Free Laptop : ಗ್ರಾಮೀಣ ಮಹಿಳೆಯರಿಗೆ ಬಂಪರ್ ಗುಡ್ ನ್ಯೂಸ್! ಉಚಿತ ಲ್ಯಾಪ್ಟಾಪ್ + ತರಬೇತಿ + ₹1 ಲಕ್ಷ ಸಾಲ!

On: Tuesday, February 3, 2026 7:07 PM
Free Laptop Scheme Karnataka

Join WhatsApp

Join Now

Join Telegram

Join Now

Free Laptop : ಮಹಿಳೆಯರೇ, ನೀವೇನಾದರೂ ಕಂಪ್ಯೂಟರ್ ಜ್ಞಾನವನ್ನು ಪಡೆದುಕೊಳ್ಳಲು ಇಚ್ಛಿಸುತ್ತಿದ್ದೀರಾ? ಅಥವಾ ಸ್ವಂತವಾಗಿ ಡಿಜಿಟಲ್ ಸೇವಾ ಕೇಂದ್ರವನ್ನು ಪ್ರಾರಂಭಿಸಬೇಕು ಎನ್ನುವ ಕನಸ್ಸನ್ನು ಕಾಣುತ್ತಿದ್ದೀರಾ? ಹಾಗಿದ್ದರೆ ಕೇಂದ್ರ ಸರ್ಕಾರದಿಂದ ಇಲ್ಲಿದೆ ಬಂಪರ್ ಸಿಹಿ ಸುದ್ದಿ!

Free Laptop Scheme Karnataka

ಗ್ರಾಮೀಣ ಭಾಗದ ಮಹಿಳೆಯರಲ್ಲಿ ಡಿಜಿಟಲ್ ಸಾಕ್ಷರತೆಯನ್ನು ಹೆಚ್ಚಿಸಿ, ಅವರು ಸ್ವಂತವಾಗಿ ಜನಸಾಮಾನ್ಯರಿಗೆ ಆನ್ಲೈನ್ ಸೇವೆಯನ್ನು ಒದಗಿಸುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಯಾಗಲು ಸರ್ಕಾರವು ಉಚಿತ ಲ್ಯಾಪ್ಟಾಪ್,(Free Laptop) ಉಚಿತ ತರಬೇತಿ ಹಾಗೂ ಸಾಲ ಸೌಲಭ್ಯವನ್ನು ನೀಡಲು ಮುಂದಾಗಿದೆ.

ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ, ಮಹಿಳೆಯರು ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಈಗಾಗಲೇ, ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಹಿಳೆಯರಿಗೆ ಉಚಿತ ಡಿಜಿಟಲ್ ತರಬೇತಿ ನೀಡಲಾಗಿದೆ. ನೀವು ಕೂಡ ಈಗಲೇ ಅರ್ಜಿ ಸಲ್ಲಿಸಿ ಉಚಿತ ತರಬೇತಿಯ ಜೊತೆಗೆ ಲ್ಯಾಪ್ಟಾಪ್ (Free Laptop0 ಅನ್ನು ತಮ್ಮದಾಗಿಸಿಕೊಳ್ಳಿ.


ಯೋಜನೆಯ ಕಿರು ನೋಟ:

ಸಂಸ್ಥೆ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಉತ್ತೇಜನ ಸಂಸ್ಥೆ
ಯೋಜನೆಯ ಹೆಸರುಬ್ಯಾಂಕಿಂಗ್ ಸಖಿ
ಅರ್ಹ ಫಲಾನುಭವಿಗಳು ಗ್ರಾಮೀಣ ಭಾಗದ ಮಹಿಳೆಯರು

ಏನಿದು ಬ್ಯಾಂಕಿಂಗ್ ಸಖಿ ಯೋಜನೆ:

ಬ್ಯಾಂಕಿಂಗ್ ಸಖಿ ಯೋಜನೆಯು ಕರ್ನಾಟಕ ಸರ್ಕಾರದ ಸಂಜೀವಿನಿ- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಉತ್ತೇಜನ ಸಂಸ್ಥೆಯ ಅಡಿಯಲ್ಲಿ ಬರುವ ಅತ್ಯಂತ ಮಾತ್ವಕಾಂಕ್ಷೆಯ ಯೋಜನೆಯಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶ, ಮಹಿಳಾ ಸ್ವ- ಸಹಾಯ ಸಂಘದ ಸದಸ್ಯರಾಗಿರುವ ಗ್ರಾಮೀಣ ಭಾಗದ ಮಹಿಳೆಯರಿಗೆ ಡಿಜಿಟಲ್ ಸಾಕ್ಷರತೆಯನ್ನು ಹೆಚ್ಚಿಸಿ, ಡಿಜಿಟಲ್ ಉದ್ಯಮಿಗಳನ್ನಾಗಿ ಮಾಡುವುದಾಗಿದೆ.

ಬ್ಯಾಂಕಿಂಗ್ ಸಖಿ ಯೋಜನೆಯನ್ನು ಜಾರಿಗೊಳಿಸಿರುವ ಮುಖ್ಯ ಉದ್ದೇಶಗಳೇನು?

1. ಡಿಜಿಟಲ್ ಸಾಕ್ಷರತೆ ಹೆಚ್ಚಿಸುವುದು:

ಗ್ರಾಮೀಣ ಭಾಗದ ಮಹಿಳೆಯರು ಇಂಟರ್ನೆಟ್ ಬ್ಯಾಂಕಿಂಗ್, ಸ್ಮಾರ್ಟ್ ಫೋನ್ ಬಳಕೆಯನ್ನು ಹಾಗೂ ಆನ್ಲೈನ್ ಮೂಲಕ ಹಣವನ್ನು ಪಾವತಿ ಮಾಡುವ ವಿಧಾನಗಳ ಬಗ್ಗೆ ಉಚಿತ ತರಬೇತಿಯನ್ನು ನೀಡುವ ಮೂಲಕ ಅಲ್ಲಿನ ಜನರ ಡಿಜಿಟಲ್ ಸಾಕ್ಷರತೆಯನ್ನು ಹೆಚ್ಚಿಸುವುದು.

2. ಮನೆ ಬಾಗಿಲಿಗೆ ಡಿಜಿಟಲ್ ಸೇವೆ Free Laptop:

ಬ್ಯಾಂಕ್ ಗಳು ದೂರವಿರುವ ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ, ತಮ್ಮ ಮನೆಗಳ ಬಳಿಯೇ ಹಣವನ್ನು ಜಮಾ ಮಾಡಲು, ವಿತ್ ಡ್ರಾ ಮಾಡಲು, ಉಳಿತಾಯ ಖಾತೆಯನ್ನು ತೆರೆಯಲು ಅನುವು ಮಾಡಿಕೊಡುವುದು.

3. ಮಹಿಳಾ ಸಬಲೀಕರಣಕ್ಕೆ ಉತ್ತೇಜನ Free Laptop:

ಗ್ರಾಮೀಣ ಭಾಗದ ಮಹಿಳೆಯರಿಗೆ ಗೌರವಾನ್ವಿತ ಉದ್ಯೋಗವಕಾಶವನ್ನು ಒದಗಿಸುವ ಮೂಲಕ ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಿ, ಅವರ ಕುಟುಂವಾದ ಆದಾಯವನ್ನು ಹೆಚ್ಚಿಸುವುದು. ಇದರಿಂದಾಗಿ ಮಹಿಯರು, ಯಾರ ಹಂಗಿಲ್ಲದೆ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳಲು ಸಹಾಯವಾಗುತ್ತದೆ.

4. ಮಧ್ಯವರ್ತಿಗಳ ಹಾವಳಿ ಇಲ್ಲದೆ ಹಣ ನೇರವಾಗಿ ವರ್ಗಾವಣೆ:

ಗ್ರಾಮೀಣ ಭಾಗದ ಜನರಿಗೆ ನಗರ ಪ್ರದೇಶದಲ್ಲಿರುವ ಬ್ಯಾಂಕ್ ಗಳಿಗೆ ಹೋಗಲು ಕಷ್ಟವಾದಾಗ ಮಧ್ಯವರ್ತಿಗಳ ಸಹಾಯದ ಮೂಲಕ ಪಿಂಚಣಿ ಹಣವನ್ನು, ಗೃಹಲಕ್ಷ್ಮಿ ಯೋಜನೆಯ ಹಣವನ್ನು ಹಾಗೂ ನರೇಗಾ ಕೂಲಿ ಹಣವನ್ನು ಪಡೆದುಕೊಳ್ಳುತ್ತಿದ್ದರು, ಆದರೆ ಈ ಒಂದು ಯೋಜನೆಯ ಮೂಲಕ ಫಲಾನುಭವಿಗಳು ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೆ ಸುಲಭವಾಗಿ ತಮ್ಮ ಗ್ರಾಮದಲ್ಲಿಯೇ ಹಣವನ್ನು ಪಡೆದುಕೊಳ್ಳಬಹುದಾಗಿದೆ.

5. ಕಡಿಮೆ ಖರ್ಚಿನೊಂದಿಗೆ ಸಮಯ ಉಳಿತಾಯ:

ಗ್ರಾಮೀಣ ಭಾಗದ ಜನರು ನಗರ ಪ್ರದೇಶದಲ್ಲಿರುವ ಬ್ಯಾಂಕ್ ಗಳಿಗೆ ತೆರಳಲು ಹೆಚ್ಚಿನ ಸಮಯ ಬೇಕಲ್ಲದೆ, ಹಣವು ಕೂಡ ಹೆಚ್ಚು ಖರ್ಚಾಗುತ್ತದೆ. ಗ್ರಾಮೀಣ ಮಟ್ಟದಲ್ಲೇ ಸಣ್ಣ ಪ್ರಮಾಣದ ಡಿಜಿಟಲ್ ಸೇವಾ ಕೇಂದ್ರವನ್ನು ಸ್ಥಾಪಿಸುವ ಮೂಲಕ ಹಣದ ಜೊತೆಗೆ ಸಮಯವೂ ಉಳಿತಾಯವಾಗುತ್ತದೆ.

ಗ್ರಾಮೀಣ ಭಾಗದ ಮಹಿಳೆಯರಿಗೆ ಸಿಗುವ ಸೌಲಭ್ಯಗಳೇನು?

1. ಡಿಜಿಟಲ್ ಉಪಕರಣಗಳ ವಿತರಣೆ:

ಮಹಿಳೆಯರು ಗ್ರಾಮೀಣ ಭಾಗದಲ್ಲಿ ಬ್ಯಾಂಕಿಂಗ್ ವ್ಯವಹಾರವನ್ನು ನಡೆಸಲು ಅಗತ್ಯವಾದ ಡಿಜಿಟಲ್ ಅಪ್ಲಿಕೇಶನ್ ಗಳನ್ನು, ಲ್ಯಾಪ್ಟಾಪ್ ಗಳನ್ನು, ಫಿಂಗರ್ಪ್ರಿಂಟ್ ಸ್ಕ್ಯಾನರ್ ಗಳನ್ನು ಉಚಿತವಾಗಿ ನೀಡುವುದು.

2. ಮಾಸಿಕ ಗೌರವ ಸಂಭಾವನೆ ಜೊತೆಗೆ ಕಮಿಷನ್:

ಗ್ರಾಮೀಣ ಭಾಗದ ಮಹಿಳೆಯರಿಗೆ ಕೆಲಸದ ಆರಂಭದಲ್ಲಿ ಮಾಸಿಕ ಗೌರವಧನ ನೀಡಲಾಗುವುದು ಜೊತೆಗೆ ಪ್ರತಿ ಬಾರಿಯೂ ಹಣವನ್ನು ಜಮಾ ಮಾಡಿದಾಗ, ವಿತ್ ಡ್ರಾ ಮಾಡಿದಾಗ, ವಿಮೆಯನ್ನು ಮಾಡಿಸಿದಾಗ ಬ್ಯಾಂಕಿನಿಂದ ಕಮಿಷನ್ ಲಭಿಸುತ್ತದೆ.

3. ಉಚಿತ ತರಬೇತಿ:

ಯಾವುದೇ ಶುಲ್ಕವಿಲ್ಲದೆ, ಡಿಜಿಟಲ್ ಫೈನಾನ್ಸ್, ಉದ್ಯಮಶೀಲತೆ ಹಾಗೂ ಬ್ಯಾಂಕಿಂಗ್ ಸಾಕ್ಷರತೆ ಬಗ್ಗೆ ಪರಿಣಿತರಿಂದ ತರಬೇತಿ ನೀಡಲಾಗುವುದು.

4. ಹಣಕಾಸಿನ ನೆರವು:

ಗ್ರಾಮೀಣ ಭಾಗದ ಮಹಿಳೆಯರು ಸ್ವಂತವಾಗಿ ಡಿಜಿಟಲ್ ಸೇವಾ ಕೇಂದ್ರವನ್ನು ಪ್ರಾರಂಭಿಸಲು ಸರ್ಕಾರದಿಂದ ಕಡಿಮೆ ಬಡ್ಡಿದರದಲ್ಲಿ ₹50,000 ದಿಂದ ₹1,00,000 ದ ವರೆಗೆ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾದ ಮಹಿಳೆಯರು ಯಾರು?

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಹಿಳೆಯರಾಗಿದ್ದು, ಗ್ರಾಮದ ಕಾಯಂ ನಿವಾಸಿಯಾಗಿರಬೇಕು.
  • ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಟ 45 ವರ್ಷ ವಯೋಮಿತಿಯನ್ನು ಹೊಂದಿರಬೇಕು.
  • ಅಭ್ಯರ್ಥಿಯು 10ನೇ ತರಗತಿಯಲ್ಲಿ ಅಥವಾ 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
  • ಅಭ್ಯರ್ಥಿಗೆ ಸ್ಮಾರ್ಟ್ಫೋನ್ ಬಳಸಲು ತಿಳಿದಿರಬೇಕು.
  • ಕಂಪ್ಯೂಟರ್ ಜ್ಞಾನ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.
  • ಕನಿಷ್ಠ 6 ರಿಂದ 12 ಸದಸ್ಯರನ್ನು ಒಳಗೊಂಡ ಸ್ವ- ಸಹಾಯ ಸಂಘದ ಸಕ್ರಿಯ ಸದಸ್ಯರಾಗಿರಬೇಕು.
  • ಬ್ಯಾಂಕಿಂಗ್ ಸೇವೆಯನ್ನು ನೀಡಲು ಇಚ್ಛಿಸುವ ಅಭ್ಯರ್ಥಿಗಳು IIBF ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.
  • ಮುಖ್ಯವಾಗಿ ಸ್ವಂತ ಉದ್ಯೋಗ ಮಾಡಲು ಆಸಕ್ತಿಯನ್ನು ಹೊಂದಿರಬೇಕು.

ಅಭ್ಯರ್ಥಿಗಳು ಹೊಂದಿರಬೇಕಾದ ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ಜಾತಿ ಪ್ರಮಾಣಪತ್ರ
  • ಸ್ವ ಸಹಾಯ ಸಂಘದ ಗುರುತಿನ ಚೀಟಿ
  • ಹತ್ತನೇ ತರಗತಿ ಅಂಕ ಪಟ್ಟಿ
  • ವಾಸಸ್ಥಳ ಪ್ರಮಾಣಪತ್ರ
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  • ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
  • ಬ್ಯಾಂಕ್ ಪಾಸ್ ಬುಕ್ ವಿವರ

ಅರ್ಜಿ ಸಲ್ಲಿಸುವ ವಿಧಾನ:

ಮಹಿಳಾ ಅಭ್ಯರ್ಥಿಗಳು ಸ್ವಂತವಾಗಿ ಡಿಜಿಟಲ್ ಉದ್ಯಮವನ್ನು ಪ್ರಾರಂಭಿಸಲು ಬಯಸಿದರೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಹಾಗೂ ಉಚಿತ ತರಬೇತಿ ಅಥವಾ ಉಚಿತ ಡಿಜಿಟಲ್ (Free Laptop) ಪರಿಕರಗಳನ್ನು ಪಡೆಯಲು ಅರ್ಜಿ ಸಲ್ಲಿಸಬೇಕಾದರೆ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.


ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

  • ನೀವೇನಾದರೂ ಸ್ವಂತ ಡಿಜಿಟಲ್ ಸೇವಾ ಕೇಂದ್ರವನ್ನು ಪ್ರಾರಂಭಿಸಲು ಬಯಸಿದರೆ, CSC ರಿಜಿಸ್ಟರ್ ಪೋರ್ಟಲ್ http://register.csc.gov.in/ ಗೆ ಭೇಟಿ ನೀಡಿ.
  • ನಂತರ, ವಿಲೇಜ್ ಲೆವೆಲ್ ಎಂಟರ್ಪ್ರೇನಿರ್ ವರ್ಗದ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಿ.
  • ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಮ್ಮ ಬ್ಯಾಂಕಿಂಗ್ ವಿವರ, ಆಧಾರ್ ಸಂಖ್ಯೆ, ಹಾಗೂ ವೈಯಕ್ತಿಕ ವಿವರಗಳನ್ನು ನಮೂದಿಸಿ, ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
ವಿಶೇಷ ಸೂಚನೆ: “ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು TEC ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪ್ರಮಾಣ ಪತ್ರ ಸಂಖ್ಯೆಯನ್ನು ಹೊಂದಿರಬೇಕು”.

ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

  • ನಿಮ್ಮ ಗ್ರಾಮದ ಸ್ವ ಸಹಾಯ ಸಂಘದ ಒಕ್ಕೂಟ ಕಚೇರಿಗೆ ಅಥವಾ ಗ್ರಾಮ ಪಂಚಾಯತ್ ಕಚೇರಿಗೆ ಭೇಟಿ ನೀಡಿ.
  • ಅಲ್ಲಿ ಈ ಯೋಜನೆಗೆ ಸಂಬಂಧಿಸಿದಂತೆ ಅಪ್ಲಿಕೇಶನ್ ಫಾರ್ಮ್ ಅನ್ನು ಕೇಳಿ ಪಡೆದುಕೊಳ್ಳಿ.
  • ನಂತರ, ಅರ್ಜಿ ನಮೂನೆಯಲ್ಲಿ ಕೇಳಿರುವ ಸ್ವ ವಿವರಗಳನ್ನು ಭರ್ತಿ ಮಾಡಿ.
  • ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಪ್ರತಿಯನ್ನು ಕಚೇರಿಗೆ ಸಲ್ಲಿಸಿ.

ಅಂತಿಮ ತೀರ್ಮಾನ:

ಗ್ರಾಮೀಣ ಮಹಿಳೆಯರಲ್ಲಿ ಡಿಜಿಟಲ್ ಸಾಕ್ಷರತೆಯನ್ನು ಹೆಚ್ಚಿಸಿ, ತಮ್ಮ ಗ್ರಾಮದಲ್ಲಿಯೇ ತಾವು ಉದ್ಯೋಗವನ್ನು ಪಡೆದುಕೊಳ್ಳುವ ಜೊತೆಗೆ ಅಲ್ಲಿನ ಜನರಿಗೂ ಸುಲಭವಾಗುವ ರೀತಿಯಲ್ಲಿ ಸೇವಾ ಕೇಂದ್ರವನ್ನು ತೆರೆಯಲು ಕರ್ನಾಟಕ ಸರ್ಕಾರವು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಒದಗಿಸುವ ಮೂಲಕ ಅವರ ನೆರವಿಗೆ ನಿಲ್ಲುವ ಪ್ರಯತ್ನ ಮಾಡಿದೆ.

ಸ್ವಂತವಾಗಿ ಜಾಬ್ ಮಾಡಬೇಕೆಂದು ಕನಸು ಕಾಣುತ್ತಿರುವ ಮಹಿಳೆಯರು (Free Laptop) ಈ ಸ್ಕೀಮ್ ನ ಲಾಭವನ್ನು ಪಡೆದುಕೊಳ್ಳಿ.


ಯೋಜನೆಯ ಪ್ರಮುಖ ಲಿಂಕುಗಳು:

ರೂ. 10000 ಉಚಿತ ಪಡೆಯಲು ಅರ್ಜಿ : ಅನುಗ್ರಹ ಕೊಡುಗೆ ಯೋಜನೆ!
2026ರ ದೊಡ್ಡ ಘೋಷಣೆ! ನಿಮ್ಮಊರಿನಲ್ಲಿ ಸಮುದಾಯ ಭವನ ಕಟ್ಟಲು ಅರ್ಜಿ !
ಸುಕನ್ಯಾ ಸಮೃದ್ಧಿ ಯೋಜನೆ (SSY) ಯೋಜನೆ!

Join WhatsApp

Join Now

Join Telegram

Join Now

Leave a Comment