ಹೈನುಗಾರಿಕೆ (ಡೈರಿ ಫಾರ್ಮಿಂಗ್) ಯೋಜನೆ | Animal Husbandry Department Schemes

On: Friday, December 26, 2025 12:23 PM
Animal Husbandry Department Schemes

ಕರ್ನಾಟಕದಲ್ಲಿ ಪಶುಪಾಲನೆ ಮತ್ತು ಸಂಬಂಧಿಸಿದ ಉದ್ಯಮಗಳನ್ನು ಪ್ರಾರಂಭಿಸಲು ಅಥವಾ ವಿಸ್ತರಿಸಲು ಸರ್ಕಾರದ ಕಡೆಯಿಂದ ಹಲವಾರು ಯೋಜನೆಗಳು ಇದೀಗ ಲಭ್ಯವಿದೆ ಸಹಾಯ ಈ ಸಹಾಯಧನವನ್ನು ಪಡೆದುಕೊಂಡು ಹೈನುಗಾರಿಕೆ ಸೇರಿದಂತೆ ಇನ್ನಿತರ ಉದ್ಯಮವನ್ನು ಶುರು ಮಾಡಬಹುದು.

Animal Husbandry Department Schemes

ಹೈನುಗಾರಿಕೆಗೆ ಸೀಮಿತ ವಲ್ಲದೆ ಕುರಿ ಮೇಕೆ ಸಾಕಾಣಿಕೆ ಕೋಳಿ ಸಾಕಾಣಿಕೆ ಹಂದಿ ಸಾಕಾಣಿಕೆ ಯಂತ್ರೋಪಕರಣಗಳ ಖರೀದಿಗೆ ಮತ್ತು ಕೊಟ್ಟಿಗೆ ನಿರ್ಮಾಣ ಮಾಡುವುದಕ್ಕೆ ಸರ್ಕಾರದಿಂದ ವಿವಿಧ ರೀತಿಯಲ್ಲಿ ಸಹಾಯಧನವನ್ನ ನೀವು ಸಹ ಪಡೆದುಕೊಂಡು ಹೈನುಗಾರಿಕೆ ಅಥವಾ ನಿರ್ಮಾಣ ಮಾಡಲು ಹಣ ಬೇಕಾದರೆ ಈ ಕೆಳಗೆ ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ಫಾಲೋ ಮಾಡಿ ಆನ್ ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿ.

ಯೋಜನೆಯ ಅವಲೋಕನ :-

ಯೋಜನೆಯ ಹೆಸರು ಹೈನುಗಾರಿಕೆ (ಡೈರಿ ಫಾರ್ಮಿಂಗ್) ಯೋಜನೆ
ಯೋಜನೆಯ ಲಾಭ ಸಹಾಯಧನ ಮೊತ್ತ: ರೂ. 1,25,000 ವರೆಗೆ ಅಥವಾ ಎರಡು ಹಸು/ಎಮ್ಮೆಗಳ ಒಟ್ಟು ವೆಚ್ಚದ 50%
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್
ಅರ್ಜಿಸಲ್ಲಿಸಲು ಅರ್ಹತೆ ಕರ್ನಾಟಕದ ನಾಗರೀಕ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಇತರ ಆರ್ಥಿಕವಾಗಿ ಹಿಂದುಳಿದ ವರ್ಗಗಳ (1, 2A, 2B, 3A, 3B)
ಹೆಚ್ಚಿನ ಪ್ರಯೋಜನಗಳುಸಹಾಯಧನದ ಜೊತೆಗೆ ತರಬೇತಿ, ಪ್ರಾಣಿ ವಿಮಾ ರಕ್ಷಣೆ ಮತ್ತು ಹಾಲಿಗೆ ಸರಿಯಾದ ಮಾರುಕಟ್ಟೆ ದೊರಕಿಸಿಕೊಡುವ ವ್ಯವಸ್ಥೆಯನ್ನು ಒದಗಿಸಲಾಗುತ್ತದೆ
Animal Husbandry Department Schemes

ಈ ಯೋಜನೆಯ ಬಗ್ಗೆ :-

ಈ ಯೋಜನೆಯ ಬಗ್ಗೆ ಹೇಳುವುದಾದರೆ ಸಮಗ್ರ ಕೃಷಿ ಪದ್ಧತಿಯೊಂದಿಗೆ ಪಶು ಸಂಗೋಪನೆ ಹಾಗೂ ಕೊಟ್ಟಿಗೆ ನಿರ್ಮಾಣಕ್ಕೆ ಹಾಗೂ ಜಾನುವಾರಿಗಳ ಖರೀದಿಗೆ ಹಾಗೂ ಮೇವು ಅಭಿವೃದ್ಧಿ ಯೋಜನೆಯನ್ನು ಕೈಗೊಳ್ಳಲು ಹಾಗೂ ಉಚಿತ ಆರೋಗ್ಯ ಸೇವೆಗಳನ್ನ ಒದಗಿಸಿಕೊಳ್ಳಲು ಈ ಎಲ್ಲಾ ಯೋಜನೆಯ ಲಾಭವನ್ನು ನೀವು ಪಡೆಯಬಹುದು.

ಈ ಯೋಜನೆಯ ಬಗ್ಗೆ ಈ ಕೆಳಗೆ ಎಲ್ಲ ಮಾಹಿತಿ ನೀಡಲಾಗಿದೆ ಹೈನುಗಾರಿಕೆಗೆ ಹೊರತಾಗಿಯೂ ರೈತರು ಮತ್ತು ಗ್ರಾಮೀಣ ಉದ್ಯಮಿಗಳು ಇತರ ಕ್ಷೇತ್ರಗಳಲ್ಲಿ ಸಹ ಸಹಾಯಧನವನ್ನು ಪಡೆಯಬಹುದು ಇನ್ನಿತರ ಪಂಗಡದವರು ಸಹ ಅರ್ಜಿಯನ್ನು ಸಲ್ಲಿಸಬಹುದು ಅಷ್ಟೇ ಇಲ್ಲದೆ ಈ ಒಂದು ಯೋಜನೆಯ ಲಾಭವನ್ನು ವಿವಿಧ ರೀತಿಯಾಗಿ ಪಡೆದುಕೊಳ್ಳಬಹುದು.

ಯೋಜನೆಯ ಉದ್ದೇಶ (Animal Husbandry Department Schemes):-

ಪ್ರಾಣಿಗಳಿಗೆ ಸರಿಯಾದ ವಸತಿ ಮತ್ತು ಆರೋಗ್ಯಕರ ಪರಿಸರ ಒದಗಿಸಲು ನೆರವು.

ಕೃಷಿಯ ಜೊತೆಗೆ ಹೈನುಗಾರಿಕೆ, ಮೀನುಗಾರಿಕೆ, ಕೋಳಿ ಸಾಕಣೆ ಮುಂತಾದ ಉಪಕಸುಬುಗಳನ್ನು ಉತ್ತೇಜಿಸುವುದು. ಇದರಿಂದ ರೈತರಿಗೆ ಬಹುಮುಖ ಆದಾಯ ಸೃಷ್ಟಿಯಾಗುತ್ತದೆ.

ಹಾಲುಕರೆಯುವ ಯಂತ್ರ, ಫೀಡ್ ಮಿಕ್ಸರ್, ಚಾಫ್ ಕಟರ್ ಮುಂತಾದ ಯಂತ್ರೋಪಕರಣಗಳ ಖರೀದಿಗೆ ಸಹಾಯಧನ ನೀಡುವುದು.

ಪ್ರಾಣಿಗಳು ಅನಾರೋಗ್ಯ ಅಥವಾ ಸಾವಿನ ಸಂದರ್ಭದಲ್ಲಿ ಆರ್ಥಿಕ ನಷ್ಟದಿಂದ ರಕ್ಷಣೆ ನೀಡುವುದು.

ಪಶುಗಳಿಗೆ ಕಾಲು-ಬಾಯಿ ರೋಗ (FMD) ಮುಂತಾದ ಕೆಲವು ಉಚಿತ ಲಸಿಕೆಗಳು ಮತ್ತು ಕಡಿಮೆ ಬೆಲೆಯಲ್ಲಿ ಚಿಕಿತ್ಸಾ ಸೌಲಭ್ಯ.

ಹಸಿರು ಮೇವಿನ ಬೀಜಗಳು ಮತ್ತು ನೇಪಿಯರ್ ಹುಲ್ಲು ಕೃಷಿಗೆ ಬೆಂಬಲ ನೀಡುವುದು.

ಹೈನುಗಾರಿಕೆ ಡೈರಿ ಫಾರ್ಮಿಂಗ್ ಯೋಜನೆಯ ಶುರು ಮಾಡಲು ಅರ್ಹತೆ:-

ಈ ಯೋಜನೆಯ ಲಾಭವನ್ನು ಪಡೆಯಬೇಕು ಎಂದವರು ಈ ಕೆಳಗಿನ ಅರ್ಹತೆಯನ್ನು ಹೊಂದಿರಬೇಕಾಗುತ್ತದೆ

  • ಗ್ರಾಮೀಣ ಪ್ರದೇಶದಲ್ಲಿ ಕನಿಷ್ಠ ಒಂದು ಎಕರೆ ಕೃಷಿ ಜಮೀನನ್ನ ಹೊಂದಿರಬೇಕು
  • ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು
  • ನಿಗದಿತ ಆದಾಯ ಮಿತಿಯನ್ನು ಹೊಂದಿರಬೇಕು
  • ಇತರ ಹಿಂದುಳಿದ ವರ್ಗದವರಿಗೆ ಮಹಿಳಾ ಉದ್ಯಮಿಗಳಿಗೆ ಅಥವಾ ಸಣ್ಣ ರೈತರಿಗೆ ಹೆಚ್ಚಿನ ಸಹಾಯಧನವನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು (Animal Husbandry Department Schemes) :-

  • ಪಾಸ್ಪೋರ್ಟ್ ಅಳತೆಯ ಭಾವಚಿತ್ರ
  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಪಾನ್ ಕಾರ್ಡ್
  • ಆದಾಯ ಪ್ರಮಾಣ ಪತ್ರ
  • ಪಹಣಿ ಹಾಗೂ ಪ್ರಾಜೆಕ್ಟ್ ರಿಪೋರ್ಟ್ ಇನ್ನಿತರ ಆಗುತ್ತೆ ದಾಖಲೆಗಳು

ಪ್ರಯೋಜನ ಪಡೆಯಲು ಸಲಹೆಗಳು (Animal Husbandry Department Schemes):-

  1. ನಿಖರವಾದ ಮಾಹಿತಿಗಾಗಿ ಸಂಪರ್ಕಿಸಿ: ವಿವಿಧ ಯೋಜನೆಗಳನ್ನು ವಿವಿಧ ಇಲಾಖೆಗಳು (ಸಮಾಜ ಕಲ್ಯಾಣ, ಕೃಷಿ, ಪಶುಸಂಗೋಪನೆ) ನಿರ್ವಹಿಸುತ್ತವೆ. ನಿಮಗೆ ಆಸಕ್ತಿಯಿರುವ ನಿರ್ದಿಷ್ಟ ಯೋಜನೆಯ ಕುರಿತು ನಿಮ್ಮ ತಾಲ್ಲೂಕಿನ ಅಥವಾ ಜಿಲ್ಲಾ ಸಂಬಂಧಿತ ಇಲಾಖೆ ಕಚೇರಿಯನ್ನು ಸಂಪರ್ಕಿಸಿ ಅಥವಾ ಅಧಿಕೃತ ವೆಬ್ಸೈಟ್ ಪರಿಶೀಲಿಸಿ.
  2. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಗಮನಿಸಿ: ಪ್ರತಿ ಯೋಜನೆಗೂ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ (ಡೆಡ್ಲೈನ್) ಇರುತ್ತದೆ. ಹೈನುಗಾರಿಕೆ ಯೋಜನೆಗೆ ಸೆಪ್ಟೆಂಬರ್ 10, 2025 ರವರೆಗೆ ಸಮಯ ಇದೆ.
  3. ಬ್ಯಾಂಕ್ ಸಾಲ + ಸಬ್ಸಿಡಿ ಸೌಲಭ್ಯ: ಹಲವು ಯೋಜನೆಗಳು ಸಹಾಯಧನದ ಜೊತೆಗೆ ಬ್ಯಾಂಕ್ ಸಾಲ ಪಡೆಯಲು ಸಹಾಯ ಮಾಡುತ್ತವೆ. ಬ್ಯಾಂಕಿನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಈ ಸಬ್ಸಿಡಿ ಯೋಜನೆಗಳ ಬಗ್ಗೆ ಮಾಹಿತಿ ಕೊಡಬೇಕು.

ಅರ್ಜಿ ಸಲ್ಲಿಸುವ ವಿಧಾನ:-

ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳನ್ನು ಇಟ್ಟುಕೊಂಡು ಆನೆನಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ತಪ್ಪದೆ ಬರ್ತಿ ಮಾಡಿ ಆನ್ಲೈನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ತೀರ್ಮಾನ :-

ಈ ಯೋಜನೆಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಸಹಾಯಧನವನ್ನ ಪಡೆಯಲು ಈ ಮೇಲಿನ ಎಲ್ಲ ಮಾಹಿತಿಯನ್ನು ನಿಖರವಾಗಿ ಓದಿಕೊಂಡು ಇತ್ತೀಚಿನ ಎಲ್ಲಾ ದಾಖಲೆಗಳೊಂದಿಗೆ ಆನ್ಲೈನ್ ಮುಖಾಂತರ ಅರ್ಜಿಯನ್ನ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ.


Join WhatsApp

Join Now

Join Telegram

Join Now

Leave a Comment