ITI ಯುವ ವೃತ್ತಿಪರ ಹುದ್ದೆಗಳ ನೇಮಕಾತಿ 2026 | ITI Young Professional Recruitment 2026

On: Saturday, December 27, 2025 4:13 PM
ITI ಯುವ ವೃತ್ತಿಪರ ಹುದ್ದೆಗಳ ನೇಮಕಾತಿ 2026 | ITI Young Professional Recruitment 2026

ಕೇಂದ್ರ ಸರ್ಕಾರಿ ಹುದ್ದೆಗಳಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಇಲ್ಲಿದೆ ಬಂಪರ್ ಅವಕಾಶ. ಭಾರತೀಯ ದೂರವಾಣಿ ಕೈಗಾರಿಕೆಗಳು 2026 ರಲ್ಲಿ ಯುವ ವೃತ್ತಿಪರ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.

ITI Young Professional Recruitment 2026

ಈ ಹುದ್ದೆಗಳಿಗೆ ಸಂಬಂಧಿಸಿದಂತೆ ನಮ್ಮ ವೆಬ್ ಸೈಟ್ ಉದ್ಯೋಗ ಸಲಹೆ ಯಲ್ಲಿ ಸಂಪೂರ್ಣ ಮಾಹಿತಿಯನ್ನು ನೋಡಬಹುದು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ 22-12-2025 ರಿಂದ 12-01-2026 ರ ವರೆಗೂ ಅವಕಾಶವಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಿ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ, ಅರ್ಹತಾ ಮಾನದಂಡ, ಅಗತ್ಯ ದಾಖಲೆಗಳು ಹಾಗೂ ಇನ್ನಿತರೆ ಮಾಹಿತಿಗಳ ಬಗ್ಗೆ ಸಂಪೂರ್ಣವಾಗಿ ಕೆಳಗೆ ನೀಡಿರುತ್ತೇವೆ ಅದನ್ನು ಓದಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ.

ಹುದ್ದೆಗಳ ಅವಲೋಕನ: (ITI Young Professional Recruitment 2026)

ಸಂಸ್ಥೆಯ ಹೆಸರುಐ ಟಿ ಐ ಲಿಮಿಟೆಡ್
ಹುದ್ದೆಯ ಹೆಸರುಯುವ ವೃತ್ತಿಪರ ನೇಮಕಾತಿ
ಹುದ್ದೆಯ ಸಂಖ್ಯೆ215 ಹುದ್ದೆಗಳು
ಉದ್ಯೋಗ ಸ್ಥಳಅಖಿಲ ಭಾರತ
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 22-12-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12-01-2026
ITI Young Professional Recruitment 2026

ಸಂಕ್ಷಿಪ್ತ ಮಾಹಿತಿ:

ಭಾರತೀಯ ದೂರವಾಣಿ ಕೈಗಾರಿಕೆಗಳು 2026 ರಲ್ಲಿ ಒಟ್ಟು 215 ಯುವ ವೃತ್ತಿಪರ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಬಿ.ಟೆಕ್, ಐಟಿಐ, ಬಿಇ, ಪಿಜಿ ಡಿಪ್ಲೊಮಾ, ಯಾವುದೇ ಪದವಿ ಹೊಂದಿದ 35 ವರ್ಷ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Indian Telephone Industries Ltd in Dooravani Nagar, Bangalore - Best Roof  Top Tower Manufacturers in Bangalore - Justdial
ITI Young Professional Recruitment 2026

ಹುದ್ದೆಗಳ ವಿವರ:

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ
ಯುವ ವೃತ್ತಿಪರ ಪದವೀಧರರು (ಯೋಜನೆ)20
ಯುವ ವೃತ್ತಿಪರ ತಂತ್ರಜ್ಞ (ಯೋಜನೆ)19
ಯುವ ವೃತ್ತಿಪರ ಆಪರೇಟರ್ (ಯೋಜನೆ)12
ಯುವ ವೃತ್ತಿಪರ ಪದವೀಧರ (ಯೋಜನಾ ನಿರ್ವಹಣೆ)04
ಯುವ ವೃತ್ತಿಪರ ಪದವೀಧರ (IS ಮತ್ತು IT)02
ಯುವ ವೃತ್ತಿಪರ ತಂತ್ರಜ್ಞ (IS ಮತ್ತು IT)02
ಯುವ ವೃತ್ತಿಪರ ಪದವೀಧರ (ಕಂಪ್ಯೂಟರ್ ಲ್ಯಾಬ್)02
ವಿವಿಧ ಪದವೀಧರ/ ತಂತ್ರಜ್ಞ (ರಸಾಯನಶಾಸ್ತ್ರ/ ರಾಸಾಯನಿಕ ಇಂಜಿನಿಯರಿಂಗ್)14
ಯುವ ವೃತ್ತಿಪರ ಆಪರೇಟರ್ (ಎಲೆಕ್ಟ್ರಾನಿಕ್ಸ್/ ಇಲೆಕ್ಟ್ರಾನಿಕ್ ಮೆಕ್ಯಾನಿಕ್/ ಫಿಟ್ಟರ್)30
ಯುವ ವೃತ್ತಿಪರ ಪದವೀಧರರು (ಟಿ.ಎಸ್.ಟಿ.ಎಲ್)05
ಯುವ ವೃತ್ತಿಪರ ತಂತ್ರಜ್ಞ (ಉತ್ಪದಾನೆ)23
ಯುವ ವೃತ್ತಿಪರ ಆಪರೇಟರ್ (ಉತ್ಪದಾನೆ)29
ಯುವ ವೃತ್ತಿಪರ ಸಾಮಾನ್ಯವಾದಿ (ಮಾನವಸಂಪನ್ಮೂಲ)15
ಯುವ ವೃತ್ತಿಪರ ಪದವೀಧರ (ಮಾರ್ಕೆಟಿಂಗ್)10
ಯುವ ವೃತ್ತಿಪರ ಸಾಮಾನ್ಯವಾದಿ (ಮಾರ್ಕೆಟಿಂಗ್)10
ಯುವ ವೃತ್ತಿಪರ ಸಾಮಾನ್ಯವಾದಿ10
ಯುವ ವೃತ್ತಿಪರ ಅಧಿಕೃತ ಭಾಷೆ (ಹಿಂದಿ ಕೋಶ)04
ITI Young Professional Recruitment 2026

ಶೈಕ್ಷಣಿಕ ಅರ್ಹತೆ:

  • ಯೋಜನೆಗಳ ವಿಭಾಗದಲ್ಲಿ ಯುವ ವೃತ್ತಿಪರ ಪದವೀಧರ ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಗಳಲ್ಲಿ ಮೆಕ್ಯಾನಿಕಲ್ EC/CS/ IT/EEE ಸಿವಿಲ್ ನಲ್ಲಿ BE/B.Tech ಅಥವಾ MCA/M.Sc ಪದವಿಯನ್ನು ಹೊಂದಿರಬೇಕು.
  • ಯೋಜನೆಗಳ ವಿಭಾಗದಲ್ಲಿ ಯುವ ವೃತ್ತಿಪರ ತಂತ್ರಜ್ಞ ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಗಳಲ್ಲಿ ಮೆಕ್ಯಾನಿಕಲ್ EC/CS/ IT/EEE ಸಿವಿಲ್ ನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
  • ಯುವ ವೃತ್ತಿಪರ ಆಪರೇಟರ್ ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಗಳಲ್ಲಿ ಮೆಕ್ಯಾನಿಕಲ್ EC/CS/ IT/EEE ಸಿವಿಲ್ ನಲ್ಲಿ ITI ಟ್ರೇಡ್ ಪ್ರಮಾಣಪತ್ರವನ್ನು ಹೊಂದಿರಬೇಕು.
  • ಯೋಜನಾ ನಿರ್ವಹಣೆ ವಿಭಾಗದ ಯುವ ವೃತ್ತಿಪರ ಪದವೀಧರ ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಗಳಲ್ಲಿ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್/ಆಪರೇಷನ್ ಮ್ಯಾನೇಜ್ಮೆಂಟ್ ನಲ್ಲಿ MBA ಅಥವಾ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ನಲ್ಲಿ M.Sc ಪದವಿಯನ್ನು ಹೊಂದಿರಬೇಕು.
  • IS ಮತ್ತು IT ವಿಭಾಗದಲ್ಲಿ ಯುವ ವೃತ್ತಿಪರ ಪದವೀಧರ ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಗಳಲ್ಲಿ ಮೆಕ್ಯಾನಿಕಲ್ EC/CS/ IT/EEE ಸಿವಿಲ್ ನಲ್ಲಿ BE/B.Tech ಅಥವಾ MCA/M.Sc ಪದವಿಯನ್ನು ಹೊಂದಿರಬೇಕು.
  • IS ಮತ್ತು IT ವಿಭಾಗದಲ್ಲಿ ಯುವ ವೃತ್ತಿಪರ ತಂತ್ರಜ್ಞ ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಗಳಲ್ಲಿ B.Sc (IT)/BCA/CS ನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
  • ಕಂಪ್ಯೂಟರ್ ಲ್ಯಾಬ್ ವಿಭಾಗದಲ್ಲಿ ಯುವ ವೃತ್ತಿಪರ ಪದವೀಧರ ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಗಳಲ್ಲಿ CS/ IT ನಲ್ಲಿ BE/B.Tech ಪೂರ್ಣಗೊಳಿಸಿರಬೇಕು.
  • ರಸಾಯನಶಾಸ್ತ್ರ/ ರಾಸಾಯನಿಕ ಇಂಜಿನಿಯರಿಂಗ್ ವಿಭಾಗದಲ್ಲಿ ವಿವಿಧ ಪದವೀಧರ ಅಥವಾ ತಂತ್ರಜ್ಞ ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ರಸಾಯನಶಾಸ್ತ್ರದಲ್ಲಿ B.Sc ಮತ್ತು ರಾಸಾಯನಿಕ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
  • ಉತ್ಪದನಾ ವಿಭಾಗದ ಯುವ ವೃತ್ತಿಪರ ಪದವೀಧರ ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
  • ಟಿ.ಎಸ್.ಟಿ.ಎಲ್ ವಿಭಾಗದ ಯುವ ವೃತ್ತಿಪರ ಪದವೀಧರ ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು BE/B.Tech MCA/M.Sc ಪೂರ್ಣಗೊಳಿಸಿರಬೇಕುಜೊತೆಗೆ 2 ವರ್ಷ ಅನುಭವವನ್ನು ಹೊಂದಿರಬೇಕು.
  • ಮಾನವಸಂಪನ್ಮೂಲ ವಿಭಾಗದ ಯುವ ವೃತ್ತಿಪರ ಸಾಮಾನ್ಯವಾದಿ ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಪದವಿ ಮತ್ತು ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
  • ಮಾರ್ಕೆಟಿಂಗ್ ವಿಭಾಗದ ಯುವ ವೃತ್ತಿಪರ ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು MBA ಪೂರ್ಣಗೊಳಿಸಿರಬೇಕು.
  • ಅಧಿಕೃತ ಭಾಷೆ ವಿಭಾಗದ ಯುವ ವೃತ್ತಿಪರ ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಹಿಂದಿ/ ಇಂಗ್ಲಿಷ್ ವಿಷಯದ ಪದವಿಯನ್ನು ಹೊಂದಿರಬೇಕು.

ವಯೋಮಿತಿ: ITI Young Professional Recruitment 2026

  • ಸಾಮಾನ್ಯ ಅಭ್ಯರ್ಥಿಗಳಿಗೆ (ಯುವ ವೃತ್ತಿಪರ ಮತ್ತು ಜರ್ನಲಿಸ್ಟ್) ಗರಿಷ್ಠ 35 ವರ್ಷ ವಯೋಮಿತಿಯನ್ನು ಹೊಂದಿರಬೇಕು.
  • OBC/SC/ST/PwD ಅಭ್ಯರ್ಥಿಗಳಿಗೆ ITI/ ಸರ್ಕಾರದ ನಿಯಮದ ಪ್ರಕಾರ ವಯೋಮಿತಿ ಅನ್ವಹಿಸುತ್ತದೆ.
  • ITI ಉದ್ಯೋಗಿಗಳಿಗೆ ಸಂಬಂಧಿತ ಅನುಭವದ ಆಧಾರದ ಮೇಲೆ ಗರಿಷ್ಠ 45 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ: ITI Young Professional Recruitment 2026

  • ಅಧಿಕೃತ ಅಧಿಸೂಚನೆಯಲ್ಲಿ ಅರ್ಜಿ ಶುಲ್ಕದ ಬಗ್ಗೆ ನಿಗದಿಪಡಿಸಿಲ್ಲ.

ವೇತನ ಶ್ರೇಣಿ: ITI Young Professional Recruitment 2026

  • ಆಯ್ಕೆಗೊಂಡ ಅಭ್ಯರ್ಥಿಗೆ ರೂ. 30,000 ದಿಂದ 60,000 ವರೆಗೆ ಮಾಸಿಕ ವೇತನ ನೀಡಲಾಗುವುದು.

ಅಗತ್ಯ ದಾಖಲೆಗಳು:

  • ಶೈಕ್ಷಣಿಕ ಪ್ರಮಾಣಪತ್ರ
  • ಅಂಕಪಟ್ಟಿ
  • ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಫೋಟೋ
  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ಓಟರ್ ಐಡಿ
  • ಜಾತಿ ಮತ್ತು ಆದಾಯ ಪ್ರಮಾಣಪತ್ರ

ಅರ್ಜಿ ಸಲ್ಲಿಸುವ ವಿಧಾನ:

  • ಅಧಿಕೃತ ವೆಬ್ ಸೈಟ್ https://itiltd.in/ ಗೆ ಭೇಟಿ ನೀಡಿ
  • ಕೆರಿಯರ್ ವಿಭಾಗದಲ್ಲಿರುವ ಅಧಿಸೂಚನೆಯನ್ನು ಸರಿಯಾಗಿ ಓದಿಕೊಳ್ಳಿ.
  • ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಭರ್ತಿಮಾಡಿ ಸಬ್ಮಿಟ್ ಮಾಡಿ ಅಗತ್ಯವಿದ್ದರೆ ಪ್ರಿಂಟ್ ತೆಗೆದುಕೊಳ್ಳಿ.

ಪ್ರಮುಖ ದಿನಾಂಕಗಳು:

  • ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22-12-2025
  • ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-01-2026

ಆಯ್ಕೆ ಪ್ರಕ್ರಿಯೆ:

  • ಮೊದಲು ಅರ್ಜಿಗಳ ಶಾರ್ಟ್ ಲಿಸ್ಟ್ ಮಾಡಲಾಗುವುದು
  • ಕೌಶಲ್ಯ ಪರೀಕ್ಷೆ
  • ಗುಂಪು ಚರ್ಚೆ
  • ವೈಯಕ್ತಿಕ ಸಂದರ್ಶನ

ಪ್ರಮುಖ ಲಿಂಕ್ ಗಳು:

ಅಧಿಸೂಚನೆಯ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ ಸೈಟ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
ITI Young Professional Recruitment 2026

ತೀರ್ಮಾನ:

ಭಾರತೀಯ ದೂರವಾಣಿ ಕೈಗಾರಿಕೆಗಳು 2026 ರಲ್ಲಿ ಒಟ್ಟು 215 ಯುವ ವೃತ್ತಿಪರ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 12-01-2026 ರ ವರೆಗೂ ಅವಕಾಶವಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅರ್ಹತಾ ಮಾನದಂಡವನ್ನು ಪೂರೈಸುತ್ತೇವೆಯೋ? ಇಲ್ಲವೋ? ಎಂದು ಖಚಿತ ಪಡಿಸಿಕೊಂಡು ಅರ್ಜಿಯನ್ನು ಸಲ್ಲಿಸಿ.

ಇತರೆ ಪ್ರಮುಖ ಲಿಂಕ್ ಗಳು:

ಹುದ್ದೆಗಳು ಹುದ್ದೆಗಳ ಲಿಂಕ್ ಗಳು
CSIR ನೇಮಕಾತಿ 2026ಇಲ್ಲಿ ಕ್ಲಿಕ್ ಮಾಡಿ
NMPA ಪದವೀಧರ / ಡಿಪ್ಲೊಮ ಅಪ್ರೆಂಟೀಸ್ ನೇಮಕಾತಿ 2025ಇಲ್ಲಿ ಕ್ಲಿಕ್ ಮಾಡಿ
BMRCL ಮ್ಯಾನೇಜರ್ ಹುದ್ದೆಗಳ ನೇಮಕಾತಿ 2026ಇಲ್ಲಿ ಕ್ಲಿಕ್ ಮಾಡಿ
ಸಿಬ್ಬಂದಿ ನೇಮಕಾತಿ ಆಯೋಗ (SSC) ಸ್ಟೆನೋಗ್ರಾಫರ್ ಗ್ರೇಡ್ C ನೇಮಕಾತಿ ಇಲ್ಲಿ ಕ್ಲಿಕ್ ಮಾಡಿ
BSF ಕಾನ್ಸ್ಟೇಬಲ್ ನೇಮಕಾತಿಇಲ್ಲಿ ಕ್ಲಿಕ್ ಮಾಡಿ

Join WhatsApp

Join Now

Join Telegram

Join Now

Leave a Comment