ಇನ್ನು ಫೀಸ್ ಚಿಂತೆ ಬೇಡ ಪೋಷಕರೇ! 2026 ರಲ್ಲಿ ನಿಮ್ಮ ಮಕ್ಕಳ ಕೈ ಹಿಡಿಯುತ್ತೆ ಏರ್ಟೆಲ್ ಸ್ಕಾಲರ್‌ಶಿಪ್!

On: Saturday, January 10, 2026 9:44 AM

Join WhatsApp

Join Now

Join Telegram

Join Now

“ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು” ಅಂತಾರೆ ಆದರೆ ಇಂದಿನ ಡಿಜಿಟಲ್ ಯುಗದಲ್ಲಿ ಪೋಷಕರಿಗೆ ಒಬ್ಬ ಮಗ ಅಥವಾ ಮಗಳಿಗೆ ವಿದ್ಯಾಭ್ಯಾಸ ಕೊಡಿಸುವುದು ತುಂಬಾನೇ ಕಷ್ಟ ಆಗುತ್ತಿದೆ.

ವಿದ್ಯಾರ್ಥಿವೇತನ – ಭಾರ್ತಿ ಏರ್‌ಟೆಲ್ ಫೌಂಡೇಶನ್ : Bharti Airtel Scholarship Program In Kannada 2026

ಕೆಲವು ಪೋಷಕರು ತಮ್ಮ ಮಕ್ಕಳನ್ನ ಯಾವ ಸ್ಕೂಲ್ ಕಾಲೇಜಿನಲ್ಲಿ ಹೆಚ್ಚಿನ ಫೀಸ್ ಅನ್ನು ತೆಗೆದುಕೊಳ್ಳುತ್ತಾರೋ ಅಂತಹ ಕಾಲೇಜುಗಳಲ್ಲೆ ತಮ್ಮ ಮಕ್ಕಳನ್ನು ಕಳಿಸಬೇಕೆಂದು ಬಯಸುತ್ತಾರೆ ಆದರೆ ಇನ್ನೂ ಕೆಲವು ತಂದೆ ತಾಯಿಯಂದಿರು ಒಂದು ಸಣ್ಣ ಮಟ್ಟದ ಫೀಸ್ ಕಟ್ಟಲಾಗದೆ ತಮ್ಮ ಮಕ್ಕಳನ್ನ ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಾರೆ.

ಪೋಷಕರೇ ಇನ್ಮುಂದೆ ನಿಮ್ಮ ಮಕ್ಕಳ ಶಾಲೆ ಅಥವಾ ಕಾಲೇಜು ಫೀಸ್ ಕಟ್ಟುವ ಚಿಂತೆಗೆ ಗುಡ್ ಬೈ ಹೇಳಿ! ಯಾಕೆ ಗೊತ್ತಾ ?

ಆರ್ಥಿಕ ಬಡತನದಿಂದಾಗಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ತಮ್ಮ ಉತ್ತಮ ಶಿಕ್ಷಣವನ್ನ ಮಧ್ಯದಲ್ಲಿ ಕೈ ಬಿಡುವ ಪರಿಸ್ಥಿತಿ ಎದುರಾಗಿರುವ ಮಕ್ಕಳನ್ನ ನಾವು ದಿನನಿತ್ಯದ ಜೀವನದಲ್ಲಿ ಪ್ರತಿಯೊಬ್ಬರೂ ಕೂಡ ಗಮನಿಸುತ್ತಿರುತ್ತೇವೆ. ಆದರೂ ಕೂಡ ನಮ್ಮಿಂದ ಹಾಗೆ ನಿಮ್ಮಿಂದ ಯಾವುದೇ ರೀತಿಯ ಸಹಾಯವನ್ನು ವಿದ್ಯಾರ್ಥಿಗಳಿಗೂ ಯಾರು ಕೂಡ ಮಾಡುವುದಿಲ್ಲ.

ಆದರೆ 2026 ನೇ ಸಾಲಿನಲ್ಲಿ ಇಂತಹ ವಿದ್ಯಾರ್ಥಿಗಳ ನೆರವಿಗಾಗಿ “ಭಾರ್ತಿ ಏರ್ಟೆಲ್ ಫೌಂಡೇಶನ್ ವತಿಯಿಂದ ಏರ್ಟೆಲ್ ವಿದ್ಯಾರ್ಥಿ ವೇತನವನ್ನು” (Airtel Student Scholarship) ಜಾರಿ ಮಾಡಲಾಗಿದೆ. ಇಂಜಿನಿಯರಿಂಗ್, ಮೆಡಿಕಲ್, ಡಿಪ್ಲೋಮಾ, ವಾಣಿಜ್ಯ, ವಿಜ್ಞಾನ, ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳು ಈ ಪ್ರೋತ್ಸಾಹ ಧನಕ್ಕೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಭಾರ್ತಿ ಏರ್ಟೆಲ್ ಫೌಂಡೇಶನ್ ವತಿಯಿಂದ ಏರ್ಟೆಲ್ ವಿದ್ಯಾರ್ಥಿ ವೇತನದ ಕಿರು ಪರಿಚಯ :-

ಭಾರತದಲ್ಲಿ ಈ ಸ್ಕಾಲರ್ಶಿಪ್ 2024 ರಲ್ಲಿ ಆರಂಭವಾಯಿತು. ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ನ ಲಾಭವನ್ನು ಪಡೆಯಲು ಅರ್ಹರಾಗಿರುತ್ತಾರೆ. ಭಾರ್ತಿ ಏರ್ಟೆಲ್ ಫೌಂಡೇಶನ್ ವತಿಯಿಂದ ಏರ್ಟೆಲ್ ವಿದ್ಯಾರ್ಥಿ ವೇತನ ಒಂದು ಮೆರಿಟ್-ಕಮ್-ಮೀನ್ (merit-cum-means) ಯೋಜನೆಯಾಗಿರುತ್ತದೆ.

ಯಾವುದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಕೈಬಿಡದೆ ನೂರಕ್ಕೆ ನೂರು ಪರ್ಸೆಂಟ್ ಈ ಸ್ಕಾಲರ್ಷಿಪ್ ಹಣವನ್ನ ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕೆ ಪಡೆದುಕೊಳ್ಳಬಹುದು ಅಷ್ಟೇ ಅಲ್ಲದೆ ಹಾಸ್ಟೆಲ್ ಪ್ಲೀಸ್, ಉಚಿತವಾಗಿ ಲ್ಯಾಪ್ಟಾಪ್, ಹೀಗೆ ಇನ್ನೂ ಅನೇಕ ವ್ಯವಸ್ಥೆಗಳು ವಿದ್ಯಾರ್ಥಿಗಳ ಮುಡಿಗೇರುತ್ತವೆ.

ಏರ್ಟೆಲ್ ಫೌಂಡೇಶನ್ ವಿದ್ಯಾರ್ಥಿ ವೇತನದ ಪ್ರಮುಖ ಗುರಿ :-

ಯಾವುದೇ ಸಂಸ್ಥೆ ಒಂದು ಯೋಜನೆಯನ್ನ ಹೊಸದಿಸುವಾಗ ತನ್ನದೇ ಯಾದ ಉದ್ದೇಶ ಹೊಂದಿರುತ್ತದೆ.

  • ಬಡ ವಿದ್ಯಾರ್ಥಿಗಳ ಕುದುರದ ಮಕ್ಕಳ ಓದು ಬರಹವನ್ನು ಉತ್ತೇಜಿಸುವ ಗುರಿಯಲ್ಲ ಹೊಂದಿದೆ
  • ಉನ್ನತ ಶಿಕ್ಷಣ ಕೇವಲ ಶ್ರೀಮಂತ ಮಕ್ಕಳ ಪಾಲಾಗದೆ ಆರ್ಥಿಕವಾಗಿ ಹಿಂದುಳಿದ ಮಕ್ಕಳು ಬೇಗ ದೊಡ್ಡವರಾಗಿ ಬೇರೆ ಬೇರೆ ದೇಶ ರಾಜ್ಯಗಳಲ್ಲಿ ದೊಡ್ಡ ಅಧಿಕಾರಿಯಾಗಿ ಹೆಸರುಮಾಡಬೇಕು.
  • ನಮ್ಮ ಕರ್ನಾಟಕದಲ್ಲಿ ಮಾತ್ರವಲ್ಲದೆ ಏಡಿ ಭಾರತ ದೇಶದಲ್ಲೂ ಯುವ ಪ್ರತಿಭೆಗಳನ್ನ ಬೆಳೆಸುವ ಪ್ರಮುಖ ದ್ಯೇಯುದ್ದೇಶ ಹೊಂದಿದೆ.
  • ಇಂದಿನ ಡಿಜಿಟಲ್ ಯುಗದಲ್ಲಿ ಯಾವುದೇ ವ್ಯಕ್ತಿ ಕೂಡ ಶಿಕ್ಷಣದಿಂದ ವಂಚಿತಾನಾದರೆ ಸಮಾಜದಲ್ಲಿ ಬದುಕುವುದು ತುಂಬಾ ಕಷ್ಟ ಹಾಗಾಗಿ ಇಂತ ಸಂಸ್ಥೆಗಳ ವಿದ್ಯಾರ್ಥಿಗಳ ಕೈ ಹಿಡಿಯಲು ಮುಂದಾಗಿದೆ.

ಅರ್ಜಿ ಸಲ್ಲಿಸಿದ ವಿದ್ಯಾರ್ಥಿ ಪಡೆಯಬಹುದಾದ ಲಾಭ ಗೊತ್ತ ?

  • ವಿದ್ಯಾರ್ಥಿಗಳಿಗೆ ಈ ಫೌಂಡೇಶನ್ ವತಿಯಿಂದ ಕೇವಲ ಕಾಲರ್ ಶಿಪ್ ಮಾತ್ರವಲ್ಲದೆ ಕೆಲವೊಂದು ಸೌಲಭ್ಯಗಳು ಕೂಡ ಸಿಗುತ್ತದೆ.
  • ವಿದ್ಯಾರ್ಥಿಗಳಿಗೆ ಟ್ಯೂಷನ್ ಪೀಸ್ ಹಾಗೆ ಹಾಸ್ಟೆಲ್ ಫೀಸ್ ಕೂಡ ನೀಡುತ್ತದೆ.
  • ತಮ್ಮ ವಿದ್ಯಾಭ್ಯಾಸ ನಂಗೆ ಸರಿಹೊಂದುವಂತಹ ಪುಸ್ತಕಗಳು ಮತ್ತೆ ಕೆಲವೊಂದು ಅಧ್ಯಯನ ಮಾಡಲು ಹಾಗೆ ಬರವಣಿಗೆಗೆ ಸಾಮಗ್ರಿಗಳನ್ನು ಈ ಫೌಂಡೇಶನ್ ನೀಡುತ್ತದೆ.
  • ಒಬ್ಬ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಗೇ ಈ ಫೌಂಡೇಶನ್ ಕೆಲವೊಂದು ಮಾರ್ಗದರ್ಶನ ಹಾಗೆ ಸಲಹೆಯನ್ನು ನೀಡುತ್ತದೆ
  • ಸ್ಕಾಲರ್ಶಿಪ್ ಪಡೆಯಲು ಅರ್ಹನಾಗಿರುವ ವಿದ್ಯಾರ್ಥಿಗೆ ಮುಂದೆ ಯಾವ ಕೋರ್ಸ್ ಓದಬೇಕು ಯಾವ ಉದ್ಯೋಗ ಹಿಡಿಯಬೇಕು ಹಾಗೆ ಉದ್ಯೋಗ ಹಿಡಿಯಲು ಯಾವಾಗ ಕೌಶಲ್ಯಗಳು ಇರಬೇಕು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ಫೌಂಡೇಶನ್ ಒದಗಿಸುತ್ತದೆ.

ಈ ಸ್ಕಾಲರ್ಶಿಪ್ ಪಡೆಯುವ ಆಸೆ ನಿಮ್ಮಲ್ಲಿದೆಯೇ ? ಹಾಗಿದ್ದಲ್ಲಿ ನೀವು ಈ ಶರತ್ತುಗಳನ್ನ ತಿಳಿಯಲೇ ಬೇಕು.

  • ಭಾರತ ದೇಶದಲ್ಲಿ ಓದುತ್ತಿರುವ ಪ್ರಯೋಜನ ವಿದ್ಯಾರ್ಥಿಗಳಾಗಿರಬೇಕು.
  • ಕುಟುಂಬದ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರಬೇಕು
  • ಮಾನ್ಯತೆ ಪಡೆದ ಖಾಸಗಿ ಸಂಸ್ಥೆ ಅಥವಾ ಸರ್ಕಾರಿ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರಬೇಕು.
  • ನಮ್ಮ ಹಿಂದಿನ ತರಗತಿಯಲ್ಲಿ ಓದುವಿಕೆ ಉತ್ತಮ ವಿದ್ದರೆ ಒಳ್ಳೆಯಾದು.
  • 12nd ಪಿಯುಸಿ ಅಥವಾ ಪದವಿ ಹಾಗೆ ಡಿಪ್ಲಾಮಾ ಕೋರ್ಸ್ ಗಳಲ್ಲಿ ಪ್ರವೇಶ ಕಡ್ಡಾಯಗೊಳಿಸಿದೆ.

ನಾನು ಅರ್ಜಿ ಸಲ್ಲಿಸಬಹುದಾ ? ನಿಮ್ಮ ಪ್ರಶ್ನೆಗೆ ಉತ್ತರ ಹೀಗಿದೆ,,

  • ಇಂಜಿನಿಯರಿಂಗ್
  • ಮೆಡಿಕಲ್
  • ಡಿಪ್ಲೋಮಾ
  • ವಾಣಿಜ್ಯ
  • ವಿಜ್ಞಾನ
  • ಕಲಾ ವಿಭಾಗದ ಈ ಕೋರ್ಸ್ ಗಳನ್ನ ನೀವು ಓದುತ್ತಿದ್ದರೆ ನೀವು ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿವೇತನದ ಮೊತ್ತ :-

ನಿರ್ದಿಷ್ಟವಾಗಿ ಅಷ್ಟು ಇಷ್ಟು ಸ್ಕಾಲರ್ಶಿಪ್ ಸಿಗುತ್ತೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ವರ್ಷಕ್ಕೆ ಸಾವಿರ ದಿಂದ ಹಿಡಿದು ಲಕ್ಷಾಂತರ ರೂಪಾಯಿಗಳವರೆಗೆ ನೀವು ಸ್ಕಾಲರ್ಶಿಪ್ ಹಣವನ್ನು ಭಾರ್ತಿ ಏರ್ಟೆಲ್ ಫೌಂಡೇಶನ್ ವತಿಯಿಂದ ಪಡೆಯಬಹುದು.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ನೀವು ಮೇಲೆ ಕೊಡಲಾದ ಯಾವುದೇ ಕೋರ್ಸ್ ಗಳನ್ನು ಓದುತ್ತಿದ್ದರು ಒಂದು ವರ್ಷಕ್ಕೆ 2 ಲಕ್ಷ ಫೀಸ್ ಬಂದರೆ ಈ ಫೌಂಡೇಶನ್ ಮೂಲಕ ಆ 2 ಲಕ್ಷ ಹಣವನ್ನು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.

ಆಯ್ಕೆ ವಿಧಾನ :

  • ವಿದ್ಯಾರ್ಥಿಯ ವಯಸ್ಸು, ಕೋರ್ಸ್, ಕಾಲೇಜು, ವಾರ್ಷಿಕ ಆದಾಯ ಇತ್ಯಾದಿ ಪರಿಶೀಲಿಸಲಾಗುತ್ತದೆ
  • ಮೆರಿಟ್ ಮತ್ತು ಆದಾಯ ಆಧಾರಿತ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ
  • ಅಗತ್ಯ ದಾಖಲೆಗಳ ಪರಿಶೀಲನೆ

ಅಗತ್ಯ ದಾಖಲೆಗಳು :-

  • ಆದಾಯ ಪ್ರಮಾಣ ಪತ್ರ
  • ಪ್ರವೇಶ ಪಡೆದಿರುವ ಪುರಾವೆ
  • ಆಧಾರ್ ಕಾರ್ಡ್
  • ಶೈಕ್ಷಣಿಕ ಅಂಕಪಟ್ಟಿ
  • ಬ್ಯಾಂಕ್ ಪಾಸ್ ಬುಕ್
  • ಪಾಸ್ಪೋರ್ಟ್ ಸೈಜ್ ಫೋಟೋ

ಅರ್ಜಿ ಸಲ್ಲಿಸುವ ಪ್ರಮುಖ ವಿಧಾನ :-

  • ವಿದ್ಯಾರ್ಥಿಗಳು ಮೊದಲು ಅಧಿಕೃತ ಏರ್ಟೆಲ್ ವಿದ್ಯಾರ್ಥಿವೇತನ ವೆಬ್ ಸೈಟ್ Bharti Airtel Foundation Scholarship Portal ಗೆ ಭೇಟಿ ನೀಡಬೇಕಾಗುತ್ತದೆ.
  • ಹೆಸರು, ಇಮೇಲ್, ಮೊಬೈಲ್, ಪಾಸ್‌ವರ್ಡ್ ಹಾಕಿ ಅಕೌಂಟ್ ಓಪನ್ ಮಾಡಿ
  • ನಂತರ “Apply Now / Register” ಬಟನ್ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ಹೆಸರು, ವಿಳಾಸದ ಪುರಾವೆ, ಜನ್ಮ ದಿನಾಂಕ, ಆಧಾರ್ ಕಾರ್ಡ್ ಅಥವಾ ಐಡಿ ಕಾರ್ಡ್ ನಂಬರ್ ಗಳನ್ನು ಭರ್ತಿ ಮಾಡಿ
  • ಹೈಸ್ಕೂಲ್, PU / UG Marksheets, ಕಾಲೇಜು / ಕೋರ್ಸ್ ಪ್ರವೇಶ ಪ್ರಮಾಣಪತ್ರ ಕಡ್ಡಾಯವಾಗಿ ಇರಬೇಕಾಗುತ್ತದೆ ಹಾಗೆ ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪ್ರತಿ ಹೀಗೆ ಎಲ್ಲ ದಾಖಲೆಗಳನ್ನ ಸಿದ್ಧಪಡಿಸಿಟ್ಟುಕೊಂಡು.
  • ಭರ್ತಿ ಮಾಡಲಾದ ಯಲ್ಲ ದಾಖಲೆಗಳು ಸರಿ ಎದೆಯೆ ಎಂದು ಪರಿಶೀಲಿಸಿ .
  • ಕೊನೆಯದಾಗಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ.

ಅಂತಿಮ ತೀರ್ಮಾನ:

ಭಾರ್ತಿ ಏರ್ಟೆಲ್ ಫೌಂಡೇಶನ್ ವತಿಯಿಂದ ಏರ್ಟೆಲ್ ವಿದ್ಯಾರ್ಥಿ ವೇತನ ಅಡಿಯಲ್ಲಿ ಹೈಯರ್ ಎಜುಕೇಶನ್ ಖರ್ಚು ವೆಚ್ಚವನ್ನು ಇಸ್ ಸ್ಕಾಲರ್ಶಿಪ್ ಬರಿಸುತ್ತದೆ. ಇಂತಹ ಅನೇಕ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನಂತಹ ಸಹಾಯಧನ ನೀಡುವುದು ಉತ್ತಮ ಬೆಳವಣಿಗೆ ಅಂತ ಹೇಳಬಹುದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಸ್ಕಾಲರ್ಶಿಪ್ ಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಹೇಗೆ ಅನೇಕ ಪ್ರೋತ್ಸಹ ದನಗಳು ಪ್ರತಿಯೊಬ್ಬ ಗಂಡು ಹಾಗೆ ಹೆಣ್ಣು ಮಕ್ಕಳಿಗೆ ಸಿಗಬೇಕು. ಕಂಪನಿಗಳು ಕೊಡುವ ಸ್ಕ್ಯಾಲರ್ಶಿಪ್ ನಿಂದ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಓದುವ ಆಸಕ್ತಿ ಕೂಡ ಹೆಚ್ಚಾಗುತ್ತದೆ ಜೊತೆಗೆ ಉತ್ತಮ ಅಂಕ ಪಡೆಯಲು ಸಹಕಾರಿಯಾಗಿದೆ ಎನ್ನುವುದು ನನ್ನದೊಂದು ಅಭಿಪ್ರಾಯ. ಯಲ್ಲ ಮಾಹಿತಿಯನ್ನ ಊದಿಕೊಂಡು ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಪ್ರೋತ್ಸಾಹಧನದ ಸದುಪಯೋಗಪಡಿಸಿಕೊಳ್ಳಿ

Join WhatsApp

Join Now

Join Telegram

Join Now

Leave a Comment