ಕರ್ನಾಟಕದ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಉದ್ಯೋಗಾವಕಾಶ! ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) 2026 ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ನೀವು ಜಸ್ಟ್ 10 ಪಾಸ್ ಆಗಿದ್ರೆ ಸಾಕು, ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
HAL Recruitment in Kannada
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ 2026 ರ ನೇಮಕಾತಿಯ ಅಧಿಕೃತ ಅಧಿಸೂಚನೆಯಲ್ಲಿ ಡಿಪ್ಲೊಮಾ ಟೆಕ್ನಿಷಿಯನ್, ಫೈರ್ ಮ್ಯಾನ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಈ ಹುದ್ದೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಿದ್ದು, ಅರ್ಜಿ ಸಲ್ಲಿಸಲು 25-02-2026 ಕೊನೆಯ ದಿನಾಂಕವಾಗಿದೆ. ಸರ್ಕಾರಿ ಉದ್ಯೋಗದ ಕನಸ್ಸನ್ನು ಕಾಣುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಅತ್ಯುತ್ತಮ ಅವಕಾಶ.
ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಹುದ್ದೆಗೆ ಸಂಬಂಧಿಸಿದ ವಯೋಮಿತಿ, ಶೈಕ್ಷಣಿಕ ಅರ್ಹತೆ, ಆಯ್ಕೆ ಪ್ರಕ್ರಿಯೆ ಹಾಗೂ ಇನ್ನಿತರ ಅಗತ್ಯ ಮಾಹಿತಿಯನ್ನು ತಿಳಿದುಕೊಳ್ಳುವುದು ಉತ್ತಮ. ನೀವು ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ಈ ಹುದ್ದೆಗೆ ಸಂಬಂಧಿಸಿದ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ಪಡೆದುಕೊಳ್ಳಬಹುದಾಗಿದೆ.
ಕರ್ನಾಟಕ ಸರ್ಕಾರದ ಇನ್ನಷ್ಟು ಸರ್ಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ಉದ್ಯೋಗಸಲಹೆ ಗೆ ಭೇಟಿ ನೀಡಿ.
ಹುದ್ದೆಯ ಕಿರು ನೋಟ:
| ಸಂಸ್ಥೆಯ ಹೆಸರು | ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL Recruitment) |
| ಹುದ್ದೆಯ ಹೆಸರು | ಡಿಪ್ಲೊಮಾ ಟೆಕ್ನಿಷಿಯನ್, ಅಗ್ನಿಶಾಮಕ ಸಿಬ್ಬಂದಿ |
| ಒಟ್ಟು ಹುದ್ದೆಗಳ ಸಂಖ್ಯೆ | ಒಟ್ಟು 151 ಹುದ್ದೆಗಳು |
| ವಿದ್ಯಾರ್ಹತೆ | 10th, 12th, ಡಿಪ್ಲೊಮಾ ಹಾಗೂ ಐಟಿಐ |
| ಉದ್ಯೋಗ ಸ್ಥಳ | ಕರ್ನಾಟಕ |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 25-02-2026 |
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನೇಮಕಾತಿ ಕುರಿತು:
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ 2026 (HAL Recruitment) ರಲ್ಲಿ ಒಟ್ಟು 151 ಡಿಪ್ಲೊಮಾ ಟೆಕ್ನಿಷಿಯನ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಐಟಿಐ, ಡಿಪ್ಲೊಮಾ, 10th, 12th ಪಾಸ್ ಆಗಿರುವ ಗರಿಷ್ಟ 28 ವರ್ಷ ವಯೋಮಿತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ:
| ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
| ಡಿಪ್ಲೊಮಾ ಟೆಕ್ನಿಷಿಯನ್ (ಸಿವಿಲ್) | 1 ಹುದ್ದೆ |
| ಟೆಕ್ನಿಷಿಯನ್ (ಶಾಖ ಚಿಕಿತ್ಸೆ) | 1 ಹುದ್ದೆ |
| ಟೆಕ್ನಿಷಿಯನ್ (ಟರ್ನರ್) | 1 ಹುದ್ದೆ |
| ಟೆಕ್ನಿಷಿಯನ್ (ಎಲೆಕ್ಟ್ರೋಪ್ಲೇಟರ್) | 2 ಹುದ್ದೆಗಳು |
| ವಿಮಾನ ತಂತ್ರಜ್ಞ (ಏರ್ ಫ್ರೇಮ್) | 2 ಹುದ್ದೆಗಳು |
| ಟೆಕ್ನಿಷಿಯನ್ (ವೆಲ್ಡರ್) | 2 ಹುದ್ದೆಗಳು |
| ಟೆಕ್ನಿಷಿಯನ್ (ಎಲೆಕ್ಟ್ರಿಷಿಯನ್) – ಹೆಲಿಕಾಫ್ಟರ್ MRO | 3 ಹುದ್ದೆಗಳು |
| ತಂತ್ರಜ್ಞ (ಯಂತ್ರಶಿಲ್ಪಿ) | 4 ಹುದ್ದೆಗಳು |
| ಡಿಪ್ಲೊಮಾ ತಂತ್ರಜ್ಞ (ಎಲೆಕ್ಟ್ರಿಕಲ್) -ಹೆಲಿಕಾಫ್ಟರ್ MRO | 4 ಹುದ್ದೆಗಳು |
| ಅಗ್ನಿಶಾಮಕ ಸಿಬ್ಬಂದಿ | 5 ಹುದ್ದೆಗಳು |
| ಡಿಪ್ಲೊಮಾ ಟೆಕ್ನಿಷಿಯನ್ (ಎಲೆಕ್ಟ್ರಾನಿಕ್ಸ್) – ಹೆಲಿಕಾಫ್ಟರ್ MRO | 5 ಹುದ್ದೆಗಳು |
| ವಿಮಾನ ತಂತ್ರಜ್ಞ (ವಿದ್ಯುತ್) | 5 ಹುದ್ದೆಗಳು |
| ಡಿಪ್ಲೊಮಾ ಟೆಕ್ನಿಷಿಯನ್ (ಮೆಕ್ಯಾನಿಕಲ್) – ಹೆಲಿಕಾಫ್ಟರ್ MRO | 10 ಹುದ್ದೆಗಳು |
| ಟೆಕ್ನಿಷಿಯನ್ (ಫಿಟ್ಟರ್) – ಹೆಲಿಕಾಫ್ಟರ್ MRO | 12 ಹುದ್ದೆಗಳು |
| ಟೆಕ್ನಿಷಿಯನ್ (ವಿದ್ಯುತ್) | 18ಹುದ್ದೆಗಳು |
| ಡಿಪ್ಲೊಮಾ ಟೆಕ್ನಿಷಿಯನ್ (ಮೆಕ್ಯಾನಿಕಲ್) | 22 ಹುದ್ದೆಗಳು |
| ಭದ್ರತಾ ಸಿಬ್ಬಂದಿ | 24 ಹುದ್ದೆಗಳು |
| ಟೆಕ್ನಿಷಿಯನ್ (ಫಿಟ್ಟರ್) | 29 ಹುದ್ದೆಗಳು |
ಹುದ್ದೆಗೆ ಅರ್ಜಿ ಸಲ್ಲಿಸುವವರು ಹೊಂದಿರಬೇಕಾದ ಶೈಕ್ಷಣಿಕ ಅರ್ಹತೆಗಳೇನು?
- ಡಿಪ್ಲೊಮಾ ತಂತ್ರಜ್ಞ ಹಾಗೂ ವಿಮಾನ ತಂತ್ರಜ್ಞ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು – ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
- ಟೆಕ್ನಿಷಿಯನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು – 10 ನೇ ತರಗತಿ ಹಾಗೂ ಐಟಿಐ ನಲ್ಲಿ ಉತ್ತೀರ್ಣರಾಗಿರಬೇಕು.
- ಭದ್ರತಾ ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು – 10 ನೇ ತರಗತಿ ಹಾಗೂ 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ:
ಹಿಂದುಸ್ತಾನ್ ಎರೋನಾಟಿಕ್ಸ್ ಲಿಮಿಟೆಡ್ (HAL Recruitment) ಅಧಿಕೃತ ಅಧಿಸೂಚನೆಯ ಪ್ರಕಾರ, 14-01-2026 ರ ಅನ್ವಯ ಗರಿಷ್ಟ 28 ವರ್ಷ ವಯೋಮಿತಿಯನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ:
- SC/ ST ಅಭ್ಯರ್ಥಿಗಳಿಗೆ : 3 ವರ್ಷ
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ: 5 ವರ್ಷ
- ಪಿಡಬ್ಲ್ಯೂಬಿಡಿ (ಸಾಮಾನ್ಯ)ಅಭ್ಯರ್ಥಿಗಳಿಗೆ: 10 ವರ್ಷ
- ಪಿಡಬ್ಲ್ಯೂಬಿಡಿ (ಒಬಿಸಿ) ಅಭ್ಯರ್ಥಿಗಳಿಗೆ: 13 ವರ್ಷ
- ಪಿಡಬ್ಲ್ಯೂಬಿಡಿ (SC/ ST) ಅಭ್ಯರ್ಥಿಗಳಿಗೆ: 15 ವರ್ಷ
ಅರ್ಜಿ ಶುಲ್ಕ:
ಹಿಂದುಸ್ತಾನ್ ಎರೋನಾಟಿಕ್ಸ್ ಲಿಮಿಟೆಡ್ (HAL Recruitment) ಅಧಿಕೃತ ಅಧಿಸೂಚನೆಯಲ್ಲಿ ಯಾವುದೇ ಅರ್ಜಿ ಶುಲ್ಕದ ಬಗ್ಗೆ ಉಲ್ಲೇಖಿಸಿಲ್ಲ.
ಅಗತ್ಯ ದಾಖಲೆಗಳು:
ಅಭ್ಯರ್ಥಿಗಳು ಯಾವುದೇ ಹುದ್ದೆಗೂ ಅರ್ಜಿ ಸಲ್ಲಿಸಬೇಕಾದರೆ, ಈ ಕೆಳಗೆ ನೀಡಿರುವ ಅಗತ್ಯ ದಾಖಲೆಗಳನ್ನು ಹೊಂದಿರಬೇಕು.
- ಆಧಾರ್ ಕಾರ್ಡ್
- ಓಟರ್ ಐಡಿ
- ಶೈಕ್ಷಣಿಕ ಪ್ರಮಾಣಪತ್ರ
- ಅಂಕಪಟ್ಟಿ
- ಪಾನ್ ಕಾರ್ಡ್
- ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಫೋಟೋ
- ಜಾತಿ ಮತ್ತು ಆದಾಯ ಪ್ರಮಾಣಪತ್ರ
ವೇತನ ಶ್ರೇಣಿ :
- ಡಿಪ್ಲೊಮಾ ತಂತ್ರಜ್ಞ ಹಾಗೂ ವಿಮಾನ ತಂತ್ರಜ್ಞ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಮಾಸಿಕ ₹23,000/- ವೇತನವನ್ನು ಪಡೆಯುತ್ತಾರೆ.
- ಟೆಕ್ನಿಷಿಯನ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಮಾಸಿಕ 22,000/- ವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ.
- ಭದ್ರತಾ ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಹುದ್ದೆಗೆ ಆಯ್ಕೆಗೊಂಡ ಅಭ್ಯರ್ಥಿಗಳು ಮಾಸಿಕ 21,000/- ವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ.
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ
- ದೈಹಿಕ ಪರೀಕ್ಷೆ
- ವೈದ್ಯಕೀಯ ಪರಿಕ್ಷೆ
- ದಾಖಲಾತಿ ಪರಿಶೀಲನೆ
- ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL Recruitment) ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ http://hal-india.co.in/ ಗೆ ಭೇಟಿ ನೀಡಿ.
- ಅಲ್ಲಿ ಕೊಟ್ಟಿರುವ ಸಂಪೂರ್ಣವಾದ ಮಾಹಿತಿಯನ್ನು ಓದಿಕೊಂಡು
- ಅರ್ಜಿ ನಮೂನೆ ಮೇಲೆ ಕ್ಲಿಕ್ ಮಾಡಿ
- ಸಂಪೂರ್ಣವಾದ ಮಾಹಿತಿಯನ್ನು ಭರ್ತಿ ಮಾಡಿ
- ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಮಾಡಿ
- ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಪ್ರತಿಯನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ
ಪ್ರಮುಖ ದಿನಾಂಕಗಳು:
| ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | ಈಗಾಗಲೇ ಆರಂಭಗೊಂಡಿದೆ |
| ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 25-02-2026 |
ಪ್ರಮುಖ ಲಿಂಕ್ಗಳು:
| ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ಅಂತಿಮ ತೀರ್ಮಾನ:
| ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL Recruitment) 151 ಡಿಪ್ಲೊಮಾ ಟ್ರೆಕ್ನಿಷಿಯನ್, ಭದ್ರತಾ ಸಿಬ್ಬಂದಿ, ಫೈರ್ ಮ್ಯಾನ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ನಿಮ್ಮ ಕನಸ್ಸಿನ ಹುದ್ದೆಯನ್ನು ತಮ್ಮದಾಗಿಸಿಕೊಳ್ಳಿ. ನೆನಪಿರಲಿ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇನ್ನು ಕೆಲವೇ ದಿನಗಳು ಉಳಿದಿದೆ. |
ಇತರೆ ಪ್ರಮುಖ ಲಿಂಕುಗಳು:
- BESCOM: 520 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಅಹ್ವಾನ, ಇಂದೇ ಅರ್ಜಿ ಸಲ್ಲಿಸಿ! ಪರೀಕ್ಷೆ ಇಲ್ಲದೆ ನೇಮಕಾತಿ
- KSRTC Free Driving Training : ಉಚಿತ ತರಬೇತಿ, ಊಟ, ವಸತಿ ಮತ್ತು DL – “ನಿಮ್ಮ ಕನಸುಗಳ ಸ್ಟೀರಿಂಗ್ ಈಗ ನಿಮ್ಮ ಕೈಯಲ್ಲಿ”
- MESCOM Apprentice : 200 ಹುದ್ದೆಗಳು ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲಿದೆ ಸರ್ಕಾರಿ ಉದ್ಯೋಗ! ಅರ್ಜಿ ಸಲ್ಲಿಸುವುದು ಹೇಗೆ?






