Free Tablet : ಡಿಗ್ರಿ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಸರ್ಕಾರದ ಉಚಿತ ಟ್ಯಾಬ್ ಗಿಫ್ಟ್! 2026, ಪಡೆಯುವುದು ಹೇಗೆ.?

On: Friday, January 30, 2026 5:23 PM
Free Tablet

Join WhatsApp

Join Now

Join Telegram

Join Now

ಪದವಿಯಲ್ಲಿ ಅಂತಿಮ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ (Free Tablet) ವಿತರಣೆ ಮಾಡಲು ಆನ್ಲೈನ್ ಅಪ್ಲಿಕೇಶನ್ ಆರಂಭವಾಗಿದೆ. ಇಂದಿನ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ಕುಂದು ಕೊರತೆ ಆಗಬಾರದೆಂದು ರಾಜ್ಯ ಸರ್ಕಾರ ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ 2021-22 ನೇ ಸಾಲಿನಲ್ಲಿ ವಿತರಣೆ ಮಾಡಿದ ರೀತಿಯಲ್ಲೇ 2026 ರಲ್ಲೂ ಟ್ಯಾಬ್ ವಿತರಣೆ ಮಾಡಬೇಕೆಂದು ನಿರ್ಧರಿಸಿದೆ.

Free Tablet Yojana Karnataka

ಹಾಗಿದ್ದರೆ ಈ ಟ್ಯಾಬ್ (Free Tablet)ಗಳನ್ನ ಪಡೆಯಲು ಬೇಕಾದ ವಿದ್ಯಾರ್ಹತೆ ಏನು ? ಯಾವ ಯಾವ ದಾಖಲೆಗಳು ಇರಬೇಕು ? ಅರ್ಜಿ ಸಲ್ಲಿಸುವ ವಿಧಾನ ಹೇಗೆ ? ಎನ್ನುವುದರ ಸಂಪೂರ್ಣ ಮಾಹಿತಿಯನ್ನ ನಿಮಗೆ ಈ ಲೇಖನದ ಮೂಲಕ ತಿಳಿಸಲಾಗಿದೆ. ಇದೇ ರೀತಿಯ ಹೊಸ ಹೊಸ ಸರ್ಕಾರೀ ಯೋಜನೆ, ಸ್ಕ್ಯಾಲರ್ಶಿಪ್ ಮತ್ತು ಉದ್ಯೋಗಗಳ ಬಗ್ಗೆ ಮಾಹಿತಿಯನ್ನ ನಿಮ್ಮಗಾಗಿ ನಮ್ಮ ಉದ್ಯೋಗ ಸಲಹೆ ವೆಬ್ಸೈಟ್ ನೀಡುತ್ತದೆ.

ಟ್ಯಾಬ್-ವಿತರಣೆ-ಯೋಜನೆ:

ಡಿಗ್ರಿಯಲ್ಲಿ ಅಂತಿಮ ಸೆಮಿಸ್ಟರ್ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳಿಗೆ ಅಂದರೆ ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಯ ಸರ್ಕಾರೀ ಕಾಲೇಜಿಗಳಿಗೆ ಉಚಿತ ಟ್ಯಾಬ್ (Free Tablet) ಗಳನ್ನ ನೀಡಲು ಸರ್ಕಾರ ಚಿಂತನೆ ಮಾಡಿದೆ. ಇದರಿಂದ ಅಂತಿಮ ವರ್ಷದ ವಿದ್ಯಾರ್ಥಿಗಳ ಕಲಿಕೆಯ ನೆರವಿಗೆ ಸರ್ಕಾರದಿಂದ ಬಹುದೊಡ್ಡ ಗಿಫ್ಟ್ ಸಿಕ್ಕಂತಾಗಿದೆ. “ಈ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳ ಆಸರೆಗೆ ಬಂತು ಸರ್ಕಾರದ(Free Tablet) ಉಚಿತ ಟ್ಯಾಬ್ “.

‘ವಿದ್ಯಾರ್ಥಿಗಳು ಇಂದಿನ ದಿನವನ್ನ ಲೆಕ್ಕ ಹಾಕಿ, 22 ದಿನದ ಒಳಗೆ ಅರ್ಜಿಯನ್ನು ಸಲ್ಲಿಸಿ’. ಇನ್ನ ವಿಳಂಬ ಮಾಡುವುದು ಬೇಡ ಸರ್ಕಾರದ 2026ರ ಹೊಚ್ಚ ಹೊಸ ಯೋಜನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ತಿಳಿತಾ ಹೋಗೋಣ ಬನ್ನಿ.


ಸರ್ಕಾರದ ಈ ಯೋಜನೆಯ ಮುಖ್ಯ ಉದ್ದೇಶವಾದರೂ ಏನು ?

ಸರ್ಕಾರ ಯಾವುದೇ ಒಂದು ಯೋಜನೆಯನ್ನ ಜಾರಿಗೆ ತಂದರು ತನ್ನದೇ ಆದ ಪ್ರಮುಖ ಉದ್ದೇಶವನ್ನು ಒಳಗೊಂಡಿರುತ್ತದೆ ಹಾಗಿದ್ದರೆ ಈ ಉಚಿತ ಟ್ಯಾಬ್ ವಿತರಣೆಯ ಹಿಂದೆ ಸರ್ಕಾರದ ಉದ್ದೇಶ ಏನಿರುತ್ತದೆ ? ಈ ಕೆಳಗೆ ತಿಳಿಯೋಣ

  • ಈ ಡಿಜಿಟಲ್ ಯುಗದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಕೂಡ ಇಂಟರ್ನೆಟ್ ಮತ್ತು ಡಿಜಿಟಲ್ ಉಪಕರಣಗಳ ಮೂಲಕ ತಮ್ಮ ಕಲಿಕೆಯನ್ನು ಉತ್ತಮಗೊಳಿಸಿಕೊಳ್ಳಬೇಕು.
  • ಶಿಕ್ಷಣ ಕ್ಷೇತ್ರದಲ್ಲಿ ಆಗುವ ಅಸಮಾನತೆ ಹೋಗಲಾಡಿಸುವುದು ಅಂದರೆ ಶ್ರೀಮಂತ ವಿದ್ಯಾರ್ಥಿಗಳ ಬಳಿ ಲ್ಯಾಪ್ಟಾಪ್ ಅಥವಾ ಟ್ಯಾಬ್ ಇರುತ್ತವೆ ಆದರೆ ಬಡ ವಿದ್ಯಾರ್ಥಿಗಳು ಅವುಗಳನ್ನು ಕರಡಿ ಖರೀದಿ ಮಾಡುವಷ್ಟು ಹಣದ ವ್ಯವಸ್ಥೆ ಇರುವುದಿಲ್ಲ. ಇಂತಹ ವಿದ್ಯಾರ್ಥಿಗಳ ಪರಿಸ್ಥಿತಿಯನ್ನ ಮನಗಂಡ ಸರ್ಕಾರ ಸರಿ ಸಮಾನವಾಗಿ ಎಲ್ಲಾ ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನು ಉತ್ತಮಗೊಳಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದೆ.
  • ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನ ಬಳಸುವುದನ್ನ ಕಲಿಯಲು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಇದು ಸಹಕಾರಿಯಾಗಿದೆ.
  • ಸರ್ಕಾರ ವಿತರಣೆ ಮಾಡುತ್ತಿರುವ ಟ್ಯಾಬ್ ನಲ್ಲಿ ಪಠ್ಯಪುಸ್ತಕಗಳು ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಳು ಆಫ್ಲೈನ್ ನಲ್ಲಿಯೂ ಲಭ್ಯವಿರುತ್ತವೆ ಇದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ.
  • ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಸಂದರ್ಭದಲ್ಲಿ ಇಂತಹ ತಂತ್ರಜ್ಞಾನ ಹೆಚ್ಚಾದಂತೆ ವಿದ್ಯಾರ್ಥಿಗಳಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಹೆಚ್ಚಿನ ಅವಕಾಶಗಳು ದೊರೆಯುತ್ತವೆ.

ಯೋಜನೆಯ ಸೌಲಭ್ಯ ಪಡೆಯುವ ವಿದ್ಯಾರ್ಥಿಗಳು ಯಾರು ?

ಪ್ರತಿಯೊಬ್ಬ ಡಿಗ್ರಿ ವಿದ್ಯಾರ್ಥಿಯು ಇದನ್ನ ಗಮನಿಸಲೇಬೇಕು. “ಸರ್ಕಾರಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಉಚಿತ ಟ್ಯಾಬ್ (Free Tablet)ಯೋಜನೆಗೆ ಅರ್ಜಿ ಸಲ್ಲಿಸಲು ಸರ್ಕಾರ ಅನುಮತಿ ನೀಡಿಲ್ಲ. ಮುಖ್ಯವಾಗಿ ಯಾವ ವಿದ್ಯಾರ್ಥಿಯು ಕೊನೆಯ ಸೆಮಿಸ್ಟರ್ ಅಲ್ಲಿ ಓದುತ್ತಿರುತ್ತಾರೋ ಅಂತವರು ಮಾತ್ರ ಅರ್ಜಿ ಸಲ್ಲಿಸಬಹುದು”.

ಇಂದಿನ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿಕೊಳ್ಳಲು ಉಚಿತ ಲ್ಯಾಪ್ಟಾಪ್ ಯೋಜನೆ ಮತ್ತು ಟ್ಯಾಬ್ ವಿತರಣಾ ಯೋಜನೆಗಳು ಪ್ರಮುಖ ಪಾತ್ರ ವಹಿಸುತ್ತವೆ.

ಉಚಿತ ಲ್ಯಾಪ್ಟಾಪ್ ಯೋಜನೆಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಲ್ಲಿ ಇರಬೇಕಾದ ಅರ್ಹತೆಗಳು :

ಪ್ರೀತಿಯ ವಿದ್ಯಾರ್ಥಿಗಳೇ,,, ನೀವು ಸರ್ಕಾರದಿಂದ ಸಿಗುವ ಉಚಿತ ಟ್ಯಾಬ್ (Free Tablet) ಪಡೆಯಲು ಕೆಳಗೆ ಕೊಡಲಾದ ಅರ್ಹತೆಗೆ ನನ್ನ ಕಡ್ಡಾಯವಾಗಿ ಹೊಂದಿರಲೇಬೇಕು.

  • ವಿದ್ಯಾರ್ಥಿಯು ಕರ್ನಾಟಕದ ಯಾವುದೇ ಸರ್ಕಾರಿ ಕಾಲೇಜಿನಲ್ಲಿ ಓದುತ್ತಿರಬೇಕು
  • ಕಡ್ಡಾಯವಾಗಿ ವಿದ್ಯಾರ್ಥಿಯು ಡಿಗ್ರಿಯ ಅಂತಿಮ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿರಬೇಕು.
  • ಈ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ ಇರುತ್ತದೆ.
  • ಅಭ್ಯರ್ಥಿಯು ಕಡ್ಡಾಯವಾಗಿ ಕರ್ನಾಟಕದ ಕಾಯಂ ನಿವಾಸಿಗಳಾಗಿರಬೇಕು.
  • ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಇತರೆ ಯಾವುದೇ ಯೋಜನೆಗಳಿಂದ ಯಾವುದೇ ರೀತಿಯ ಟ್ಯಾಬ್ ಗಳನ್ನ ಈಗಾಗಲೇ ಪಡೆದಿರಬಾರದು.
  • ಕುಟುಂಬದ ವಾರ್ಷಿಕ ಆದಾಯವು 2.5 ಲಕ್ಷಕ್ಕಿಂತ ಹೆಚ್ಚಾಗಿರಬಾರದು.

ಅಗತ್ಯ ದಾಖಲೆಗಳು :

  • ಆಧಾರ್ ಕಾರ್ಡ್
  • ಕಾಲೇಜು ಪ್ರವೇಶಾತಿ ಪತ್ರ ಅಥವಾ ದಾಖಲಾತಿ ಸಂಖ್ಯೆ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಹಿಂದಿನ ವರ್ಷದ ಅಂಕಪಟ್ಟಿ
  • ಬ್ಯಾಂಕ್ ಪಾಸ್ ಬುಕ್ ಪ್ರತಿ
  • ವಿದ್ಯಾರ್ಥಿಯ 2 ಪಾಸ್ಪೋರ್ಟ್ ಅಳತೆಯ ಫೋಟೋ
  • ರೇಷನ್ ಕಾರ್ಡ್ ಅಗತ್ಯ ಇದ್ದರೆ ಮಾತ್ರ
ಇಲ್ಲಿ ಗಮನಿಸಿ :  “ಡಿಗ್ರಿಯ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶ”

ಅರ್ಜಿ ಸಲ್ಲಿಸುವ ವಿಧಾನ :

ಉಚಿತ ಟ್ಯಾಬ್ (Free Tablet PC) ವಿತರಣ ಯೋಜನೆಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗೆ ಕೊಡಲಾದ ಆಫ್ ಲೈನ್ ಪ್ರಕ್ರಿಯೆ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಹಾಗೆ ಉಚಿತ ಟ್ಯಾಬ್ಲೆಟ್ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ ಸರ್ಕಾರವೇ ಆಫ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶವನ್ನ ಮಾಡಿಕೊಟ್ಟಿದೆ

ಆಫ್ ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ :

  • ನೀವು ಶಿಕ್ಷಣ ಪಡೆಯುತ್ತಿರುವ ಸರ್ಕಾರಿ ಕಾಲೇಜಿನ ಕಚೇರಿಯು ನಿಮ್ಮ ಎಲ್ಲಾ ವಿವರವನ್ನು ಸಂಗ್ರಹಿಸುತ್ತದೆ ಅಂದರೆ ಆಧಾರ್ ,ಆದಾಯ ಪ್ರಮಾಣ ಪತ್ರ, ದಾಖಲಾತಿ ಸಂಖ್ಯೆ, ಹೀಗೆ ಎಲ್ಲವನ್ನು ಸಂಗ್ರಹಿಸುತ್ತದೆ.
  • ಕಾಲೇಜಿನ ಪ್ರಾಂಶುಪಾಲರು ಅರ್ಧ ವಿದ್ಯಾರ್ಥಿಗಳ ಲಿಸ್ಟ್ ಅನ್ನ ಸಿದ್ಧಪಡಿಸಿ ಕಾಲೇಜು ಶಿಕ್ಷಣ ಇಲಾಖೆಗೆ ಸಲ್ಲಿಸುತ್ತಾರೆ.
  • DCE ಇಂದ ಅನುಮೋದನೆ ದೊರೆತ ನಂತರ ಕಾಲೇಜಿನಲ್ಲಿಯೇ ಟ್ಯಾಬ್ ಗಳನ್ನ ವಿತರಣೆ ಮಾಡುತ್ತಾರೆ.

ಅರ್ಜಿ ಸಲ್ಲಿಕೆಯ ನಂತರ ಕಡ್ಡಾಯವಾಗಿ ಮಾಡಲೇಬೇಕಾದ ಕೆಲಸ:

  • ನಿಮ್ಮ ಕಾಲೇಜಿನ ಆಫೀಸ್ ಗೆ ಭೇಟಿ ನೀಡಿ.
  • ಉಚಿತ ಟ್ಯಾಬ್ ಬಿತ್ತನೆ ಮಾಡುತ್ತಿರುವ ಪಟ್ಟಿಯಲ್ಲಿ ನನ್ನ ಹೆಸರು ಇದೆಯೇ ಎಂದು ಸರಿಯಾಗಿ ವಿಚಾರಣೆ ಮಾಡಿ.
  • ಒಂದು ಪಕ್ಷದಲ್ಲಿ ನಿಮ್ಮ ಹೆಸರಿಲ್ಲದಿದ್ದರೆ,,, ನಿಮ್ಮ ಆದಾಯ ಪ್ರಮಾಣ ಪತ್ರ ಮತ್ತು ಆಧಾರ್ ಕಾರ್ಡ್ ಪ್ರತಿಗಳನ್ನು ನೀಡಿ ಹೆಸರನ್ನ ಸೇರಿಸಲು ವಿನಂತಿಸಿ.

ಹೆಚ್ಚಿನ ಮಾಹಿತಿ ಬೇಕಾದರೆ :

ಕಾಲೇಜಿನ ಪ್ರಾಂಶುಪಾಲರನ್ನ (Principal) ಅಥವಾ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯನ್ನು (Student Welfare Officer) ಭೇಟಿ ಮಾಡಿ . ಅಥವಾ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಬಂದಿರುವ ಯೋಜನೆಗಳ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆ (DCE) ಮೇಲೆ ಕ್ಲಿಕ್ ಮಾಡಿ. 


ಸಹಾಯವಾಣಿ ಸಂಖ್ಯೆಗಳು (Helpline Numbers)

ಯಾವುದೇ ಸಮಸ್ಯೆ ಅಥವಾ ಗೊಂದಲಗಳಿದ್ದರೆ ನೇರವಾಗಿ ಇಲಾಖೆಯನ್ನು ಸಂಪರ್ಕಿಸಬಹುದು.

ಮೈತ್ರಿ ಸಹಾಯವಾಣಿ-1800-425-6178 
ವಾಟ್ಸಾಪ್ ಸಂಖ್ಯೆ- 8095556178

ದೂರವಾಣಿ ಸಂಖ್ಯೆ: 080-22223906

ಕಿವಿ ಮಾತು :

ಅಭ್ಯರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಮಧ್ಯವರ್ತಿಗಳಿಗೆ ಹಣ ಕೊಡುವ ಅಗತ್ಯವಿಲ್ಲ. ಸರ್ಕಾರವೇ ನಿಮಗೆ ನಿಮ್ಮ ಕಾಲೇಜಿನ ಮೂಲಕ ಉಚಿತವಾಗಿ ಟ್ಯಾಬ್ ಅನ್ನ ವಿತರಣೆ ಮಾಡುತ್ತದೆ. ಹಾಗೆಯೇ ನಿಮ್ಮ ಆದಾಯ ಪ್ರಮಾಣ ಪತ್ರ ಚಾಲ್ತಿಯಲ್ಲಿದೆಯೇ ಎಂದು ಇದೇ ತಕ್ಷಣ ಪರಿಶೀಲನೆ ಮಾಡಿ. ಇಲ್ಲದಿದ್ದರೆ ನಿಮ್ಮ ಹೆಸರು ಪಟ್ಟಿಯಿಂದ ಡಿಲೀಟ್ ಆಗಬಹುದು.

ಇಂತಹ ಸರ್ಕಾರದ ಉತ್ತಮ ಯೋಜನೆಗಳು ಮತ್ತೆ ನಿಮಗೆ ಸಿಗದೇ ಇರಬಹುದು ಇದೇ ತಕ್ಷಣ ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳನ್ನು ಸರಿಯಾಗಿ ಸಿದ್ಧಪಡಿಸಿಕೊಂಡು ಸರ್ಕಾರದ ನಿಯಮದ ಪ್ರಕಾರ ಅರ್ಜಿಯನ್ನು ಸಲ್ಲಿಸಿ, ಉಚಿತ ಲ್ಯಾಪ್ ಟ್ಯಾಬನ್ನ ಟ್ಯಾಬ್ ಅನ್ನು ನಿಮ್ಮದಾಗಿಸಿಕೊಳ್ಳಿ.


Join WhatsApp

Join Now

Join Telegram

Join Now

Leave a Comment