ನಮಸ್ಕಾರ ಸ್ನೇಹಿತರೆ, ನೀವು ಈಗಾಗಲೇ ಕೊರೆಸಿದ ಬೋರ್ವೆಲ್ ಗೆ ಪಂಪ್ಸೆಟ್ ಅಳವಡಣೆ ಮಾಡಲು ಆರ್ಥಿಕ ಸಮಸ್ಯೆ ಉಂಟಾಗುತ್ತಿದೀಯಾ? ಇದರಿಂದಾಗಿ ನೀವು ಬೆಳೆದ ಬೆಳೆಗಳಿಗೆ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲವಾ? ಹಾಗಿದ್ದರೆ ಈ ಒಂದು ಯೋಜನೆಯಡಿಯಲ್ಲಿ ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
ಕೃಷಿ ಯಾಂತ್ರೀಕರಣ ಯೋಜನೆಯಡಿಯಲ್ಲಿ ಅರ್ಹ ರೈತರು ತಾವು ಈಗಾಗಲೇ ಕೊರೆಸಿದ ಬೋರ್ವೆಲ್ ಗೆ ಪಂಪ್ಸೆಟ್ ಅಳವಡಿಸಲು ಸರ್ಕಾರದಿಂದ ಸಬ್ಸಿಡಿ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ. ರೈತರು ತಾವು ಬೆಳೆದ ಬೆಳೆಗಳ ಇಳುವರಿಯನ್ನು ಹೆಚ್ಚಿಸಿ ಸ್ಥಿರ ಆದಾಯವನ್ನು ಗಳಿಸಲು ಈ ಯೋಜನೆ ನೆರವಾಗಬಹುದು.
Borewell Pump Set Subsidy in Kannada
ಅರ್ಹ ಫಲಾನುಭವಿ ರೈತರು ಕೃಷಿ ಯಾಂತ್ರೀಕರಣ ಯೋಜನೆಗೆ ಆನ್ಲೈನ್ ಮತ್ತು ಆಫ್ಲೈನ್ ಎರಡು ವಿಧಾನಗಳ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ನೀವೇನಾದರೂ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದರೆ, ಇಂದೇ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಏನೆಲ್ಲಾ ಅಗತ್ಯ ದಾಖಲೆಗಳನ್ನು ಹೊಂದಿರಬೇಕು? ಎಷ್ಟು ಸಬ್ಸಿಡಿ ಹಣ ಸಿಗಲಿದೆ? ಎನ್ನುವ ಬಗ್ಗೆ ಈ ಕೆಳಗಿನ ಹಂತದಲ್ಲಿ ಮಾಹಿತಿಯನ್ನು ಪಡೆದುಕೊಳ್ಳೋಣ. ಇದೇ ರೀತಿಯ ಇನ್ನಷ್ಟು ಯೋಜನೆಗಳ ಕುರಿತು ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ಉದ್ಯೋಗಸಲಹೆ ಗೆ ಭೇಟಿ ನೀಡಿ.
ಯೋಜನೆಯ ಕಿರು ನೋಟ:
| ಇಲಾಖೆ | ಕೃಷಿ ಇಲಾಖೆ |
| ಯೋಜನೆಯ ಹೆಸರು | ಕೃಷಿ ಯಾಂತ್ರೀಕರಣ ಯೋಜನೆ |
| ಅರ್ಹ ಫಲಾನುಭವಿಗಳು | ರೈತರು |
| ಒಟ್ಟು ಸಹಾಯಧನದ ಮೊತ್ತ | ಪಂಪ್ಸೆಟ್ ನ ಒಟ್ಟು ಮೊತ್ತದ ಮೇಲೆ 50% ಇಂದ 90% ಸಬ್ಸಿಡಿ ಸಹಾಯಧನ |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ ಮತ್ತು ಆಫ್ಲೈನ್ |
ಯೋಜನೆಯ ಬಗ್ಗೆ:
ಕೃಷಿ ಯಾಂತ್ರೀಕರಣ ಯೋಜನೆಯು ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ಅಡಿಯಲ್ಲಿ ಜಾರಿಗೊಳಿಸಿದ ಯೋಜನೆಯಾಗಿದ್ದು, ಈ ಯೋಜನೆಯು ಕೃಷಿ ಕ್ಷೇತ್ರವನ್ನು ಆಧುನೀಕರಿಸುವ ಹಾಗೂ ರೈತರಿಗೆ ಸ್ಥಿರ ಆದಾಯವನ್ನು ಕಲ್ಪಿಸುವ ಉದ್ದೇಶವನ್ನು ಹೊಂದಿದೆ.
ರೈತರು ಈ ಯೋಜನೆಯಡಿಯಲ್ಲಿ ಕೃಷಿ ಚಟುವಟಿಕೆಗೆ ಅಗತ್ಯವಾದ ಯಂತ್ರೋಪಕರಣಗಳನ್ನು ಖರೀದಿಸಲು ಸಬ್ಸಿಡಿ ಸಹಾಯಧನವನ್ನು ಪಡೆಯಲು ಅರ್ಹರಾಗಿರುತ್ತಾರೆ.
ಕರ್ನಾಟಕ ಸರ್ಕಾರವು ಈ ಒಂದು ಯೋಜನೆಯಡಿಯಲ್ಲಿ ಮಳೆಯನ್ನೇ ನಂಬಿ ಉಳುಮೆ ಮಾಡುತ್ತಿರುವ ರೈತರಿಗೆ ತಾವು ಕೊರೆಸಿದ ಬೋರ್ವೆಲ್ ಗೆ ಪಂಪ್ಸೆಟ್ ಅಳವಡಿಸಲು ಸಬ್ಸಿಡಿ ಸಹಾಯಧನವನ್ನು ನೀಡುವ ಮೂಲಕ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಿ, ರೈತರು ಹೆಚ್ಚಿನ ಆದಾಯವನ್ನು ಗಳಿಸಿ ಸಮಾಜದಲ್ಲಿ ಗೌರವಯುತವಾಗಿ ಜೀವನ ನಡೆಸಲು ಹಾಗೂ ಸ್ವಾವಲಂಬಿಯಾಗಿ ಬದುಕಲು ಅವಕಾಶವನ್ನು ಕಲ್ಪಿಸಿದೆ.
ಕೃಷಿ ಯಾಂತ್ರೀಕರಣ ಯೋಜನೆಯ ಮುಖ್ಯ ಉದ್ದೇಶ:
1. ರೈತರ ಸಬಲೀಕರಣಕ್ಕೆ ನೆರವು:
ಕರ್ನಾಟಕ ಸರ್ಕಾರವು ತಮ್ಮ ಜಮೀನಿನಲ್ಲಿರುವ ಬೋರ್ವೆಲ್ ಗೆ ಪಂಪ್ಸೆಟ್ ಅಳವಡಿಸಲು ಸಾಧ್ಯವಾಗ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪಂಪ್ಸೆಟ್ ಖರೀದಿಸಲು ಈ ಒಂದು ಯೋಜನೆಯಡಿಯಲ್ಲಿ ಸಬ್ಸಿಡಿ ಸಹಾಯಧನವನ್ನು ನೀಡುವುದರ ಮೂಲಕ ಅವರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದೆ.
2. ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು:
ಸರ್ಕಾರವು ರೈತರಿಗೆ ಪಂಪ್ಸೆಟ್ ಖರೀದಿಸಲು ಸಬ್ಸಿಡಿ ರೂಪದಲ್ಲಿ ಸಹಾಯಧನವನ್ನು ನೀಡುವ ಮೂಲಕ ಮಳೆಗಾಲದ ನಂತರವು ತಮ್ಮ ಜಮೀನಿನಲ್ಲಿ ಬೆಳೆಗಳನ್ನು ಬೆಳೆಯಲು ಅವಕಾಶವನ್ನು ಕಲ್ಪಿಸುವುದು.
3. ಕೃಷಿ ಚಟುವಟಿಕೆಗಳಿಗೆ ಉತ್ತಮ ನೀರಾವರಿ ಸೌಲಭ್ಯ:
ರೈತರು ಸರ್ಕಾರದಿಂದ ಪಡೆದ ಪಂಪ್ಸೆಟ್ ಸಬ್ಸಿಡಿ ಸಹಾಯಧನದಿಂದ ಉತ್ತಮ ಗುಮಮಟ್ಟದ ಪಂಪ್ಸೆಟ್ ಗಳನ್ನು ತಾವು ಕೊರೆಸಿದ ಬೋರ್ವೆಲ್ ಗೆ ಅಳವಡಿಸುವ ಮೂಲಕ ತಮ್ಮ ಕೃಷಿ ಭೂಮಿಗೆ ಸುಲಭವಾಗಿ ನೀರುಣಿಸಬಹುದು.
4. ಕೃಷಿ ಕ್ಷೇತ್ರವನ್ನು ಆಧುನೀಕರಿಸುವುದು:
ರೈತರು ತಮ್ಮ ಬೋರ್ವೆಲ್ ಗೆ ಹಳೆಯ ಪಂಪ್ಸೆಟ್ ಬದಲಿಗೆ ಉತ್ತಮ ಕ್ವಾಲಿಟಿಯ,ಸ್ಟಾರ್ ರೇಟೆಡ್ ಪಂಪ್ಸೆಟ್ ಗಳನ್ನು ಅಳವಡಿಸುವ ಮೂಲಕ ಹೆಚ್ಚಿನ ವಿದ್ಯುತ್ ಅನ್ನು ಉಳಿತಾಯ ಮಾಡಬಹುದು.
ಫಲಾನುಭವಿ ರೈತರು ಈ ಯೋಜನೆಯಡಿಯಲ್ಲಿ ಎಷ್ಟು ಸಬ್ಸಿಡಿ ಸಹಾಯಧನವನ್ನು ಪಡೆದುಕೊಳ್ಳಬಹುದು?
- ಪರಿಶಿಷ್ಟ ಜಾತಿ ಮತ್ತು ಪಂಗಡಗಳ ರೈತರು ಪಂಪ್ಸೆಟ್ ನ ಒಟ್ಟು ಮೊತ್ತದ ಮೇಲೆ 90% ಹಣವನ್ನು ಸಬ್ಸಿಡಿ ಸಹಾಯಧನದ ರೂಪದಲ್ಲಿ ಪಡೆದುಕೊಳ್ಳುತ್ತಾರೆ. ಕೇವಲ 10% ಹಣವನ್ನು ಮಾತ್ರ ತಾವು ಪಾವತಿಸಬೇಕಾಗುತ್ತದೆ.
- ಸಾಮಾನ್ಯ ಹಾಗೂ ಹಿಂದುಳಿದ ವರ್ಗಗಳ ರೈತರು ಪಂಪ್ಸೆಟ್ ನ ಒಟ್ಟು ಮೊತ್ತದ ಮೇಲೆ 50% ಹಣವನ್ನು ಸಬ್ಸಿಡಿ ಸಹಾಯಧನದ ರೂಪದಲ್ಲಿ ಪಡೆದುಕೊಳ್ಳುತ್ತಾರೆ. ಉಳಿದ 50% ಹಣವನ್ನು ತಾವು ಪಾವತಿಸಬೇಕಾಗುತ್ತದೆ.
ಕೃಷಿ ಯಾಂತ್ರೀಕರಣ ಯೋಜನೆ ರೈತರಿಗೆ ಎಷ್ಟು ಪ್ರಯೋಜನಕಾರಿ?
- ಬೆಳೆಯ ಇಳುವರಿ ಹೆಚ್ಚಿಸುವುದು:
ಕರ್ನಾಟಕ ಸರ್ಕಾರದಿಂದ ಕೃಷಿ ಯಾಂತ್ರೀಕರಣ ಯೋಜನೆಯಡಿಯಲ್ಲಿ ಪಂಪ್ಸೆಟ್ ಖರೀದಿಸಲು ಸಬ್ಸಿಡಿ ಹಣವನ್ನು ಪಡೆದುಕೊಂಡು ತಮ್ಮ ಬೋರ್ವೆಲ್ ಗೆ ಪಂಪ್ಸೆಟ್ ಅಳವಡಿಸುವ ಮೂಲಕ ಮಳೆ ಬಂದಾಗ ಮಾತ್ರವಲ್ಲದೆ ವರ್ಷಕ್ಕೆ ಎರಡು ಮೂರು ಬೆಳೆಗಳನ್ನು ಬೆಳೆಯುದರ ಜೊತೆಗೆ ಉತ್ತಮ ನೀರಾವರಿ ವ್ಯವಸ್ಥೆಯಿಂದಾಗಿ ಬೆಳೆಯ ಇಳುವರಿಯನ್ನು ಹೆಚ್ಚಿಸುವುದು.
- ಹಣಕಾಸಿನ ಉಳಿತಾಯ:
ರೈತರು ತಾವು ಕೊರೆಸಿದ ಬೋರ್ವೆಲ್ ಗೆ ಪಂಪ್ಸೆಟ್ ಖರೀದಿಸಿದರೆ, ಪಂಪ್ಸೆಟ್ ನ ಒಟ್ಟು ಮೊತ್ತದಲ್ಲಿ 50% ಇಂದ 90% ರಷ್ಟು ಹಣ ಸರ್ಕಾರವೇ ಭರಿಸುವುದರಿಂದ ರೈತರು ಕೇವಲ ಸ್ವಲ್ಪ ಪ್ರಮಾಣದ ಹಣವನ್ನು ಪಾವತಿ ಮಾಡಿದರೆ ಸಾಕಾಗುತ್ತದೆ. ಇದರಿಂದ ರೈತರ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗುತ್ತದೆ.
- ಉತ್ತಮ ನೀರಾವರಿ ಸೌಲಭ್ಯದಿಂದ ನೀರಿನ ಉಳಿತಾಯ:
ರೈತರು ಈ ಒಂದು ಯೋಜನೆಯಿಂದಾಗಿ ಸಾಂಪ್ರದಾಯಿಕ ಕಾಲುವೆ ನೀರಾವರಿ ಪದ್ದತಿಯ ಬದಲಿಗೆ ತಮ್ಮ ಜಮೀನಿನಲ್ಲಿ ತುಂತುರು ನೀರಾವರಿ ಅಥವಾ ಹನಿ ನೀರಾವರಿ ಪದ್ದತಿಯನ್ನು ಅಳವಡಿಸುವ ಮೂಲಕ ಬೆಳೆಗಳಿಗೆ ಉತ್ತಮ ನೀರಾವರಿ ಸೌಲಭ್ಯವನ್ನು ಒದಗಿಸುವುದು ಹಾಗೂ ನೀರು ವ್ಯರ್ಥವಾಗುವುದನ್ನು ತಡೆಯುವುದು.
- ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ:
ಈ ಒಂದು ಯೋಜನೆಯಡಿಯಲ್ಲಿ ಪಡೆದುಕೊಳ್ಳುವ ಸಬ್ಸಿಡಿ ಸಹಾಯಧನವು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಆಗುವುದರಿಂದ ಯಾವುದೇ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ.
ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಅರ್ಹರಾದ ರೈತರು ಯಾರು?
- ಅರ್ಜಿದಾರರು ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು.
- ಅರ್ಜಿದಾರರು ರೈತರಾಗಿರಬೇಕು.
- ರೈತರು ಕಡ್ಡಾಯವಾಗಿ FRUITS ಪೋರ್ಟಲ್ ನಲ್ಲಿ ನೋಂದಣಿಯಾಗಿರಬೇಕು.
- ರೈತರು ಕಡ್ಡಾಯವಾಗಿ ಪಹಣಿಯನ್ನು ಹೊಂದಿರಬೇಕು.
- ರೈತರ ಹೆಸರಿನಲ್ಲಿ ಕೃಷಿ ಭೂಮಿ ಇರಬೇಕು.
- ರೈತರು ಕನಿಷ್ಠ 5 ಎಕ್ಕರೆ ಜಮೀನನ್ನು ಹೊಂದಿರಬೇಕು.
- ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಮೊದಲ ಆದ್ಯತೆ ನೀಡಲಾಗುವುದು.
ಅರ್ಜಿ ಸಲ್ಲಿಸಲು ಅರ್ಹರಲ್ಲದ ರೈತರು ಯಾರು?
- ರೈತರು ಈಗಾಗಲೇ ಸರ್ಕಾರದ ವಿವಿಧ ಯೋಜನೆಯಡಿಯಲ್ಲಿ ಪಂಪ್ಸೆಟ್ ಸಬ್ಸಿಡಿ ಸಹಾಯಧನವನ್ನು ಪಡೆದುಕೊಂಡಿದ್ದರೆ ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆಯಲು ಅರ್ಹರಲ್ಲ.
- ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ನೌಕರಿಯಲ್ಲಿದ್ದರೆ, ಆ ಕುಟುಂಬಕ್ಕೆ ಸೇರಿದ ರೈತರು ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆಯಲು ಅರ್ಹರಲ್ಲ.
- FRUITS ID ಹೊಂದಿರರ ರೈತರು ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆಯಲು ಅನರ್ಹರಾಗಿರುತ್ತಾರೆ.
- ತಮ್ಮ ಹೆಸರಿನಲ್ಲಿ ಕೃಷಿ ಭೂಮಿ ಹೊಂದಿರದ ರೈತರು ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆಯಲು ಅರ್ಹರಲ್ಲ.
ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು:
- ಆಧಾರ್ ಕಾರ್ಡ್
- ಜಮೀನಿನ ಪಹಣಿ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಸಣ್ಣ ಮತ್ತು ಅತಿ ಸಣ್ಣ ರೈತರ ದೃಢೀಕರಣ ಪತ್ರ
- FRUITS ಐಡಿ
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ಸಕ್ರಿಯ ಮೊಬೈಲ್ ಸಂಖ್ಯೆ
ಕೃಷಿ ಯಾಂತ್ರೀಕರಣ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಕೃಷಿ ಯಾಂತ್ರೀಕರಣ ಯೋಜನೆಗೆ ಆನ್ಲೈನ್ ಮೂಲಕ ಹಾಗೂ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಹೇಗೆ ಅರ್ಜಿ ಸಲ್ಲಿಸುವುದು ಎನ್ನುವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.
ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
- ಅರ್ಜಿ ಸಲ್ಲಿಸಲು ಅರ್ಹರಾದ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ.
- ಕೃಷಿ ಯಾಂತ್ರೀಕರಣ ಯೋಜನೆಗೆ ಸಂಬಂಧಿಸಿದ ಅರ್ಜಿ ಪ್ರತಿಯನ್ನು ಕೇಳಿ ಪಡೆಯಿರಿ.
- ನಂತರ ಅರ್ಜಿ ಫಾರ್ಮ್ ನಲ್ಲಿರುವ ಎಲ್ಲಾ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
- ಮೇಲೆ ನೀಡಿರುವ ಅಗತ್ಯ ದಾಖಲೆಗಳ ಪ್ರತಿಯನ್ನು ಅರ್ಜಿ ಫಾರ್ಮ್ ನೊಂದಿಗೆ ಲಗತ್ತಿಸಿ ಅದನ್ನು ಕಚೇರಿಗೆ ಸಲ್ಲಿಸಿ.
- ಅರ್ಜಿಯನ್ನು ಸಲ್ಲಿಸಿದ ನಂತರ ಸ್ವೀಕೃತ ಪತ್ರವನ್ನು ಪಡೆದುಕೊಳ್ಳಿ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
- ಅರ್ಜಿ ಸಲ್ಲಿಸುವ ರೈತರು ಸೇವಾ ಸಿಂಧೂ ಅಧಿಕೃತ ವೆಬ್ಸೈಟ್ https://sevasindhu.karnataka.gov.in/ ಗೆ ಭೇಟಿ ನೀಡಿ.
- ಹೊಸ ಬಳಕೆದಾರರಾಗಿದ್ದರೆ, ಮೊಬೈಲ್ ಸಂಖ್ಯೆ ಹಾಗೂ ಒಟಿಪಿ ಬಳಸಿ ಲಾಗಿನ್ ಆಗಿ.
- ಲಾಗಿನ್ ಆದ ನಂತರ ಕೃಷಿ ಯಾಂತ್ರೀಕರಣ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ.
- ಅರ್ಜಿ ನಮೂನೆಯಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ.
ಅಂತಿಮವಾಗಿ:
ಕರ್ನಾಟಕ ಸರ್ಕಾರವು ಕೃಷಿ ಇಲಾಖೆಯಡಿಯಲ್ಲಿ ಕೃಷಿ ಯಾಂತ್ರೀಕರಣ ಯೋಜನೆಯನ್ನು ಜಾರಿಗೊಳಿಸಿದ್ದು, ರೈತರು ಈ ಯೋಜನೆಯಡಿಯಲ್ಲಿ ಪಂಪ್ಸೆಟ್ ಖರೀದಿಸಲು ಸಬ್ಸಿಡಿ ಸಹಾಯಧನವನ್ನು ಪಡೆದುಕೊಳ್ಳುವ ಜೊತೆಗೆ ಕೃಷಿ ಚಟುವಟಿಗೆ ಅಗತ್ಯವಾದ ಯಂತ್ರಗಳನ್ನು ಪಡೆಯಲು ಕೂಡ ಸಬ್ಸಿಡಿ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.
ನೀವೇನಾದರೂ ರೈತರಾಗಿದ್ದು, ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆಯಬೇಕೆಂದಿದ್ದರೆ ಇಂದೇ ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಹಾಗೂ ನಿಮಗೆ ಪರಿಚಯವಿರುವ ರೈತಬಾಂಧರೊಂದಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಿ.
ಇತರೆ ಪ್ರಮುಖ ಲಿಂಕುಗಳು:
- Vehicle Subsidy: ಟ್ಯಾಕ್ಸಿ, ಆಟೋ, ಟ್ರ್ಯಾಕ್ಟರ್, ಗೂಡ್ಸ್ ವಾಹನಗಳಿಗೆ 70% ಸಬ್ಸಿಡಿ – ಈಗಲೇ ಅರ್ಜಿ ಹಾಕಿ!
- PMFME : 15 ಲಕ್ಷದವರೆಗೆ ರೈತರಿಗೆ ಸಹಾಯಧನ! ತ್ವರಿತ ಸಾಲ ಸೌಲಭ್ಯ : ಒಂದೇ ಅರ್ಜಿ ಸಲ್ಲಿಸಿದ್ರೆ ನೇರವಾಗಿ ಬ್ಯಾಂಕ್ ಗೆ ಹಣ!
- KSRTC Free Driving Training : ಉಚಿತ ತರಬೇತಿ, ಊಟ, ವಸತಿ ಮತ್ತು DL – “ನಿಮ್ಮ ಕನಸುಗಳ ಸ್ಟೀರಿಂಗ್ ಈಗ ನಿಮ್ಮ ಕೈಯಲ್ಲಿ”





