ಗೃಹಲಕ್ಷ್ಮಿಯರಿಗೆ ನೇರವಾಗಿ ₹3 ಲಕ್ಷ ಸಾಲ + ಸಬ್ಸಿಡಿ! ಅರ್ಜಿ ಹಾಕುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ!!

On: Monday, January 5, 2026 2:49 PM
Gruhalakshmi Vividoddesha Sahakari Bank Loan Scheme

ಕರ್ನಾಟಕದ ಮಹಿಳೆಯರಿಗೆ ನಮ್ಮ ರಾಜ್ಯ ಸರ್ಕಾರದಿಂದ ಸಿಗ್ತಿದೆ ಬರೋಬ್ಬರಿ 3 ಲಕ್ಷದ ವರೆಗೆ ಸಾಲ ಇದೇ ಮೊದಲ ಭಾರಿ ಯಾವ ಸರ್ಕಾರಗಳು ಜಾರಿ ಮಾಡದೇ ಇರುವ ಯೋಜನೆಯನ್ನ ನಮ್ಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕರ್ನಾಟಕದ ಪ್ರತಿ ಮಹಿಳೆಯರಿಗೂ ಕಡಿಮೆ ಬಡ್ಡಿ ದರದಲ್ಲಿ ಬರೋಬ್ಬರಿ 3 ಲಕ್ಷ ಸಹಾಯಧನವನ್ನ ಕೊಡುವುದಾಗಿ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ.

Gruhalakshmi Vividoddesha Sahakari Bank Loan Scheme

ಈ ಯೋಜನೆ ಮೂಲಕ ತಿಂಗಳಿಗೆ ₹2000/- ಪಡೆಯುತ್ತಿದ್ದ ಮಹಿಳೆಯರಿಗೆ ಮತ್ತಷ್ಟು ಆರ್ಥಿಕ ನಿರವು ನೀಡಲು 3 ಲಕ್ಷ ರೂ.ಗಳವರೆಗಿನ ಕಡಿಮೆ ಬಡ್ಡಿದರದ ಸಾಲಕ್ಕೂ ಅರ್ಹರಾಗಿರುತ್ತಾರೆ.

ರಾಜ್ಯ ಸರ್ಕಾರ ಮಹಿಳೆಯರಿಗಾಗಿ ತಂದಿರುವ ಗೃಹಲಕ್ಷ್ಮಿ ಯೋಜನೆ ಅನೇಕ ಮಹಿಳೆಯರ ಆರ್ಥಿಕ ಜೀವನ ಮಟ್ಟವನ್ನ ಸುಧಾರಿಸಿದೆ ಎಂದರೆ ತಪ್ಪಾಗಲಾರದು ನಮ್ಮ ಕರ್ನಾಟಕದಂತ ರಾಜ್ಯದಲ್ಲೇನೇ ಅಂತ ಅನೇಕ ಮಹಿಳೆಯರು ಪ್ರತಿನಿತ್ಯ ಕೆಲಸಕ್ಕೆ ಹೋಗಿ ಒಂದು ಹೊತ್ತಿನ ಊಟ ಮಾಡುತ್ತಿರುವ ಅನೇಕ ಕುಟುಂಬಗಳು ನಮ್ಮ ನಿಮ್ಮ ಕಣ್ಣ್ ಮುಂದೆ ದಿನ ನಿತ್ಯ ಕಂಡುಬರುತ್ತವೆ ಇಂತ ಒಂದು ಕೆಟ್ಟ ಪರಿಸ್ಥಿತಿಯನ್ನ ಮನಗೊಂಡ ನಮ್ಮ ಸರ್ಕಾರ ಈ ಒಂದು ಗೃಹಲಕ್ಷ್ಮಿ ಯೋಜನೆ ಸಂಘ ವನ್ನ ಜಾರಿ ಮಾಡಿದೆ ಇದರಿಂದ ಮಹಿಳೆಯರ ಅನೇಕ ಸಮಸ್ಯೆ ಗಳ ಕಡಿಮೆಯಾಗುತ್ತ ಹೋಗುತ್ತವೆ.

ಇನ್ನು ಕೂಡ ಸಮಾಜದಲ್ಲಿ ಮಹಿಳೆಯರ ಸ್ಥಾನ ಮಾನ ಹೆಚ್ಚಿಸಬೇಕು ಹಾಗೆ ಮಹಿಳೆಯರು ಸ್ವಂತವಾಗಿ ಉದ್ಯೋಗ ಮಾಡ್ಬೇಕು ಹೀಗೆ ಇನ್ನು ಅನೇಕ ಉದ್ದೇಶಗಳನ್ನ ಇಟ್ಟುಕೊಂಡು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಫಲಾನುಭವಿಗಳಿಗೆ 3 ಲಕ್ಷ ರೂ.ವರೆಗೆ ಸಾಲ ನೀಡುವ ಕುರಿತು ಈ ಕೆಳಗಿನ ಪ್ರಮುಖ ದಿನಾಂಕಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಸಂಕ್ಷಿಪ್ತ ಮಾಹಿತಿ :- Gruhalakshmi Vividoddesha Sahakari Bank Loan Scheme

ಅತೀ ಮುಖ್ಯವಾಗಿ ಈ ಯೋಜನೆ ಬಗ್ಗೆ ಹೇಳುವುದಾದರೆ ಪ್ರತಿ ಮಹಿಳೆಯರಿಗೂ  3 ಲಕ್ಷ ಕೊಡುವುದಾಗಿ ಹೇಳಿಯುವುದು ಸಾದಾರಣ ಮಾತಲ್ಲ ಸರ್ಕಾರದ ಒಂದು ಗಟ್ಟಿ ತನ ಅಂತಾನೆ ಹೇಳ್ಬಹುದು ಕರ್ನಾಟಕ ರಾಜ್ಯದಲ್ಲಿ ನಾರಿ ಶಕ್ತಿ ಹೆಚ್ಚಿಸಬೇಕು ಎಂಬುದು ಲಕ್ಷ್ಮೀ ಹೆಬ್ಬಾಳ್ಕರ್ ಘೋಷಣೆಯ ಪ್ರಮುಖ ಗುರಿಯಾಗಿದೆ.

ಇಂತಹ ಸರ್ಕಾರದ ಯೋಜನೆಗಳಿಂದ ಪ್ರತಿಯೊಬ್ಬ ಮಹಿಳೆ ಕೂಡ ಸಮಾಜದಲ್ಲಿ ಆರ್ಥಿಕವಾಗಿ ಹಾಗೆ ಯಾರ ಮೇಲೆ ಅವಲಂಬನೆ ಯಾಗದೆ ಸ್ವತಂತ್ರವಾಗಿ ಒಂದು ಅತೀ ಸಾದಾರಣ ಹೆಣ್ಣು ಕೂಡ ಬದುಕಬಹುದು.

  • ಈ ಯೋಜನೆ ಮೂಲಕ ಗ್ರೂಲಕ್ಷ್ಮಿ ಮಹಿಳೆಗೆ 30 ಸಾವಿರದಿಂದ ₹3 ಲಕ್ಷದವರೆಗೆ ಸಾಲ ಒದಗಿಸುವ ಯೋಜನೆಯಾಗಿದೆ
  • ಪ್ರತಿಯೊಬ್ಬರೂ ತಿಳಿಯಬಹುದಾದ ಈ ಒಂದು ಸರ್ಕಾರದಿಂದ ಸಿಗುವ ಹಣದಿಂದ ಸ್ವಂತ ಉದ್ಯೋಗ, ಕೃಷಿ ಸಂಬಂಧಿತ ಚಟುವಟಿಕೆ, ಮಕ್ಕಳ ಶಿಕ್ಷಣ, ಆರೋಗ್ಯದ ತುರ್ತು ಅವಶ್ಯಕತೆಗಳು, ಆರ್ಥಿಕ ಸ್ವಾವಲಂಬನೆ, ಮನೆ ನಿರ್ಮಾಣಕ್ಕೆ ಹೀಗೆ ಇನ್ನು ಅನೇಕ ಈ ಯೋಜನೆಯಡಿ ಆರ್ಥಿಕ ನೆರವು ಮಡೆಯುವ ಅವಕಾಶವನ್ನ ನಮ್ಮ ಕರ್ನಾಟಕ ಸರ್ಕಾರ ಮಾಡಿಕೊಟ್ಟಿದೆ.

Gruhalakshmi Vividoddesha Sahakari Bank Loan Scheme

ಸರ್ಕಾರದ ಇಂತ ಅನೇಕ ಅಧ್ಬುತ ಯೋಜನೆಗಳಿಂದ ಬಡ ಮಹಿಳೆಯರಿಗೆ ಸಮಾಜದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಮಹಿಳೆ ಕೂಡ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ವಿಶ್ವದ ಅತಿದೊಡ್ಡ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಒಂದು ಅಂದರೆ ತಪ್ಪಾಗಲಾರದು.

ಇದೀಗ ಮತ್ತೆ ಮಹಿಳೆಯರ ನೆರವಿಗೆ ಗೃಹಲಕ್ಷ್ಮಿ ಬಹುಪಯೋಗಿ ಸಹಕಾರಿ ಸಂಘದ ಮೂಲಗ ಫಲಾನುಭವಿಗಳಿಗೆ 3 ಲಕ್ಷ ರೂ.ಗಳವರೆಗಿನ ಕಡಿಮೆ ಬಡ್ಡಿದರದ ಸಾಲ ಸಿಗಲಿದ್ದು, ಸಂಘಕ್ಕೆ ನವೆಂಬರ್ 19 ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗುವುದು ಎಂದು ಹೇಳಿದ್ದಾರೆ.

  • ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮ ದಿನಾಚರಣೆಯಾದ ನವೆಂಬರ್ 19 ನೇ ತಾರೀಕಿನಂದು ನಡೆದಿರುವ ಕಾರ್ಯಕ್ರಮದಲ್ಲಿ ಮೂರು ಪ್ರಮುಖ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು.
  • ಮೊದಲನೆಯದು ಗೃಹ ಲಕ್ಷ್ಮಿ ಬ್ಯಾಂಕ್
  • ಎರಡನೆಯದು ‘ಅಕ್ಕ ಪಡೆ’ (ಸಿಸ್ಟರ್ ಸ್ಕ್ವಾಡ್)
  • ಮಹಿಳಾ ಸುರಕ್ಷತೆಗಾಗಿ ಹೊಸ ರಾಜ್ಯ ಮಟ್ಟದ ಉಪಕ್ರಮ ಮತ್ತು ಮೂರನೆಯದು ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.

ಈ ಒಂದು ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ನಮ್ಮ https://udyogasalahe.in ವೆಬ್ ಸೈಟ್ ಗೆ ಭೇಟಿ ನೀಡಿ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಹ ಅರ್ಜಿದಾರರು ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಯೋಜನೆಯ “ಉದ್ದೇಶ, ಯೋಜನೆಯ ಪ್ರಯೋಜನ, ಅಗತ್ಯ ದಾಖಲೆಗಳು” ಇನ್ನಷ್ಟು ಮಾಹಿತಿಯನ್ನು ಕೆಳಗಿನ ಹಂತದಲ್ಲಿ ನೀಡಿದ್ದು ಅದನ್ನು ಓದಿಕೊಂಡು ಅರ್ಜಿ ಸಲ್ಲಿಸಿ.

ಯೋಜನೆಯ ಅವಲೋಕನ:(Gruhalakshmi Vividoddesha Sahakari Bank Loan Scheme)

ಯೋಜನೆಯ ಹೆಸರು‘ಗೃಹಲಕ್ಷ್ಮಿ ಬಹುಪಯೋಗಿ ಸಹಕಾರ ಸಂಘ’ (‘ಗೃಹಲಕ್ಷ್ಮಿ ಬ್ಯಾಂಕ್)
ಅರ್ಹ ಫಲಾನುಭವಿಗಳುಕರ್ನಾಟದಲ್ಲಿನ ಮಹಿಳೆಯರು
ಒಟ್ಟು ಪ್ರೋತ್ಸಾಹಧನರೂ.30 ಸಾವಿರ ದಿಂದ ₹3 ಲಕ್ಷದವರೆಗೆ ಸಾಲ ಎಲ್ಲ ಗೃಹಲಕ್ಷ್ಮಿ ಮಹಿಳೆಯರಿಗೆ
ಅರ್ಜಿಸಲ್ಲಿಸುವ ರಾಜ್ಯಕರ್ನಾಟಕ
ಅರ್ಜಿ ಸಲ್ಲಿಸುವ ವಿಧಾನಆನ್ಲೈನ್ ಮತ್ತು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
Gruhalakshmi Vividoddesha Sahakari Bank

ಹೌದು ಈ ಯೋಜನೆ ನಮ್ಮ ರಾಜ್ಯ ಸರ್ಕಾರ ಜಾರಿಗೆ ತಂದ ಪ್ರಮುಖ ಯೋಜನೆಗಳಲ್ಲಿ ಇದು ಕೂಡ ಒಂದು. ಈ ಯೋಜನೆಯಲ್ಲಿ, ಕೆಲವು ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು 2026ರಲ್ಲಿ ಪ್ರತಿಯೊಬ್ಬ ಮಹಿಳೆ ತನ್ನದೇ ಆದ ಸ್ವಂತ ಉದ್ಯೋಗ ಮಾಡ್ಬೇಕು ಯಾವುದೇ ವೆಕ್ತಿಯ ಮೇಲು ಅವಲಂಬನೆ ಆಗಿರಬಾರದು. ಪ್ರತಿಯೊಬ್ಬರ ಮಹಿಳೇ ಜೀವನದಲ್ಲೂ ವರ್ಷ ಕಳೆದಂತೆ ಅವರ ಒಂದು ಜೀವನ ಮಟ್ಟ ಕೂಡ ಸುಧಾರಿಸ ಬೇಕು ಸ್ವಂತ ಉದ್ಯೋಗ ಮಾಡುವ ಕನಸು ಹಾಗೆ ಮಕ್ಕಳ ವಿದ್ಯಾಭ್ಯಾಸ, ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಹೀಗೆ ಇನ್ನು ಅನೇಕ ಉದ್ದೇಶಗಳಿಗೆ ಈ ಸಾಲ ಅನುಕೂಲವಾಗುತ್ತದೆ.

‘ಗೃಹಲಕ್ಷ್ಮಿ ಬಹುಪಯೋಗಿ ಸಹಕಾರ ಸಂಘ’ (‘ಗೃಹಲಕ್ಷ್ಮಿ ಬ್ಯಾಂಕ್) ಏನಿದು ? ನಿಮ್ಮಗೆಷ್ಟು ತಿಳಿದಿದೆ ಈ ಯೋಜನೆ ಬಗ್ಗೆ ? ಎಷ್ಟು ಸಾಲ ಸಿಗುತ್ತೆ ? ಅರ್ಜಿ ಹಾಕುವ ವಿಧಾನ ಹೇಗೆ ?

ಈ ಕೆಳಗೆ ಸಂಪರ್ಣವಾಗಿ ನೋಡ್ತಾ ಹೋಗೋಣ ಬನ್ನಿ…

ಏನಿದು ”ಗೃಹಲಕ್ಷ್ಮಿ ಬ್ಯಾಂಕ್” ? Udyogini Scheme 2026 In Kannada

ನಮ್ಮ ಕರ್ನಾಟಕ ಸರ್ಕಾರ ಜಾರಿ ಇಗಳಲೆ ಜಾರಿ ಮಾಡಿರುವ ಗೃಹಲಕ್ಷ್ಮಿ ಯೋಜನೆ ಬಗ್ಗೆ ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವಾರ ತನಕ ಗೊತ್ತೇಯಿದೆ ಮತ್ತೆ ನನ್ನ ಈ ಲೇಖನದಲ್ಲಿ ಹೇಳುವ ಅಗತ್ಯ ಎಲ್ಲ ಎನ್ನುವುದು ನನ್ನ ಭಾವನೆ ಪ್ರತಿ ತಿಂಗಳು ಮಹಿಕ್ಕಿಯರಿಗೆ 2000 ಹಾಕುತ್ತಿರುವಾಗಲೇ “ಗೃಹಲಕ್ಷ್ಮಿ ಬಹುಪಯೋಗಿ ಸಹಕಾರಿ ಸಂಘದ ಮೂಲಕ ಕರ್ನಾಟಕದ ಎಲ್ಲ ಗೃಹಲಕ್ಷ್ಮಿ ಫಲಾನುಭವಿಗಳಿಗೆ 30 ಸಾವಿರದಿಂದ 3 ಲಕ್ಷ ರೂ.ಗಳ ವರೆಗೆ ಕಡಿಮೆ ಬಡ್ಡಿದರದ ಸಾಲ ಸಿಗಲಿದ್ದು, ಸಂಘಕ್ಕೆ ನವೆಂಬರ್ 19 ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅಧಿಕೃತವಾಗಿ ಚಾಲನೆ ನೀಡಿದ್ದಾರೆ“.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಘೋಷಣೆ ಮಾಡಿದ ಯೋಜನೆಯ ಬಗ್ಗೆ ಕೆಲವೇ ಕೆಲವು ಜನಮಾನ್ಯರಿಗೆ ಮಾತ್ರನೇ ತಿಳಿದಿದೆ ಅನ್ನುವುದು ನನ್ನ ಒಂದು ಹೇಳಿಕೆ ಹಾಗಾಗಿ ಈ ಒಂದು ಸಾಮಾಜಿಕ ಜಾಲತಾಣದ ಮೂಲಕ ಪ್ರತಿಯೊಬ್ಬರಿಗೂ ಯೋಜನೆ ಬಗ್ಗೆ ತಿಳಿಸುವ ನಮ್ಮದೊಂದು ಉದ್ದೇಶ.

ಅದೆಷ್ಟೋ ಮಹಿಳೆಯರಿಗೆ ಸರ್ಕಾರದ ಇಂತ ಯೋಜನೆಯಿಂದ ತಾವು ಮಾಡಬೇಕೆಂಬ ಕೆಲಸ, ಆಸೆ, ಕನಸುಗಳು ಆಗದಿದ್ದರೂ ಕೂಡ ಅವರಲ್ಲಿ ಮತ್ತೆ ಹೊಸದಾಗಿ ಏನಾದ್ರು ಪುನ ಪ್ರಯತ್ನ ಮಾಡೋಣ ಎಂಬಾ ಛಲ ಶಕ್ತಿ ಅವರಲ್ಲಿ ಹುಟ್ಟಿಹಾಕುತ್ತದೆ. ಕೆಲವು ಮಹಿಳೆಯರು ತಮ್ಮ ತಮ್ಮ ಕೆಲಸ, ಆಸೆ, ಕನಸುಗಳಿಗಾಗಿ ಯಾವುದೊ ಬ್ಯಾಂಕ್ ಗಳಲ್ಲಿ ಹೆಚ್ಚಿನ ಬಡ್ಡಿಗಳಿಗೆ ಸಾಲ ಪಡೆಯುತ್ತಾರೆ ಇಂತ ಸಾಲಗಳಿಂದ ತಮ್ಮ ಜೀವನವನ್ನ ಕೊನೆ ಗೊಳಿಸುವಂತ ಘಟನೆಗಳು ಕೆಲವು ಬಾರಿ ನಮ್ಮ ನಿಮ್ಮ ಕಣ್ಣೆದುರು ಕಾಣುತ್ತವೆ ಇಂತವರಿಗಾಗಿ ನಮ್ಮ ಸರ್ಕಾರ ತುಂಬಾ ಕಡಿಮೆ ಬಡ್ಡಿಗೆ ಸರ್ಕಾರದಿಂದ ಸಾಲ ಕೊಡುವುದಾಗಿ ತಿಳಿಸಿ ಒನ್ಲೈನ್ ಹಾಗೆ ಆಫ್ ಲೈನ್ ಅರ್ಜಿ ಪ್ರಾರಂಭಿಸಲು ಮುಂದಾಗಿದೆ.

ನಾನ್ನದೆ ಆದ ಸ್ವಂತ ಮಾತಿನಲ್ಲಿ ಹೇಳುವುದಾದರೆ, ಆರ್ಥಿಕವಾಗಿ ಸಮಾಜದಲ್ಲಿ ಹಿಂದುಳಿದ ಪ್ರತಿಯೊಬ್ಬ ಮಹಿಳೆಯರನ್ನ ಸ್ವಾವಲಂಬಿಯಾಗಿ ಮತ್ತು ಆರ್ಥಿಕವಾಗಿ ನಮ್ಮ ಕರ್ನಾಟಕದಂತ ರಾಜ್ಯದಲ್ಲಿ ಬದುಕಬೇಕು ಎನ್ನುವ ಮಹತ್ವದ ಆರ್ಥಿಕ ಬೆಂಬಲವೇ ಈ ಯೋಜನೆಯಾಗಿದೆ.

ಯೋಜನೆಯ ಉದ್ದೇಶ: Gruhalakshmi Vividoddesha Sahakari Bank

ಗೃಹಲಕ್ಷ್ಮಿ ಸಹಕಾರ ಸಂಘ ಈ ಯೋಜನೆಯ ಪ್ರಮುಖ ಉದ್ದೇಶ ನೋಡತಾ ಹೋಗೋಣ

  • ಮಹಿಳಾ ಆರ್ಥಿಕ ಸಬಲೀಕರಣ: ಕರ್ನಾಟಕದ ಪ್ರತಿಯೊಬ್ಬ ಮಹಿಳೆ ಕೂಡ ಸಕಾರದ ಗೃಹಲಕ್ಷ್ಮಿ ಹಣದ ಮೇಲೆ ಅವಲಂಬನೆಯಾಗದೆ ಅತಿ ದೊಡ್ಡ ಮಟ್ಟದಲ್ಲಿ ಸರ್ಕಾರದಿಂದ ಸಾಲ ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗುವಂತೆ ಮಾಡುವುದು ಈ ಸಂಘದ ಪ್ರಮುಖ ಉದ್ದೇಶ.
  •  ಒಂದು ಸಾದಾರಣ ಹೆಣ್ಣು ಕೂಡ ಸಮಾಜದಲ್ಲಿ ಸ್ವತಂತ್ರವಾಗಿ ಮತ್ತು ಯಾರ ಮೇಲೂ ಅವಲಂಬಿತರಾಗದೆ ಸರ್ಕಾರದ ಈ ಸಹಾಯಧನದ ಮೂಲಕ ಹೊಸ ಉದ್ಯೋಗ ಪ್ರಾರಂಭಿಸಿ ಹೆಚ್ಚಿನ ಆದಾಯ ದೊಂದಿಗೆ ಆರ್ಥಿಕ ಭದ್ರತೆ ಪಡೆಯುವಂತೆ ಮಾಡುವುದು.
  • ಕಡಿಮೆ ಬಡ್ಡಿಯಲ್ಲಿ ಸಾಲಸೌಭಾಗ್ಯ: ಖಾಸಗಿ ಬ್ಯಾಂಕ್ ಗಳಲ್ಲಿ ಹಾಗೆ ಖಾಸಗಿ ಲೇವಾದೇವಿದಾರರ ಬಳಿ ಮಹಿಳೆಯರು ತೆಗೆದುಕೊಳ್ಳುವ ಸಾಲ ಅವರ ಜೀವನಕ್ಕೆ ಹೊರೆಯಾಗುತ್ತದೆ ಹಾಗಾಗಿ ನಮ್ಮ ರಾಜ್ಯ ಸರ್ಕಾರ ಹಣಕಾಸು ಸಂಸ್ಥೆಗಳ ಕಾಟದಿಂದ ಮಹಿಳೆಯರನ್ನು ಮುಕ್ತಗೊಳಿಸಿ, ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸುಲಭವಾಗಿ ಸಾಲ ಸಿಗುವಂತೆ ಮಾಡುವುದು ಅತ್ಯಂತ ಪ್ರಮುಖ ಉದ್ದಶ ಅಂತಾನೆ ಹೇಳಬಹುದು.
  • ಸ್ವಯಂ ಉದ್ಯೋಗಕ್ಕೆ ಉತ್ತೇಜನ: ಈ ಯೋಜನೆ ಮೂಲಕ ಮಹಿಳೆಯರುಸಾಲ ಪಡೆದು ಸ್ವಂತ ಉದ್ಯೋಗ ಮಾಡಬೇಕೆಂಬ ಅಂದ್ರೆ ಸಣ್ಣ ಪುಟ್ಟ ವ್ಯಾಪಾರ ವ್ಯವಹಾರ ಗುಡಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಬರೋಬ್ಬರಿ 3 ಲಕ್ಷದ ವರೆಗೆ ಈ ಯೋಜನೆ ಮೂಲಕ ಸಾಲ ಸೌಭಾಗ್ಯ ಸಿಗುತ್ತದೆ.
  • ಬ್ಯಾಂಕಿಂಗ್ ವ್ಯವಸ್ಥೆಯ ಪರಿಚಯ: ಮಹಿಳೆಯರಲ್ಲಿ ಉಳಿತಾಯ ಮನೋಭಾವ ಬೆಳೆಸುವುದು ಮತ್ತು ಸಹಕಾರ ಸಂಘದ ಮೂಲಕ ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಅವರನ್ನು ತೊಡಗಿಸುವುದು.
  • ತುರ್ತು ಅಗತ್ಯಗಳಿಗೆ ನೆರವು : ಕುಟುಂಬದಲ್ಲಿ ಅನಿರೀಕ್ಷಿತವಾಗಿ ತನ್ನ ಗಂಡ ತಮ್ಮಳಿಗೆ ಅತ್ತೆ ಮಾವರ ಮೇಲೆ ಆಗುವ ಅನಿರೀಕ್ಷಿತ ಆರೋಗ್ಯ ಸಮಸ್ಯೆ ಗಳಿಗೆ ಮಕ್ಕಳ ಶಿಕ್ಷಣ ಅಥವಾ ಕುಟುಂಬದ ಯಾವುದೇ ತುರ್ತು ಸಂದರ್ಭಗಳಲ್ಲಿ ಸಾಲದ ರೂಪದಲ್ಲಿ ತಕ್ಷಣದ ಹಣಕಾಸಿನ ನೆರವು ಒದಗಿಸುವುದು.

ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಜಿಲ್ಲಾ ಕೇಂದ್ರ ಅಥವಾ ತಾಲ್ಲೂಕು ಕೇಂದ್ರಗಳಲ್ಲಿ ಹೊಸದಾಗಿ ಸ್ಥಾಪಿಸಲಾಗಿರುವ ‘ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ’ದ ಶಾಖೆಗೆ ಭೇಟಿ ನೀಡಿ.

ಅಥವಾ

ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ (CDPO) ಕಚೇರಿ, ಗ್ರಾಮ ಒನ್ / ಕರ್ನಾಟಕ ಒನ್, ಸಹಾಯವಾಣಿ (Helpline), ಅಧಿಕೃತ ವೆಬ್‌ಸೈಟ್‌, ಮೂಲಕ ತಿಳಿಯ ಬಹುದಾಗಿದೆ.

ಯೋಜನೆ ಮೂಲಕ ಹಣ ಎಷ್ಟು ಸಿಗುತ್ತದೆ :- Gruhalakshmi Vividoddesha Sahakari Bank

ಈ ಯೋಜನೆ ಮೂಲಕ ಸಿಗುವ ಹಣದ ಬಗ್ಗೆ ನಮ್ಮಗೆಷ್ಟು ತಿಳಿದಿದೆ ?

ಸರ್ಕಾರವು ಮಹಿಳೆಯಾರಿಗೆ ₹30 ಸಾವಿರದಿಂದ ಗರಿಷ್ಠ ₹3 ಲಕ್ಷದವರೆಗೆ ಸಾಲ ಪಡೆಯಬಹುದು ಹಾಗೆ ಇದು ಯಾವುದೇ ವರ್ಗಕ್ಕೆ ಮಾತ್ರ ಸೀಮಿತ ವಾಗಿಲ್ಲ ಕರ್ನಾಟಕದ ಎಲ್ಲ ಮಹಿಳೆಯರು ಸರ್ಕಾರದಿಂದ ಈ ಸಾಲವನ್ನ ಪಡೆಯಬಹುದಾಗಿದೆ. ಹೆಚ್ಚಿನ ಸಾಲಕ್ಕೆ ಯಾವುದೇ ಇಂಪ್ಲ್ಯೂಯನ್ಸ್ ಇರುವುದಿಲ್ಲ.

ಅರ್ಜಿ ದಾರರ ವರ್ಗಪ್ರದೇಶಸಹಾಯಧನ
ಸಾಮಾನ್ಯ ವರ್ಗಗ್ರಾಮೀಣ₹30 ಸಾವಿರದಿಂದ ಗರಿಷ್ಠ ₹3 ಲಕ್ಷದವರೆಗೆ ಸಾಲ
SC/ST Categoryಗ್ರಾಮೀಣ₹30 ಸಾವಿರದಿಂದ ಗರಿಷ್ಠ ₹3 ಲಕ್ಷದವರೆಗೆ ಸಾಲ
SC/ST Categoryನಗರ₹30 ಸಾವಿರದಿಂದ ಗರಿಷ್ಠ ₹3 ಲಕ್ಷದವರೆಗೆ ಸಾಲ
Gruhalakshmi Vividoddesha Sahakari Bank

ಈ ಯೋಜನೆ ಲಾಭ ಪಡೆಯಲು ನೀವು ಯಾವುದೇ ಗ್ಯಾರಂಟಿ ಅಥವಾ ಶೂರಿಟಿ ನೀಡುವ ಅಗತ್ಯವಿರುವುದಿಲ್ಲ. 

ಯೋಜನೆ ಲಾಭ ಪಡೆಯಲು ಯಾರೆಲ್ಲಾ ಅರ್ಹರು?

2025 ರಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಘೋಷಣೆ ಮಾಡಿರುವ ಈ ಯೋಜನೆ ಗೆ ಯಾವುದೇ ವರ್ಗಗಳಿಗೆ ಮಾತ್ರ ಅನ್ವಯಿಸದೆ ಪ್ರತಿಯೊಬ್ಬ ಮಹಿಳೆಯರಿಗೂ ಸಮಾನವಾಗಿ ಸಾಲ ಸಿಗುತ್ತದೆ ಅದು ಕೂಡ ಗೌರ್ಮೆಂಟಿನ ಮೂಲಕನೇ.

  • ಯಾರೇ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು.
  • ಮಹಿಳೆ ಈಗಾಗಲೇ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಲ್ಲಿ ನೋಂದಾಯಿಸಿಕೊಂಡು, ಪ್ರತಿ ತಿಂಗಳು 2,000 ರೂ. ಸಹಾಯಧನ ಪಡೆಯುತಿದಲ್ಲಿ ಈ ಸಾಲ ವನ್ನ ಪಡೆಯಬಹುದಾಗಿದೆ.
  • ಗೃಹಲಕ್ಷ್ಮಿ ಬಹುಪಯೋಗಿ ಸಹಕಾರ ಸಂಘವನ್ನ ಮಹಿಳಾ ಮತ್ತು ಮಕ್ಕಳ ಸಚಿವೆ ಅವರು ಸ್ಥಾಪಿಸಿರುವ ಸಂಘದಲ್ಲಿ ಕಡ್ಡಾಯವಾಗಿ ಸದಸ್ಯರಾಗಿರಬೇಕು.
  • ನೀವು ಈ ಸಂಘದಲ್ಲಿ ಸದಸ್ಯರಾಗಲು ಮೊದಲು  1,000 ರೂ ಶುಲ್ಕವಾಗಿ ಪಾವತಿಸಿರಬೇಕು.
  • ನೀವಿಲ್ಲಿ ಸದಸ್ಯರಾದ ಮೇಲೆ ಪ್ರತಿ ತಿಂಗಳು 200 ರೂ. ವಂತಿಗೆಯನ್ನು ಸಂಘಕ್ಕೆ ಪಾವತಿಸುತ್ತಿರಬೇಕು ಈ ಹಣ ನಿಮ್ಮ ಉಳಿತಾಯದಂತೆ ಕೆಲಸ ಮಾಡುತ್ತದೆ.
  • BPL/APL/Anthyodaya ಕಾರ್ಡ್ ನಲ್ಲಿ ಆಯಾ ಕುಟುಂಬದ ಯಜಮಾನಿಯ ಹೆಸರಿನಲ್ಲಿರಬೇಕಾಗುತ್ತದೆ.

ಯಾರು ಅರ್ಹರಲ್ಲ? Gruhalakshmi Vividoddesha Sahakari Bank

  • ಗೃಹಲಕ್ಷ್ಮಿ ಯೋಜನೆಗೆ ಯಾರು ಅರ್ಹರಲ್ಲವೋ ಅಂತವರಿಗೆ ಈ ಸಾಲ ಸಿಗುವುದಿಲ್ಲ.
  • ಸಹಕಾರ ಸಂಘಕ್ಕೆ ಸದಸ್ಯತ್ವ ಶುಲ್ಕ ಪಾವತಿಸದವರು ಅರ್ಹರಾಗುವುದಿಲ್ಲ.

ಹಣದ ಕಂತುಗಳ ಸಂಪೂರ್ಣ ಮಾಹಿತಿ :- Gruhalakshmi Vividoddesha Sahakari Bank

  • ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳೆಯರಿಗೆ ಸರ್ಕಾರದಿಂದ ಪಡೆದ ಸಾಲಕ್ಕೆ ಒಟ್ಟು 3 ವರ್ಷ ಅವಧಿಯಲ್ಲಿ ಮರುಪಾವತಿ ಮಾಡಬೇಕಾಗುತ್ತದೆ.
  • ನೀವು 30,000 ರಿಂದ 50,000 ರೂ.ಗಳವರೆಗೆ ಸಣ್ಣ ಮೊತ್ತದ ಸಾಲ ತೆಗೆದುಕೊಂಡರೆ, ಅದನ್ನು 1 ವರ್ಷದೊಳಗೆ ಮರುಪಾವತಿಸಲು ಅವಕಾಶವಿರುತ್ತದೆ.
  • ನೀವು 2 ಲಕ್ಷದಿಂದ 3 ಲಕ್ಷ ರೂ.ಗಳವರೆಗೆ ದೊಡ್ಡ ಮೊತ್ತದ ಸಾಲವನ್ನು ಸ್ವಯಂ ಉದ್ಯೋಗಕ್ಕಾಗಿ ಪಡೆದರೆ, ಅದನ್ನು ಮರುಪಾವತಿಸಲು 3 ರಿಂದ 5 ವರ್ಷಗಳವರೆಗೆ ಸಮಯ ನೀಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಮುಂದಿನ ದಿನದಲ್ಲಿ ಸಂಪೂರ್ಣವಾಗಿ ಅದನ್ನು ಕೂಡ ತಿಳಿಸುತ್ತೇವೆ.

ಪ್ರತಿಯೊಬ್ಬ ಮಹಿಳೆ ಕೂಡ ಗಮನಿಸಬೇಕಾದ ಪ್ರಮುಖ ಅಂಶಗಳು :-

  • ನೀವು ಪಡೆದ ಸಾಲದ ಮೊತ್ತದ ಆಧಾರದ ಮೇಲೆ ಪ್ರತಿ ತಿಂಗಳು ಸಮಾನ ಕಂತುಗಳನ್ನು ಅಂದರೆ (EMI) ನಿಗದಿಪಡಿಸಲಾಗುತ್ತದೆ.
  • ಇದು ಸಹಕಾರ ಸಂಘವಾದ್ದರಿಂದ, ಮಾರುಕಟ್ಟೆಯ ಇತರೆ ಬ್ಯಾಂಕ್‌ಗಳಿಗಿಂತ ತುಂಬ ಕಡಿಮೆ ಬಡ್ಡಿ ದರ ಇರುವುದರಿಂದ ಯಾವ ಮಹಿಳೆ ಕೂಡ ಸಾಲ ಪಡೆಯಬಹುದು.
  • ಸಾಲ ಮಂಜೂರಾಗುವ ಅವಧಿಯಲ್ಲಿ ನೀಡಲಾಗುವ ‘ಸಾಲದ ಒಪ್ಪಂದ ಪತ್ರ’ದಲ್ಲಿ ನಿಖರವಾದ ಅವಧಿ ಮತ್ತು ಕಂತಿನ ಮೊತ್ತವನ್ನು ಉಲ್ಲೇಖ ವಿಪಡಿಸಲಾಗಿರುತ್ತದೆ.

ಕಂತುಗಳ ಲೆಕ್ಕಾಚಾರ (EMI)

ಬಡ್ಡಿ ದರವು ಅಂದಾಜು 8% ರಿಂದ 10% ರಷ್ಟಿ ಇರಬಹುದು ಎಂದು ಅಂದಾಜಿಸಲಾಗಿದೆ.

ಸಾಲದ ಮೊತ್ತ (Loan Amount)ಮರುಪಾವತಿ ಅವಧಿ (Tenure)ಅಂದಾಜು ತಿಂಗಳ ಕಂತು (Approx EMI)
₹30,0001 ವರ್ಷ (12 ತಿಂಗಳು)₹2,650 – ₹2,750
₹50,0002 ವರ್ಷ (24 ತಿಂಗಳು)₹2,250 – ₹2,350
₹1,00,0003 ವರ್ಷ (36 ತಿಂಗಳು)₹3,150 – ₹3,300
₹2,00,0003 ವರ್ಷ (36 ತಿಂಗಳು)₹6,300 – ₹6,600
₹3,00,0003 ವರ್ಷ (36 ತಿಂಗಳು)₹9,500 – ₹9,900
Gruhalakshmi Vividoddesha Sahakari Bank

ಲೆಕ್ಕಾಚಾರ ಯಾವ ತರ ನಡೆಯುತ್ತದೆ? Gruhalakshmi Vividoddesha Sahakari Bank

  1. ಸಾಲದ ಬಡ್ಡಿ ದರ : ಇದು ಸಹಕಾರ ಸಂಘವಾದ್ದರಿಂದ ಖಾಸಗಿ ಬ್ಯಾಂಕ್‌ಗಳಿಗಿಂತ ಕಡಿಮೆ ಇರುತ್ತದೆ.
  2. ನೀವು ನೋಡಬಹುದು ನಿಮ್ಮ ಕೈಯಿಂದ ಕಟ್ಟಬೇಕಾದ ಹಣದ ಹೊರೆ ಕಡಿಮೆಯಾಗುತ್ತದೆ ಹೇಗೆಂದರೆ ನೀವು ಪ್ರತಿ ತಿಂಗಳು ಸರ್ಕಾರದಿಂದ ಪಡೆಯುವ ₹2,000 ಗೃಹಲಕ್ಷ್ಮಿ ಸಹಾಯಧನವನ್ನು ನೇರವಾಗಿ ಸಾಲದ ಕಂತಿಗೆ ಹೊಂದಾಣಿಕೆ ಮಾಡುವ (Adjust) ಅವಕಾಶದ ಬಗ್ಗೆಯೂ ಸರ್ಕಾರ ಚಿಂತನೆ ನಡೆಸುತ್ತಿದೆ ಇದೇನಾದರೂ ಜಾರಿ ಯದಲ್ಲಿ ತುಂಬಾನೇ ಉಪಯೋಗ ಆಗುತ್ತದೆ.
  3. ನೀವು ಸಾಲ ವನ್ನ ಹೆಚ್ಚಿಗೆ ಪಡೆದಂತೆ ಸರ್ಕಾರಕ್ಕೆ ಸಾಲ ಕಟ್ಟುವ ಅವಧಿ ಕೂಡ ಹೆಚ್ಚಿಸುತ್ತದೆ.
  4. ಕೊನೆಯಲ್ಲಿ ಕಂತುಗಳ ಲೆಕ್ಕಾಚಾರವೂ ನೀವು ಸಾಲ ಪಡೆಯುವ ಸಮಯದಲ್ಲಿ ಚಾಲ್ತಿಯಲ್ಲಿರುವ ಬಡ್ಡಿ ದರ (Interest Rate) ಮತ್ತು ನೀವು ಆಯ್ಕೆ ಮಾಡಿಕೊಳ್ಳುವ ಕಾಲಾವಧಿಯ (Years) ಮೇಲೆ ಅಂತಿಮ ನಿರ್ಧಾರವಾಗುತ್ತದೆ.
  5. ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಥವಾ ನಿಮ್ಮ ಸ್ಥಳೀಯ ಗೃಹಲಕ್ಷ್ಮಿ ಸಹಕಾರ ಸಂಘದ ಶಾಖೆಯನ್ನು ಸಂಪರ್ಕಿಸಿ “Loan Repayment Schedule” ಕೇಳಬಹುದು.
Gruhalakshmi Vividoddesha Sahakari Bank
Gruhalakshmi Vividoddesha Sahakari Bank

ಮಹಿಳೆಯರಿಗೆ ಈ ಯೋಜನೆ ಇಂದ ಆಗುವ ಪ್ರಯೋಜನ :Gruhalakshmi Vividoddesha Sahakari Bank

  • ಒಬ್ಬ ಅಸಾಧಾರಣ ಹೆಣ್ಣು ಕೂಡ ಈ ಯೋಜನೆ ಇಂದ ಸಾಲ ಪಡೆದು ಸಮಾಜದಲ್ಲಿ ಸ್ವತಂತ್ರವಾಗಿ ಮತ್ತು ಯಾರ ಮೇಲು ಅವಲಂಬನೆ ಆಗದೇ ಜೀವನ ನಡೆಸಬಹುದು.
  • ಮಳೆಯರಿಗೆ ಈ ಒಂದು ಯೋಜನೆ ಮೂಲಕ ಅತೀ ದೊಡ್ಡ ಮಟ್ಟದಲ್ಲಿ ನೆರವು ಸಿಕ್ಕಂತಾಗುತ್ತದೆ.
  • ಸಾಲದ ಜೊತೆಗೆ ಯೋಜನೆ ಮೂಲಕ ಒಂದು ಶಕ್ತಿ ಸಿಕ್ಕಂತಾಗುತ್ತದೆ ಹಾಗೆ ಸರ್ಕಾರದಿಂದ ಮಹಿಳೆಗೆ ಬೆಂಬಲ ಕೂಡ ದೊರಕುತ್ತದೆ.
  • ಕೇವಲ ಅರ್ಜಿ ಸಲ್ಲಿಸಿದ ಮಹಿಳೆಯರಿಗೆ ಮಾತ್ರವಲ್ಲದೆ ಇತರೆ ಮಹಿಳೆಯರಿಗೆ ಉದ್ಯೋಗ ನೀಡುವ ಮೂಲಕ ಸಮಾಜದಲ್ಲಿ ಉದ್ಯೋಗ ಸೃಷ್ಟಿಯಾಗತ್ತದೆ.
  • ಪ್ರತಿಯೊಬ್ಬರೂ ತಿಳಿಯಬಹುದಾದ ಈ ಒಂದು ಯೋಜನೆ ಕಿರಾಣಿ ಅಂಗಡಿ, ಹೊಲಿಗೆ ಯಂತ್ರ, ಹೈನುಗಾರಿಕೆ, ತರಕಾರಿ ಮಾರಾಟ, ಬ್ಯೂಟಿ ಪಾರ್ಲರ್ ಸೇರಿದಂತೆ ಇನ್ನು ಅನೇಕ ಹೆಚ್ಚು ಸಣ್ಣ ಪ್ರಮಾಣದ ಉದ್ಯಮಗಳಿಗೆ ಈ ಯೋಜನೆಯಡಿ ಆರ್ಥಿಕ ನೆರವು ಮಡೆಯುವ ಅವಕಾಶವನ್ನ ನಮ್ಮ ಕರ್ನಾಟಕ ಸರ್ಕಾರ ಮಾಡಿಕೊಟ್ಟಿದೆ.
  • ಖಾಸಗಿ ಲೇವಾದೇವಿದಾರರು ಅಥವಾ ಹೆಚ್ಚು ಬಡ್ಡಿ ವಿಧಿಸುವವರಿಂದ ಸಾಲ ಪಡೆಯುವುದನ್ನು ತಪ್ಪಿಸಿ, ಮಾರುಕಟ್ಟೆ ದರಕ್ಕಿಂತ ಕಡಿಮೆ ಬಡ್ಡಿಯಲ್ಲಿ (ಅಂದಾಜು 8-10%) ಸಾಲ ಲಭ್ಯವಾಗುತ್ತದೆ.
  • ₹30,000 ರಿಂದ ₹3 ಲಕ್ಷದವರೆಗೆ ಬಂಡವಾಳ ಲಭ್ಯವಾಗುತ್ತದೆ.
  • ಹಣಕಾಸಿನ ವಹಿವಾಟುಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಾದ ಫೋನ್‌ಪೇ ಮೂಲಕ ನಡೆಯುವುದರಿಂದ ಉತ್ತಮ ಬೆಳವಣಿಗೆ ಅಂತಾನೆ ಹೇಳಬಹುದು.
  •  ಕುಟುಂಬದ ಆರ್ಥಿಕ ನಿರ್ಧಾರಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪಾತ್ರ ಮತ್ತು ಗೌರವ ಸಿಗಲು ಈ ಆರ್ಥಿಕ ನೆರವು ಸಹಾಯ ಮಾಡುತ್ತದೆ.
  • ಹಾಗೆ ಕುಟುಂಬದಲ್ಲಿ ಮಹಿಳೆಗೂ ಕೂಡ ಒಂದು ರೀತಿಯಲ್ಲ ಗೌರವ ಸಿಗುತ್ತದೆ.
  • ಪ್ರತಿ ತಿಂಗಳು ₹200 ವಂತಿಗೆ ಪಾವತಿಸುವುದರಿಂದ ಮಹಿಳೆಯರಲ್ಲಿ ಉಳಿತಾಯದ ಮನೋಭಾವ ಬೆಳೆಯುತ್ತದೆ.

ಯೋಜನೆಯ ಸಾಲದ ಸವಾಲುಗಳು : Gruhalakshmi Vividoddesha Sahakari Bank

ಈ ಯೋಜನೆಯಿಂದ ಅನುಕೂಲ ಕಂಡುಬಂದರೂ ಪ್ರಸ್ತುತ ಪರಿಸ್ಥಿತಿಯಲ್ಲಿ ಕೆಲವು ಅನಾನುಕೂಲಗಳು ಈ ಕೆಳಗಿನಂತೆ ಇದೆ.

  • ನಾವು 2026ರ ಹಣದುಬ್ಬರ ಹಾಗೆ ಮಾರುಕಟ್ಟೆಗಳಲ್ಲಿನ ಖರ್ಚು ವೆಚ್ಚಗಳಿಗೆ ಹೋಲಿಸಿದರೆ ಸಾಲ ಪಡೆಯಲು ಮೊದಲೇ 1,000 ರೂ. ನೋಂದಣಿ ಶುಲ್ಕ ಮತ್ತು ಪ್ರತಿ ತಿಂಗಳು 200 ರೂ. ವಂತಿಗೆ ಪಾವತಿಸುವುದು ಆರ್ಥಿಕವಾಗಿ ತೀರಾ ಹಿಂದುಳಿದ ಮಹಿಳೆಯರಿಗೆ ಕಷ್ಟ ವಾಗುತ್ತದೆ.
  • ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಸರ್ಕಾರದಿಂದ ಬರುವುದಿಲ್ಲ 200 ರೂ. ಉಳಿತಾಯ  ಪಾವತಿಸುವುದು ಕಷ್ಟವಾಗುತ್ತದೆ.
  •  ಗೃಹಲಕ್ಷ್ಮಿ ಯೋಜನೆಯಲ್ಲಿ ಬರುವ 2,000 ರೂ. ಹಣವನ್ನೇ ಜೀವನಕ್ಕೆ ಬಳಸುವ ಮಹಿಳೆಯರಿಗೆ, ಸಾಲ ಪಡೆದ ನಂತರ ಪ್ರತಿ ತಿಂಗಳು ಕಂತು (EMI) ಕಟ್ಟುವುದು ಆರ್ಥಿಕ ಸಂಕಷ್ಟಕ್ಕೆ ದಾರಿ ಮಾಡಿಕೊಡಬಹುದು.
  • ಈ ಸಂಘ ಜಿಲ್ಲೆಯಲ್ಲಿ ಸ್ಥಾಪಿತ ವಾಗುವುದರಿಂದ ಹಳ್ಳಿ ಭಾಗದ ಜನರಿಗೆ ಕಷ್ಟ ವಾಗುತ್ತದೆ.
  • ಅರ್ಜಿ ಪ್ರಕ್ರಿಯೆ ಮತ್ತು ಪಾವತಿಗಳು ಡಿಜಿಟಲ್ (PhonePe ನಂತಹ) ಮೂಲಕ ನಡೆಯುವುದರಿಂದ, ಸ್ಮಾರ್ಟ್‌ಫೋನ್ ಇಲ್ಲದ ಅಥವಾ ತಾಂತ್ರಿಕ ಜ್ಞಾನವಿಲ್ಲದ ಮಹಿಳೆಯರು ಇತರರ ಮೇಲೆ ಅವಲಂಬಿತರಾಗಬೇಕಾಗುತ್ತದೆ.
  • ಬಡ್ಡಿ ದರ ಕಡಿಮೆ ಇದ್ದರು ಸರ್ಕಾರದ ಉಚಿತ ಹಣ ಅಲ್ಲ.
  • ನೀವು ಯಾವುದಾದರೂ ಆದಾಯ ತರುವ ಉದ್ಯೋಗ ಮಾಡಲು ಯೋಜಿಸಿದ್ದರೆ ಮಾತ್ರ ಈ ಸಾಲ ಪಡೆಯುವುದು ಸೂಕ್ತ ಹಾಗೆ ನಿಮ್ಮದೇ ವಯಕ್ತಿಕ ವಿಷಯಕ್ಕೆ ಸಾಲ ಪಡೆದರೆ ಮುಂದೆ ತುಂಬಾ ಕಷ್ಟ ವಾಗುತದ್ದೆ ಸಾಲ ಕಟ್ಟಲು. ಯಾವ ಸರ್ಕಾರ ಕೂಡ ಬರುವುದಿಲ್ಲ.

ಅಗತ್ಯ ದಾಖಲೆಗಳು: Gruhalakshmi Vividoddesha Sahakari Bank

ಮಹಿಳೆಯವು ಈ ಕೆಳಗಿನ ಅಗತ್ಯ ದಾಖಲೆ ಗಾಳು ಹೊಂದಿರಬೇಕಾಗುತ್ತದೆ.

  • ವಯಸ್ಸಿನ ದೃಢೀಕರಣ ಪತ್ರ
  • ಆದಾಯ ಪ್ರಮಾಣಪತ್ರ 
  • ನಿವೇಶನದ ದಾಖಲೆಗಳು
  • ಆಧಾರ್ ಕಾರ್ಡ್
  • ಭಾವಚಿತ್ರ 
  • ಬ್ಯಾಂಕ್ ಪಾಸ್‌ಬುಕ್
  • ಗೃಹಲಕ್ಷ್ಮಿ ಮಂಜೂರಾತಿ ಪತ್ರ
  • ಸದಸ್ಯತ್ವ ಸಂಖ್ಯೆ
  • ಬ್ಯಾಂಕ್ ಸ್ಟೇಟ್‌ಮೆಂಟ್
  • ಮೊಬೈಲ್ ಸಂಖ್ಯೆ
  • ಉದ್ಯೋಗದ ಪುರಾವೆ

ಅರ್ಜಿ ಸಲ್ಲಿಸುವ ವಿಧಾನ: Gruhalakshmi Vividoddesha Sahakari Bank

ಈ ಯೋಜನೆಗೆ ಎರೆಡು ಹಂತದಲ್ಲಿ ಅರ್ಜಿಯನ್ನ ಸಲ್ಲಿಸಬಹುದು ಆನ್ಲೈನ್ ಹಾಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಪಡೆಯುವ ವಿಧಾನ

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ಅಗತ್ಯ ದಾಖಲಾತಿಗಳನ್ನು ತೆಗೆದಿಟ್ಟುಕೊಳ್ಳಬೇಕು. ನಂತರ ನಿಮ್ಮ ಫೋನ್ ಅಥವಾ ಕಂಪ್ಯೂಟರ್‌ನಲ್ಲಿ ಹಾಗೆ ಸಂಬಂಧ ಪಟ್ಟ ಕಚೇರಿಗಳಲ್ಲಿ ಬ್ಯಾಂಕ್ ಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
  • ಮಹಿಳೆಯರು ನಿಮ್ಮ ಸಮೀಪದ ಬ್ಯಾಂಕ್ ಗೆ ಭೇಟಿ ನೀಡಬೇಕು ಅಥವಾ ಉಪ ನಿರ್ದೇಶಕರು / CDPO ಕಚೇರಿಗಳು, ಹಾಗೆ ಸಾಲ ನೀಡುವ ಬ್ಯಾಂಕ್‌ಗಳ ಅಧಿಕೃತ ವೆಬ್‌ಸೈಟ್ ನಿಗಮದ ವೆಬ್‌ಸೈಟ್: www.kswdc.com ಡೌನ್‌ಲೋಡ್ ಮಾಡುವ ಮೂಲಕ ನೀವು ಅರ್ಜಿಯನ್ನ ಪಡೆಯಬಹುದು.

ಅರ್ಜಿ ಸಲ್ಲಿಸುವ ವಿಧಾನ Gruhalakshmi Vividoddesha Sahakari Bank

ಮೊದಲು ನೀವು ಸಾಲ ಪಡೆಯಲು ಈ ಸಹಕಾರ ಸಂಘದ ಸದಸ್ಯರಾಗುವುದು ಕಡ್ಡಾಯ.

ಹಂತ 1 Gruhalakshmi Vividoddesha Sahakari Bank

  • ನಿಮ್ಮ ಹತ್ತಿರದ ಗ್ರಾಮ ಒನ್ ಕರ್ನಾಟಕ ಒನ್ ಅಥವಾ ಜಿಲ್ಲಾ ಕೇಂದ್ರದಲ್ಲಿರುವ ಸಹಕಾರ ಸಂಘದ ಕಚೇರಿಗೆ ಭೇಟಿ ನೀಡಿಬೇಕಾಗುತ್ತದೆ.
  • ಅಲ್ಲಿ ಸದಸ್ಯತ್ವಕ್ಕಾಗಿ ಅರ್ಜಿಯನ್ನು ಪಡೆದು ಭರ್ತಿ ಮಾಡಿ.
  • ಮೊದಲು ಅಗತ್ಯವಿರುವ ಎಲ್ಲಾ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.
  • ಅರ್ಜಿದಾರರು 1,000 ರೂ. ನೋಂದಣಿ ಶುಲ್ಕ ಮತ್ತು ಮೊದಲ ತಿಂಗಳ 200 ರೂ. ವಂತಿಗೆಯನ್ನು ಪಾವತಿಸಿ ಇದನ್ನು ಫೋನ್-ಪೇ ಅಥವಾ ಯುಪಿಐ ಮೂಲಕ ಪಾವತಿಸಲು ಅವಕಾಶವಿದೆ ಸರ್ಕಾರ ಕೊಟ್ಟಿರುವಂತದ್ದು.


ಹಂತ 2: ದಾಖಲೆಗಳ ಸಲ್ಲಿಕೆ Gruhalakshmi Vividoddesha Sahakari Bank

  • ಗೃಹಲಕ್ಷ್ಮಿ ಮಂಜೂರಾತಿ ಪತ್ರ (Sanction Letter).
  • ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಪ್ರತಿ.
  • ಬ್ಯಾಂಕ್ ಪಾಸ್‌ಬುಕ್ ಪ್ರತಿ (ಗೃಹಲಕ್ಷ್ಮಿ ಹಣ ಬರುತ್ತಿರುವ ಖಾತೆ).
  • 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು.
  • ನಂತರ ಬ್ಯಾಂಕ್ ಶಾಖೆ ಅಥವಾ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (KSFC) ಶಾಖೆಗೆ ಅರ್ಜಿ ಸಲ್ಲಿಸಬೇಕು.
  • ಸಾಲ ಮಂಜೂರಾತಿಯ ನಂತರ ಅರ್ಜಿದಾರರ ಬ್ಯಾಂಕ್ ಖಾತೆಗೆ ಅಥವಾ ಯಂತ್ರೋಪಕರಣಗಳು / ಉಪಕರಣಗಳ ಪೂರೈಕೆದಾರರ ಬ್ಯಾಂಕ್ ಖಾತೆ ಗಳಿಗೆ ಹಣ ಜಮಾ ಮಾಡ್ಲಗುತ್ತದೆ.

ಹಂತ 3: Gruhalakshmi Vividoddesha Sahakari Bank

  • ಸದಸ್ಯರಾದ ನಂತರ ನೀವು ಸಾಲಕ್ಕಾಗಿ ಪ್ರತ್ಯೇಕ ಅರ್ಜಿ ಸಲ್ಲಿಸಬೇಕು
  • ಸಂಘದ ಕಚೇರಿಯಲ್ಲಿ ಸಾಲದ ಅರ್ಜಿ ನಮೂನೆಯನ್ನು ಮೊದಲು ಪಡೆದುಕೊಳ್ಳಿ.
  • ನಿಮಗೆ ಎಷ್ಟು ಹಣದ ಬೇಕು(30,000 ದಿಂದ 3 ಲಕ್ಷ ರೂ.ವರೆಗೆ) ಮತ್ತು ಅದನ್ನು ಯಾವ ಉದ್ದೇಶಕ್ಕೆ ಬಳಸುತ್ತೀರಾ (ಉದಾಹರಣೆಗೆ: ಹೊಲಿಗೆ ಯಂತ್ರ, ಹೈನುಗಾರಿಕೆ, ವ್ಯಾಪಾರ) ಎಂಬ ವಿವರವನ್ನು ಅರ್ಜಿಯಲ್ಲಿ ಭರ್ತಿ ಮಾಡಿ.
  • ನಂತರ ಅರ್ಜಿಯನ್ನು ಅಧಿಕೃತರಿಗೆ ಸಲ್ಲಿಸಿ.

ಹಂತ 4 Gruhalakshmi Vividoddesha Sahakari Bank

  • ಅಧಿಕಾರಿಗಳು ನಿಮ್ಮ ದಾಖಲೆಗಳನ್ನು ಮತ್ತು ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ಪರಿಶೀಲಿಸುತ್ತಾರೆ.
  • ಎಲ್ಲವೂ ಸರಿಯಾಗಿದ್ದರೆ, ನಿಮ್ಮ ಸಾಲ ಮಂಜೂರಾಗುತ್ತದೆ.

Onlin Application

ತೀರ್ಮಾನ:-

ಕರ್ನಾಟಕ ಸರ್ಕಾರದ ವತಿಯಿಂದ ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯುತ್ತಿರುವಂತಹ ಗೃಹಿಣೀಯರಿಗೆ ಇದೀಗ ಭರ್ಜರಿ ಗುಡ್ ನ್ಯೂಸ್ ಸರ್ಕಾರ ಕೊಡುತ್ತಿದೆ ಮೂರು ಲಕ್ಷದವರೆಗೆ ಸಾಲ ಸೌಲಭ್ಯವನ್ನು ಪಡೆಯುವ ಯೋಜನೆಯ ಇದೀಗ ಜಾರಿಗೆ ತಂದಿದ್ದು ಸಹಕಾರ ಸಂಘದ ವತಿಯಿಂದ ಈ ಒಂದು ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ ಮುಂದಿನ ದಿನಗಳಲ್ಲಿ ಈ ಯೋಜನೆಯಿಂದ ಆರು ಲಕ್ಷದವರೆಗೆ ಸಾಲ ಸೌಲಭ್ಯವನ್ನು ಪಡೆದು ಗೃಹ ಉದ್ಯಮ ಸೇರಿದಂತೆ ಇನ್ನಿತರ ಉದ್ಯಮವನ್ನು ಶುರು ಮಾಡಬಹುದು ಈ ಯೋಜನೆಗೆ ಅರ್ಜಿ ಸಲ್ಲಿಸಲು ಈ ಮೇಲೆ ತಿಳಿಸಿರುವ ಎಲ್ಲಾ ಮಾಹಿತಿಯನ್ನು ಓದಿಕೊಂಡು ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಸಂಪೂರ್ಣವಾದ ಮಾಹಿತಿಯನ್ನು ಓದಿಕೊಂಡು ಕೇಳಲಾಗಿರುವ ಅಗತ್ಯ ದಾಖಲೆಗಳನ್ನ ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಅರ್ಜಿದಾರರು ಹತ್ತಿರದ ಬ್ಯಾಂಕ್‌ಗೆ ಭೇಟಿ ನೀಡಿ..

ಇತರ ಯೋಜನೆಯ ಲಿಂಕುಗಳು :-


Join WhatsApp

Join Now

Join Telegram

Join Now

Leave a Comment