ದನದ ಕೊಟ್ಟಿಗೆ ಮತ್ತು ಶಡ್ ನಿರ್ಮಾಣಕ್ಕೆ ಸರ್ಕಾರದಿಂದ 2026ರ ಸಾಲಿನಲ್ಲಿ ಇದೇ ಮೊದಲ ಬಾರಿ ಸಿಕ್ತಾ ಇದೆ ಸಹಾಯಧನ. ರೈತರು ತಮ್ಮ ಊರಿನ ಗ್ರಾಮ ಪಂಚಾಯಿತಿಗೆ ಅಗತ್ಯ ದಾಖಲೆಗಳೊಂದಿಗೆ ಭೇಟಿ ನೀಡಿ ಸರ್ಕಾರವು ನಿಗದಿಪಡಿಸಿದ ಅಂತಿಮ ದಿನದೊಳಗಾಗಿ ಅರ್ಜಿಯನ್ನ ಸಲ್ಲಿಸಿದಲ್ಲಿ ಮಾತ್ರ 2026 ನೇ ಸಾಲಿನಲ್ಲಿ ನಿಮಗೆ ಕೊಟ್ಟಿಗೆ ನಿರ್ಮಾಣಕ್ಕೆ ₹70,000/-ರವರೆಗೆ ಸಹಾಯಧನ ಸಿಗುತ್ತದೆ.
Dairy Shed Subsidy Scheme In Kannada 2026
ಅನೇಕ ಗ್ರಾಮೀಣ ಭಾಗದ ಹಳ್ಳಿಯ ಜನರು ನಮ್ಮ ಊರಲ್ಲಿಯೇ ವರ್ಷಕ್ಕೆ ಹಲವಾರು ಸರ್ಕಾರಿ ಯೋಜನೆಗಳನ್ನು ತೆಗೆದುಕೊಳ್ಳುತ್ತಾರೆ ಆದರೆ ಇದುವರೆಗೂ ನಮ್ಮಿಂದ ಯಾವುದೇ ಒಂದು ಸರ್ಕಾರದ ಯೋಜನೆಗಳನ್ನ ಪಡೆಯಲು ಸಾಧ್ಯವಾಗಲಿಲ್ಲ ಅನ್ನುವ ನಿಮ್ಮ ಚಿಂತೆಗೆ ಇದೀಗ ಹೊಸ ವರ್ಷದ ಜನವರಿಯಲ್ಲಿ ಕೊಟ್ಟಿಗೆ ನಿರ್ಮಾಣಕ್ಕೆ ಸಹಾಯಧನ ನೀಡಲು ಆನ್ಲೈನ್ ಮತ್ತು ಆಫ್ ಲೈನ್ ಅಪ್ಲಿಕೇಶನ್ ಅನ್ನ ಆರಂಭಿಸಿದ್ದು ಇಂದೇ ಅರ್ಜಿ ಸಲ್ಲಿಸಿದರೆ ಸರ್ಕಾರದ ಈ ಯೋಜನೆ ಲಾಭವನ್ನು ಪಡೆಯಬಹುದು.
ಹಿಂದಿನ ಕಾಲದಲ್ಲಿ ಗ್ರಾಮೀಣ ಭಾಗದ ಪ್ರದೇಶಕ್ಕೆ ಕಾಲಿಟ್ಟರೆ ಪ್ರತಿಯೊಬ್ಬರ ಮನೆಯಲ್ಲಿ ಕೊಟ್ಟಿಗೆಗಳು, ದನ – ಕರು, ಎಮ್ಮೆ, ಕೋಳಿ, ಹೀಗೆ ಎಲ್ಲಾ ರೀತಿಯ ಸಾಕು ಪ್ರಾಣಿಗಳು ಇರುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ಎನ್ನುವುದು ಕಣ್ಮರೆಯಾಗುತ್ತಿದೆ.
ಇದನ್ನು ಮನಗಂಡ ಸರ್ಕಾರ ಗ್ರಾಮೀಣ ಪ್ರದೇಶದ ಜನರಿಗೆ ಕೊಟ್ಟಿಗೆ ನಿರ್ಮಾಣಕ್ಕೆ ಈ ಒಂದು ಸಹಾಯಧನವನ್ನು ನೀಡಲು ಮುಂದಾಗಿದೆ. ಹಾಗೆ ಗ್ರಾಮೀಣ ಭಾಗದ ಜನಸಂಯರು ದಿನ ನಿತ್ಯ ಎಲ್ಲೋ ಹೋಗಿ ಯಾವುದೋ ಕೆಲಸವನ್ನ ಮಾಡುವುದಕ್ಕಿಂತ ನಿಮ್ಮ ಮನೆಯಲ್ಲಿ ಜಾನುವಾರುಗಳನ್ನು ಸಾಕಾಣಿಕೆ ಮಾಡಿ ಹಾಲು, ಗೊಬ್ಬರ, ಹೀಗೆ ಅನೇಕ ಉತ್ಪಾದನೆಗಳಿಂದ ಸಿಗುವ ಲಾಭವೇ ಹೆಚ್ಚು ಎನ್ನುವುದು ಸರ್ಕಾರದ ನಿಲುವು.
ಯೋಜನೆಯ ಬಗ್ಗೆ ಕಿರು ಪರಿಚಯ :-
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಅಡಿಯ್ತಲ್ಲಿ ಕೊಟ್ಟಿಗೆ ನಿರ್ಮಾಣಕ್ಕೆ ಈ ಸಹಾಯಧನ ಸಿಗುತ್ತಿರುವಂತದ್ದು. 26ನೇ ಸಾಲಿನ ಮೊದಲು ಈ ಯೋಜನೆ ಅಡಿಯಲ್ಲಿ 57 ಸಾವಿರ ಸಹಾಯಧನವನ್ನು ಕೊಟ್ಟಿಗೆ ನಿರ್ಮಾಣಕ್ಕೆ ಎಂದು ಪ್ರತಿ ಒಂದು ಕುಟುಂಬಕ್ಕೆ ಸರ್ಕಾರ ತೆಗೆದಿಡುತ್ತಿತ್ತು. ಆದರೆ 2026 ನೇ ಸಾಲಿನಲ್ಲಿ 70 ಸಾವಿರ ವರೆಗೂ ಸಹಾಯಧನ ಕೊಡಲು ಮುಂದಾಗಿದೆ. ಈ ಯೋಜನೆ ಜಾರಿ ಮಾಡಿ 23 ಅಗಸ್ಟ್ 2025ರಲ್ಲಿ ಈ ಯೋಜನೆಯನ್ನು ಅಂಗೀಕರಿಸಲಾಗಿದ್ದು ಮತ್ತು 2 ಫೆಬ್ರವರಿ 2026 ರಿಂದ ಜಾರಿಗೊಳಿಸಲಾಯಿತು. ನಂತರದ ದಿನಗಳಲ್ಲಿ ಇದರ ಹೆಸರನ್ನು ಕೂಡ ಬದಲಾಯಿಸಿ ಅಂತಿಮವಾಗಿ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ನಾಮಕರಣಗೊಂಡಿತು‘.
MGNREGA ಯೋಜನೆ ಮೂಲಕ ನೀವು ಹಸು, ಕುರಿ, ಕೋಳಿ, ಹಂದಿ ಸಾಕಾಣಿಕೆ ಮೂಲಕ ಸ್ವಯಂ ಉದ್ಯೋಗ ಮಾಡಬೇಕೆಂದು ಬಯಸುವ ರೈತರಿಗೆ ವೈಯಕ್ತಿಕ ಕಾಮಗಾರಿ, ಕೃಷಿ ಹೊಂಡ, ಕ್ಷೇತ್ರ ಬದು, ತೋಟಗಾರಿಕೆ ಬೆಳೆ, ರೇಷ್ಮೆ ಹಾಗೂ ಅರಣ್ಯ ಬೆಳೆಗಳು ಸೇರಿದಂತೆ ಇತರೆ ವೈಯಕ್ತಿಕ ಕಾಮಗಾರಿಗಳಿಗೂ ಸರ್ಕಾರದಿಂದ ಈ ಯೋಜನೆ ಮೂಲಕ ಸಹಾಯಧನವನ್ನು ನೀವು ಪಡೆಯಬಹುದು.
ಮುಖ್ಯವಾಗಿ ಗಮನಿಸಿ : ರೈತ ಬಾಂಧವರೇ,,, ಸರ್ಕಾರ ದನದ ಕೊಟ್ಟಿಗೆಗೆ ಮಾತ್ರ ಈ ಸಹಾಯಧನವನ್ನು ಕೊಡುವುದಲ್ಲ ಕುರಿ ಶಟ್, ಮೇಕೆ ಶೆಡ್, ಕೋಳಿ ಶೆಟ್, ಹಂದಿ ಶರ್ಟ್, ಹೀಗೆ ಇನ್ನು ಇತ್ಯಾದಿ ಶೆಡ್ ಗಳ ನಿರ್ಮಾಣಕ್ಕೆ ಈ ಸಹಾಯಧನವನ್ನು ಕೊಡುತ್ತಿರುವಂಥದ್ದು ಆದರೆ ಈ ಒಂದು ಮಾಹಿತಿಯು ಕೇವಲ ಕೊಟ್ಟಿಗೆ ನಿರ್ಮಾಣದ ವಿಷಯವಾಗಿರುತ್ತದೆ.
ನಿಮಗೆ ಕೊಟ್ಟಿಗೆ ನಿರ್ಮಾಣಕ್ಕೆ ಸಿಗುವ ಸಹಾಯಧನದ ಮೊತ್ತ :-
ಮೊದಲ ಹಂತದಲ್ಲಿ ಯಾವ ಯಾವ ಸಾಕು ಪ್ರಾಣಿಗಳ ಶೆಡ್ ನಿರ್ಮಾಣಕ್ಕೆ ಎಷ್ಟು ಸಹಾಯಧನ ಸಿಗುತ್ತೆ ಎನ್ನುವುದರ ಬಗ್ಗೆ ತಿಳಿಸಿ ಕೊಡ್ತಾ ಹೋಗ್ತೀನಿ ಬನ್ನಿ,,,.
1. ಹಸು / ಎಮ್ಮೆ ಶೆಡ್ :
- ನೀವು ಹಸು ಅಥವಾ ಎಮ್ಮೆ ಸಾಕಾಣಿಕೆ ಮಾಡಲು ಸರ್ಕಾರದಿಂದ ಸಿಗುವ ಷಡ್ ನಿರ್ಮಾಳಕ್ಕೆ ಸಬ್ಸಿಡಿ ಹಣವನ್ನ ಬಯಸಿದರೆ 70 ಸಾವಿರ ವರೆಗೂ ಸಹಾಯಧನವನ್ನು ಪಡೆಯಬಹುದು.
- ಈ ಒಂದು ಯೋಜನೆ ಅಡಿ ಯಾವುದೇ ರೀತಿಯ ಯಾವುದೇ ವರ್ಗಕ್ಕೆ ಇಂತಿಷ್ಟು ಸಹಾಯಧನವೆಂದು ಸರ್ಕಾರ ನಿಗದಿಪಡಿಸಿಲ್ಲ ಅಂದರೆ ಎಲ್ಲಾ ವರ್ಗಗಳಿಗೂ ಒಂದೇ ರೀತಿಯಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಸಹಾಯಧನವನ್ನು ಪಡೆಯಬಹುದು.
- ರೈತರಲ್ಲಿ ಹಣದ ಬಗ್ಗೆ ಯಾವುದೇ ಗೊಂದಲ ಬೇಡ ನೇರವಾಗಿ ಅರ್ಜಿ ಸಲ್ಲಿಸಿದ ರೈತರ “ಬ್ಯಾಂಕ್ ಖಾತೆಗೆ (Direct Benefit Transfer) ವರ್ಗಾವಣೆ” ಆಗುತ್ತದೆ ಮತ್ತು ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಹಣ ವನ್ನ ಸರ್ಕಾರ ನಗದು ನೀಡುವುದಿಲ್ಲ.
ಯೋಜನೆಗೆ ಅರ್ಜಿ ಸಲ್ಲಿಸಲು ನಮ್ಮಲ್ಲಿ ಇರಬೇಕಾದ ಅರ್ಹತೆಗಳು ಯಾವುವು ? ನಿಮ್ಮ ಪ್ರಶ್ನೆಗೆ ಉತ್ತರ ಈ ಕೆಳಗೆ ಸಿದ್ಧವಿದೆ :
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗ್ರಾಮೀಣ ಭಾಗಕ್ಕೆ ಒಳಪಟ್ಟಿರಬೇಕು
- ನಿನ್ನ ಕುಟುಂಬದವರ ನಿಮ್ಮ ಕುಟುಂಬದ ಒಬ್ಬ ಸದಸ್ಯರ ಹೆಸರಿನಲ್ಲಾದರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಜಾಕ್ ಕಾರ್ಡ್ ಇರಬೇಕು.
- ಕೊಟ್ಟಿಗೆ ನಿರ್ಮಾಣ ಮಾಡಬೇಕೆಂದು ಬಯಸಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸ್ವಲ್ಪನಾದರೂ ಸ್ವಂತ ಜಮೀನು ಇರಬೇಕು.
- ಕಡ್ಡಾಯವಾಗಿ ನಿಮ್ಮ ಒಂದು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು
- ನೀವು ಅನೇಕ ಬಾರಿ ಅರ್ಜಿ ಸಲ್ಲಿಸಿದರು ಸರ್ಕಾರದಿಂದ ಕೊಟ್ಟಿಗೆ ನಿರ್ಮಾಣಕ್ಕೆ ಇನ್ನು ಸಹಾಯಧನ ನೀಡಿಲ್ಲ ಯಾಕೆ ? “ಎನ್ನುವ ನಿಮ್ಮ ಪ್ರಶ್ನೆಗೆ ನಿಮ್ಮ ಗೊಂದಲಕ್ಕೆ ನಾನು ತಿಳಿಸುವುದು ಪಿಡಿಓ ಅಥವಾ ಜಿಪಿ ಸಭೆಯಲ್ಲಿ ನಿಮ್ಮ ಅರ್ಜಿಯು ಮಂಜೂರು ಆದಲ್ಲಿ ಮಾತ್ರ ಸಹಾಯಧನ ಪಡೆಯಲು ಸಾಧ್ಯವಾಗುತ್ತದೆ”.
- ನೀವು ಈ ಯೋಜನೆ ಅಡಿ ಈಗಾಗಲೇ ಸಹಾಯಧನ ಪಡೆದಿದ್ದರೆ 2026 ರಲ್ಲಿ ಅರ್ಜಿ ಸಲ್ಲಿಸಲು ಆಗುವುದಿಲ್ಲ ಸರ್ಕಾರವೇ ನಿಮ್ಮ ಅರ್ಜಿಯನ್ನ ರಿಜೆಕ್ಟ್ ಮಾಡುತ್ತದೆ.
ಯೋಜನೆಯ ಅನುಕೂಲ :-
- ರೈತರು ತಾವು ಒಂದು ಉತ್ತಮ ರೀತಿಯಲ್ಲಿ ನಮ್ಮ ಮನೆ ಜಾನುವಾರುಗಳಿಗೆ ಕೊಟ್ಟಿಗೆ ನಿರ್ಮಾಣ ಮಾಡಬೇಕೆನ್ನುವ ಕನಸಿಗೆ ಸರ್ಕಾರದಿಂದ 57 ಸಾವಿರದಿಂದ 70 ವರೆಗೆ ಆರ್ಥಿಕ ನೆರವು ಸಿಗುತ್ತದೆ.
- ಸರ್ಕಾರದಿಂದ ಬರುವ ಹಣವು ಅರ್ಜಿದಾರರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಯಾವುದೇ ರೀತಿಯ ಮಧ್ಯವರ್ತಿಗಳ ಕೈವಾಡ ಇರುವುದಿಲ್ಲ.
- ಎಲ್ಲ ವರ್ಗದವರಿಗೂ ಒಂದೇ ರೀತಿಯ ಸಹಾಯಧನ ಸಿಗುತ್ತದೆ. ಇದರಿಂದ ಸಾಮಾನ್ಯವರ್ಗದ ಜನಸಾಮಾನ್ಯರಾದ ನಮಗೆ ಸರ್ಕಾರ ಕಡಿಮೆ ಸಹಾಯಧನ ನೀಡುತ್ತದೆ ಎಂದು ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ.
- ಸರ್ಕಾರದ ಈ ಉತ್ತಮ ತೀರ್ಮಾನದಿಂದ ಸಾಕು ಪ್ರಾಣಿಗಳು ಮಳೆ, ಬಿಸಿಲು, ಚಳಿಗೆ, ಒಳಗಾಗದೆ ಉತ್ತಮ ವಾತಾವರಣದಲ್ಲಿ ಬೆಳೆಯುತ್ತವೆ.
- ಉತ್ತಮ ರೀತಿಯ ಷಡ್ ನಿರ್ಮಾಣದಿಂದಾಗಿ ಧನ-ಎಮ್ಮೆಗಳಲ್ಲಿ ಹಾಲಿನ ಉತ್ಪಾದನಾ ಶಕ್ತಿಯು ಹೆಚ್ಚಾಗುತ್ತದೆ.
- ನಿಮ್ಮ ಮನೆಯಲ್ಲಿ ಇತರ ಒಂದು ಕೊಟ್ಟಿಗೆ ಷಡ್ ಇರುವುದರಿಂದ ನಿಮಗೆ ಅಗತ್ಯವಾದ ಸಂದರ್ಭದಲ್ಲಿ ಬ್ಯಾಂಕ್ನಿಂದ ಅಥವಾ ಇನ್ಯಾವುದೋ ರೀತಿಯಿಂದ ಸಾಲ ಪಡೆಯಲು ಅನುಕೂಲವಾಗುತ್ತದೆ.
ಯೋಜನೆಯ ಅನಾನುಕೂಲ :-
ಸರ್ಕಾರ ಗ್ರಾಮೀಣ ಭಾಗದ ಜನಸಾಮಾನ್ಯರಗಾಗಿ ತಂದಿರುವ ಈ ಯೋಜನೆಯಿಂದ ಎಷ್ಟು ಅನುಕೂಲವಿದೆಯೋ ಅಷ್ಟೇ ಅನಾನುಕೂಲಗಳು 2026ರಲ್ಲಿ ಕಂಡು ಬರುತ್ತಿವೆ.
- ಅರ್ಜಿದಾರರು ಅರ್ಜಿ ಸಲ್ಲಿಸಿದ ಮೇಲೆ ಹಣದ ವರ್ಗಾವಣೆಯು DBT ಮೂಲಕ ವರ್ಗಾವಣೆಯಾಗುವುದರಿಂದ ರೈತರಿಗೆ ಅಗತ್ಯವಿರುವ ಸಂದರ್ಭದಲ್ಲಿ ಹಣ ಕೈಗೆ ಸಿಗುವುದಿಲ್ಲ. ಯಾಕೆಂದರೆ ತಾಂತ್ರಿಕ ದೋಷದಿಂದಾಗಿ ಹಣದ ವರ್ಗಾವಣೆ ವಿಳಂಬವಾಗುತ್ತದೆ.
- ರೈತರಲ್ಲಿ ಸ್ವಂತ ಜಮೀನು ಇದ್ದರು ರೈತರ ಬನಿ ಸ್ವಂತ ಜಮೀನು ಇದ್ದರು ದಾಖಲೆಗಳು ಸರಿಯಾಗಿ ಅವರ ಬಳಿ ಕೆಲವು ಕುಟುಂಬದಲ್ಲಿ ಇರುವುದಿಲ್ಲ ಇಂಥವರು ಈ ಯೋಜನೆಯಿಂದ ವಂಚಿತರಾಗುತ್ತಾರೆ.
- ಕೆಲವು ರೈತರು ಕೇವಲ ಜಾನುವಾರುಗಳನ್ನು ಸಾಕಾಣಿಕೆ ಮಾಡದೆ ಕುರಿ ಹಂದಿ ಹೀಗೆ ಮಿಶ್ರ ತಳಿಗಳನ್ನು ಸಾಕಾಣಿಕೆ ಮಾಡುತ್ತಾರೆ ಇಂಥವರಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ ಕೇವಲ ಒಂದು ಬಾರಿ ಅಷ್ಟೇ ಸಿಗುವುದು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಲ್ಲಿ ಇರಬೇಕಾದ ಪ್ರಮುಖ ದಾಖಲೆಗಳು :
- ಜಾಬ್ ಕಾರ್ಡ್
- ಆಧಾರ್ ಕಾರ್ಡ್
- ನಿಮ್ಮ ಜಮೀನಿನ ಹಕ್ಕುಪತ್ರ
- ನೀವು ಯಾವ ಪಶು ಸಾಗುತ್ತಿದ್ದೀರಿ ಎನ್ನುವ ದಾಖಲೆ
- ಅರ್ಜಿಯ ಫಾರ್ಮ್
ಮೇಲೆ ಕೊಡಲಾದ ಈ ಕೆಲವೇ ಕೆಲವು ದಾಖಲೆಗಳು ನಿಮ್ಮಲ್ಲಿದ್ದರೆ ಈ ಯೋಜನೆಯ ಸಂಪೂರ್ಣ ಲಾಭವನ್ನು ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಗ್ರಾಮೀಣ ಭಾಗದ ಜನರು ಪಡೆಯಬಹುದು.
ಅರ್ಜಿ ಸಲ್ಲಿಸುವ ವಿಧಾನ :-
ರಾಜ್ಯ ಸರ್ಕಾರ ಗ್ರಾಮೀಣವಾಗದ ಜನಸಾಮಾನ್ಯರಿಗೆ ಆನ್ಲೈನ್ ಹಾಗೆ ಆಫ್ಲೈನ್ ಎರಡು ವಿಭಾಗದಲ್ಲಿ ಈ ಯೋಚನೆಗೆ ಅರ್ಜಿ ಸಲ್ಲಿಸುವ ಮುಕ್ತ ಅವಕಾಶವನ್ನು ಮಾಡಿಕೊಟ್ಟಿದೆ.
ನೀವು ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಬಯಸಿದರೆ ಈ ಕೆಳಗಿನ ಪ್ರಮುಖ ಹಂತವನ್ನು ಸರಿಯಾಗಿ ಅನುಸರಿಸಿ :
- ನಿಮ್ಮ ಹತ್ತಿರದ ಅಥವಾ ಊರಿನ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ
- ಕಚೇರಿಗೆ ಸಂಬಂಧಿಸಿದ ಸಿಬ್ಬಂದಿಯ ಬಳಿ ಅಂದರೆ ಪಿ ಡಿ ಓ ಹತ್ತಿರ ನರೇಗಾ ಯೋಜನೆ ಅಡಿ ಕೊಟ್ಟಿಗೆ ನಿರ್ಮಾಣಕ್ಕೆ ಸಹಾಯಧನ ಪಡೆಯುವ ಅರ್ಜಿಯನ್ನ ಕೇಳಿ ಪಡೆಯಿರಿ
- ಅರ್ಜಿ ಎಲ್ಲಿ ಕೇಳಿರುವ ಕೆಲವೊಂದು ನಿಮ್ಮ ದಾಖಲಾತಿಯನ್ನು ಭರ್ತಿ ಮಾಡಿ
- ನಂತರ ಜಾಬ್ ಕಾರ್ಡ್, ಜಮೀನು ದಾಖಲೆ, ಬ್ಯಾಂಕ್ ಖಾತೆ + ಆಧಾರ್ ಪಶು ವಿವರಗಳು ಫೋಟೋ/ಪ್ರಮಾಣಪತ್ರ ಪ್ರತಿಯನ್ನ ನಿಮ್ಮ ಅರ್ಜಿಯೊಂದಿಗೆ ಸೇರಿಸಿ ನಿಮ್ಮ ಊರಿನ ಗ್ರಾಮ ಪಂಚಾಯಿತಿ ಅಧಿಕಾರಿಗಳ ಬಳಿ ತೆಗೆದುಕೊಂಡು ಹೋಗಿ.
- GP ಅಧಿಕಾರಿಗಳು ಪರಿಶೀಲಿಸಿ ಮಂಜೂರು ಮಾಡುತ್ತಾರೆ.
ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ :
MGNREGA ಅಧಿಕೃತ ವೆಬ್‌ಸೈಟ್: https://nrega.nic.in ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜಾರ್ ಕಾರ್ಡ್ ಬಳಸಿ ಲಾಗಿನ್ ಆಗಿ
ಕ್ಯಾಟಲ್ ಅನಿಮಲ್ ಷೆಡ್ ಸಬ್ಸಿಡಿ ಯೋಜನೆಯನ್ನು ಆಯ್ಕೆ ಮಾಡಿ
ನಂತರ ನಿಮ್ಮ ಹೆಸರು, ಜಾಬ್ ಕಾರ್ಡ್, ಜಮೀನು, ಪಶು ವಿವರ, ಬ್ಯಾಂಕ್ ಅಥವಾ ಆಧಾರ್ ವಿವರಗಳನ್ನೆಲ್ಲ ಭರ್ತಿ ಮಾಡಿ ನಂತರ ಕೆಳಗೆ ಸಬ್ಮಿಟ್(Submit) ಬಟನ್ ಮೇಲೆ ಪ್ರೆಸ್ ಮಾಡಿ.
ಕೊನೆಯದಾಗಿ ನಿಮ್ಮ ಅರ್ಜಿ ಸಲ್ಲಿಕೆ ಯಾಗಿರುವುದರ ಸ್ಥಿತಿಯನ್ನು ನೋಡಲು ಟ್ರ್ಯಾಕ್ ಅಪ್ಲಿಕೇಶನ್ (“Track Application”) ನಲ್ಲಿ ನೋಡಿ.
ರೈತ ಮಿತ್ರರೇ ನಿಮಗೊಂದುಪ್ರಮುಖ ಸೂಚನೆ :–
ಗ್ರಾಮೀಣ ಭಾಗದಲ್ಲಿರುವ ಜನಸಾಮಾನ್ಯರಿಗೆ ಈ ಡಿಜಿಟಲ್ ಮೂಲಕ ಅರ್ಜಿ ಸಲ್ಲಿಸುವುದು ಕಷ್ಟವಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಹಾಗಾಗಿ ನೀವು ನಿಮ್ಮ ಊರಿನ ಗ್ರಾಮ ಪಂಚಾಯಿತಿಯಲ್ಲಿ ಇರುವ ಅಧಿಕಾರಿಗಳನ್ನು ಬೇಟಿಯಾಗಿ ಅರ್ಜಿಯನ್ನು ಸಲ್ಲಿಸುವ ಕ್ರಿಯೆಯನ್ನ ಸರಳಗೊಳಿಸಿಕೊಳ್ಳಿ.
ಅಂತಿಮ ತೀರ್ಮಾನ :-
| ಕುರಿ ಕೋಳಿ ದನ ಸಾಕಾಣಿಕೆ ಮಾಡುವುದಕ್ಕೆ ಶೆಡ್ ನಿರ್ಮಾಣ ಮಾಡಲು ಹಣ ಸಹಾಯವನ್ನು ಸರ್ಕಾರದಿಂದ ಮಾಡುತ್ತಿದ್ದಾರೆ, ಇದರ ಬಗ್ಗೆ ಮೇಲೆ ತಿಳಿಸಿರುವ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಅದಕ್ಕೆ ದಾಖಲೆಗಳೊಂದಿಗೆ ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಎಲ್ಲ ಮಾಹಿತಿಯನ್ನು ತಿಳಿದುಕೊಂಡು ಅಗತ್ಯ ದಾಖಲೆಗಳನ್ನು ಗ್ರಾಮ ಪಂಚಾಯಿತಿಯಲ್ಲಿ ಸಬ್ಮಿಟ್ ಮಾಡಿದಾಗ ನೀವು ಅರ್ಹತೆ ಪಡೆದರೆ ಉಚಿತವಾಗಿ ಶೆಡ್ ನಿರ್ಮಾಣ ಮಾಡಿಕೊಳ್ಳಲು ಹಣವನ್ನು ಪಡೆದುಕೊಳ್ಳಬಹುದು. |







