ಅಬ್ಬಬ್ಬಾ! STEM ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿನೀಯರಿಗೆ ಬಂಪರ್ ಸಿಹಿಸುದ್ದಿ! ವಿದ್ಯಾರ್ಥಿನೀಯರನ್ನುತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣವನ್ನು ಪಡೆಯಲು ಪ್ರೋತ್ಸಾಹಿಸುವ ಉದ್ದೇಶದಿಂದ ವಿವೊ ಇಂಡಿಯಾವು ಬಹು ದೊಡ್ಡ ಮೊತ್ತದ ಸಹಾಯಧನವನ್ನು ಕನ್ಯಜ್ಞಾನ್ ವಿದ್ಯಾರ್ಥಿವೇತನದಡಿಯಲ್ಲಿ ನೀಡಲು ಮುಂದಾಗಿದೆ.
Vivo Kanyajnaan Scholarship In Kannada
ಗಂಡು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಈ ಕಾಲಘಟ್ಟದಲ್ಲಿ ಹೆಣ್ಣು ಮಕ್ಕಳು ಕೂಡ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣವನ್ನು ಪಡೆದುಕೊಂಡು ಉತ್ತಮ ಸ್ಥಾನಮಾನವಿರುವ ಹುದ್ದೆಯನ್ನು ಅಲಂಕರಿಸಬೇಕೆನ್ನುವ ಉದ್ದೇಶದಿಂದ ವಿವೊ ಇಂಡಿಯಾವು ಕನ್ಯಜ್ಞಾನ್ ವಿದ್ಯಾರ್ಥಿವೇತನ (Vivo Kanyajnaan Scholarship) ಕಾರ್ಯಕ್ರಮವನ್ನು ಜಾರಿಗೊಳಿಸಿದ್ದು, ಈ ಕಾರ್ಯಕ್ರಮವು ವಿದ್ಯಾರ್ಥಿನೀಯರಿಗೆ ಮೀಸಲಾಗಿದೆ.
ಕನ್ಯಜ್ಞಾನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಅರ್ಜಿ ಸಲ್ಲಿಸಲು 03-03-2026 ಕೊನೆಯ ದಿನಾಂಕವಾಗಿದೆ. ನೀವು ಕೂಡ ಈ ಒಂದು ಸ್ಕಾಲರ್ಷಿಪ್ ಗೆ ಅರ್ಜಿ ಸಲ್ಲಿಸಬೇಕಾ? ಹಾಗಿದ್ದರೆ ಇಂದೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ನಿಮ್ಮ ಉತ್ತಮ ಶಿಕ್ಷಣಕ್ಕಾಗಿ ಈ ಸಹಾಯಧನವನ್ನು ಸದುಪಯೋಗ ಪಡಿಸಿಕೊಳ್ಳಿ.
ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು ಯಾವುವು? ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು? ಕನ್ಯಜ್ಞಾನ ವಿದ್ಯಾರ್ಥಿವೇತನದಡಿಯಲ್ಲಿ ಎಷ್ಟು ಸಹಾಯಧನವನ್ನು ಪಡೆದುಕೊಳ್ಳಬಹುದು? ಎನ್ನುವ ಬಗ್ಗೆ ಗೊಂದಲಗಳಿದ್ದರೆ, ಈ ಒಂದು ಲೇಖನವನ್ನು ಓದಿ. ಈ ಲೇಖನದ ಮೂಲಕ ನಿಮ್ಮೆಲ್ಲಾ ಗೊಂದಲಗಳನ್ನು ಪರಿಹರಿಸಿ ಕೊಳ್ಳಬಹುದು. ಇದೆ ರೀತಿಯ ಇನ್ನಷ್ಟು ಮಾಹಿತಿಗಾಗಿ ನಮ್ಮ ವೆಬ್ಸೈಟ್ ಉದ್ಯೋಗಸಲಹೆ ಗೆ ಭೇಟಿ ನೀಡಿ.
ವಿದ್ಯಾರ್ಥಿವೇತನದ ವಿವರಣಾತ್ಮಕ ನೋಟ:
| ವಿದ್ಯಾರ್ಥಿವೇತನದ ಹೆಸರು | ವಿವೊ ಕನ್ಯಜ್ಞಾನ್ ವಿದ್ಯಾರ್ಥಿವೇತನ (Vivo Kanyajnaan Scholarship) |
| ವಿದ್ಯಾರ್ಥಿವೇತನ ನೀಡುವವರು | ವಿವೊ ಇಂಡಿಯಾ (CSR ಸಹಭಾಗಿತ್ವದೊಂದಿಗೆ) |
| ವಿದ್ಯಾರ್ಥಿವೇತನ ಪಡೆಯಲು ಅರ್ಹರಾದವರು | STEM ಕ್ಷೇತ್ರದಲ್ಲಿ ವ್ಯಾಸಂಗ ಮಾಡುತ್ತಿರುವ ಯುವತಿಯರು |
| ವಿದ್ಯಾರ್ಥಿವೇತನದ ಒಟ್ಟು ಮೊತ್ತ | ವರ್ಷಕ್ಕೆ ₹60,000 |
| ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ರೀತಿ | ಆನ್ಲೈನ್ |
ಏನಿದು ವಿವೊ ಕನ್ಯಜ್ಞಾನ್ ವಿದ್ಯಾರ್ಥಿವೇತನ?
ವಿವೊ ಕನ್ಯಜ್ಞಾನ್ ವಿದ್ಯಾರ್ಥಿವೇತನವು, ವಿವೊ ಇಂಡಿಯಾದ CSR ಮಿಷನ್ ಅಡಿಯಲ್ಲಿ ಜಾರಿಗೊಳಿಸಲಾದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮದಡಿಯಲ್ಲಿ ಅರ್ಜಿ ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹60,000 ಸಹಾಯಧನವನ್ನು ನೀಡುವುದಾಗಿದೆ. STEM ಕ್ಷೇತ್ರದಲ್ಲಿ ಪ್ರಥಮ ಹಾಗೂ ದ್ವಿತೀಯ ವರ್ಷ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ವಿವೊ ಇಂಡಿಯಾವು STEM ಕ್ಷೇತ್ರದಲ್ಲಿ ವ್ಯಾಸಂಗ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನೀಯರಿಗೆ ಕೇವಲ ಶೈಕ್ಷಣಿಕ ನೆರವನ್ನು ನೀಡದೆ, ಮಹಿಳೆಯರನ್ನು ವೃತ್ತಿಪರರನ್ನಾಗಿ ಮಾಡುವ ಉದ್ದೇಶದಿಂದ ವೃತ್ತಿ ಬೆಳವಣಿಗೆಗೆ ಬಂಬಲವನ್ನು ನೀಡುತ್ತದೆ. ಈ ಯೋಜನೆಯಡಿಯಲ್ಲಿ ಅರ್ಹ ವಿದ್ಯಾರ್ಥಿನೀಯರು ಹಣಕಾಸಿನ ಬೆಂಬಲದೊಂದಿಗೆ ವೃತ್ತಿ ಮಾರ್ಗದರ್ಶನ, ಕಾರ್ಪೊರೇಟ್ ಸಿದ್ಧತೆ ತರಬೇತಿಗಳನ್ನು ಪಡೆದುಕೊಳ್ಳುತ್ತಾರೆ.
ವಿವೊ ಇಂಡಿಯಾ ವಿದ್ಯಾರ್ಥಿವೇತನವನ್ನು ನೀಡುವುದರ ಹಿಂದಿನ ಉದ್ದೇಶ:
1. ಲಿಂಗ ಸಮಾನತೆ:
ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಹಾಗೂ ಗಣಿತ ಕ್ಷೇತ್ರದಲ್ಲಿ ವ್ಯಾಸಂಗ ಮಾಡುತ್ತಿರುವವರಲ್ಲಿ ಪುರುಷರ ಸಂಖ್ಯೆ ಹೆಚ್ಚಿರುವುದರಿಂದ, ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸಲು ಉತ್ತೇಜಿಸುವಂತೆ ಹಾಗೂ ವಿದ್ಯಾರ್ಥಿನೀಯರು ತಾಂತ್ರಿಕ ಕ್ಷೇತ್ರದಲ್ಲಿ ಶಿಕ್ಷಣ ಪಡೆಯವು ಹೆಚ್ಚಿನ ಒಲವನ್ನು ತೋರಿಸುವಂತೆ ಮಾಡುವುದು.
2. ಹಣಕಾಸಿನ ನೆರವು:
ಬಡತನ ಹಾಗೂ ಹಣಕಾಸಿನ ಕಾರಣದಿಂದ ವಿದ್ಯಾರ್ಥಿನೀಯರು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಕಾರಣಕ್ಕೆ ಅವರಿಗೆ ಒಂದು ವರ್ಷಕ್ಕೆ ₹60,000 ದ ವರೆಗೆ ಆರ್ಥಿಕ ನೆರವನ್ನು ನೀಡುವ ಮೂಲಕ ತಾಂತ್ರಿಕ ಶಿಕ್ಷಣ ಪಡೆಯುವಂತೆ ಪ್ರೋತ್ಸಾಹಿಸುವುದು
3. ಉದ್ಯೋಗಕ್ಕಾಗಿ ಸಿದ್ಧತೆ:
ವಿವೊ ಕನ್ಯಜ್ಞಾನ್ ವಿದ್ಯಾರ್ಥಿವೇತನದಡಿಯಲ್ಲಿ ವಿದ್ಯಾರ್ಥಿನಿಯರಿಗೆ ಕೇವಲ ಆರ್ಥಿಕ ನೆರವನ್ನು ನೀಡುವುದು ಮಾತ್ರವಲ್ಲದೆ, ಉದ್ಯಮ ತಜ್ಞರಿಂದ ತರಬೇತಿಯನ್ನು ಹಾಗೂ ಸ್ಪರ್ಧಾತ್ಮಕ ಜಗತ್ತಿಗೆ ಅಗತ್ಯವಾದ ಕೌಶಲ್ಯವನ್ನು ಕೂಡ ಕಲಿಸಲಾಗುತ್ತದೆ.
ವಿವೊ ಕಾನ್ಯಜ್ಞಾನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತಾ ಮಾನದಂಡಗಳು:
- ವಿವೊ ಕನ್ಯಜ್ಞಾನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೇವಲ ಭಾರತದ ಯುವತಿಯರಿಗೆ ಮಾತ್ರ ಅವಕಾಶ ಇರುತ್ತದೆ.
- ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಲ್ಲಿ ಮೊದಲ ಅಥವಾ ಎರಡನೇ ವರ್ಷದ STEM ಪದವಿ ಕೋರ್ಸ್ ಗಳಾದ ಪೂರ್ಣಾವಧಿಯ ಬಿ.ಇ, ಬಿ.ಟೆಕ್, ಬಿ.ಎಸ್ಸಿ, ಬಿ.ಸಿ.ಎ, ಇತ್ಯಾದಿಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು.
- ವಿದ್ಯಾರ್ಥಿಗಳು 10 ನೇ, 12 ನೇ ತರಗತಿಯಲ್ಲಿ ಹಾಗೂ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಅಥವಾ ಸೆಮಿಸ್ಟರ್ ನಲ್ಲಿ ಕನಿಷ್ಠ 70% ಅಂಕವನ್ನು ಗಳಿಸಿರಬೇಕು.
- ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನೀಯರಿಗೆ ಹಾಗೂ NIFR ಶ್ರೇಯಾಂಕ ಹೊಂದಿರುವ ವಿದ್ಯಾರ್ಥಿನೀಯರಿಗೆ ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ.
- ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯವು ₹5,00,000 ಮೀರಿರಬಾರದು.
| ವಿಶೇಷ ಸೂಚನೆ: “ವಿವೊ ಇಂಡಿಯಾ ಹಾಗೂ Buddy4Study ಯಲ್ಲಿ ಉದ್ಯೋಗ ಮಾಡುತ್ತಿರುವ ಪೋಷಕರ ಮಕ್ಕಳು ಹಾಗೂ ಈಗಾಗಲೇ ಸರ್ಕಾರಿ ಯೋಜನೆಯಡಿಯಲ್ಲಿ ಆರ್ಥಿಕ ನೆರವನ್ನು ಪಡೆದುಕೊಂಡಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಲ್ಲ.” |
ವಿವೊ ಕನ್ಯಜ್ಞಾನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ವಿಶೇಷ ಆದ್ಯತೆ ಹೊಂದಿರುವ ವಿದ್ಯಾರ್ಥಿಗಳು ಯಾರು?
- ತಂದೆ ಅಥವಾ ತಾಯಿಯಲ್ಲಿ ಒಬ್ಬರನ್ನು ಮಾತ್ರ ಹೊಂದಿರುವ ವಿದ್ಯಾರ್ಥಿನೀಯರು.
- ತಮ್ಮ ಕುಟುಂಬದಲ್ಲಿ ತಾವೇ ಮೊದಲು ಪದವಿ ಶಿಕ್ಷಣ ಪಡೆಯುತ್ತಿದ್ದರೆ, ಆ ವಿದ್ಯಾರ್ಥಿನಿಗೆ ವಿಶೇಷ ಆದ್ಯತೆ ನೀಡಲಾಗುವುದು.
- ಪೋಷಕರನ್ನು ಕಳೆದುಕೊಂಡಿರುವ ಅನಾಥ ವಿದ್ಯಾರ್ಥಿನೀಯರು.
- ಹಿಂದುಳಿದ ಜಿಲ್ಲೆಯ ವಿದ್ಯಾರ್ಥಿನೀಯರು.
- ರಾಜ್ಯ ಅಥವಾ ರಾಷ್ಟ್ರ ಮಟ್ಟದ ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನೀಯರು.
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಬುಡಕಟ್ಟು ಜನಾಂಗದ ವಿದ್ಯಾರ್ಥಿನೀಯರು.
- ಹುತಾತ್ಮರಾದ ಪೊಲೀಸ್ ಹಾಗೂ ಸೈನಿಕರ ಕುಟುಂಬದ ವಿದ್ಯಾರ್ಥಿನೀಯರು.
ವಿವೊ ಕನ್ಯಜ್ಞಾನ್ ವಿದ್ಯಾರ್ಥಿವೇತನದಡಿಯಲ್ಲಿ ವಿದ್ಯಾರ್ಥಿನೀಯರಿಗೆ ಸಿಗುವ ಸೌಲಭ್ಯಗಳು:
- ವಿವೊ ಕನ್ಯಜ್ಞಾನ್ ವಿದ್ಯಾರ್ಥಿವೇತನದಡಿಯಲ್ಲಿ ವಿದ್ಯಾರ್ಥಿನೀಯರಿಗೆ ಪ್ರತಿ ವರ್ಷಕ್ಕೆ ₹60,000 ಸಹಾಯಧನವನ್ನು ನೀಡಲಾಗುತ್ತದೆ.
- ಈ ವಿದ್ಯಾರ್ಥಿವೇತನವು ಕೇವಲ ಒಂದು ವರ್ಷಕ್ಕೆ ಸೀಮಿತವಾಗಿರದೆ, ವಿದ್ಯಾರ್ಥಿನೀಯರು ಪದವಿ ಮುಗಿಸುವ ಮೂರು ವರ್ಷದ ವರೆಗೆ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.
- ವಿದ್ಯಾರ್ಥಿನೀಯರು ಕೇವಲ ಹಣಕಾಸಿನ ನೆರವನ್ನು ಮಾತ್ರ ಪಡೆಯದೇ, ಉದ್ಯಮ ಪರಿಣಿತರಿಂದ ಮಾರ್ಗದರ್ಶನವನ್ನು ಪಡೆದುಕೊಳ್ಳುತ್ತಾರೆ ಜೊತೆಗೆ ತಾಂತ್ರಿಕ ಕ್ಷೇತ್ರಕ್ಕೆ ಅಗತ್ಯವಾದ ಸಂವಹನ ಕೌಶಲ್ಯ ಹಾಗೂ ಇತರೆ ಕೌಶಲ್ಯವನ್ನು ಪಡೆದುಕೊಳ್ಳಬಹುದಾಗಿದೆ.
ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು:
ಅಭ್ಯರ್ಥಿಗಳು ಯಾವುದೇ ಹುದ್ದೆಗೂ ಅರ್ಜಿ ಸಲ್ಲಿಸಬೇಕಾದರೆ, ಈ ಕೆಳಗೆ ನೀಡಿರುವ ಅಗತ್ಯ ದಾಖಲೆಗಳನ್ನು ಹೊಂದಿರಬೇಕು.
- ಆಧಾರ್ ಕಾರ್ಡ್
- ಓಟರ್ ಐಡಿ
- ಪಾನ್ ಕಾರ್ಡ್
- ಶೈಕ್ಷಣಿಕ ಪ್ರವೇಶಪತ್ರ
- ಹಿಂದಿನ ಸೆಮಿಸ್ಟರ್ ಅಂಕಪಟ್ಟಿ
- ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಫೋಟೋ
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಕ್ರೀಡಾ ಪ್ರಮಾಣಪತ್ರ
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ಅಂಗವೈಕಲ್ಯತೆ ಪ್ರಮಾಣಪತ್ರ
| ಇಲ್ಲಿ ಗಮನಿಸಿ: “ನೀವೇನಾದರೂ ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬೇಕಾದರೆ, ಈ ಮೇಲೆ ನೀಡಲಾದ ಅಗತ್ಯ ದಾಖಲೆಗಳೊಂದಿಗೆ ನಾನು ಯಾಕೆ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡೆ? ಈ ವಿದ್ಯಾರ್ಥಿವೇತನ ನನ್ನ ಕನಸ್ಸನ್ನು ನನಸ್ಸು ಮಾಡಲು ಹೇಗೆ ಸಹಾಯ ಮಾಡುತ್ತದೆ ಎನ್ನುವ ಕುರಿತು 200 ರಿಂದ 300 ಪದಗಳನ್ನು ಒಳಗೊಂಡ ಪ್ರಬಂಧವನ್ನು ಬರೆದುಕೊಡಬೇಕು.” |
ಅರ್ಜಿ ಸಲ್ಲಿಸುವ ವಿಧಾನ:
ವಿವೊ ಕನ್ಯಜ್ಞಾನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿನೀಯರು ಈ ಕೆಳಗಿನ ನೀಡಲಾದ ರೀತಿಯಲ್ಲಿ ರೀತಿಯಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು Buddy4Study ಅಧಿಕೃತ ವೆಬ್ಸೈಟ್ https://www.buddy4study.com/ ಗೆ ಭೇಟಿ ನೀಡಿ.
- ಹೊಸ ಬಳಕೆದಾರರಾಗಿದ್ದರೆ, ಇಮೇಲ್ ಐಡಿ ಹಾಗೂ ಫೋನ್ ನಂಬರ್ ಬಳಸಿ ಲಾಗಿನ್ ಆಗಿ.
- ನಂತರ ವಿವೊ ಕನ್ಯಜ್ಞಾನ್ ಸ್ಕಾಲರ್ಷಿಪ್ ಅರ್ಜಿ ನಮೂನೆ ಮೇಲೆ ಕ್ಲಿಕ್ ಮಾಡಿ
- ಸಂಪೂರ್ಣವಾದ ಮಾಹಿತಿಯನ್ನು ಭರ್ತಿ ಮಾಡಿ
- ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಮಾಡಿ
- ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಪ್ರತಿಯನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಕನ್ಯಜ್ಞಾನ್ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಈಗಾಗಲೇ ಆರಂಭಗೊಂಡಿದೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-03-2026
ಕನ್ಯಜ್ಞಾನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಲಿಂಕ್:
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್: ಇಲ್ಲಿ ಕ್ಲಿಕ್ ಮಾಡಿ |
ಅಂತಿಮ ತೀರ್ಮಾನ:
ವಿವೊ ಇಂಡಿಯಾವು ವಿಜ್ಞಾನ, ತಂತ್ರಜ್ಞಾನ, ಎಂಜಿನೀರಿಂಗ್ ಹಾಗೂ ಗಣಿತ (STEM) ಕ್ಷೇತ್ರದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನೀಯರಿಗೆ ವಿವೊ ಕನ್ಯಜ್ಞಾನ್ ವಿದ್ಯಾರ್ಥಿವೇತನದಡಿಯಲ್ಲಿ ವಾರ್ಷಿಕ ₹60,000 ಸಹಾಯಧನವನ್ನು ನೀಡುತ್ತಿದ್ದು, ನೀವೇನಾದರೂ ಅರ್ಜಿ ಸಲ್ಲಿಸಲು ಬಯಸಿದರೆ ಅರ್ಹತಾ ಮಾನದಂಡವನ್ನು ಪೂರೈಸುತ್ತೇವೆಯೋ? ಇಲ್ಲವೋ? ಎಂದು ಖಚಿತ ಪಡಿಸಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ಈ ವಿದ್ಯಾರ್ಥಿವೇತನವು ಕೇವಲ ಶಿಕ್ಷಣಕ್ಕೆ ನೆರವು ನೀಡದೆ ನೀವು ಅತ್ಯುನ್ನತ ವೃತ್ತಿ ಪಡೆಯಲು ಇದು ಸಹಾಯವಾಗುತ್ತದೆ.
ಪದೇ ಪದೇ ಕೇಳಲ್ಪಡುವ ಪ್ರಶ್ನೆಗಳು:
ಒಂದು ಶೈಕ್ಷಣಿಕ ವರ್ಷಕ್ಕೆ ₹60,000 ಸಹಾಯಧನ ಲಭ್ಯವಾಗುತ್ತದೆ.
ವಿವೊ ಕನ್ಯಜ್ಞಾನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03-03-2026.
ಮೂರನೇ ವರ್ಷದ STEM ಕೋರ್ಸ್ ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನೀಯರು ವಿವೊ ಕನ್ಯಜ್ಞಾನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಲ್ಲ. ಕೇವಲ ಮೊದಲ ಹಾಗೂ ಎರಡನೇ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುವವರು ಮಾತ್ರ ಅರ್ಹರು.
ವಿವೊ ಕಾನ್ಯಜ್ಞಾನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಯುವಕರಿಗೆ ಅವಕಾಶ ಇರುವುದಿಲ್ಲ. ಇದು ಕೇವಲ ಯುವತಿಯರಿಗೆ ಮಾತ್ರ ಮೀಸಲಾಗಿದೆ.
ವಿವೊ ಕನ್ಯಜ್ಞಾನ್ ವಿದ್ಯಾರ್ಥಿವೇತನಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.





