ನಮಸ್ಕಾರ ಕರ್ನಾಟಕ,, ಬೆಳ್ಳಂ ಬೆಳಗ್ಗೆ ರಾಜ್ಯದ ಮಹಿಳೆಯರಿಗೆ ಈ ಸಂಕ್ರಾಂತಿ ಹಬ್ಬದ ದಿನದಂದು ಭರ್ಜರಿ ಕೊಡುಗೆಯನ್ನು ಕೊಡಲು ಕರ್ನಾಟಕ ಸರ್ಕಾರ ಮುಂದಾಗಿದೆ. ‘ಏನೆಂದರೆ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರವನ್ನು ಕೊಡಲು ಆನ್ಲೈನ್ ಅಪ್ಲಿಕೇಶನ್ ಆರಂಭಿಸಿದ್ದು ಆಸಕ್ತ ಹಾಗೂ ಅರ್ಹ ಮಹಿಳೆಯರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ’.
Free Sewing Machine Scheme In Karnataka 2026
ಮಹಿಳೆಯರೇ ನೀವು ಸ್ವಾವಲಂಬಿ ಜೀವನವನ್ನು ನಡೆಸಲು ಬಯಸುವಿರಾ? ನಿಮ್ಮಗೆ ಹೊಲಿಗೆ ಕೆಲಸ ಬಂದು ಸಹ ಯಂತ್ರ ಖರೀದಿ ಮಾಡುವಷ್ಟು ಹಣ ನಿಮ್ಮಲ್ಲಿಲ್ಲವೇ ? ಹಾಗಿದ್ದರೆ ಈ ವಿಷಯವಾಗಿ ಚಿಂತೆ ಮಾಡುವುದನ್ನ ಇನ್ನು ಮುಂದೆ ಬಿಟ್ಟುಬಿಡಿ! ಯಾಕೆಂದರೆ ರಾಜ್ಯ ಸರ್ಕಾರ ನಿಮ್ಮ ನೆರವಿಗಾಗಿ ನಿಮ್ಮತ್ತ ದಾವಿಸಿದೆ.
ಹೌದು ಕರ್ನಾಟಕ ಸರ್ಕಾರ 2025 – 26ನೇ ಸಾಲಿನಲ್ಲಿ ಕೈಗಾರಿಕಾ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿಗಳ ಮೂಲಕ ಕರ್ನಾಟಕ ಪ್ರತಿಯೊಂದು ಗ್ರಾಮದ ಮೂಲೆ ಮೂಲೆಯಲ್ಲಿರುವ ಎಲ್ಲಾ ಮಹಿಳೆಯರಿಗೂ ಉಚಿತವಾಗಿ ಹೋಲಿಗೆ ಯಂತ್ರವನ್ನು ವಿತರಣೆ ಮಾಡಲು ಮುಂದಾಗಿದೆ. “ಇಂಥ ಒಂದು ಅದ್ಭುತ ಯೋಜನೆಗೆ ಅರ್ಜಿಯನ್ನ ಯಾರೆಲ್ಲಾ ಸಲ್ಲಿಸಬೇಕು ? ಹಾಗೇನೇ ಅರ್ಜಿ ಸಲ್ಲಿಸುವುದು ಹೇಗೆ” ? ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗಿನ ಹಂತದಲ್ಲಿ ನಿನಗೋಸ್ಕರ ಈ ಒಂದು ವೆಬ್ಸೈಟ್ನಲ್ಲಿ ತಿಳಿಸಿಕೊಡಲಾಗಿದೆ.
ತುಂಬಾ ವರ್ಷಗಳ ಹಿಂದೇನೆ ಮಹಿಳೆಯರಿಗಾಗಿ ಈ ಒಂದು ಯೋಜನೆಯನ್ನ ಕರ್ನಾಟಕ ಸರ್ಕಾರ ಜಾರಿ ಮಾಡಿದ್ದು ಮಹಿಳೆಯರು ಸ್ವಾವಲಂಬಿಯಾಗಿ ಹಾಗೇನೇ ಸ್ವತಂತ್ರವಾಗಿ ಯಾರ ಮೇಲೂ ಅವಲಂಬನೆ ಯಾಗದೆ ಆರ್ಥಿಕವಾಗಿ ತಮಗೆ ಬರುವಂತಹ ಕಷ್ಟಗಳನ್ನ ಎದುರಿಸಿ ಸಮಾಜದಲ್ಲಿ ನಿಲ್ಲಬೇಕು ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿ ಮಾಡಿ ಹೊಲಿಗೆ ಯಂತ್ರವನ್ನು ವಿತರಣೆ ಮಾಡುತ್ತಿರುವುದು.
ನನಗೂ ಹೊಲಿಗೆ ಯಂತ್ರ ಸಿಗುತ್ತಾ? ನಿಮ್ಮ ಪ್ರಶ್ನೆಗೆ ಉತ್ತರ ಹೀಗಿದೆ :-
ಈ ಯೋಜನೆಗೆ ನೀವು ಅರ್ಜಿಯನ್ನ ಸಲ್ಲಿಸುವುದಾದರೆ ಈ ಕೆಳಗೆ ಕೊಡಲಾಗಿರುವಂತಹ ಅರ್ಹತೆಗಳನ್ನ ನೀವು ಹೊಂದಿರಬೇಕಾಗುತ್ತದೆ
- ಕುಟುಂಬದಲ್ಲಿ ಈ ಯೋಜನೆಗೆ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸುವ ಅವಕಾಶ ನೀಡಿದ್ದು ಅಂದರೆ ನಿಮ್ಮ ಮನೆಯಲ್ಲಿ ಒಬ್ಬ ಮಹಿಳೆಯರಿಗೆ ಮಹಿಳೆಗೆ ಮಾತ್ರ ಉಚಿತವಾಗಿ ಹೊಲಿಗೆ ಯಂತ್ರ ಸಿಗುತ್ತದೆ
- ಅರ್ಜಿ ಸಲ್ಲಿಸಬೇಕೆಂಬ ಮಹಿಳೆಯರು ಗ್ರಾಮೀಣ ಭಾಗದ ಮಹಿಳೆಯರ ಆಗಿರಬೇಕು.
- ಹೊಸ ವರ್ಷದಲ್ಲಿ ಮಹಿಳೆಯರಿಗೆ ಇದೇ ಮೊದಲ ಬಾರಿ ಸರ್ಕಾರ ಒಂದು ಯೋಜನೆಯನ್ನು ಜಾರಿ ಮಾಡಿರುವಂತದ್ದು ಹಾಗಾಗಿ ಪ್ರತಿಯೊಬ್ಬ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಹಾಗೆಯೇ ನಿಮಗೆ ಕಳೆದ ವರ್ಷ ಹೊಲಿಗೆ ಯಂತ್ರ ಸಿಕ್ಕಿದರೂ ಈ ವರ್ಷ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತೀರಾ.
- ನಿಮ್ಮ ಮನೆಯಲ್ಲಿ ಯಾರಾದರೂ ಸರ್ಕಾರಿ ಉದ್ಯೋಗ ಮಾಡುತ್ತಿದ್ದಲ್ಲಿ ಈ ಯೋಜನೆಯಿಂದ ನಿಮ್ಮನ್ನ ಸರ್ಕಾರವೇ ಕೈಬಿಡುತ್ತದೆ.
- ಬಿಪಿಎಲ್ ಕಾರ್ಡ್ ಹೊಂದಿದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವ ಮುಕ್ತ ಅವಕಾಶ.
- 18-55 ವರ್ಷದೊಳಗಿನ ಮಹಿಳೆಯರಿಗೆ ಅರ್ಜಿ ಸಲ್ಲಿಸುವ ಅವಕಾಶ.
ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲೆಗಳು :-
- ಅರ್ಜಿದಾರರ ಆಧಾರ್ ಕಾರ್ಡ್
- 2 ಪಾಸ್ ಪೋರ್ಟ್ ಅಳತೆಯ ಫೋಟೋ
- ಸರಿಯಾಗಿರುವಂತಹ ಮೊಬೈಲ್ ನಂಬರ್
- ಹೊಲಿಗೆ ತರಬೇತಿ ಪಡೆದ ಪ್ರಮಾಣ ಪತ್ರ (ಅನ್ವಯಿಸಿದಲ್ಲಿ)
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ರೇಷನ್ ಕಾರ್ಡ್ (BPL/APL) ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್
- ಅನ್ವಯಿಸಿದರೆ ನಿರ್ಗತಿಕ ವಿಧವೆ ಪ್ರಮಾಣ ಪತ್ರ
- ವಿಕಲಚೇತನ ಪ್ರಮಾಣ ಪತ್ರ ಅನ್ವಯಿಸಿದಲ್ಲಿ ಮಾತ್ರ
- ಗ್ರಾಮ ಪಂಚಾಯತಿಯಿಂದ ಪಡೆದ ಉದ್ಯೋಗ ದೃಢೀಕರಣ ಪತ್ರ
ಯೋಜನೆಯಿಂದ ನಿನಗೆ ಸಿಗಬಹುದಾದ ಲಾಭ :-
- ಮಹಿಳೆಯರು ತಮ್ಮ ದೈನಂದಿನ ಎಲ್ಲಾ ಕೆಲಸವನ್ನು ಮುಗಿಸಿಕೊಂಡು ಮನೆಯಲ್ಲಿಯೇ ಸಣ್ಣದಾಗಿ ಒಂದು ಉದ್ಯೋಗವನ್ನು ಪ್ರಾರಂಭಿಸಿ ತಮ್ಮ ಆರ್ಥಿಕತೆಯ ರೂಪು-ರೇಷೆಯನ್ನ ಬದಲಾಯಿಸಿಕೊಳ್ಳಬಹುದು.
- ನೀವು ನನಗೆ ಯಂತ್ರವನ್ನು ಖರೀದಿ ಮಾಡಬೇಕೆಂದು ಕೊಂಡಿದ್ದರೆ ಸರ್ಕಾರದ ಯೋಜನೆ ಮೂಲಕ ನಿಮ್ಮ ಹಣವು ಉಳಿತಾಯವಾಗುತ್ತದೆ.
- ಮಹಿಳೆಯರ ಆರ್ಥಿಕ ಸ್ಥಿತಿ ದಿನದಿಂದ ದಿನಕ್ಕೆ ಬದಲಾಗುತ್ತಾ ಬರುತ್ತದೆ.
- ಸರ್ಕಾರ ಉಚಿತವಾಗಿ ಹೊಲಿಗೆ ಯಂತ್ರ ಕೊಡುವುದರ ಜೊತೆಗೆ ಒಂದು ತಿಂಗಳ ಕಾಲ ಉಚಿತವಾಗಿ ತರಬೇತಿಯನ್ನು ಸಹ ನೀಡುವ ಒಂದು ಒಳ್ಳೆಯ ಯೋಜನೆ ಇದಾಗಿದ್ದು ಮಹಿಳೆಯರಿಗೆ ಬಹುದೊಡ್ಡ ನೆರವು ಎಂದರೆ ತಪ್ಪಾಗಲಾರದು.
- ಹೀಗೆ ಇಂತಹ ಅನೇಕ ಯೋಜನೆಗಳು ಮಹಿಳೆಯರ ನೆರವುಗೆ ಬರುವುದರಿಂದ ಸಮಾಜದಲ್ಲಿ ತಮ್ಮ ಜೀವನವನ್ನು ಉತ್ತಮ ಶೈಲಿಯಲ್ಲಿ ನಡೆಸಲು ಅನುಕೂಲವಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಆತ್ಮೀಯ ಮಹಿಳೆಯರೇ ನೀವು ಈ ಯೋಜನೆಗೆ ಆಫ್ಲೈನ್ ಹಾಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶವನ್ನ ಸರ್ಕಾರ ನೀಡಿದೆ.
ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ :
ನಿಮ್ಮ ಊರಿನ ಅಥವಾ ನಿಮ್ಮ ಹತ್ತಿರದ “ಗ್ರಾಮ ಪಂಚಾಯಿತಿ ಕಚೇರಿ, ತಾಲೂಕು ಪಂಚಾಯಿತಿ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೇನೇ ಜಿಲ್ಲಾ ಕೈಗಾರಿಕಾ ಕೇಂದ್ರ” ಈ ಯಾವುದೇ ಇಲಾಖೆಯಲ್ಲಿ ನೀವು ಅರ್ಜಿ ಕೇಳಿ ಫಾರಂನಲ್ಲಿ ಕೇಳಿದ ದಾಖಲೆಗಳನ್ನು ಭರ್ತಿ ಮಾಡಿ ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿಯನ್ನು ಆಫ್ಲೈನ್ ಮುಖಾಂತರ ಸಲ್ಲಿಸಬಹುದು.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ :-
ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಎಲ್ಲಾ ರಾಜ್ಯದ ಮಹಿಳೆಯರು ಒಂದೇ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ.
ಮತ್ತೆ ನಾವು ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ? ಎನ್ನುವ ಗೊಂದಲ ನಿಮ್ಮಲ್ಲಿದ್ದರೆ ಈ ಕೆಳಗಿನ ಹಂತವನ್ನು ಸರಿಯಾಗಿ ಫಾಲೋ ಮಾಡಿ.
ಮೊದಲ ಹಂತ ಹೀಗಿದೆ :
- ಮೊದಲು Google ನಲ್ಲಿ“Free Sewing Machine Scheme online apply + ನಿಮ್ಮ ರಾಜ್ಯದ ಹೆಸರು” ಹುಡುಕಿ.
ಹಂತ ಎರೆಡು : ಲಾಗಿನ್ / ನೋಂದಣಿ
- ನಂತರ ನಿಮ್ಮ ಸರಿಯಾಗಿರುವಂತಹ ಮೊಬೈಲ್ ಸಂಖ್ಯೆ ಹಾಕಿ ನೊಂದಾಯಿಸಿಕೊಳ್ಳಿ ಹಾಗೆ ನಿಮ್ಮ ಮೊಬೈಲ್ ನಂಬರ್ ಗೆ OTP ಬರುತ್ತದೆ ಆ OTPಯನ್ನ ಸರಿಯಾಗಿ ಹಾಕಿ ಲಾಗಿನ್ ಮಾಡಿಕೊಳ್ಳಿ.
ಹಂತ ಮುರೂ : ಯೋಜನೆ ಆಯ್ಕೆಮಾಡಿ
- “Women Welfare / Self Employment” ವಿಭಾಗದಲ್ಲಿ ನೀವು Free Sewing Machine / Tailoring Machine Scheme ಅನ್ನ ಆಯ್ಕೆ ಮಾಡಬೇಕಾಗುತ್ತದೆ.
ಹಂತ ನಾಲಕ್ಕು : ಅರ್ಜಿಯನ್ನು ಭರ್ತಿ ಮಾಡುವ ಕ್ರಮ
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಮ್ಮ ಹೆಸರು ಸರಿಯಾಗಿರುವಂತಹ ವಿಳಾಸ ಆಧಾರ್ ಸಂಖ್ಯೆ ಹಾಗೆ ಬ್ಯಾಂಕ್ ಖಾತೆಯ ವಿವರವನ್ನು ಅರ್ಜಿಯಲ್ಲಿ ಭರ್ತಿ ಮಾಡಬೇಕು.
ಹಂತ ಐದು : ದಾಖಲೆಗಳ ಅಪ್‌ಲೋಡ್ ಕ್ರಿಯೆ
- ಆಧಾರ್ ಕಾರ್ಡ್ ಆದಾಯ ಪ್ರಮಾಣ ಪತ್ರ ವಿಲಾಸ ಪ್ರಮಾಣ ಪತ್ರ ಫೋಟೋ ಹೀಗೆ ಅಲ್ಲಿ ಕೇಳುವ ಇನ್ನಿತರ ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ.
ಹಂತ ಆರು : ಸಬ್ಮಿಟ್ ಬಟನ್
- ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿದ ನಂತರ ಕೆಳಗೆ ಸಬ್ಮಿಟ್ ಬಟನ್ (ಅರ್ಜಿ ಸಲ್ಲಿಸಿ) ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನ ಸಲ್ಲಿಸಿ.
- ಅದೇ ಒಂದು ವೆಬ್ ಸೈಟ್ ನಲ್ಲಿ ನೀವು ಹಾಕಿರುವ ಅಪ್ಲಿಕೇಶನ್ ಸ್ಥಿತಿ ಹೇಗಿದೆ ಎನ್ನುವುದನ್ನು ಅದೇ ತಕ್ಷಣ ಚೆಕ್ ಮಾಡಿಕೊಳ್ಳಿ.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು ಹೀಗಿವೆ :
- ಹಾವೇರಿ ಮಹಿಳಾ ಅಭ್ಯರ್ಥಿಗಳು : ದಿನಾಂಕ: 24-09-2025 ಅರ್ಜಿ ಆರಂಭ ಹಾಗೆ ದಿನಾಂಕ: 23-10-2025 ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ
- ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಹಿಳಾ ಅಭ್ಯರ್ಥಿಗಳು : 23-10-2025 ರಿಂದ ಅಪ್ಲಿಕೇಶನ್ ಹಾಕಿ ದಿನಾಂಕ: 25-11-2025 ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಆಗಿರುತ್ತದೆ.
- ಕೋಲಾರ ಜಿಲ್ಲೆ ಮಹಿಳಾ ಅಭ್ಯರ್ಥಿಗಳು : ಅರ್ಜಿ ಸಲ್ಲಿಸುವ ದಿನಾಂಕವನ್ನು ಕೋಲಾರ ಜಿಲ್ಲಾ ಮಹಿಳೆಯರಿಗೆ ವಿಸ್ತರಣೆ ಮಾಡಿದ್ದು ಜನವರಿ 15ರ ವರೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ
- ಧಾರವಾಡ ಹಾವೇರಿ, ಬೆಂಗಳೂರು ಗ್ರಾಮಾಂತರ ದಕ್ಷಿಣ ಕನ್ನಡ ಈ ಜಿಲ್ಲೆಗಳ ಆನ್ಲೈನ್ ಅಪ್ಲಿಕೇಶನ್ ದಿನಾಂಕ ಈಗಾಗಲೇ ಮುಗಿದಿದ್ದು ಇದರ ಬಗ್ಗೆ ಯಾವುದೇ ಮಹಿಳೆಯರು ಚಿಂತಿಸುವುದು ಬೇಡ ಸರ್ಕಾರ ಮತ್ತೆ ಉಚಿತ ಹೊಲಿಗೆ ಯಂತ್ರಕ್ಕೆ ಆನ್ಲೈನ್ ಅಪ್ಲಿಕೇಶನ್ ಆರಂಭಿಸಿದ ನಂತರ ನಮ್ಮ ಒಂದು ವೆಬ್ ಸೈಟ್ ನಲ್ಲಿ ಮಾಹಿತಿಯನ್ನು ಅಪ್ಲೋಡ್ ಮಾಡಲಾಗುತ್ತದೆ.
ಅಂತಿಮ ತೀರ್ಮಾನ :-
| ಹಂತ ಹಂತವಾದ ನಾನು ಈ ಮೇಲೆ ತಿಳಿಸಿರುವ ಉಚಿತ ಟೈಲರಿಂಗ್ ಮಷೀನ್ ಯೋಜನೆಯ ಮಾಹಿತಿಯನ್ನು ನೀವೆಲ್ಲರೂ ಈಗಾಗಲೇ ತಿಳಿದುಕೊಂಡಿದ್ದೀರಿ ಎಂದು ನಾನು ಭಾವಿಸುತ್ತೇನೆ. ಇನ್ನೂ ಸಹ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ಇಂತಹ ಒಂದು ಅನೇಕ ಯೋಜನೆಗಳಿಂದ ಮಹಿಳೆಯರಿಗೆ ಅನುಕೂಲವೇ ಹೊರತು ಯಾವುದೇ ರೀತಿಯ ಅನಾನುಕೂಲ ಇರುವುದಿಲ್ಲ. ಆದರೆ ಸರ್ಕಾರ ಕರ್ನಾಟಕ ರಾಜ್ಯದ ಪ್ರತಿಯೊಬ್ಬ ಮಹಿಳೆಯರಿಗೂ ಉಚಿತವಾಗಿ ಹೊಲಿಗೆ ಯಂತ್ರ ಕೊಟ್ಟರೆ ಉತ್ತಮವಾಗಿರುತ್ತದೆ. ಯಾಕೆಂದರೆ ಕೆಲವು ಮಹಿಳೆಯರು ಅರ್ಹರಾಗಿದ್ದರು ಕೂಡ ಈ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಈ ಯೋಜನೆಯ ಬಗ್ಗೆ ಸರ್ಕಾರಕ್ಕೆ ನನ್ನದೊಂದು ಮನವಿ ಹೀಗಿರುತ್ತದೆ. |







