ರೈತರೇ ನೀವು ಸಾಲ-ಸುಲ ಮಾಡಿ ಕುರಿ ಮಾರಿಗಳನ್ನ ತಂದು ಸಾಕಿ ಬೆಳೆಸಿದ ಕುರಿ, ಮೇಕೆ, ಆಡು ಮರಣ ಹೊಂದಿದಿದಿಯೇ ? ಇದಕ್ಕೆ ತೀರಾ ನೀವು ದುಕ್ಕಿಸುವುದು ಬೇಡ ! ಸರ್ಕಾರ 2026ರಲ್ಲಿ ಅನುಗ್ರಹ ಯೋಜನೆ ಅಡಿ ಕೆಲವು ಬದಲಾವಣೆ ಮೂಲಕ ರೈತರಿಗೆ ನೆರವಾಗಲು ನಿಮ್ಮತ್ತ ಧಾವಿಸಿದೆ.
Anugraha scheme In Kannada
ಕೆಲವು ವರ್ಷದಿಂದ ಈ ಯೋಜನೆಗೆ ಸರ್ಕಾರ ಎಳ್ಳು ನೀರು ಬಿಟ್ಟಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣ ಮತ್ತು ಕೆಲವು ಜನರ ಮಧ್ಯೆ ಕೇಳಿಬರುತ್ತಿತ್ತು. ಇಂತಹ ಮಾಹಿತಿ ಗ್ರಾಮೀಣ ಭಾಗದಲ್ಲಿ ಇನ್ನು ಚರ್ಚೆ ಆಗುತ್ತಿದ್ದರೆ ಅದಕ್ಕೆ ಕಿವಿ ಕೊಡಬೇಡಿ. ಯಾಕೆದಂದರೆ 2026 ನೇ ಸಾಲಿನಲ್ಲಿಯೂ ಕರ್ನಾಟಕ ಸರ್ಕಾರ ರೈತರ ಅರ್ಜಿಯನ್ನ ಸ್ವೀಕಾರ ಮಾಡುತ್ತಿದೆ.
ಪ್ರೀತಿಯ ರೈತ ಮಿತ್ರರೇ,,, ಕರ್ನಾಟಕ ಸರ್ಕಾರ “ಅನುಗ್ರಹ ಯೋಜನೆ” ಅಡಿ ಕುರಿ, ಮೇಕೆ, ಆಡುಗಳು ಅಕಾಲಿಕ ಮರಣಕ್ಕೆ ತುತ್ತಾದರೆ ಆ ರೈತನ ಕಷ್ಟಕ್ಕೆ ಪರಿಹಾರವಾಗಿ ಒಂದಿಷ್ಟು ಮೊತ್ತವನ್ನ ಈ ಯೋಜನೆ ಮೂಲಕ ರೈತರಿಗೆ ಕೊಡುತ್ತದೆ. ಆ ಮೊತ್ತದಲ್ಲಿ 2026 ನೇ ಸಾಲಿನಲ್ಲಿ ಕೊಂಚ ಪ್ರಮಾಣದ ಬದಲಾವಣೆ ಕೂಡ ನಡೆದಿದೆ.
ಮೇಲೆ ಕೊಡಲಾದ ನನ್ನ ಲೇಖನವನ್ನ ಓದುತ್ತ ಬಂದಾಗ ನಿಮ್ಮ ಮಾಸಲ್ಲಿ ಹುಟ್ಟಿಕೊಡ ಪ್ರಶ್ನೆಗಳು ಹೀಗಿರಬಹುದು ಎನ್ನುವುದು ನನ್ನ ಊಹೆ.
“ನಮ್ಮ ಮನೆಯಲ್ಲಿ ಸತ್ತುಹೋದ ಕುರಿ ಮತ್ತು ಮೇಕೆಗಳಿಗೆ ಈ ಯೋಜನೆ ಮೂಲಕ ಹೇಗೆ ಸಹಾಯಧನ ಸಿಗುತ್ತೆ? ಯಾವಾಗ ಈ ಯೋಜನೆ ಜಾರಿ ಆಗಿದ್ದು ? ಎಷ್ಟು ಮೊತ್ತ ಸಿಗುತ್ತೆ ? ಮತ್ತು ಅರ್ಜಿ ಯಾವಾಗ ಹಾಕಬೇಕು” ? ಎನ್ನುವ ಪ್ರಶ್ನೆಗೆ ಹಂತ ಹಂತವಾಗಿ ಕೆಳಗೆ ತಿಳಿಸಲಾಗಿದೆ.
ಸರ್ಕಾರದ ಈ ಯೋಜನೆಯ ಮುಖ್ಯ ಉದ್ದೇಶವಾದರೂ ಏನು ?
ಅನುಗ್ರಹ ಯೋಜನೆ ಬಗ್ಗೆ ಕಿರು :-
ಅನುಗ್ರಹ ಯೋಜನೆಯನ್ನು ಮೊದಲು ಸಿಎಂ ಸಿದ್ದರಾಮಯ್ಯ ಅವರು 2017-18ರ ವೇಳೆಯಲ್ಲಿ ಜಾರಿ ಮಾಡಿರುವಂತದ್ದು. ಆಕಸ್ಮಿತವಾಗಿ ಮರಣ ಹೊಂದಿದ ಮತ್ತು ವಿಮೆ ಇಲ್ಲದ ಕುರಿ ಮೇಕೆ ಹಾಗೂ ಇತರೆ ಜಾನುವಾರುಗಳ ಮಾಲೀಕರಿಗೆ ತಕ್ಷಣದ ಪರಿಸ್ಥಿತಿಯನ್ನ ಸರ್ಕಾರ ಮನ ಗಂಡು, ಆರ್ಥಿಕ ನೆರವಿಗಾಗಿ ಈ ಯೋಜನೆಯನ್ನು ಸಿದ್ಧಪಡಿಸಿರುವಂಥದ್ದು. ಜಾರಿ ಆದ ಕೆಲವೇ ದಿನಗಳಲ್ಲಿ ಸರ್ಕಾರ ಈ ಯೋಜನೆಗೆ ಎಳ್ಳು ನೀರು ಬಿಟ್ಟಿತು ಅಂದರೆ ಸ್ಥಗಿತಗೊಂಡಿತು. “ಜುಲೈ 2023ರ ಬಜೆಟ್ ನಲ್ಲಿ ರಾಜ್ಯ ಸರ್ಕಾರವು ಮತ್ತೆ ಈ ಯೋಜನೆಗೆ ಚಾಲನೆ ನೀಡಿತು”.
2026ರಲ್ಲಿ ಈ ಅನುಗ್ರಹ ಎಂಬುವ ಯೋಜನೆ ಅಡಿ ಕೆಲವು ಬದಲಾವಣೆ ಕೂಡ ಸರ್ಕಾರ ಮಾಡಿದೆ. ಅದರಲ್ಲಿ ರೈತರು ಸಾಕಿದ ಕುರಿಗಳು ತಮ್ಮ ಜೀವ ಕಳೆದುಕೊಂಡಾಗ ನೀಡುತಿದ್ದ ಸಹಾಯಧನವನ್ನ ಫೆಬ್ರವರಿಯಲ್ಲಿ ಹೆಚ್ಚು ಮಾಡಿದೆ.
ಯೋಜನೆಯ ಅನುಕೂಲ :-
ಸರ್ಕಾರವು ಯಾವುದೇ ಯೋಜನೆಗಳನ್ನು ಜಾರಿ ಮಾಡಿದರು ಕೂಡ ಪ್ರಮುಖವಾಗಿ ಅದರಿಂದ ರೈತರಿಗೆ ಆಗುವ ಅನುಕೂಲವನ್ನು ಮುಖ್ಯವಾಗಿ ತನ್ನ ಗಮನಕ್ಕೆ ತೆಗೆದುಕೊಳ್ಳುತ್ತದೆ ಇದೇ ರೀತಿ ಈ ಯೋಜನೆಯಲ್ಲಿ ಅನೇಕ ಅನುಕೂಲಗಳು ಕಂಡುಬಂದಿವೆ.
- ಯಾವ ರೈತರು ಕುರಿ ಮೇಕೆ ಅಥವಾ ಹಸುಗಳನ್ನು ಸಾಕಾಣಿಕೆ ಮಾಡಿದಾಗ ಸಾಕುಪ್ರಾಣಿಗಳು ಆಕಸ್ಮಿಕವಾಗಿ ಮರಣ ಹೊಂದಿದರೆ ಈ ಯೋಜನೆ ಅಡಿಯಲ್ಲಿ ಸರ್ಕಾರವು ಆರ್ಥಿಕ ನಷ್ಟವನ್ನ ತುಂಬಿ ಕೊಡುತ್ತದೆ.
- 2026ನೇ ಬಜೆಟ್ ನಲ್ಲಿ ಈ ಯೋಜನೆಯ ಪರಿಹಾರ ಮೊತ್ತವನ್ನು ಹೆಚ್ಚಿಸಲಾಗಿದೆ. ಆರು ತಿಂಗಳಿಗಿಂತ ಮೇಲ್ಪಟ್ಟ ಕುರಿ ಅಥವಾ ಮೇಕೆಗಳ ಸಾವಿಗೆ ಸುಮಾರು 7,500 ವರೆಗೆ ಸಹಾಯ ಧನ ಸಹಾಯ ರೈತರಿಗೆ ಸಿಗುತ್ತದೆ.
- ಕೇಳವು ಬಡ ಕುಟುಂಬದ ರೈತರು ಸಾಲ ಮಾಡಿ ಕುರಿ ಮರಿಗಳನ್ನ ತಂದು ಸಾಕಾಣಿಕೆ ಮಾಡುತ್ತಿರುತ್ತಾರೆ, ಇಂತ ಸಂದರ್ಭದಲ್ಲಿ ಇತರೆ ರೋಗಗಳಿಂದ ಅಥವಾ ಆಕಸ್ಮಿಕವಾಗಿ ಮೃತಪಟ್ಟಾಗ ಉಂಟಾಗುವ ಸಂಕಷ್ಟಕ್ಕೆ ಯೋಜನೆಯು ದೊಡ್ಡ ಆಸರೆಯಾಗಿದೆ.
- ಸಾಮಾನ್ಯವಾಗಿ ವಿಮೆ ಇಲ್ಲದ ಸಾಕುಪ್ರಾಣಿಗಳು ಮೃತಪಟ್ಟಾಗ ಯಾವುದೇ ಪರಿಹಾರ ಸಿಗುವುದಿಲ್ಲ. ಆದರೆ ಈ ಯೋಜನೆಯ ಮೂಲಕ ವಿಮೆಗಳಿಗೆ ಒಳಪಡಿದೆ ಇರುವಂತಹ ಪ್ರಾಣಿಗಳಿಗೂ ಕೂಡ ಸಹಾಯಧನ ದೊರೆಯು ತ್ತದೆ.
- ಕುರಿಗಾಹಿಗಳಿಗೆ ಸರ್ಕಾರದಿಂದ ಆರ್ಥಿಕ ಬೆಂಬಲ ಸಿಕ್ಕಂತಾಗುತ್ತದೆ ಮತ್ತು ತೀರಿಕೊಂಡ ಕುರಿಯ ಬದಲಾಗಿ ಇನ್ನೊಂದು ಕುರಿಯನ್ನು ತಂದು ಸಾಕಾಣಿಕೆ ಮಾಡಲು ಸಹಕಾರಿಯಾಗಿದೆ.
2026 ರಲ್ಲಿ ಬದಲಾದ, ಕುರಿ ಮರಣ ಹೊಂದಿದಲ್ಲಿ ಕುರಿಗಾಹಿಗಳಿಗೆ ಸಿಗುವ ಸಹಾಯಧನ ಎಷ್ಟು ಗೊತ್ತ ?
- 3-6 ತಿಂಗಳು ತಿಂಗಳ ಒಳಗೆ ಇರುವ ಕುರಿ ಮರಿಗಳು ಮರಣ ಹೊಂದಿದಲ್ಲಿ ₹3,500 ಪರಿಹಾರ ನೀಡುತಿದ್ದ ಸರ್ಕಾರ ಇದೀಗ 5,500 ಸಹಾಯಧನ ಹೆಚ್ಚಿಸಿದೆ.
- ಒಬ್ಬ ರೈತ ಸಾಕಿದ ಆರು ತಿಂಗಳಿಗಿಂತ ಮೇಲ್ಪಟ್ಟ ಕುರಿಗಳಿಗೆ ಮೊದಲು 5000 ಆರ್ಥಿಕ ಸಹಾಯಧನ ಮೊತ್ತವನ್ನು ನೀಡಲಾಗುತ್ತಿತ್ತು ಆದರೆ 2026ರಲ್ಲಿ ಸುಮಾರು ರೂ. ₹7,500 ಹೆಚ್ಚಿಸಲಾಗಿದೆ.
ಯಾರು ಅರ್ಜಿ ಸಲ್ಲಿಸಬಹುದು :-
- ಅನುಗ್ರಹ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕದ ನಿವಾಸಿಗಳಾಗಿರಬೇಕು.
- ಆಕಸ್ಮಿಕವಾಗಿ ಅಥವಾ ಇತರೆ ಸಾಂಕ್ರಾಮಿಕ ರೋಗಗಳಿಂದ ಕುರಿ ಮೇಕೆ ಹಾಡು ಅಥವಾ ಹಸು ಎಮ್ಮೆಗಳನ್ನು ಕಳೆದುಕೊಂಡಿರುವ ಪ್ರತಿಯೊಬ್ಬ ರೈತರು ಅರ್ಜಿ ಸಲ್ಲಿಸಬಹುದು.
- ಉತ್ಪಾದಕರ ಸಹಕಾರ ಸಂಘದ ಸದಸ್ಯರು ಹೆಚ್ಚಿನ ಸಂದರ್ಭದಲ್ಲಿ ಈ ಯೋಜನೆಗೆ ಸಂಘದಲ್ಲಿ ನೊಂದಾಯಿತರಾದರೆ ಸಂಘದಲ್ಲಿ ಹೆಚ್ಚಿನ ಸಂದರ್ಭದಲ್ಲಿ ಆದ್ಯತೆ ನೀಡಲಾಗುತ್ತದೆ.
- ಯಾವ ರೈತ ತಾನು ಸಾಕಿದ ಸಾಕು ಪ್ರಾಣಿಗಳಿಗೆ ಯಾವುದೇ ವಿಮೆ ಇಲ್ಲದ ಸಂದರ್ಭದಲ್ಲಿ ಮಾತ್ರ ಈ ಯೋಜನೆ ಅಡಿ ಪರಿಹಾರ ಸಿಗುತ್ತದೆ.
ಪ್ರಮುಖ ಮಾನದಂಡ :-
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರಾಣಿಗಳು ಸಿಡಿಲು, ಪ್ರವಾಹ, ಕಾಡುಪ್ರಾಳಿದ್ದಾಳಿ, ಅಪಘಾತ ಅಥವಾ ಇತರೆ ಸಕ್ರಾಮಿಕ ರೋಗಗಳಿಂದ ಮೃತಪಟ್ಟಲ್ಲಿ ಮಾತ್ರ ಸಹಾಯಧನ ರೈತರಿಗೆ ಸಿಗತಕ್ಕದ್ದು.
- ಕನಿಷ್ಠ ಮೂರು ತಿಂಗಳ ಮೇಲ್ಪಟ್ಟ ಕುರಿ ಅಥವಾ ಮೇಕೆ ಮರಿಗಳು ಮೃತಪಟ್ಟಿರಬೇಕು.
- ಪ್ರಾಣಿಯ ಮರಣೋತ್ತರ ಪರೀಕ್ಷೆಯ ಮೊದಲು ಮತ್ತು ನಂತರ ಜಿಪಿಎಸ್ ಆಧಾರಿತ ಫೋಟೋಗಳನ್ನು ಹೊಂದಿರಬೇಕು.
- ಪ್ರಾಣಿ ಮೃತಪಟ್ಟ ತಕ್ಷಣ ಪಶು ವೈದ್ಯರಿಂದ ಮರಣೋತ್ತರ ಪರೀಕ್ಷೆ ಮಾಡಿಸಿ ಅವರಿಂದ ವರದಿ ಪಡೆದಿರಬೇಕು.
“2026ರಲ್ಲೂ ಕುರಿಗಾಹಿಗಳ ಕೈಬಿಡದ ಕರ್ನಾಟಕ ಸರ್ಕಾರ”
ಅಗತ್ಯ ದಾಖಲೆಗಳು :-
- ಬ್ಯಾಂಕ್ ಪಾಸ್‌ಬುಕ್
- ಪಶುವೈದ್ಯರ ವರದಿ
- ಆಧಾರ್ ಕಾರ್ಡ್
- ಸತ್ತ ಪ್ರಾಣಿಯ ಫೋಟೋ
| ಗಮನಿಸಬೇಕಾದ ಮುಖ್ಯ ಅಂಶ : ಕುರಿ ಅಥವಾ ಮೇಕೆ ಸದ್ದ 24 ರಿಂದ 48 ಗಂಟೆಯೊಳಗೆ ಪಶು ವೈದ್ಯರಿಗೆ ಮಾಹಿತಿ ನೀಡಿ ಮರೋನೋತ್ತರ ಪರೀಕ್ಷೆಯನ್ನು ನಡೆಸಿ ತುಂಬಾ ತಡವಾದರೆ ವರದಿ ನೀಡಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ನೀವು ಈಗಾಗಲೇ ನಿಮ್ಮ ಕುರಿ ಅಥವಾ ಮೇಕೆಗಳಿಗೆ ಖಾಸಗಿ ವಿಮೆ ಮಾಡಿಸಿದರೆ ಮತ್ತು ಅದರ ಹಣ ಪಡೆದಿದ್ದರೆ ಈ ಯೋಜನೆ ಅಡಿ ಯುವಗಳ ಪಡೆಯಲು ಅರ್ಹರಾಗಿರುವುದಿಲ್ಲ. ಹಣವು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತದೆ ಆದ್ದರಿಂದ ನಿಮ್ಮ ಬ್ಯಾಂಕ್ ಖಾತೆಗೆ ಆಧಾರದ ಕಡ್ಡಾಯವಾಗಿ ಲಿಂಕ್ ಮಾಡಿರಬೇಕು. |
ಅರ್ಜಿ ಸಲ್ಲಿಸುವುದು ಹೇಗೆ :-
ಈ ಯೋಜನೆಗೆ ಅರ್ಜಿ ಸಲ್ಲಿಸಿ ಲಾಭ ಪಡೆಯುವ ರೈತರು ಆನ್ಲೈನ್ ಮತ್ತು ಆಫ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸುವ ಅವಕಾಶವನ್ನು ಸರ್ಕಾರ ಮಾಡಿಕೊಟ್ಟಿದೆ
- ರೈತರು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮುಂದುವರಿಸಲು ಈ ಕೆಳಗಿನ ಹಂತವನ್ನು ಅನುಸರಿಸಿ
- ಪ್ರಿಯ ಅರ್ಜಿದಾರರೇ ಮೊದಲು ಕರ್ನಾಟಕ ಸೇವಾ ಸಿಂಧು ಪೋರ್ಟಲ್‌ಗೆ ಹೋಗಿ.
- ನೀವು ಹೊಸ ಬಳಕೆದಾರರಾಗಿದ್ದರೆ, ‘New User? Register Here’ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಆಧಾರ್ ಸಂಖ್ಯೆ ಮತ್ತು ಅದಕ್ಕೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಬಳಸಿ ನೋಂದಾಯಿಸಿಕೊಳ್ಳಿ.
- ನೊಂದಣಿ ಮುಗಿದ ನಂತರ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಓಟಿಪಿ ಬಳಸಿ ಲಾಗಿನ್ ಆಗಿ.
- ಲಾಗಿನ್ ಆದ ನಂತರ, “View All Available Services” ಮೇಲೆ ಕ್ಲಿಕ್ ಮಾಡಿ
- ಸರ್ಚ್ ಕಾಲಂನಲ್ಲಿ ಅನುಗ್ರಹ ಎಂಬ ವೆಬ್ಸೈಟ್ ಸರ್ಚ್ ಮಾಡಿ.
- ಅರ್ಜಿ ಫಾರ್ಮೆಟ್ ನಲ್ಲಿ ಕುರಿ ಅಥವಾ ಮೇಕೆ ಸಾವಿನ ವಿವರವನ್ನು ನಮೂದಿಸಿ ಹಾಗೆ ಪಶು ವೈದ್ಯರು ನೀಡಿದ ಮರಣೋತ್ತರ ಪರೀಕ್ಷೆ ವರದಿಯನ್ನ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ನಂತರದಲ್ಲಿ ಸತ್ತ ಪ್ರಾಣಿಯ ಜಿಪಿಎಸ್ ಫೋಟೋವನ್ನು ಅಪ್ಲೋಡ್ ಮಾಡಿ.
- ಕೊನೆಯಲ್ಲಿ ಎಲ್ಲ ವಿವರ ಸರಿ ಇದೆಯೇ ಎಂದು ಪರಿಶೀಲನೆ ಮಾಡಿ Submit ಬಟ್ಟನ್ ಮೇಲೆ ಕ್ಲಿಕ್ ಮಾಡಿ.
- ಅರ್ಜಿ ಸಲ್ಲಿಸಿದ ನಂತರ ಒಂದು ಪ್ರಕೃತಿ ಸಂಖ್ಯೆ ದೊರೆಯುತ್ತದೆ ಅದನ್ನು ಸ್ಕ್ರೀನ್ಶಾಟ್ ತೆಗೆದು ಇಟ್ಟುಕೊಳ್ಳಿ.
ಆಫ್ ಲೈನ್ ಅರ್ಜಿ ಸಲ್ಲಿಸುವ ವಿಧಾನ :-
ಆನ್ಲೈನ್ ಪ್ರಕ್ರಿಯೆಗಿಂತ ಆಫ್ಲೈನ್ ಅರ್ಜಿ ಸಲ್ಲಿಸುವ ವಿಧಾನ ತುಂಬಾ ಸರಳವಾಗಿದೆ ಮತ್ತು ಗ್ರಾಮೀಣ ಭಾಗದ ಜನರು ಹೆಚ್ಚಾಗಿ ಇದನ್ನ ಅನುಸರಿಸುತ್ತಾರೆ.
- ಕುರಿ ಅಥವಾ ಮೇಕೆ ಸತ್ತ ತಕ್ಷಣ ನಿಮ್ಮ ಹತ್ತಿರದ ಗ್ರಾಮಕ್ಕೆ ಸಂಬಂಧಿಸಿದ ಸರ್ಕಾರಿ ಪಶು ಆಸ್ಪತ್ರೆಗೆ ಹೋಗಿ ವಿಷಯ ತಿಳಿಸಿ ಕರ್ನಾಟಕ ನಿಯಮದಂತೆ ಪಶು ವೈದ್ಯರಿಂದ ಮಾಹಿತಿಯನ್ನು ಪಡೆಯಿರಿ.
- ನಂತರ ಪಶು ವೈದ್ಯಧಿಕಾರಿಗಳು ನಿಮ್ಮ ಸ್ಥಳಕ್ಕೆ ಬಂದು ಸತ್ತ ಪ್ರಾಣಿಯನ್ನು ಪರಿಶೀಲನೆ ಮಾಡಿ ಮತ್ತು ಮರಣೋತ್ತರ ಪರೀಕ್ಷೆ ಮಾಡುತ್ತಾರೆ.
- ಪಶು ಆಸ್ಪತ್ರೆಯಲ್ಲಿ ಅನುಗ್ರಹ ಯೋಜನೆಯ ಅರ್ಜಿ ನಮೂನೆ ಸಿಗುತ್ತದೆ ಅದನ್ನು ಕೇಳಿ ಪಡೆದು ಸರಿಯಾಗಿ ಬರ್ತಿ ಮಾಡಿ.
- ಪಶು ಆಸ್ಪತ್ರೆಯಲ್ಲಿ ಅನುಗ್ರಹ ಯೋಜನೆಯ ಅರ್ಜಿ ನಮೂನೆ ಸಿಗುತ್ತದೆ ಅದನ್ನು ಕೇಳಿ ಪಡೆದು ಸರಿಯಾಗಿ ಬರ್ತಿ ಮಾಡಿ.
- ಪಶು ವೈದ್ಯರು ಮರಣೋತ್ತರ ಪರೀಕ್ಷೆ ವರದಿಯನ್ನು ಅರ್ಜಿಗೆ ಲಗತಿಸಿ ತಮ್ಮ ಸಹಿ ಮತ್ತು ಮುದ್ರಿಕೆ (a stamp/seal device) ಹಾಕಿ ಇಲಾಖೆಯ ಮುಂದಿನ ಪ್ರಕ್ರಿಯೆಗೆ ಕಳುಹಿಸುತ್ತಾರೆ.
- ಅರ್ಜಿ ಪ್ರಕ್ರಿಯೆ ಪೂರ್ಣಗೊಂಡ ನಂತರ ವೈದ್ಯನಿನ ಅಥವಾ ಆಸ್ಪತ್ರೆಯಿಂದ ಸಣ್ಣ ಪ್ರಕೃತಿ ಚೀಟಿ ಪಡೆಯುವುದು ಒಳ್ಳೆಯದು.
ಹೆಚ್ಚಿನ ಮಾಹಿತಿಗಾಗಿ : ಸಹಾಯವಾಣಿ (Helpline) ಪಶುಪಾಲನಾ ಇಲಾಖೆಯ ರಾಜ್ಯ ಮಟ್ಟದ ಸಹಾಯವಾಣಿ ಸಂಖ್ಯೆ 8277100200 ಕ್ಕೆ ಕರೆ ಮಾಡಿ.
ಕೊನೆಯ ಕಿವಿ ಮಾತು :
ಕುರಿ ತವ ಮೇಕೆ ಸತ್ತ ತಕ್ಷಣನೆ ನಿಮ್ಮ ಹತ್ತಿರದ ಪಶು ವೈದ್ಯರನ್ನ ಬರಹೇಳಿ ಮರಣೋತ್ತರ ಪರೀಕ್ಷೆ ನಡಿಸಿದಲ್ಲಿ ಮಾತ್ರ ನೇರವಾಗಿ ಹಣ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುವುದು ಇಲ್ಲವಾದಲ್ಲಿ ಯೋಜನೆ ಲಾಭ ನಿಮ್ಮಗೆ ಸಿಗುವುದಿಲ್ಲ. ಇಂತ ಯೋಜನೆಗಳು ರೈತರಿಗೆ ಇನ್ನಷ್ಟು ಸಿಗುವುದು ಉತ್ತಮ ಯಾಕೆಂದರೆ ಕೆಲವು ಕುರಿ ಗಾಯಿಗಳು ತಮ್ಮ ಜೀವನಿಪಯಕ್ಕೆ ಕುರಿ ಸಾಕಾಣಿಕೆ ಮಾಡಿರುತ್ತಾರೆ ಹಾಗಾಗಿ ಈ ಯೋಜನೆ ಅವರಿಗೆ ಬೆನ್ನೆಲುಬಾಗಿ ನಿಂತಿದೆ.







