ಕರ್ನಾಟಕ ಹೈಕೋರ್ಟ್ ನೇಮಕಾತಿ । ಸಂಪೂರ್ಣ ಮಾಹಿತಿ | Karnataka High Court Recruitment

On: Wednesday, December 24, 2025 7:46 AM
Karnataka High Court Recruitment

ಕರ್ನಾಟಕ ಹೈಕೋರ್ಟ್ ಕಾನೂನು ಸಂಶೋಧನಾ ಸಹಾಯಕ ಹುದ್ದೆಗಳ (Karnataka High Court) ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಈ ಹುದ್ದೆಗೆ ಅರ್ಜಿ ಸಲ್ಲಿಸಲು 31-12-2025 ಕೊನೆಯ ದಿನಾಂಕವಾಗಿದೆ. ಬೆಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಕರ್ನಾಟಕ ಸರ್ಕಾರವು ಸುವರ್ಣ ಅವಕಾಶವನ್ನು ಕಲ್ಪಿಸಿದೆ.

Karnataka High Court Recruitment

ಈ ಹುದ್ದೆಗಳಿಗೆ ಸಂಬಂಧಿಸಿದಂತೆ ನಮ್ಮ ವೆಬ್ ಸೈಟ್ ಉದ್ಯೋಗ ಸಲಹೆ ಯಲ್ಲಿ ಸಂಪೂರ್ಣ ಮಾಹಿತಿಯನ್ನು ನೋಡಬಹುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ, ಅರ್ಹತಾ ಮಾನದಂಡ ಪ್ರಮುಖ ದಾಖಲೆಗಳು ಹಾಗೂ ಇನ್ನಿತರೆ ಮಾಹಿತಿಗಳ ಬಗ್ಗೆ ಸಂಪೂರ್ಣವಾಗಿ ಕೆಳಗೆ ನೀಡಿರುತ್ತೇವೆ ಅದನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಗಳ ಅವಲೋಕನ: (Karnataka High Court Recruitment)

ಸಂಸ್ಥೆಯ ಹೆಸರುಕರ್ನಾಟಕ ಹೈಕೋರ್ಟ್
ಹುದ್ದೆಯ ಹೆಸರುಕಾನೂನು ಸಂಶೋಧನಾ ಸಹಾಯಕ
ಹುದ್ದೆಯ ಸಂಖ್ಯೆ02
ಉದ್ಯೋಗ ಸ್ಥಳಬೆಂಗಳೂರು – ಕರ್ನಾಟಕ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-12-2025
Karnataka High Court Recruitment

ಸಂಕ್ಷಿಪ್ತ ಮಾಹಿತಿ:

ಕರ್ನಾಟಕ ಹೈಕೋರ್ಟ್ ನಲ್ಲಿ ಕಾನೂನು ಸಂಶೋಧನಾ ಸಹಾಯಕ ಹುದ್ದೆಗಳ ನೇಮಕಾತಿಗೆ ದಿನಾಂಕ 05-12-2025 ರಂದು ಅಧಿಸೂಚನೆಯನ್ನು ಹೊರಡಿಸಿದ್ದು, ಕಾನೂನು ಪದವೀಧರರು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಕಾನೂನು ಸಂಶೋಧನೆ ಮತ್ತು ನ್ಯಾಯಾಂಗ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ನಡೆಸಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳು ಕಾನೂನು ಸಂಶೋಧನಾ ಸಹಾಯಕ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ ಈ ಒಂದು ಕ್ಷೇತ್ರದಲ್ಲಿ ವೃತ್ತಿ ಅನುಭವವನ್ನು ಪಡೆದುಕೊಳ್ಳಿ.

Karnataka High Court Recruitment
Karnataka High Court Recruitment

ಹುದ್ದೆಗಳ ವಿವರ:

ಕಾನೂನು ಸಂಶೋಧನಾ ಸಹಾಯಕ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಇದಾಗಿದ್ದು, ಒಟ್ಟು 02 ಹುದ್ದೆಗಳಿಗೆ ನೇಮಕಾತಿಗೆ ಆನ್ಲೈನ್ ಅರ್ಜಿ.

ಶೈಕ್ಷಣಿಕ ಅರ್ಹತೆ:

  • ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿಯನ್ನು ಹೊಂದಿರಬೇಕು.
  • ಕಾನೂನು ಪದವಿಯಲ್ಲಿ ಕನಿಷ್ಠ 50% ಅಂಕಗಳನ್ನು ಪಡೆದಿರಬೇಕು.
  • ಕರಡು ರಚನೆ, ಅತ್ಯುತ್ತಮ ಸಂಶೋಧನೆ ಮತ್ತು ವಿಶ್ಲೇಷಣಾತ್ಮಕ ಕೌಶಲ್ಯವನ್ನು ಹೊಂದಿರಬೇಕು.
  • ಕಂಪ್ಯೂಟರ್ ಅಪ್ಲಿಕೇಶನ್ ಮತ್ತು ಕಾನೂನು ದತ್ತಸಂಚಯ (Legal Database) ಗಳ ಬಗ್ಗೆ ಜ್ಞಾನವನ್ನು ಹೊಂದಿರಬೇಕು.

ವಯೋಮಿತಿ:

  • ಅಧಿಕೃತ ಅಧಿಸೂಚನೆಯಲ್ಲಿ ನಿಗದಿಪಡಿಸಿರುವಂತೆ ವಯೋಮಿತಿ ಇರುತ್ತದೆ

ವಯೋಮಿತಿ ಸಡಿಲಿಕೆ:

  • ಕರ್ನಾಟಕ ಹೈಕೋರ್ಟ್ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

ವೇತನ ಶ್ರೇಣಿ:

  • ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಕರ್ನಾಟಕ ಹೈಕೋರ್ಟ್ ನಿರ್ಧರಿಸಿದಂತೆ ನಿಗದಿತ ಮಾಸಿಕ ವೇತನವನ್ನು ನೀಡಲಾಗುವುದು.
  • ವೇತನದ ಜೊತೆಗೆ ಯಾವುದೇ ಭತ್ಯೆ ಅನ್ವಯಿಸುವುದಿಲ್ಲ.

ಅಗತ್ಯ ದಾಖಲೆಗಳು:

  • ಕಾನೂನು ಪದವಿ ಪ್ರಮಾಣಪತ್ರ
  • ಅಂಕಪಟ್ಟಿ
  • ರೆಸ್ಯೂಮ್
  • ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಫೋಟೋ
  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ಓಟರ್ ಐಡಿ

ಅರ್ಜಿ ಸಲ್ಲಿಸುವ ವಿಧಾನ:

  • ಅಧಿಕೃತ ವೆಬ್ ಸೈಟ್ karnatakajudiciary.kar.nic.in ಗೆ ಭೇಟಿನೀಡಿ
  • ನೇಮಕಾತಿ / ಅಧಿಸೂಚನೆ ವಿಭಾಗಕ್ಕೆ ಹೋಗಿ ಕಾನೂನು ಸಂಶೋಧನಾ ಸಹಾಯಕ ಅಧಿಸೂಚನೆ 2025 ಅನ್ನು ಡೌನ್ಲೋಡ್ ಮಾಡಿ
  • ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ, ಸೂಚಿಸಿದ ಅರ್ಜಿ ನಮೂನೆಯನ್ನು ಭರ್ತಿಮಾಡಿ
  • ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿಮಾಡಿರುವ ಬಗ್ಗೆ ಖಚಿತಪಡಿಸಿಕೊಳ್ಳಿ
  • ಅಗತ್ಯ ದಾಖಲೆಗಳನ್ನು ಲಗತ್ತಿಸಿ 31-12-2025 ರೊಳಗೆ ಅರ್ಜಿಯನ್ನು ಸಲ್ಲಿಸಿ.

ಪ್ರಮುಖ ದಿನಾಂಕಗಳು:

ಅಧಿಸೂಚನೆಯನ್ನು ಹೊರಡಿಸಿದ ದಿನಾಂಕ: 05-12-2025

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-12-2025

ಆಯ್ಕೆ ಪ್ರಕ್ರಿಯೆ:

  • ಅರ್ಜಿಗಳ ಕಿರುಪಟ್ಟಿ
  • ವೈಯಕ್ತಿಕ ಸಂದರ್ಶನ
  • ದಾಖಲಾತಿ ಪರಿಶೀಲನೆ

ಪ್ರಮುಖ ಲಿಂಕ್ ಗಳು:

ಅಧಿಸೂಚನೆಯ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ ಸೈಟ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
Karnataka High Court Recruitment

ತೀರ್ಮಾನ:

ಕರ್ನಾಟಕ ಹೈಕೋರ್ಟ್ ಕಾನೂನು ಸಂಶೋಧನಾ ಸಹಾಯಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಕಾನೂನು ವೃತ್ತಿಪರರಿಗೆ ಇದೊಂದು ಸುವರ್ಣಾವಕಾಶ. ಕಾನೂನು ಸಂಶೋಧನಾ ಸಹಾಯಕ ಹುದ್ದೆಗಳ ನೇಮಕಾತಿ ಸಾಮಾನ್ಯವಾಗಿ 1 ವರ್ಷಕ್ಕೆ ಇರುತ್ತದೆ. ಆಯ್ಕೆಗೊಂಡ ಅಭ್ಯರ್ಥಿಯ ಕಾರ್ಯಕ್ಷಮತೆ ಮತ್ತು ನ್ಯಾಯಾಲಯದ ಅವಶ್ಯಕತೆಗೆ ಅನುಗುಣವಾಗಿ ನೇಮಕಾತಿಯನ್ನು ವಿಸ್ತರಿಸಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ 31-12-2025 ರೊಳಗೆ ಅರ್ಜಿಯನ್ನು ಸಲ್ಲಿಸಿ, ಪ್ರಾಯೋಗಿಕ ಕಾನೂನು ಸಂಶೋಧನಾ ಅನುಭವವನ್ನು ಪಡೆದುಕೊಳ್ಳಿ.


Join WhatsApp

Join Now

Join Telegram

Join Now

Leave a Comment