Bee farming scheme : 50% ಸಹಾಯಧನ: ಕಡಿಮೆ ವೆಚ್ಚ+ಹೆಚ್ಚಿನ ಆದಾಯ! ಜೇನು ಕೃಷಿ ಯೋಜನೆ 2026 ಇಂದೇ ಅರ್ಜಿ ಸಲ್ಲಿಸಿ

On: Tuesday, January 20, 2026 2:55 PM
Bee farming scheme

Join WhatsApp

Join Now

Join Telegram

Join Now

ರಾಜ್ಯದ ಗ್ರಾಮೀಣ ಭಾಗದ ರೈತರಿಗೆ ಜೇನು ಕೃಷಿ (beekeeping) ಮಾಡಲು ಕೇಂದ್ರ ಸರ್ಕಾರ ಆನ್ಲೈನ್ ಅರ್ಜಿಯನ್ನ ಆಹ್ವಾನಿಸಿದೆ. ರಾಜ್ಯದ ಹಳ್ಳಿ ಭಾಗದ ರೈತರಿಗೆ ಮತ್ತು ನಿರುದ್ಯೋಗಿ ಯುವಕರಿಗೆ  2026 ನೇ ಸಾಲಿನಅಲ್ಲಿ ಆದಾಯದ ಮೂಲವನ್ನ ಮಾಡಿಕೊಡಬೇಕು ಎನ್ನುವ ಉದ್ದೇಶದಿಂದ ಈ ಯೋಜನೆಯನ್ನ ಆರಂಭಿಸಿದೆ. ಬೇರೆ ರಾಜ್ಯಗಳಿಗೆ ಹೋಲಿಸಿರೇ ಜೇನು ಸಾಕಾಣಿಕೆ ಕೃಷಿಯು ನಮ್ಮ ರಾಜ್ಯದಲ್ಲಿ ತುಂಬಾ ಕಡಿಮೆ ಅಷ್ಟೇ ಅಲ್ಲದೆ ಇಂಥದೊಂದು ಯೋಜನೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಜಾರಿ ಇದೆ ಎಂಬುದು ಅನೇಕ ರೈತರಿಗೆ ಗೊತ್ತಿಲ್ಲ. ಇದು ನಮ್ಮ ರಾಜ್ಯದ ದುರಂತನೇ ಎಂದು ಹೇಳಬಹುದು.

Bee Farming Scheme in Kannada

ಇಂದಿನ ದಿನಗಳಲ್ಲಿ ಅನೇಕ ಜನ ಗದ್ದೆ,ತೋಟ,ಜಾಮೀನು ಬಿಟ್ಟು ನಗರ ಭಾಗಗಳಲ್ಲಿನ ಉದ್ಯೋಗವನ್ನು ಹುಡುಕಿ ವಲಸೆ ಹೋಗುತ್ತಿದ್ದಾರೆ. ಇಂತವರಿಗೆ ಜೇನು ಸಾಕಾಣಿಕೆ ಕೃಷಿಯಿಂದ ಸಿಗುವ ಲಾಭದ ಬಗ್ಗೆ ಅರಿವು ಮೂಡಿಸಲು ಸರ್ಕಾರ ಈ ಯೋಜನೆಗೆ ಇದೀಗ ಅರ್ಜಿ ಆರಂಭಿಸಿ ಅಂತಿಮ ದಿನಾಂಕವನ್ನು ಪ್ರಕಟ ಮಾಡಿದೆ.

ರೈತರು ಈ ಜೇನು ಕೃಷಿಯಲ್ಲಿ ಸಿಗುವ ಆದಾಯದ ಬಗ್ಗೆ ತಿಳಿದರೆ ಶಾಕ್ ಆಗೋದು ಗ್ಯಾರಂಟಿ ! ಕರ್ನಾಟ ರಾಜ್ಯದ ಮೂಲೆ ಮೂಲೆಯಲ್ಲಿರುವ ಪ್ರತಿಯೊಬ್ಬ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಿ ಸಂಪೂರ್ಣವಾದ ಲಾಭವನ್ನು ಪಡೆಯಬಹುದು.

ಆತ್ಮೀಯ ಮಿತ್ರರೇ,,,, ಈ ಜನವರಿ ತಿಂಗಳಲ್ಲಿ ನೀವು ಜೇನು ಸಾಕಾಣಿಕೆ ಮಾಡುವುದರಿಂದ ಅತಿ ಹೆಚ್ಚಿನ ಲಾಭವನ್ನ ಗಳಿಸಬಹುದು ಹೇಗೆಂದರೆ ಇಂದಿನ ದಿನಗಳಲ್ಲಿ ಜೇನು ಹುಳುಗಳಿಗೆ ನೈಸರ್ಗಿಕವಾಗಿ ತೋಟ, ಮಾವಿನ ಮರ, ಹೀಗೆ ಇನ್ನು ಅನೇಕ ಗಿಡದಲ್ಲಿ ಬೇಡುವ ಹೂ ಗಾಲ ರಸವನ್ನ ಹಿರಿ ಅಧಿಕ ಮಟ್ಟದಲ್ಲಿ ಜೇನು ತುಪ್ಪವನ್ನ ಉತ್ಪದಾನೆ ಮಾಡುತ್ತವೆ. ನಿಮ್ಮ ಊರಿನ ತೋಟಗಾರಿಕೆ ಇಲಾಖೆ ಯಲ್ಲಿ ಕೊಡುವ ಜೇನು ಪೆಟ್ಟಿಗೆಯನ್ನ ತಂದು ಸರಿಯಾದ ಜಾಗದಲ್ಲಿ ಇಟ್ಟರೆ ಸಾಕು ಯಾವುದು ಖರ್ಚು-ವೆಚ್ಚ ಇಲ್ಲದೆ ಆದಾಯದ ಮೂಲವನ್ನ ಪ್ರತಿ ಕುಟುಂಬಗಳು ಮಾಡಿಕೊಳ್ಳಬಹುದು.

ಯಾವತಾರ ಜೇನು ಕೃಷಿಗೆ ಸರ್ಕಾರದಿಂದ ರೈತರಿಗೆ ನೆರವು ಸಿಗುತ್ತದೆ :-

ರಾಷ್ಟ್ರೀಯ ಜೇನುಸಾಕಣೆ ಮಿಷನ್ ಯೋಜನೆ 2026 ನೇ ಸಾಲಿನಲ್ಲಿ ಜೇನು ಸಾಕಾಣಿಕೆ ಮಾಡಲು ರೈತರಿಗೆ ಸರ್ಕಾರ 50 % ಸಬ್ಸಿಡಿಯನ್ನ ನೀಡುತ್ತಿದೆ. ಗ್ರಾಮೀಣ ಭಾಗದ ಯುವಕ ಯುವತಿಯರು ನಂಮಗೊಂಡು ಸ್ವಂತ ಕೆಲಸ ಇಲ್ಲ ಎಂದು ಬಳಲುವ ಬದಲು, ಕೇವಲ ನೌಕರಿ ಹುಡುಕುತ್ತ ಕಾಲ ಕಳೆಯುವ ಬದಲು ಜೇನು ಸಾಕಾಣಿಕೆ ಮಾಡಬಹುದು. ಅದು ನಿಮ್ಮ ಮನೆ ಹತ್ತಿರ ಸ್ವಲ್ಪ ತೋಟ ಅಥವಾ ಕಾಡು ಪ್ರದೇಶವಿದ್ದರೂ ಸಾಕು, ಉತ್ತಮ ನಿಸರ್ಗದಲ್ಲಿ ಸ್ವಂತ ಉದ್ಯೋಗವನ್ನು ಶುರು ಮಾಡಬಹುದು.

ಈ ಯೋಜನೆ ಅಡಿ ಪ್ರತಿಯೊಬ್ಬ ರೈತರಿಗೂ ಸಿಗುತ್ತೆ, ಜೇನು ಕೃಷಿ ಮಾಡಲು ಜೇನು ಪೆಟ್ಟಿಗೆ, ತರಬೇತಿ, ಇನ್ನಿತರ ಉಪಕರಣಗಳ, ಜೊತೆಗೆ ಸರ್ಕಾರದಿಂದ ಸಹಾಯಧನ”.


ಸಹಾಯಧನದ ವಿವರ :-

1. ಒಬ್ಬ ವ್ಯಕ್ತಿ ಜೇನು ಸಾಕಾಣಿಕೆ ಮಾಡಲು ಬಯಸಿದರೆ :

  • ಜೇನು ಸಾಕಾಣಿಕೆ ಉಪಕರಣಗಳ ಮೇಲೆ ಸುಮಾರು 50% ಸಹಾಯಧನ ಸಿಗುತ್ತದೆ ಅಂದರೆ
  • ಜೇನುಪೆಟ್ಟಿಗೆಗಳು (Bee boxes / Hives)
  • ಜೇನುಸಾಕಣೆ ಉಪಕರಣಗಳು (smoker, veil, tools ಇತ್ಯಾದಿ) ಮೇಲೆ ಸಬ್ಸಿಡಿ ದೊರೆಯುತ್ತದೆ.
  • ನೀವು ಜೇನು ಸಾಕಾಣಿಕೆ ಕೃಷಿಗೆ ಎಷ್ಟು ವೆಚ್ಚ ಮಾಡುತ್ತಿರೋ ಅದರಲ್ಲಿ 50% ಸರ್ಕಾರದಿಂದ ಸಹಾಯಧನ ನಿಮಗೆ ದೊರೆಯುತ್ತದೆ.

ಉದಾಹರಣೆ : ನೀವು ಈ ಕೃಷಿ ಮಾಡಲು 50,000 ಹಣವನ್ನ ಖರ್ಚು ಮಾಡಿದರೆ ಸರ್ಕಾರದಿಂದ 25,000 ದಷ್ಟು ಸಬ್ಸಿಡಿ ಸಿಗುತ್ತದೆ.

2. NBHM ಯೋಜನೆಯಡಿ ಸ್ವಸಹಾಯ ಗುಂಪುಗಳಿಗೆ (SHG) :

  • ಮೂಲಕ ನೀವು ಜೇನು ಕೃಷಿಯನ್ನು ಆರಂಭಿಸಲು ಇಚ್ಛಿಸಿದರೆ ಸರ್ಕಾರದಿಂದ 75% ಸಹಾಯಧನವನ್ನು ಪಡೆಯಬಹುದು.

ಹಾಗಿದ್ದರೆ ನಮಗೆ ಯಾವ ವಸ್ತುಗಳು ಸಿಗುತ್ತದೆ ?

  • ಜೇನುಪೆಟ್ಟಿಗೆಗಳು (Bee boxes), ಜೇನುಸಾಕಣೆ ಉಪಕರಣಗಳು, ಜೇನು ಸಂಸ್ಕರಣೆ / ಸಂಗ್ರಹ ಸಾಧನಗಳು ಜೇನುಸಾಕಣೆ ವಿಸ್ತರಣೆ ಕೆಲಸಗಳು, ಈ ಕೆಲಸಗಳ ಮೇಲೆ ಸಹಾಯಧನ ಸಿಗುತ್ತದೆ

ಉದಾಹರಣೆ : ಕೇಂದ್ರ ಸರ್ಕಾರದ ಈ ಯೋಜನೆಗೆ ನೀವು ಒಂದು ಲಕ್ಷ ವೆಚ್ಚವನ್ನು ಮಾಡಿ ಜೇನು ಸಾಕಾಣಿಕೆ ಮಾಡಿದರೆ 75% ಅಂದರೆ ಸುಮಾರು 75,000 ದಷ್ಟು ಸಬ್ಸಿಡಿ ಸರ್ಕಾರದಿಂದ ಸಿಗುತ್ತದೆ.

3. ರೈತರ ಉತ್ಪಾದಕ ಸಂಘ(ಗುಂಪು) (FPO)

  • ಸ್ವಸಹಾಯ ಗುಂಪುಗಳಿಗೆ ಯಾವ ರೀತಿ ಸಹಾಯಧನ ನೀಡುತ್ತದೆಯೋ ಅದೇ ರೀತಿ ರೈತ ಉತ್ಪಾದಕ ಸಂಘಕ್ಕು 75% ಸಹಾಯಧನ ಸಿಗುತ್ತದೆ.
  • ಇದರ ಜೊತೆಗೆ ಸಹಕಾರಿ ಸಂಘಗಳಿಗೂ ಇದೇ ರೀತಿಯ ಸಬ್ಸಿಡಿ ಸಿಗುತ್ತೆ.

4 . ಸರ್ಕಾರಿ ಇಲಾಖೆ

ಸಾಮಾನ್ಯ ರೈತರು ಸರ್ಕಾರಿ ಇಲಾಖೆ ಮೂಲಕ ಅರ್ಜಿಯನ್ನು ಸಲ್ಲಿಸುವ ರೈತರಿಗೆ ಸುಮಾರು 100% ಸಬ್ಸಿಡಿ ಸಿಗುತ್ತದೆ. ಯಾಕೆಂದರೆ ಇಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಸಹಾಯಧನ ಸಿಗುತ್ತದೆ.

ಇನ್ನು ಸ್ಪಷ್ಟವಾಗಿ ತಿಳಿಯಲು ಬಯಸಿದರೆ ಈ ಕೆಳಗೆ ನೋಡಿ ಕೃಷಿ ಇಲಾಖೆ / ಹೂಗಾರಿಕೆ ಇಲಾಖೆ, ರಾಷ್ಟ್ರೀಯ/ರಾಜ್ಯ ರೈತ ಸಮಿತಿ, ಸಂಶೋಧನಾ ಸಂಸ್ಥೆಗಳು (ICAR, KVK, ಇತ್ಯಾದಿ), ಸರ್ಕಾರಿ ತರಬೇತಿ ಕೇಂದ್ರಗಳು ಇಲ್ಲಿ ನೀವು ಅರ್ಜಿಯನ್ನ ಸಲ್ಲಿಸಿದರೆ ಬಯಸಿದರೆ 100% ಸಹಾಯಧನ ಸಿಗುತ್ತದೆ.

NBHM ಅಡಿ ಜೇನುಸಾಕಣೆ ತರಬೇತಿ :-

ಯೋಜನೆ ಅಡಿಯಲ್ಲಿ ಎಲ್ಲಾ ವರ್ಗದವರಿಗೂ ಒಂದೇ ರೀತಿಯ ತರಬೇತಿ ಸರ್ಕಾರದಿಂದ ಉಚಿತವಾಗಿ ದೊರೆಯುತ್ತದೆ. ಈ ತರಬೇತಿಯಲ್ಲಿ ಜೇನು ಸಾಕಾಣಿಕೆಯನ್ನ ಹೇಗೆ ಆರಂಭಿಸಬೇಕು ? ಜೇನುತುಪ್ಪದ ಉತ್ಪಾದನೆಗೆ ಯಾವ ರೀತಿ ಕ್ರಮಗಳನ್ನ ಕೈಗೊಳ್ಳಬೇಕು ? ಎನ್ನುವುದರ ಸಂಪೂರ್ಣ ಮಾಹಿತಿಯನ್ನ ಜನರಿಗೆ ಸರ್ಕಾರ ತರಬೇತಿಯ ಮೂಲಕ ಕೊಡುತ್ತದೆ.

  • ಜೇನು ನಿರ್ವಹಣೆ : ಜೇನು ಹುಳುಗಳು ಆರೋಗ್ಯಕರವಾಗಿ, ಸುರಕ್ಷಿತವಾಗಿ ಮತ್ತು ಹೆಚ್ಚು ಹನಿ ನೀಡಲು ಯಾವ ಯಾವ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದರ ಮಾಹಿತಿಯನ್ನು ತರಬೇತಿಯಲ್ಲಿ ನೀಡುತ್ತಾರೆ.
  • ಜೇನುತುಪ್ಪದ ಉತ್ಪಾದನೆ : ಜೇನು ಸಾಕಾಣಿಕೆಯನ್ನ ಮಾಡಲು ಆರಂಭಿಸಿದ ರೈತರು ಜೇನುತುಪ್ಪದ ಉತ್ಪಾದನೆಯನ್ನು ಯಾವ ರೀತಿಯಲ್ಲಿ ಹೆಚ್ಚಿಸಬೇಕು ಎನ್ನುವುದರ ಸಂಪೂರ್ಣ ಮಾಹಿತಿಯು ಕೂಡ ಈ ಒಂದು ತರಬೇತಿಯಲ್ಲಿ ಸಿಗುತ್ತದೆ.
  • ಮಾರಾಟ ಮಾಡುವುದರ ವಿವರ : ಈ ಯೋಜನೆಯ ಬಗ್ಗೆ ತಿಳಿದುಕೊಂಡ ರೈತರು ಜೇನು ಸಾಕಾಣಿಕೆಯನ್ನ ಮಾಡಲು ಆರಂಭಿಸಿ ನಂತರದಲ್ಲಿ ಮಾರಾಟವನ್ನ ಯಾವ ರೀತಿಯಲ್ಲಿ ಮಾಡಬೇಕು ಹಾಗೆಯೇ ಪ್ಯಾಕಿಂಗ್ ವ್ಯವಸ್ಥೆ ಹೇಗಿರಬೇಕು ಇನ್ನು ವಿವಿಧ ರೀತಿಯ ಮಾಹಿತಿಗಳನ್ನ ಸರ್ಕಾರ ಒದಗಿಸುತ್ತದೆ.
  • ಆಹಾರ ಮತ್ತು ನೀರು ನೀಡುವ ಕ್ರಮ : ಜೇನುಗಳು ಹನಿಯನ್ನ ಉತ್ಪಾದನೆ ಮಾಡಲು ಸರಿಯಾಗಿ ಆಹಾರ ಮತ್ತು ನೀರು ನೀವು ಪೆಟ್ಟಿಗೆ ಇಟ್ಟಂತಹ ಸ್ಥಳದಲ್ಲಿ ಸಿಗದಿದ್ದಾಗ ಉತ್ತಮ ನೀರಿನ ಜೊತೆಗೆ ಸರ್ಕರಿಯ ಸಿರಪ್ ಅನ್ನ ಒದಗಿಸಬೇಕು ಎನ್ನುವುದರ ತರಬೇತಿ. ಹಾಗೆ ಯಾವ ರೀತಿ ಗಾಳಿ, ಬೆಳಕು, ಸೂರ್ಯನ ಕಿರಣಗಳಿಂದ ಜೇನು ಸಾಕಾಣಿಕೆ ಕೃಷಿಯನ್ನು ಮಾಡಬೇಕು ಎನ್ನುವುದರ ಮಾಹಿತಿಯನ್ನ ತಿಳಿಸಿಕೊಡಲಾಗುತ್ತದೆ
  • ಕಾಲಕಾಲಕ್ಕೆ ಜೇನು ಪೆಟ್ಟಿಗೆಯ ಪರಿಶೀಲನೆ : ಬೇರೆ ಯಾವುದೇ ಕೀಟಗಳಿಂದ ಜೇನು ಹುಳುಗಳಿಗೆ ತೊಂದರೆಯಾಗದಂತೆ ಮತ್ತು ರಾಣಿಜೇನಿನ ಆರೋಗ್ಯವನ್ನು ಸರಿಯಾಗಿ ಯಾವ ರೀತಿಯಲ್ಲಿ ಕಾಪಾಡಿಕೊಳ್ಳಬೇಕು ಎನ್ನುವುದರ ವಿವರವನ್ನು ಈ ಒಂದು ತರಬೇತಿಯಲ್ಲಿ ಸರ್ಕಾರ ನಿಮಗೆ ಒದಗಿಸುತ್ತದೆ. ಜೇನು ಸಾಕಾಣಿಕೆಯಲ್ಲಿ ರಾಣಿ ಜೇನಿನ ಪಾತ್ರ ಪ್ರಮುಖವಾಗಿರುತ್ತದೆ.

ಜೇನು ಉತ್ಪಾದನೆ ಮಾಡಿ ಹನಿಯನ್ನು ತೆಗೆಯುವುದು ಯಾವ ಕಾಲದಲ್ಲಿ :-

‘ಕರ್ನಾಟಕ ರಾಜ್ಯದ ರೈತರು ಸರ್ಕಾರದಿಂದ ಸಿಗುವ ಈ ಸಬ್ಸಿಡಿಯ ಮೂಲಕ ಜೇನು ಕೃಷಿಯನ್ನ ಮಾಡಿದರೆ ಸುಮಾರು ಜನವರಿಯಿಂದ – ಏಪ್ರಿಲ್ ತಿಂಗಳಲ್ಲಿ ಮತ್ತು ಜೂನ್ ಇಂದ ಸೆಪ್ಟೆಂಬರ್ ತಿಂಗಳಲ್ಲಿ ಜೇನುತುಪ್ಪವನ್ನು ತೆಗೆಯಬಹುದು’. ವರ್ಷದಲ್ಲಿ ಎರಡು ಬಾರಿ ಜೇನುತುಪ್ಪವನ್ನು ನೀವು ಸಂಗ್ರಹಿಸಬಹುದು.

ಪರಿಶುದ್ಧ ಜೇನಿಗೆ ಭಾರೀ ಬೇಡಿಕೆ!

ಇತ್ತೀಚಿನ ದಿನಗಳಲ್ಲಿ ಪರಿಶುದ್ಧ ಜೇನು ತುಪ್ಪಕ್ಕೆ ಔಷಧಿಗಳಿಗೆ ಮತ್ತು ಇತರೆ ಆಹಾರಗಳಿಗೆ ಜೇನುತುಪ್ಪವನ್ನು ಅತಿ ಹೆಚ್ಚಾಗಿ ಬಳಸುತ್ತಿದ್ದಾರೆ. ಮಾರುಕಟ್ಟೆಯಲ್ಲೂ ಸಹ ಗುಣಮಟ್ಟದ ಜೇನುತುಪ್ಪಕ್ಕೆ ಉತ್ತಮ ಬೇಡಿಕೆ ಇದೆ. “ಈ ಜನವರಿ ತಿಂಗಳಲ್ಲಿ ರೈತರು ತಮ್ಮ ಅಡಿಕೆ ತೋಟದಲ್ಲಿ ತೋಟಗಾರಿಕೆ ಇಲಾಖೆಯಿಂದ ಸಿಗುವ ಜೇನುಪೆಟ್ಟಿಗೆಯನ್ನ ತಂದು ಜೇನು ಸಾಕಾಣಿಕೆ ಮಾಡಿದರೆ ಕಡಿಮೆ ವೆಚ್ಚದ ಜೊತೆಗೆ ಹೆಚ್ಚಿನ ಲಾಭವನ್ನ ಗಳಿಸಬಹುದು”


ಯೋಜನೆಯ ಅನುಕೂಲ :-

  • ಹಳ್ಳಿ ಭಾಗದ ಯುವಕ ಯುವತಿಯರಿಗೆ ಸರ್ಕಾರವು ಈ ಯೋಜನೆಯಿಂದ ಹೊಸ ಉದ್ಯೋಗವನ್ನು ಸೃಷ್ಟಿಸಿದಂತಾಗುತ್ತದೆ.
  • ಜೇನು ಕೃಷಿ ಮಾಡಲು ಹೆಚ್ಚಿನ ದನೀನು ಅಥವಾ ದೊಡ್ಡಮಟ್ಟದ ಬಂಡವಾಳದ ಅವಶ್ಯಕತೆ ಇಲ್ಲ ಕಡಿಮೆ ಹೂಡಿಕೆಯಲ್ಲಿ ವರ್ಷವಿಡಿ ಆದಾಯವನ್ನು ಗಳಿಸಬಹುದು.
  • ರೈತರಿಗೆ ಜೇನುತುಪ್ಪದ ಮಾರಾಟದಿಂದ ಆದಾಯ ಸಿಗದೇ ಜೇನು ಮೇಳ ಜೇನು ವಿಷಯ ಮತ್ತು ರಾಯಲ್ ದಲ್ಲಿ ಮಾರಾಟದ ಮೂಲಕವೂ ಆದಾಯವನ್ನು ಪಡೆಯಬಹುದು. ಇವುಗಳಿಗೆ ಮಾರಿಕಟ್ಟೆಯಲ್ಲಿ ಬಾರಿ ಪ್ರಮಾಣದ ಬೇಡಿಕೆ ಇದೆ.
  • ರೈತ ಮಿತ್ರರಿಗೆ ಕೃಷಿ ಇಳುವರಿಯಲು ಹೆಚ್ಚು ಲಾಭವನ್ನು ಕಾಣುತ್ತಾರೆ ಹೇಗೆಂದರೆ ಜೇನು ಹುಡುಗರು ಸ್ಪರ್ಶವನ್ನು ನಡೆಸಿ ತೋಟದಲ್ಲಿ ತೆಂಗು ಅಡಿಕೆ ಮಾವು ಹೀಗೆ ಇನ್ನಿತರ ಬೆಳೆಗಳ ಇಳುವಳಿಯೂ ಕೂಡ ಶೇಕಡ 20% ರಿಂದ 30% ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ.
  • ರೈತರ ಆರ್ಥಿಕತೆಯಲ್ಲಿ ನೆರವಾಗುವುದರ ಜೊತೆಗೆ ಪರಿಸರದ ಸಮತೋಲನ ಕಾಪಾಡುವಲ್ಲಿ ಜೇನುನೊಣಗಳು ಪ್ರಮುಖ ಪಾತ್ರವಹಿಸುತ್ತವೆ.

ರಾಷ್ಟ್ರೀಯ ಜೇನು ಸಾಕಣೆ ಮತ್ತು ಜೇನು ಮಿಷನ್ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :-

  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್ ಪ್ರತಿ
  • ಜಮೀನು ದಾಖಲೆ
  • ಜೇನು ಸಾಕಾಣಿಕೆ ತರಬೇತಿಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ಪಾಸ್ಪೋರ್ಟ್ ಅಳತೆಯ ಇತ್ತೀಚಿನ ಫೋಟೋ
  • ದೊಡ್ಡಮಟ್ಟದಲ್ಲಿ ಜೇನು ಸಾಕಾಣಿಕೆ ಯೋಜನೆಯನ್ನು ನೀವು ಮಾಡುತ್ತೀರಾ ಎಂದರೆ ಯೋಜನಾ ವರದಿಯೊಂದು  (DPR)

ಅರ್ಜಿ ಸಲ್ಲಿಸುವ ವಿಧಾನ :-

ಈ ಯೋಜನೆಗೆ ಅರ್ಜಿ ಸಲ್ಲಿಸಬೇಕೆಂದು ಬಯಸುವ ಅಭ್ಯರ್ಥಿಗಳು ಆನ್ಲೈನ್ ಮತ್ತು ಆಫ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸ ಬಹುದು. ಹಾಗಿದ್ದರೆ ಹೇಗೆ ಎನ್ನುವುದನ್ನು ನೋಡುತ್ತಾ ಹೋಗೋಣ ಬನ್ನಿ,,

ಆಫ್‌ಲೈನ್ ಅರ್ಜಿ ಸಲ್ಲಿಸುವ ವಿಧಾನ :-

ನೀವು 2026ರಲ್ಲಿ ಜೇನು ಸಾಕಾಣಿಕೆ ಯೋಜನೆಗೆ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಸರಳ ವಿಧಾನವನ್ನ ಹೀಗೆ ಅನುಸರಿಸಿ.

  • ನಿಮ್ಮ ಊರಿನಲ್ಲಿರುವ ತೋಟಗಾರಿಕೆ ಇಲಾಖೆ, ಕಚೇರಿಗೆ ಮೊದಲು ಭೇಟಿ ನೀಡಿ.
  • ನಂತರ ಅಲ್ಲಿ ಸಿಗುವ ಜೇನು ಸಾಗಾಣಿಕೆ ಸಹಾಯಧನದ ಅರ್ಜಿಯನ್ನ ಕೇಳಿ ಪಡೆಯಿರಿ.
  • ಫಾರಂನಲ್ಲಿ ಕೇಳುವ ದಾಖಲೆಗಳನ್ನು ಸರಿಯಾಗಿ ಭರ್ತಿ ಮಾಡಿ ಹಾಗೆ ಆಧಾರ್ ಕಾರ್ಡ್, ಪಹಣಿ, ತರಬೇತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಿ.
  • ನೀಡಿರುವ ಎಲ್ಲಾ ವಿವರಗಳು ಸರಿ ಇದೆಯೇ ಎಂದು ಪರಿಶೀಲನೆ ಮಾಡಿ. ನಂತರ ತೋಟಗಾರಿಕೆ ಇಲಾಖೆಗೆ ಸಂಬಂಧ ಪಟ್ಟ ಅಧಿಕಾರಿ ಬಳಿ ಈ ಅರ್ಜಿ ಫಾರಂ ಅನ್ನ ಕೊಟ್ಟ ಬಳಿಕ ಸ್ವೀಕೃತಿ ರಶೀದಿಯನ್ನು ಕೇಳಿ ಪಡೆಯಿರಿ.
  • ಅಧಿಕಾರಿಗಳು ನಿಮ್ಮ ಜಮೀನಿಗೆ ಬಂದು ಪರಿಶೀಲನೆ ನಡೆಸಿ ಸರ್ಕಾರದಿಂದ ನಿಮಗೆ ಸಿಗಬಹುದಾದ ಸಹಾಯಧನವನ್ನ ಮಂಚೂರು ಮಾಡುತ್ತಾರೆ.

ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ :-

  • ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು “ಮಧು ಕ್ರಾಂತಿ ಅಥವಾ ಸೇವಾ ಸಿಂಧು” ಪೋರ್ಟಲ್‌ಗೆ ಮೊದಲು ಭೇಟಿ ನೀಡಿ.
  • ‘New Beekeeper Registration’ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ಸಂಖ್ಯೆ ಬಳಸಿ ಲಾಗಿನ್ ಆಗಿ.
  • ನಿಮ್ಮ ವಿಳಾಸ, ಹೆಸರು, ಆಧಾರ್ ಸಂಖ್ಯೆ, ಆರ್ ಟಿ ಸಿ, ಹೀಗೆ ಇತ್ಯಾದಿ ವಿವರಗಳನ್ನು ಭರ್ತಿ ಮಾಡಿ.
  • ಬ್ಯಾಂಕ್ ಪಾಸ್ ಬುಕ್, ಇತ್ತೀಚಿನ ನಿಮ್ಮ ಫೋಟೋ, ಜೇನು ಸಾಕಾಣಿಕೆ ತರಬೇತಿ ಪತ್ರವನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
  • ಭರ್ತಿ ಮಾಡಲಾದ ಆನ್ಲೈನ್ ಅಪ್ಲಿಕೇಶನ್ ಫಾರಂ ಸರಿ ಇದೆಯೇ ಎಂದು ಒಂದು ಬಾರಿ ಪರಿಶೀಲನೆ ಮಾಡಿ ನಂತರ ಕೊನೆಯದಾಗಿ ‘Submit’ ಬಟನ್ ಮೇಲೆ ಪ್ರೆಸ್ ಮಾಡಿ ರಸೀದಿಯನ್ನು ಸೇವೆ ಮಾಡಿ ಇಟ್ಟುಕೊಳ್ಳಿ.

ಪ್ರಮುಖ ಸೂಚನೆ :

ನೀವು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ನಂತರ ನಿಮ್ಮ ತಾಲೂಕಿನ ತೋಟಗಾರಿಕೆ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿ ಬಳಿ ಹೋಗಿ ನಿಮ್ಮ ಆನ್ಲೈನ್ ಅಪ್ಲಿಕೇಶನ್ ಮಾಡಿರುವ ವಿಧಾನವನ್ನ ಒಂದು ಬಾರಿ ತೋರಿಸುವುದು ಒಳ್ಳೆಯದು.

2026 ನೇ ಸಾಲಿನ ಆನ್ಲೈನ್ ಮತ್ತು ಆಫ್ಲೈನ್ ಅರ್ಜಿ ಸಲ್ಲಿಸುವುದು ನಿಮಗೆ ಕಷ್ಟವಾದರೆ ನಿಮ್ಮ ಊರಿನ ಗ್ರಾಮಒನ್, ಕರ್ನಾಟಕ ಒನ್, ನಲ್ಲಿ ಅವರು ಕೇಳುವ ದಾಖಲಾತಿಗಳನ್ನ ಕೊಟ್ಟು ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು. ಜೇನು ಕೃಷಿಗೆ ಅರ್ಜಿ ಹಾಕಿಕೊಟ್ಟ ನಂತರ ನಿಮ್ಮಿಂದ ಅವರು ಸ್ವಲ್ಪ ಪ್ರಮಾಣದಲ್ಲಿ ಅರ್ಜಿ ಶುಲ್ಕವನ್ನ ಬಯಸುತ್ತಾರೆ.

ಅಥವಾ

ತೋಟಗಾರಿಕೆ ಇಲಾಖೆಯ ಉಚಿತ ಸಹಾಯವಾಣಿ ಸಂಖ್ಯೆ 1800-425-7091 ಕ್ಕೆ ಕರೆ ಮಾಡಿ. ಅಲ್ಲಿನ ಅಧಿಕಾರಿಗಳು ನಿಮಗೆ ಯಾವ ರೀತಿಯಲ್ಲಿ ಅರ್ಜಿ ಸಲ್ಲಿಸಬೇಕು. ಹಾಗೆಯೆ ನಿಮ್ಮ ಜಿಲ್ಲೆಗೆ ಸಂಬಂಧಪಟ್ಟ ಜೇನು ಸಾಕಾಣಿಕೆ ಯೋಜನೆಯ ಬಗ್ಗೆ ವಿವರವನ್ನು ನೀಡುತ್ತಾರೆ. ಅಷ್ಟೇ ಅಲ್ಲದೆ ನಿಮಗೆ ಸಹಾಯ ಮಾಡುವ ಹತ್ತಿರದ ಅಧಿಕಾರಿಯ ಫೋನ್ ಸಂಖ್ಯೆಯನ್ನು ನೀಡುತ್ತಾರೆ.

ಇಲ್ಲಿ ಗಮನಿಸಿ :

ರಾಷ್ಟ್ರೀಯ ಜೇನು ಸಾಕಣೆ ಮತ್ತು ಜೇನು ಮಿಷನ್ ಯೋಜನೆಗೆ ಅಪ್ಲಿಕೇಶನ್ ಆರಂಭವಾಗಿದ್ದು. ಅಂತಿಮ ದಿನದೊಳಗಾಗಿ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದರೆ ಈ ಯೋಚನೆಯ ಲಾಭವನ್ನು ಪಡೆಯದು, ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಆದಾಯವನ್ನು ಗಳಿಸುವ ಉದ್ಯೋಗವನ್ನು ನೀವು ನಿಮ್ಮ ಊರಿನಲ್ಲಿಯೇ ಆರಂಭಿಸಬಹುದು.


Join WhatsApp

Join Now

Join Telegram

Join Now

Leave a Comment