Flipkart Scholarship : ಬರೋಬ್ಬರಿ ₹50,000/- : ವಿದ್ಯಾರ್ಥಿಗಳೆ ಇತ್ತ ಗಮನಿಸಿ! ಅರ್ಜಿ ಸಲ್ಲಿಸಲು ಇಲ್ಲಿದೆ ಸರಳ ವಿಧಾನ.!

On: Thursday, January 22, 2026 1:44 PM
Flipkart Scholarship

Join WhatsApp

Join Now

Join Telegram

Join Now

ಫ್ಲಿಪ್ಕಾರ್ಟ್ ಫೌಂಡೇಶನ್ (Flipkart Foundation Scholarship Program) ವತಿಂದ ವಿದ್ಯಾರ್ಥಿಗಳಿಗೆ ಸಿಕ್ತಾ ಇದೆ ಬಂಪರ್ ಕೊಡುಗೆ ! 2026ರ ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದ್ದು. “ಹೊಸ ವರ್ಷದ ಜನವರಿ ತಿಂಗಳಲ್ಲೇ ಈ ಸಂಸ್ಥೆಯು ವಿದ್ಯಾರ್ಥಿಗಳ 2026ರ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದ ಪ್ರೋತ್ಸಾಹ ಧನ ನೀಡಲು ಈಗ ಮುಂದಾಗಿದೆ. ವಿದ್ಯಾರ್ಥಿಗಳಿಗೆ ಸಿಗುವ ವಿದ್ಯಾರ್ಥಿ ವೇತನ ಎಷ್ಟು ಗೊತ್ತಾ ? “ಬರೋಬ್ಬರಿ ₹50,000/-“.

Flipkart Scholarship In Karnataka

ಪ್ರತಿಷ್ಠಿತ ಕಂಪನಿಗಳು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ನೀಡುವುದರಿಂದ ಶಿಕ್ಷಣದಿಂದ ವಂಚಿತರಾಗುವ ವಿದ್ಯಾರ್ಥಿಗಳು ಮತ್ತು ಬಡ ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ. ವೇತನದಿಂದ ರಾಜ್ಯದಲ್ಲಿ ಶಿಕ್ಷಣವನ್ನ ಪಡೆದ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ, ಜೊತೆಗೆ ನಮ್ಮ ದೇಶ ನಮ್ಮ ನಾಡು ಎಂಬ ಪ್ರೀತಿ ವಿಶ್ವಾಸ ಕೂಡ ಅವರಲ್ಲಿ ಮೂಡುತ್ತದೆ.

ಫ್ಲಿಪ್‌ಕಾರ್ಟ್ ಸ್ಕಾಲರ್‌ಶಿಪ್!

ಪ್ರಿಯ ವಿದ್ಯಾರ್ಥಿಮಿತ್ರರೇ, “ಒಂದೇ ಮಾತಿನಲ್ಲಿ ಶಿಕ್ಷಣದ ಬಗ್ಗೆ ಹೇಳುವುದಾದರೆ ವಿದ್ಯೆ ನಮ್ಮ ಜೀವನವನ್ನು ಬೆಳಗಿಸುವ ಬೆಳಕು”. ಕೇವಲ ಹಣದ ಸಮಸ್ಯೆಯಿಂದ ಮಕ್ಕಳ ವಿದ್ಯಾಭ್ಯಾಸದ ಕನಸು ಕಮರಿ ಹೋಗಬಾರದೆಂದು ಇಂತಹ ಅನೇಕ ಸಂಸ್ಥೆಗಳು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ದಾಪುಗಾಲು ಹಾಕುತ್ತೇವೆ. ಇವುಗಳಲ್ಲಿ ಫ್ಲಿಪ್ಕಾರ್ಟ್ ಸಂಸ್ಥೆಯು ಒಂದು.

ಫ್ಲಿಪ್ಕಾರ್ಟ್ ಫೌಂಡೇಶನ್ ಬಗ್ಗೆ ಕಿರು ಪರಿಚಯ :-

ಈ ಸಂಸ್ಥೆಯು 2022 ರಿಂದ ಭಾರತದಾದ್ಯಂತ ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಡಲು ಮುಂದಾಗಿರುವಂಥದ್ದು. ಇದು ಫ್ಲಿಪ್‌ಕಾರ್ಟ್ ಗ್ರೂಪ್‌ನ ಸಾಮಾಜಿಕ ಜವಾಬ್ದಾರಿ (CSR) ವಿಭಾಗವಾಗಿ ತನ್ನ ಕೆಲಸವನ್ನನಿರ್ವಹಿಸುತ್ತದೆ.


ಅನೇಕ ವರ್ಷದಿಂದಲೂ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನವನ್ನು ಪಡೆಯುತ್ತಿದ್ದಾರೆ ಇದೇ ರೀತಿ 2026ರಲ್ಲಿ ಆನ್ಲೈನ್ ಅಪ್ಲಿಕೇಶನ್ ಅನ್ನ ಇದೀಗ ಈ ಸಂಸ್ಥೆ ಆರಂಭಿಸಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸಂಸ್ಥೆಯು ಕೇಳುವ ದಾಖಲೆಗಳೊಂದಿಗೆ ಅಂತಿಮ ದಿನಾಂಕ ದೊಳಗಾಗಿ ಅರ್ಜಿಯನ್ನು ಸಲ್ಲಿಸಿ.

ಯಾರಿಗೆ ಮತ್ತು ಎಷ್ಟು ಹಣ ಸಿಗುತ್ತೆ ?

ಇಂತಹ ಗೋಲ್ಡನ್ ಆಪರ್ಚುನಿಟಿಯನ್ನ ಪಡೆಯುವುದು ಯಾರೆಂಬುದು ನಿಮ್ಮನೆ ಗೊತ್ತಾ ? ಸಂಪೂರ್ಣವಾಗಿ ಈ ಕೆಳಗೆ ತಿಳಿಸಿ ಕೊಡ್ತಾ ಹೋಗ್ತೀನಿ ಬನ್ನಿ,,

  • ಸಣ್ಣ ದಿನಸಿ ಅಂಗಡಿಯನ್ನು ಹೊಂದಿರುವ ಕುಟುಂಬಗಳು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಈ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಬಹುದು.
  • ವಿದ್ಯಾರ್ಥಿಗಳು ಡಿಗ್ರಿಯಲ್ಲಿ ಮೊದಲ ಸೆಮಿಸ್ಟರ್ಗೆ ಸೇರಿಕೊಂಡಲ್ಲಿ ಮಾತ್ರ ಫ್ಲಿಪ್ಕಾರ್ಟ್ ಫೌಂಡೇಶನ್ ಸ್ಕಾಲರ್ಶಿಪ್ ಪಡೆಯಬಹುದು.
  • ಪಿಯುಸಿಯಲ್ಲಿ(12ನೇ ತರಗತಿ) ಶೇಕಡ 60 ಪರ್ಸೆಂಟ್ ಅಂಕವನ್ನ ನೀವು ಗಳಿಸಿರಬೇಕಾಗುತ್ತದೆ.
  • ಕುಟುಂಬದ ವಾರ್ಷಿಕ ಆದಾಯವು ಸುಮಾರು 5ಲಕ್ಷ ಕ್ಕಿಂತ ಕಡಿಮೆ ಇದ್ದಲ್ಲಿ ಮಾತ್ರ 50 ಸಾವಿರ ವೇತನವನ್ನ ನಿಮ್ಮದಾಗಿಸಿಕೊಳ್ಳಬಹುದು.
  • ಫ್ಲಿಪ್ಕಾರ್ಟ್ ಫೌಂಡೇಶನ್ ಸಂಸ್ಥೆಯು ತನ್ನ ಆದ್ಯತೆಯನ್ನ ವಿದ್ಯಾರ್ಥಿ ವೇತನ ಕೊಡುವ ಮೂಲಕ ಹೆಚ್ಚಾಗಿ ಭಾರತದ ಅತ್ಯಂತ ಇರುವ ಹೆಣ್ಣು ಮಕ್ಕಳತ್ತ ತನ್ನ ಗಮನವನ್ನು ಹರಿಸುತ್ತದೆ.

ನೀವು ಹೊಂದಿರಬೇಕಾದ ವಿದ್ಯಾರ್ಹತೆ :-

ಫ್ಲಿಪ್ಕಾರ್ಟ್ ಫೌಂಡೇಶನ್ ಸಂಸ್ಥೆಯು ಎಲ್ಲಾ ವಿದ್ಯಾರ್ಥಿಗಳಿಗೂ ವೇತನವನ್ನು ಕೊಡುವುದಿಲ್ಲ ಕೇವಲ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಅಂಕಗಳಿಸಿ STEM ವಿಭಾಗಗಳಿಗೆ ಸಂಬಂಧಪಟ್ಟ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿದ್ದರೆ ಮಾತ್ರ ನೀವು ಅರ್ಹರಾಗಿರುತ್ತೀರಾ.

STEM ಕೋರ್ಸ್ ಬಗ್ಗೆ ಇನ್ನಷ್ಟು ಸ್ಪಷ್ಟವಾದ ಮಾಹಿತಿ ಬೇಕೆ ?

  • ಸ್ನೇಹಿತರೆ STEM ಕೋರ್ಸ್ ಅಂದರೆ ನೀವು Science (ವಿಜ್ಞಾನ) : ಭೌತಶಾಸ್ತ್ರ (Physics), ರಸಾಯನಶಾಸ್ತ್ರ (Chemistry), ಜೀವಶಾಸ್ತ್ರ (Biology) ಇತ್ಯಾದಿ ವಿಷಯಗಳನ್ನು ಓದುತ್ತಿದ್ದರೆ ವೇತನ ಪಡೆಯಲು ಅರ್ಹ.
  • Technology (ತಂತ್ರಜ್ಞಾನ) ವಿಷಯದಲ್ಲಿ: ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನ (IT), ಸಾಫ್ಟ್‌ವೇರ್ ಅಭಿವೃದ್ಧಿ ಓದುತ್ತಿದ್ದರೆ ವೇತನ ಪಡೆಯಲು ಅರ್ಹ.
  • Engineering (ಎಂಜಿನಿಯರಿಂಗ್) : ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಅಥವಾ ಯಾವುದೇ ಎಂಜಿನಿಯರಿಂಗ್ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳು ಇಸ್ಕಾಲರ್ಶಿಪ್ ಪಡೆಯಲು ಅರ್ಹರಾಗಿರುತ್ತಾರೆ.
  • Mathematics (ಗಣಿತ) : ಗಣಿತ ಮತ್ತು ಸಂಖ್ಯಾಶಾಸ್ತ್ರದ ಕೋರ್ಸ್ ಗಳನ್ನು ನೀವು ಮಾಡುತ್ತಿದ್ದರು ಸಹ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನ ತಲ್ಲಿದ್ದಬಹುದು.

ಪ್ರೋತ್ಸಾಹ ಧನದ ಮೊತ್ತ :-

ವಿದ್ಯಾರ್ಥಿಗಳೇ ಫ್ಲಿಪ್ಕಾರ್ಟ್ ಫೌಂಡೇಶನ್ ನೀಡುತ್ತಿರುವ ಸ್ಕಾಲರ್ಶಿಪ್ ನ ಮೊತ್ತವನ್ನು ಕೇಳಿದರೆ ನೀವು ಶಾಕ್ ಆಗೋದು ಗ್ಯಾರಂಟಿ.

  • ಗಂಡು ಮತ್ತು ಹೆಣ್ಣುಮಕ್ಕಳಿಗೆ ಇಬ್ಬರಿಗೂ ರೂ 50,000/- ವಿದ್ಯಾರ್ಥಿ ವೇತನ.

ವಿಶೇಷ ಸೂಚನೆ : ಆಯ್ಕೆ ಮಾಡುವ ಸಮಯದಲ್ಲಿ ಮಾತ್ರ ಅರ್ಹತೆ ಹೊಂದಿರುವ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಿಗೆ ಮೊದಲ ಆದ್ಯತೆಯನ್ನು ಈ ಸಂಸ್ಥೆ ನೀಡುತ್ತದೆ.

ವಿದ್ಯಾರ್ಥಿಗಳಿಗೆ ಆಗುವ ಅನುಕೂಲಗಳು :-

  • ಫ್ಲಿಪ್ಕಾರ್ಟ್ ಸಂಸ್ಥೆಯು ಒಬ್ಬ ವಿದ್ಯಾರ್ಥಿಗೆ ವರ್ಷಕ್ಕೆ 50 ಸಾವಿರ ಸ್ಕಾಲರ್ಶಿಪ್ ನೀಡುವುದರಿಂದ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಪೀಸ್ ಕಟ್ಟಬೇಕು ಎನ್ನುವ ಚಿಂತೆಯನ್ನು ಈ ಕಂಪನಿ ದೂರ ಮಾಡುತ್ತದೆ.
  • ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳ ವಿದ್ಯಾಭ್ಯಾಸವು ಅರ್ಧಕ್ಕೆ ನಿಲ್ಲುವ ಸಾಧ್ಯತೆಗಳು ಬಹಳಷ್ಟು ಇರುತ್ತದೆ ಇಂತಹ ಸಂದರ್ಭದಲ್ಲಿ ಹಣದ ಕೊರತೆಯನ್ನು ನೀಗಿಸುತ್ತದೆ.
  • ಕೆಲವು ವಿದ್ಯಾರ್ಥಿಗಳು ಮೊದಲು ಕೋರ್ಸ್ ಗಳಿಗೆ ಜಾಯಿನ್ ಆಗುತ್ತಾರೆ ನಂತರದಲ್ಲಿ ಮುಂದಿನ ಕೋರ್ಸ್ ಮಾಡಲು ಈ ಫೌಂಡೇಶನ್ ಸಹಾಯ ಮಾಡುತ್ತದೆ.
  • ಅಷ್ಟೇ ಅಲ್ಲದೆ ವಿಜ್ಞಾನ ಮತ್ತು ತಂತ್ರಜ್ಞಾನದಂತಹ ದುಬಾರಿ ಕೋರ್ಸ್ ಗಳನ್ನು ಪೂರ್ಣಗೊಳಿಸಲು ಈ ಹಣ ಬಹಳಷ್ಟು ವಿದ್ಯಾರ್ಥಿಗೆ ಸಹಾಯವಾಗುವುದಂತೂ ಹೌದು.
  • ಪದವಿ ಕೋರ್ಸ್ ಗಳನ್ನ ಪೂರ್ಣಗೊಳಿಸುವುದು ಸಾಮಾನ್ಯವಾದ ಕೆಲಸ ಅಲ್ಲ. ಪುಸ್ತಕಗಳು, ಲ್ಯಾಪ್ಟಾಪ್ ಅಥವಾ ಇತರೆ ಶೈಕ್ಷಣಿಕ ಪರಿಕರಣಗಳನ್ನು ಖರೀದಿ ಮಾಡಲು ಹೆಚ್ಚಿನ ಹಣವನ್ನು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ವ್ಯಯ ಮಾಡಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಈ ಮೊತ್ತವನ್ನ ಬಳಸಿಕೊಳ್ಳಬಹುದು.
  • ಹೆಣ್ಣು ಮಕ್ಕಳಿಗೆ ಹೆಚ್ಚಾಗಿ ಆದ್ಯತೆ ನೀಡುವುದರಿಂದ ಗಂಡು ಮಕ್ಕಳಿಗೆ ಸರಿ ಸಮಾನವಾದ ವಿದ್ಯಾರ್ಹತೆಯನ್ನು ಒಂದು ಸಾಧಾರಣ ಹೆಣ್ಣು ಕೂಡ ನಮ್ಮ ಭಾರತ ದೇಶದಲ್ಲಿ ಪಡೆಯಲು ಈ ಫೌಂಡೇಶನ್ ಪ್ರಮುಖ ಪಾತ್ರ ವಹಿಸುತ್ತದೆ.
  • ಇದೆ ರೀತಿ ಅನೇಕ ಕಂಪನಿಗಳು ಪ್ರೋತ್ಸಹ ಧನ ನೀಡುವುಗದರಿದ ಭಾರತ ದೇಶದಲ್ಲಿ ಇರುವ ಪ್ರತಿ ಕುಟುಂಬಗಳಲ್ಲಿಯೂ ವಿದ್ಯಾವಂತರಿರುತ್ತಾರೆ ಹಾಗೆಯೇ ಸಮಾಜದಲ್ಲಿ ಬಡವರು ಮತ್ತು ಮಧ್ಯಮ ವರ್ಗದವರೆಂಬ ತಾರತಮ್ಯವೂ ಕ್ಷೀಣಿಸುತ್ತ ಬರುತ್ತದೆ.

ವಿಶೇಷ ಸೂಚನೆ!

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಹೊರಟಿರುವಂಥ ಅಧಿಕೃತ ಅಧಿಸೂಚನೆಯನ್ನು ಓದಿಕೊಂಡು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತೆಗೆದುಕೊಂಡು ಅದಕ್ಕೆ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ನಮ್ಮಲ್ಲಿರಬೇಕು ?

ಈ ಮೇಲೆ ತಿಳಿಸಿರುವ ಸಂಪೂರ್ಣವಾದ ಮಾಹಿತಿಯನ್ನ ಓದುತ್ತಾ ಬಂದಲ್ಲಿ ನಿಮ್ಮ ಮನಸ್ಸಿನಲ್ಲಿ ಮೂಡುವ ಪ್ರಶ್ನೆ ಅರ್ಜಿ ಸಲ್ಲಿಸಲು ಯಾವ ಯಾವ ದಾಖಲಾತಿಗಳು ನಮ್ಮಲ್ಲಿ ಇರಬೇಕೆನ್ನುವುದು.

  • ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು 10ನೇ ತರಗತಿ ಮತ್ತು 12ನೇ ತರಗತಿಯ (PUC) ಅಂಕಪಟ್ಟಿ ಕೇಳಲಾಗುತ್ತೆ.
  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ನೀವೂ ಮೊದಲ ಪದವಿ ಕೋರ್ಟ್ ಗೆ ಜಾಯಿನ್ ಆಗಿರುವ ಕಾಲೇಜು ಪ್ರವೇಶ ಪತ್ರ ಅಥವಾ ಶುಲ್ಕದ ರಸೀದಿ.
  • ನಿಮ್ಮ ತಂದೆ ತಾಯಿ ಹಾಕಿರುವ ದಿನಸಿ ಅಂಗಡಿಯ ಫೋಟೋ ಅಥವಾ ಲೈಸೆನ್ಸ್ ಪ್ರತಿ.
  • ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್ ಬುಕ್ ಪ್ರತಿ ವಿದ್ಯಾರ್ಥಿಯ ಹೆಸರಿನಲ್ಲಿರಬೇಕು
  • ವಿದ್ಯಾರ್ಥಿಯ ಇತ್ತೀಚಿನ ಪಾಸ್ವರ್ಡ್ ಅಳತೆಯ ಫೋಟೋ

ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ :-

ನೀವು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸಿದರೆ ಮತ್ತು ಕೊಟ್ಟಿರುವ ಅರ್ಹತೆಗಳು ನಿಮ್ಮಲ್ಲಿದ್ದರೆ ಆನ್ಲೈನ್ ಮೂಲಕ ಮಾತ್ರನೇ ಅರ್ಜಿ ಸಲ್ಲಿಸುವ ಅವಕಾಶವನ್ನು ಫ್ಲಿಪ್ಕಾರ್ಟ್ ಫೌಂಡೇಶನ್ ವಿದ್ಯಾರ್ಥಿಗಳಿಗೆ ನೀಡಿದೆ.

  • ಅಭ್ಯರ್ಥಿಗಳು ಮೊದಲು Buddy4Study ವೆಬ್‌ಸೈಟ್‌ಗೆ ಹೋಗಿ.
  • ನಿಮ್ಮ ಸರಿಯಾಗಿರುವಂತಹ ಮೊಬೈಲ್ ನಂಬರ್ ಮತ್ತು ಇ-ಮೇಲ್ ಐಡಿ ಯೊಂದಿಗೆ ಹೊಸದಾಗಿ ನೋಂದಣಿ  (Registration) ಮಾಡಿಕೊಳ್ಳಿ.
  • ಫಾರಂನಲ್ಲಿ ಕೇಳುವ ನಿಮ್ಮ ವೈಯಕ್ತಿಕ ಮಾಹಿತಿ ಶಿಕ್ಷಣದ ವಿವರ ಹಾಗೇನೇ ಪೋಷಕರ ಅಂಗಡಿಯ ವಿವರವನ್ನು ಭರ್ತಿ ಮಾಡಿ ಅಪ್ಲೈ ನೌ (‘Apply Now’) ಬಟನ್ ಮೇಲೆ ಕ್ಲಿಕ್ ಮಾಡಿ.
  • ಮೇಲೆ ಈಗಾಗಲೇ ತಿಳಿಸಿರುವ ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಅಂಗಡಿಯ ಪುರಾವೆ ಹಾಗೆ ಅಂಕಪಟ್ಟಿಯ ವಿವರವನ್ನು ಸ್ಕ್ಯಾನ್ ಮಾಡಿ ಸರಿಯಾಗಿ ಅಪ್ಲೋಡ್ ಮಾಡಿ.
  • ಮನೆಯಲ್ಲಿ ನೀವು ಅರ್ಜಿ ಸಲ್ಲಿಸಲು ನಡೆಸಿರುವ ಪ್ರಕ್ರಿಯೆ ಸರಿ ಇದೆಯೇ ಎಂದು ಪರಿಶೀಲನೆ ಮಾಡಿ.
  • ವಿದ್ಯಾರ್ಥಿಗಳಿಗೆ ಇನ್ನೂ ಸಹ ಹೆಚ್ಚಿನ ಮಾಹಿತಿ ಬೇಕಾದಲ್ಲಿ flipkartfoundation.org ಫ್ಲಿಪ್‌ಕಾರ್ಟ್ ಫೌಂಡೇಶನ್ ಅಧಿಕೃತ ವೆಬ್‌ಸೈಟ್ ಗೆ ಭೀತಿ ನೀಡಿ.

ಇಲ್ಲಿ ಗಮನಿಸಿ : ಇದು ಜನವರಿ 22 2026 ಆಗಿರುವುದರಿಂದ ಕೂಡಲೇ ವೆಬ್ಸೈಟ್ ಪರಿಶೀಲಿಸಿ ಅರ್ಜಿ ಸಲ್ಲಿಸುವುದು ಇದು ಸರಿಯಾದ ಸಮಯವಾಗಿದೆ.

ನನ್ನ ಕೊನೆಯ ಮಾತು :

ಈ ಮೇಲಿನ ಎಲ್ಲಾ ಮಾಹಿತಿಯನ್ನ ವಿದ್ಯಾರ್ಥಿಗಳು ಸಂಪೂರ್ಣವಾಗಿ ತಿರುಗಿಸಿಕೊಂಡಿದ್ದೀರಿ ಎಂದು ನಾನು ಭಾವಿಸುತ್ತೇನೆ.

ಇದೀಗ ನಿಮ್ಮ ಮನಸ್ಸಿನಲ್ಲಿ ನಾನು ಫ್ಲಿಪ್ಕಾರ್ಟ್ ಸಂಸ್ಥೆ ನೀಡುತ್ತಿರುವ ₹50,000/- ವಿದ್ಯಾರ್ಥಿವೇತನ ವೇತನಕ್ಕೆ ಪಡೆಯಲು ಅರ್ಹರಾಗಿದ್ದೇನೆ ಫ್ಲಿಪ್ಕಾರ್ಟ್ ಕಂಪನಿಯು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುತ್ತದೆ ಎನ್ನುವ ವಿಷಯ ಇದುವರೆಗೂ ತಿಳಿದಿರಲಿಲ್ಲ, ವೇತನ ಕೈತಪ್ಪುವ ಮೊದಲು ಅರ್ಜಿಯನ್ನು ಸಲ್ಲಿಸಬೇಕು ಅನ್ನುವ ವಿಷಯ ನಿಮ್ಮ ಮನಸ್ಸಿನಲ್ಲಿ ಮೂಡಿರುತ್ತದೆ ಹಾಗೆಯೇ ನಿಮ್ಮಂತೆ ಅನೇಕ ವಿದ್ಯಾರ್ಥಿಗಳು ಇಂತಹ ಕಂಪನಿಗಳು ನೀಡುವ ಪ್ರೋತ್ಸಾಹ ಧನಕ್ಕೆ ಕಾಯುತ್ತಿರುತ್ತಾರೆ ಅಂತವರಿಗೆ ಈ ಮಾಹಿತಿಯನ್ನ ಶೇರ್ ಮಾಡಿ ಮತ್ತು ಹೊಸ ಹೊಸ ಉದ್ಯೋಗಗಳ ಮಾಹಿತಿಗೆ ಸ್ಕಾಲರ್ಶಿಪ್ ಮಾಹಿತಿಗೆ ನಮ್ಮ ಉದ್ಯೋಗ ಸಲಹೆ ವೆಬ್ಸೈಟ್ ಗೆ ಆಗಾಗ ಭೇಟಿ ನೀಡುತ್ತಿರಿ.

ಇತರೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿ ಇದನ್ನು ಓದಿ..

Myntra Scholarship : ರೂ 60,000/-
Gram Panchayat Scholarship : ರೂ 10,000/-
ಅಜೀಂ ಪ್ರೇಮ್ ಜಿ ವಿದ್ಯಾರ್ಥಿ ವೇತನ 2026
ಏರ್ಟೆಲ್ ಸ್ಕಾಲರ್‌ಶಿಪ್!

Join WhatsApp

Join Now

Join Telegram

Join Now

Leave a Comment