ಸು ತುಂಬಿರಬೇಕು

  • ಹಾಗೆ ಗರಿಷ್ಠ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : ಗರಿಷ್ಠ 35 ವರ್ಷ
  • ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಪ್ರವರ್ಗ-1 ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ: ಗರಿಷ್ಠ 40 ವರ್ಷ
  • 2A, 2B, 3A ಮತ್ತು 3B ಅಭ್ಯರ್ಥಿಗಳಿಗೆ: ಗರಿಷ್ಠ 38 ವರ್ಷ ನಿಗದಿಪಡಿಸಲಾಗಿದೆ.

ವೇತನ :-

  • ಅಭ್ಯರ್ಥಿಗಳು ಇಲಾಖೆಯ ಅಧಿಕೃತ ಅಧಿಸೂಚನೆಯಲ್ಲಿ ವೇತನ ಶ್ರೇಣಿಯನ್ನು ಪರಿಶೀಲಿಸಬಹುದು.

ಅರ್ಜಿ ಶುಲ್ಕ :-

  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ಪಾವತಿಸುವ ಅವಶ್ಯಕತೆ ಇರುವುದಿಲ್ಲ ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು ಮತ್ತು ಸಂದರ್ಶನಕ್ಕೆ ಹಾಜರಾಗುವ ಖರ್ಚನ್ನ ಮಾತ್ರ ಸ್ವಂತವಾಗಿ ನೀವೇ ನೋಡಿಕೊಳ್ಳಬೇಕಾಗುತ್ತದೆ.

ಉದ್ಯೋಗದ ಸ್ಥಳ :-

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈ ಸರ್ಕಾರಿ ಹುದ್ದೆಗಳನ್ನು ಗಿಟ್ಟಿಸಿಕೊಂಡರೆ  ಬೀದರ್-1, ಬೀದರ್-2, ಭಾಲ್ಕಿ, ಔರಾದ್, ಬಸವಕಲ್ಯಾಣ ಅಥವಾ ಹುಮನಾಬಾದ್ ಘಟಕಗಳಲ್ಲಿ ನಿಯೋಜನೆ ಮಾಡಲಾಗುತ್ತದೆ.

ಸಂದರ್ಶನದ ಪ್ರಕ್ರಿಯೆ ಬಗ್ಗೆ ತಿಳಿಯಲು ಬಯಸುವಿರಾ?

KKRTC  ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳನ್ನ ಈ ಕೆಳಗೆ ನೀಡಲಾದ ರೀತಿಯಲ್ಲಿ ಸಂದರ್ಶನಕ್ಕೆ ಒಳಪಡಿಸಲಾಗುತ್ತದೆ. ಹಾಗೆ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕವಿಲ್ಲ! ಜೊತೆಗೆ ಆನ್ಲೈನ್ ಮೂಲಕ ಯಾವ ರೀತಿಯಲ್ಲಿ ಅರ್ಜಿ ಸಲ್ಲಿಸಬೇಕೆನ್ನುವ ಗೊಂದಲವೂ ಇಲ್ಲ! ಹೌದು ನೀವು ನೋಡುತ್ತಿರುವ ಮಾಹಿತಿ ನಿಜಾ.

ಸಂದರ್ಶನ ನಡೆಯುವ ಪ್ರಮುಖ ದಿನಾಂಕ,ಸಮಯ, ಸ್ಥಳದ ಬಗ್ಗೆ ತಿಳಿಯಲು ಕೆಳಗೆ ನೋಡಿ :

“03.02.2026 ಮತ್ತು 04.02.2026 ರಂದು ಬೆಳಿಗ್ಗೆ 12.00 ಗಂಟೆಯ ಒಳಗಾಗಿ ಬೀದರ್‌ನ ಹಳೆ ಬಸ್ ನಿಲ್ದಾಣದಲ್ಲಿರುವ ಕೆಕೆಆರ್‌ಟಿಸಿ ವಿಭಾಗೀಯ ಕಛೇರಿಗೆ ಅಭ್ಯರ್ಥಿಗಳು ಹಾಜರಾಗಬೇಕು”.

ನಿಮ್ಮಲ್ಲಿ ಅರ್ಜಿ ಸಲ್ಲಿಸಲು ಇರಬೇಕಾದ ದಾಖಲೆಗಲು :-

  • ಚಾಲ್ತಿಯಲ್ಲಿರುವ HTV ಚಾಲನಾ ಪರವಾನಗಿ (Original License)
  • 6 ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು
  • ಕರ್ನಾಟಕ ಸಾರಿಗೆ ಇಲಾಖೆಯ ಬ್ಯಾಡ್ಜ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • SSLC ಅಂಕಪಟ್ಟಿ ಮತ್ತು ವರ್ಗಾವಣೆ ಪ್ರಮಾಣಪತ್ರ (TC)
  • ಮೇಲಿನ ಎಲ್ಲಾ ದಾಖಲೆಗಳ 2 ಸೆಟ್ ಜೆರಾಕ್ಸ್ ಪ್ರತಿಗಳು ಕಡ್ಡಾಯವಾಗಿ ಮಡಿಸಿಕೊಳ್ಳಿ

ಆಯ್ಕೆ ವಿಧಾನ :-

  • ಈ ಎಲ್ಲಾ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಮೆರಿಟ್ ಪಟ್ಟಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.
ಹಂತ 01 :

ದಾಖಲೆಗಳ ಪರಿಶೀಲನೆ ಅಭ್ಯರ್ಥಿಗಳು ಸಲ್ಲಿಸಿದ ಪ್ರಮುಖ ದಾಖಲೆಗಳ ನೈಜ್ಯತೆಯನ್ನು ಪರಿಶೀಲನೆ ಮಾಡಲಾಗುತ್ತದೆ.

ಹಂತ 02 :

ನಂತರದಲ್ಲಿ ಅಭ್ಯರ್ಥಿಗಳನ್ನ ಚಾಲನಾ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಇದರಲ್ಲಿ ಉತ್ತೀರ್ಣರಾದವರನ್ನು ಮಾತ್ರ ಮುಂದಿನ ಹಂತಕ್ಕೆ ಪರಿಗಣಿಸಲಾಗುತ್ತದೆ.

ಹಂತ 03 :

ಶಿಕ್ಷಣದ ಅಂಕಗಳು ಮತ್ತು ಚಾಲನಾ ಪರೀಕ್ಷೆಯ ಸಾಧನೆಯ ಆಧಾರದ ಮೇಲೆ ಕೊನೆಯ ಆಯ್ಕೆ ಪಟ್ಟಿಯನ್ನ ಸಿದ್ಧಪಡಿಸಲಾಗುತ್ತದೆ.

ಹಂತ 04 :

ಆಯ್ಕೆಯಾದ ಅಭ್ಯರ್ಥಿಗಳನ್ನು ಗರಿಷ್ಠ 11 ತಿಂಗಳ ಹೊರಗುತ್ತಿಗೆ ಅವಧಿಗೆ ನಿಯೋಜಿಸಲಾಗುತ್ತದೆ.


KKRTC ಹುದ್ದೆಯ ಪ್ರಮುಖ ಲಿಂಕುಗಳು :-

ಅಧಿಕೃತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್ಇಲ್ಲಿ ಕ್ಲಿಕ್ ಮಾಡಿ

ನನ್ನ ಕೊನೆಯ ಮಾತು :-

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಫೆಬ್ರವರಿ 3 ಮತ್ತು 4ನೇ ತಾರೀಕಿನಂದು ಬೆಳಿಗ್ಗೆ 9 ಗಂಟೆಗೆ ಸರಿಯಾದ ಸ್ಥಳಕ್ಕೆ ತಲುಪಿ. ಹಾಗೆ ಅಭ್ಯರ್ಥಿಗಳ ಲೈಸೆನ್ಸ್ ರಿನೀವಲ್ ಇದ್ದಾರೆ ಇದೆ ತಕ್ಷಣ ಸರಿ ಪಡಿಸಿಕೊಳ್ಳಿ. ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಡ್ರೈವರ್ ಆಗಬೇಕು ಎನ್ನುವ ನಿಮ್ಮ ಕನಸು ಕೈ ಜಾರದೆ ಇರುವ ಹಾಗೆ ನೋಡಿಕೊಳ್ಳಿ.

ಇತರೆ ಸರ್ಕಾರಿ ಹುದ್ದೆಗಳ ಲಿಂಕುಗಳು :-




Join WhatsApp

Join Now

Join Telegram

Join Now

Leave a Comment