BESCOM: 520 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಅಹ್ವಾನ, ಇಂದೇ ಅರ್ಜಿ ಸಲ್ಲಿಸಿ! ಪರೀಕ್ಷೆ ಇಲ್ಲದೆ ನೇಮಕಾತಿ

On: Tuesday, February 10, 2026 4:31 PM
BESCOM

Join WhatsApp

Join Now

Join Telegram

Join Now

ತಮ್ಮ ಓದು ಮುಗಿಸಿಕೊಂಡು ಬೆಂಗಳೂರಿನಲ್ಲೇ ಉತ್ತಮ ಉದ್ಯೋಗ ಮಾಡಬೇಕೆಂದು ಕಾದು ಕುಳಿತಿರುವ ಅಭ್ಯರ್ಥಿಗಳಿಗೆ ಬೆಂಗಳೂರು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ಸಿಹಿ ಸುದ್ದಿ ಒಂದನ್ನು ನೀಡಿದೆ. ಇಲ್ಲಿ ಒಟ್ಟು ಬರೋಬ್ಬರಿ 520 ಹುದ್ದೆಗಳನ್ನು ಭರ್ತಿಮಾಡಲಾಗುತ್ತಿದೆ. 2026 ನೇ ಸಾಲಿನಲ್ಲಿ ಪದವೀಧರ ಮತ್ತು ವೃತ್ತಿ ಶಿಕ್ಷಣ ತರಬೇತಿಗಳಿಗೆ ಸುವರ್ಣ ಅವಕಾಶ ನೀಡಿದೆ.

BESCOM Recruitment in Kannada

ಈ ನೇಮಕಾತಿಯ ಮೂಲಕ ಅರ್ಹ ಯುವಕರಿಗೆ ವೃತ್ತಿಪರ ತರಬೇತಿ ಮತ್ತು ಮಾಸಿಕ ಗೌರವ ಧನ ದೊರೆಯಲಿದ್ದು ಇದು ಅವರ ಭವಿಷ್ಯದ ವೃತ್ತಿ ಜೀವನಕ್ಕೆ ಅತ್ಯಂತ ಮಹತ್ವದ ಅಡಿಪಾಯವಾಗಲಿದೆ ಸರ್ಕಾರದ ಈ ಯೋಜನೆಯು ಉದ್ಯೋಗಾಕ್ಷಿಗಳಿಗೆ ವಿದ್ಯುತ್ ಕ್ಷೇತ್ರದಲ್ಲಿ ಪ್ರಾಯೋಗಿಕ ಅನುಭವ ಪಡೆಯಲು ಅತ್ಯುತ್ತಮ ಅವಕಾಶವನ್ನು ಒದಗಿಸಿದೆ.

ಬೆಸ್ಕಾಂ ಅಪ್ರೆಂಟಿಸ್ ಹುದ್ದೆಗೆ (BESCOM) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಯಾವುದೇ ರೀತಿಯ ಲಿಖಿತ ಪರೀಕ್ಷೆಗಳಿರುವುದಿಲ್ಲ. ಬೆಂಗಳೂರಿನಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ವೃತ್ತಿಪರರಿಗೆ ಇದೊಂದು ಸುವರ್ಣಾವಕಾಶ.


ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು,02-03-2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿಬೆಸ್ಕಾಂ (BESCOM) ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ಇದೇ ರೀತಿಯ ವಿವಿಧ ಹುದ್ದೆಗಳ ಕುರಿತು ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ಉದ್ಯೋಗಸಲಹೆ  ಗೆ ಭೇಟಿ ನೀಡಿ.

ಹುದ್ದೆಯ ಅವಲೋಕನ:

ನೇಮಕಾತಿ ಸಂಸ್ಥೆಯ ಹೆಸರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM)

ಹುದ್ದೆಯ ಹೆಸರು: ಅಪ್ರೆಂಟಿಸ್

ಹುದ್ದೆಯ ಸಂಖ್ಯೆ:
 520 ಹುದ್ದೆಗಳು

ಉದ್ಯೋಗ ಸ್ಥಳ: ಬೆಂಗಳೂರು

ಶೈಕ್ಷಣಿಕ ಅರ್ಹತೆ: ಇಂಜಿನಿಯರಿಂಗ್, ಡಿಪ್ಲೊಮಾ, ಸಾಮಾನ್ಯ ಪದವಿ

ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02 ಮಾರ್ಚ್ 2026

ಹುದ್ದೆಯ ಸಂಕ್ಷಿಪ್ತ ಮಾಹಿತಿ:

ಬೆಸ್ಕಾಂ (BESCOM) ಸಂಸ್ಥೆಯು520 ಅಪ್ರೆಂಟಿಸ್ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದುಇಂಜಿನಿಯರಿಂಗ್ ಸಾಮಾನ್ಯ ಪದವಿ ಡಿಪ್ಲೋಮೋ ಪಡೆದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಹುದ್ದೆಗಳ ವಿವರ:

BESCOM ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅಧಿಕೃತ ಅಧಿಸೂಚನೆಯ ಪ್ರಕಾರ, ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವರ ಈ ಕೆಳಕಂಡಂತಿವೆ,

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ
ತಾಂತ್ರಿಕ ಪದವೀಧರರು130
ಪದವೀಧರ ಅಪ್ರೆಂಟಿಸ್315
ಡಿಪ್ಲೋಮಾ ಅಪ್ರೆಂಟಿಸ್75

ಅರ್ಹತಾ ಮಾನದಂಡ:

ಈ ಕೆಳಗೆ ಹುದ್ದೆಗಳಿಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳನ್ನು ನೀಡಲಾಗಿದ್ದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಎಲ್ಲಾ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ.

ಶೈಕ್ಷಣಿಕ ಅರ್ಹತೆಯ ವಿವರಗಳು:

ತಾಂತ್ರಿಕ ಪದವೀಧರರು:- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ವಿಷಯದಲ್ಲಿ ಬಿ ಇ ಅಥವಾ ಬಿ ಟೆಕ್ ಪದವಿ ಪಡೆದಿರಬೇಕು.

ಪದವೀಧರ ಅಪ್ರೆಂಟಿಸ್:- ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಲ್ಲಿ ಬಿ.ಎ, ಬಿ.ಕಾಂ, ಬಿ.ಬಿ.ಎ, ಬಿ.ಸಿ.ಎ, ಬಿ.ಎಸ್ಸಿ ಯಲ್ಲಿ ಪದವಿಯನ್ನು ಹೊಂದಿರಬೇಕು.

ಡಿಪ್ಲೋಮಾ ಅಪ್ರೆಂಟಿಸ್:- ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಲ್ಲಿ ಸಂಬಂಧಿತ ವಿಷಯದಲ್ಲಿ ಇಂಜಿನಿಯರಿಂಗ್ ಅಥವಾ ತಂತ್ರಜ್ಞಾನದಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿರಬೇಕು.

ಗಮನಿಸಿ:

  • ಅಭ್ಯರ್ಥಿಗಳು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ಅಭ್ಯರ್ಥಿಗಳು ತಮ್ಮ ಡಿಪ್ಲೋಮಾ ಹಾಗೂ ಪದವಿಯನ್ನು ಶೈಕ್ಷಣಿಕ ವರ್ಷ 2021, 2022, 2023, 2024 ಅಥವಾ 2025 ನೇ ಸಾಲಿನಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಮಾತ್ರ ಆದ್ಯತೆ ನೀಡಲಾಗುತ್ತದೆ.
ವಿಶೇಷ ಸೂಚನೆ: “ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಹಿಂದೆ ಎಲ್ಲಿಯೂ ಕೂಡ ಅಪ್ರೆಂಟಿಸ್ ತರಬೇತಿಯನ್ನು ಪಡೆದಿರಬಾರದು ಹಾಗೂ ಯಾವುದೇ ವೃತ್ತಿಯಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ವೃತ್ತಿ ಅನುಭವ ಹೊಂದಿರಬಾರದು”

ವಯೋಮಿತಿ:

  • ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿಯನ್ನು ಹೊಂದಿರಬೇಕು.
  • ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಬೆಸ್ಕಾಂ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಿಲ್ಲ

ವಯೋಮಿತಿ ಸಡಿಲಿಕೆ:

ಅಪ್ರೆಂಟಿಸ್ ಶಿಪ್ ಕಾಯ್ದೆಯನ್ವಯ, ಕೆಲವು ವರ್ಗಗಳಿಗೆ ಅನುಗುಣವಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ.

ವೇತನ ಶ್ರೇಣಿ:

ಹುದ್ದೆಗಳಿಗೆ ಅನುಗುಣವಾಗಿ ವೇತನವನ್ನು ನೀಡಲಾಗುತ್ತದೆ

ತಾಂತ್ರಿಕ ಪದವೀಧರರು:- 9,008/-

ಪದವೀಧರ ಅಪ್ರೆಂಟಿಸ್:-9,008/-

ಡಿಪ್ಲೋಮಾ ಅಪ್ರೆಂಟಿಸ್:-8,000/-

ಆಯ್ಕೆ ಪ್ರಕ್ರಿಯೆ:

  • ಆನ್ಲೈನ್ ಮೂಲಕ ಸಲ್ಲಿಸಲಾದ ಅರ್ಜಿಗಳನ್ನು ಪರಿಶೀಲನೆ ಪರಿಶೀಲಿಸಲಾಗುತ್ತದೆ
  • ಅಭ್ಯರ್ಥಿಯು ಪಡೆದಿರುವ ವಿದ್ಯಾರ್ಹತ ಅಂಕಗಳ ಆಧಾರದ ಮೇಲೆ ಪಟ್ಟಿಯನ್ನು ತಯಾರಿಸಲಾಗುತ್ತದೆ
  • ಆಯ್ಕೆ ಆದ ಅಭ್ಯರ್ಥಿಗಳು ಬೆಂಗಳೂರಿನಲ್ಲಿರುವ ಬೆಸ್ಕಾಂ ಪ್ರಧಾನ ಕಚೇರಿ ಗೆ ಹಾಜರಾಗಿ ತಮ್ಮ ಮೂಲ ದಾಖಲಾತಿಗಳ ಪರಿಶೀಲನೆ ಮಾಡಿಕೊಳ್ಳಬೇಕು
  • ಯಾವುದೇ ಲಿಖಿತ ಪರೀಕ್ಷೆ ಇಲ್ಲ
  • ಒಂದು ಸಣ್ಣ ಸಂದರ್ಶನ ಮಾಡಿ ಆಯ್ಕೆಮಾಡಲಾಗುತ್ತದೆ.

ಅರ್ಜಿ ಶುಲ್ಕ:

ಆ ಪ್ರೆಂಟಿಸ್ ಹುದ್ದೆಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ ಆನ್ಲೈನ್ ಮೂಲಕ ಸುಲಭವಾಗಿ ಯಾವುದೇ ಹಣವನ್ನು ಪಾವತಿಸದೆ ಅರ್ಜಿ ಸಲ್ಲಿಸಬಹುದು


ಅರ್ಜಿಸಲ್ಲಿಸುವುದು ಹೇಗೆ:

  • ಮೊದಲನೆಯದಾಗಿ ಬೆಸ್ಕಾಂ (BESCOM) ನೇಮಕಾತಿ ಅಧಿಸೂಚನೆ 2026ರನ್ನು ಸಂಪೂರ್ಣವಾಗಿ ಓದಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆ ಎಂದು ಖಚಿತಪಡಿಸಿಕೊಳ್ಳಿ
  • National Apprenticeship Training Scheme ಪೋರ್ಟಲ್ ಗೆ ಭೇಟಿ ನೀಡಿ ನೊಂದಣಿ ಮಾಡಿಕೊಳ್ಳಬೇಕು
  • ನಂತರ ಆನ್ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು ಸರಿಯಾದ ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಮತ್ತು ಐಡಿ ಪ್ರೂಫ್ ವಯಸ್ಸು ಶೈಕ್ಷಣಿಕ ಅರ್ಹತೆ ರೆಸ್ಯೂಮ್ ಯಾವುದೇ ಅನುಭವಿಸಿದರು ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ
  • ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಕೆಳಗೆ ನೀಡಿರುವ ಲಿಂಕ್ಸ್ ಮೇಲೆ ಕ್ಲಿಕ್ ಮಾಡಿ
  • ಬೆಸ್ಕಾಂ ಆನ್ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ ಪ್ರಮಾಣ ಪತ್ರಗಳು ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ನಿಮ್ಮ ಇತ್ತೀಚಿನ ಫೋಟೋ ದೊಂದಿಗೆ ಅಪ್ಲೋಡ್ ಮಾಡಿ
  • ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ ಬೆಸ್ಕಾಂ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೊನೆಗೆ ಅಪ್ ಲೋಡ್ ಡ್ ಬಟನ್ ಮೇಲೆ ಕ್ಲಿಕ್ ಮಾಡಿ

ನನ್ನ ಸಲಹೆ :- ಸರ್ಕಾರಿ ಕೆಲಸ ಪಡೆಯಲು ಕೇವಲ ಅರ್ಜಿ ಹಾಕಿದರೆ ಸಾಲದು ಇಂದಿನಿಂದಲೇ ತಯಾರಿ ಆರಂಭಿಸಿ ಪೈಪೋಟಿ ಹೆಚ್ಚಿರುವುದರಿಂದ ನಿಮ್ಮ ಪರಿಶ್ರಮವೇ ನಿಮಗೆ ಉದ್ಯೋಗ ಕೊಡಿಸಬಲ್ಲದು

ಅರ್ಜಿ ಸಲ್ಲಿಸುವ ದಿನಾಂಕಗಳು:

  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 12/02/2026
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-03-2026

ಹುದ್ದೆಗೆ ಸಂಬಂಧಿಸಿದ ಲಿಂಕುಗಳು:

ಅಧಿಕೃತ ವೆಬ್‌ಸೈಟ್ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ

ಅಂತಿಮ ತೀರ್ಮಾನ:

ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದ ಪ್ರತಿಯೊಬ್ಬರಿಗೂ ಒಂದು ಆಸೆ ಇರುತ್ತದೆ ಇಷ್ಟು ಕಷ್ಟಪಟ್ಟು ಓದಿದರು ಕೊನೆಯಲ್ಲಿ ಒಂದು ಒಳ್ಳೆಯ ಗೋರ್ಮೆಂಟ್ ಜಾಬ್ ಪಡೆದುಕೊಳ್ಳಬೇಕು ಎಂಬ ಅಸೆ ಇರುತ್ತದೆ.ಅದು ಕೇವಲ ಅಸೆ ಅಲ್ಲ ಅದು ಬದುಕಿನ ಭದ್ರತೆ ಕನಸು ತಂದೆ ತಾಯಿ ಪಟ್ಟ ಶ್ರಮಕ್ಕೆ ಪ್ರತಿಯಾಗಿ ಕೈತುಂಬಾ ಸಂಬಳ ತಂದು ಮನೆಯ ಕಷ್ಟ ನೀಗಿಸಬೇಕು ಸಾವಿರಾರು ಯುವಕ ಯುವತಿಯರಿಗೆ ಬೆಸ್ಕಾಂ ಒಂದು ಮಹತ್ವದ ಮಾಹಿತಿ ನೀಡಿದೆ

ಈ ಆಪರೇಟೀಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದವರೆಗೆ ಕಾಯದೆ ಈಗಲೇ ಹೋಗಿ ಅದಿಕೃತ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಿ ಉದ್ಯೋಗ ಗಿಟ್ಟಿಸಿಕೊಳ್ಳಿ.

ಇತರೆ ಸರ್ಕಾರಿ ಹುದ್ದೆಗಳ ಲಿಂಕುಗಳು :


Join WhatsApp

Join Now

Join Telegram

Join Now

Leave a Comment