ರಾಜ್ಯ ಸರ್ಕಾರ ಹಿಂದುಳಿದ ವರ್ಗದ ನಿರುದ್ಯೋಗಿ ಯುವಕ ಯುವತಿಯರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಹಾಗೆಯೆ 2026ರಲ್ಲಿ ಹೊಸ ಅಪ್ ಡೇಟ್ ಬಿಡುಗಡೆ ಮಾಡಿದೆ ಟ್ಯಾಕ್ಸಿ, ಟ್ರಾಕ್ಟರ್ ಅಥವಾ ಗೂಡ್ಸ್ ವಾಹನಗಳ ಖರೀದಿಗೆ ಶೇಕಡ 70%ರಷ್ಟು ಅಥವಾ ಗರಿಷ್ಠ4 ಲಕ್ಷದವರೆಗೆ ಸಬ್ಸಿಡಿ (Vehicle subsidy)ಸಿಗಲಿದೆ. ಇಂದಿಂದ ಅರ್ಜಿ ಪ್ರಾರಂಭವಾಗಿದ್ದು ಈಗಲೇ ನಿಮ್ಮ ಕೈಯಲ್ಲಿರುವ ಫೋನ್ ತಗೊಂಡು ಅರ್ಜಿಸಲ್ಲಿಸಿ ಸಹಾಯಧನ ಪಡೆಯಿರಿ.
Vehicle Subsidy Scheme In Kannada
ನೀವು ಡ್ರೈವಿಂಗ್ ಕಲಿತವರಾಗಿದ್ದು ಸ್ವಂತ ಟ್ಯಾಕ್ಸಿ ಅಥವಾ ಗೂಡ್ಸ್ ವಾಹನ ಖರೀದಿ ಜೀವನ ರೂಪಿಸಿಕೊಳ್ಳಬೇಕು ಎಂಬ ಆಸೆ ಹೊಂದಿದ್ದರೆ ಇಲ್ಲಿ ನೋಡಿ! ಯಾವುದೇ ರೀತಿಯ ಬಂಡವಾಳವಿಲ್ಲ ಎಂದು ಚಿಂತಿಸುತ್ತಿದ್ದೀರಾ ನಿಮಗಾಗಿಯೇ ಕರ್ನಾಟಕ ಸರ್ಕಾರಸ್ವಾವಲಂಬಿ ಸಾರಥಿ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಈ ಯೋಜನೆಯ ಬಗ್ಗೆ ಕೆಲವರಿಗೆ ತಿಳಿದಿರುವುದಿಲ್ಲ. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಬೇಕಾಗಿದ್ದರೆ, ನಮ್ಮ ಅಧಿಕೃತ ವೆಬ್ ಸೈಟ್ ಉದ್ಯೋಗ ಸಲಹೆ ವೆಬ್ ಸೈಟ್ ಗೆ ಭೇಟಿ ನೀಡಿ.
ಈ ಯೋಜನೆ ಅಡಿಯಲ್ಲಿ ನಿರುದ್ಯೋಗ ಯುವಕ ಯುವತಿಯರಿಗೆ ವಾಣಿಜ್ಯ ಉದ್ದೇಶಕ್ಕಾಗಿ ವಾಹನಗಳನ್ನು ಖರೀದಿಸಲು ಮತ್ತು ಹೊಸ ಉದ್ಯಮಗಳನ್ನು ಸ್ಥಾಪಿಸಲು ಸರ್ಕಾರವೇ ರೂ.4 ಲಕ್ಷದ ವರೆಗೆ ಸಹಾಯಧನವನ್ನು(Vehicle subsidy) ನೀಡುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿ ಜೀವನವನ್ನು ನಡೆಸಲು ಈ ಯೋಜನೆಯು ಸಹಾಯಕಾರಿಯಾಗಿದೆ.
ಯೋಜನೆಯ ಕಿರು ನೋಟ:-
ಯೋಜನೆಯ ಹೆಸರು:- ಸ್ವಾವಲಂಬಿ ಸಾರಥಿ ಯೋಜನೆ
ಫಲಾನುಭವಿಗಳು:-ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಮತ್ತು ಪಂಗಡ, ಇತರೆ ಹಿಂದುಳಿದ ವರ್ಗಕ್ಕೆ ಸೇರಿದವರು
ಅರ್ಜಿಸಲ್ಲಿಸುವ ರಾಜ್ಯ:- ಕರ್ನಾಟಕ
ಅರ್ಜಿಸಲ್ಲಿಸುವ ವಿಧಾನ:- ಆನ್ಲೈನ್ ಮತ್ತು ಆಫ್ಲೈನ್
ಅಧಿಕೃತ ವೆಬ್ ಸೈಟ್:-https://kmdconline.karnataka.gov.in/
ಏನಿದುಸ್ವಾವಲಂಬಿ ಯೋಜನೆ:-
ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವ ಜನತೆಯು ಉದ್ಯೋಗಕ್ಕಾಗಿ ಅಲೆಯದೆ ತಾವೇ ಸ್ವಂತ ಉದ್ಯೋಗದಾತರಾಗಬೇಕು ಎಂಬ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ ಇದು ಕರ್ನಾಟಕದ ಒಂದು ಜನಪ್ರಿಯ ಯೋಜನೆಯಾಗಿದ್ದು ಸ್ವಯಂ ಉದ್ಯೋಗ ಹೊಂದಲು ವಾಹನ ಖರೀದಿಗೆ ಅಥವಾ ಸ್ವಂತ ಉದ್ಯೋಗ ಶುರು ಮಾಡಲು ಬಾರಿ ಮೊತ್ತದ ಸಹಾಯಧನ (Vehicle subsidy) ನೀಡುತ್ತದೆ.
ಯಾರಿಗೆ ಈ ಸೌಲಭ್ಯ ಸಿಗುತ್ತದೆ:-
| ವರ್ಗ | ಸಹಾಯಧನ (Vehicle subsidy) |
| ಪರಿಶಿಷ್ಟ ಜಾತಿ ಮತ್ತು ಪಂಗಡ | ರೂ 4,00,000/- ಅಥವಾ ವಾಹನದ ಬೆಲೆಯು 75% ರಷ್ಟು |
| ಒಬಿಸಿ | 3,00,000/-ಅಥವಾ ವಾಹನದ ಬೆಲೆ ಶೇಕಡ 50% ರಷ್ಟು |
| ಅಲ್ಪಸಂಖ್ಯಾತರು | 3,00,000/-ಅಥವಾ ವಾಹನದ ಬೆಲೆ ಶೇಕಡ 50% ರಷ್ಟು |
ಯಾವ ವಾಹನಗಳಿಗೆ ಈ ಸಬ್ಸಿಡಿ (Vehicle subsidy) ಸಿಗುತ್ತದೆ:-
- ಟ್ಯಾಕ್ಸಿ
- ಆಟೋ
- ಟ್ರ್ಯಾಕ್ಟರ್
- ಗೂಡ್ಸ್ ವಾಹನಗಳು
ಯೋಜನೆಯ ಪ್ರಮುಖ ಉದ್ದೇಶ:-
- ಸ್ವಯಂ ಉದ್ಯೋಗ ಸೃಷ್ಟಿ:- ನಿರುದ್ಯೋಗಿ ಯುವಕರು ಬೇರೆಯವರ ಹತ್ತಿರ ಕೆಲಸಕ್ಕೆ ಹೋಗುವ ಬದಲು ತಾವೇ ಸ್ವಂತ ವಾಹನವನ್ನು ಖರೀದಿಸಿ ಸ್ವಯಂ ಉದ್ಯೋಗಿಗಳಾಗುವಂತೆ ಮಾಡುವುದು
- ಆರ್ಥಿಕ ಸಬಲೀಕರಣ:- ಹಿಂದುಳಿದ ವರ್ಗಗಳ ಜನರಿಗೆ ಆರ್ಥಿಕ ನೆರವು ನೀಡುವ ಮೂಲಕ ಅವರಲ್ಲಿ ತಾರತಮ್ಯವನ್ನು ಹೋಗಲಾಡಿಸಿ ಜೀವನಮಟ್ಟವನ್ನು ಸುಧಾರಿಸುವುದು (Vehicle subsidy)
- ಮಾಲಿಕತ್ವ:- ಬಡ ಯುವಕರು ಕೇವಲ ಚಾಲಕರಾಗಿ ಉಳಿಯದೆ ತಾವು ಓಡಿಸುವ ಗಾಡಿಯ ವಾಹನದ ಮಾಲೀಕರಾಗಬೇಕು ಸರ್ಕಾರದ ಪ್ರಮುಖ ಆಶಯವಾಗಿದೆ
- ಸಾರಿಗೆ ಕ್ಷೇತ್ರದ ಅಭಿವೃದ್ಧಿ:- ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ಸಾರಿಗೆ ಸೌಲಭ್ಯಗಳು ಹೆಚ್ಚಿಸುವುದು ಮತ್ತು ಗ್ರಾಮೀಣ ಭಾಗದ ಯುವಕರಿಗೆ ಅವಕಾಶ ಕಲ್ಪಿಸುವುದು.
| ಗಮನಿಸಿ:- ನಿಮ್ಮ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ಉದ್ಯೋಗದಲ್ಲಿ ಇರಬಾರದು ಈ ಹಿಂದೆ ಅಷ್ಟೇ ಅಲ್ಲದೆ ಈ ಹಿಂದೆ ಯಾವುದೇ ಸರ್ಕಾರಿ ನಿಯಮಗಳಿಂದ ಸೌಲಭ್ಯ ಪಡೆದರೆ ಅಂತವರಿಗೆ ಯೋಜನೆ ಅನ್ವಯವಾಗುತ್ತಿಲ್ಲ |
ಯೋಜನೆಯ ಪ್ರಯೋಜನಗಳು:
- ನಿರುದ್ಯೋಗಿ ಯುವಕರು ದೇವರ ಹತ್ತಿರ ಕೆಲಸಕ್ಕೆ ಹೋಗದೆ ತಾವೇ ಸ್ವಂತ ಉದ್ಯೋಗವನ್ನು ಮಾಡಿ ಹೆಚ್ಚಿನ ಆದಾಯ ಗಳಿಸಿ ಗೌರವಿತ ಜೀವನ ನಡೆಸಬಹುದು (Vehicle subsidy)
- ಸರ್ಕಾರವು ರಾಷ್ಟ್ರೀಕೃತ ಬ್ಯಾಂಕ್ ಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲದ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತದೆ ಇದರಿಂದ ಫಲಾನುಭವಿಯು ಹೆಚ್ಚಿನ ಹೊರೆ ಇಲ್ಲದೆ ಬಂಡವಾಳದ ಅವಶ್ಯಕತೆ ಇಲ್ಲದೆ ವಾಹನ ಖರೀದಿಸಬಹುದು.
- ಇತರೆ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಅಭ್ಯರ್ಥಿಗಳಿಗೆ ವಾಹನದ ಒಟ್ಟು ಮೌಲ್ಯದ ಮೇಲೆ 75% ಸಹಾಯಧನ ಅಥವಾ 4 ಲಕ್ಷದ ವರೆಗೆ ಸಬ್ಸಿಡಿ(Vehicle subsidy) ನೀಡಲಾಗುವುದು.
- ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ವಾಹನದ ಒಟ್ಟು ಮೌಲ್ಯದ ಮೇಲೆ 50% ಸಹಾಯಧನ ಅಥವಾ 3 ಲಕ್ಷದ ವರೆಗೆ ಸಬ್ಸಿಡಿ ನೀಡಲಾಗುವುದು.
ಅರ್ಹತಾ ಮಾನದಂಡಗಳು:-
- ಫಲಾನುಭವಿಗಳು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- ಅರ್ಜಿದಾರರು ಅಲ್ಪಸಂಖ್ಯಾತರ, ಪರಿಶಿಷ್ಟ ಜಾತಿ ಮತ್ತು ಪಂಗಡ, ಇತರೆ ಹಿಂದುಳಿದ ವರ್ಗಕ್ಕೆ ಸೇರಿದವರಾಗಿರಬೇಕು.
- ಅರ್ಜಿದಾರರು ಅಥವಾ ಅವರ ಕುಟುಂಬದವರು ಈ ಹಿಂದೆ ಯಾವುದೇ ನಿಗಮದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚಿನ ಸಹಾಯಧನವನ್ನು ಪಡೆದುಕೊಂಡಿರಬಾರದು.
- ಲಘು ಮೋಟಾರ್ ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
- ಅರ್ಜಿದಾರರು ಕಡ್ಡಾಯವಾಗಿ ಡಿಎಲ್ ಹೊಂದಿರಬೇಕು
- ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ಅಥವಾ ಅರೆ ಸರ್ಕಾರಿ ಕೆಲಸದಲ್ಲಿ ಇರಬಾರದು
- ಅರ್ಜಿದಾರರು ಕನಿಷ್ಠ 21 ವರ್ಷದಿಂದ 45 ವರ್ಷದ ಒಳಗೆ ವಯೋಮಿತಿಯನ್ನು ಹೊಂದಿರಬೇಕು.
- ಫಲಾನುಭವಿಗಳ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದವರಿಗೆ ರೂ. 98,000 ಹಾಗೂ ನಗರ ಪ್ರದೇಶದವರಿಗೆ ರೂ. 120,000 ಕ್ಕಿಂತ ಹೆಚ್ಚಿರಬಾರದು.
- ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.
- ಮಹಿಳೆಯರಿಗಿ ಮತ್ತು ತೃತೀಯ ಲಿಂಗಿಗಳಿಗೆ ಈ ಯೋಜನೆಗೆ ಹೆಚ್ಚಿನ ಆದ್ಯತೆ ಇರುತ್ತದೆ.
ಅಗತ್ಯ ದಾಖಲೆಗಳು:-
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ವಯಸ್ಸಿನ ಪುರಾವೆ ಪ್ರಮಾಣಪತ್ರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಶೈಕ್ಷಣಿಕ ಪ್ರಮಾಣಪತ್ರ
- ಚಾಲನಾ ಪರವಾನಗಿ
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಪಾನ್ ಕಾರ್ಡ್
- ಸ್ವಯಂ ಘೋಷಣಾ ಪತ್ರ
- ವಾಹನದ ಅಂದಾಜು ದರ ಪಟ್ಟಿ
ಅರ್ಜಿ ಸಲ್ಲಿಸುವ ವಿಧಾನ:-
- Vehicle subsidy ಅಧಿಕೃತ ವೆಬ್ ಸೈಟ್ https://kmdconline.karnataka.gov.in/ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿಸಲ್ಲಿಸಿ
- ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ
- ಅರ್ಜಿ ನಮೂನೆಯಲ್ಲಿರುವ ಅಗತ್ಯ ಮಾಹಿತಿಗಳನ್ನು ಸರಿಯಾಗಿ ಭರ್ತಿಮಾಡಿ
- ಅರ್ಜಿಯನ್ನು ಸಲ್ಲಿಸಿ ಮತ್ತು ಸ್ವೀಕೃತಿ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಿ
- ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡಿ
- ಅಥವಾ ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಿ. (Vehicle subsidy)
| ನನ್ನ ಸಲಹೆ:- ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಟಿಎಲ್ ಚಾಲ್ತಿಯಲ್ಲಿದೆ ಎಂದು ಖಚಿತಪಡಿಸಿಕೊಳ್ಳಿ ಡಿಎಲ್ ಅವಧಿ ಮುಗಿದ ಕಾರಣ ಅರ್ಜಿ ತಿರಸ್ಕೃತವಾಗಿರುತ್ತದೆ ಅಲ್ಲದೆ ನೀವು ಖರೀದಿಸಲು ಉದ್ದೇಶ ನಿಂತಿರುವ ವಾಹನದ ಕೊಟೇಶನ್ ಅನ್ನು ಅಧಿಕೃತ ಶೋರೂಮ್ ನಿಂದ ಪಡೆದುಕೊಳ್ಳಿ ಇದು ಪ್ರಕ್ರಿಯೆಯನ್ನು ವೇಗ ಮತ್ತು ಸುಗಮ ಗೊಳಿಸುತ್ತದೆ |
ಪ್ರಮುಖ ಲಿಂಕುಗಳು:
| ಅಧಿಕೃತ ವೆಬ್ ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಕೊನೆ ಮಾತು:-
Vehicle subsidy ಈ ಯೋಜನೆಯ ಮುಖ್ಯ ಉದ್ದೇಶಗ್ರಾಮೀಣ ಮತ್ತು ನಗರ ಪ್ರದೇಶದ ನಿರುದ್ಯೋಗಿ ಯುವಕ ಯುವಕರಿಗೆ ಉದ್ಯೋಗದ ಭದ್ರತೆ ಒದಗಿಸುವುದು ಮತ್ತು ಹಣಕಾಸಿನ ನೆರವು ನೀಡುವುದು ಅವರನ್ನು ಉದ್ಯಮಿಗಳನ್ನಾಗಿ ರೂಪಿಸಿ ಸಮಾಜದ ಮುಖ್ಯ ವಾಹಿನಿಗೆ ತರುವುದು ಸರ್ಕಾರದ ಗುರಿಯಾಗಿದೆ ಸ್ವಂತ ವಾಹನ ಹೊಂದಿರುವುದರಿಂದ ಆ ಕುಟುಂಬಕ್ಕೆ ನಿರಂತರ ಆದಾಯದ ಮೂಲ ಸಿಗುತ್ತದೆ ಇದು ಆರ್ಥಿಕ ಸಮಾನತೆಗೆ ದಾರಿದೀಪವಾಗುತ್ತದೆ.
ಹೆಣ್ಣು ಮಕ್ಕಳಿಗೆ ಮತ್ತು ತೃತೀಯ ಲಿಂಗಿ ಅರ್ಜಿದಾರರಿಗೆ ಈ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಅರ್ಹ ಮತ್ತು ಆಸಕ್ತ ಫಲಾನುಭವಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಅರ್ಹತಾ ಮಾನದಂಡವನ್ನು ಪರಿಶೀಲಿಸಿ.





