Bharat Gas Light : ಕೆಂಪು ಸಿಲಿಂಡರ್‌ಗೆ ಗುಡ್‌ಬೈ!ಕೇವಲ ₹300ಕ್ಕೆ ಹೊಸ ಹೈ ಟೆಕ್ ಗ್ಯಾಸ್ ಸಿಲಿಂಡರ್!

On: Thursday, February 5, 2026 1:59 PM
Bharat Gas Light

Join WhatsApp

Join Now

Join Telegram

Join Now

Bharat Gas Light Cylinder in kannada

Bharat Gas Light : “ಅಡಿಗೆ ಅನಿಲವನ್ನು ಬಳಸುವವರಿಗೆ ಬಂಪರ್ ಗುಡ್ ನ್ಯೂಸ್”! ಹೆಚ್ಚಿನ ಬಾರವಾದ ಹಾಗೂ ಸ್ಪೋಟಗೊಂಡರೆ ಹೆಚ್ಚಿನ ಅಪಾಯವನ್ನು ಸೃಷ್ಟಿಸುವ ಕೆಂಪು ಸಿಲಿಂಡರ್ ಬದಲಿಗೆ ಭರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಹೊಸ ಮಾದರಿಯ ಸಿಲಿಂಡರ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಮಾದರಿಯ ಸಿಲಿಂಡರ್ ಕರ್ನಾಟಕದ ಕೆಲವು ಜಿಲ್ಲೆಗಳಲ್ಲೂ ಲಭ್ಯವಿದ್ದು, ಹೆಚ್ಚಿನ ವೈಶಿಷ್ಟ್ಯತೆಯನ್ನು ಹೊಂದಿರುವ ಈ ಸಿಲಿಂಡರ್ ಕರ್ನಾಟಕದ ಮಾರುಕಟ್ಟೆಯಲ್ಲಿ ಹೆಚ್ಚಿನ ಸದ್ದು ಮಾಡಿದೆ.

ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ಬಿಡುಗಡೆ ಮಾಡಿರುವ ಭಾರತ್ ಗ್ಯಾಸ್ ಲೈಟ್ ಎನ್ನುವ ಹೊಸ ಮಾದರಿಯ ಸಿಲಿಂಡರ್ ನೋಡಲು ಅತ್ಯಾಕರ್ಷಕವಾಗಿದ್ದು, ಇದರ ಜೊತೆಗೆ ಜನಸ್ನೇಹಿಯಾಗಿದೆ. ಅದು ಹೇಗಪ್ಪಾ, ಅಂತ ಯೋಜನೆ ಮಾಡುತ್ತಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಈ ಹೊಸ ಮಾದರಿಯ ಸಿಲಿಂಡರ್ ತುಂಬಾನೇ ಹಗುರವಾಗಿದ್ದು, ಬೆಂಕಿ ತಗುಲಿದರೂ ಅಪಾಯವಾಗಾದೆ ಹಾಗೂ ಸಾಗಾಣಿಕೆಗೆ ಸುಲಭವಾಗಿದ್ದು, ಇವುಗಳ ಜೊತೆಗೆ ಜನಸಾಮಾನ್ಯರು ಕಡಿಮೆ ಖರ್ಚಿನಲ್ಲಿ ಈ ಸಿಲಿಂಡರ್ ಲಭ್ಯವಾಗುತ್ತದೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಬಿಡುಗಡೆ ಮಾಡಿರುವ ಭಾರತ್ ಗ್ಯಾಸ್ ಲೈಟ್ ಎನ್ನುವ ಹೊಸ ಮಾದರಿಯ ಸಿಲಿಂಡರ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದ್ದು, ಹಾಗಾಗಿ ಜನಸಾಮಾನ್ಯರು ಈಗಾಗಲೇ ಈಸಿಲಿಂಡರ್ ಅನ್ನು ಖರೀದಿ ಮಾಡಲು ಮುಗಿಬಿದ್ದಿದ್ದಾರೆ.

ಭಾರತ್ ಗ್ಯಾಸ್ ಲೈಟ್ ಸಿಲಿಂಡರ್ ದರ ಎಷ್ಟು, ಜನಸಾಮಾನ್ಯರಿಗೆ ಇದರಿಂದ ಏನೆಲ್ಲಾ ಅನುಕೂಲ, ಹಾಗೂ ಇದರ ಕುರಿತು ಇನ್ನಷ್ಟು ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳೋಣ.


ಏನಿದು ಭಾರತ್ ಗ್ಯಾಸ್ ಲೈಟ್ ಸಿಲಿಂಡರ್?

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಮಾರುಕಟ್ಟೆಗೆ ಪರಿಚಯಿಸಿರುವ ಗ್ಯಾಸ್ ಲೈಟ್ ಸಿಲಿಂಡರ್ ಹೊಸ ತಲೆಮಾರಿನ ಸಂಯೋಜಿತ LPG ಸಿಲಿಂಡರ್ ಆಗಿದೆ. ಈ ಸಿಲಿಂಡರ್ ಅನ್ನು ಆಧುನಿಕ ಕಂಪೋಸಿಟ್ ತಂತ್ರಜ್ಞಾನವನ್ನು ಬಳಸಿ ತಯಾರು ಮಾಡಿದ್ದು, ಇದು ಇತರೆ ಉಕ್ಕಿನ ಸಿಲಿಂಡರ್ ನಂತೆ ತುಕ್ಕು ಹಿಡಿಯುವುದಿಲ್ಲ.

ಭಾರತ್ ಗ್ಯಾಸ್ ಲೈಟ್ ಸಿಲಿಂಡರ್ ಅರೆ ಪಾರದರ್ಶಕ ವಿನ್ಯಾಸವನ್ನು ಹೊಂದಿದ್ದು, ಬಳಕೆದಾರರಿಗೆ LPG ಗ್ಯಾಸ್ ಪ್ರಮಾಣ ಎಷ್ಟಿದೆ ಎನ್ನುವುದನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.

ಭಾರತ್ ಗ್ಯಾಸ್ ಲೈಟ್ ಸಿಲಿಂಡರ್ ನ ಗುಣಲಕ್ಷಣಗಳು:

1. ಆಧುನಿಕ ವಿನ್ಯಾಸ:

ಈ ಸಿಲಿಂಡರ್ (Bharat Gas Light) ಹಳೆಯ ಉಕ್ಕಿನ ಸಿಲಿಂಡರ್ ಗಳಂತೆ ಒರಟು ಮೇಲ್ಮೈ ಅನ್ನು ಹೊಂದಿರದೆ, ಅತ್ಯಂತ ಹೊಳಪಿನ ಹಾಗೂ ನಯವಾದ ಪ್ಲಾಸ್ಟಿಕ್ ಹೊರಕವಚವನ್ನು ಹೊಂದಿದೆ. ಇದು ತುಕ್ಕು ಹಿಡಿಯದೇ ಇರುವುದರಿಂದ ಕೊಳೆಗಳಾದರೆ ಅಥವಾ ದೂಳುಗಳಿದ್ದರೆ ಸುಲಭವಾಗಿ ಒದ್ದೆ ಬಟ್ಟೆಗಳಲ್ಲಿ ಸ್ವಚ್ಛ ಮಾಡಬಹುದಾಗಿದೆ.

ಹಳೆಯ ಸಿಲಿಂಡರ್ ಗೆ ಹೋಲಿಸಿದರೆ ಈ ಸಿಲಿಂಡರ್ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಇದರಿಂದಾಗಿ ಈ ಸಿಲಿಂಡರ್ ನೋಡಲು ಅತ್ಯಾಕರ್ಷಕವಾಗಿದ್ದು, ಅಡುಗೆ ಮನೆಯ ಅಂದವನ್ನು ಹೆಚ್ಚಿಸುತ್ತದೆ.

2. ಕಡಿಮೆ ತೂಕ:

ಸಾಂಪ್ರದಾಯಿಕ ಉಕ್ಕಿನ ಸಿಲಿಂಡರ್ ಅತೀ ಭಾರವಾಗಿದ್ದು, Bharat Gas Light ಈ ಸಿಲಿಂಡರ್ ಅನ್ನು ಸುಲಭವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ತಗೆದುಕೊಂಡು ಹೋಗಲು ಕಷ್ಟವಾಗುತ್ತದೆ.

ಆದರೆ ಭಾರತ್ ಗ್ಯಾಸ್ ಲೈಟ್ ಸಿಲಿಂಡರ್ ಉಕ್ಕಿನ ಸಿಲಿಂಡರ್ ಗೆ ಹೋಲಿಸಿದರೆ ಶೇಕಡಾ 50% ಕಡಿಮೆಬಾರವನ್ನು ಹೊಂದಿದ್ದು, ಹಗುರವಾಗಿರುವ ಈ ಸಿಲಿಂಡರ್ ಸಾಗಾಣಿಕೆಗೂ ಸುಲಭವಾಗಿರುತ್ತದೆ.

3. ಸಂಪೂರ್ಣ ಸುರಕ್ಷತೆ:

ಭಾರತ್ ಗ್ಯಾಸ್ ಲೈಟ್ (Bharat Gas Light) ಮನೆಗಳಲ್ಲಿ ನಡೆಯುವ ಹೆಚ್ಚಿನ ಅವಘಡಗಳನ್ನು ತಪ್ಪಿಸುತ್ತದೆ. ಹೇಗೆಂದರೆ, ಈ ಸಿಲಿಂಡರ್ ನ ಹೊರ ಮೇಲ್ಮೈ ಪ್ಲಾಸ್ಟಿಕ್ ನಿಂದ ಕೂಡಿದ್ದು, ಯಾವುದೇ ರೀತಿಯಲ್ಲಿ ಬೆಂಕಿ ತಗುಲಿದರೂ ಕೂಡ ಪ್ಲಾಸ್ಟಿಕ್ ಕರಗುವ ಮೂಲಕ ಸಿಲಿಂಡರ್ ಸ್ಪೋಟವಾಗುವುದನ್ನು ತಪ್ಪಿಸುತ್ತದೆ.

4. ಗ್ಯಾಸ್ ಮಟ್ಟದ ಸುಲಭ ವೀಕ್ಷಣೆ:

ಭಾರತ್ ಗ್ಯಾಸ್ ಲೈಟ್ ಸಿಲಿಂಡರ್ ಭಾಗಶಃ ಪಾರದರ್ಶಕವಾಗಿದ್ದು, ಸಿಲಿಂಡರ್ ಒಳಗಡೆ ಗ್ಯಾಸ್ ಪ್ರಮಾಣ ಎಷ್ಟಿದೆ ಎಂದು ಸುಲಭವಾಗಿ ವೀಕ್ಷಣೆ ಮಾಡಬಹುದಾಗಿದೆ. ಇದರಿಂದಾಗಿ ಗೃಹಿಣಿಯರು ಸರಿಯಾದ ಸಮಯದಲ್ಲಿ ಗ್ಯಾಸ್ ಅನ್ನು ಬುಕಿಂಗ್ ಮಾಡುವ ಮೂಲಕ ಗ್ಯಾಸ್ ನ ಅನುಪಸ್ಥಿತಿಯಲ್ಲಿ ಆಗುವ ತೊಂದರೆಗಳನ್ನು ಕಡಿಮೆ ಮಾಡಿಕೊಳ್ಳಬಹುದು.

5. ತುಕ್ಕನ್ನು ಕಡಿಮೆ ಮಾಡುತ್ತದೆ:

ಭಾರತ್ ಗ್ಯಾಸ್ ಲೈಟ್ ಸಿಲಿಂಡರ್ ಸಾಂಪ್ರದಾಯಿಕ ಉಕ್ಕಿನ ಗ್ಯಾಸ್ ಸಿಲಿಂಡರ್ ಗಳಂತೆ ತುಕ್ಕು ಹಿಡಿದು ನೆಲದಲ್ಲಿ ಕೆಂಪು ತಿಕ್ಕುನ ಕಲೆಗಳನ್ನು ಮಾಡುವುದಿಲ್ಲ. ಏಕೆಂದರೆ ಇದರ ಪ್ಲಾಸ್ಟಿಕ್ ಹಾಗೂ ಪೈಬರ್ ಗಳಿಂದ ಕೂಡಿದೆ.

ಭಾರತ್ ಗ್ಯಾಸ್ ಲೈಟ್ ಸಿಲಿಂಡರ್ ಇದೀಗ ಕರ್ನಾಟಕದಲ್ಲೂ ಲಭ್ಯ!

ಭಾರತ್ ಗ್ಯಾಸ್ ಲಿಟ್ ಸಿಲಿಂಡರ್ (Bharat Gas Light) ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಬಿಡುಗಡೆ ಗೊಂಡಿದೆ. ಮೈಸೂರು, ಬೆಂಗಳೂರು, ಹಾಗೂ ಉಡುಪಿ ಜಿಲ್ಲೆಗಳ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ಜಿಲ್ಲೆಗಳಲ್ಲಿನ ಗ್ರಾಹಕರು ಈ ಸಿಲಿಂಡರ್ ಅನ್ನು ಖರೀದಿಸಲು ಮುಗಿಬಿದ್ದಿದ್ದು, ರಿಯಾಯಿತಿ ದರದಲ್ಲಿ ಸಿಲಿಂಡರ್ ಅನ್ನು ಕೊಳ್ಳುತ್ತಿದ್ದಾರೆ.

ಬೆಂಕಿಯ ಅನಾಹುತ ಉಂಟಾದಾಗ ಹೆಚ್ಚಿನ ಅಪಾಯವನ್ನು ಮಾಡುವ ಹಾಗೂ ಮನೆಗಳ ನೆಲವನ್ನು ತುಕ್ಕು ಹಿಡಿಸುವ ಹಳೆಯ ಸಾಂಪ್ರದಾಯಿಕ ಕಬ್ಬಿಣದ ಸಿಲಿಂಡರ್ ಕೊಳ್ಳುವುದರ ಬದಲು ಯಾವುದೇ ರೀತಿಯ ಅಪಾಯವಿಲ್ಲದೆ ಅಡುಗೆ ಮನೆಯ ಅಂದವನ್ನು ಹೆಚ್ಚಿಸುವ ಹೊಸ ಮಾದರಿಯ ಸಿಲಿಂಡರ್ ಮೇಲೆ ಗ್ರಾಹಕರು ಹೆಚ್ಚಿನ ಒಲವನ್ನು ತೋರಿಸುತ್ತಿದ್ದು, ಈ ಸಿಲಿಂಡರ್ ಖರೀದಿ ಮಾಡುವವರ ಪ್ರಮನ ವು ಹೆಚ್ಚುತ್ತಿದೆ.

ಭಾರತ್ ಪೆಟ್ರೋಲಿಯಂ ಕಂಪನಿಯು ಮೊದಲು ಖರೀದಿಸುವ ಗ್ರಾಹಕರಿಗೆ ಒಂದೊಳ್ಳೆಯ ಆಫರ್ ಅನ್ನು ನೀಡಿದ್ದು, ಈ ಅವಕಾಶ ಕೆಲವೇ ದಿನಗಳಲ್ಲಿ ಮುಗಿಯುವ ಸಾಧ್ಯತೆಗೆಳಿವೆ. ನಿಮಗೂ ಕೂಡ ಈ ಸಿಲಿಂಡರ್ ಬೇಕಾದರೆ ಬೇಗ ಬುಕಿಂಗ್ ಮಾಡಿಕೊಳ್ಳಿ.

ಸಿಲಿಂಡರ್ ಪಡೆದುಕೊಳ್ಳಬೇಕಾದರೆ ಗ್ರಾಹಕರು ಹೊಂದಿರಬೇಕಾದ ಅಗತ್ಯ ದಾಖಲೆಗಳು:

ಈ ಕೆಳಗೆ ನೀಡಿರುವ ಎಲ್ಲಾ ದಾಖಲೆಗಳನ್ನು ನಿಮ್ಮ ಹತ್ತಿರದ ಗ್ಯಾಸ್ ಆಫೀಸ್ ಗೆ ನೀಡಿದರೆ ಮಾತ್ರ ನಿಮಗೆ ಗ್ಯಾಸ್ ಸಿಲಿಂಡರ್ () ಪಡೆದುಕೊಳ್ಳಬಹುದಾಗಿದೆ. ಅವುಗಳೆಂದರೆ,

  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ರೇಷನ್ ಕಾರ್ಡ್
  • ಸಕ್ರಿಯ ಮೊಬೈಲ್ ಸಂಖ್ಯೆ (ಸಿಲಿಂಡರ್ ಅನ್ನು ಮನೆಗೆ ತಲುಪಿಸುವ ದಿನಾಂಕವನ್ನು ತಿಳಿಯಲು)
  • ಇತೆರೆ ದಾಖಲೆಗಳು

ಕಡಿಮೆ ಬೆಲೆಯಲ್ಲಿ ಭಾರತ್ ಗ್ಯಾಸ್ ಲೈಟ್ ಸಿಲಿಂಡರ್ ಕೊಳ್ಳುವುದು ಹೇಗೆ ?

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಅತ್ಯಾಕರ್ಷಕ ವಿನ್ಯಾಸ ಹಾಗೂ ಬಳಕೆದಾರರಿಗೆ ಅಪಾಯಮಟ್ಟವನ್ನು ಕಡಿಮೆ ಮಾಡುವ ಒಳ್ಳೆಯ ಮಾದರಿಯ ಸಿಲಿಂಡರ್ ಅನ್ನು ಮಾರುಕಟ್ಟೆಗೆ ಪರಿಚಯಿಸುವುದರ ಜೊತೆಗೆ ಗ್ರಾಹಕರಿಗೆ ನೆರವಾಗುವ ರೀತಿಯಲ್ಲಿ ಒಂದೊಳ್ಳೆಯ ಆಫರ್ ಅನ್ನು ನೀಡಿದೆ.

ಭಾರತ್ ಗ್ಯಾಸ್ ಲೈಟ್ ಸಿಲಿಂಡರ್ (Bharat Gas Light) ಕೊಳ್ಳಲು ದುಬಾರಿ ಹಣ ಬೇಕಾಗುತ್ತದೆ. ಅದಕ್ಕಾಗಿಯೇ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಗ್ರಾಹಕರ ಬಳಿ ಇರುವ ಹಳೆಯ ಕಬ್ಬಿಣದ ಸಿಲಿಂಡರ್ ಗಳನ್ನು ಕಂಪನಿಗೆ ಹಿಂದಿರುಗಿಸಿದರೆ, ಹೆಚ್ಚುವರಿಯಾಗಿ ಕೇವಲ ₹300 ಹಣವನ್ನು ಪಾವತಿಸುವ ಮೂಲಕ ಸಿಲಿಂಡರ್ ಅನ್ನು ಪಡೆದುಕೊಳ್ಳಬಹುದಾಗಿದೆ.

ಈ ಸಿಲಿಂಡರ್ ಅನ್ನು ಖರೀದಿ ಮಾಡಬೇಕಾದರೆ ನಿಮ್ಮ ಹತ್ತಿರದ ಗ್ಯಾಸ್ ಆಫೀಸ್ ಗೆ ಭೇಟಿ ನೀಡಿ. ನಿಮ್ಮ ಆಧಾರ್ ಕಾರ್ಡ್ ಜೆರಾಕ್ಸ್, ರೇಷನ್ ಕಾರ್ಡ್ ಜೆರಾಕ್ಸ್, ಪಾನ್ ಕಾರ್ಡ್ ಜೆರಾಕ್ಸ್ ಅನ್ನು ಆಫೀಸ್ ಗೆ ನೀಡಿ ಹೊಸ ಮಾದರಿಯ ಭಾರತ್ ಗ್ಯಾಸ್ ಲೈಟ್ ಸಿಲಿಂಡರ್ ಅನ್ನು ಪಡೆದುಕೊಳ್ಳಿ.

ಇಲ್ಲಿ ಗಮನಿಸಿ: ” ಗ್ರಾಹಕರ ಬೇಡಿಕೆ ಹೆಚ್ಚಿರುವ ಈ ಸಿಲಿಂಡರ್ ಅನ್ನು ಬುಕಿಂಗ್ ಮಾಡುವ ಮೊದಲು ನಿಮ್ಮ ಗ್ಯಾಸ್ ಏಜೆನ್ಸಿ ಗೆ ಫೋನ್ ಮಾಡಿ. ಸಿಲಿಂಡರ್ ಸ್ಟಾಕ್ ಇದೆಯೋ? ಇಲ್ಲವೋ? ಎಂದು ಖಚಿತಪಡಿಸಿಕೊಳ್ಳಿ. ಸಾಕಷ್ಟು ಜನ ಈ ಸಿಲಿಂಡರ್ ಗೆ ಅವಲಂಬಿತರಾಗುತ್ತಿರುವರಿಂದ ಬೇಗನೆ ಖಾಲಿಯಾಗುತ್ತಿದೆ.


ಕೊನೆಯ ನುಡಿ:

ದಿನೇ ದಿನೇ ಏರಿಕೆಯಾಗುತ್ತಿರುವ ಗೃಹಬಳಕೆ ಇಂಧನಗಳನ್ನು ಕೊಳ್ಳಲು ಇಂಧನಗಳ ಬಳಕೆದಾರರಿಗೆ ಕಷ್ಟವಾಗುತ್ತಿರುವ ಈ ಸಂದರ್ಭದಲ್ಲಿ ಭಾರತ್ ಪೆಟ್ರೋಲಿಯಂ ಕಂಪನಿಯು ಗ್ರಾಹಕರ ನೆರವಿಗೆಂದೇ ನಿಂತಿದೆ.

ಭಾರತ್ ಪೆಟ್ರೋಲಿಯಂ ಸಂಸ್ಥೆಯು ಕಡಿಮೆ ಖರ್ಚಿನಲ್ಲಿ, ದೈನಂದಿನ ಬಳಕೆಗೆ ಸೂಕ್ತವಾದ, ಅಪಾಯ ಮಟ್ಟವು ಕಡಿಮೆ ಇರುವ, ಕಡಿಮೆ ತೂಕವನ್ನು ಹೊಂದಿರುವ ಸಿಲಿಂಡರನ್ನು(Bharat Gas Light) ಗ್ರಾಹಕರಿಗೆ ಪರಿಚಯಿಸುವ ಮೂಲಕ ಅವರ ಮಾಸಿಕ ಖರ್ಚಿನಲ್ಲಿ ಸ್ವಲ್ಪ ಪ್ರಮಾಣದ ಖರ್ಚನ್ನು ಕಡಿಮೆ ಮಾಡುವ ಮೂಲಕ ಅವರ ನೆಮ್ಮದಿಗೆ ಕಾರಣವಾಗಿದೆ.

ಈ ಮೊದಲೇ ತಿಳಿಸಿದಂತೆ ಕರ್ನಾಟಕ ಕೆಲವು ಜಿಲ್ಲೆಗಳಲ್ಲಿ ಸಾಕಷ್ಟು ಗ್ರಾಹಕರು ಈ ಸಿಲಿಂಡರ್ ಕೊಳ್ಳಲು ಮುಗಿಬಿದ್ದಿದ್ದು, ನೀವು ಕೂಡ ಈ ಸಿಲಿಂಡರ್ ಅನ್ನು ಖರೀದಿ ಮಾಡಲು ಬಯಸಿದರೆ ತಡ ಮಾಡದೇ ತಕ್ಷಣವೇ ಬುಕಿಂಗ್ ಮಾಡಿಕೊಂಡು ಹೆಚ್ಚಿನ ಪ್ರಯೋಜನ ನೀಡುವ ಈ ಸಿಲಿಂಡರ್ ಅನ್ನು ಪಡೆದುಕೊಳ್ಳಿ.

Bharat Gas Light : ಇದೆ ರೀತಿಯ ಹೊಸ ಹೊಸ ಮಾಹಿತಿಗಾಗಿ ನಮ್ಮ ಉದ್ಯೋಗ ಸಲಹೆ ವೆಬ್ ಸೈಟ್ ಗೆ ಭೇಟಿ ನೀಡುತ್ತಿರಿ.


ಇತರೆ ಪ್ರಮುಖ ಲಿಂಕುಗಳು:


Join WhatsApp

Join Now

Join Telegram

Join Now

Leave a Comment