Arogya Sanjeevini Scheme : ಸರ್ಕಾರಿ ನೌಕರರಿಗೆ ಕರ್ನಾಟಕ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್! ನೌಕರರ ಕುಟುಂಬಕ್ಕೆ ಆರೋಗ್ಯ ಭದ್ರತೆ!

On: Thursday, January 22, 2026 4:24 PM
Arogya Sanjeevini Scheme

Join WhatsApp

Join Now

Join Telegram

Join Now

Arogya Sanjeevini Scheme In Kannada

ಸರ್ಕಾರಿ ನೌಕರರಿಗೆ ಕರ್ನಾಟಕ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್! ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ ಯಡಿಯಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ನಗದು ರಹಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ.

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ:

ಕರ್ನಾಟಕದ ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ಆರೋಗ್ಯ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಮಹತ್ವಾಕಾಂಕ್ಷೆಯ ಯೋಜನೆಯಾದ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೆ ತಂದಿದೆ. ಸರ್ಕಾರಿ ನೌಕರರು ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬೇಕಾದರೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ನೀವೇನಾದರೂ ಸರ್ಕಾರಿ ನೌಕರರೇ? ಹಾಗಿದ್ದರೆ ಇಂದೇ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.

ಯೋಜನೆಯ ಒಳನೋಟ :

ಯೋಜನೆಯ ಹೆಸರು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ
ಯೋಜನೆಯ ಅರ್ಹತೆ ಸರ್ಕಾರಿ ನೌಕರರು
ಸಿಗುವ ಲಾಭ ₹250 – ₹1,000
ಅಧಿಕೃತ ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ

ಏನಿದು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ?

ಕರ್ನಾಟಕ ರಾಜ್ಯದ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರವು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೆ ತಂದಿತು. ಹಲವು ವರ್ಷಗಳ ಹಿಂದೆಯೇ ಈ ಯೋಜನೆ ರೂಪುಗೊಂಡಿತ್ತಾದರೂ, ಕೆಲವು ತಾಂತ್ರಿಕ ಕಾರಣಗಳಿಂದ ಈ ಯೋಜನೆಯನ್ನು ಅನುಷ್ಠಾನ ಮಾಡುವುದು ವಿಳಂಬವಾಯಿತು. ನಂತರ ಕೊನೆಯದಾಗಿ, ಅಕ್ಟೋಬರ್ 1, 2025 ರಲ್ಲಿ ಈ ಯೋಜನೆಯನ್ನು ಅನುಷ್ಠಾನ ಗೊಳಿಸಲಾಯಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿ ಬರುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗಿದ್ದು, ಸರ್ಕಾರವು ಈ ಒಂದು ಯೋಜನೆಯಡಿಯಲ್ಲಿ, ಲಕ್ಷಾಂತರ ಸರ್ಕಾರಿ ನೌಕರರಿಗೆ ಹಾಗೂ ಸಿಬ್ಬಂದಿಗಳಿಗೆ ಸರ್ಕಾರಿ ಅಥವಾ ಅನುದಾನಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶವನ್ನು ಕಲ್ಪಿಸಿದೆ.

ಯಾರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು?

  • ಕರ್ನಾಟಕ ರಾಜ್ಯದ ಭೌಗೋಳಿಕ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ HRMS ನಲ್ಲಿ ನೋಂದಾಯಿತರಾಗಿರುವ ಎಲ್ಲ ಸರ್ಕಾರಿ ನೌಕರರು.
  • ಆದಾಯದ ಮಿತಿ ಇಲ್ಲದೆ ನೌಕರರ ಪತ್ನಿ ಅಥವಾ ಪತಿಯು ಈ ಯೋಜನೆಗೆ ಅರ್ಹರಾಗಿರುತ್ತಾರೆ.
  • ನೌಕರರ ಮಗ ಉದ್ಯೋಗವನ್ನು ಪಡೆಯುವವರೆಗೂ ಅಥವಾ ಮದುವೆಯಾಗುವವರೆಗೂ ಅಥವಾ 30 ವರ್ಷ ಪೂರ್ಣಗೊಳ್ಳುವವರೆಗೂ (ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೂ) ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿರುತ್ತದೆ.
  • ನೌಕರರ ಮಗಳು ಉದ್ಯೋಗ ಪಡೆಯುವ ವರೆಗೂ ಅಥವಾ ಮದುವೆಯಾಗುವವರೆಗೂ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.
  • 30 ವರ್ಷ ಪೂರ್ಣಗೊಂಡಿದ್ದರು ಸ್ವಂತವಾಗಿ ದುಡಿಯುವ ಸಾಮರ್ಥ್ಯವಿಲ್ಲದ ದೈಹಿಕವಾಗಿ ಹಾಗೂ ಮಾನಸಿಕವಾಗಿ ದುರ್ಬಲರಾದ ನೌಕರರ ಮಕ್ಕಳು ಈ ಯೋಜನೆಯ ಲಾಭವನ್ನು ಪಡೆಯಲು ಅರ್ಹರಾಗಿರುತ್ತಾರೆ.
  • ನೌಕರರ ಮನೆಯಲ್ಲೇ ವಾಸವಿದ್ದು, ಆದಾಯ ಮಿತಿಯು 27,000 ಕ್ಕಿಂತ ಕಡಿಮೆಯಿರುವ ತಂದೆ, ತಾಯಿ ಅಥವಾ ಮಲತಾಯಿ ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ.

ಇಲ್ಲಿ ಗಮನಿಸಿ: “ದಂಪತಿಗಳಿಬ್ಬರೂ ಸರ್ಕಾರಿ ನೌಕರರಾಗಿದ್ದರೆ, ಯಾರಿಗೆ ಹೆಚ್ಚು ವೇತನ ಇರುತ್ತದೆಯೋ? ಅವರು ಮುಖ್ಯ ಕಾರ್ಡ್ ದಾರರಾಗಿರುತ್ತಾರೆ”.

ಯೋಜನೆಯಡಿಯಲ್ಲಿ ಯಾವೆಲ್ಲಾ ಸೌಲಭ್ಯಗಳು ಲಭ್ಯ:

  • ಸರ್ಕಾರಿ ಮತ್ತು ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾದ ನೌಕರರು ಅಥವಾ ಅವರ ಕುಟುಂಬದವರು ಯಾವುದೇ ಹಣವನ್ನು ಪಾವತಿಸದೆ ಉಚಿತ ಚಿಕಿತ್ಸೆ ಪಡೆದುಕೊಳ್ಳಬಹುದು.
  • ಅಪಘಾತ ಸಂದರ್ಭದಲ್ಲಿ ತಕ್ಷಣವೇ ಅರೋಗ್ಯ ಸೇವೆ ಹಾಗೂ ಆಂಬುಲೆನ್ಸ್ ಸೌಲಭ್ಯ ಪಡೆದುಕೊಳ್ಳಬಹುದು.
  • ಈ ಯೋಜನೆಯಡಿಯಲ್ಲಿ 1200 ಕ್ಕೂ ಹೆಚ್ಚು ಕಾಯಿಲೆಗಳಿಗೆ ನಗದುರಹಿತ ಉಚಿತ ಚಿಕಿತ್ಸೆ ಪಡೆದುಕೊಳ್ಳಬಹುದು.
  • ಗಂಭೀರ ಕಾಯಿಲೆಗಳಿಗೆ ಈ ಯೋಜನೆಯಡಿಯಲ್ಲಿ ಯಾವುದೇ ಗರಿಷ್ಠ ವೆಚ್ಚದ ಮಿತಿ ಇರುವುದಿಲ್ಲ.

ಮಾಸಿಕ ಕಂತುಗಳ ವಿವರ:

ರಾಜ್ಯ ಸರ್ಕಾರಿ ನೌಕರರು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿಯಲ್ಲಿ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ, ತಮ್ಮ ವೇತನ ಶ್ರೇಣಿಗೆ ಅನುಗುಣವಾಗಿ ಪ್ರತಿ ತಿಂಗಳು ಕಡ್ಡಾಯವಾಗಿ ಕಂತನ್ನು ಪಾವತಿಸಬೇಕಾಗುತ್ತದೆ. ಕಂತುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

  • ಗ್ರೂಪ್ ಎ – 1,000
  • ಗ್ರೂಪ್ ಬಿ – 500
  • ಗ್ರೂಪ್ ಸಿ – 350
  • ಗ್ರೂಪ್ ಡಿ – 250

ಯಾವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯ?

  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಾರ್ವಜನಿಕ ಆಸ್ಪತ್ರೆಗಳು
  • ಸ್ಥಳೀಯ ಸಂಸ್ಥೆಗಳ ಆಸ್ಪತ್ರೆಗಳು
  • ವೈದ್ಯಕೀಯ ಶಿಕ್ಷಣ ಇಲಾಖೆಯ ಭೋದನಾ ಆಸ್ಪತ್ರೆಗಳು
  • ಯೋಜನೆಗೆ ನೋಂದಾಯಿತವಾಗಿರುವ ಖಾಸಗಿ ಆಸ್ಪತ್ರೆಗಳು

ಅಗತ್ಯವಿರುವ ದಾಖಲೆಗಳು:

  • ನೌಕರರು ಹಾಗೂ ಅವರ ಕುಟುಂಬದವರ ಆಧಾರ್ ಕಾರ್ಡ್
  • ಪೋಷಕರ ಆದಾಯದ ಬಗ್ಗೆ ಸ್ವಯಂ ಘೋಷಣೆ
  • ನೌಕರರ ಸೇವಾ ವಿವರ
  • ನೌಕರರ ಹಾಗೂ ಕುಟುಂಬ ಸದಸ್ಯರ ಇತ್ತೀಚಿನ ಭಾವಚಿತ್ರ

ನೋಂದಣಿ ಮಾಡಿಕೊಳ್ಳುವ ವಿಧಾನ:

  • ನೌಕರರು ಮೊದಲು HRMS ಪೋರ್ಟಲ್ ಗೆ ಭೇಟಿ ನೀಡಿ.
  • ತಮ್ಮ ಕುಟುಂಬದ ಸದಸ್ಯರ, ಆಧಾರ್ ಸಂಖ್ಯೆ, ಭಾವಚಿತ್ರ, ಇತರೆ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ನೋಂದಣಿ ಮಾಡಿಕೊಳ್ಳಬೇಕು.

ಅಂತಿಮ ತೀರ್ಮಾನ:

ಕರ್ನಾಟಕ ಸರ್ಕಾರವು ನೌಕರರಿಗೆ ಹಾಗೂ ಅವರ ಕುಟುಂಬದ ಸದಸ್ಯರ ಉತ್ತಮ ಗುಣಮಟ್ಟದ ಆರೋಗ್ಯ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಿದ್ದು, ನೀವು ಸರ್ಕಾರಿ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ಆನ್ಲೈನ್ ಮೂಲಕ ನೋಂದಣಿ ಮಾಡಿಕೊಂಡು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.


ಇತರೆ ಪ್ರಮುಖ ಯೋಜನೆಯ ಲಿಂಕುಗಳು:


Join WhatsApp

Join Now

Join Telegram

Join Now

Leave a Comment