Airports Authority of India Recruitment , AAI 2025 ನೇಮಕಾತಿ, Airports authority of india recruitment apply online. Airport Authority of India Recruitment 2026, AAI Recruitment 2026 apply online, Airport Authority of India Recruitment for Ground Staff, AAI Recruitment 2026 Notification PDF, AAI Recruitment 2026, AAI Recruitment 2026 qualification
Airports Authority of India Recruitment
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (Airports Authority of India) ಸಂಸ್ಥೆಯಲ್ಲಿ ಉದ್ಯೋಗ ಮಾಡಲು ಬಯಸುತ್ತಿರುವವರಿಗೆ ಇಲ್ಲಿದೆ ಸುವರ್ಣ ಅವಕಾಶ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು AAI – 2025 ರ ಅಧಿಕೃತ ಅಧಿಸೂಚನೆಯ ಮೂಲಕ ಸೀನಿಯರ್ ಮತ್ತು ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.
ಈ ಹುದ್ದೆಗಳಿಗೆ ಸಂಬಂಧಿಸಿದಂತೆ ನಮ್ಮ ವೆಬ್ ಸೈಟ್ ಉದ್ಯೋಗ ಸಲಹೆ ಯಲ್ಲಿ ಸಂಪೂರ್ಣ ಮಾಹಿತಿಯನ್ನು ನೋಡಬಹುದು.ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ 12-12-2025 ರಿಂದ 11-01-2026 ರ ವರೆಗೂ ಅವಕಾಶವಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಿ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ, ಅರ್ಹತಾ ಮಾನದಂಡ ಪ್ರಮುಖ ದಾಖಲೆಗಳು ಹಾಗೂ ಇನ್ನಿತರೆ ಮಾಹಿತಿಗಳ ಬಗ್ಗೆ ಸಂಪೂರ್ಣವಾಗಿ ಕೆಳಗೆ ನೀಡಿರುತ್ತೇವೆ ಅದನ್ನು ಓದಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ.
ಹುದ್ದೆಗಳ ಅವಲೋಕನ: (Airports Authority of India Recruitment)
| ಸಂಸ್ಥೆಯ ಹೆಸರು | ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ |
| ಹುದ್ದೆಯ ಹೆಸರು | ಸೀನಿಯರ್ ಮತ್ತು ಜೂನಿಯರ್ ಅಸಿಸ್ಟೆಂಟ್ |
| ಹುದ್ದೆಯ ಸಂಖ್ಯೆ | 14 |
| ಉದ್ಯೋಗ ಸ್ಥಳ | ಅಖಿಲ ಭಾರತ |
| ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 12-12-2025 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 11-01-2026 |
ಸಂಕ್ಷಿಪ್ತ ಮಾಹಿತಿ:
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಒಟ್ಟು 14 ಸೀನಿಯರ್ ಮತ್ತು ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಡಿಪ್ಲೊಮಾ ಹಾಗೂ ಪದವಿಯನ್ನು ಹೊಂದಿರುವ 18 ರಿಂದ 30 ವರ್ಷದೊಳಗಿನ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಹರಾಗಿರುತ್ತಾರೆ.

ಹುದ್ದೆಗಳ ವಿವರ:
| ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
| ಸೀನಿಯರ್ ಅಸಿಸ್ಟೆಂಟ್ (ಎಲೆಕ್ಟ್ರಾನಿಕ್ಸ್) | 05 |
| ಜೂನಿಯರ್ ಅಸಿಸ್ಟೆಂಟ್ (HR) | 02 |
| ಜೂನಿಯರ್ ಅಸಿಸ್ಟೆಂಟ್ (ಅಗ್ನಿಶಾಮಕ ಸೇವೆಗಳು) | 07 |
ಶೈಕ್ಷಣಿಕ ಅರ್ಹತೆ:
- ಸೀನಿಯರ್ ಅಸಿಸ್ಟೆಂಟ್ (ಎಲೆಕ್ಟ್ರಾನಿಕ್ಸ್) ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
- ಜೂನಿಯರ್ ಅಸಿಸ್ಟೆಂಟ್ (HR) ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಪದವಿಯನ್ನು ಪೂರ್ಣಗೊಳಿಸಿರಬೇಕು.
- ಜೂನಿಯರ್ ಅಸಿಸ್ಟೆಂಟ್ (ಅಗ್ನಿಶಾಮಕ ಸೇವೆಗಳು)ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ 10th/ 12th/ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
ವಯೋಮಿತಿ:
- ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ನೇಮಕಾತಿಯ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ವರ್ಷ ವಯೋಮಿತಿಯನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ:
- OBC, ಮಾಜಿ ಸೈನಿಕ ಅಭ್ಯರ್ಥಿಗಳಿಗೆ: 3 ವರ್ಷ
- ST ಅಭ್ಯರ್ಥಿಗಳಿಗೆ: 5 ವರ್ಷ
- PwBD ಅಭ್ಯರ್ಥಿಗಳಿಗೆ: 10 ವರ್ಷ
- PwBD (ST) ಅಭ್ಯರ್ಥಿಗಳಿಗೆ: 15 ವರ್ಷ
ಅರ್ಜಿ ಶುಲ್ಕ:
ಸಾಮಾನ್ಯ/ EWS/OBC ಅಭ್ಯರ್ಥಿಗಳಿಗೆ ರೂ. 1,000 ಅರ್ಜಿ ಶುಲ್ಕ ಇರುತ್ತದೆ.
ಮಹಿಳೆಯರು/SC/ST/PwD/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ವೇತನ ಶ್ರೇಣಿ:
| ಹುದ್ದೆಯ ಹೆಸರು | ವೇತನ ಶ್ರೇಣಿ |
| ಸೀನಿಯರ್ ಅಸಿಸ್ಟೆಂಟ್ (ಎಲೆಕ್ಟ್ರಾನಿಕ್ಸ್) | ರೂ. 36,000 ದಿಂದ 1,10,000 ದ ವರೆಗೆ |
| ಜೂನಿಯರ್ ಅಸಿಸ್ಟೆಂಟ್ (HR) | ರೂ. 31,000 ದಿಂದ 92,000 ದ ವರೆಗೆ |
| ಜೂನಿಯರ್ ಅಸಿಸ್ಟೆಂಟ್ (ಅಗ್ನಿಶಾಮಕ ಸೇವೆಗಳು) | ರೂ. 31,000 ದಿಂದ 92,000 ದ ವರೆಗೆ |
ಅಗತ್ಯ ದಾಖಲೆಗಳು:
- ಶೈಕ್ಷಣಿಕ ಪ್ರಮಾಣಪತ್ರ
- ಅಂಕಪಟ್ಟಿ
- ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಫೋಟೋ
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಓಟರ್ ಐಡಿ
ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ ವೆಬ್ ಸೈಟ್ https://www.aai.aero/en ಗೆ ಭೇಟಿನೀಡಿ
- AAI ನೇಮಕಾತಿ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ, ಸೂಚಿಸಿದ ಅರ್ಜಿ ನಮೂನೆಯನ್ನು ಭರ್ತಿಮಾಡಿ
- ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿಮಾಡಿರುವ ಬಗ್ಗೆ ಖಚಿತಪಡಿಸಿಕೊಳ್ಳಿ
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ 11-01-2026 ರೊಳಗೆ ಅರ್ಜಿಯನ್ನು ಸಲ್ಲಿಸಿ.
ಪ್ರಮುಖ ದಿನಾಂಕಗಳು:
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 12-12-2025
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-01-2026
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 11-01-2026
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ
- ದಾಖಲಾತಿ ಪರಿಶೀಲನೆ
- ಕಂಪ್ಯೂಟರ್ ಆಧಾರಿತ ಪರೀಕ್ಷೆ
ಪ್ರಮುಖ ಲಿಂಕ್ ಗಳು:
| ಅಧಿಸೂಚನೆಯ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್ ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ತೀರ್ಮಾನ:
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಸೀನಿಯರ್ ಮತ್ತು ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು,ಅಭ್ಯರ್ಥಿಗಳು ಅರ್ಹತಾ ಮಾನದಂಡವನ್ನು ಪೂರೈಸುತ್ತಾರೆಯೋ? ಇಲ್ಲವೋ? ಎಂದು ಖಚಿತಪಡಿಸಿಕೊಂಡು ದಿನಾಂಕ 11-01-2026 ರೊಳಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ, ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.





