ರೈತರಿಗೆ ಮತ್ತು ಸಹಕಾರಿ ಸಂಘದ ಸದಸ್ಯರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್. ಕರ್ನಾಟಕ ಸರ್ಕಾರವು ರೈತರು ಮತ್ತು ಸಹಕಾರಿ ಸಂಘದ ಸದಸ್ಯರಿಗೆ ಆರೋಗ್ಯ ರಕ್ಷಣೆಯನ್ನು ಒದಗಿಸಲು ಯಶಸ್ವಿನಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಒಂದು ಯಾಜನೆಯಿಂದಾಗಿ ರೈತರಿಗೆ , ಸಹಕಾರಿ ಸಂಘದವರಿಗೆ ಹಾಗೂ ಗ್ರಾಮೀಣ ಭಾಗದ ಜನರಿಗೆ ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ವೈದ್ಯಕೀಯ ಸೌಲಭ್ಯವನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಯಶಸ್ವಿನಿ ಯೋಜನೆ 2026: 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಪಡೆಯಲು ಇಂದೇ ಅರ್ಜಿ ಸಲ್ಲಿಸಿ : Karnataka Yashasvini Scheme 2026
ಈ ಯೋಜನೆಯ ಬಗೆಗಿನ ಇನ್ನಷ್ಟು ಮಾಹಿತಿಯನ್ನು ನಮ್ಮ ವೆಬ್ ಸೈಟ್ ಉದ್ಯೋಗ ಸಲಹೆಯಲ್ಲಿ ಕಾಣಬಹುದು. ಅರ್ಹ ಮತ್ತು ಆಸಕ್ತ ಫಲಾನುಭವಿಗಳು ಈ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಿ. ಈ ಒಂದು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ, ಹೇಗೆ ಅರ್ಜಿ ಸಲ್ಲಿಸಬೇಕು? ಎಲ್ಲಿ ಹೋಗಿ ಅರ್ಜಿ ಸಲ್ಲಿಸಬೇಕು? ಅರ್ಹತಾ ಮಾನದಂಡಗಳೇನು? ಅಗತ್ಯ ದಾಖಲೆಗಳೇನು? ಎನ್ನುವ ಬಗ್ಗೆ ಗೊಂದಲಗಳಿದ್ದರೆ ಈ ಒಂದು ಲೇಖನವು ನಿಮ್ಮ ಎಲ್ಲಾ ಗೊಂದಲಗಳಿಗೂ ಸಂಪೂರ್ಣ ಸ್ಪಷ್ಟತೆ ನೀಡುತ್ತದೆ.
ಯೋಜನೆಯ ಅವಲೋಕನ: (Karnataka Yashasvini Scheme 2026)
| ಯೋಜನೆಯ ಹೆಸರು | ಯಶಸ್ವಿನಿ ಯೋಜನೆ |
| ಅರ್ಹ ಫಲಾನುಭವಿಗಳು | ಸಹಕಾರಿ ಸಂಘದ ಸದಸ್ಯರು |
| ಒಟ್ಟು ಪ್ರೋತ್ಸಾಹಧನ | ಗರಿಷ್ಟ 5 ಲಕ್ಷದ ವರೆಗೆ |
| ಅರ್ಜಿಸಲ್ಲಿಸುವ ರಾಜ್ಯ | ಕರ್ನಾಟಕ |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ |
ಸಂಕ್ಷಿಪ್ತ ಮಾಹಿತಿ : Karnataka Yashasvini Scheme 2026
ಯಶಸ್ವಿನಿ ಯೋಜನೆಯು ಕರ್ನಾಟಕ ಸರ್ಕಾರದ ಒಂದು ಸಹಕಾರಿ ಅರೋಗ್ಯ ವಿಮೆ ಮಾತ್ರವಲ್ಲದೆ, ಸಹಕಾರಿ ಸಂಘದ ಸದಸ್ಯರಿಗೆ ಮತ್ತು ಅವರ ಕುಟುಂಬದವರಿಗೆ ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ನೀಡುವುದಾಗಿದೆ.
ಯಶಸ್ವಿನಿ ಯೋಜನೆಯನ್ನು 2003 ರಲ್ಲಿ ಜಾರಿಗೆತರಲಾಗಿತ್ತು. ನಂತರ ಈ ಯೋಜನೆಯು ಕೆಲವು ವರ್ಷಗಳ ಕಾಲ ಸ್ಥಗಿತ ಗೊಂಡಿತ್ತು. ಆದರೆ ಸಾರ್ವಜನಿಕರ ಒತ್ತಾಯ ಮತ್ತು ಅವರಿಗೆ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಕರ್ನಾಟಕ ಸರ್ಕಾರವು 2022-23 ರ ಸಾಲಿನಲ್ಲಿ ಪುನಃ ಜಾರಿಗೆ ತರಲಾಯಿತು. ಈ ಯೋಜನೆಯನ್ನು ಆರೋಗ್ಯ ಸೇವೆಯು ಸಾಮಾನ್ಯ ಜನರಿಗೆ ಹೊರೆಯಾಗಬಾರದೆಂಬ ಕಾರಣಕ್ಕಾಗಿ “ಸ್ವಲ್ಪ ಹಣ ನೀಡಿ, ಹೆಚ್ಚಿನ ಆರೋಗ್ಯ ಸೌಲಭ್ಯ ಪಡೆಯಿರಿ” ಎನ್ನುವ ತತ್ವದ ಮೂಲಕ ಜಾರಿಗೊಳಿಸಲಾಯಿತು.
ಯೋಜನೆಯ ಉದ್ದೇಶ: Karnataka Yashasvini Scheme 2026
- ಈ ಒಂದು ಯೋಜನೆಯಿಂದಾಗಿ ರೈತರಿಗೆ ಮತ್ತು ಸಹಕಾರಿ ಸಂಘದ ಸದಸ್ಯರಿಗೆ ಅತ್ಯಂತ ಕಡಿಮೆ ಶುಲ್ಕದಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯವನ್ನು ಒದಗಿಸುವುದು.
- ಜನರನ್ನು ಹೆಚ್ಚಾಗಿ ಸಹಕಾರಿ ಸಂಘಗಳಿಗೆ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದು.
- ಶಸ್ತ್ರಚಿಕಿತ್ಸೆ ಮಾಡುವ ಸಂದರ್ಭದಲ್ಲಿ ಅಥವಾ ತುರ್ತು ಸಂದರ್ಭದಲ್ಲಿ ಹಣದ ಕೊರತೆಯಿಂದ ಚಿಕಿತ್ಸೆ ನಿಲ್ಲಬಾರದೆಂಬ ಕಾರಣಕ್ಕಾಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಸೇವೆಗಳನ್ನು ಒದಗಿಸುವುದು.
- ದುಬಾರಿ ವೈದ್ಯಕೀಯ ವೆಚ್ಚಗಳಿಂದಾಗಿ ಬಡ ಕುಟುಂಬಗಳು ಸಾಲದ ಸುಲಿಗೆ ಸಿಲುಕುವುದನ್ನು ತಡೆಗಟ್ಟುವುದು.
- ನಗರ ಪ್ರದೇಶಗಳಲ್ಲಿ ಸಿಗುವ ಉತ್ತಮ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳನ್ನು ಗ್ರಾಮೀಣ ಪ್ರದೇಶದ ಜನರಿಗೂ ತಲುಪಿಸುವುದು.
ಯೋಜನೆಯ ಪ್ರಯೋಜನ:
- ಅರ್ಹ ಫಲಾನುಭವಿಗಳಿಗೆ ಮಾತ್ರವಲ್ಲದೆ ಅವರ ಕುಟುಂಬದ ಸದಸ್ಯರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.
- ನೋಂದಾಯಿತ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿದಾಗ ಕೇವಲ 200 ರೂಪಾಯಿಗಳಲ್ಲಿ ಚಿಕಿತ್ಸೆ ಮಾಡಿಸಿಕೊಳ್ಳಬಹುದು.
- ಕರ್ನಾಟಕದಾದ್ಯಂತ ಇರುವ ಸರ್ಕಾರಿ ಮತ್ತು ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.
- ಒಂದು ಕುಟುಂಬಕ್ಕೆ ಒಂದು ವರ್ಷಕ್ಕೆ ರೂ. 5,00,000 ದ ವರೆಗೆ ಚಿಕಿತ್ಸಾ ವೆಚ್ಚವನ್ನು ಸರ್ಕಾರವು ಭರಿಸುತ್ತದೆ.
ಅರ್ಹತಾ ಮಾನದಂಡ: Karnataka Yashasvini Scheme 2026
- ಕರ್ನಾಟಕ ರಾಜ್ಯದ ಯಾವುದೇ ಸಹಕಾರಿ ಸಂಘದ ಸದಸ್ಯರು ಮತ್ತು ಅವರ ಕುಟುಂಬದ ಸದಸ್ಯರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರು.
- ಕರ್ನಾಟಕದ ಯಾವುದೇ ಸಹಕಾರ ಸಂಘಗಳಲ್ಲಿ ಕನಿಷ್ಠ ಮೂರು ತಿಂಗಳು ಸದಸ್ಯರಾಗಿರಬೇಕು.
- ನವಜಾತ ಶಿಶುವಿನಿಂದ ಹಿಡಿದು ಗರಿಷ್ಟ 75 ವರ್ಷ ವಯೋಮಿತಿ ಹೊಂದಿರುವ ಸದಸ್ಯರು ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು.
- ಈ ಯೋಜನೆಯ ಪ್ರಯೋಜನ ಪಡೆಯಲು ಗ್ರಾಮೀಣ ಭಾಗದ ಜನರು ರೂ. 500 ಹಾಗೂ ನಗರ ಪ್ರದೇಶದ ಜನರು ರೂ. 1000 ವರೆಗೆ ವಾರ್ಷಿಕ ವಂತಿಕೆಯನ್ನು ಕಟ್ಟಿರಬೇಕು.
ಯಾರು ಅರ್ಹರಲ್ಲ? Karnataka Yashasvini Scheme 2026
- ನೌಕರರ ಸಹಕಾರ ಸಂಘದ ಸದಸ್ಯರು ಈ ಯೋಜನೆಗೆ ಅರ್ಹರಲ್ಲ.
- ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ನೌಕರಿಯಲ್ಲಿದ್ದರೆ ಅವರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಅರ್ಹರಲ್ಲ.
- ಸಹಕಾರ ಸಂಘಗಳಲ್ಲಿ ಕನಿಷ್ಠ ಮೂರು ತಿಂಗಳುಗಳ ಕಾಲ ಸದಸ್ಯತ್ವ ಹಿಂದಿರದವರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ.

ಅಗತ್ಯ ದಾಖಲೆಗಳು: Karnataka Yashasvini Scheme 2026
ಅರ್ಜಿ ಸಲ್ಲಿಸುವ ಫಲಾನುಭವಿಗಳು ಈ ಕೆಳಗಿನ ಅಗತ್ಯ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ.
- ಆದಾಯ ಪ್ರಮಾಣಪತ್ರ
- ಜಾತಿ ಪ್ರಮಾಣಪತ್ರ
- ಸಹಕಾರಿ ಸಂಘದ ಸದಸ್ಯತ್ವದ ಗುರುತಿನ ಚೀಟಿ
- ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್
- BPL ಕಾರ್ಡ್
- ಬ್ಯಾಂಕ್ ಖಾತೆಯ ವಿವರ
- ಮೊಬೈಲ್ ಸಂಖ್ಯೆ
- ಪಾಸ್ ಪೋರ್ಟ್ ಸೈಜ್ ಫೋಟೋ
ಅರ್ಜಿ ಸಲ್ಲಿಸುವ ವಿಧಾನ: Karnataka Yashasvini Scheme 2026
ಯಶಸ್ವಿನಿ ಯೋಜನೆಗೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು.
- ಸಹಕಾರ ಸಿಂಧು ಅಧಿಕೃತ ವೆಬ್ ಸೈಟ್ https://sahakarasindhu.karnataka.gov.in/ ಗೆ ಭೇಟಿ ನೀಡಿ
- ಅರ್ಜಿ ನಮೂನೆಯನ್ನು ಕ್ಲಿಕ್ ಮಾಡಿ ನೀಡಿರುವ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ.
- ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಭರ್ತಿಮಾಡಿ ಸಬ್ಮಿಟ್ ಮಾಡಿ ಅಗತ್ಯವಿದ್ದರೆ ಪ್ರಿಂಟ್ ತೆಗೆದುಕೊಳ್ಳಿ.
ತೀರ್ಮಾನ:
ಕರ್ನಾಟಕ ಸರ್ಕಾರವು ಸಹಕಾರ ಸಂಘದ ಸದಸ್ಯರಿಗೆ ಮತ್ತು ರೈತರಿಗೆ ಆರೋಗ್ಯ ರಕ್ಷಣೆಯನ್ನು ಒದಗಿಸುವ ಉದ್ದೇಶದಿಂದ ಯಶಸ್ವಿನಿ ಯೋಜನೆಯನ್ನು ಜಾರಿಗೆ ತಂದಿದೆ. ಯಶಸ್ವಿನಿ ಯೋಜನೆಯು ಕೇವಲ ಅರೋಗ್ಯ ವಿಮೆ ಮಾತ್ರವಾಗಿರದೆ, ಲಕ್ಷಾಂತರ ರೈತರ ಹಾಗೂ ಸಹಕಾರಿ ಸಂಘದವರ ಪಾಲಿಗೆ ಆರೋಗ್ಯ ಸಂಜೀವಿನಿಯಾಗಿದೆ. ಈ ಯೋಜನೆಯಡಿಯಲ್ಲಿ ಸರ್ಕಾರವು 5 ಲಕ್ಷದ ವರೆಗೆ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಭರಿಸುತ್ತದೆ. ಅರ್ಹ ಫಲಾನುಭವಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಿ.





