ಕರ್ನಾಟಕ ನಾರಿ ಮಣಿಗಳಿಗೆ ಸರ್ಕಾರ ಆರ್ಥಿಕವಾಗಿ ಶಕ್ತಿ ತುಂಬಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಗುಡ್ ನ್ಯೂಸ್ ಅನ್ನು ಕೊಟ್ಟಿದೆ. ಏನೆಂದರೆ ಹಳ್ಳಿಯ ಭಾಗದಲ್ಲಿ ದನಗಳನ್ನು ಸಾಕಾಣಿಕೆ ಮಾಡಿದ ಕುಟುಂಬಕ್ಕೆ ಪ್ರತಿ ತಿಂಗಳು ₹2000 ಅನುದಾನವನ್ನ ಕೊಡಲು ಮುಂದಾಗಿದೆ.
Dairy Farming Subsidy Scheme In Karnataka
ಅಷ್ಟೇಯಲ್ಲದೆ ಮಹಿಳೆಯರಿಗೆ ಮತ್ತಷ್ಟು ದನ ಕರುಗಳನ್ನ ಸಾಕಾಣಿಕೆ ಮಾಡಲು ₹58,500 ಸಹಾಯಧನದ ಜೊತೆಗೆ ಕೊಟ್ಟಿಗೆ ನಿರ್ಮಾಣಕ್ಕೆ ₹1.20 ಲಕ್ಷ ಸಹಾಯಧನ ಕೊಡುವ ಸರ್ಕಾರದ ಈ ನಿರ್ಧಾರ ರಾಜ್ಯದ ಮಹಿಳೆಯರಿಗೆ ಮತ್ತು ಮನೆ ಯಜಮಾನರಿಗೆ ಖುಷಿ ತರುವಂತಹ ಸುದ್ದಿಯಾಗಿದ್ದು ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಮತ್ತು ಬಡ ಕುಟುಂಬಗಳಿಗೆ ತಮ್ಮ ಕುಟುಂಬವನ್ನ ಸುಧಾರಿಸಿಕೊಳ್ಳಲು ಸರ್ಕಾರದ ಒಂದು ಬಹುದೊಡ್ಡ ಬೆಂಬಲ ಸಿಕ್ಕಂತಾಗುತ್ತದೆ.
ಅನೇಕ ವರ್ಷಗಳ ಹಿಂದೇನೆ ಸರ್ಕಾರ ಈ ರೀತಿಯ ಒಂದು ಯೋಜನೆಯನ್ನ ಜಾರಿ ಮಾಡಿದ್ದೂ ಕೆಲವೇ ಕೆಲ ಜನ ಸಾಮಾನ್ಯರಿಗೆ ಮಾತ್ರ ಈ ಯೋಜನೆ ಬಗ್ಗೆ ತಿಳಿದಿರುವುದು ದುರಂತ ವಿಷಯವೇ ಹಾಗಾಗಿ ನಮ್ಮ ಸಾಮಾಜಿಕ ಜಾಲ ತಾಣದ ಮೂಲಕ ಇಂತ ಯೋಜನೆಯ ಬಗ್ಗೆ ಅನಾವರ್ಣಗೊಳಿಸುವುದು ನಮ್ಮ ಒಂದು ಪ್ರಮುಖ ಉದ್ದೇಶವಾಗಿದೆ.
ನೀವು ಕೂಡ ಗ್ರಾಮೀಣ ಭಾಗದ ಜನರಾಗಿದ್ದಾರೆ ಈ ಯೋಜನೆಗೆ ಅರ್ಹರಾಗಿರುತ್ತೀರಾ. ಇಂತ ಅನೇಕ ಹೆಚ್ಚು ಹೆಚ್ಚು ಯೋಜನೆಗಳನ್ನ ಸರ್ಕಾರ ನಮ್ಮ ಗ್ರಾಮೀಣ ಭಾಗದ ಜನರಿಗಾಗಿ ಅನುಷ್ಠಾನ ಗೊಳಿಸುವುದರಿಂದ ಕರ್ನಾಟಕ ರಾಜ್ಯದಲ್ಲಿ ಬಡ ಜನಸಾಮಾನ್ಯರುಗಳ ಮೇಲೆ ನಡೆಯುವ ಹಾಗೆ ಬಡವ ಶ್ರೀಮಂತ ಎಂಬ ತಾರತಮ್ಯಗಳು ಗಣನೀಯವಾಗಿ ಕಡಿಮೆಯಾಗುತ್ತಾ ಬರುತ್ತದೆ.
ತಡ ಮಾಡುವುದು ಬೇಡ ಈ ಯೋಚನೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯುತ್ತ ಹೋಗೋಣ ಬನ್ನಿ
ನಮ್ಮ ಸಿಎಂ ಸಿದ್ದರಾಮಯ್ಯ ಸರ್ಕಾರವು 2026ನೇ ಸಾಲಿನಲ್ಲೂ ಪಶು ಸಂಗೋಪನೆ ಹಾಗೇನೆ ಹೈನುಗಾರಿಕೆಯನ್ನು ಉತ್ತೇಜಿಸುವ ಪ್ರಮುಖ ಉದ್ದೇಶವನಿಟ್ಟುಕೊಂಡು ಈ ಯೋಜನೆಯನ್ನು ಜಾರಿ ಮಾಡಿರುವುದು ನಾವು ನೀವೆಲ್ಲರೂ ಗಮನಿಸಬಹುದಾಗಿದೆ.
SC/ST ಫಲಾನುಭವಿಗಳು ಪಡೆಯ ಬಹುದಾದ ಲಾಭ :–
- ನೀವು ಹಳ್ಳಿ ಭಾಗದ ಜನಸಾಮಾನ್ಯರಾಗಿದ್ದು ನೀವು ದನಗಳನ್ನು ಸಾಕಾಣಿಕೆ ಮಾಡಿ ಡೈರಿಗೆ ಹಾಲು ಹಾಕುತ್ತಿದ್ದರೆ ಪ್ರತಿ ತಿಂಗಳು ₹2000 ಅನುದಾನ ಮಹಿಳೆಯ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತದೆ.
- ಹೊಸದಾಗಿ ದನಗಳನ್ನ ಖರೀದಿ ಮಾಡುತ್ತೀರಾ? ಹೊರಟರೆ ಸರ್ಕಾರದಿಂದ ಬರೋಬ್ಬರಿ ₹58,500 ಸಹಾಯಧನ ಸಿಗುತ್ತದೆ. ಶೇಕಡ 90 % ರಷ್ಟು ಸಹಾಯದಿಂದ ಸರ್ಕಾರ ಕೊಡುತ್ತದೆ ಉಳಿದ ಮೊತ್ತವನ್ನ ನೀವೇ ಸ್ವಂತವಾಗಿ ಹಾಕಿ ಖರೀದಿ ಮಾಡಬೇಕಾಗುತ್ತದೆ.
- ಸಾಮಾನ್ಯವಾಗಿ ಗ್ರಾಮೀಣ ಭಾಗದ ಪ್ರತಿಯೊಬ್ಬ ಮನೆಯಲ್ಲೂ ಕೊಟ್ಟಿಗೆಗಳು ಇದ್ದೇ ಇರುತ್ತವೆ ಕೆಲವರು ಕೊಟ್ಟಿಗೆ ನಿರ್ಮಾಣಕ್ಕೆ ಹಣದ ಕೊರತೆಯಿಂದಾಗಿ ಕೊಟ್ಟಿಗೆಯನ್ನ ಕಟ್ಟಿಕೊಂಡಿರುವುದಿಲ್ಲ ಹಾಗಾಗಿ ನಿಮ್ಮಗಂತನೇ 1ಲಕ್ಷ ಸಹಾಯಧನವನ್ನು ಕೊಡಲು ಸರ್ಕಾರ ಮುಂದಾಗಿ ಆನ್ಲೈನ್ ಅರ್ಜಿಯನ್ನು ಪ್ರಾರಂಭಿಸಿದೆ. 1ಲಕ್ಷ ಸಹಾಯಧನ ನೀವು ಇಲ್ಲಿ ಪಡೆದರೆ ಫಲಾನುಭವಿಯು ಬ್ಯಾಂಕ್‌ಗೆ ಹಿಂತಿರುಗಿಸಬೇಕಾದ ಸಾಲ ಮೊತ್ತ ₹50,000 ಮಾತ್ರ.
ಇತರೆ ಹಾಗು ಹಿಂದುಳಿದ ಫಲಾನುಭವಿಗಳು ಪಡೆಯ ಬಹುದಾದ ಲಾಭ:-
- ಇತರೆ ಹಾಗು ಹಿಂದುಳಿದ ವರ್ಗಳ ಹಳ್ಳಿಭಾಗದ ಕುಟುಂಬಗಳಲ್ಲಿ ದಿನನಿತ್ಯ ನಿಮ್ಮ ಹತ್ತಿರದ ಡೈರಿಗೆ ಹಾಲು ಹಾಕುತ್ತಿದ್ದಾರೆ ಪ್ರತಿ ತಿಂಗಳು ಮನೆ ಯಜಮಾನಿಗೆ ₹2000 ಸರ್ಕಾರದಿಂದ ಅನುದಾನ ಸಿಗುತ್ತದೆ.
- ಹಾಗೆ ಮೇಲೆ SC/ST ಫಲಾನುಭವಿಗಳಿಗೆ ನೀಡಿರುವ ಹಾಗೆ ನೀವು ಹಸುಗಳನ್ನು ಖರೀದಿ ಮಾಡಬೇಕೆಂದುಕೊಂಡಿದ್ದರೆ ಸರ್ಕಾರದಿಂದ 58000 ಸಹಾಯಧನ ಸಿಗುತ್ತದೆ ಹಾಕಿಕೊಳ್ಳಬೇಕಾಗುತ್ತದೆ.
- ಇತರ ಸಣ್ಣ/ಅತಿ ಸಣ್ಣ ರೈತರಿಗೆ ಈ ಯೋಜನೆ ಮೂಲಕ ಸಿಗುವ ಹಣ ₹1.20 ಲಕ್ಷ ಇದರಲ್ಲಿ 30,000 ಸರ್ಕಾರದಿಂದ ಸಿಗುವ ಸಹಾಯಧನವಾದರೆ ಉಳಿದ 90 ಸಾವಿರ ಹಣವನ್ನು ಬ್ಯಾಂಕುಗಳಿಗೆ ಹಿಂತಿರುಗಿಸಬೇಕಾಗುತ್ತದೆ.
ಯೋಜನೆಯ ಉದ್ದೇಶ :-
- ಗ್ರಾಮೀಣ ಭಾಗದ ಮಹಿಳೆಯರನ್ನ ಆರ್ಥಿಕವಾಗಿ ಬೆಂಬಲಿಸುವ ಉದ್ದೇಶ ಈ ಯೋಜನೆಯದ್ದಾಗಿದೆ
- ಕರ್ನಾಟಕ ರಾಜ್ಯದಲ್ಲಿ ಹಾಲಿನ ಉತ್ಪಾದನೆ ಕಡಿಮೆಯಾಗುತ್ತಿರುವ ಕಾರಣದಿಂದಾಗಿ ಹೈನುಗಾರಿಕೆ ಮತ್ತು ಪಶು ಸಂಗೋಪನೆಯನ್ನು ಹೆಚ್ಚಿಸುವ ಉದ್ದೇಶದಿಂದ ಗ್ರಾಮೀಣ ಭಾಗಕ್ಕೆ ಸರ್ಕಾರ ಈ ಕೊಡುಗೆಯನ್ನ 2026ರಲ್ಲಿ ಕೊಟ್ಟಿದೆ
- ಬಡ ಕುಟುಂಬಗಳು ಹಾಗೇನೇ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಸಮಸ್ಯೆಯನ್ನು ನಿವಾರಿಸಬೇಕೆಂದು ಈ ಯೋಜನೆ ಮೂಲಕ ಅವರ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಅಷ್ಟೇ ಅಲ್ಲದೆ ಬಡವ ಹಾಗೆ ಶ್ರೀಮಂತರ ನಡುವೆ ಇರುವ ಅಜಗಜಾಂತರ ವ್ಯತ್ಯಾಸವನ್ನು ಹೋಗಲಾಡಿಸಬೇಕು ಎನ್ನುವ ಕಾರಣ.
- ಮಹಿಳೆಯರು ಎಲ್ಲರೊಂದಿಗೆ ಸಮಾನವಾಗಿ ತಮ್ಮ ಜೀವನ ನಡೆಸಬೇಕು ನಡೆಸಬೇಕು ಹಾಗೇನೆ ಎಲ್ಲೇ ಇದ್ದರೂ ಅವರಿಗೆ ತಮ್ಮದೇ ಆದ ಗೌರವ ಸಿಗಬೇಕು
ನೀವು ಅರ್ಹತೇ ಗಳನ್ನ ತಿಳಿಯಲು ಬಯಸುವಿರೇ ?
- ನೀವು ಕರ್ನಾಟಕ ರಾಜ್ಯದ ಜನಸಾಮಾನ್ಯರಾಗಿ ಮಾತ್ರ ಈ ಯೋಜನೆ ಅನಗತಡೆಯಲು ಅವಕಾಶ
- ಸಿಟಿ ಭಾಗದ ಜನರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ ಕೇವಲ ಗ್ರಾಮೀಣ ಭಾಗದ ಜನರಿಗೆ ಅರ್ಜಿ ಸಲ್ಲಿಸಲು ಮುಕ್ತ ಅವಕಾಶವನ್ನು ಸರ್ಕಾರ ಮಾಡಿಕೊಟ್ಟಿದೆ
- ಹಣ್ಣುಗಾರಿಕೆ ಹಾಗೆ ದನ ಕರುಗಳನ್ನ ಸಾಕಾಣಿಕೆ ಮಾಡುವಂತಹ ವ್ಯಕ್ತಿಗಳು ಮಾತ್ರನೇ ನೀ ಯೋಜನೆಗೆ ಅರ್ಹ ಫಲಾನುಭವಿಗಳಾಗಿರುತ್ತಾರೆ
- ಮಹಿಳೆಯರ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ಇದ್ದಲ್ಲಿ ಮಾತ್ರ ಈ ಯೋಜನೆಯ ಎಲ್ಲಾ ಸರ್ಕಾರಿ ಸಹಾಯದನದ ಮೊತ್ತ ವರ್ಗಾವಣೆ ಆಗುತ್ತದೆ, ಪುರುಷರ ಹೆಸರಿನಲ್ಲಿ ವರ್ಗಾವಣೆಯಾಗುವುದಿಲ್ಲ ನೆನಪಿಟ್ಟುಕೊಳ್ಳಿ.
ಪ್ರಮುಖ ದಾಖಲೆಗಳು ತಿಳಿಯ ಬೇಕೆ ?
ನೀವು ಕೆಳಗೆ ನೀಡಲಾದ ಕೆಲವೊಂದು ದಾಖಲೆಗಳನ್ನು ಹೊಂದಿದ್ದಲ್ಲಿ ಈ ಯೋಜನೆಯ ಸಂಪೂರ್ಣವಾದ ಲಾಭವನ್ನು ಪಡೆಯಲು ನೀವು ಅರ್ಹರಾಗಿರುತ್ತೀರಾ.
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ನಿವಾಸ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ ವಿವರಗಳು ಜೊತೆಗೆ ಮಹಿಳೆಯ ಹೆಸರಿನಲ್ಲಿರುವ ಬ್ಯಾಂಕ್ ಖಾತೆಯ ವಿವರ
- RTC ಪ್ರಮಾಣ ಪತ್ರ
- ಡೈರಿ ಸಹಕಾರ ಸಂಘದ ಸದಸ್ಯತ್ವ ಪ್ರಮಾಣ ಪತ್ರ ಅಥವಾ ಹಾಲು ಪೂರೈಕೆ ದಾಖಲೆ
- ನಿಮ್ಮ ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ
- ಸರಿಯಾಗಿರುವಂತಹ ಮೊಬೈಲ್ ಸಂಖ್ಯೆ OTP ಬಳಕೆಗಾಗಿ
ಯೋಜನೆಯ ಅನಾನುಕೂಲಗಳು :-
- ಈ ಒಂದು ಯೋಜನೆಗಳ ಕ್ರಮಗಳು ತೀರಾ ಕಠಿಣ ವಗಿರುವದರಿಂದ ಪ್ರತಿಯೊಬ್ಬರೂ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
- ಅರ್ಜಿ ಹಾಕಿದ ತಕ್ಷಣ ಸಹಾಯಧನ ನಿಮಗೆ ಸಿಗುವುದಿಲ್ಲ ಮೊದಲು ನೀವು ನಿಮ್ಮ ಸ್ವಂತ ಹಣದಿಂದ ಕೊಟ್ಟಿಗೆ ನಿರ್ಮಾಣ ಅಥವಾ ಹಸು ಖರೀದಿ ಮಾಡಬೇಕಾಗುತ್ತದೆ ನಂತರ ನಿಮಗೆ ಬ್ಯಾಂಕಿನ ಮೂಲಕ ಈ ಸಹಾಯನ ಸಿಗುತ್ತದೆ ಆದ್ದರಿಂದ ಅಷ್ಟು ಪ್ರಯೋಜನಕಾರಿ ಆಗವುದಿಲ್ಲ.
- ಗ್ರಾಮೀಣ ಭಾಗದ ಜನ ಸಾಮಾನ್ಯರಿಗೆ ಬ್ಯಾಂಕ್ ಗಳು ಕೇಳುವ ಕೆಲವೊಂದು ಡಾಕ್ಯುಮೆಂಟ್ ಗಳನ್ನ ಅವರ ಬಳಿ ಇದ್ದರು ಕೂಡ ಕೊಡುವುದು ಅಸಾಧ್ಯವಾಗುತ್ತದೆ ಕಾರಣ ಅವರು ಅನಕ್ಷರಸ್ಥರಾಗಿರುವುದರಿಂದ ಗೊಂದಲಕ್ಕೆ ಒಳಗಾಗುತ್ತಾರೆ
- ಅಷ್ಟೇ ಅಲ್ಲದೆ ಆನ್ಲೈನ್ ಅರ್ಜಿ ಡಾಕ್ಯುಮೆಂಟ್ ಅಪ್ಲೋಡ್ ಹೀಗೆ ಅನೇಕ ಹಂತಗಳು ಅವರಿಗೆ ಕಠಿಣ ಪರಿಸ್ಥಿತಿಯ ಉಂಟು ಮಾಡುತ್ತದೆ
- ಹೀಗೆ ಹೇಳುತ್ತಾ ಹೋದರೆ ಅನೇಕ ಅನಾನುಕೂಲಗಳು ಈ ಯೋಜನೆ ಅಡಿಯಲ್ಲಿ ಕಂಡುಬರುತ್ತವೆ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಬಯಸಿದರೆ ಈ ವಿಧಾನವನ್ನು ಅನುಸರಿಸಿ:–
- ಸೇವಾ ಸಿಂಧು (Seva Sindhu) ಪೋರ್ಟಲ್ ಮೂಲಕ
- ಪಶುಸಂಗೋಪನೆ ಮತ್ತು ಪಶುವೈದ್ಯ ಸೇವಾ ಇಲಾಖೆಯ ಅಧಿಕೃತ ವೆಬ್‌ಸೈಟ್ https://ahvs.kar.nic.in/en-onlineapp.html ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.
ಈ ಕೆಳಗಿನ ಪ್ರಮುಖ ಹಂತವನ್ನ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅನುಸರಿಸಿ
- ಅಭ್ಯರ್ಥಿಗಳು ಮೊದಲು ಪಶುಸಂಗೋಪನೆ ಮತ್ತು ಪಶುವೈದ್ಯ ಸೇವಾ ಇಲಾಖೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ
- “Online Application” ವಿಭಾಗ ಆರಿಸಿ ಕೊಳ್ಳಬೇಕು
- ಹೊಸ ನೋಂದಣಿ (New Registration) ಮಾಡಿ
- ನಂತರ ಸರಿಯಾಗಿ ಕೀಲಾಳದ ಎಲ್ಲ ನಿಮ್ಮ ದಾಖಲೆಗಳನ್ನ ಭರ್ತಿ ಮಾಡಬೇಕಾಗುತ್ತದೆ
- ಕೊಟ್ಟಿಸುವ ದಾಖಲೆಗಳು ಸರಿ ಇದೆಯೇ ಎಂದು ಪರಿಶೀಲಿಸಿ ಅಪ್‌ಲೋಡ್ ಮಾಡಿ
- ಅರ್ಜಿ ಸಲ್ಲಿಸಿದ ನಂತರ Reference Number ಪಡೆದುಕೊಳ್ಳಿ
ಆಫ್‌ಲೈನ್ ಮೂಲಕ:
- ಹತ್ತಿರದ ಗ್ರಾಮ ಪಂಚಾಯತ್ ಕಚೇರಿ
- ಪಶುವೈದ್ಯಾಧಿಕಾರಿ (Veterinary Officer) ಕಚೇರಿ
- ಸೇವಾ ಸಿಂಧು / CSC ಕೇಂದ್ರ
ಅಂತಿಮ ತೀರ್ಮಾನ :
ಈ ಮೇಲಿನ ಪ್ರತಿ ಯೊಂದು ಮಾಹಿತಿಯನ್ನ ಓದಿಕೊಂಡು ಈ ಯೋಜನೆಯ ಬಗ್ಗೆ ಮೊದಲನೇ ನನಗೆ ತಿಳಿದಿದ್ದರೆ ನಾವು ಅರ್ಜಿಯನ್ನು ಸಲ್ಲಿಸಬಹುದು ಎನ್ನುವ ಅಭ್ಯರ್ಥಿಗಳು 2026 ರಲ್ಲೂ ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ ನಿಮ್ಮಂತೆ ಪ್ರತಿಯೊಬ್ಬರೂ ಕೂಡ ಈ ಯೋಜನೆಯ ಬಗ್ಗೆ ತಿಳಿಯಬೇಕೆನ್ನುವುದು ನನ್ನ ಆಶಯವಾಗಿರುತ್ತದೆ ಹಾಗಾಗಿ ಈ ವಿವರವನ್ನ ಪ್ರತಿಯೊಬ್ಬರಿಗೂ ಶೇರ್ ಮಾಡಿ.





