9 ಲಕ್ಷ ಗೃಹ ಸಾಲ ಸಬ್ಸಿಡಿ ಯೋಜನೆ 2026 | Home Loan Subsidy Scheme 2026

On: Thursday, January 8, 2026 1:35 PM
ಕೇಂದ್ರ ಸರ್ಕಾರದಿಂದ ಗೃಹ ಸಾಲ ಸಬ್ಸಿಡಿ ಯೋಜನೆ 2026 | Home Loan Subsidy Scheme 2026

ನಮಸ್ಕಾರ ಸ್ನೇಹಿತರೆ, ಸ್ವಂತ ಮನೆ ನಿರ್ಮಿಸಬೇಕು ಎಂದು ಕನಸು ಕಾಣುವವರಿಗೆ ಮೋದಿ ಸರ್ಕಾರದಿಂದ ಇಲ್ಲದೆ ಭರ್ಜರಿ ಗುಡ್ ನ್ಯೂಸ್. ಭಾರತೀಯ ಸರ್ಕಾರದ ವಿವಿಧ ವಸತಿ ಯೋಜನೆಯಡಿಯಲ್ಲಿ ಗೃಹ ಸಾಲ ಪಡೆದುಕೊಳ್ಳುವವರಿಗೆ ಬಡ್ಡಿ ಮತ್ತು ಅಸಲು ಮೊತ್ತದ ಮೇಲೆ ಸಬ್ಸಿಡಿ ಪಡೆದುಕೊಳ್ಳಬಹುದು. ನೀವು ಕೂಡ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕಾ? ಹಾಗಿದ್ದರೆ ಈ ಯೋಜನೆಯ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಓದಿಕೊಂಡು ಅರ್ಜಿ ಸಲ್ಲಿಸಿ ಇದರ ಲಾಭ ಪಡೆದುಕೊಳ್ಳಿ.

9 ಲಕ್ಷ ಗೃಹ ಸಾಲ ಸಬ್ಸಿಡಿ ಯೋಜನೆಗೆ ಈಗ್ಲೇ ಅರ್ಜಿ ಸಲ್ಲಿಸಿ : Home Loan Subsidy Scheme 2026

ಭಾರತ ಸರ್ಕಾರದ ವಿವಿಧ ವಸತಿ ಯೋಜನೆಗಳು ಮಧ್ಯಮ ಹಾಗೂ ಬಡ ವರ್ಗದ ಜನರಿಗೆ ಮನೆ ಖರೀದಿಸಲು ಅಥವಾ ನಿರ್ಮಿಸಲು ಸಬ್ಸಿಡಿ ರೂಪದಲ್ಲಿ ಹಣಕಾಸಿನ ನೆರವನ್ನು ಒದಗಿಸಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಜೊತೆಗೆ, ರೂ. 9 ಲಕ್ಷ ಗೃಹ ಸಾಲ ಸಬ್ಸಿಡಿ ಯೋಜನೆಯಡಿಯಲ್ಲಿಯೂ ಸಬ್ಸಿಡಿ ಪಡೆದುಕೊಳ್ಳಬಹುದು.

Join WhatsApp

Join Now

Join Telegram

Join Now

ಈ ಒಂದು ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ನಮ್ಮ https://udyogasalahe.in ವೆಬ್ ಸೈಟ್ ಗೆ ಭೇಟಿ ನೀಡಿ. ಈ ಯೋಜನೆಗೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕಾಗುತ್ತದೆ. ಅರ್ಹ ಫಲಾನುಭವಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಯೋಜನೆಯ “ಉದ್ದೇಶ, ಯೋಜನೆಯ ಪ್ರಯೋಜನ, ಅಗತ್ಯ ದಾಖಲೆಗಳು, ಅರ್ಹತಾ ಮಾನದಂಡ “ ಇನ್ನಷ್ಟು ಮಾಹಿತಿಯನ್ನು ಕೆಳಗಿನ ಹಂತದಲ್ಲಿ ನೀಡಿದ್ದು ಅದನ್ನು ಓದಿಕೊಂಡು ಅರ್ಜಿ ಸಲ್ಲಿಸಿ.

ಯೋಜನೆಯ ಅವಲೋಕನ: (Home Loan Subsidy Scheme 2026)

ಯೋಜನೆಯ ಹೆಸರು9 ಲಕ್ಷ ಗೃಹ ಸಾಲ ಸಬ್ಸಿಡಿ ಯೋಜನೆ
ಅರ್ಹ ಫಲಾನುಭವಿಗಳುಸ್ವಂತ ಮನೆ ಹೊಂದಿಲ್ಲದವರು
ಒಟ್ಟು ಪ್ರೋತ್ಸಾಹಧನರೂ. 9 ಲಕ್ಷದ ವರೆಗೆ ಸಬ್ಸಿಡಿ
ಅರ್ಜಿ ಸಲ್ಲಿಸುವ ವಿಧಾನಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು
Home Loan Subsidy Scheme 2026

ಸಂಕ್ಷಿಪ್ತ ಮಾಹಿತಿ:

ನಮಗೆಲ್ಲ ತಿಳಿದಿರುವ ಹಾಗೆ, ನರೇಂದ್ರ ಮೋದಿಯವರು 2023 ರಂದು 5 ವರ್ಷಗಳ ಅವಧಿಯಲ್ಲಿ ಸಣ್ಣ ನಗರಗಳಲ್ಲಿ ಮನೆ ಖರೀದಿ ಅಥವಾ ನಿರ್ಮಾಣ ಮಾಡುವವರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಹೊಸ ವಸತಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

ಹೀಗೆ ಹಂತ ಹಂತವಾಗಿ ಏನಿದು 9 ಲಕ್ಷ ಗೃಹ ಸಾಲ ಸಬ್ಸಿಡಿ ಯೋಜನೆ? ಈ ಯೋಜನೆಗೆ ಅರ್ಹ ಫಲಾನುಭವಿಗಳು ಯಾರು? ಈ ಯೋಜನೆಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ದೊರೆಯುವ ಸಬ್ಸಿಡಿ ಸಾಲ ಸೌಲಭ್ಯಗಳೆಷ್ಟು? ಅರ್ಜಿ ಸಲ್ಲಿಸುವುದು ಹೇಗೆ ? ಎನ್ನುವ ಬಗ್ಗೆ ತಿಳಿದುಕೊಳ್ಳೋಣ.

ಏನಿದು ಆಶ್ರಯ ವಸತಿ ಯೋಜನೆ ? Home Loan Subsidy Scheme 2026

ಭಾರತ ಸರ್ಕಾರದ 9 ಲಕ್ಷ ಗೃಹ ಸಾಲ ಸಬ್ಸಿಡಿ ಯೋಜನೆಯು ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಬರುವ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ ಆಗಿದ್ದು, ಈ ಯೋಜನೆಯಡಿಯಲ್ಲಿ 9 ಲಕ್ಷ ಗೃಹ ಸಾಲಕ್ಕೆ ಒಂದು ವರ್ಷಕ್ಕೆ 3% ಯಿಂದ 6.5% ವರೆಗೆ ಬಡ್ಡಿಗೆ ಸಬ್ಸಿಡಿ ನೀಡಲಾಗುವುದು. ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ ಕಳೆದ 20 ವರ್ಷಗಳ ಅವಧಿಯಲ್ಲಿ 50 ಲಕ್ಷದ ಒಳಗೆ ಗೃಹ ಸಾಲವನ್ನು ಪಡೆದಿರಬೇಕು.

ಯೋಜನೆಯ ಉದ್ದೇಶ: Home Loan Subsidy Scheme 2026

  • ಸ್ವಂತ ಮನೆಯನ್ನು ಹೊಂದಿಲ್ಲದ ಕುಟುಂಬಗಳಿಗೆ ಗ್ರಹ ಸಾಲ ಸಬ್ಸಿಡಿ ನೀಡುವ ಮೂಲಕ ಮನೆಯನ್ನು ನಿರ್ಮಿಸಲು ಅಥವಾ ಖರೀದಿಸಲು ಉತ್ತೇಜನವನ್ನು ನೀಡುವುದು.
  • ಬಾಡಿಗೆ ಮನೆಗಳಲ್ಲಿ ವಾಸಿಸುವ ಜನರಿಗೆ ಸ್ವಂತ ಮನೆಯನ್ನು ಕಲ್ಪಿಸುವ ಮೂಲಕ ಅವರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವುದು ಮತ್ತು ಅವರ ಜೀವನ ಮಟ್ಟವನ್ನು ಸುಧಾರಿಸುವುದು.
  • ಬಡ ಮತ್ತು ಮಾಧ್ಯಮ ವರ್ಗದ ಕುಟುಂಬಗಳಿಗೆ ಮನೆ ನಿರ್ಮಿಸಲು ಅಥವಾ ಖರೀದಿಸಲು ಸಾಲವನ್ನು ಪಡೆದರೆ ಬಡ್ಡಿಯ ಹೊರೆ ಹೆಚ್ಚಾಗುತ್ತದೆ ಈ ಹೊರೆಯನ್ನು ಕಡಿಮೆ ಮಾಡಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
  • ಈ ಒಂದು ಯೋಜನೆಯಿಂದಾಗಿ ಅನೇಕರು ಮನೆ ನಿರ್ಮಾಣಕ್ಕೆ ಮುಂದಾಗುದರಿಂದ ಕಟ್ಟಡ ಕಾರ್ಮಿಕರಿಗೆ ಉದ್ಯೋಗಾವಕಾಶವನ್ನು ಹೆಚ್ಚಿಸುವುದು.
  • ಮನೆಯ ಮಾಲೀಕತ್ವ ಕುಟುಂಬದ ಮಹಿಳೆಯರ ಹೆಸರಿನಲ್ಲಿ ಇರಬೇಕೆಂಬ ಆದೇಶವಿದ್ದು, ಇದರಿಂದಾಗಿ ಲಿಂಗ ಸಮಾನತೆಯನ್ನು ಉತ್ತೇಜಿಸುವುದು.

ಯೋಜನೆ ಮೂಲಕ ಹಣ ಎಷ್ಟು ಸಿಗುತ್ತದೆ :

ಈ ಒಂದು ಯೋಜನೆಯಡಿಯಲ್ಲಿ ಸರ್ಕಾರವು ಸಬ್ಸಿಡಿ ಹಣವನ್ನು ನೇರವಾಗಿ ಫಲಾನುಭವಿಗಳ ಕೈಗೆ ನೀಡುವುದಿಲ್ಲ ಬದಲಾಗಿ ಬ್ಯಾಂಕ್ ನಲ್ಲಿ ಪಡೆದ ಸಾಲದ ಬಡ್ಡಿಯ ಮೇಲೆ ರಿಯಾಯಿತಿ ಸುಗುತ್ತದೆ.

ಯೋಜನೆ ಲಾಭ ಪಡೆಯಲು ಯಾರೆಲ್ಲಾ ಅರ್ಹರು?

  • ಅರ್ಜಿದಾರರು ಭಾರತೀಯ ನಾಗರಿಕನಾಗಿರಬೇಕು.
  • ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಸ್ವಂತ ಮನೆ ಇರಬಾರದು.
  • ಅರ್ಜಿದಾರರು ಮನೆ ನಿರ್ಮಿಸಲು ಜಮೀನಿನ ನಿವೇಶನ ದಾಖಲೆಗಳನ್ನು ಹೊಂದಿರಬೇಕು.
  • ಆರ್ಥಿಕ ದುರ್ಬಲ ವರ್ಗದ ವಾರ್ಷಿಕ ಆದಾಯವು  ₹3 ಲಕ್ಷ ಇರಬೇಕು
  • ಕಡಿಮೆ ಆದಾಯದ ಗುಂಪಿನ ಕುಟುಂಬಗಳ ವಾರ್ಷಿಕ ಆದಾಯವು ₹ 3 ಲಕ್ಷದಿಂದ ₹ 6 ಲಕ್ಷದ ವರೆಗೆ ಇರಬೇಕು
  • ಮಧ್ಯಮ ಆದಾಯದ ಗುಂಪಿನ ಕುಟುಂಬಗಳ ವಾರ್ಷಿಕ ಆದಾಯವು ₹ 6 ಲಕ್ಷದಿಂದ ₹ 18 ಲಕ್ಷದ ವರೆಗೆ ಇರಬೇಕು
  • ಅರ್ಜಿದಾರರು ಈ ಹಿಂದೆ ಯಾವುದೇ ವಸತಿ ಯೋಜನೆಯ ಪ್ರಯೋಜನವನ್ನು ಪಡೆದಿರಬಾರದು.

ಯೋಜನೆಯ ಪ್ರಯೋಜನ ಏನಾಗಿರುತ್ತೆ ತಿಳಿಯೋಣ :

  • ಬಾಡಿಗೆ ಮನೆಯಲ್ಲಿ ವಾಸಮಾಡುತ್ತಿಸುವವರು ತಮ್ಮದೇ ಆದ ಸ್ವಂತ ಮನೆಯನ್ನು ನಿರ್ಮಿಸಿಕೊಳ್ಳಬಹುದು.
  • ಗೃಹ ಸಾಲ ಪಡೆಯುವವರು ಬಡ್ಡಿ ಮತ್ತು ಅಸಲು ಮೊತ್ತದ ಮೇಲೆ ಸಬ್ಸಿಡಿ ಪಡೆಯುದರಿಂದ ಸಾಲದ ಮತ್ತು ಬಡ್ಡಿ ಹೊರೆ ಕಡಿಮೆಯಾಗುತ್ತದೆ.
  • ಸರ್ಕಾರದಿಂದ ಬಡ ಕುಟುಂಬಕ್ಕೆ ಭದ್ರತೆ, ಉತ್ತಮ ಆರೋಗ್ಯ ಹಾಗೆ ನೈರ್ಮಲ್ಯದ ವಾತಾವರಣ ನಿರ್ಮಾಣ ಗೊಳ್ಳುತ್ತದೆ.
  • ಗೃಹ ಸಾಲ ಸಬ್ಸಿಡಿ ಯೋಜನೆಯಿಂದ ಮನೆಯ ಮಾಲೀಕರ ಸಾಲ ಪಡೆದ ಖಾತೆಗೆ ನೇರವಾಗಿ ಸಬ್ಸಿಡಿ ಮೊತ್ತವು ಜಮಾ ಆಗುವುದರಿಂದ ಯಾವುದೇ ರೀತಿಯ ವಂಚನೆ ಆಗುವುದಿಲ್ಲ.

ಅಗತ್ಯ ದಾಖಲೆಗಳು: Home Loan Subsidy Scheme 2026

  • BPL ಕಾರ್ಡ್
  • ಆದಾಯ ಪ್ರಮಾಣಪತ್ರ 
  • ನಿವೇಶನದ ದಾಖಲೆಗಳು
  • ಜಾತಿ ಪ್ರಮಾಣಪತ್ರ
  • ಆಧಾರ್ ಕಾರ್ಡ್
  • ಭಾವಚಿತ್ರ 
  • ಸ್ವಯಂ ಘೋಷಣಾ ಪತ್ರ
  • ಬ್ಯಾಂಕ್ ಪಾಸ್‌ಬುಕ್

ಅರ್ಜಿ ಸಲ್ಲಿಸುವ ವಿಧಾನ: Home Loan Subsidy Scheme 2026

ಗೃಹಸಾಲ ಸಬ್ಸಿಡಿ ಯೋಜನೆಗೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು.

  • PMAY ಅಧಿಕೃತ ವೆಬ್ ಸೈಟ್ https://pmay-urban.gov.in/ ಗೆ ಭೇಟಿ ನೀಡಿ
  • ಫಾರ್ಮ್ ರಿಜಿಸ್ಟ್ರೇಷನ್ ಮೇಲೆ ಕ್ಲಿಕ್ ಮಾಡಿ
  • ಆಧಾರ್ ಸಂಖ್ಯೆಯನ್ನು ನಮೂದಿಸಿ ಒಟಿಪಿ ಮೂಲಕ ಲಾಗಿನ್ ಆಗಿ ನೀಡಿರುವ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ.
  • ವೈಯಕ್ತಿಕ ಮತ್ತು ಭೂ ದಾಖಲೆಗಳೊಂದಿಗೆ ಅರ್ಜಿಯನ್ನು ಭರ್ತಿಮಾಡಿ ಸಬ್ಮಿಟ್ ಮಾಡಿ ಅಗತ್ಯವಿದ್ದರೆ ಪ್ರಿಂಟ್ ತೆಗೆದುಕೊಳ್ಳಿ.
  • ನಂತರ ಅರ್ಜಿ ಪ್ರತಿಯನ್ನು ಸ್ಥಳೀಯ ಸಾಮಾನ್ಯ ಸೇವಾ ಕೇಂದ್ರಕ್ಕೆ ಸಲ್ಲಿಸಿ.

ತೀರ್ಮಾನ:-

ಮೋದಿ ಸರ್ಕಾರದ ಗ್ರಹ ಸಾಲ ಸಬ್ಸಿಡಿ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ನಿಮ್ಮ ಸ್ವಂತ ಮನೆಯ ಕನಸನ್ನು ನನಸು ಮಾಡಿಕೊಳ್ಳಲು ಉತ್ತಮ ಅವಕಾಶವಾಗಿದೆ. ಬಡ ಮತ್ತು ಮಾಧ್ಯಮ ವರ್ಗದವರ ಆರ್ಥಿಕ ಹೊರೆಯನ್ನು ಕಡಿಮೆಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.ಅರ್ಹ ಫಲಾನುಭವಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.


ಇತರ ಯೋಜನೆಯ ಲಿಂಕುಗಳು :


Join WhatsApp

Join Now

Join Telegram

Join Now

Leave a Comment