ಅಬ್ಬಬ್ಬಾ ! ರೈತರೇ ಈ ಅವಕಾಶ ಮಿಸ್ ಮಾಡ್ಕೋಬೇಡಿ .. ರೈತರೇ ನಿಮ್ಮ ಕೃಷಿ ಭೂಮಿಯಲ್ಲಿ ಸರಿಯಾದ ನೀರಾವರಿ ಸೌಲಭ್ಯಗಳಿಲ್ಲವೇ? ಉಚಿತವಾಗಿ ನೀರಾವರಿ ಸೌಲಭ್ಯವನ್ನು ಪಡೆದುಕೊಳ್ಳಬೇಕೇ? ಹಾಗಿದ್ದರೆ ಸರ್ಕಾರದ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಇಂದೇ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.
Free Borewell Ganga Kalyana Yojane 2026
ಸರ್ಕಾರವು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಉಚಿತ ಪಂಪ್ಸೆಟ್ ಅಳವಡಿಸುವುದು, ಬೋರೆವೆಲ್ ಕೊರೆಸುವುದು ಹಾಗೂ ವಿದ್ಯುತ್ ಸಂಪರ್ಕ ಹೀಗೆ ವಿವಿಧ ನೀರಾವರಿ ಸೌಲಭ್ಯವನ್ನು ಒದಗಿಸುವ ಮೂಲಕ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಮಾಡುವ ಉದ್ದೇಶವನ್ನು ಹೊಂದಿದೆ.
ಗಂಗಾ ಕಲ್ಯಾಣ ಯೋಜನೆ 2026
ಫಲಾನುಭವಿಗಳು ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬೇಕಾದರೆ, ಆನ್ಲೈನ್ ಮೂಲಕ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಅರ್ಜಿ ಸಲ್ಲಿಸಲು ಇನ್ನು ಕೇವಲ 3 ದಿನಗಳು ಮಾತ್ರ ಬಾಕಿ ಇದೆ. ನೀವೇನಾದರೂ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಬಯಸಿದ್ದರೆ ಇಂದೇ ಅರ್ಜಿ ಸಲ್ಲಿಸುವುದು ಉತ್ತಮ. ಏಕೆಂದರೆ, ನಂತರದ ದಿನಗಳಲ್ಲಿ ಸರ್ವರ್ ಬಿಜಿ ಇರುವ ಸಾಧ್ಯತೆ ಇದೆ.
ಯೋಜನೆಯ ಅವಲೋಕನ:
| ಯೋಜನೆಯ ಹೆಸರು | ಗಂಗಾ ಕಲ್ಯಾಣ ಯೋಜನೆ |
| ಅರ್ಹ ಫಲಾನುಭವಿಗಳು | ರೈತರು |
| ಒಟ್ಟು ಪ್ರೋತ್ಸಾಹಧನ | ₹4.25 ಲಕ್ಷ ಸಹಾಯಧನ ಹಾಗೂ ₹50,000 ಸಾಲ ಸೌಲಭ್ಯ |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ ಮತ್ತು ಆಫ್ಲೈನ್ |
ಯೋಜನೆಯ ಗುರಿ:
- ಬೆಳೆ ನಷ್ಟಕ್ಕೆ ಪರಿಹಾರ:
ಮಳೆಯನ್ನೇ ನಂಬಿಕೊಂಡು ವ್ಯವಸಾಯ ಮಾಡುವ ರೈತರಿಗೆ ಈಗಿನ ಹವಾಮಾನ ಬದಲಾವಣೆಯಿಂದಾಗಿ ಸರಿಯಾದ ಮಳೆಯಾಗದ ಕಾರಣ ಬೆಳೆಗಳ ಇಳುವರಿ ಹೆಚ್ಚಿಲ್ಲದೆ ಸಾಕಷ್ಟು ನಷ್ಟವನ್ನು ಅನುಭವಿಸುತ್ತಿದ್ದಾರೆ. ಇಂತಹವರಿಗಾಗಿಯೇ ಸರ್ಕಾರವು ನೀರಾವರಿ ಸೌಲಭ್ಯವನ್ನು ಒದಗಿಸುವ ಮೂಲಕ ವರ್ಷದಲ್ಲಿ ಎರಡು ಬಾರಿ ಬೆಲೆ ಬೆಳೆಯಲು ಅನುವುಮಾಡಿ ಕೊಟ್ಟಿದೆ.
- ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು:
ನೀರಾವರಿ ಸೌಲಭ್ಯವನ್ನು ಒದಗಿಸುವ ಮೂಲಕ ವರ್ಷಕ್ಕೆ ಒಂದಕ್ಕಿಂತ ಹೆಚ್ಚು ಬೆಳೆಗಳನ್ನು ಬೆಳೆಯಲು ಹಾಗೂ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ನೆರವು ನೀಡುವ ಮೂಲಕ ಆದಾಯವನ್ನು ಹೆಚ್ಚಿಸಿ, ರೈತರಿಗೆ ಸ್ವಾವಲಂಬಿಯಾಗಿ ಜೀವನ ನಡೆಸಲು ಅನುವು ಮಾಡಿಕೊಡುವುದು.
- ನೀರಾವರಿ ಸೌಲಭ್ಯ ಒದಗಿಸುವುದು:
ಪಂಪ್ಸೆಟ್ ಅಳವಡಣೆ, ತೆರೆದ ಬಾವಿ, ಕೊಳವೆ ಬಾವಿ, ಬೋರ್ ವೆಲ್ ಕೊರೆಸುವುದು ಇತರೆ ನೀರಾವರಿ ಯೋಜನೆಗಳ ಮೂಲಕ ರೈತರ ಕೃಷಿಭೂಮಿಗೆ ಶಾಶ್ವತ ನೀರಾವರಿ ಸೌಲಭ್ಯವನ್ನು ಒದಗಿಸುವುದು.
ಫಲಾನುಭವಿಗಳು ಪಡೆಯಬಹುದಾದ ಒಟ್ಟು ಸಹಾಯಧನ ಹಾಗೂ ಸಾಲ ಸೌಲಭ್ಯ:
ಕೆಲವು ಜಿಲ್ಲೆಗಳಿಗೆ ಅನುಗುಣವಾಗಿ ಸಹಾಯಧನವನ್ನು ವಿವಿಧ ರೀತಿಯಲ್ಲಿ ನೀಡಲಾಗಿದೆ. ಅದನ್ನು ಈ ಕೆಳಗಿನ ಹಂತದಲ್ಲಿ ವೀಕ್ಷಿಸಬಹುದು,
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರೈತರಿಗೆ:
- ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿ ₹4.50 ಲಕ್ಷ ಸಹಾಯಧನವನ್ನು ನೀಡಲಾಗುವುದು. ಇದರಲ್ಲಿ ₹4.00 ಲಕ್ಷ ಸಹಾಯಧನ ಹಾಗೂ ₹50,000 ಸಾಲ ಸೌಲಭ್ಯವಾಗಿದೆ.
- ಇತರೆ ಜಿಲ್ಲೆಗಳಿಗೆ, ₹3.50 ಲಕ್ಷ ಸಹಾಯಧನವನ್ನು ನೀಡಲಾಗುವುದು. ₹3.00 ಲಕ್ಷ ಸಹಾಯಧನ ಹಾಗೂ ₹50,000 ಸಾಲ ಸೌಲಭ್ಯವಾಗಿದೆ.
ಹಿಂದುಳಿದ ವರ್ಗಗಳ ರೈತರಿಗೆ:
- ಬೆಂಗಳೂರು ಭಾಗದ ಕೆಲವು ಆಯ್ದ ಜಿಲ್ಲೆಗಳಿಗೆ ₹4.75 ಲಕ್ಷ ಸಹಾಯಧನವನ್ನು ನೀಡಲಾಗುವುದು. ಇದರಲ್ಲಿ ₹4.25 ಲಕ್ಷ ಸಹಾಯಧನ ಹಾಗೂ ₹50,000 ಸಾಲ ಸೌಲಭ್ಯವಾಗಿದೆ.
- ಇತರೆ ಜಿಲ್ಲೆಗಳಿಗೆ ₹2.50 ಲಕ್ಷ ಸಹಾಯಧನವನ್ನು ನೀಡಲಾಗುವುದು. ಇದರಲ್ಲಿ ₹2.00 ಲಕ್ಷ ಸಹಾಯಧನ ಹಾಗೂ ₹50,000 ಸಾಲ ಸೌಲಭ್ಯವಾಗಿದೆ.
ಸಾಮಾನ್ಯ ವರ್ಗದ ರೈತರಿಗೆ:
- ಬೆಂಗಳೂರು ಭಾಗದ ಕೆಲವು ಆಯ್ದ ಜಿಲ್ಲೆಗಳಿಗೆ ₹3.75 ಲಕ್ಷ ಸಹಾಯಧನವನ್ನು ನೀಡಲಾಗುವುದು. ಇದರಲ್ಲಿ ₹3.25 ಲಕ್ಷ ಸಹಾಯಧನ ಹಾಗೂ ₹50,000 ಸಾಲ ಸೌಲಭ್ಯವಾಗಿದೆ.
- ಇತರೆ ಜಿಲ್ಲೆಗಳಿಗೆ ₹2.50 ಲಕ್ಷ ಸಹಾಯಧನವನ್ನು ನೀಡಲಾಗುವುದು. ಇದರಲ್ಲಿ ₹2.00 ಲಕ್ಷ ಸಹಾಯಧನ ಹಾಗೂ ₹50,000 ಸಾಲ ಸೌಲಭ್ಯವಾಗಿದೆ.
ಸಾಲದ ಮೇಲಿನ ಒಟ್ಟು ಬಡ್ಡಿದರ:
- ಅರ್ಹ ಫಲಾನುಭವಿಗಳಿಗೆ ಒಟ್ಟು ₹50,000 ವರೆಗೆ ಸಾಲ ಸೌಲಭ್ಯವನ್ನು ಒದಗಿಸಲಾಗುವುದು.
- ಒಟ್ಟು ಸಾಲದ ಮೇಲೆ ಶೇಕಡಾ 4% ಬಡ್ಡಿ ನೀಡಲಾಗುವುದು.
- ಫಲಾನುಭವಿಗಳಿಗೆ ನೀಡಿರುವ ಒಟ್ಟು ಸಾಲವನ್ನು ಮರುಪಾವತಿಸಲು 3 ರಿಂದ 5 ವರ್ಷ ಕಾಲಾವಕಾಶವನ್ನು ಕಲ್ಪಿಸಲಾಗುತ್ತದೆ.
ಸಹಾಯಧನವನ್ನು ಪಡೆಯಲು ಅರ್ಹರಾದ ರೈತರು:
- ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರುಬೇಕು.
- ಅರ್ಜಿದಾರರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು.
- ಅರ್ಜಿದಾರರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಸಮೂದಾಯಕ್ಕೆ ಸೇರಿದವರಾಗಿರಬೇಕು.
- ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕನಿಷ್ಠ 1 ಎಕ್ಕರೆ ಒಣ ಭೂಮಿಯಿದ್ದರೆ ಸಾಕಾಗುತ್ತದೆ ಹಾಗೂ ಇತರೆ ಜಿಲ್ಲೆಗಳಲ್ಲಿ 2 ಎಕ್ಕರೆ ಒಣ ಭೂಮಿ ಇರಬೇಕು.
- ಅರ್ಜಿದಾರರ ಕನಿಷ್ಠ ಆದಾಯವು ₹6 ಲಕ್ಷ ಮೀರಿರಬಾರದು.
- ಅರ್ಜಿದಾರರು 18 ರಿಂದ 60 ವರ್ಷ ವಯೋಮಿತಿಯನ್ನು ಹೊಂದಿರಬೇಕು.
- ಅರ್ಜಿದಾರರು ಹಾಗೂ ಅವರ ಕುಟುಂಬದವರು ಈ ಹಿಂದೆ ಸರ್ಕಾರದ ಯಾವುದೇ ನೀರಾವರಿ ಸೌಲಭ್ಯವನ್ನು ಹೊಂದಿರಬಾರದು.
| ಇಲ್ಲಿ ಗಮನಿಸಿ: “ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ಇನ್ನು ಕೇವಲ 3 ದಿನಗಳಷ್ಟೇ ಕಾಲಾವಕಾಶವಿದೆ. ಅರ್ಹ ಫಲಾನುಭವಿಗಳು ಇಂದೇ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ” |
ಅರ್ಜಿದಾರರು ಹೊಂದಿರಬೇಕಾದ ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣಪತ್ರ
- ಪಡಿತರ ಚೀಟಿ
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ಜಮೀನು ದಾಖಲೆ
- ಜಮೀನಿನ ಇತ್ತೀಚಿನ ಪಹಣಿ ಪ್ರತಿ
- ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಫೋಟೋ
- ಸಣ್ಣ ಮತ್ತು ಅತಿ ಸಣ್ಣ ರೈತ ಪ್ರಮಾಣ ಪತ್ರ
- ನಿವಾಸ ಪ್ರಮಾಣಪತ್ರ
- ಘೋಷಣಾ ಪ್ರಮಾಣಪತ್ರ
ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಫಲಾನುಭವಿಗಳು ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಹಾಗೂ ಸಹಾಯಧನವನ್ನು ಪಡೆದುಕೊಳ್ಳಬೇಕಾದರೆ ಈ ಕೆಳಗೆ ನೀಡಿರುವ ರೀತಿಯಲ್ಲಿ ಅರ್ಜಿಯನ್ನು ಸಲ್ಲಿಸಿ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
- ಅರ್ಹ ರೈತರು ಸೇವಾ ಸಿಂಧು ಅಧಿಕೃತ ವೆಬ್ಸೈಟ್ https://sevasindhu.karnataka.gov.in/Sevasindhu/Kannada ಗೆ ಭೇಟಿ ನೀಡಿ.
- ಮೊಬೈಲ್ ನಂಬರ್ ನಮೂದಿಸಿ ಲಾಗಿನ್ ಆಗಿ.
- ಅರ್ಜಿ ನಮೂನೆಯಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿಮಾಡಿ.
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ.
- ಅರ್ಜಿ ಸ್ವೀಕೃತಿಯನ್ನು ಪ್ರಿಂಟ್ ತಗೆದುಕೊಳ್ಳಿ.
ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
- ಅರ್ಹ ರೈತರು ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಗೆ ಭೇಟಿ ನೀಡಿ.
- ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರತಿಯನ್ನು ಪಡೆದುಕೊಳ್ಳಿ.
- ನಂತರ ಅರ್ಜಿ ಪ್ರತಿಯಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ
- ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಪ್ರತಿಯನ್ನು ಇಲಾಖೆಗೆ ಸಲ್ಲಿಸಿ ಸ್ವೀಕೃತಿ ಪತ್ರ ಪಡೆದುಕೊಳ್ಳಿ.
ವಿಶೇಷ ಸೂಚನೆ:
- ಒಂದು ಕುಟುಂಬಕ್ಕೆ ಒಂದು ಬಾರಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗುತ್ತದೆ.
- ಅರ್ಹ ಫಲಾನುಭವಿಗಳ ಆಧಾರ್ ಕಾರ್ಡ್ ಗೆ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವುದು ಕಡ್ಡಾಯವಾಗಿದೆ.
- ಈ ಯೋಜನೆಯು ಸಂಪೂರ್ಣ ಪಾರದರ್ಶಕವಾಗಿದೆ. ಯಾವುದೇ ಮಧ್ಯವರ್ತಿಗಳ ಹಾಗೂ ಏಜೆಂಟ್ ಗಳಿಗೆ ಹಣ ನೀಡಬೇಡಿ.
- ಹೆಚ್ಚಿನ ಮಾಹಿತಿಗಾಗಿ 1902 ಗೆ ಕರೆಮಾಡಿ.
ಕೊನೆಯ ನುಡಿ:
ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ಅರ್ಹರಾದ ರೈತರು ಈ ಮೇಲಿನ ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿಯನ್ನು ಸಲ್ಲಿಸಿ. ಅರ್ಜಿ ಸಲ್ಲಿಸಲು ಇನ್ನು ಕೇವಲ 2 ದಿನಗಳಷ್ಟೇ ಉಳಿದಿದೆ. ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಸುಲಭವಾಗಿ ಸಹಾಯಧನವನ್ನು ಪಡೆದುಕೊಳ್ಳಿ.







