Free Education: ಕಾರ್ಮಿಕರ ಮಕ್ಕಳ ಓದಿಗೆ ಭಾರೀ ಮೊತ್ತದ ಸಹಾಯಧನ! ಅಪ್ಲೈ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

On: Tuesday, March 10, 2026 3:39 PM
Free Education

ನೀವೇನಾದರೂ ಕಟ್ಟಡ ಕಾರ್ಮಿಕರ ಮಕ್ಕಳ? ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವಾಗ ನಿಮ್ಮ ಪೋಷಕರು ಅಕಾಲಿಕವಾಗಿ ಮರಣ ಹೊಂದಿದ್ದಾರೆ? ಇದರಿಂದ ನಿಮಗೆ ಶಿಕ್ಷಣವನ್ನು ಮುಂದುವರೆಸಲು ಸಾಧ್ಯವಾಗುತ್ತಿಲ್ಲವಾ? ಹಾಗಿದ್ದರೆ ಇನ್ನು ಈ ವಿಷಯದ ಕುರಿತು ಚಿಂತೆ ಬೇಡ. ಕಾರ್ಮಿಕರ ಕಲ್ಯಾಣ ಮಂಡಳಿಯು ನೀವು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಒಂದೊಳ್ಳೆಯ ನಿರ್ಧಾರವನ್ನು ಕೈಗೊಂಡಿದೆ.

Free Education Scheme in Kannada

Join WhatsApp

Join Now

Join Telegram

Join Now

ತಮ್ಮ ಕುಟುಂಬಕ್ಕೆ ಆಧಾರವಾಗಿರುವ ಮನೆಯ ಯಜಮಾನನನ್ನೇ ಕಳೆದುಕೊಂಡರೆ ಹಣಕಾಸಿನ ಸಮಸ್ಯೆಯಿಂದ ಒಂದು ಹೊತ್ತು ಕಳೆಯಲು ಕಷ್ಟಕರವಾಗುವ ಈ ಸಂದರ್ಭದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಒಂದಿಷ್ಟು ಹಣವನ್ನು ಕೂಡಿಡಬೇಕು ಅಂದರೆ ಅದು ಇನ್ನಷ್ಟು ಕಷ್ಟಕರವಾಗುತ್ತದೆ. ಈ ಕಾರಣದಿಂದಾಗಿ ಸಾಕಷ್ಟು ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಸಮಸ್ಯೆಯನ್ನು ಕಡಿಮೆ ಮಾಡಬೇಕು ಎನ್ನವ ಉದ್ದೇಶದಿಂದ ಅಕಾಲಿಕ ಮರಣ ಹೊಂದಿದ ಕಾರ್ಮಿಕರ ಮಕ್ಕಳು ಸ್ನಾತಕೋತ್ತರ ಪದವಿಯನ್ನು ಪಡೆಯುವ ವರೆಗೂ ಕೂಡ ಕಾರ್ಮಿಕರ ಕಲ್ಯಾಣ ಮಂಡಳಿಯು ಶೆಕ್ಷಣಿಕ ವೆಚ್ಚವನ್ನು ಭರಿಸುವುದಾಗಿ ತಿಳಿಸಿದೆ.

ಈ ಮೊದಲು ಕಾರ್ಮಿಕರು ನಿರ್ಮಾಣ ಕಾರ್ಯದಲ್ಲಿ ತೊಡಗಿರುವಾಗ ಯಾವುದಾದರು ಅನಾಹುತಗಳಾಗಿ ಮರಣ ಹೊಂದಿದರೆ ತಮ್ಮ ಕುಟುಂಬದವರಿಗೆ ಪಿಂಚಣಿ ಹಣವನ್ನು ನೀಡಿ ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸಲಾಗುತ್ತಿತ್ತು. ಆದರೆ, ಈ ವರ್ಷದಿಂದ ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಜೊತೆಗೆ ಕಾರ್ಮಿಕ ಮಕ್ಕಳಿಗೂ ಕೂಡ ಶೈಕ್ಷಣಿಕ ಭವಿಷ್ಯವನ್ನು ಉಜ್ವಲ ಗೊಳಿಸುವ ಉದ್ದೇಶವನ್ನು ಹೊಂದಿದೆ.

Free Education
Free Education

ಈ ಸೌಲಭ್ಯ ಯಾರಿಗೆ ಸಿಗಲಿದೆ? ಅರ್ಹತಾ ಮಾನದಂಡಗಳೇನು? ಈ ಒಂದು ಸೌಲಭ್ಯವನ್ನು ಪಡೆಯಲು ಅರ್ಜಿ ಸಲ್ಲಿಸುವುದ್ ಹೇಗೆ? ಅರ್ಜಿ ಸಲ್ಲಿಸಲು ಏನೆಲ್ಲಾ ಅಗತ್ಯ ದಾಖಲೆಗಳು ಇರಬೇಕು? ಎನ್ನುವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ. ಇದೇ ರೀತಿಯ ಇನ್ನಷ್ಟು ಹೊಸ ಹೊಸ ವಿಷಯಗಳ ಕುರಿತು ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ಉದ್ಯೋಗಸಲಹೆ ಗೆ ಭೇಟಿ ನೀಡಿ.


ಪ್ರಮುಖ ಹೈಲೈಟ್ಸ್:

1. ಮೃತ ಕಾರ್ಮಿಕರ ಕುಟುಂಬಕ್ಕೆ ಪಿಂಚಣಿ ಸಹಾಯಧನದ ಜೊತೆಗೆ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು
2. ಮೃತ ಕಾರ್ಮಿಕರ ಎರಡು ಮಕ್ಕಳಿಗೆ ಈ ಸೌಲಭ್ಯ ಅನ್ವಯ.
3. ಮೃತ ಕಾರ್ಮಿಕರ ಮಕ್ಕಳ ಶಾಲಾ ಹಂತದ ಶೆಕ್ಷಣಿಕ ವೆಚ್ಚದಿಂದ ಹಿಡಿದು ಸ್ನಾತಕೋತ್ತರ ಪದವಿ ಪಡೆಯುವ ವರೆಗೂ ಆಗುವ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸುತ್ತದೆ.
4. 2025-26 ನೇ ಸಾಲಿನಲ್ಲಿ ಈ ಒಂದು ಯೋಜನೆ ಜಾರಿಗೆ
Free Education Scheme

2026 ನೇ ಸಾಲಿನ ಬಜೆಟ್ ನಲ್ಲಿ ಕಾರ್ಮಿಕರ ಮಕ್ಕಳಿಗೆ ನೀಡಿರುವ ಭರವಸೆಗಳು ಯಾವುವು?

ಮುಖ್ಯಮಂತ್ರಿ ಸಿದ್ದರಾಮಯ್ಯನವರು 2026 ರಲ್ಲಿ ಮಂಡಿಸಿದ ಬಜೆಟ್ ನಲ್ಲಿ ಕಾರ್ಮಿಕರ ಕುಟುಂಬಗಳಿಗೆ ಹಾಗೂ ಮಕ್ಕಳಿಗೆ ವಿಶೇಷವಾಗಿ ಮನೆಯ ಆಧಾರಸ್ತಂಭವಾಗಿರುವವರು ಮರಣ ಹೊಂದಿರುವ ಕಾರ್ಮಿಕರ ಕುಟುಂಬಗಳಿಗೆ ಹಾಗೂ ಮಕ್ಕಳಿಗೆ ಭಾರೀ ಭರವಸೆಯನ್ನು ಒದಗಿಸಿದೆ.

  • ಮೃತ ನೋಂದಾಯಿತ ಕಾರ್ಮಿಕರ ಮಕ್ಕಳು ಶಾಲಾ ಹಂತದಿಂದ ಹಿಡಿದು ಸ್ನಾತಕೋತ್ತರ ಪದವಿಯನ್ನು ಮುಗಿಸುವ ವರೆಗೂ ಕೂಡ ಆಗುವ ಸಂಪೂರ್ಣ ವೆಚ್ಚವನ್ನು ಕರ್ನಾಟಕದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯೇ ಭರಿಸುವುದಾಗಿ ಮೊನ್ನೆ ನಡೆದ ಬಜೆಟ್ ಮಂಡನೆಯಲ್ಲಿ ತಿಳಿಸಲಾಗಿದೆ.
  • ಪೋಷಕರನ್ನು ಕಳೆದುಕೊಂಡ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಅವರಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಹೊಸದಾಗಿ 62 ವಸತಿ ಶಾಲೆಗಳ ಸ್ಥಾಪನೆಗೆ ಮೊನ್ನೆ ನಡೆದ ಬಜೆಟ್ ಮಂಡನೆಯಲ್ಲಿ ಅನುಮೋದನೆ ನೀಡಲಾಗಿದೆ.

ಮೃತ ಕಾರ್ಮಿಕರ ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣವನ್ನು ಒದಗಿಸುವುದರ ಹಿಂದಿನ ಉದ್ದೇಶ:

  • ಬಾಲ ಕಾರ್ಮಿಕ ಪದ್ಧತಿ ತಡೆಗೆ ಒತ್ತು:

ಕುಟುಂಬದ ಆಧಾರಸ್ತಂಭ ಆಗಿರುವ ಯಜಮಾನನನ್ನೇ ಕಳೆದುಕೊಂಡ ಕಾರ್ಮಿಕರ ಕುಟುಂಬಗಳು ಜೀವನವನ್ನು ಸಾಗಿಸಬೇಕಾದರೆ ಕೆಲಸಕ್ಕೆ ಹೋಗಿ ದುಡಿದುಕೊಂಡು ಬರುವುದು ಅನಿವಾರ್ಯವಾಗುತ್ತದೆ. ಅಂತಹ ಸಂದರ್ಭದಲ್ಲಿ ಮಕ್ಕಳ ಶಿಕ್ಷಣಕ್ಕೂ ಕೂಡ ಹಣ ಹೊಂದಿಸಲು ಸಾಧ್ಯವಾಗದೆ ಇದ್ದಾಗ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿಸಿ, ತಮ್ಮೊಂದಿಗೆ ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುವುದನ್ನು ಕಾಣಬಹುದಾಗಿದೆ. ಈ ಎಲ್ಲಾ ಪದ್ದತಿಗಳನ್ನು ತಡೆಯುವ ಉದ್ದೇಶದಿಂದ ಮೃತ ಕಾರ್ಮಿಕರ ಮಕ್ಕಳ ಸಂಪೂರ್ಣ ಶೈಕ್ಷಣಿಕ ವೆಚ್ಚವನ್ನು ಕಾರ್ಮಿಕರ ಕಲ್ಯಾಣ ಮಂಡಳಿಯೇ ಭರಿಸುವಂತೆ ಮಾಡಿ ಕೂಲಿ ಕಾರ್ಮಿಕ ಪದ್ದತಿಯನ್ನು ತಡೆಯುವುದು.

  • ಶಿಕ್ಷಣದಿಂದ ವಂಚಿತರಾಗದಂತೆ ತಡೆ:

ಕಾರ್ಮಿಕರ ಅಕಾಲಿಕ ಮರಣದಿಂದ ಕುಟುಂಬದಲ್ಲಿ ಹಣಕಾಸಿನ ಸಮಸ್ಯೆಗಳು ಉಂಟಾಗಿ ಕಾರ್ಮಿಕರ ಮಕ್ಕಳು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಾರೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ಈ ಒಂದು ಯೋಜನೆಯಡಿಯಲ್ಲಿ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವನ್ನು ಒದಗಿಸಲಾಗುತ್ತಿದೆ.

  • ಕುಟುಂಬದ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು:

ಮೃತ ಕಾರ್ಮಿಕರ ಕುಟುಂಬಗಳಿಗೆ ಪಿಂಚಣಿ ಸಹಾಯಧನವನ್ನು ನೀಡಲಾಗುತ್ತಿತ್ತು. ಈ ಸಹಾಯಧನವು ಕೇವಲ ಕುಟುಂಬದ ಜೀವನೋಪಾಯಕ್ಕೆ ಸಾಲುತ್ತಿತ್ತು. ಅಂತಹ ಸಂದರ್ಭದಲ್ಲಿ ಮಕ್ಕಳ ಪ್ರವೇಶ ಶುಲ್ಕ, ಪುಸ್ತಕಗಳು, ಪರೀಕ್ಷಾ ಶುಲ್ಕ, ಸಮವಸ್ತ್ರಗಳಿಗೆ ಹೀಗೆ ಶಿಕ್ಷಣಕ್ಕೆ ಸಂಬಂಧಿಸಿದ ಒಂದಿಷ್ಟು ವೆಚ್ಚವನ್ನು ಭರಿಸುವುದು ಕುಟುಂಬಕ್ಕೆ ಇನ್ನಷ್ಟು ಆರ್ಥಿಕ ಹೊರೆಯಾಗಿ ಪರಿಣಮಿಸುತ್ತಿತ್ತು. ಈ ಒಂದು ಸಮಸ್ಯೆಗಳ ತಡೆಗೆ ಕಾರ್ಮಿಕರ ಕಲ್ಯಾಣ ಮಂಡಳಿಯು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಮಕ್ಕಳ ಸಂಪೂರ್ಣ ಶೈಕ್ಷಣಿಕ ವೆಚ್ಚವನ್ನು ಭರಿಸಲು ಮುಂದಾಗಿದೆ.

  • ಉನ್ನತ ಶಿಕ್ಷಣ ಪಡೆಯಲು ಅವಕಾಶ:

ಅರ್ಹ ವಿದ್ಯಾರ್ಥಿಗಳಿಗೆ ಈ ಒಂದು ಸೌಲಭ್ಯವು ಕೇವಲ ಪದವಿ ಶಿಕ್ಷಣವನ್ನು ಪಡೆಯುವ ವರೆಗೂ ಮಾತ್ರ ಸೀಮಿತವಾಗಿರದೆ, ವೃತ್ತಿ ಪರ ಶಿಕ್ಷಣವನ್ನು ಪಡೆಯಲು ಕೂಡ ಅವಕಾಶವನ್ನು ಕಲ್ಪಿಸುವ ಮೂಲಕ ಮೃತ ಕಾರ್ಮಿಕರ ಮಕ್ಕಳನ್ನು ಮುಖ್ಯ ವಾಹಿನಿಗೆ ಕರೆತಂದು ಒಂದೊಳ್ಳೆ ಸರ್ಕಾರಿ ಉದ್ಯೋಗವನ್ನು ಪಡೆಯುವಂತೆ ಮಾಡಿ ಸಮಾಜದಲ್ಲಿ ಗೌರವಯುತವಾಗಿ ಬದುಕಲು ಅವಕಾಶ ಕಲ್ಪಿಸುವುದು.

ಈ ಸೌಲಭ್ಯವನ್ನು ಪಡೆಯಲು ಯಾರು ಅರ್ಹರಾಗಿರುತ್ತಾರೆ?

  • ಮೃತ ಕಾರ್ಮಿಕರು ಕರ್ನಾಟಕದ ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿಯಡಿಯಲ್ಲಿ ನೋಂದಾಯಿತರಾಗಿರಬೇಕು.
  • ಮೃತ ಕಾರ್ಮಿಕರು ಲೇಬರ್ ಕಾರ್ಡ್ ಹೊಂದಿರಬೇಕು.
  • ಕಾರ್ಮಿಕರು ಮರಣ ಹೊಂದುವ ಸಂದರ್ಭದಲ್ಲಿ ಕಾರ್ಮಿಕರ ಲೇಬರ್ ಕಾರ್ಡ್ ಚಾಲ್ತಿಯಲ್ಲಿರಬೇಕು.
  • ಮೃತ ಕಾರ್ಮಿಕರ ಇಬ್ಬರು ಮಕ್ಕಳು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ವಿಶೇಷ ಸೂಚನೆ: “ಕಾರ್ಮಿಕರು ನಿರ್ಮಾಣ ಕಾರ್ಯದಲ್ಲಿ ತೊಡಗಿರುವಾಗ ಅಪಘಾತ ಸಂಭವಿಸಿ ಮರಣ ಹೊಂದಿದರೆ ಮಾತ್ರ ಕಾರ್ಮಿಕರ ಮಕ್ಕಳು ಈ ಸೌಲಭ್ಯವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಕಾರ್ಮಿಕರು ಅನಾರೋಗ್ಯ ಸಮಸ್ಯೆಯಿಂದ ಮರಣಹೊಂದಿದರೆ ಈ ಸೌಲಭ್ಯ ಲಭ್ಯವಾಗುವುದಿಲ್ಲ.” Free Education

ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು:

  • ಕಾರ್ಮಿಕರ ಮಕ್ಕಳ ಆಧಾರ್ ಕಾರ್ಡ್
  • ಕಾರ್ಮಿಕರ ಮಕ್ಕಳ ಪಾಸ್ಪೋರ್ಟ್ ಅಳತೆಯ ಫೋಟೋ
  • ಪೋಷಕರ ಲೇಬರ್ ಕಾರ್ಡ್
  • ಪೋಷಕರ ಮರಣ ಪ್ರಮಾಣಪತ್ರ
  • ಅಪಘಾತ ಸಂಭವಿಸಿರುವುದರ ಬಗ್ಗೆ ಪೊಲೀಸ್ ವರದಿ
  • ಪ್ರಸ್ತುತ ಶೈಕ್ಷಣಿಕ ವರ್ಷದ ವ್ಯಾಸಂಗ ಪ್ರಮಾಣಪತ್ರ
  • ವಿದ್ಯಾರ್ಥಿಗಳ ಬ್ಯಾಂಕ್ ಪಾಸ್ ಬುಕ್ ಪ್ರತಿ
  • ಹಿಂದಿನ ಶೈಕ್ಷಣಿಕ ವರ್ಷದ ಅಂಕ ಪಟ್ಟಿ

ಅರ್ಜಿ ಸಲ್ಲಿಸುವುದು ಹೇಗೆ?

ಮೃತ ಕಾರ್ಮಿಕರ ಮಕ್ಕಳು ಉಚಿತವಾಗಿ ಶೈಕ್ಷಣಿಕ ಸಹಾಯಧನವನ್ನು (Free Education) ಪಡೆದುಕೊಳ್ಳಬೇಕಾದರೆ ಆನ್ಲೈನ್ ಮೂಲಕ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಹೇಗೆ ಅರ್ಜಿ ಸಲ್ಲಿಸುವುದು ಎನ್ನುವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.

1. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

  • ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಸಕ್ತಿಯನ್ನು ಹೊಂದಿರುವವರು, ಕರ್ನಾಟಕದ ಸೇವಾ ಸಿಂಧೂ ಅಧಿಕೃತ ಪೋರ್ಟಲ್ https://sevasindhuservices.karnataka.gov.in/ ಗೆ ಭೇಟಿ ನೀಡಿ.
  • ಹೊಸ ಬಳಕೆದಾರರಾಗಿದ್ದರೆ, ಮೊಬೈಲ್ ಸಂಖ್ಯೆ ಹಾಗೂ ಪಾಸ್ವರ್ಡ್ ಬಳಸಿ ಲಾಗಿನ್ ಆಗಿ ನೋಂದಣಿ ಪೂರ್ಣಗೊಳಿಸಿ.
  • ನಂತರ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ ಎಂದು ಟೈಪ್ ಮಾಡಿ ಇದಕ್ಕೆ ಸಂಬಂಧಿಸಿದ ಅಪ್ಲಿಕೇಶನ್ ಅನ್ನು ಸೆಲೆಕ್ಟ್ ಮಾಡಿ.
  • ನಂತರ ಅರ್ಜಿಯಲ್ಲಿ ಕೇಳಲಾದ ಕಾರ್ಮಿಕರ ಮಕ್ಕಳ ವೈಯಕ್ತಿಕ ವಿವರಗಳನ್ನು, ಶೈಕ್ಷಣಿಕ ವಿವರಗಳನ್ನು, ಬ್ಯಾಂಕ್ ವಿವರಗಳನ್ನು ಹಾಗೂ ಮೃತ ಕಾರ್ಮಿಕರ ಲೇಬರ್ ಕಾರ್ಡ್ ಸಂಖ್ಯೆಯನ್ನು ಭರ್ತಿ ಮಾಡಿ.
  • ನಂತರ, ಮೇಲೆ ನೀಡಲಾದ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ.

2. ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

  • ನೀವೇನಾದರೂ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಬಯಸಿದರೆ, ನಿಮ್ಮ ಹತ್ತಿರದ ಗ್ರಾಮ್ ಒನ್ ಕೇಂದ್ರಕ್ಕೆ ಭೇಟಿ ನೀಡಿ.
  • ಮೃತ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನಕ್ಕೆ ಸಂಬಂಧಿಸಿದ ಅರ್ಜಿ ನಮೂನೆಯನ್ನು ಕೇಳಿ ಪಡೆಯಿರಿ.
  • ನಂತರ ಅರ್ಜಿ ನಮೂನೆಯಲ್ಲಿ ಕೇಳಲಾದ ಕಾರ್ಮಿಕರ ಮಕ್ಕಳ ವೈಯಕ್ತಿಕ ವಿವರಗಳನ್ನು, ಶೈಕ್ಷಣಿಕ ವಿವರಗಳನ್ನು, ಬ್ಯಾಂಕ್ ವಿವರಗಳನ್ನು ಹಾಗೂ ಮೃತ ಕಾರ್ಮಿಕರ ಲೇಬರ್ ಕಾರ್ಡ್ ಸಂಖ್ಯೆಯನ್ನು ಭರ್ತಿ ಮಾಡಿ.
  • ಕಾರ್ಮಿಕರ ಮಕ್ಕಳ ಆಧಾರ್ ಕಾರ್ಡ್, ಪಾಸ್ಪೋರ್ಟ್ ಅಳತೆಯ ಫೋಟೋ, ಪೋಷಕರ ಲೇಬರ್ ಕಾರ್ಡ್ ಪ್ರತಿ, ಪೋಷಕರ ಮರಣ ಪ್ರಮಾಣಪತ್ರದ ಅಂಕ ಪಟ್ಟಿ ಹಾಗೂ ಮೇಲೆ ನೀಡಲಾದ ಎಲ್ಲಾ ಅಗತ್ಯ ದಾಖಲೆಗಳನ್ನು ಅರ್ಜಿ ನಮೂನೆಯೊಂದಿಗೆ ಲಗತ್ತಿಸಿ ಅರ್ಜಿ ಸಲ್ಲಿಸಿ.

ಹೆಚ್ಚಿನ ಮಾಹಿತಿಗಾಗಿ:

“ನಿಮ್ಮ ಹತ್ತಿರದ ಕಾರ್ಮಿಕರ ನಿರೀಕ್ಷಕರ ಕಚೇರಿಗೆ ಭೇಟಿ ನೀಡಿ ಅಥವಾ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ಕಾರ್ಮಿಕರ ಸಹಾಯವಾಣಿ 155214 ಕ್ಕೆ ಕರೆ ಮಾಡಿ”

ಅಂತಿಮ ತೀರ್ಮಾನ:

ಮೃತ ಕಾರ್ಮಿಕರ ಮಕ್ಕಳು ಆರ್ಥಿಕ ಸಮಸ್ಯೆಯಿಂದ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಮಕ್ಕಳ ಸಂಪೂರ್ಣ ಶೈಕ್ಷಣಿಕ ವೆಚ್ಚವನ್ನು ಕಾರ್ಮಿಕರ ಇಲಾಖೆಯು ಭರಿಸುವುದಾಗಿ ತಿಳಿಸುವ ಮೂಲಕ ಕಾರ್ಮಿಕರ ಮಕ್ಕಳು ಉಚಿತವಾಗಿ ಶಿಕ್ಷಣ (Free Education) ಪಡೆಯುವಂತೆ ಮೊನ್ನೆ ನಡೆದ ಬಜೆಟ್ ನಲ್ಲಿ ಕಾರ್ಮಿಕರ ಮಕ್ಕಳಿಗೆ ಉತ್ತಮ ಶೈಕ್ಷಣಿಕ ಭರವಸೆಯನ್ನು ನೀಡಿದೆ. ನೀವು ಕೂಡ ಸೌಲಭ್ಯವನ್ನು ಪಡೆಯಲು ಅರ್ಹರಾಗಿದ್ದು, ಉನ್ನತ ಶಿಕ್ಷಣವನ್ನು ಪಡೆಯಬೇಕೆಂದು ಆಸಕ್ತಿಯನ್ನು ಹೊಂದಿದ್ದೀರಾ ಹಾಗಾದ್ದರೆ ಇಂದೇ ಅರ್ಜಿ ಸಲ್ಲಿಸಿ ಈ ಸೌಲಭ್ಯವನ್ನು ಪಡೆದುಕೊಳ್ಳಿ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು:

ನಿರ್ಮಾಣ ಕೆಲಸದಲ್ಲಿ ನಿರತರಾಗಿರುವಾಗ ಅಪಘಾತ ಸಂಭವಿಸಿ ಮೃತರ ಕಾರ್ಮಿಕರ ಇಬ್ಬರು ಮಕ್ಕಳು ಈ ಶೈಕ್ಷಣಿಕ ಸಹಾಯಧನವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.

ಇಲ್ಲ, ಶಾಲಾ ಹಂತದಿಂದ ಹಿಡಿದು ಸ್ನಾತಕೋತ್ತರ ಪದವಿಯನ್ನು ಪಡೆಯುವ ವರೆಗೂ ಕೂಡ ಉಚಿತ ಶಿಕ್ಷಣ (Free Education) ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಇಲ್ಲ. ಕೇವಲ ನಿರ್ಮಾಣ ಕೆಲಸದಲ್ಲಿ ತೊಡಗಿರುವಾಗ ಅಪಘಾತದಿಂದ ಮರಣ ಹೊಂದಿದರೆ ಮಾತ್ರ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಶೈಕ್ಷಣಿಕ ಸಹಾಯಧನವನ್ನು ಪಡೆದುಕೊಳ್ಳಲು ಆನ್ಲೈನ್ ಮೂಲಕ ಅಥವಾ ಗ್ರಾಮ್ ಒನ್ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕಾಗುತ್ತದೆ.


ಇತರೆ ಪ್ರಮುಖ ಲಿಂಕುಗಳು:


Join WhatsApp

Join Now

Join Telegram

Join Now

Leave a Comment