Indian Navy: ರೂ. 40,000 ವೇತನ! ಅಗ್ನಿವೀರ್ ಹುದ್ದೆಗಳ ಬೃಹತ್ ನೇಮಕಾತಿ, ಜಸ್ಟ್ 10th ಪಾಸ್ ಆಗಿದ್ರೆ ಸಾಕು ಭಾರೀ ಉದ್ಯೋಗಾವಕಾಶ!

On: Wednesday, March 11, 2026 2:17 PM
Indian Navy

ನಮಸ್ಕಾರ ಸ್ನೇಹಿತರೆ, ನೀವೇನಾದರೂ ಭಾರತೀಯ ನೌಕಾಪಡೆ ಯಲ್ಲಿ ಉದ್ಯೋಗವನ್ನು ಮಾಡಬೇಕೆಂದು ಬಯಸುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಸಂತಸದ ಸುದ್ದಿ. ಭಾರತೀಯ ನೌಕಾಪಡೆಯು 2026 ರಲ್ಲಿ ಭರ್ಜರಿ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

Indian Navy Recruitment in Kannada

Join WhatsApp

Join Now

Join Telegram

Join Now

ಭಾರತೀಯ ನೌಕಾಪಡೆ (Indian Navy) ಯು ಅಗ್ನಿಪಥ್ ಯೋಜನೆಯಡಿಯಲ್ಲಿ ಅಗ್ನಿವೀರ್ ಸೀನಿಯರ್ ಸೆಕೆಂಡರಿ ರಿಕ್ರೂಟ್ ಹಾಗೂ ಮೆಟ್ರಿಕ್ ರಿಕ್ರೂಟ್ ಹಾಗೂ SSR ವೈದ್ಯಕೀಯ ಸಹಾಯಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ದೇಶ ಸೇವೆ ಎನ್ನುವುದು ಕೇವಲ ಉದ್ಯೋಗವಲ್ಲ ಬದಲಾಗಿ ಅದು ನಮ್ಮ ಕರ್ತವ್ಯವಾಗಿದೆ. ಭಾರತೀಯ ನೌಕಾ ಪಡೆಯಲ್ಲಿ ಉದ್ಯೋಗ ಮಾಡಬೇಕು ಎಂದು ಕನಸು ಕಾಣುತ್ತಿರುವ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ.

ಭಾರತೀಯ ನೌಕಾಪಡೆ (Indian Navy) ಯ ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10 ನೇ ತರಗತಿ ಹಾಗೂ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದರೆ ಸಾಕು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು 14-03-2026 ರಿಂದ ಆರಂಭ ಗೊಂಡು, ಏಪ್ರಿಲ್ 6, 2026 ರಂದು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕೊನೆಗೊಳ್ಳಲಿದೆ. ನೀವೇನಾದರೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದರೆ ಭಾರತೀಯ ನೌಕಾಪಡೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.

Indian Navy

ಈ ಹುದ್ದೆಗಳಿಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳು, ವಯೋಮಿತಿ, ಆಯ್ಕೆ ಪ್ರಕ್ರಿಯೆ, ವೇತನ ಶ್ರೇಣಿ, ಹಾಗೂ ಇನ್ನಿತರ ಮಾಹಿತಿಗಳನ್ನು ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳಬಹುದಾಗಿದೆ. ಇದೇ ರೀತಿಯ ಇನ್ನಷ್ಟು ಹೊಸ ಹೊಸ ಹುದ್ದೆಗಳ ಕುರಿತು ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ಉದ್ಯೋಗಸಲಹೆ ಗೆ ಭೇಟಿ ನೀಡಿ.


ಹುದ್ದೆಯ ಕಿರು ವಿಮರ್ಶೆ:

ನೇಮಕಾತಿ ಸಂಸ್ಥೆಯ ಹೆಸರುಭಾರತೀಯ ನೌಕಾಪಡೆ (Indian Navy)
ಹುದ್ದೆಯ ಹೆಸರು ಅಗ್ನಿವೀರ್ (ಸೀನಿಯರ್ ಸೆಕೆಂಡರಿ ರಿಕ್ರೂಟ್, ಮೆಟ್ರಿಕ್ ರಿಕ್ರೂಟ್, SSR ವೈದ್ಯಕೀಯ ಸಹಾಯಕ ಹುದ್ದೆಗಳು)
ವಿದ್ಯಾರ್ಹತೆ 10 ನೇ ತರಗತಿ ಹಾಗೂ 12 ನೇ ತರಗತಿಯಲ್ಲಿ ಉತ್ತೀರ್ಣ
ವೇತನ ಶ್ರೇಣಿ ₹30,000
ಅರ್ಜಿಸಲ್ಲಿಸುವ ವಿಧಾನ ಆನ್ಲೈನ್

ಹುದ್ದೆಯ ಕಿರು ಪರಿಚಯ:

ಭಾರತೀಯ ನೌಕಾಪಡೆ (Indian Navy) ಯು ಅಗ್ನಿಪಥ್ ಯೋಜನೆಯಡಿಯಲ್ಲಿ 01/2027 ಹಾಗೂ 02/2027 ತರಬೇತಿ ಬಾಚ್ ಗಳಿಗಾಗಿ ಅಗ್ನಿವೀರ್ ಸೀನಿಯರ್ ಸೆಕೆಂಡರಿ ರಿಕ್ರೂಟ್ (SSR), ಮೆಟ್ರಿಕ್ ರಿಕ್ರೂಟ್ (MR) ಹಾಗೂ SSR ವೈದ್ಯಕೀಯ ಸಹಾಯಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, SSLC ಹಾಗೂ 2nd PUC ಶೇಕಡಾ 50% ಅಂಕ ಗಳಿಸಿ ಉತ್ತೀರ್ಣರಾಗಿರುವ ಕನಿಷ್ಠ 17.5 ವರ್ಷದಿಂದ 21 ವರ್ಷ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ಹೀಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಯ ವಿವರ:

ಭಾರತೀಯ ನೌಕಾಪಡೆ (Indian Navy) ಯು ಅಗ್ನಿಪಥ್ ಯೋಜನೆಯಡಿಯಲ್ಲಿ ಅಗ್ನಿವೀರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಈ ಹುದ್ದೆಗಳನ್ನು ಮೂರು ವಿಭಾಗಗಳಾಗಿ ವಿಂಗಡಣೆ ಮಾಡಲಾಗಿದೆ. ಅವುಗಳೆಂದರೆ,

  • ಅಗ್ನಿವೀರ್ ಸೀನಿಯರ್ ಸೆಕೆಂಡರಿ ರಿಕ್ರೂಟ್
  • ಅಗ್ನಿವೀರ್ ಮೆಟ್ರಿಕ್ ರಿಕ್ರೂಟ್
  • SSR ವೈದ್ಯಕೀಯ ಸಹಾಯಕ ಹುದ್ದೆಗಳು

ಹುದ್ದೆಗೆ ಅರ್ಜಿ ಸಲ್ಲಿಸುವವರು ಹೊಂದಿರಬೇಕಾದ ಶೈಕ್ಷಣಿಕ ಅರ್ಹತೆಗಳೇನು?

1. ಅಗ್ನಿವೀರ್ ಮೆಟ್ರಿಕ್ ರಿಕ್ರೂಟ್ ಹುದ್ದೆಗಳು:

ಅಗ್ನಿವೀರ್ ಮೆಟ್ರಿಕ್ ರಿಕ್ರೂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ SSLC ಅಲ್ಲಿ 50% ಅಂಕಗಳೊಂದಿದೆ ಉತ್ತೀರ್ಣರಾಗಿರಬೇಕು.

2. ಅಗ್ನಿವೀರ್ ಸೀನಿಯರ್ ಸೆಕೆಂಡರಿ ರಿಕ್ರೂಟ್ ಹುದ್ದೆಗಳು:

ಅಗ್ನಿವೀರ್ ಸೀನಿಯರ್ ಸೆಕೆಂಡರಿ ರಿಕ್ರೂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಲ್ಲಿ ದ್ವಿತೀಯ PUC ಅಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡಿರಬೇಕು ಹಾಗೂ ವಿಜ್ಞಾನ ವಿಭಾಗದಲ್ಲಿ ಗಣಿತ ಮತ್ತು ಭೌತಶಾಸ್ತ್ರ ವಿಷಯವನ್ನು ಕಡ್ಡಾಯವಾಗಿ ಆಯ್ಕೆ ಮಾಡಿಕೊಂಡಿರಬೇಕು. ಜೊತೆಗೆ ದ್ವಿತೀಯ PUC ಅಲ್ಲಿ ಕನಿಷ್ಠ 50% ಅಂಕವನ್ನು ಗಳಿಸಿರಬೇಕು.

3. SSR ವೈದ್ಯಕೀಯ ಸಹಾಯಕ ಹುದ್ದೆಗಳು:

SSR ವೈದ್ಯಕೀಯ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು PUC ಅಲ್ಲಿ ವಿಜ್ಞಾನ ವಿಭಾಗದಲ್ಲಿ ರಸಾಯನ ಶಾಸ್ತ್ರ, ಭೌತಶಾಸ್ತ್ರ ಹಾಗೂ ಜೀವ ಶಸ್ತ್ರ ವಿಷಯದಲ್ಲಿ ಕನಿಷ್ಠ 50% ಅಂಕವನ್ನು ಗಳಿಸಿ ಉತ್ತೀರ್ಣರಾಗಿರಬೇಕು.

ದೈಹಿಕ ಅರ್ಹತೆಗಳು:

ದೈಹಿಕ ಅರ್ಹತೆಗಳು ಮಹಿಳೆಯರು ಪುರುಷರು
ಎತ್ತರ 152 cms157 cms
ಪುಶ್ ಅಪ್ಸ್ ಅನ್ವಯವಾಗುವುದಿಲ್ಲ 12 ಬಾರಿ
ಸ್ಕ್ಯೂಟ್ ಅಪ್ಸ್ 15 ಬಾರಿ 20 ಬಾರಿ
ಓಟ 8ನಿಮಿಷದಲ್ಲಿ 1.6 cms6 ನಿಮಿಷ 30 ಸೆಕೆಂಡ್ ಗಳಲ್ಲಿ 1.6 cms
ಸಿಟ್ ಅಪ್ಸ್ 10 ಬಾರಿ ಅನ್ವಯವಾಗುವುದಿಲ್ಲ

ವಯೋಮಿತಿ ವಿವರ:

ಭಾರತೀಯ ನೌಕಾಪಡೆಯ ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 17.5 ವರ್ಷದಿಂದ ಗರಿಷ್ಟ 21 ವರ್ಷ ವಯೋಮಿತಿಯನ್ನು ಹೊಂದಿರಬೇಕು.

  • ಭಾರತೀಯ ನೌಕಾಪಡೆಯಲ್ಲಿ ಅಗ್ನಿವೀರ್ ನೇಮಕಾತಿಯು ಎರಡು ಬ್ಯಾಚ್ ಗಳಲ್ಲಿ ನಡೆಯಲಿದ್ದು, ಮೊದಲ ಬ್ಯಾಚ್ (01/2027) ನ ಅಭ್ಯರ್ಥಿಗಳು ಡಿಸೆಂಬರ್ 01, 2004 ರಿಂದ ಮೇ 01, 2009 ರ ನಡುವೆ ಜನಿಸಿರಬೇಕು.
  • ಎರಡನೇ ಬ್ಯಾಚ್ (02/2027) ನ ಅಭ್ಯರ್ಥಿಗಳು ಮೇ 01, 2005 ರಿಂದ ಅಕ್ಟೋಬರ್ 31, 2009 ರ ನಡುವೆ ಜನಿಸಿರಬೇಕು.

ವಯೋಮಿತಿ ಸಡಿಲಿಕೆ:

ಭಾರತೀಯ ನೌಕಾಪಡೆಯಲ್ಲಿ ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವರ್ಗವರು ವಯೋಮಿತಿ ಸಡಿಲಿಕೆ ಇರುತ್ತದೆ. ಈ ವಿಷಯದ ಕುರಿತು ಹೆಚ್ಚಿನ ಮಾಹಿತಿಗಾಗಿ ಭಾರತೀಯ ನೌಕಾಪಡೆಯ ನೇಮಕಾತಿಯ ಅಧಿಕೃತ ಅಧಿಸೂಚನೆಯನ್ನು ಓದಿಕೊಳ್ಳಿ.

ಅರ್ಜಿ ಶುಲ್ಕ:

ಭಾರತೀಯ ನೌಕಾಪಡೆಯ ಅಗ್ನಿವೀರ್ ಸೀನಿಯರ್ ಸೆಕೆಂಡರಿ ರಿಕ್ರೂಟ್, ಅಗ್ನಿವೀರ್ ಮೆಟ್ರಿಕ್ ರಿಕ್ರೂಟ್, SSR ವೈದ್ಯಕೀಯ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ನಿಗದಿಪಡಿಸಿದ್ದು, ಅಭ್ಯರ್ಥಿಗಳು ಈ ಅರ್ಜಿ ಶುಲ್ಕವನ್ನು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಆನ್ಲೈನ್ ನಲ್ಲಿ ಪಾವತಿ ಮಾಡಬೇಕಾಗುತ್ತದೆ.

  • ಸಾಮಾನ್ಯ ವರ್ಗದ ಅಭ್ಯರ್ಥಿಗಳು, OBC ಅಭ್ಯರ್ಥಿಗಳು ಹಾಗೂ EWS ಅಭ್ಯರ್ಥಿಗಳು: ₹550/- +18% GST
  • ಪರಿಶಿಷ್ಟ ಜಾತಿ ಮತ್ತು ಪಂಗಡಗಳ (SC/ ST) ಅಭ್ಯರ್ಥಿಗಳು: ₹550/- +18% GST

ಅಗತ್ಯ ದಾಖಲೆಗಳು:

ಭಾರತೀಯ ನೌಕಾಪಡೆ (Indian Navy) ಯ ನೇಮಕಾತಿಯ ನಿಯಮಗಳ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಎಲ್ಲಾ ದಾಖಲೆಗಳನ್ನು ಹೊಂದಿರುವುದು ಕಡ್ಡಾಯವಾಗಿದೆ.

  • ಆಧಾರ್ ಕಾರ್ಡ್
  • 10 ನೇ ತರಗತಿ ಅಂಕಪಟ್ಟಿ
  • 12 ನೇ ತರಗತಿ ಅಂಕಪಟ್ಟಿ
  • ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಫೋಟೋ
  • ವಾಸಸ್ಥಳ ದೃಢೀಕರಣ ಪತ್ರ
  • ಡಿಜಿಟಲ್ ಸಹಿ

ಹಾಗೂ ಇನ್ನಿತರ ಅಗತ್ಯ ದಾಖಲೆಗಳು

ಹುದ್ದೆಗೆ ಸಂಬಂಧಿಸಿದ ವೇತನ ಶ್ರೇಣಿ :

ಅಗ್ನಿವೀರ್ ಸೀನಿಯರ್ ಸೆಕೆಂಡರಿ ರಿಕ್ರೂಟ್, ಅಗ್ನಿವೀರ್ ಮೆಟ್ರಿಕ್ ರಿಕ್ರೂಟ್, SSR ವೈದ್ಯಕೀಯ ಸಹಾಯಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಈ ಒಂದು ಕ್ಷೇತ್ರದಲ್ಲಿ 4 ವರ್ಷಗಳ ವೃತ್ತಿ ಅನುಭವವನ್ನು ಪಡೆದುಕೊಳ್ಳಬಹುದಾಗಿದ್ದು, ಪ್ರತಿ ವರ್ಷವೂ ಕೂಡ ವಿಭಿನ್ನವಾಗಿ ವೇತನವನ್ನು ನೀಡಲಾಗುತ್ತದೆ. ಅವುಗಳ ವಿವರ ಹೀಗಿದೆ,

  • ಮೊದಲ ವರ್ಷ: ಮಾಸಿಕ ₹30,000 ವೇತನವನ್ನು ನಿಗದಿಪಡಿಸಲಾಗಿದೆ.
  • ಎರಡನೇ ವರ್ಷ: ಮಾಸಿಕ ₹33,000 ವೇತನವನ್ನು ನಿಗದಿಪಡಿಸಲಾಗಿದೆ.
  • ಮೂರನೇ ವರ್ಷ: ಮಾಸಿಕ ₹36,500 ವೇತನವನ್ನು ನಿಗದಿಪಡಿಸಲಾಗಿದೆ.
  • ನಾಲ್ಕನೇ ವರ್ಷ: ಮಾಸಿಕ ₹40,000 ವೇತನವನ್ನು ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ:

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ ಅಧಿಕೃತ ವೆಬ್ಸೈಟ್ https://www.joinindiannavy.gov.in/ ಗೆ ಭೇಟಿ ನೀಡಿ.
  • ಹೊಸದಾಗಿ ವೆಬ್ಸೈಟ್ಗೆ ಭೇಟಿ ನೀಡುತ್ತಿದ್ದರೆ, ರಿಜಿಸ್ಟರ್ ಮಾಡಿಕೊಳ್ಳಿ.
  • ನಂತರ, ಕರೆಂಟ್ ಅಪರ್ಚುನಿಟಿಸ್ ವಿಭಾಗಕ್ಕೆ ಭೇಟಿ ನೀಡಿ
  • ಅಗ್ನಿವೀರ್ 01/2027 ಅಥವಾ 02/2027 ಲಿಂಕ್ ಆಯ್ಕೆಯನ್ನು ಕ್ಲಿಕ್ ಮಾಡಿ.
  • ಅಲ್ಲಿ ಕೊಟ್ಟಿರುವ ಸಂಪೂರ್ಣವಾದ ಮಾಹಿತಿಯನ್ನು ಓದಿಕೊಳ್ಳಿ.
  • ನಂತರ, ಅಲ್ಲಿ ನೀಡಲಾದ ಎಲ್ಲಾ ವೈಯಕ್ತಿಕ ಹಾಗೂ ಶೈಕ್ಷಣಿಕ ಮಾಹಿತಿಯನ್ನು ಭರ್ತಿ ಮಾಡಿ
  • ಮೇಲೆ ನೀಡಲಾದ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ಅರ್ಜಿ ಶುಲ್ಕವನ್ನು ಪಾವತಿಸಿ ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ.

ಆಯ್ಕೆ ಪ್ರಕ್ರಿಯೆ:

  • ಶಾರ್ಟ್ ಲಿಸ್ಟ್
  • ಲಿಖಿತ ಪರೀಕ್ಷೆ
  • ದೈಹಿಕ ಅಳತೆ ಪರೀಕ್ಷೆ
  • ದೈಹಿಕ ಸಾಮರ್ಥ್ಯ ಪರೀಕ್ಷೆ
  • ದಾಖಲೆಗಳ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ತರಬೇತಿ ಅವಧಿ:

ಅಗ್ನಿವೀರ್ ಸೀನಿಯರ್ ಸೆಕೆಂಡರಿ ರಿಕ್ರೂಟ್, ಅಗ್ನಿವೀರ್ ಮೆಟ್ರಿಕ್ ರಿಕ್ರೂಟ್, SSR ವೈದ್ಯಕೀಯ ಸಹಾಯಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಮೂಲಭೂತ ತರಬೇತಿಯನ್ನು ಪಡೆಯಲು ಅರ್ಹರಾಗಿದ್ದು, ಈ ತರೆಬೇತಿಯನ್ನು ಒಡಿಶಾ ಡಾ INS ಚಿಲ್ಕಾದಲ್ಲಿ ಪಡೆದುಕೊಳ್ಳುತ್ತಾರೆ.

ಮೊದಲ ಬ್ಯಾಚ್ ಅಂದರೆ 01/2027 ಬ್ಯಾಚ್ ನ ತರಬೇತಿಯನ್ನು ಡಿಸೆಂಬರ್ 2026 ರಲ್ಲಿ ಪ್ರಾರಂಭಿಸುವ ನಿರೀಕ್ಷೆ ಇದೆ.

ಎರಡನೇ ಬ್ಯಾಚ್ ಅಂದರೆ 02/2027 ಬ್ಯಾಚ್ ನ ತರಬೇತಿಯನ್ನು ಮೇ 2027 ರಲ್ಲಿ ಪ್ರಾರಂಭಿಸುವ ಸಾಧ್ಯತೆಗೆಳಿವೆ.

ಪ್ರಮುಖ ದಿನಾಂಕಗಳು:

ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿರುವ ದಿನಾಂಕ 10-03-2026
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ14-03-2026
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ06-04-2026
ಶುಲ್ಕ ಪಾವತಿಸಲು ಕೊನೆಯ ದಿನಾಂಕ 06-04-2026

ಪ್ರಮುಖ ಲಿಂಕುಗಳು:

ಅಧಿಕೃತ ಅಧಿಸೂಚನೆ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

ತೀರ್ಮಾನ:

ಭಾರತೀಯ ನೌಕಾಪಡೆ (Indian Navy)ಯು ಅಗ್ನಿವೀರ್ ಸೀನಿಯರ್ ಸೆಕೆಂಡರಿ ರಿಕ್ರೂಟ್, ಅಗ್ನಿವೀರ್ ಮೆಟ್ರಿಕ್ ರಿಕ್ರೂಟ್, SSR ವೈದ್ಯಕೀಯ ಸಹಾಯಕ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಅಗ್ನಿವೀರ್ ಸೀನಿಯರ್ ಸೆಕೆಂಡರಿ ರಿಕ್ರೂಟ್, ಅಗ್ನಿವೀರ್ ಮೆಟ್ರಿಕ್ ರಿಕ್ರೂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪುರುಷರು ಹಾಗೂ ಮಹಿಳೆಯರು ಇಬ್ಬರು ಕೂಡ ಅರ್ಹರಾಗಿರುತ್ತಾರೆ. ಆದರೆ SSR ವೈದ್ಯಕೀಯ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪುರುಷರು ಮಾತ್ರ ಅರ್ಹರಾಗಿರುತ್ತಾರೆ.
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು 4 ವರ್ಷಗಳ ಕಾಲ ಭಾರತೀಯ ನೌಕಾಪಡೆಯಲ್ಲಿ ಸೇವೆಯನ್ನು ಸಲ್ಲಿಸಬಹುದಾಗಿದೆ. ನೀವೇನಾದರೂ ನೌಕಾಪಡೆಯಲ್ಲಿ ಸೇವೆ ಸಲ್ಲಿಸಲು ಆಸಕ್ತರಾಗಿದ್ದರೆ , ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಹುದ್ದೆಯನ್ನು ತಮ್ಮದಾಗಿಸಿಕೊಳ್ಳಿ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು:

ಭಾರತೀಯ ನೌಕಾಪಡೆ (Indian Navy) ಯು ಅಗ್ನಿವೀರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದೆ. ಆದರೆ ಅಧಿಸೂಚನೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇದೆ ಎನ್ನುವ ಕುರಿತು ಮಾಹಿತಿ ನೀಡಿಲ್ಲ.

ಭಾರತೀಯ ನೌಕಾಪಡೆ (Indian Navy) ಯಲ್ಲಿ ಅಗ್ನಿವೀರ್ ಸೀನಿಯರ್ ಸೆಕೆಂಡರಿ ರಿಕ್ರೂಟ್, ಅಗ್ನಿವೀರ್ ಮೆಟ್ರಿಕ್ ರಿಕ್ರೂಟ್, SSR ವೈದ್ಯಕೀಯ ಸಹಾಯಕ ಹುದ್ದೆಗಳ ಭರ್ತಿಗೆ ಅಭ್ಯರ್ಥಿಗಳನ್ನು ಅರ್ಜಿ ಆಹ್ವಾನಿಸಲಾಗಿದೆ.

ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 01-04-2026 ರ ವರೆಗೆ ಅವಕಾಶ ಇದೆ.

ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ₹550 ರಷ್ಟು ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.


ಇತರೆ ಪ್ರಮುಖ ಲಿಂಕುಗಳು:


Join WhatsApp

Join Now

Join Telegram

Join Now

Leave a Comment